2 Chronicles · chapter 18 · verse 2
2 Chronicles 18:2 in Kannada
ಕೆಲವು ವರುಷಗಳ ತರುವಾಯ ಅವನು ಅಹಾಬನ ಬಳಿಗೆ ಸಮಾರ್ಯಕ್ಕೆ ಹೋದನು; ಆಗ ಅಹಾಬನು ಅವನಿಗೋಸ್ಕರವೂ ಅವನ ಸಂಗಡ ಇದ್ದ ಜನರಿಗೋ ಸ್ಕರವೂ ಅನೇಕ ಕುರಿದನಗಳನ್ನು ಕೊಯಿಸಿ ತನ್ನ ಸಂಗಡ ಗಿಲ್ಯಾದಿನಲ್ಲಿರುವ ರಾಮೋತಿಗೆ ಹೋಗಲು ಪ್ರೇರೇಪಿಸಿದನು.
Kelavu varushagala taruvaaya avanu ahaabana balige samaaryakke hodanu; aaga ahaabanu avanigoskaravoo avana sangada idda janarigo skaravoo aneka kuridanagalannu koyisi tanna sangada gilyaadinalliruva raamotige hogalu prerepisidanu.
2 Chronicles 18:2 in English
- King James Version (KJV)
- And after [certain] years he went down to Ahab to Samaria. And Ahab killed sheep and oxen for him in abundance, and for the people that [he had] with him, and persuaded him to go up [with him] to Ramoth-gilead.
- World English Bible (WEB)
- After some years, he went down to Ahab to Samaria. Ahab killed sheep and cattle for him in abundance, and for the people who were with him, and moved him to go up with him to Ramoth Gilead.
- American Standard Version (ASV)
- And after certain years he went down to Ahab to Samaria. And Ahab killed sheep and oxen for him in abundance, and for the people that were with him, and moved him to go up [with him] to Ramoth-gilead.
- Bible in Basic English (BBE)
- And after some years he went down to Samaria to see Ahab. And Ahab made a feast for him and the people who were with him, putting to death great numbers of sheep and oxen; and he got Jehoshaphat to go with him to Ramoth-gilead.
- Darby Translation (DBY)
- And after [certain] years he went down to Ahab, to Samaria. And Ahab killed sheep and oxen for him in abundance, and for the people that were with him, and urged him to go up against Ramoth-Gilead.
- Webster's Bible (WBS)
- And after [certain] years he went down to Ahab to Samaria. And Ahab killed sheep and oxen for him in abundance, and for the people that [he had] with him, and persuaded him to go up [with him] to Ramoth-gilead.
- Young's Literal Translation (YLT)
- and goeth down at the end of [certain] years unto Ahab to Samaria, and Ahab sacrificeth for him sheep and oxen in abundance, and for the people who [are] with him, and persuadeth him to go up unto Ramoth-Gilead.
Read in context
- 1ಯೆಹೋಷಾಫಾಟನಿಗೆ ಐಶ್ವರ್ಯವೂ ಘನತೆಯೂ ಅಧಿಕವಾಗಿರುವಾಗ ಅವನು ಅಹಾಬನ ಸಂಗಡ ಬಂಧುತ್ವ ಮಾಡಿದನು.
- 2ಕೆಲವು ವರುಷಗಳ ತರುವಾಯ ಅವನು ಅಹಾಬನ ಬಳಿಗೆ ಸಮಾರ್ಯಕ್ಕೆ ಹೋದನು; ಆಗ ಅಹಾಬನು ಅವನಿಗೋಸ್ಕರವೂ ಅವನ ಸಂಗಡ ಇದ್ದ ಜನರಿಗೋ ಸ್ಕರವೂ ಅನೇಕ ಕುರಿದನಗಳನ್ನು ಕೊಯಿಸಿ ತನ್ನ ಸಂಗಡ ಗಿಲ್ಯಾದಿನಲ್ಲಿರುವ ರಾಮೋತಿಗೆ ಹೋಗಲು ಪ್ರೇರೇಪಿಸಿದನು.
- 3ಇಸ್ರಾಯೇಲಿನ ಅರಸನಾದ ಅಹಾ ಬನು ಯೆಹೂದದ ಅರಸನಾದ ಯೆಹೋಷಾಫಾಟ ನಿಗೆ--ಗಿಲ್ಯಾದಿನಲ್ಲಿರುವ ರಾಮೋತಿಗೆ ನೀನು ನನ್ನ ಸಂಗಡ ಬರುತ್ತೀಯೋ ಅಂದನು. ಅದಕ್ಕವನು--ನಾನು ನಿನ್ನ ಹಾಗೆಯೂ ನನ್ನ ಜನರು ನಿನ್ನ ಜನರ ಹಾಗೆಯೂ ಯುದ್ಧದಲ್ಲಿ ನಿನ್ನ ಸಂಗಡ ಇರು ವೆವು ಅಂದನು.
- 4ಆದರೆ ಯೆಹೋಷಾಫಾಟನು ಇಸ್ರಾಯೇಲಿನ ಅರಸನಿಗೆ--ದಯಮಾಡಿ ಈ ಹೊತ್ತು ಕರ್ತನ ವಾಕ್ಯವನ್ನು ವಿಚಾರಿಸು ಅಂದನು.
Cross references
- 2 Kings 9:1 2 ಅರಸುಗಳು 9:1ಪ್ರವಾದಿಯಾದ ಎಲೀಷನು ಪ್ರವಾದಿಗಳ ಮಕ್ಕಳಲ್ಲಿ ಒಬ್ಬನನ್ನು ಕರೆದು ಅವನಿಗೆ--ನಡುವನ್ನು ಕಟ್ಟಿಕೊಂಡು ಈ ಎಣ್ಣೆಯ ಪಾತ್ರೆಯನ್ನು ನಿನ್ನ ಕೈಯಲ್ಲಿ ತೆಗೆದುಕೊಂಡು ಗಿಲ್ಯಾದಿನಲ್ಲಿರುವ ರಾಮೋತಿಗೆ ಹೋಗು.
- 2 Chronicles 19:2 2 ಪೂರ್ವಕಾಲವೃತ್ತಾಂತ 19:2ಆಗ ಪ್ರವಾದಿಯಾಗಿರುವ ಹನಾನೀಯ ಮಗನಾದ ಯೇಹೂ ಅವನನ್ನು ಎದುರುಗೊಳ್ಳಲು ಹೋದನು. ಅರಸನಾದ ಯೆಹೋಷಾಫಾಟನಿಗೆ ಅವನು--ದುಷ್ಟ ನಿಗೆ ಸಹಾಯ ಕೊಡುವವನಾಗಿ ಕರ್ತನನ್ನು ಹಗೆ ಮಾಡುವವರನ್ನು ಪ್ರೀತಿಮಾಡಬಹುದೋ? ಆದ ಕಾರಣ ನಿನ್ನ ಮೇಲೆ ಕರ್ತನ ಸನ್ನಿಧಿಯಿಂದ ರೌದ್ರ ಉಂಟು.
- 1 Kings 1:9 1 ಅರಸುಗಳು 1:9ಆಗ ಅದೋನೀಯನು ರೋಗೆಲ್ ಬಳಿಯಲ್ಲಿರುವ ಚೋಹೆಲೆತ್ ಎಂಬ ಕಲ್ಲಿನ ಹತ್ತಿರ ಕುರಿಗಳನ್ನೂ ಎತ್ತುಗಳನ್ನೂ ಕೊಬ್ಬಿದ ಪಶುಗಳನ್ನೂ ಕೊಲ್ಲಿಸಿ ಅರಸನ ಮಕ್ಕಳಾದ ತನ್ನ ಸಮಸ್ತ ಸಹೋದರರನ್ನೂ ಅರಸನ ಸೇವಕರಾದ ಸಮಸ್ತ ಯೆಹೂದದ ಜನರನ್ನೂ ಕರೆದನು.
- Deuteronomy 4:43 ಧರ್ಮೋಪದೇಶಕಾಂಡ 4:43ಅವು ಯಾವವಂದರೆ--ರೂಬೇನ್ಯರಿಗೆ ಅರಣ್ಯದ ಬೈಲಿನಲ್ಲಿ ಇರುವ ಬೇಚೆರ್, ಗಾದನವರಿಗೆ ಗಿಲ್ಯಾದಿನಲ್ಲಿರುವ ರಾಮೋತ್, ಮನಸ್ಸೆಯವರಿಗೆ ಬಾಷಾನಿನಲ್ಲಿರುವ ಗೋಲಾನ್.
- 1 Kings 17:7 1 ಅರಸುಗಳು 17:7ಸ್ವಲ್ಪ ಕಾಲವಾದ ಮೇಲೆ ಏನಾಯಿ ತಂದರೆ, ದೇಶದಲ್ಲಿ ಮಳೆ ಇಲ್ಲದ್ದರಿಂದ ಆ ಹಳ್ಳವು ಬತ್ತಿಹೋಯಿತು.
- 1 Kings 22:2–35 1 ಅರಸುಗಳು 22:2–35ಮೂರನೇ ವರುಷದಲ್ಲಿ ಏನಾಯಿತಂದರೆ, ಯೆಹೂದದ ಅರಸನಾದ ಯೆಹೋಷಾಫಾಟನು ಇಸ್ರಾಯೇಲಿನ ಅರಸನ ಬಳಿಗೆ ಬಂದನು. ಇಸ್ರಾ ಯೇಲಿನ ಅರಸನು ತನ್ನ ಸೇವಕರಿಗೆ--ಗಿಲ್ಯಾದಿನ ಲ್ಲಿರುವ ರಾಮೋತ್ ನಮ್ಮದೆಂದು ಅರಿಯಿರಾ? ನಾವು ಅದನ್ನು ಅರಾಮಿನ ಅರಸನ ಕೈಯಿಂದ ತೆಗೆದು ಕೊಳ್ಳದೆ ಸುಮ್ಮನೆ ಇದ್ದೇವೆ ಅಂದನು. ಆಗ ಅವನು ಯೆಹೋಷಾಫಾಟನಿಗೆ -- ನೀನು ಗಿಲ್ಯಾದಿನಲ್ಲಿರುವ ರಾಮೋತಿನ ಮೇಲೆ ಯುದ್ಧಮಾಡಲು ನನ್ನ ಸಂಗಡ ಬರುತ್ತೀಯಾ ಅಂದನು. ಯೆಹೋಷಾಫಾಟನು ಇಸ್ರಾ ಯೇಲಿನ ಅರಸನಿಗೆ--ನಿನ್ನ ಹಾಗೆಯೇ ನಾನೂ ನಿನ್ನ ಜನರ ಹಾಗೆಯೇ ನನ್ನ ಜನರೂ ನಿನ್ನ ಕುದುರೆಗಳ ಹಾಗೆಯೇ ನನ್ನ ಕುದುರೆಗಳೂ ಇದ್ದೇವೆ ಅಂದನು. ಆದರೆ ಯೆಹೂಷಾಫಾಟನು ಇಸ್ರಾಯೇಲಿನ ಅರಸ ನಿಗೆ--ನೀನು ದಯಮಾಡಿ ಇಂದು ಕರ್ತನ ವಾಕ್ಯವನ್ನು ವಿಚಾರಿಸು ಅಂದನು. ಆಗ ಇಸ್ರಾಯೇಲಿನ ಅರಸನು ಹೆಚ್ಚು ಕಡಿಮೆ ನಾನೂರು ಮಂದಿ ಪ್ರವಾದಿಗಳನ್ನು ಕೂಡಿಸಿ--ನಾನು ಗಿಲ್ಯಾದಿನಲ್ಲಿರುವ ರಾಮೋತಿನ ಮೇಲೆ ಯುದ್ಧಕ್ಕೆ ಹೋಗಬಹುದೋ ಬೇಡವೋ ಎಂದು ಅವರನ್ನು ಕೇಳಿದನು. ಅದಕ್ಕವರು--ಹೋಗು; ಕರ್ತನು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವನು ಅಂದರು. ಆದರೆ ಯೆಹೋಷಾಫಾಟನು--ಇವರು ಹೊರತಾಗಿ ನಾವು ವಿಚಾರಿಸುವ ಹಾಗೆ ಇಲ್ಲಿ ಕರ್ತನ ಪ್ರವಾದಿಯು ಯಾವನೂ ಇರುವದಿಲ್ಲವೋ ಅಂದನು. ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟ ನಿಗೆ -- ನಾವು ಕರ್ತನನ್ನು ವಿಚಾರಿಸುವ ಹಾಗೆ ಇಮ್ಲನ ಮಗನಾದ ವಿಾಕಾಯೆಹುನೆಂಬ ಇನ್ನೊಬ್ಬನಿದ್ದಾನೆ; ಆದರೆ ನಾನು ಅವನನ್ನು ಹಗೆಮಾಡುತ್ತೇನೆ; ಯಾಕಂದರೆ ಅವನು ನನ್ನನ್ನು ಕುರಿತು ಒಳ್ಳೇದನ್ನಲ್ಲ, ಕೆಟ್ಟದ್ದನ್ನು ಪ್ರವಾದಿಸುತ್ತಾನೆ ಅಂದನು. ಅದಕ್ಕೆ ಯೆಹೋಷಾಫಾಟನು--ಅರಸನು ಹಾಗೆ ಹೇಳದಿರಲಿ ಅಂದನು. ಆಗ ಇಸ್ರಾಯೇಲಿನ ಅರಸನು ಒಬ್ಬ ಅಧಿಕಾರಿಯನ್ನು ಕರೆದು--ಇಮ್ಲನ ಮಗನಾದ ವಿಾಕಾ ಯೆಹುನನ್ನು ಶೀಘ್ರವಾಗಿ ಕರಕೊಂಡು ಬಾ ಅಂದನು. ಆದರೆ ಇಸ್ರಾಯೇಲಿನ ಅರಸನೂ ಯೆಹೂದದ ಅರಸನಾದ ಯೆಹೂಷಾಫಾಟನೂ ವಸ್ತ್ರಗಳನ್ನು ಧರಿಸಿ ಕೊಂಡು ಸಮಾರ್ಯದ ಬಾಗಲ ಮುಂದಣ ಕಣದಲ್ಲಿ ತನ್ನ ಸಿಂಹಾಸನದ ಮೇಲೆ ಕುಳಿತಿದ್ದರು; ಸಕಲ ಪ್ರವಾದಿ ಗಳೂ ಅವರ ಮುಂದೆ ಪ್ರವಾದಿಸಿದರು. ಆಗ ಕೆನಾನನ ಮಗನಾದ ಚಿದ್ಕೀಯನು ತನಗೆ ಕಬ್ಬಿಣದ ಕೊಂಬುಗಳನ್ನು ಮಾಡಿಕೊಂಡು--ಇವುಗಳಿಂದ ನೀನು ಅರಾಮ್ಯರನ್ನು ನಿರ್ಮೂಲ ಮಾಡುವವರೆಗೂ ಇರಿದು ಹಾಕುವಿ ಎಂದು ಕರ್ತನು ಹೇಳುತ್ತಾನೆ ಅಂದನು ಸಮಸ್ತ ಪ್ರವಾದಿಗಳೂ ಹಾಗೆಯೇ ಪ್ರವಾದಿಸಿ--ಗಿಲ್ಯಾದಿನ ರಾಮೋತಿಗೆ ಹೋಗಿ ಸಾಫಲ್ಯ ಹೊಂದು; ಕರ್ತನು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವನು ಅಂದರು. ಆದರೆ ವಿಾಕಾಯೆಹುನನ್ನು ಕರೆಯಲು ಹೋದ ದೂತನು ಅವನಿಗೆ--ಇಗೋ, ಪ್ರವಾದಿಗಳ ವಾಕ್ಯಗಳು ಒಂದೇ ಬಾಯಿಂದ ಅರಸನಿಗೆ ಒಳ್ಳೇದನ್ನೇ ಪ್ರಕಟಿಸುತ್ತವೆ; ನಿನ್ನ ವಾಕ್ಯವು ಅವರಲ್ಲಿರುವ ಒಬ್ಬನ ವಾಕ್ಯದ ಹಾಗೆಯೇ ಇರಲಿ; ಒಳ್ಳೇ ಮಾತು ಆಡು ಅಂದನು. ಅದಕ್ಕೆ ವಿಾಕಾಯೆಹು--ಕರ್ತನ ಜೀವ ದಾಣೆ, ಕರ್ತನು ನನಗೆ ಏನು ಹೇಳುವನೋ ಅದನ್ನು ಮಾತನಾಡುವೆನು ಅಂದನು. ಹೀಗೆ ಅವನು ಅರಸನ ಬಳಿಗೆ ಬಂದನು. ಅರಸನು ಅವನಿಗೆ--ವಿಾಕಾಯೆ ಹುವೇ, ನಾವು ಗಿಲ್ಯಾದಿನಲ್ಲಿರುವ ರಾಮೋತಿನ ಮೇಲೆ ಯುದ್ಧಕ್ಕೆಹೋಗಬಹುದೋ ಹೋಗಬಾ ರದೋ ಅಂದನು. ಇವನು ಪ್ರತ್ಯುತ್ತರವಾಗಿ--ಹೋಗಿ ಸಾಫಲ್ಯ ಹೊಂದು; ಕರ್ತನು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವನು ಅಂದನು. ಆಗ ಅರಸನು ಅವನಿಗೆ--ನೀನು ಕರ್ತನ ಹೆಸರಿನಲ್ಲಿ ಸತ್ಯವನ್ನಲ್ಲದೆ ಬೇರೊಂದು ನನಗೆ ಹೇಳಬಾರದೆಂದು ನಾನು ಎಷ್ಟು ಸಾರಿ ನಿನಗೆ ಆಣೆ ಇಡಬೇಕು ಅಂದನು. ಅದಕ್ಕ ವನು ಕಾಯುವವನಿಲ್ಲದ ಕುರಿಗಳ ಹಾಗೆಯೇ ಬೆಟ್ಟ ಗಳ ಮೇಲೆ ಚದರಿಸಲ್ಪಟ್ಟ ಸಮಸ್ತ ಇಸ್ರಾಯೇಲನ್ನು ನೋಡಿದೆನು. ಆಗ ಕರ್ತನು--ಇವರಿಗೆ ಯಜಮಾ ನನು ಇಲ್ಲದೆ ಪ್ರತಿ ಮನುಷ್ಯನು ತನ್ನ ತನ್ನ ಮನೆಗೆ ಸಮಾಧಾನವಾಗಿ ಹಿಂತಿರಿಗಿ ಹೋಗಲಿ ಅಂದನು. ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟ ನಿಗೆ--ಇವನು ನನ್ನನ್ನು ಕುರಿತು ಒಳ್ಳೇದನ್ನಲ್ಲ, ಕೆಟ್ಟದ್ದನ್ನೇ ಪ್ರವಾದಿಸುವನೆಂದು ನಾನು ನಿನಗೆ ಹೇಳಲಿಲ್ಲವೇ ಅಂದನು. ವಿಾಕಾಯೆಹುವು--ಆದದರಿಂದ ಕರ್ತನ ವಾಕ್ಯವನ್ನು ಕೇಳು--ಕರ್ತನು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡಿರುವದನ್ನೂ ಆಕಾಶದ ಸಮಸ್ತ ಸೈನ್ಯವು ಆತನ ಬಲಪಾರ್ಶ್ವದಲ್ಲಿಯೂ ಎಡಪಾರ್ಶ್ವದಲ್ಲಿಯೂ ನಿಂತಿರುವದನ್ನೂ ನೋಡಿದೆನು ಅಂದನು. ಆಗ ಕರ್ತನು--ಅಹಾಬನು ಹೋಗಿ ಗಿಲ್ಯಾದಿನ ರಾಮೋ ತಿನ ಬಳಿಯಲ್ಲಿ ಬೀಳುವ ಹಾಗೆ ಅವನನ್ನು ಮರುಳು ಗೊಳಿಸುವವನು ಯಾರು ಅಂದನು. ಒಬ್ಬನು ಹೀಗೆಯೂ ಮತ್ತೊಬ್ಬನು ಹಾಗೆಯೂ ಹೇಳುತ್ತಿರುವಾಗ ಒಂದು ಆತ್ಮವು ಹೊರಟು ಬಂದು ಕರ್ತನ ಮುಂದೆ ನಿಂತು--ನಾನು ಅವನನ್ನು ಮರುಳುಗೊಳಿಸುತ್ತೇನೆ ಅಂದಿತು. ಆಗ ಕರ್ತನು ಅದಕ್ಕೆ--ಯಾವದರಿಂದ ಅಂದನು. ಅದಕ್ಕದು-- ನಾನು ಹೊರಟು ಅವನ ಎಲ್ಲಾ ಪ್ರವಾದಿಗಳ ಬಾಯಿಯಲ್ಲಿ ಸುಳ್ಳಾದ ಆತ್ಮನಾಗಿ ರುವೆನು ಅಂದಿತು. ಅದಕ್ಕೆ ಆತನು--ನೀನು ಅವ ನನ್ನು ಮರುಳುಗೊಳಿಸುವಿ ಮತ್ತು ಜಯಿಸುವಿ. ನೀನು ಹೋಗಿ ಹಾಗೆ ಮಾಡು ಅಂದನು. ಆದದರಿಂದ ಇಗೋ, ಈಗ ಕರ್ತನು ಈ ಎಲ್ಲಾ ನಿನ್ನ ಪ್ರವಾದಿಗಳ ಬಾಯಿಯಲ್ಲಿ ಸುಳ್ಳಾದ ಆತ್ಮವನ್ನು ಇಟ್ಟಿದ್ದಾನೆ; ಇದ ಲ್ಲದೆ ಕರ್ತನು ನಿನ್ನನ್ನು ಕುರಿತು ಕೇಡನ್ನು ಹೇಳಿದ್ದಾನೆ ಅಂದನು. ಆಗ ಕೆನಾನನ ಮಗನಾದ ಚಿದ್ಕೀಯನು ಸವಿಾ ಪಕ್ಕೆ ಬಂದು ವಿಾಕಾಯೆಹುವಿನ ಕೆನ್ನೆಯ ಮೇಲೆ ಹೊಡೆದು--ಕರ್ತನ ಆತ್ಮವು ನನ್ನನ್ನು ಬಿಟ್ಟು ನಿನ್ನ ಸಂಗಡ ಮಾತನಾಡಲು ಯಾವ ಮಾರ್ಗವಾಗಿ ಹೋಯಿತು ಅಂದನು. ಅದಕ್ಕೆ ವಿಾಕಾಯೆಹುವುಇಗೋ, ನಿನ್ನನ್ನು ಬಚ್ಚಿಟ್ಟುಕೊಳ್ಳಲು ಒಳಕೊಠಡಿ ಯೊಳಗೆ ನೀನು ಹೋಗುವ ದಿವಸದಲ್ಲಿ ನೋಡುವಿ ಅಂದನು. ಆಗ ಇಸ್ರಾಯೇಲಿನ ಅರಸನು ಹೇಳಿದ್ದೇ ನಂದರೆ -- ವಿಾಕಾಯೆಹುನನ್ನು ಹಿಡಿದು ಪಟ್ಟಣದ ಅಧಿಪತಿಯಾದ ಆಮೋನನ ಬಳಿಗೂ ಅರಸನ ಮಗ ನಾದ ಯೋವಾಷನ ಬಳಿಗೂ ಅವನನ್ನು ಹಿಂದಕ್ಕೆ ತಕ್ಕೊಂಡುಹೋಗಿ ನೀವು ಇವನನ್ನು ಸೆರೆಮನೆಯ ಲ್ಲಿಟ್ಟು ನಾನು ಸಮಾಧಾನವಾಗಿ ತಿರಿಗಿ ಬರುವ ವರೆಗೂ ಅವನಿಗೆ ಬಾಧೆಯ ರೊಟ್ಟಿಯನ್ನೂ ಬಾಧೆಯ ನೀರನ್ನೂ ಕೊಡಿರಿ ಎಂದು ಅರಸನು ಹೇಳುತ್ತಾನೆಂದು ಹೇಳಿರಿ ಅಂದನು. ಅದಕ್ಕೆ ವಿಾಕಾಯೆಹುವು ನೀನು ಸಮಾ ಧಾನದಿಂದ ತಿರಿಗಿ ನಿಜವಾಗಿ ಬಂದರೆ ಕರ್ತನು ನನ್ನ ಮುಖಾಂತರ ಮಾತನಾಡಿದ್ದಿಲ್ಲವೆಂದು ಜನರೇ, ನೀವೆ ಲ್ಲರೂ ಕೇಳಿರಿ ಅಂದನು. ಹೀಗೆಯೇ ಇಸ್ರಾಯೇಲಿನ ಅರಸನೂ ಯೆಹೂ ದದ ಅರಸನಾದ ಯೆಹೋಷಾಫಾಟನೂ ಗಿಲ್ಯಾದಿನ ರಾಮೋತಿಗೆ ಹೋದರು. ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟನಿಗೆ--ನಾನು ನನ್ನನ್ನು ಮರೆಮಾಡಿ ಯುದ್ಧದೊಳಗೆ ಪ್ರವೇಶಿಸುವೆನು; ಆದರೆ ನೀನು ನಿನ್ನ ವಸ್ತ್ರಗಳನ್ನು ಧರಿಸಿಕೊಂಡಿರು ಅಂದನು. ಹಾಗೆಯೇ ಇಸ್ರಾಯೇಲಿನ ಅರಸನು ತನ್ನನ್ನು ಮರೆ ಮಾಡಿ ಯುದ್ಧಕ್ಕೆ ಹೋದನು. ಆದರೆ ಅರಾಮಿನ ಅರಸನು ತನ್ನ ರಥಗಳ ಮೇಲೆ ಅಧಿಕಾರವುಳ್ಳ ಮೂವತ್ತೈರಡು ಮಂದಿ ಪ್ರಧಾನರಿಗೆ--ನೀವು ಹಿರಿಕಿರಿ ಯರ ಸಂಗಡ ಯುದ್ಧ ಮಾಡದೆ ಇಸ್ರಾಯೇಲಿನ ಅರಸನ ಸಂಗಡಲೇ ಯುದ್ಧಮಾಡಿರಿ ಎಂದು ಆಜ್ಞಾಪಿ ಸಿದನು. ಆದದರಿಂದ ರಥಾಧಿಪತಿಗಳು ಯೆಹೋ ಷಾಫಾಟನನ್ನು ನೋಡಿದಾಗ--ನಿಶ್ಚಯವಾಗಿ ಇವನು ಇಸ್ರಾಯೇಲಿನ ಅರಸನೆಂದು ಹೇಳಿ ಅವನ ಸಂಗಡ ಯುದ್ಧಮಾಡುವದಕ್ಕೆ ತಿರುಗಿಕೊಂಡರು; ಆಗ ಯೆಹೋಷಾಫಾಟನು