2 Chronicles 13:11 in Kannada
ಅವರು ಪ್ರತಿ ಉದಯದಲ್ಲಿಯೂ ಸಾಯಂಕಾಲದಲ್ಲಿಯೂ ಕರ್ತನಿಗೆ ದಹನಬಲಿಗಳನ್ನೂ ಸುಗಂಧ ಧೂಪವನ್ನೂ ಸುಡುತ್ತಾರೆ. ಇದಲ್ಲದೆ ಪರಿಶುದ್ಧ ಮೇಜಿನ ಮೇಲೆ ರೊಟ್ಟಿಗಳನ್ನು ಇಡುವದುಂಟು; ಪ್ರತಿ ಸಾಯಂಕಾಲ ದಲ್ಲಿ ಬಂಗಾರದ ದೀಪಸ್ಥಂಭವನ್ನೂ ಅದರ ದೀಪ ಗಳನ್ನೂ ಸಿದ್ಧಮಾಡಿ ಹಚ್ಚುತ್ತಾರೆ. ನಾವು ನಮ್ಮ ದೇವರಾದ ಕರ್ತನ ಕಟ್ಟಳೆಯನ್ನು ಕೈಕೊಳ್ಳುತ್ತೇವೆ; ಆದರೆ ನೀವು ಆತನನ್ನು ಬಿಟ್ಟಿದ್ದೀರಿ. ಇಗೋ, ದೇವರು ತಾನೇ ಅಧಿಪತಿಯಾಗಿ ನಮ್ಮ ಸಂಗಡ ಇದ್ದಾನೆ.
Avaru prati udayadalliyoo saayankaaladalliyoo kartanige dahanabaligalannoo sugandha dhoopavannoo suduttaare. Idallade parishuddha mejina mele rottigalannu iduvaduntu; prati saayankaala dalli bangaarada deepasthambhavannoo adara deepa galannoo siddhamaadi hachchuttaare. Naavu namma devaraada kartana kattaleyannu kaikollutteve; aadare neevu aatanannu bittiddeeri. Igo, devaru taane adhipatiyaagi namma sangada iddaane.
2 Chronicles 13:11 in English
- King James Version (KJV)
- And they burn unto the LORD every morning and every evening burnt sacrifices and sweet incense: the shewbread also [set they in order] upon the pure table; and the candlestick of gold with the lamps thereof, to burn every evening: for we keep the charge of the LORD our God; but ye have forsaken him.
- World English Bible (WEB)
- They burn to the LORD every morning and every evening burnt offerings and sweet incense. They also set the show bread in order on the pure table, and care for the gold lamp stand with its lamps, to burn every evening; for we keep the instruction of the LORD our God, but you have forsaken him.
- American Standard Version (ASV)
- and they burn unto Jehovah every morning and every evening burnt-offerings and sweet incense: the showbread also [set they] in order upon the pure table; and the candlestick of gold with the lamps thereof, to burn every evening: for we keep the charge of Jehovah our God; but ye have forsaken him.
- Bible in Basic English (BBE)
- By whom burned offerings and perfumes are sent up in smoke before the Lord every morning and every evening; and they put out the holy bread on its table and the gold support for the lights with its lights burning every evening; for we keep the orders given to us by the Lord our God, but you have gone away from him.
- Darby Translation (DBY)
- and they burn to Jehovah every morning and every evening burnt-offerings and sweet incense; the loaves also are set in order upon the pure table; and the candlestick of gold with its lamps to burn every evening: for we keep the charge of Jehovah our God; but ye have forsaken him.
- Webster's Bible (WBS)
- And they burn to the LORD every morning and every evening burnt-sacrifices and sweet incense: the show-bread also [they set in order] upon the pure table; and the candlestick of gold with its lamps to burn every evening: for we keep the charge of the LORD our God; but ye have forsaken him.
- Young's Literal Translation (YLT)
- and are making perfume to Jehovah, burnt-offerings morning by morning, and evening by evening, and perfume of spices, and the arrangement of bread [is] on the pure table, and the candlestick of gold, and its lamps, to burn evening by evening, for we are keeping the charge of Jehovah our God, and ye — ye have forsaken Him.
