2 Chronicles · chapter 15 · verse 12
2 Chronicles 15:12 in Kannada
ತಮ್ಮ ಪಿತೃಗಳ ದೇವರಾದ ಕರ್ತನನ್ನು ತಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದ ಲೂ ಹುಡುಕಬೇಕೆಂದೂ
Tamma pitrugala devaraada kartanannu tamma poornahrudayadindaloo poornapraanadinda loo hudukabekendoo
2 Chronicles 15:12 in English
- King James Version (KJV)
- And they entered into a covenant to seek the LORD God of their fathers with all their heart and with all their soul;
- World English Bible (WEB)
- They entered into the covenant to seek the LORD, the God of their fathers, with all their heart and with all their soul;
- American Standard Version (ASV)
- And they entered into the covenant to seek Jehovah, the God of their fathers, with all their heart and with all their soul;
- Bible in Basic English (BBE)
- And they made an agreement to be true to the Lord, the God of their fathers, with all their heart and all their soul;
- Darby Translation (DBY)
- And they entered into a covenant to seek Jehovah the God of their fathers, with all their heart, and with all their soul,
- Webster's Bible (WBS)
- And they entered into a covenant to seek the LORD God of their fathers with all their heart and with all their soul;
- Young's Literal Translation (YLT)
- and they enter into a covenant to seek Jehovah, God of their fathers, with all their heart, and with all their soul,
Read in context
- 10ಹೀಗೆಯೇ ಆಸನ ಆಳಿಕೆಯ ಹದಿನೈದನೇ ವರುಷದ ಮೂರನೇ ತಿಂಗಳಲ್ಲಿ ಅವರು ಯೆರೂಸಲೇಮಿನಲ್ಲಿ ಕೂಡಿ ಕೊಂಡರು.
- 11ಅದೇ ಕಾಲದಲ್ಲಿ ತಾವು ತಂದ ಕೊಳ್ಳೆಯಿಂದ ಏಳುನೂರು ಎತ್ತುಗಳನ್ನೂ ಏಳು ಸಾವಿರ ಕುರಿಗಳನ್ನೂ ಕರ್ತನಿಗೆ ಬಲಿಅರ್ಪಿಸಿದರು.
- 12ತಮ್ಮ ಪಿತೃಗಳ ದೇವರಾದ ಕರ್ತನನ್ನು ತಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದ ಲೂ ಹುಡುಕಬೇಕೆಂದೂ
- 13ಯಾವನಾದರೂ ಇಸ್ರಾ ಯೇಲಿನ ದೇವರಾದ ಕರ್ತನನ್ನು ಹುಡುಕದೆ ಹೋದರೆ ಹಿರಿಯನಾದರೂ ಕಿರಿಯನಾದರೂ ಪುರುಷನಾದರೂ ಸ್ತ್ರೀಯಾದರೂ ಸಾಯಬೇಕೆಂದೂ ಒಡಂಬಡಿಕೆಯನ್ನು ಮಾಡಿಕೊಂಡರು.
- 14ಮಹಾಶಬ್ದದಿಂದಲೂ ಆರ್ಭಟ ದಿಂದಲೂ ತುತೂರಿಗಳ ಶಬ್ದದಿಂದಲೂ ಕೊಂಬು ಗಳ ಶಬ್ದದಿಂದಲೂ ಕರ್ತನ ಮುಂದೆ ಆಣೆಯಿಟ್ಟರು.
Cross references
- Acts 24:14 ಅಪೊಸ್ತಲರ ಕೃತ್ಯಗಳು 24:14ಆದರೆ ನ್ಯಾಯಪ್ರಮಾಣದಲ್ಲಿಯೂ ಪ್ರವಾದನೆಗಳಲ್ಲಿಯೂ ಬರೆಯಲ್ಪಟ್ಟವುಗಳೆಲ್ಲವನ್ನು ನಂಬಿಕೊಂಡು ಅವರು ಪಾಷಾಂಡವೆಂದು ಹೇಳುವ ಮಾರ್ಗಕ್ಕನುಸಾರವಾಗಿ ನನ್ನ ಪಿತೃಗಳ ದೇವರನ್ನು ಆರಾಧಿಸುವವನಾಗಿದ್ದೇನೆ ಎಂದು ನಾನು ನಿನ್ನ ಮುಂದೆ ಒಪ್ಪಿಕೊಳ್ಳುತ್ತೇನೆ.
- 2 Chronicles 23:16 2 ಪೂರ್ವಕಾಲವೃತ್ತಾಂತ 23:16ಆಗ ಅವರು ಕರ್ತನ ಜನರಾಗಿರುವ ಹಾಗೆ ಯೆಹೋಯಾದನು ತನಗೂ ಸಮಸ್ತ ಜನರಿಗೂ ಅರಸ ನಿಗೂ ಒಡಂಬಡಿಕೆ ಮಾಡಿದನು.