ಕೂಗಿಕೊಂಡನು. ಆಗ ಅವನು ಇಸ್ರಾಯೇಲಿನ ಅರಸನಲ್ಲವೆಂದು ರಥಾಧಿಪತಿ ಗಳು ನೋಡಿದಾಗ ಅವನನ್ನು ಬಿಟ್ಟು ಓರೆಯಾಗಿ ಹೋದರು. ಆದರೆ ಒಬ್ಬ ಮನುಷ್ಯನು ಗುರಿಯಿಡದೆ ಬಿಲ್ಲಿಗೆ ಬಾಣವನ್ನೇರಿಸಿ ಇಸ್ರಾಯೇಲಿನ ಅರಸನನ್ನು ಕವಚದ ಸಂದುಗಳಲ್ಲಿ ಹೊಡೆದನು; ಆದದರಿಂದ ಅವನು ತನ್ನ ರಥನಡಿಸುವವನಿಗೆ--ನೀನು ರಥವನ್ನು ತಿರುಗಿಸಿ ನನ್ನನ್ನು ಸೈನ್ಯದೊಳಗಿಂದ ಆಚೇ ಕಡೆಗೆ ತಕ್ಕೊಂಡು ಹೋಗು. ಯಾಕಂದರೆ ನಾನು ಗಾಯಗೊಂಡಿದ್ದೇನೆ ಅಂದನು. ಆ ದಿವಸ ಯುದ್ಧವು ಬಲವಾದದರಿಂದ ಅರಸನು ಅರಾಮ್ಯರಿಗೆದುರಾಗಿ ರಥದಲ್ಲಿಯೇ ಇದ್ದು ಸಾಯಂಕಾಲದಲ್ಲಿ ಸತ್ತುಹೋದನು; ಆದರೆ ಆ ಗಾಯದ ರಕ್ತವು ರಥದ ಮಧ್ಯದಲ್ಲಿ ಹರಿಯಿತು.
- Isaiah 22:12–13 ಯೆಶಾಯ 22:12–13ಆ ದಿವಸದಲ್ಲಿ ಸೈನ್ಯಗಳ ದೇವರಾದ ಕರ್ತನು --ಅಳಬೇಕೆಂದು, ದುಃಖಿಸಬೇಕೆಂದು, ತಲೆಬೋಳಿಸಿ ಕೊಳ್ಳಬೇಕೆಂದು, ಗೋಣೀತಟ್ಟನ್ನು ಸುತ್ತಿಕೊಳ್ಳಬೇ ಕೆಂದು ಆತನು ಕರೆದನು. ಆದರೆ ಇಗೋ, ಉತ್ಸಾ ಹವು ಸಂತೋಷವು, ದನಕೊಯ್ಯುವದು ಕುರಿಕಡಿಯು ವದು ಮಾಂಸವನ್ನು ತಿನ್ನುವದು, ದ್ರಾಕ್ಷಾರಸ ಕುಡಿ ಯುವದು, ನಾಳೆ ಸಾಯುತ್ತೇವೆಂದು ತಿಂದು ಕುಡಿಯು ವದೇ (ಇವೆ, ನಿಮ್ಮ ಕಾರ್ಯ).
- Nehemiah 13:6 ನೆಹೆಮೀಯ 13:6ಆದರೆ ಇಷ್ಟು ಕಾಲಕ್ಕೆ ನಾನು ಯೆರೂಸಲೇಮಿನಲ್ಲಿ ಇರಲಿಲ್ಲ; ಬಾಬೆಲಿನ ಅರಸನಾದ ಅರ್ತಷಸ್ತನ ಮೂವ ತ್ತೆರಡನೇ ವರುಷದಲ್ಲಿ, ನಾನು ಅರಸನ ಬಳಿಗೆ ಬಂದು ಸ್ವಲ್ಪಕಾಲದ ತರುವಾಯ ನಾನು ಅರಸನಿಂದ ಅಪ್ಪಣೆ ಯನ್ನು ತೆಗೆದುಕೊಂಡು
- 1 Kings 4:13 1 ಅರಸುಗಳು 4:13ರಾಮೋತು ಗಿಲ್ಯಾದಿನಲ್ಲಿ ಗೇಬೆರ್ನ ಮಗನು, ಅವನಿಗೆ ಗಿಲ್ಯಾದಿನಲ್ಲಿರುವ ಮನಸ್ಸೆಯ ಮಗನಾದ ಯಾಯಾರನ ಊರುಗಳೂ ಬಾಷಾನಿ ನಲ್ಲಿರುವ ಅರ್ಗೋಬು ದೇಶವೂ ಇತ್ತು; ಅದರಲ್ಲಿ ಹಿತ್ತಾಳೆಯ ಅಗುಳಿಗಳೂ ಗೋಡೆಗಳೂ ಉಳ್ಳ ಅರುವತ್ತು ದೊಡ್ಡ ಪಟ್ಟಣಗಳಿದ್ದವು.