Read in context
- 9ನೀವು ಆರೋನನ ಮಕ್ಕಳಾದ ಕರ್ತನ ಯಾಜಕರನ್ನೂ ಲೇವಿ ಯರನ್ನೂ ತಳ್ಳಿ ಹಾಕಿ ದೇಶಗಳ ಜನರ ಹಾಗೆ ನಿಮಗೆ ಯಾಜಕರನ್ನು ಮಾಡಲಿಲ್ಲವೋ? ಯಾವನಾದರೂ ಒಂದು ಎಳೇ ಹೋರಿಯನ್ನೂ ಏಳು ಟಗರುಗಳನ್ನೂ ತಕ್ಕೊಂಡು ಬಂದು ತನ್ನನ್ನು ಪ್ರತಿಷ್ಠೆಮಾಡಿದರೆ ಅವನು ದೇವರಲ್ಲದವುಗಳಿಗೆ ಯಾಜಕನಾಗಿರುವನು.
- 10ನಮಗಾದರೋ ಕರ್ತನು ನಮ್ಮ ದೇವರಾಗಿದ್ದಾನೆ; ನಾವು ಆತನನ್ನು ಬಿಡಲಿಲ್ಲ. ಇದಲ್ಲದೆ ಕರ್ತನಿಗೆ ಸೇವೆಮಾಡುವ ಯಾಜಕರು ಆರೋನನ ಮಕ್ಕಳು; ಲೇವಿಯರು ತಮ್ಮ ಕೆಲಸದಲ್ಲಿ ಇದ್ದಾರೆ.
- 11ಅವರು ಪ್ರತಿ ಉದಯದಲ್ಲಿಯೂ ಸಾಯಂಕಾಲದಲ್ಲಿಯೂ ಕರ್ತನಿಗೆ ದಹನಬಲಿಗಳನ್ನೂ ಸುಗಂಧ ಧೂಪವನ್ನೂ ಸುಡುತ್ತಾರೆ. ಇದಲ್ಲದೆ ಪರಿಶುದ್ಧ ಮೇಜಿನ ಮೇಲೆ ರೊಟ್ಟಿಗಳನ್ನು ಇಡುವದುಂಟು; ಪ್ರತಿ ಸಾಯಂಕಾಲ ದಲ್ಲಿ ಬಂಗಾರದ ದೀಪಸ್ಥಂಭವನ್ನೂ ಅದರ ದೀಪ ಗಳನ್ನೂ ಸಿದ್ಧಮಾಡಿ ಹಚ್ಚುತ್ತಾರೆ. ನಾವು ನಮ್ಮ ದೇವರಾದ ಕರ್ತನ ಕಟ್ಟಳೆಯನ್ನು ಕೈಕೊಳ್ಳುತ್ತೇವೆ; ಆದರೆ ನೀವು ಆತನನ್ನು ಬಿಟ್ಟಿದ್ದೀರಿ. ಇಗೋ, ದೇವರು ತಾನೇ ಅಧಿಪತಿಯಾಗಿ ನಮ್ಮ ಸಂಗಡ ಇದ್ದಾನೆ.
- 12ಇದಲ್ಲದೆ ನಿಮಗೆ ವಿರೋಧವಾಗಿ ಜಯಧ್ವನಿ ಮಾಡುವ ತುತೂರಿಗಳನ್ನು ಹಿಡುಕೊಂಡ ಆತನ ಯಾಜಕರು ಇದ್ದಾರೆ. ಇಸ್ರಾಯೇಲಿನ ಮಕ್ಕಳೇ, ನೀವು ನಿಮ್ಮ ಪಿತೃಗಳ ದೇವರಾದ ಕರ್ತನಿಗೆ ವಿರೋಧ ವಾಗಿ ಯುದ್ಧಮಾಡಬೇಡಿರಿ, ನೀವು ಜಯ ಹೊಂದು ವದಿಲ್ಲ ಅಂದನು.
- 13ಆದರೆ ಯಾರೊಬ್ಬಾಮನು ಅಡಗಿಕೊಂಡವರನ್ನು ಸುತ್ತಲೂ ಅವರ ಹಿಂದೆಯೂ ಬರಮಾಡಿದನು. ಆದದರಿಂದ ಅವರು ಯೆಹೂದ ದವರ ಮುಂದೆಯೂ ಅಡಗಿಕೊಂಡವರು ಅವರ ಹಿಂದೆಯೂ ಇದ್ದರು.
