2 Chronicles · chapter 11 · verse 4
2 Chronicles 11:4 in Kannada
ಸಮಸ್ತ ಇಸ್ರಾ ಯೇಲ್ಯರಿಗೂ ಹೇಳಬೇಕಾದದ್ದೇನಂದರೆ--ಕರ್ತನು ಹೀಗೆ ಹೇಳುತ್ತಾನೆ--ನೀವು ನಿಮ್ಮ ಸಹೋದರರಿಗೆ ವಿರೋಧವಾಗಿ ಯುದ್ಧಮಾಡುವದಕ್ಕೆ ಹೋಗ ಬೇಡಿರಿ; ಪ್ರತಿ ಮನುಷ್ಯನು ತನ್ನ ಮನೆಗೆ ಹಿಂತಿ ರುಗಲಿ. ಈ ಕಾರ್ಯವು ನನ್ನಿಂದ ಉಂಟಾಯಿತು ಅಂದನು. ಆದಕಾರಣ ಅವರು ಕರ್ತನ ವಾಕ್ಯವನ್ನು ಕೇಳಿ ಯಾರೊಬ್ಬಾಮನ ಮೇಲೆ ಹೋಗದೆ ಹಿಂತಿರುಗಿದರು.
Samasta israa yelyarigoo helabekaadaddenandare--kartanu heege heluttaane--neevu nimma sahodararige virodhavaagi yuddhamaaduvadakke hoga bediri; prati manushyanu tanna manege hinti rugali. Ee kaaryavu nanninda untaayitu andanu. Aadakaarana avaru kartana vaakyavannu keli yaarobbaamana mele hogade hintirugidaru.
2 Chronicles 11:4 in English
- King James Version (KJV)
- Thus saith the LORD, Ye shall not go up, nor fight against your brethren: return every man to his house: for this thing is done of me. And they obeyed the words of the LORD, and returned from going against Jeroboam.
- World English Bible (WEB)
- ‘The LORD says, “You shall not go up, nor fight against your brothers! Every man return to his house; for this thing is of me.”’” So they listened to the LORD’s words, and returned from going against Jeroboam.
- American Standard Version (ASV)
- Thus saith Jehovah, Ye shall not go up, nor fight against your brethren: return every man to his house; for this thing is of me. So they hearkened unto the words of Jehovah, and returned from going against Jeroboam.
- Bible in Basic English (BBE)
- The Lord has said, You are not to go to war against your brothers: let every man go back to his house, for this thing is my purpose. So they gave ear to the words of the Lord and were turned back from fighting against Jeroboam.
- Darby Translation (DBY)
- Thus saith Jehovah: Go not up, nor fight with your brethren; return every man to his house; for this thing is from me. And they hearkened to the words of Jehovah, and returned from going against Jeroboam.
- Webster's Bible (WBS)
- Thus saith the LORD, Ye shall not go up, nor fight against your brethren: return every man to his house: for this thing is done by me. And they obeyed the words of the LORD, and returned from going against Jeroboam.
- Young's Literal Translation (YLT)
- Thus said Jehovah, Ye do not go up nor fight with your brethren, turn back each to his house, for from Me hath this thing been;' and they hear the words of Jehovah, and turn back from going against Jeroboam.
Read in context
- 2ಕರ್ತನ ವಾಕ್ಯವು ದೇವರ ಮನುಷ್ಯನಾಗಿರುವ ಶೆಮಾಯನಿಗೆ ಉಂಟಾಯಿತು;
- 3ಏನಂದರೆ -- ನೀನು ಯೆಹೂದದ ಅರಸನಾದ ಸೊಲೊಮೋನನ ಮಗನಾಗಿರುವ ರೆಹಬ್ಬಾಮನಿಗೂ ಯೆಹೂದ ಬೆನ್ಯಾವಿಾನ್ಯರಲ್ಲಿರುವ
- 4ಸಮಸ್ತ ಇಸ್ರಾ ಯೇಲ್ಯರಿಗೂ ಹೇಳಬೇಕಾದದ್ದೇನಂದರೆ--ಕರ್ತನು ಹೀಗೆ ಹೇಳುತ್ತಾನೆ--ನೀವು ನಿಮ್ಮ ಸಹೋದರರಿಗೆ ವಿರೋಧವಾಗಿ ಯುದ್ಧಮಾಡುವದಕ್ಕೆ ಹೋಗ ಬೇಡಿರಿ; ಪ್ರತಿ ಮನುಷ್ಯನು ತನ್ನ ಮನೆಗೆ ಹಿಂತಿ ರುಗಲಿ. ಈ ಕಾರ್ಯವು ನನ್ನಿಂದ ಉಂಟಾಯಿತು ಅಂದನು. ಆದಕಾರಣ ಅವರು ಕರ್ತನ ವಾಕ್ಯವನ್ನು ಕೇಳಿ ಯಾರೊಬ್ಬಾಮನ ಮೇಲೆ ಹೋಗದೆ ಹಿಂತಿರುಗಿದರು.
