2 Chronicles · chapter 18 · verse 13
2 Chronicles 18:13 in Kannada
ಅದಕ್ಕೆ ಮಿಕಾಯೆಹುವು--ಕರ್ತನ ಜೀವ ದಾಣೆ, ನನ್ನ ದೇವರು ಏನು ಹೇಳುವನೋ ಅದನ್ನು ಹೇಳುವೆನು ಅಂದನು.
Adakke mikaayehuvu--kartana jeeva daane, nanna devaru enu heluvano adannu heluvenu andanu.
2 Chronicles 18:13 in English
- King James Version (KJV)
- And Micaiah said, [As] the LORD liveth, even what my God saith, that will I speak.
- World English Bible (WEB)
- Micaiah said, “As the LORD lives, I will say what my God says.”
- American Standard Version (ASV)
- And Micaiah said, As Jehovah liveth, what my God saith, that will I speak.
- Bible in Basic English (BBE)
- And Micaiah said, By the living Lord, whatever the Lord says to me I will say.
- Darby Translation (DBY)
- And Micah said, As Jehovah liveth, even what my God shall say, that will I declare.
- Webster's Bible (WBS)
- And Micaiah said, [As] the LORD liveth, even what my God saith, that will I speak.
- Young's Literal Translation (YLT)
- And Micaiah saith 'Jehovah liveth, surely that which my God saith, it I speak.'
Read in context
- 11ಸಮಸ್ತ ಪ್ರವಾದಿಗಳೂ ಹಾಗೆಯೇ ಪ್ರವಾದಿಸಿ--ಗಿಲ್ಯಾದಿನಲ್ಲಿರುವ ರಾಮೋ ತಿಗೆ ಹೋಗಿ ಜಯಹೊಂದು; ಕರ್ತನು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವನು ಅಂದರು.
- 12ಆದರೆ ವಿಾಕಾಯೆಹುವನ್ನು ಕರೆಯುವದಕ್ಕೆ ಹೋದ ಸೇವಕನು ಅವನಿಗೆ--ಇಗೋ, ಪ್ರವಾದಿಗಳ ಮಾತುಗಳು ಒಂದೇ ಒಪ್ಪಿಗೆಯಿಂದ ಅರಸನಿಗೆ ಒಳ್ಳೇ ದನ್ನು ಪ್ರಕಟಿಸುತ್ತವೆ; ನಿನ್ನ ಮಾತು ಅವರಲ್ಲಿ ಒಬ್ಬನ ಮಾತಿನ ಹಾಗೆಯೇ ಇರಲಿ; ಒಳ್ಳೇ ಮಾತು ಆಡು ಅಂದನು.
- 13ಅದಕ್ಕೆ ಮಿಕಾಯೆಹುವು--ಕರ್ತನ ಜೀವ ದಾಣೆ, ನನ್ನ ದೇವರು ಏನು ಹೇಳುವನೋ ಅದನ್ನು ಹೇಳುವೆನು ಅಂದನು.
- 14ಅವನು ಅರಸನ ಬಳಿಗೆ ಬಂದಾಗ ಅರಸನು ಅವನಿಗೆ--ವಿಾಕಾಯೆಹುವೇ, ನಾವು ರಾಮೋತ್ ಗಿಲ್ಯಾದಿಗೆ ಯುದ್ಧಕ್ಕೆ ಹೋಗಲೋ ಇಲ್ಲವೆ ನಾವು ಹೋಗುವದು ಬೇಡವೋ? ಅಂದನು. ಆಗ ಅವನು--ಹೋಗಿ ಜಯಹೊಂದಿರಿ, ಅವರು ನಿಮ್ಮ ಕೈಯಲ್ಲಿ ಒಪ್ಪಿಸಲ್ಪಡುವರು ಅಂದನು.
- 15ಆಗ ಅರಸನು ಅವನಿಗೆ--ನೀನು ಕರ್ತನ ಹೆಸರಿನಲ್ಲಿ ಸತ್ಯ ವನ್ನಲ್ಲದೆ ಬೇರೊಂದು ನನಗೆ ಹೇಳಬಾರದೆಂದು ನಾನು ಎಷ್ಟುಸಾರಿ ನಿನಗೆ ಆಣೆ ಇಡಬೇಕು ಅಂದನು.
Cross references
- Numbers 22:35 ಅರಣ್ಯಕಾಂಡ 22:35ಆದರೆ ಕರ್ತನ ದೂತನು ಬಿಳಾಮನಿಗೆ--ಈ ಮನುಷ್ಯರ ಸಂಗಡ ಹೋಗು; ಹೋದರೂ ನಾನು ನಿನಗೆ ಹೇಳುವದನ್ನೇ ಹೇಳಬೇಕು ಅಂದನು. ಹಾಗೆಯೇ ಬಿಳಾಮನು ಬಾಲಾಕನ ಪ್ರಭುಗಳ ಸಂಗಡ ಹೋದನು.