Cross references
- 2 Chronicles 2:4 2 ಪೂರ್ವಕಾಲವೃತ್ತಾಂತ 2:4ಇಗೋ, ನನ್ನ ದೇವರಾದ ಕರ್ತನಿಗೆ ಅದನ್ನು ಪ್ರತಿಷ್ಠೆ ಮಾಡುವದಕ್ಕೂ ಆತನ ಮುಂದೆ ಪರಿಮಳ ಧೂಪವನ್ನು ಸುಡುವದಕ್ಕೂ ನಿತ್ಯ ಸಮ್ಮುಖದ ರೊಟ್ಟಿ ಗೋಸ್ಕರವೂ ಸಬ್ಬತ್ತುಗಳಲ್ಲಿಯೂ ಅಮಾವಾಸ್ಯೆಗಳ ಲ್ಲಿಯೂ ಇಸ್ರಾಯೇಲಿಗೆ ನಿರಂತರವಾಗಿರಲು ನೇಮಿ ಸಿದ ನಮ್ಮ ದೇವರಾದ ಕರ್ತನ ಹಬ್ಬಗಳಲ್ಲಿಯೂ ಉದಯಕಾಲದ ಸಾಯಂಕಾಲದ ದಹನಬಲಿಗಳಿಗೋ ಸ್ಕರವೂ ಆತನ ನಾಮಕ್ಕೆ ಆಲಯವನ್ನು ಕಟ್ಟಿಸುತ್ತೇನೆ.
- Leviticus 24:2–9 ಯಾಜಕಕಾಂಡ 24:2–9ಬೆಳಕಿ ಗೋಸ್ಕರ ದೀಪಗಳು ಯಾವಾಗಲೂ ಉರಿಯುತ್ತಿ ರುವಂತೆ ಅವರು ಕುಟ್ಟಿದ ಶುದ್ಧವಾದ ಹಿಪ್ಪೇ ಎಣ್ಣೆಯನ್ನು ನಿನ್ನ ಬಳಿಗೆ ತರುವಂತೆ ನೀನು ಇಸ್ರಾಯೇಲ್ ಮಕ್ಕಳಿಗೆ ಆಜ್ಞಾಪಿಸಬೇಕು. ಸಭೆಯ ಗುಡಾರದೊಳಗೆ ಸಾಕ್ಷಿಯ ಪರದೆಯ ಹೊರಗಡೆ ಕರ್ತನ ಸನ್ನಿಧಿಯಲ್ಲಿ ಸಾಯಂಕಾಲದಿಂದ ಬೆಳಗಿನ ವರೆಗೂ ಇರುವಂತೆ ಆರೋನನು ಅದನ್ನು ಕ್ರಮಪಡಿಸಬೇಕು. ಇದು ನಿಮ್ಮ ಸಂತತಿಯವರೊಳಗೆ ಶಾಶ್ವತವಾದ ನಿಯಮವಾಗಿ ರುವದು. ದೀಪಗಳು ಶುದ್ಧವಾದ ದೀಪಸ್ತಂಭದ ಮೇಲೆ ಕರ್ತನ ಸನ್ನಿಧಿಯಲ್ಲಿ ಯಾವಾಗಲೂ ಇರುವಂತೆ ಅವನು ಕ್ರಮಪಡಿಸಬೇಕು. ನೀನು ನಯವಾದ ಹಿಟ್ಟನ್ನು ತೆಗೆದುಕೊಂಡು ಹನ್ನೆರಡು ರೊಟ್ಟಿಗಳನ್ನು ಸುಡಬೇಕು; ಹತ್ತರಲ್ಲಿ ಎರಡು ಪಾಲು ಒಂದು ರೊಟ್ಟಿಯಲ್ಲಿ ಇರಬೇಕು. ಅವುಗಳನ್ನು ಶುದ್ಧವಾದ ಮೇಜಿನ ಮೇಲೆ ಕರ್ತನ ಸನ್ನಿಧಿಯಲ್ಲಿ ಒಂದು ಸಾಲಿನಲ್ಲಿ ಆರರಂತೆ ಎರಡು ಸಾಲುಗಳನ್ನಾಗಿ ಇಡಬೇಕು. ರೊಟ್ಟಿಯ ಮೇಲೆ ಅದು ಜ್ಞಾಪಕಾರ್ಥವಾ ಗಿರುವಂತೆಯೂ ಬೆಂಕಿಯ ಮೂಲಕ ಕರ್ತನಿಗೆ ಸಮ ರ್ಪಣೆಯಾಗುವಂತೆಯೂ ಪ್ರತಿಯೊಂದು ಸಾಲಿನ ಮೇಲೆ ಶುದ್ಧವಾದ ಸಾಂಬ್ರಾಣಿಯನ್ನು ಹಾಕಬೇಕು. ಪ್ರತಿಯೊಂದು ಸಬ್ಬತ್ತಿನಲ್ಲಿ ಕರ್ತನ ಎದುರಿನಲ್ಲಿ ಯಾವಾಗಲೂ ಅವನು ಅದನ್ನು ಕ್ರಮ ಪಡಿಸಬೇಕು; ಇದು ಇಸ್ರಾಯೇಲ್ ಮಕ್ಕಳ ಕಡೆಯಿಂದ ನಿತ್ಯವಾದ ಒಡಂಬಡಿಕೆಯಾಗಿರಬೇಕು. ಅದು ಆರೋನನ ಮತ್ತು ಅವನ ಕುಮಾರರದ್ದಾಗಿರಬೇಕು; ಅವರು ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು; ಅದು ನಿತ್ಯವಾದ ನಿಯಮವಾಗಿ ಕರ್ತನಿಗೆ ಬೆಂಕಿಯಿಂದ ಮಾಡಿ ಸಮರ್ಪಿಸುವವುಗಳಲ್ಲಿ ಅವನಿಗೆ ಅತಿ ಪರಿಶುದ್ಧವಾಗಿರುವದು.
- Exodus 25:30–39 ವಿಮೋಚನಕಾಂಡ 25:30–39ಮೇಜಿನ ಮೇಲೆ ಸಮ್ಮುಖದ ರೊಟ್ಟಿಯನ್ನು ಯಾವಾಗಲೂ ನನ್ನ ಮುಂದೆ ಇಡಬೇಕು. ಇದಲ್ಲದೆ ಶುದ್ಧ ಬಂಗಾರದಿಂದ ದೀಪಸ್ತಂಭವನ್ನು ಮಾಡಬೇಕು. ಆ ದೀಪಸ್ತಂಭವನ್ನು ನಕ್ಷೆಯ ಕೆಲಸದಿಂದ ಮಾಡಬೇಕು. ಅದರ ಕಂಬವೂ ಕೊಂಬೆಗಳೂ ಹಣತೆ ಗಳೂ ಗುಂಡುಗಳೂ ಪುಷ್ಪಗಳೂ ಅದರಂತೆಯೇ ಇರ ಬೇಕು. ದೀಪಸ್ತಂಭದ ಉಭಯ ಪಾರ್ಶ್ವಗಳಿಂದ ಆರು ಕೊಂಬೆಗಳು, ಒಂದು ಭಾಗದಿಂದ ಮೂರು ಕೊಂಬೆಗಳೂ ಮತ್ತೊಂದು ಭಾಗದಿಂದ ಮೂರು ಕೊಂಬೆಗಳೂ ಹೊರಗೆ ಬರಬೇಕು. ಒಂದು ಕೊಂಬೆ ಯಲ್ಲಿ ಬಾದಾಮಿಯ ಪುಷ್ಪವಿದ್ದ ಮೂರು ಹಣತೆಗಳೂ ಗುಂಡು ಪುಷ್ಪವೂ ಮತ್ತೊಂದು ಕೊಂಬೆಯಲ್ಲಿ ಬಾದಾಮಿ ಪುಷ್ಪವಿದ್ದ ಮೂರು ಹಣತೆಗಳೂ ಗುಂಡು ಪುಷ್ಪವೂ ಬಾದಾಮಿ ಪುಷ್ಪವಿದ್ದ ಮೂರು ಹಣತೆಗಳೂ ಗುಂಡು ಪುಷ್ಪವೂ ಈ ಪ್ರಕಾರ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳಲ್ಲಿ ಇರಬೇಕು. ದೀಪಸ್ತಂಭದಲ್ಲಿಯೇ ಗುಂಡುಗಳೂ ಪುಷ್ಪಗಳೂ ಸೇರಿದಂತೆ ಬಾದಾಮಿ ಪುಷ್ಪವಿರುವ ನಾಲ್ಕು ಹಣತೆಗಳು ಇರಬೇಕು. ಇದಲ್ಲದೆ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳ ಪ್ರಕಾರ ಅದರಿಂದ ಬರುವ ಎರಡೆರಡು ಕೊಂಬೆಗಳ ಕೆಳಗೆ ಒಂದೊಂದು ಗುಂಡು ಇರಬೇಕು. ಅದರ ಗುಂಡುಗಳೂ ಕೊಂಬೆಗಳೂ ಅದರಿಂದಲೇ ಬಂದಿರಬೇಕು. ಅದೆಲ್ಲಾ ಶುದ್ಧ ಬಂಗಾ ರದ ಒಂದೇ ನಕ್ಷೆಯ ಕೆಲಸವಾಗಿರಬೇಕು. ಅದರ ಏಳು ದೀಪಗಳನ್ನು ಮಾಡಿ ಅವು ಮುಂದುಗಡೆಯಲ್ಲಿ ಪ್ರಕಾಶ ಕೊಡುವಂತೆ ಅವುಗಳನ್ನು ಹೊತ್ತಿಸಬೇಕು. ಇದಲ್ಲದೆ ಅದರ ಚಿಮಟಿಗೆಗಳನ್ನೂ ಬೂದಿಯ ಪಾತ್ರೆಗಳನ್ನೂ ಶುದ್ಧ ಬಂಗಾರದಿಂದಲೇ ಮಾಡಬೇಕು. ಒಂದು ತಲಾಂತು ಶುದ್ಧ ಬಂಗಾರದಿಂದ ದೀಪ ಸ್ತಂಭವನ್ನೂ ಅದರ ಎಲ್ಲಾ ಸಾಮಾನುಗಳನ್ನೂ ಮಾಡ ಬೇಕು.ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಅವುಗಳನ್ನು ಮಾಡುವಂತೆ ನೋಡಿಕೋ.
- Exodus 27:20–21 ವಿಮೋಚನಕಾಂಡ 27:20–21ಇದಲ್ಲದೆ ಬೆಳಕಿಗೋಸ್ಕರ ಯಾವಾಗಲೂ ದೀಪ ವನ್ನು ಉರಿಸುವಂತೆ ಶುದ್ಧವಾದ ಕುಟ್ಟಿದ ಹಿಪ್ಪೆಯ ಎಣ್ಣೆಯನ್ನು ನಿನಗೆ ತರುವ ಹಾಗೆ ಇಸ್ರಾಯೇಲ್ ಮಕ್ಕಳಿಗೆ ಅಪ್ಪಣೆಕೊಡಬೇಕು.ಸಭೆಯ ಗುಡಾರ ದಲ್ಲಿ ಮಂಜೂಷದ ಮುಂದೆ ಇರುವ ತೆರೆಯ ಹೊರಗೆ ಅರೋನನೂ ಅವನ ಮಕ್ಕಳೂ ಅದನ್ನು ಸಾಯಂಕಾಲ ದಿಂದ ಉದಯದ ವರೆಗೂ ಕರ್ತನ ಮುಂದೆ ದೀಪ ವನ್ನು ಸರಿಪಡಿಸುತ್ತಿರಬೇಕು. ಇದು ಇಸ್ರಾಯೇಲ್ ಮಕ್ಕಳ ಪರವಾಗಿ ಅವರ ಸಂತತಿಯವರಿಗೆ ಶಾಶ್ವತವಾದ ಕಟ್ಟಳೆಯಾಗಿರಬೇಕು. ಸಭೆಯ ಗುಡಾರ ದಲ್ಲಿ ಮಂಜೂಷದ ಮುಂದೆ ಇರುವ ತೆರೆಯ ಹೊರಗೆ ಅರೋನನೂ ಅವನ ಮಕ್ಕಳೂ ಅದನ್ನು ಸಾಯಂಕಾಲ ದಿಂದ ಉದಯದ ವರೆಗೂ ಕರ್ತನ ಮುಂದೆ ದೀಪ ವನ್ನು ಸರಿಪಡಿಸುತ್ತಿರಬೇಕು. ಇದು ಇಸ್ರಾಯೇಲ್ ಮಕ್ಕಳ ಪರವಾಗಿ ಅವರ ಸಂತತಿಯವರಿಗೆ ಶಾಶ್ವತವಾದ ಕಟ್ಟಳೆಯಾಗಿರಬೇಕು.
