2 Chronicles · chapter 21 · verse 7
2 Chronicles 21:7 in Kannada
ಆದರೆ ಕರ್ತನು ದಾವೀದನ ಸಂಗಡ ಮಾಡಿದ ಒಡಂಬಡಿಕೆಗೋಸ್ಕರವೂ ಆತನು ಅವನಿಗೂ ಅವನ ಮಕ್ಕಳಿಗೂ ಸರ್ವಕಾಲಕ್ಕೂ ಬೆಳಕನ್ನು ಕೊಡು ವೆನೆಂದು ಹೇಳಿದ್ದರಿಂದಲೂ ಆತನು ದಾವೀದನ ಮನೆಯನ್ನು ನಾಶಮಾಡಲು ಮನಸ್ಸಿಲ್ಲದೆ ಇದ್ದನು.
Aadare kartanu daaveedana sangada maadida odambadikegoskaravoo aatanu avanigoo avana makkaligoo sarvakaalakkoo belakannu kodu venendu heliddarindaloo aatanu daaveedana maneyannu naashamaadalu manassillade iddanu.
2 Chronicles 21:7 in English
- King James Version (KJV)
- Howbeit the LORD would not destroy the house of David, because of the covenant that he had made with David, and as he promised to give a light to him and to his sons for ever.
- World English Bible (WEB)
- However the LORD would not destroy David’s house, because of the covenant that he had made with David, and as he promised to give a lamp to him and to his children always.
- American Standard Version (ASV)
- Howbeit Jehovah would not destroy the house of David, because of the covenant that he had made with David, and as he promised to give a lamp to him and to his children alway.
- Bible in Basic English (BBE)
- But it was not the Lord's purpose to send destruction on the family of David, because of the agreement he had made with David, when he said he would give to him and to his sons a light for ever.
- Darby Translation (DBY)
- But Jehovah would not destroy the house of David, because of the covenant that he had made with David, and as he had promised to give to him always a lamp, and to his sons.
- Webster's Bible (WBS)
- Yet the LORD would not destroy the house of David, because of the covenant that he had made with David, and as he promised to give a light to him and to his sons for ever.
- Young's Literal Translation (YLT)
- and Jehovah hath not been willing to destroy the house of David, for the sake of the covenant that He made with David, and as He had said to give to him a lamp, and to his sons — all the days.
Read in context
- 5ಯೆಹೋ ರಾಮನು ಆಳಲಾರಂಭಿಸಿದಾಗ ಮೂವತ್ತೆರಡು ವರುಷ ದವನಾಗಿದ್ದು ಯೆರೂಸಲೇಮಿನಲ್ಲಿ ಎಂಟು ವರುಷ ಆಳಿದನು.
- 6ಅಹಾಬನ ಮನೆಯವರು ನಡೆದ ಹಾಗೆ ಅವನು ಇಸ್ರಾಯೇಲಿನ ಅರಸುಗಳ ಮಾರ್ಗದಲ್ಲಿ ನಡೆದನು. ಅಹಾಬನ ಮಗಳು ಅವನಿಗೆ ಹೆಂಡತಿ ಯಾಗಿದ್ದಳು. ಅವನು ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು,
- 7ಆದರೆ ಕರ್ತನು ದಾವೀದನ ಸಂಗಡ ಮಾಡಿದ ಒಡಂಬಡಿಕೆಗೋಸ್ಕರವೂ ಆತನು ಅವನಿಗೂ ಅವನ ಮಕ್ಕಳಿಗೂ ಸರ್ವಕಾಲಕ್ಕೂ ಬೆಳಕನ್ನು ಕೊಡು ವೆನೆಂದು ಹೇಳಿದ್ದರಿಂದಲೂ ಆತನು ದಾವೀದನ ಮನೆಯನ್ನು ನಾಶಮಾಡಲು ಮನಸ್ಸಿಲ್ಲದೆ ಇದ್ದನು.
- 8ಯೆಹೋರಾಮನ ದಿನಗಳಲ್ಲಿ ಎದೋಮ್ಯರು ಯೆಹೂ ದ್ಯರ ರಾಜ್ಯದ ಅಧೀನದಿಂದ ತಿರುಗಿಬಿದ್ದು ತಮಗೆ ತಾವೇ ಅರಸನನ್ನು ಮಾಡಿಕೊಂಡರು;
- 9ಆಗ ಅವನು ತನ್ನ ಪ್ರಧಾನರ ಸಂಗಡಲೂ ಸಮಸ್ತ ರಥಗಳ ಸಂಗ ಡಲೂ ಹೊರಟು ಹೋಗಿ ರಾತ್ರಿಯಲ್ಲಿ ಎದ್ದು ತನ್ನನ್ನೂ ರಥಗಳ ಅಧಿಪತಿಗಳನ್ನೂ ಸುತ್ತಿಕೊಂಡಿದ್ದ ಎದೋಮ್ಯರನ್ನು ಹೊಡೆದನು.