- Numbers 22:18–20 ಅರಣ್ಯಕಾಂಡ 22:18–20ಬಿಳಾಮನು ಪ್ರತ್ಯುತ್ತರ ವಾಗಿ ಬಾಲಾಕನ ಸೇವಕರಿಗೆ ಹೇಳಿದ್ದೇನಂದರೆ--ಬಾಲಾಕನು ನನಗೆ ತನ್ನ ಮನೆ ತುಂಬ ಬೆಳ್ಳಿಯನ್ನು ಬಂಗಾರವನ್ನು ಕೊಟ್ಟರೂ ನಾನು ನನ್ನ ದೇವರಾಗಿರುವ ಕರ್ತನ ಮಾತನ್ನು ವಿಾರಿ ಹೆಚ್ಚು ಕಡಿಮೆ ಏನನ್ನೂ ಮಾಡಲಾರೆನು. ಆದರೆ ಈಗ ಕರ್ತನು ನನಗೆ ಮತ್ತೇನು ಹೇಳುವನೆಂದು ನಾನು ತಿಳುಕೊಳ್ಳುವ ಹಾಗೆ ನೀವು ಸಹ ದಯಮಾಡಿ ಈ ರಾತ್ರಿ ಇಲ್ಲಿ ಇಳುಕೊಳ್ಳಿರಿ ಅಂದನು. ಆಗ ದೇವರು ಬಿಳಾಮನ ಬಳಿಗೆ ರಾತ್ರಿಯಲ್ಲಿ ಬಂದು ಅವನಿಗೆ ಹೇಳಿದ್ದೇನಂದರೆ--ಈ ಮನುಷ್ಯರು ನಿನ್ನನ್ನು ಕರೆಯುವದಕ್ಕೆ ಬಂದಿದ್ದರೆ ನೀನು ಎದ್ದು ಅವರ ಸಂಗಡ ಹೋಗು; ಆದರೆ ನಾನು ನಿನಗೆ ಹೇಳುವ ಮಾತೇ ನೀನು ಆಡಬೇಕು ಅಂದನು.
- Numbers 24:13 ಅರಣ್ಯಕಾಂಡ 24:13ಬಾಲಾಕನು ನನಗೆ ತನ್ನ ಮನೆ ತುಂಬ ಬೆಳ್ಳಿ ಬಂಗಾರಗಳನ್ನು ಕೊಟ್ಟರೂ ನನ್ನ ಹೃದಯದಿಂದ ಒಳ್ಳೇದನ್ನಾದರೂ ಕೆಟ್ಟದ್ದನ್ನಾದರೂ ಮಾಡುವದಕ್ಕೆ ಕರ್ತನ ಆಜ್ಞೆಯನ್ನು ವಿಾರಲಾರೆನು; ಕರ್ತನು ಏನು ಹೇಳುತ್ತಾನೋ ಅದನ್ನು ಹೇಳುವೆನೆಂದು ನಾನು ಹೇಳಲಿಲ್ಲವೋ? ಇಗೋ, ನನ್ನ ಜನರ ಬಳಿಗೆ ಹೋಗುತ್ತೇನೆ;
- Jeremiah 42:4 ಯೆರೆಮೀಯ 42:4ಆಗ ಪ್ರವಾದಿಯಾದ ಯೆರೆವಿಾ ಯನು ಅವರಿಗೆ--ನಾನು ಕೇಳಿದ್ದೇನೆ; ಇಗೋ, ನಿಮ್ಮ ಮಾತುಗಳ ಪ್ರಕಾರ ನಿಮ್ಮ ದೇವರಾದ ಕರ್ತನಿಗೆ ಪ್ರಾರ್ಥನೆ ಮಾಡುತ್ತೇನೆ; ಕರ್ತನು ನಿಮಗೆ ಯಾವ ಉತ್ತರವನ್ನು ಕೊಡುವನೋ ಅದನ್ನು ನಿಮಗೆ ತಿಳಿಸು ವೆನು; ಒಂದು ಮಾತನ್ನಾದರೂ ನಿಮ್ಮಿಂದ ಹಿಂತೆಗೆ ಯುವದಿಲ್ಲವೆಂದು ಹೇಳಿದನು.
- 1 Thessalonians 2:4 1 ಥೆಸಲೊನೀಕದವರಿಗೆ 2:4ದೇವರು ನಮ್ಮನ್ನು ನಂಬಿ ನಮ್ಮ ವಶಕ್ಕೆ ಸುವಾರ್ತೆಯನ್ನು ಒಪ್ಪಿಸಿದನಲ್ಲಾ. ಆದದರಿಂದ ನಾವು ಮನುಷ್ಯರನ್ನು ಮೆಚ್ಚಿಸಬೇಕೆನ್ನದೆ ನಮ್ಮ ಹೃದಯಗಳನ್ನು ಪರಿಶೋಧಿಸುವ ದೇವರನ್ನೇ ಮೆಚ್ಚಿಸಬೇಕೆಂದು ಮಾತನಾಡುತ್ತೇವೆ.