- Exodus 29:38 ವಿಮೋಚನಕಾಂಡ 29:38ಇದಲ್ಲದೆ ಯಜ್ಞವೇದಿಯ ಮೇಲೆ ನೀನು ಅರ್ಪಿಸ ಬೇಕಾದದ್ದು ಇದೇ; ಒಂದು ವರುಷದ ಎರಡು ಕುರಿಮರಿಗಳನ್ನು ಪ್ರತಿದಿನ ಬಿಡದೆ ಅರ್ಪಿಸಬೇಕು.
- Numbers 16:46 ಅರಣ್ಯಕಾಂಡ 16:46ಮೋಶೆಯು ಆರೋನನಿಗೆ--ನೀನು ಧೂಪದ ಪಾತ್ರೆಯನ್ನು ತೆಗೆದುಕೊಂಡು ಅದರ ಮೇಲೆ ಬಲಿಪೀಠದ ಬೆಂಕಿಯನ್ನು ಇಟ್ಟು ಧೂಪ ಹಾಕಿ ಶೀಘ್ರವಾಗಿ ಸಭೆಯೊಳಗೆ ಹೋಗಿ ಅವರಿ ಗೋಸ್ಕರ ಪ್ರಾಯಶ್ಚಿತ್ತಮಾಡು. ಯಾಕಂದರೆ ಕರ್ತನ ಸಮ್ಮುಖದಿಂದ ಕೋಪವು ಹೊರಟು ಅವರೊಳಗೆ ವ್ಯಾಧಿಯು ಪ್ರಾರಂಭವಾಯಿತು ಎಂದು ಹೇಳಿದನು.
- Exodus 30:1–10 ವಿಮೋಚನಕಾಂಡ 30:1–10ನೀನು ಧೂಪ ಸುಡುವ ವೇದಿಯನ್ನು ಮಾಡಬೇಕು; ಜಾಲೀ ಮರದಿಂದ ಅದನ್ನು ಮಾಡಬೇಕು. ಅದರ ಉದ್ದ ಒಂದು ಮೊಳ, ಅಗಲ ಒಂದು ಮೊಳ, ಎತ್ತರ ಎರಡು ಮೊಳ ಇದ್ದು ಅದು ಚಚ್ಚೌಕವಾಗಿರಬೇಕು. ಅದಕ್ಕೆ ಕೊಂಬುಗಳನ್ನು ಅದ ರಿಂದಲೇ ಮಾಡಬೇಕು. ಮೇಲ್ಭಾಗವನ್ನೂ ಸುತ್ತಲಿನ ಭಾಗಗಳನ್ನೂ ಕೊಂಬುಗಳನ್ನೂ ಶುದ್ಧ ಬಂಗಾರದಿಂದ ಹೊದಿಸಿ ಸುತ್ತಲೂ ಬಂಗಾರದ ಗೋಟನ್ನು ಮಾಡ ಬೇಕು. ಗೋಟಿನ ಕೆಳಗೆ ಎರಡೂ ಪಕ್ಕಗಳ ಎರಡು ಮೂಲೆಗಳಲ್ಲಿ ಎರಡು ಬಂಗಾರದ ಬಳೆಗಳನ್ನು ಮಾಡ ಬೇಕು. ಇವುಗಳನ್ನು ಹೊರುವದಕ್ಕಾಗಿ ಅವುಗಳಲ್ಲಿ ಸಿಕ್ಕಿಸಬೇಕು. ಆ ಕೋಲುಗಳನ್ನು ಜಾಲೀ ಮರದಿಂದ ಮಾಡಿ ಅವುಗಳನ್ನು ಬಂಗಾರದಿಂದ ಹೊದಿಸಬೇಕು. ಅದನ್ನು ಸಾಕ್ಷಿ ಹಲಗೆಗಳಿದ್ದ ಮಂಜೂಷದ ಮುಂದೆ ಇರುವ ತೆರೆಯ ಮುಂದೆಯೂ ನಾನು ನಿನ್ನನ್ನು ಸಂಧಿಸುವ ಸ್ಥಳದಲ್ಲಿ ಇರುವ ಮಂಜೂಷದ ಮೇಲಿನ ಕರುಣಾ ಸನದ ಮುಂದೆಯೂ ಇಡಬೇಕು. ಪ್ರತಿದಿನ ಬೆಳಿಗ್ಗೆ ಆರೋನನು ಪರಿಮಳ ಧೂಪ ವನ್ನು ಅದರ ಮೇಲೆ ಸುಡಬೇಕು. ಅವನು ದೀಪಗಳನ್ನು ಸಿದ್ಧಮಾಡುವಾಗ ಪರಿಮಳ ಧೂಪವನ್ನು ಅದರ ಮೇಲೆ ಸುಡಬೇಕು. ಆರೋನನು ಸಾಯಂಕಾಲ ದೀಪಗಳನ್ನು ಅಂಟಿಸುವ ಸಮಯದಲ್ಲಿ ಧೂಪವೇದಿಯ ಮೇಲೆ ಧೂಪವನ್ನು ಸುಡಬೇಕು. ಅದೇ ನಿಮ್ಮ ಸಂತತಿಯವರಿಗೆ ಕರ್ತನ ಮುಂದೆ ಅರ್ಪಿಸಬೇಕಾದ ನಿತ್ಯವಾದ ಧೂಪ ವು. ನೀವು ಅದರ ಮೇಲೆ ಬೇರೆ ಧೂಪವನ್ನಾಗಲಿ ದಹನಬಲಿಗಳನ್ನಾಗಲಿ ಆಹಾರಾರ್ಪಣೆಯನ್ನಾಗಲಿ ಅರ್ಪಿಸಬಾರದು. ಇಲ್ಲವೆ ಪಾನಾರ್ಪಣೆಯನ್ನು ಅದರ ಮೇಲೆ ಹೊಯ್ಯಬಾರದು. ಆರೋನನು ಅದರ ಕೊಂಬುಗಳಿಗೆ ವರುಷಕ್ಕೆ ಒಂದು ಸಾರಿ ಪ್ರಾಯಶ್ಚಿತ್ತದ ಬಲಿಯ ರಕ್ತದಿಂದ ಪ್ರಾಯಶ್ಚಿತ್ತ ಮಾಡಬೇಕು. ವರುಷಕ್ಕೊಂದು ಸಾರಿ ನಿಮ್ಮ ಸಂತತಿಗಳಲ್ಲೆಲ್ಲಾ ಅದನ್ನು ಮಾಡಬೇಕು. ಅದು ಕರ್ತನಿಗೆ ಅತಿಪರಿಶುದ್ಧವಾದದ್ದು.
- Ezekiel 48:11 ಯೆಹೆಜ್ಕೇಲನು 48:11ಇದು ನನ್ನ ಆಜ್ಞೆಯಂತೆ ನಡಕೊಂಡ ಇಸ್ರಾಯೇಲಿನ ಮಕ್ಕಳು ತಪ್ಪಿಹೋದಾಗ, ಲೇವಿಯರೂ ತಪ್ಪಿಹೋದ ಪ್ರಕಾರ ತಪ್ಪಿಹೋಗದೆ ಇದ್ದಂತ ಚಾದೋ ಕನ ಕುಮಾರರಲ್ಲಿ ಪರಿಶುದ್ಧ ಮಾಡಲ್ಪಟ್ಟ ಯಾಜಕರ ದಾಗಿರಬೇಕು;
- Genesis 26:5 ಆದಿಕಾಂಡ 26:5ಅಬ್ರಹಾಮನು ನನ್ನ ಮಾತಿಗೆ ವಿಧೇಯನಾಗಿ ನನ್ನ ನೇಮವಿಧಿ ಆಜ್ಞೆ ಕಟ್ಟಳೆಗಳನ್ನು ಕೈಕೊಂಡನು ಅಂದನು.
- Leviticus 2:1–3 ಯಾಜಕಕಾಂಡ 2:1–3ಯಾರಾದರೂ ಕರ್ತನಿಗೆ ಆಹಾರ ಸಮರ್ಪಣೆಯನ್ನು ಸಮರ್ಪಿಸುವದಾದರೆ ಅವನ ಸಮರ್ಪಣೆಯು ನಯವಾದ ಹಿಟ್ಟಿನದ್ದಾಗಿರ ಬೇಕು. ಅವನು ಅದರ ಮೇಲೆ ಎಣ್ಣೆಯನ್ನು ಸುರಿಯ ಬೇಕು; ಅದರ ಮೇಲೆ ಸಾಂಬ್ರಾಣಿಯನ್ನು ಹಾಕಬೇಕು. ಇದಲ್ಲದೆ ಅವನು ಅದನ್ನು ಯಾಜಕರಾದ ಆರೋನನ ಕುಮಾರರ ಬಳಿಗೆ ತರಬೇಕು; ಅವನು ಹಿಟ್ಟಿನಲ್ಲಿಯೂ ಎಣ್ಣೆಯಲ್ಲಿಯೂ ಒಂದು ಹಿಡಿಯನ್ನು ಅದರ ಎಲ್ಲಾ ಸಾಂಬ್ರಾಣಿಯ ಸಂಗಡ ತೆಗೆದುಕೊಳ್ಳಬೇಕು. ಯಾಜ ಕನು ಅದನ್ನು ಜ್ಞಾಪಕಾರ್ಥವಾಗಿ ಯಜ್ಞವೇದಿಯ ಮೇಲೆ ಕರ್ತನಿಗೆ ಸುವಾಸನೆಯ ಸಮರ್ಪಣೆಯಾಗಿ ಬೆಂಕಿಯಿಂದ ಸುಡಬೇಕು. ಆಹಾರದ ಸಮರ್ಪಣೆ ಯಲ್ಲಿ ಉಳಿದದ್ದು ಆರೋನನಿಗೂ ಅವನ ಕುಮಾರ ರಿಗೂ ಆಗಬೇಕು; ಅದು ಬೆಂಕಿಯಿಂದ ಮಾಡಿದ ಕರ್ತನ ಸಮರ್ಪಣೆಗಳಲ್ಲಿ ಅತಿ ಪರಿಶುದ್ಧವಾದದ್ದು.
- Ezekiel 44:8 ಯೆಹೆಜ್ಕೇಲನು 44:8ನೀವು ನನ್ನ ಪರಿಶುದ್ಧವಾದ ಜವಾಬ್ದಾರಿಯನ್ನು ಕೈಗೊಳ್ಳದೆ ಬೇರೆಯವರನ್ನು ಕಾಯುವದಕ್ಕೆ ನಿಮ್ಮ ಪರಿ ಶುದ್ದ ಸ್ಥಳದಲ್ಲಿ ಇರಿಸಿದ್ದೀರಿ.
- Revelation 8:3–4 ಪ್ರಕಟನೆ 8:3–4ಆಮೇಲೆ ಚಿನ್ನದ ಧೂಪದ ಪಾತ್ರೆಯಿದ್ದ ಮತ್ತೊಬ್ಬ ದೂತನು ಬಂದು ಯಜ್ಞವೇದಿಯ ಬಳಿ ಯಲ್ಲಿ ನಿಂತನು; ಸಿಂಹಾಸನದ ಮುಂದೆ ಇದ್ದ ಚಿನ್ನದ ಧೂಪವೇದಿಯ ಮೇಲೆ ಪರಿಶುದ್ಧರೆಲ್ಲರ ಪ್ರಾರ್ಥನೆಗಳ ಜೊತೆಯಲ್ಲಿ ಸಮರ್ಪಿಸುವದಕ್ಕಾಗಿ ಅವನಿಗೆ ಬಹಳ ಧೂಪ ಕೊಡಲ್ಪಟ್ಟಿತು. ಆಗ ಧೂಪದ ಹೊಗೆಯು ದೂತನ ಕೈಯೊಳಗಿಂದ ಹೊರಟು ಪರಿಶುದ್ಧರ ಪ್ರಾರ್ಥನೆಗಳೊಂದಿಗೆ ಕೂಡಿ ದೇವರ ಸನ್ನಿಧಾನಕ್ಕೆ ಏರಿಹೋಯಿತು.
Original words (Hebrew)
- burn · H6999קָטַר qâṭar
- morning · H1242בֹּקֶר bôqer
- evening · H6153עֶרֶב ʻereb
- sacrifices · H5930עֹלָה ʻôlâh
- sweet · H5561סַם çam
- incense · H7004קְטֹרֶת qᵉṭôreth
- shewbread · H3899לֶחֶם lechem
- pure · H2889טָהוֹר ṭâhôwr
- table · H7979שֻׁלְחָן shulchân
- candlestick · H4501מְנוֹרָה mᵉnôwrâh
- gold · H2091זָהָב zâhâb
- lamps · H5216נִיר nîyr
- burn · H1197בָּעַר bâʻar
- evening · H6153עֶרֶב ʻereb
- keep · H8104שָׁמַר shâmar
- charge · H4931מִשְׁמֶרֶת mishmereth
- God · H430אֱלֹהִים ʼĕlôhîym
- forsaken · H5800עָזַב ʻâzab