- 5ರೆಹಬ್ಬಾಮನು ಯೆರೂಸಲೇಮಿನಲ್ಲಿ ವಾಸಮಾಡಿ ಯೆಹೂದದಲ್ಲಿ ಕಾವಲು ಪಟ್ಟಣಗಳನ್ನು ಕಟ್ಟಿಸಿದನು.
- 6ಯಾವವಂದರೆ ಬೇತ್ಲೆಹೇಮ್ ಏತಾಮ್ ತೆಕೋವ
Cross references
- Genesis 50:20 ಆದಿಕಾಂಡ 50:20ನೀವು ನನಗೆ ವಿರೋಧವಾಗಿ ಕೇಡನ್ನು ಆಲೋಚಿ ಸಿದಿರಿ; ಆದರೆ ದೇವರು ಈಗ ಮಾಡಿದ ಹಾಗೆ ಬಹುಜನರನ್ನು ಬದುಕಿಸುವದಕ್ಕೋಸ್ಕರ ಮೇಲಿಗಾಗಿ ಆಲೋಚನೆ ಮಾಡಿದನು.
- 1 Kings 11:29–38 1 ಅರಸುಗಳು 11:29–38ಆ ಕಾಲದಲ್ಲಿ ಏನಾಯಿತಂದರೆ, ಯಾರೊಬ್ಬಾಮನು ಯೆರೊಸಲೇಮಿ ನೊಳಗಿಂದ ಹೊರಟು ಹೋಗುವಾಗ ಶೀಲೋನ್ಯ ನಾದ ಅಹೀಯನೆಂಬ ಪ್ರವಾದಿಯು ಅವನನ್ನು ಹಾದಿ ಯಲ್ಲಿ ಕಂಡನು. ಅವನು ಹೊಸ ವಸ್ತ್ರವನ್ನು ಹೊದ್ದು ಕೊಂಡಿದ್ದನು. ಅವರಿಬ್ಬರೂ ಹೊಲದಲ್ಲಿ ಒಂಟಿಯಾ ಗಿದ್ದರು. ಆಗ ಅಹೀಯನು ತನ್ನ ಮೇಲೆ ಇರುವ ವಸ್ತ್ರವನ್ನು ಹಿಡಿದು ಹನ್ನೆರಡು ತುಂಡುಗಳಾಗಿ ಹರಿದು ಯಾರೊಬ್ಬಾಮನಿಗೆ--ಈ ಹತ್ತು ತುಂಡುಗಳನ್ನು ನೀನು ತೆಗೆದುಕೋ. ಇದಕ್ಕೆ ಇಸ್ರಾಯೇಲಿನ ದೇವರಾದ ಕರ್ತನು--ಇಗೋ, ನಾನು ಸೊಲೊಮೋನನ ಕೈ ಯಿಂದ ರಾಜ್ಯವನ್ನು ಕಿತ್ತುಕೊಂಡು ಹತ್ತು ಗೋತ್ರ ಗಳನ್ನು ನಿನಗೆ ಕೊಡುವೆನು. (ನನ್ನ ಸೇವಕನಾದ ದಾವೀದನಿಗೋಸ್ಕರವೂ ಇಸ್ರಾಯೇಲಿನ ಸಮಸ್ತ ಗೋತ್ರಗಳಿಂದ ನಾನು ಆದುಕೊಂಡ ಪಟ್ಟಣವಾದ ಯೆರೂಸಲೇಮಿಗೋಸ್ಕರವೂ ಅವನಿಗೆ ಒಂದು ಗೋತ್ರ ಇರುವದು.) ಅವನ ತಂದೆಯಾದ ದಾವೀದನ ಹಾಗೆ ನನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ಕೈಕೊಳ್ಳು ವದಕ್ಕೂ ನನ್ನ ದೃಷ್ಟಿಗೆ ಮೆಚ್ಚಿಕೆಯಾದದ್ದನ್ನು ಮಾಡು ವದಕ್ಕೂ ಅವರು ನನ್ನ ಮಾರ್ಗಗಳಲ್ಲಿ ನಡೆಯದೆ ನನ್ನನ್ನು ಬಿಟ್ಟು ಚೀದೋನ್ಯರ ದೇವತೆಯಾದ ಅಷ್ಟೋ ರೆತನ್ನೂ ಮೋವಾಬ್ಯರ ದೇವರಾದ ಕೆಮೋಷನ್ನೂ ಅಮ್ಮೋನನ ಮಕ್ಕಳ ದೇವರಾದ ಮಿಲ್ಕೋಮನ್ನೂ ಆರಾಧಿಸಿದ್ದಾರೆ. ಆದರೂ ನನ್ನ ಆಜ್ಞೆಗಳನ್ನೂ ಕಟ್ಟಳೆ ಗಳನ್ನೂ ಕೈಕೊಂಡದ್ದರಿಂದ ನಾನು ಆದು ತೆಗೆದು ಕೊಂಡ ನನ್ನ ಸೇವಕನಾದ ದಾವೀದನಿಗೋಸ್ಕರ ನಾನು ಅವನ ಕೈಯಿಂದ ರಾಜ್ಯವನ್ನೆಲ್ಲಾ ತೆಗೆದು ಕೊಳ್ಳದೆ ಅವನ ಜೀವಮಾನದ ಸಕಲ ದಿವಸಗಳಲ್ಲಿ ಅವನನ್ನು ಪ್ರಭುವಾಗಿ ಇರಿಸುವೆನು. ಆದರೆ ನಾನು ಅವನ ಮಗನ ಕೈಯಿಂದ ರಾಜ್ಯವನ್ನು ತಕ್ಕೊಂಡು ಅದರಲ್ಲಿ ಹತ್ತು ಗೋತ್ರಗಳನ್ನು ನಿನಗೆ ಕೊಡುವೆನು. ಅಲ್ಲಿ ನನ್ನ ಹೆಸರನ್ನಿಡಲು ನಾನು ಆದುಕೊಂಡ ಪಟ್ಟಣವಾದ ಯೆರೂಸಲೇಮಿನಲ್ಲಿ ನನ್ನ ಮುಂದೆ ನನ್ನ ಸೇವಕನಾದ ದಾವೀದನಿಗೆ ಯಾವಾಗಲೂ ಬೆಳಕು ಉಂಟಾಗುವ ಹಾಗೆ ಅವನ ಮಗನಿಗೆ ಒಂದು ಗೋತ್ರ ವನ್ನು ಕೊಡುವೆನು. ಇದಲ್ಲದೆ ನಾನು ನಿನ್ನನ್ನು ತಕ್ಕೊಂಡು ನೀನು ನಿನ್ನ ಪ್ರಾಣವು ಇಚ್ಚೈಸುವದೆಲ್ಲವನ್ನು ಆಳುವಂತೆ ಮಾಡಿ ಇಸ್ರಾಯೇಲಿನ ಮೇಲೆ ಅರಸನಾ ಗಿರುವಿ. ನಾನು ನಿನಗೆ ಆಜ್ಞಾಪಿಸಿದ್ದೆಲ್ಲಾ ನೀನು ಕೇಳಿ ನನ್ನ ಮಾರ್ಗಗಳಲ್ಲಿ ನಡೆದು ನನ್ನ ಸೇವಕನಾದ ದಾವೀದನು ಮಾಡಿದ ಹಾಗೆ ನನ್ನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ಕೈಕೊಂಡು ನನ್ನ ದೃಷ್ಟಿಗೆ ಯಥಾರ್ಥ ವಾದದ್ದನ್ನು ಮಾಡಿದರೆ ನಾನು ನಿನ್ನ ಸಂಗಡ ಇದ್ದು ದಾವೀದನಿಗೋಸ್ಕರ ಕಟ್ಟಿದ ಹಾಗೆ ನಿನಗೆ ಸ್ಥಿರವಾದ ಮನೆಯನ್ನು ಕಟ್ಟಿ ಇಸ್ರಾಯೇಲ್ಯರನ್ನು ನಿನಗೆ ಕೊಡು ವೆನು.
- 2 Chronicles 28:8–15 2 ಪೂರ್ವಕಾಲವೃತ್ತಾಂತ 28:8–15ಇಸ್ರಾಯೇಲಿನ ಮಕ್ಕಳು ತಮ್ಮ ಸಹೋದರರಲ್ಲಿ ಎರಡು ಲಕ್ಷ ಮಂದಿ ಸ್ತ್ರೀಯರನ್ನೂ ಕುಮಾರರನ್ನೂ ಕುಮಾರ್ತೆಗಳನ್ನೂ ಸೆರೆ ಯಾಗಿ ತಕ್ಕೊಂಡುಹೋದರು. ಇದಲ್ಲದೆ ಅವರಿಂದ ಬಹು ಕೊಳ್ಳೆಯನ್ನು ತಕ್ಕೊಂಡು ಆ ಕೊಳ್ಳೆಯನ್ನು ಸಮಾರ್ಯಕ್ಕೆ ಒಯ್ದರು. ಅಲ್ಲಿ ಕರ್ತನ ಒಬ್ಬ ಪ್ರವಾದಿ ಇದ್ದನು; ಅವನ ಹೆಸರು ಓದೇದನು. ಅವನು ಸಮಾರ್ಯಕ್ಕೆ ಬಂದ ಸೈನ್ಯೆಕ್ಕೆದುರಾಗಿ ಹೊರಟುಹೋಗಿ ಅವರಿಗೆ--ಇಗೋ, ನಿಮ್ಮ ಪಿತೃಗಳ ಕರ್ತನಾದ ದೇವರು ಯೆಹೂದದ ಮೇಲೆ ಉರಿಗೊಂಡದ್ದರಿಂದ ಆತನು ಅವರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿರಲಾಗಿ, ನೀವು ಆಕಾಶಕ್ಕೆ ಮುಟ್ಟುವ ಉಗ್ರದಿಂದ ಅವರನ್ನು ಕೊಂದುಹಾಕಿದ್ದೀರಿ. ಈಗ ನಿಮಗೆ ದಾಸರೂ ದಾಸಿಗಳೂ ಆಗಿರುವ ಹಾಗೆ ಯೆಹೂದದವರನ್ನೂ ಯೆರೂಸಲೇಮಿನ ಮಕ್ಕಳನ್ನೂ ನಿಮ್ಮ ವಶಮಾಡಬೇಕೆಂದು ಅಂದುಕೊಳ್ಳುತ್ತೀರಿ. ಆದರೆ ನಿಮ್ಮಲ್ಲಿಯೇ ನಿಮ್ಮ ದೇವರಾದ ಕರ್ತನಿಗೆ ವಿರೋಧವಾಗಿ ಪಾಪಗಳು ಇಲ್ಲವೋ? ಆದದ ರಿಂದ ನೀವು ನನ್ನ ಮಾತು ಕೇಳಿ ನಿಮ್ಮ ಸಹೋದರ ರಲ್ಲಿ ನೀವು ಸೆರೆಯಾಗಿ ತಕ್ಕೊಂಡ ಸೆರೆಯವರನ್ನು ಬಿಟ್ಟುಬಿಡಿರಿ. ಯಾಕಂದರೆ ಉರಿಯುತ್ತಿರುವ ಕರ್ತನ ಕೋಪವು ನಿಮ್ಮ ಮೇಲೆ ಇರುವದು ಅಂದನು. ಆಗ ಎಫ್ರಾಯಾಮನ ಮಕ್ಕಳ ಶ್ರೇಷ್ಠರಲ್ಲಿ ಕೆಲವರಾಗಿರುವ ಯೆಹೋಹಾನಾನನ ಮಗನಾದ ಅಜರ್ಯನೂ ಮೆಷಿ ಲ್ಲೇಮೋತನ ಮಗನಾದ ಬೆರಕ್ಯನೂ ಶಲ್ಲೂಮನ ಮಗನಾದ ಹಿಜ್ಕಿಯನೂ ಹದ್ಲೈಯನ ಮಗನಾದ ಅಮಾಸನೂ ಯುದ್ಧದಿಂದ ಬಂದವರಿಗೆ ವಿರೋಧ ವಾಗಿ ಎದ್ದು ಅವರಿಗೆ--ನೀವು ಸೆರೆಯವರನ್ನು