- 2 Corinthians 2:17 2 ಕೊರಿಂಥದವರಿಗೆ 2:17ನಾವು ದೇವರ ವಾಕ್ಯವನ್ನು ಕಲಬೆರಿಕೆ ಮಾಡುವವರಾದ ಹೆಚ್ಚು ಪಾಲಿನ ಜನರ ಹಾಗಿರದೆ ನಿಷ್ಕಪಟಿಗಳಾಗಿ ದೇವರಿಂದ ಹೊಂದಿದ ವರಿಗೆ ತಕ್ಕ ಹಾಗೆ ಕ್ರಿಸ್ತನಲ್ಲಿದ್ದುಕೊಂಡು ದೇವರ ಸಮಕ್ಷಮದಲ್ಲಿಯೇ ಮಾತನಾಡುತ್ತೇವೆ.
- 1 Corinthians 11:23 1 ಕೊರಿಂಥದವರಿಗೆ 11:23ನಾನು ನಿಮಗೆ ಒಪ್ಪಿಸಿಕೊಟ್ಟ ಉಪದೇಶವನ್ನು ಕರ್ತನಿಂದ ಹೊಂದಿದೆನು. ಅದೇನಂದರೆ, ಕರ್ತನಾದ ಯೇಸು ತಾನು ಹಿಡಿದುಕೊಡಲ್ಪಟ್ಟ ರಾತ್ರಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು
- Numbers 23:26 ಅರಣ್ಯಕಾಂಡ 23:26ಆದರೆ ಬಿಳಾಮನು ಪ್ರತ್ಯುತ್ತರ ವಾಗಿ ಬಾಲಾಕನಿಗೆ ಕರ್ತನು ಹೇಳುವದನ್ನೆಲ್ಲಾ ನಾನು ಮಾಡುವನೆಂದು ನಿನಗೆ ಹೇಳಲಿಲ್ಲವೋ? ಅಂದನು.
- Jeremiah 23:28 ಯೆರೆಮೀಯ 23:28ಕನಸು ಉಂಟಾದ ಪ್ರವಾದಿಯು ಕನಸನ್ನು ತಿಳಿಸಲಿ, ನನ್ನ ವಾಕ್ಯ ಉಂಟಾದವನು ನನ್ನ ವಾಕ್ಯವನ್ನು ನಂಬಿಗಸ್ತನಾಗಿ ಹೇಳಲಿ; ಗೋಧಿಗೂ ಹೊಟ್ಟಿಗೂ ಸಂಬಂಧವೇನೆಂದು ಕರ್ತನು ಅನ್ನುತ್ತಾನೆ.
- 1 Kings 22:14 1 ಅರಸುಗಳು 22:14ಅದಕ್ಕೆ ವಿಾಕಾಯೆಹು--ಕರ್ತನ ಜೀವ ದಾಣೆ, ಕರ್ತನು ನನಗೆ ಏನು ಹೇಳುವನೋ ಅದನ್ನು ಮಾತನಾಡುವೆನು ಅಂದನು. ಹೀಗೆ ಅವನು ಅರಸನ ಬಳಿಗೆ ಬಂದನು.
- Numbers 23:12 ಅರಣ್ಯಕಾಂಡ 23:12ಅದಕ್ಕೆ ಅವನು ಪ್ರತ್ಯುತ್ತರವಾಗಿ--ಕರ್ತನು ನನ್ನ ಬಾಯೊಳಗೆ ಇಡುವದನ್ನು ಹೇಳುವದಕ್ಕೆ ನಾನು ಜಾಗ್ರತೆಯಾಗಿರ ಬೇಕಲ್ಲವೋ ಅಂದನು.
- Micah 2:6–7 ಮೀಕ 2:6–7ಪ್ರವಾದಿಸಬೇಡಿರೆಂದು ಪ್ರವಾದಿಸುವವರಿಗೆ ಅನ್ನು ತ್ತಾರೆ; ಅವರಿಗೆ ಆತನು ಪ್ರವಾದಿಸನು, ಆದರೆ ಅವರು ನಾಚಿಕೆಪಡುವದಿಲ್ಲ. ಯಾಕೋಬಿನ ಮನೆತನದವ ರೆಂದು ಹೆಸರುಗೊಂಡವರೇ, ಕರ್ತನ ಆತ್ಮವು ಕಡಿಮೆ ಯಾಯಿತೋ? ಇವು ಆತನ ಕ್ರಿಯೆಗಳೋ? ಯಥಾ ರ್ಥವಾಗಿ ನಡೆಯುವವನಿಗೆ ನನ್ನ ಮಾತುಗಳು ಒಳ್ಳೇದನ್ನು ಮಾಡುವದಿಲ್ಲವೋ?