Cross references
- 1 Kings 11:36 1 ಅರಸುಗಳು 11:36ಅಲ್ಲಿ ನನ್ನ ಹೆಸರನ್ನಿಡಲು ನಾನು ಆದುಕೊಂಡ ಪಟ್ಟಣವಾದ ಯೆರೂಸಲೇಮಿನಲ್ಲಿ ನನ್ನ ಮುಂದೆ ನನ್ನ ಸೇವಕನಾದ ದಾವೀದನಿಗೆ ಯಾವಾಗಲೂ ಬೆಳಕು ಉಂಟಾಗುವ ಹಾಗೆ ಅವನ ಮಗನಿಗೆ ಒಂದು ಗೋತ್ರ ವನ್ನು ಕೊಡುವೆನು.
- Psalm 132:17–18 ಕೀರ್ತನೆಗಳು 132:17–18ಅಲ್ಲಿ ದಾವೀದನಿಗೆ ಕೊಂಬನ್ನು ಮೊಳಿಸುವೆನು; ನನ್ನ ಅಭಿಷಿಕ್ತನಿಗೆ ದೀಪವನ್ನು ಸಿದ್ಧಮಾಡಿದ್ದೇನೆ.ಅವನ ಶತ್ರುಗಳಿಗೆ ನಾಚಿಕೆಯನ್ನು ಹೊದಿಸುವೆನು; ಆದರೆ ಅವನ ಮೇಲೆ ಅವನ ಕಿರೀಟವು ಶೋಭಿಸುವದು ಎಂದು ಹೇಳಿದ್ದಾನೆ. ಅವನ ಶತ್ರುಗಳಿಗೆ ನಾಚಿಕೆಯನ್ನು ಹೊದಿಸುವೆನು; ಆದರೆ ಅವನ ಮೇಲೆ ಅವನ ಕಿರೀಟವು ಶೋಭಿಸುವದು ಎಂದು ಹೇಳಿದ್ದಾನೆ.
- 2 Samuel 7:12–17 2 ಸಮುವೇಲನು 7:12–17ಇದಲ್ಲದೆ ಕರ್ತನು ನಿನಗೆ ತಿಳಿಸುವದೇನಂದರೆ, ನಾನು ನಿನಗೆ ಮನೆಯನ್ನು ಕಟ್ಟುವೆನು. ನಿನ್ನ ದಿವಸಗಳು ಪೂರ್ತಿ ಯಾಗಿ ನೀನು ನಿನ್ನ ಪಿತೃಗಳ ಸಂಗಡ ಮಲಗಿಕೊಂಡಿ ರುವಾಗ ನಿನ್ನ ಕರುಳುಗಳಿಂದ ಹೊರಡುವ ನಿನ್ನ ಸಂತತಿಯನ್ನು ನಿನ್ನ ತರುವಾಯ ಎಬ್ಬಿಸಿ ನಾನು ಅವನ ರಾಜ್ಯವನ್ನು ಸ್ಥಿರಮಾಡುವೆನು. ಅವನು ನನ್ನ ಹೆಸ ರಿಗೆ ಮನೆಯನ್ನು ಕಟ್ಟುವನು; ನಾನು ಅವನ ರಾಜ್ಯದ ಸಿಂಹಾಸನವನ್ನು ಸದಾಕಾಲಕ್ಕೂ ಸ್ಥಿರಮಾಡುವೆನು. ನಾನು ಅವನ ತಂದೆಯಾಗಿರುವೆನು; ಅವನು ನನ್ನ ಮಗನಾಗಿರುವನು. ಅವನು ಕೆಟ್ಟತನ ಮಾಡಿದರೆ ನಾನು ಅವನನ್ನು ಮನುಷ್ಯರ ಕೋಲಿನಿಂದಲೂ ಮನುಷ್ಯರ ಮಕ್ಕಳ ಪೆಟ್ಟುಗಳಿಂದಲೂ ದಂಡಿಸುವೆನು. ಆದರೆ ನಾನು ನಿನ್ನ ಮುಂದೆ ತೊರೆದುಬಿಟ್ಟ ಸೌಲ ನಿಂದ ನನ್ನ ಕೃಪೆಯನ್ನು ನಾನು ತೊಲಗಿಸಿದ ಹಾಗೆ ಅವನಿಂದ ತೊಲಗಿಸುವದಿಲ್ಲ. ನಿನ್ನ ಮನೆಯೂ ನಿನ್ನ ರಾಜ್ಯವೂ ನಿನ್ನ ಮುಂದೆ ಸದಾಕಾಲಕ್ಕೂ ಸ್ಥಿರಮಾಡಲ್ಪಡುವವು; ನಿನ್ನ ಸಿಂಹಾಸನವು ಯುಗ ಯುಗಾಂತರಕ್ಕೂ ಶಾಶ್ವತವಾಗಿರುವದು ಎಂದು ಹೇಳಿ ದನು. ನಾತಾನನು ಈ ಸಕಲ ವಾಕ್ಯಗಳ ಪ್ರಕಾರ ವಾಗಿಯೂ ಸಕಲ ದರ್ಶನದ ಪ್ರಕಾರವಾಗಿಯೂ ದಾವೀದನ ಸಂಗಡ ಮಾತನಾಡಿದನು.