ಇಲ್ಲಿಗೆ ತರಬೇಡಿರಿ ಎಂದು ಹೇಳಿದರು; ಯಾಕಂದರೆ ನಾವು ಕರ್ತನಿಗೆ ವಿರೋಧವಾಗಿ ಅಪರಾಧ ಮಾಡಿ ದ್ದೇವೆ. ನೀವು ನಮ್ಮ ಪಾಪಗಳನ್ನೂ ಅಪರಾಧಗಳನ್ನೂ ಹೆಚ್ಚಿಸಬೇಕೆಂದಿದ್ದೀರಿ. ನಿಶ್ಚಯವಾಗಿ ನಮ್ಮ ಅಪರಾ ಧವು ದೊಡ್ಡದಾಗಿದೆ; ಇಸ್ರಾಯೇಲಿನ ಮೇಲೆ ಉಗ್ರ ಕೋಪವು ಉಂಟಾಯಿತು ಅಂದರು. ಆಗ ಸೈನ್ಯದ ವರು ಸೆರೆಯವರನ್ನೂ ಕೊಳ್ಳೆಯನ್ನೂ ಪ್ರಧಾನರ ಮುಂದೆಯೂ ಸಮಸ್ತ ಕೂಟದ ಮುಂದೆಯೂ ಬಿಟ್ಟು ಬಿಟ್ಟರು. ಆಗ ಹೆಸರಿನಿಂದ ಹೇಳಲ್ಪಟ್ಟ ಆ ಮನು ಷ್ಯರು ಎದ್ದು ಸೆರೆಯವರನ್ನು ತೆಗೆದುಕೊಂಡು ಅವರಲ್ಲಿ ಬೆತ್ತಲೆಯಾದವರಿಗೆ ಕೊಳ್ಳೆಯ ವಸ್ತ್ರಗಳನ್ನು ಉಡಿಸಿ ತೊಡಿಸಿ ಅವರಿಗೆ ಕೆರಗಳನ್ನು ಕೊಟ್ಟು ಉಣ್ಣುವದಕ್ಕೂ ಕುಡಿಯುವದಕ್ಕೂ ಕೊಟ್ಟು ಅವರ ತಲೆಗಳಿಗೆ ಎಣ್ಣೆ ಯನ್ನು ಹಚ್ಚಿ ಅವರಲ್ಲಿ ಇರುವ ಬಲಹೀನರನ್ನು ಕತ್ತೆಗಳ ಮೇಲೆ ಏರಿಸಿ ಯೆರಿಕೋವೆಂಬ ಖರ್ಜೂರದ ಪಟ್ಟಣಕ್ಕೆ ಅವರ ಸಹೋದರರ ಬಳಿಗೆ ಕರಕೊಂಡು ಹೋಗಿ ಸಮಾರ್ಯಕ್ಕೆ ಹಿಂತಿರುಗಿದರು.
- 2 Chronicles 25:7–10 2 ಪೂರ್ವಕಾಲವೃತ್ತಾಂತ 25:7–10ಆಗ ದೇವರ ಮನುಷ್ಯ ನಾದ ಒಬ್ಬನು ಅವನ ಬಳಿಗೆ ಬಂದು ಅವನಿಗೆಅರಸನೇ, ಇಸ್ರಾಯೇಲಿನ ಸೈನ್ಯವು ನಿನ್ನ ಸಂಗಡ ಹೋಗದೆ ಇರಲಿ; ಯಾಕಂದರೆ ಕರ್ತನು ಇಸ್ರಾಯೇ ಲ್ಯರಾದ ಎಫ್ರಾಯಾಮನ ಸಮಸ್ತ ಮಕ್ಕಳ ಸಂಗಡ ಇರುವದಿಲ್ಲ. ನೀನು ಹೋದರೆ ಹೋಗು ಅದನ್ನು ಮಾಡು; ಯುದ್ಧಕ್ಕೆ ಬಲಗೊಳ್ಳು. ದೇವರು ಶತ್ರುವಿನ ಮುಂದೆ ನಿನ್ನನ್ನು ಬೀಳಮಾಡುವನು; ಯಾಕಂದರೆ ಸಹಾಯ ಕೊಡುವದಕ್ಕೂ ಬೀಳಮಾಡುವದಕ್ಕೂ ದೇವರಿಗೆ ಶಕ್ತಿ ಉಂಟು ಅಂದನು. ಆಗ ಅಮಚ್ಯನು ದೇವರ ಮನುಷ್ಯನಿಗೆ--ಆದರೆ ಇಸ್ರಾಯೇಲಿನ ದಂಡಿಗೆ ನಾನು ಕೊಟ್ಟ ನೂರು ತಲಾಂತುಗಳಿಗೋಸ್ಕರ ಏನು ಮಾಡಬೇಕು ಅಂದನು. ಅದಕ್ಕೆ ದೇವರ ಮನುಷ್ಯನು--ಕರ್ತನು ಇದಕ್ಕಿಂತ ಅಧಿಕವಾಗಿ ನಿನಗೆ ಕೊಡಲು ಶಕ್ತನು ಅಂದನು. ಆಗ ಅಮಚ್ಯನು ಎಫ್ರಾಯಾಮಿನಿಂದ ತನ್ನ ಬಳಿಗೆ ಬಂದ ಸೈನಿಕರು ತಮ್ಮ ಸ್ಥಳಕ್ಕೆ ತಿರಿಗಿ ಹೋಗುವ ಹಾಗೆ ಅವರನ್ನು ಪ್ರತ್ಯೇಕಿಸಿದನು. ಆದ ಕಾರಣ ಅವರ ಕೋಪವು ಯೆಹೂದದ ಮೇಲೆ ಬಹಳವಾಗಿ ಉರಿಯಿತು. ಅವರು ಕೋಪದ ಉರಿಯಿಂದ ತಮ್ಮ ಮನೆಗೆ ತಿರುಗಿದರು.
- 2 Chronicles 10:15–16 2 ಪೂರ್ವಕಾಲವೃತ್ತಾಂತ 10:15–16ಹೀಗೆ ಅರ ಸನು ಜನರ ಮಾತನ್ನು ಕೇಳದೆ ಹೋದನು. ಕರ್ತನು ನೆಬಾಟನ ಮಗನಾದ ಯಾರೊಬ್ಬಾಮನಿಗೆ ಶಿಲೋವಿ ನವನಾದ ಅಹೀಯನ ಮುಖಾಂತರ ಹೇಳಿದ ವಾಕ್ಯವು ಈಡೇರುವದಕ್ಕೆ ಈ ಕಾರಣ ದೇವರಿಂದ ಉಂಟಾ ಯಿತು. ಅರಸನು ತಮಗೆ ಕಿವಿಗೊಡದೆ ಹೋದ ನೆಂದು ಸಮಸ್ತ ಇಸ್ರಾಯೇಲ್ಯರು ನೋಡಿ ಅರಸನಿಗೆ ಪ್ರತ್ಯುತ್ತರವಾಗಿ--ದಾವೀದನಲ್ಲಿ ನಮಗೆ ಭಾಗವೇನು? ಇಷಯನ ಮಗನಲ್ಲಿ ನಮಗೆ ಬಾಧ್ಯತೆ ಇಲ್ಲ. ಇಸ್ರಾ ಯೇಲ್ಯರೇ, ನಿಮ್ಮ ಗುಡಾರಗಳಿಗೆ ಹೋಗಿರಿ; ದಾವೀ ದನೇ, ನಿನ್ನ ಮನೆಯನ್ನು ನೋಡಿಕೋ ಎಂದು ಹೇಳಿ ಇಸ್ರಾಯೇಲ್ಯರೆಲ್ಲರು ತಮ್ಮ ಗುಡಾರಗಳಿಗೆ ಹೋದರು.
- 2 Samuel 2:26 2 ಸಮುವೇಲನು 2:26ಆಗ ಅಬ್ನೇರನು ಯೋವಾಬನಿಗೆ--ಕತ್ತಿಯು ಯಾವಾಗಲೂ ನುಂಗಿಬಿಡುವದೋ? ಅಂತ್ಯ ದಲ್ಲಿ ಅದು ಕಹಿಯಾಗಿರುವದೆಂದು ನಿನಗೆ ಗೊತ್ತಾಗು ವದಿಲ್ಲವೋ? ತಮ್ಮ ಸಹೋದರರನ್ನು ಹಿಂಬಾಲಿಸು ವದನ್ನು ಬಿಟ್ಟು ಹಿಂದಕ್ಕೆ ತಿರುಗುವ ಹಾಗೆ ಜನರಿಗೆ ಎಷ್ಟು ಕಾಲ ಹೇಳದೆ ಇರುವಿ ಎಂದು ಕೂಗಿ ಹೇಳಿದನು.