- Deuteronomy 10:12 ಧರ್ಮೋಪದೇಶಕಾಂಡ 10:12ಈಗ ಇಸ್ರಾಯೇಲೇ, ನಿನ್ನ ಕರ್ತನಾದ ದೇವರಿಗೆ ಭಯಪಟ್ಟು ಆತನ ಎಲ್ಲಾ ಮಾರ್ಗಗಳಲ್ಲಿ ನಡೆದು ಕೊಂಡು ಆತನನ್ನು ಪ್ರೀತಿಮಾಡಿ ನಿನ್ನ ಕರ್ತನಾದ ದೇವರಿಗೆ ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ಸೇವೆಮಾಡಿ
- 2 Chronicles 29:10 2 ಪೂರ್ವಕಾಲವೃತ್ತಾಂತ 29:10ಈಗ ಇಸ್ರಾಯೇಲಿನ ದೇವರಾದ ಕರ್ತನ ಉಗ್ರಕೋಪವು ನಮ್ಮನ್ನು ಬಿಟ್ಟು ಹೋಗುವ ಹಾಗೆ ನಾನು ಆತನ ಸಂಗಡ ಒಡಂಬಡಿ ಕೆಯನ್ನು ಮಾಡಲು ಮನಸ್ಸುಳ್ಳವನಾಗಿದ್ದೇನೆ.
- 2 Kings 23:3 2 ಅರಸುಗಳು 23:3ಅರಸನು ಸ್ತಂಭದ ಬಳಿಯಲ್ಲಿ ನಿಂತು ಕರ್ತನನ್ನು ಹಿಂಬಾಲಿಸು ವದಕ್ಕೂ ಆತನ ಆಜ್ಞೆಗಳನ್ನೂ ಸಾಕ್ಷಿಗಳನ್ನೂ ಕಟ್ಟಳೆ ಗಳನ್ನೂ ಪೂರ್ಣಹೃದಯದಿಂದಲೂ ಪೂರ್ಣಪ್ರಾಣ ದಿಂದಲೂ ಕೈಕೊಳ್ಳುವದಕ್ಕೂ ಈ ಪುಸ್ತಕದಲ್ಲಿ ಬರೆದಿ ರುವ ಒಡಂಬಡಿಕೆಯ ವಾಕ್ಯಗಳನ್ನು ಸ್ಥಿರಪಡಿಸುವ ದಕ್ಕೂ ಕರ್ತನ ಮುಂದೆ ಒಡಂಬಡಿಕೆಯನ್ನು ಮಾಡಿ ದನು; ಜನರೆಲ್ಲರೂ ಒಡಂಬಡಿಕೆಗೆ ಒಪ್ಪಿದರು.
- 1 Kings 8:48 1 ಅರಸುಗಳು 8:48ತಮ್ಮ ಪೂರ್ಣ ಪ್ರಾಣದಿಂದಲೂ ನಿನ್ನ ಕಡೆಗೆ ತಿರುಗಿಕೊಂಡು ನೀನು ಅವರ ಪಿತೃಗಳಿಗೆ ಕೊಟ್ಟ ತಮ್ಮ ದೇಶದ ಮಾರ್ಗ ವಾಗಿಯೂ ನೀನು ಆದುಕೊಂಡ ಪಟ್ಟಣದ ಮಾರ್ಗ ವಾಗಿಯೂ ನಿನ್ನ ಹೆಸರಿಗೋಸ್ಕರ ನಾನು ಕಟ್ಟಿಸಿದ ಈ ಮಂದಿರದ ಮಾರ್ಗವಾಗಿಯೂ ಅವರು ನಿನಗೆ ಪ್ರಾರ್ಥನೆ ಮಾಡಿದರೆ
- 2 Chronicles 15:4 2 ಪೂರ್ವಕಾಲವೃತ್ತಾಂತ 15:4ಆದರೆ ಅವರು ತಮ್ಮ ಇಕ್ಕಟ್ಟಿನಲ್ಲಿ ಇಸ್ರಾಯೇಲಿನ ದೇವರಾದ ಕರ್ತನ ಕಡೆಗೆ ತಿರಿಗಿ ಆತನನ್ನು ಹುಡುಕಿ ದಾಗ ಆತನು ಅವರಿಗೆ ಸಿಕ್ಕಿದನು.