- Luke 17:27–29 ಲೂಕನು 17:27–29ನೋಹನು ನಾವೆಯಲ್ಲಿ ಸೇರಿದ ದಿನದ ವರೆಗೂ ಅವರು ತಿನ್ನುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮತ್ತು ಮದುವೆಮಾಡಿ ಕೊಡುತ್ತಾ ಇದ್ದರು. ಆಗ ಜಲಪ್ರಳಯವು ಬಂದು ಅವರೆಲ್ಲರನ್ನು ನಾಶಮಾಡಿತ್ತು. ಅದೇ ಪ್ರಕಾರ ಲೋಟನ ದಿವಸಗಳಲ್ಲಿಯೂ ಇತ್ತು. ಅವರು ತಿನ್ನು ತ್ತಿದ್ದರು, ಕುಡಿಯುತ್ತಿದ್ದರು; ಅವರು ಕೊಂಡುಕೊಳ್ಳು ತ್ತಿದ್ದರು, ಮಾರುತ್ತಿದ್ದರು; ಅವರು ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು. ಆದರೆ ಲೋಟನು ಸೊದೋಮಿನಿಂದ ಹೊರಗೆ ಹೋದ ದಿನವೇ ಆಕಾಶದಿಂದ ಬೆಂಕಿಯೂ ಗಂಧಕವೂ ಸುರಿದು ಎಲ್ಲರನ್ನು ನಾಶಪಡಿಸಿದವು.
- Joshua 20:8 ಯೆಹೋಶುವ 20:8ಯೆರಿಕೋವಿನ ಪೂರ್ವದ ಲ್ಲಿರುವ ಯೊರ್ದನಿನ ಆಚೆ ರೂಬೇನನ ಗೋತ್ರಕ್ಕಿರುವ ಸಮವಾದ ಭೂಮಿಯ ಅರಣ್ಯದಲ್ಲಿರುವ ಬೆಚೆರನ್ನೂ ಗಾದನ ಗೋತ್ರಕ್ಕೆ ಗಿಲ್ಯಾದಿನಲ್ಲಿರುವ ರಾಮೋತನ್ನೂ ಮನಸ್ಸೆಯ ಗೋತ್ರಕ್ಕೆ ಬಾಷಾನಿನಲ್ಲಿರುವ ಗೋಲಾ ನನ್ನೂ ಕೊಟ್ಟರು.ಕೈ ತಪ್ಪಿ ಅರಿಯದೆ ಕೊಂದರೆ ಯಾವನಾದರೂ ಸಭೆಯ ಮುಂದೆ ಬಂದು ನಿಲ್ಲುವ ಪರ್ಯಂತರ ರಕ್ತದ ಸೇಡು ತೀರಿಸಿ ಕೊಳ್ಳುವವನ ಕೈಯಿಂದ ಸಾಯದ ಹಾಗೆ ಅಲ್ಲಿ ಓಡಿ ಹೋಗುವದಕ್ಕೆ ಇಸ್ರಾಯೇಲ್ ಮಕ್ಕಳೆಲ್ಲರಿಗೂ ಅವರ ಮಧ್ಯದಲ್ಲಿ ವಾಸವಾಗಿರುವ ಪರಕೀಯರಿಗೂ ನೇಮಿಸಲ್ಪಟ್ಟ ಪಟ್ಟಣಗಳು ಇವೇ.
Original words (Hebrew)
- after · H7093קֵץ qêts
- years · H8141שָׁנֶה shâneh
- down · H3381יָרַד yârad
- Ahab · H256אַחְאָב ʼAchʼâb
- Samaria · H8111שֹׁמְרוֹן Shômᵉrôwn
- Ahab · H256אַחְאָב ʼAchʼâb
- killed · H2076זָבַח zâbach
- sheep · H6629צֹאן tsôʼn
- oxen · H1241בָּקָר bâqâr
- abundance · H7230רֹב rôb
- people · H5971עַם ʻam
- persuaded · H5496סוּת çûwth
- up · H5927עָלָה ʻâlâh
- Ramoth-gilead · H7433רָמֹת גִּלעָד Râmôth Gilʻâd