- Genesis 13:8 ಆದಿಕಾಂಡ 13:8ಅಬ್ರಾಮನು ಲೋಟನಿಗೆ--ನನಗೂ ನಿನಗೂ ನನ್ನ ದನಕಾಯುವವರಿಗೂ ನಿನ್ನ ದನಕಾಯುವವರಿಗೂ ಜಗಳವಿರಬಾರದು; ನಾವು ಸಹೋದರರು.
- 1 Peter 3:8 1 ಪೇತ್ರನು 3:8ಕಡೆಗೆ ನೀವೆಲ್ಲರೂ ಏಕ ಮನಸ್ಸುಳ್ಳವರಾಗಿರ್ರಿ; ಒಬ್ಬರಿಗೊಬ್ಬರು ಕರುಣೆಯುಳ್ಳವರಾಗಿದ್ದು ಸಹೋದರ ರಂತೆ ಪ್ರೀತಿಸಿರಿ; ಕನಿಕರವೂ ದೀನ ಭಾವವೂ ಉಳ್ಳವರಾಗಿರ್ರಿ.
- Acts 7:26 ಅಪೊಸ್ತಲರ ಕೃತ್ಯಗಳು 7:26ಮರುದಿನ ತಾವು ಹೊಡೆದಾಡಿ ಕೊಳ್ಳುತ್ತಿರುವಾಗ ಅವನು ಕಾಣಿಸಿಕೊಂಡು--ಅಯ್ಯಗಳಿರಾ, ನೀವು ಸಹೋದರರಲ್ಲವೇ; ನೀವೇಕೆ ಒಬ್ಬರಿಗೊಬ್ಬರು ಅನ್ಯಾ ಯಮಾಡುತ್ತೀರಿ ಎಂದು ಹೇಳಿ ಅವರನ್ನು ಸಮಾಧಾನ ಪಡಿಸಬೇಕೆಂದಿದ್ದನು.
- 1 Kings 22:36 1 ಅರಸುಗಳು 22:36ಸೂರ್ಯ ಮುಣುಗುವಾಗ ಪ್ರತಿ ಮನುಷ್ಯನು ತನ್ನ ತನ್ನ ಪಟ್ಟಣಕ್ಕೂ ಪ್ರತಿ ಮನುಷ್ಯನು ತನ್ನ ತನ್ನ ದೇಶಕ್ಕೂ ಹೋಗಲಿ ಎಂದು ದಂಡಿನಲ್ಲಿ ಪ್ರಕಟ ಮಾಡಲ್ಪಟ್ಟಿತು.
- Hosea 8:4 ಹೋಶೇಯ 8:4ಅವರು ಅರಸುಗಳನ್ನು ನೇಮಿಸಿದ್ದಾರೆ. ಆದರೆ ನನ್ನಿಂದಲ್ಲ, ಪ್ರಧಾನರನ್ನು ನೇಮಿಸಿದ್ದಾರೆ, ಅದು ನನಗೆ ತಿಳಿಯಲಿಲ್ಲ; ಅವರು ಕಡಿದುಬಿಡಲ್ಪಡುವ ಹಾಗೆ ತಮ್ಮ ಬೆಳ್ಳಿಯಿಂದಲೂ ತಮ್ಮ ಬಂಗಾರದಿಂದಲೂ ತಮಗೆ ವಿಗ್ರಹಗಳನ್ನು ಮಾಡಿಕೊಂಡಿದ್ದಾರೆ.
- Psalm 33:11 ಕೀರ್ತನೆಗಳು 33:11ಕರ್ತನ ಆಲೋಚನೆಯು ಎಂದೆಂದಿಗೂ ಆತನ ಹೃದಯದ ಆಲೋಚನೆಗಳು ತಲತಲಾಂತ ರಕ್ಕೂ ನಿಲ್ಲುವವು.
Original words (Hebrew)
- saith · H559אָמַר ʼâmar
- up · H5927עָלָה ʻâlâh
- fight · H3898לָחַם lâcham
- brethren · H251אָח ʼâch
- return · H7725שׁוּב shûwb
- man · H376אִישׁ ʼîysh
- house · H1004בַּיִת bayith
- thing · H1697דָּבָר dâbâr
- done · H1961הָיָה hâyâh
- obeyed · H8085שָׁמַע shâmaʻ
- words · H1697דָּבָר dâbâr
- returned · H7725שׁוּב shûwb
- going · H3212יָלַךְ yâlak
- Jeroboam · H3379יָרׇבְעָם Yârobʻâm