- 2 Chronicles 34:31–32 2 ಪೂರ್ವಕಾಲವೃತ್ತಾಂತ 34:31–32ಅರಸನು ತನ್ನ ಸ್ಥಳದಲ್ಲಿ ನಿಂತುಕೊಂಡು ಕರ್ತನನ್ನು ಹಿಂಬಾಲಿಸುವದಕ್ಕೂ ಆತನ ಆಜ್ಞೆಗಳನ್ನೂ ಸಾಕ್ಷಿಗಳನ್ನೂ ಕಟ್ಟಳೆಗಳನ್ನೂ ತನ್ನ ಪೂರ್ಣಹೃದಯದಿಂದಲೂ ತನ್ನ ಪೂರ್ಣಪ್ರಾಣದಿಂದಲೂ ಕೈಕೊಳ್ಳುವದಕ್ಕೂ ಈ ಪುಸ್ತಕದಲ್ಲಿ ಬರೆದಿರುವ ಒಡಂಬಡಿಕೆಯ ವಾಕ್ಯಗಳ ಹಾಗೆ ಮಾಡುವದಕ್ಕೂ ಕರ್ತನ ಮುಂದೆ ಒಡಂಬಡಿಕೆ ಮಾಡಿದನು. ಇದಲ್ಲದೆ ಅವನು ಯೆರೂಸಲೇಮಿ ನಲ್ಲಿಯೂ ಬೆನ್ಯಾವಿಾನಿನಲ್ಲಿಯೂ ಸಿಕ್ಕಿದವರೆಲ್ಲರನ್ನು ಅದಕ್ಕೆ ಒಪ್ಪುವಂತೆ ಮಾಡಿದನು. ಹಾಗೆಯೇ ಯೆರೂ ಸಲೇಮಿನ ನಿವಾಸಿಗಳು ತಮ್ಮ ಪಿತೃಗಳ ದೇವರ ಒಡಂಬಡಿಕೆಯ ಪ್ರಕಾರ ಮಾಡಿದರು.ಹೀಗೆಯೇ ಯೋಷೀಯನು ಇಸ್ರಾಯೇಲ್ ಮಕ್ಕಳಿಗೆ ಇದ್ದ ಎಲ್ಲಾ ದೇಶಗಳೊಳಗಿಂದ ಸಮಸ್ತ ಅಸಹ್ಯಗಳನ್ನು ತೆಗೆದು ಹಾಕಿ ಇಸ್ರಾಯೇಲಿನಲ್ಲಿ ಉಳಿದಿರುವರೆಲ್ಲರೂ ತಮ್ಮ ದೇವರಾದ ಕರ್ತನನ್ನು ಸೇವಿಸುವ ಹಾಗೆ ಮಾಡಿದನು. ಅವನ ದಿವಸಗಳೆಲ್ಲಾ ಅವರು ತಮ್ಮ ಪಿತೃಗಳ ದೇವ ರಾದ ಕರ್ತನನ್ನು ಹಿಂಬಾಲಿಸುವದನ್ನು ಬಿಡದೆ ಇದ್ದರು.
- Deuteronomy 4:29 ಧರ್ಮೋಪದೇಶಕಾಂಡ 4:29ಅಲ್ಲಿಂದ ನಿನ್ನ ದೇವರಾದ ಕರ್ತನನ್ನು ಹುಡುಕಿದರೆ ಆತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ಹುಡುಕಿದರೆ, ಆತ ನನ್ನು ಕಂಡುಕೊಳ್ಳುವಿ.
- Jeremiah 50:5 ಯೆರೆಮೀಯ 50:5ಚೀಯೋನಿನ ಕಡೆಗೆ ಅಭಿಮುಖರಾಗಿ ಅದರ ಮಾರ್ಗವನ್ನು ವಿಚಾರಿಸಿ--ಬನ್ನಿ, ಮರೆತುಹೋಗದ ನಿತ್ಯವಾದ ಒಡಂಬಡಿಕೆಯಿಂದ ಕರ್ತನನ್ನು ಸೇರಿಸಿ ಕೊಳ್ಳೋಣ ಅನ್ನುವರು.
- Jeremiah 29:12–13 ಯೆರೆಮೀಯ 29:12–13ಆಗ ನನ್ನನ್ನು ಕರೆಯುವಿರಿ; ಹೋಗಿ ನನಗೆ ಪ್ರಾರ್ಥನೆ ಮಾಡುವಿರಿ; ನಿಮಗೆ ಕಿವಿಗೊಡುವೆನು. ನನ್ನನ್ನು ಹುಡುಕುವಿರಿ; ಪೂರ್ಣ ಹೃದಯದಿಂದ ನನ್ನನ್ನು ಹುಡುಕುವಾಗ ನನ್ನನ್ನು ಕಂಡುಕೊಳ್ಳುವಿರಿ.
- 2 Corinthians 8:5 2 ಕೊರಿಂಥದವರಿಗೆ 8:5ನಾವು ನಿರೀಕ್ಷಿಸಿದ ಪ್ರಕಾರವಾಗಿ ಅವರು ಕೊಡದೆ ಮೊದಲು ತಮ್ಮನ್ನೇ ಕರ್ತನಿಗೆ ಒಪ್ಪಿಸಿಕೊಟ್ಟರು; ಅನಂತರ ದೇವರ ಚಿತ್ತಾನುಸಾರವಾಗಿ ನಮಗೂ ತಮ್ಮನ್ನು ಒಪ್ಪಿಸಿಕೊಟ್ಟರು.