- Luke 1:79 ಲೂಕನು 1:79ಕತ್ತಲೆಯಲ್ಲಿಯೂ ಮರಣದ ನೆರಳಿನಲ್ಲಿಯೂ ಕೂತವರಿಗೆ ಬೆಳಕನ್ನು ಕೊಡುವದಕ್ಕೂ ನಮ್ಮ ಪಾದಗಳನ್ನು ಸಮಾಧಾನದ ಮಾರ್ಗದಲ್ಲಿ ನಡಿಸುವದಕ್ಕೂ ಆಗುವದು ಎಂದು ಹೇಳಿದನು.ಆ ಬಾಲಕನು ಬೆಳೆದು ಆತ್ಮದಲ್ಲಿ ಬಲಗೊಂಡನು. ತನ್ನನ್ನು ಇಸ್ರಾಯೇಲಿಗೆ ತೋರ್ಪಡಿಸಿಕೊಳ್ಳುವ ದಿನದವರೆಗೆ ಅರಣ್ಯದಲ್ಲಿದ್ದನು.
- Luke 1:69 ಲೂಕನು 1:69ಆತನು ತನ್ನ ಸೇವಕನಾದ ದಾವೀದನ ಮನೆತನದಲ್ಲಿ ನಮಗಾಗಿ ರಕ್ಷಣೆಯ ಕೊಂಬನ್ನು ಎತ್ತಿ ದ್ದಾನೆ.
- 1 Kings 11:13 1 ಅರಸುಗಳು 11:13ಇದಲ್ಲದೆ ರಾಜ್ಯವನ್ನೆಲ್ಲಾ ನಾನು ಕಸಕೊಳ್ಳದೆ ನನ್ನ ಸೇವಕನಾದ ದಾವೀದನಿಗೋಸ್ಕರವಾಗಿಯೂ ನಾನು ಆದುಕೊಂಡ ಯೆರೂಸಲೇಮಿಗೋಸ್ಕರವಾಗಿಯೂ ನಿನ್ನ ಮಗನಿಗೆ ಒಂದು ಗೋತ್ರವನ್ನು ಕೊಡುವೆನು ಅಂದನು.
- 2 Samuel 23:5 2 ಸಮುವೇಲನು 23:5ನನ್ನ ಮನೆ ದೇವರ ಸಮ್ಮುಖದಲ್ಲಿ ಹಾಗೆಯೇ ಅಲ್ಲದಿದ್ದರೂ ನನ್ನ ಸಂಗಡ ನಿತ್ಯವಾದ ಒಡಂಬಡಿಕೆ ಯನ್ನು ಮಾಡಿದ್ದಾನೆ; ಎಲ್ಲಾದರ ವಿಷಯ ಸಿದ್ಧವಾದ ದ್ದಾಗಿಯೂ ಸ್ಥಿರವಾದದ್ದಾಗಿಯೂ ಅದೆ. ಆತನು ಅದನ್ನು ಬೆಳೆಯದೆ ಇದ್ದರೂ ನನ್ನ ಎಲ್ಲಾ ರಕ್ಷಣೆಯೂ ನನ್ನ ಎಲ್ಲಾ ಅಭಿಲಾಷೆಯೂ ಅದೇ.
- 2 Chronicles 22:11 2 ಪೂರ್ವಕಾಲವೃತ್ತಾಂತ 22:11ಆದರೆ ಅರಸನ ಮಗಳಾದ ಯೆಹೋಷಬತಳು ಅಹಜ್ಯನ ಮಗನಾದ ಯೆಹೋವಾಷನನ್ನು ತಕ್ಕೊಂಡು ಕೊಂದುಹಾಕಲ್ಪಟ್ಟ ಅರಸನ ಮಕ್ಕಳ ಮಧ್ಯದಿಂದ ಅವನನ್ನು ಕದ್ದುಕೊಂಡು ಅವನನ್ನೂ ಅವನ ದಾದಿ ಯನ್ನೂ ಮಲಗುವ ಕೋಣೆಯಲ್ಲಿ ಇರಿಸಿದಳು. ಹೀಗೆ ಅತಲ್ಯಳು ಅವನನ್ನು ಕೊಲ್ಲದ ಹಾಗೆ ಅರಸನಾದ ಯೆಹೋರಾಮನ ಕುಮಾರ್ತೆಯಾಗಿರುವ ಯಾಜ ಕನಾದ ಯೆಹೋಯಾದನ ಹೆಂಡತಿಯಾಗಿರುವ ಯೆಹೋಷಬತಳು ಬಚ್ಚಿಟ್ಟಳು.ಹೀಗೆಯೇ ಇವನು ಅವರ ಸಂಗಡ ದೇವರ ಆಲಯದಲ್ಲಿ ಆರು ವರುಷ ಬಚ್ಚಿಟ್ಟುಕೊಂಡಿದ್ದನು. ಆದರೆ ಅತಲ್ಯಳು ದೇಶದ ಮೇಲೆ ಆಳುತ್ತಿದ್ದಳು.
- Psalm 89:39 ಕೀರ್ತನೆಗಳು 89:39ನಿನ್ನ ಸೇವಕನ ಒಡಂಬಡಿಕೆಯನ್ನು ಅಸಡ್ಡೆಮಾಡಿ, ಅವನ ಕಿರೀಟವನ್ನು ನೆಲಕ್ಕೆ ಹಾಕಿ ಹೊಲೆ ಮಾಡಿದ್ದೀ.
- Psalm 132:11 ಕೀರ್ತನೆಗಳು 132:11ಕರ್ತನು ದಾವೀದನಿಗೆ ಸತ್ಯದ ಆಣೆ ಇಟ್ಟಿದ್ದಾನೆ; ಅದರಿಂದ ತಿರುಗಿಕೊಳ್ಳನು; ಅದು--ನಿನ್ನ ಸಂತಾನ ವನ್ನು ನಿನ್ನ ಸಿಂಹಾಸನದ ಮೇಲೆ ಇರಿಸು ವದು.
- 2 Samuel 21:17 2 ಸಮುವೇಲನು 21:17ಆದರೆ ಚೆರೂಯಳ ಮಗನಾದ ಅಬೀಷೈಯು ಅವನಿಗೆ ಸಹಾಯವಾಗಿ ಬಂದು ಫಿಲಿಷ್ಟಿಯನನ್ನು ಹೊಡೆದು ಕೊಂದುಹಾಕಿ ದನು. ಆಗ ದಾವೀದನ ಜನರು ಅವನಿಗೆ--ನೀನು ಇಸ್ರಾಯೇಲಿನ ಬೆಳಕನ್ನು ಆರಿಸಿಬಿಡದ ಹಾಗೆ ಇನ್ನು ಮೇಲೆ ನಮ್ಮ ಸಂಗಡ ಯುದ್ಧಕ್ಕೆ ಹೊರಡಬೇಡ ಎಂದು ಅವನಿಗೆ ಆಣೆಯಿಟ್ಟರು.
- 2 Kings 8:19 2 ಅರಸುಗಳು 8:19ಕರ್ತನು ದಾವೀದನಿಗೂ ಅವನ ಮಕ್ಕಳಿಗೂ ನಿರಂತರವಾಗಿ ದೀಪವನ್ನು ಕೊಡುವೆನೆಂದು ಅವನಿಗೆ ವಾಗ್ದಾನ ಮಾಡಿದ ಹಾಗೆ ತನ್ನ ಸೇವಕನಾದ ದಾವೀದನ ನಿಮಿತ್ತ ಯೆಹೂದವನ್ನು ಕೆಡಿಸಲು ಮನಸ್ಸಿಲ್ಲದೆ ಇದ್ದನು.