2 Chronicles · chapter 25 · verse 3
2 Chronicles 25:3 in Kannada
ರಾಜ್ಯವು ಅವನಿಗೆ ಸ್ಥಿರಮಾಡಲ್ಪಟ್ಟ ತರುವಾಯ ಅವನು ಅರಸನಾದ ತನ್ನ ತಂದೆಯನ್ನು ಸಂಹರಿಸಿದ ತನ್ನ ಸೇವಕರನ್ನು ಕೊಂದುಹಾಕಿದನು.
Raajyavu avanige sthiramaadalpatta taruvaaya avanu arasanaada tanna tandeyannu sanharisida tanna sevakarannu konduhaakidanu.
2 Chronicles 25:3 in English
- King James Version (KJV)
- Now it came to pass, when the kingdom was established to him, that he slew his servants that had killed the king his father.
- World English Bible (WEB)
- Now when the kingdom was established to him, he killed his servants who had killed his father the king.
- American Standard Version (ASV)
- Now it came to pass, when the kingdom was established unto him, that he slew his servants that had killed the king his father.
- Bible in Basic English (BBE)
- Now when he became strong in the kingdom, he put to death those men who had taken the life of the king his father.
- Darby Translation (DBY)
- And it came to pass when the kingdom was established unto him, that he killed his servants who had smitten the king his father.
- Webster's Bible (WBS)
- Now it came to pass, when the kingdom was established to him, that he slew his servants that had killed the king his father.
- Young's Literal Translation (YLT)
- And it cometh to pass, when the kingdom hath been strong upon him, that he slayeth his servants, those smiting the king his father,
Read in context
- 1ಅಮಚ್ಯನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರುಷದವನಾಗಿದ್ದು ಯೆರೂ ಸಲೇಮಿನಲ್ಲಿ ಇಪ್ಪತ್ತೊಂಭತ್ತು ವರುಷ ಆಳಿದನು. ಅವನ ತಾಯಿಯ ಹೆಸರು ಯೆಹೋವದ್ದಾನಳು; ಈಕೆಯು ಯೆರೂಸಲೇಮಿನವಳಾಗಿದ್ದಳು.
- 2ಅವನು ಕರ್ತನ ಸಮ್ಮುಖದಲ್ಲಿ ಸರಿಯಾದದ್ದನ್ನು ಮಾಡಿದನು; ಆದರೆ ಪೂರ್ಣಹೃದಯದಿಂದಲ್ಲ.
- 3ರಾಜ್ಯವು ಅವನಿಗೆ ಸ್ಥಿರಮಾಡಲ್ಪಟ್ಟ ತರುವಾಯ ಅವನು ಅರಸನಾದ ತನ್ನ ತಂದೆಯನ್ನು ಸಂಹರಿಸಿದ ತನ್ನ ಸೇವಕರನ್ನು ಕೊಂದುಹಾಕಿದನು.
- 4ಆದರೆ ತಂದೆಗಳು ಮಕ್ಕಳಿ ಗೋಸ್ಕರ ಸಾಯುವದಿಲ್ಲ, ಮಕ್ಕಳು ತಂದೆಗಳಿಗೋಸ್ಕರ ಸಾಯುವದಿಲ್ಲ; ಪ್ರತಿ ಮನುಷ್ಯನು ತನ್ನ ಪಾಪದಲ್ಲಿ ಸಾಯಬೇಕೆಂದು ಕರ್ತನು ಆಜ್ಞಾಪಿಸಿದ್ದು ಮೋಶೆಯ ನ್ಯಾಯಪ್ರಮಾಣದ ಪುಸ್ತಕದಲ್ಲಿ ಬರೆಯಲ್ಪಟ್ಟ ಹಾಗೆ ಅವನು ಅವರ ಮಕ್ಕಳನ್ನು ಕೊಲ್ಲಲಿಲ್ಲ.
- 5ಇದಲ್ಲದೆ ಅಮಚ್ಯನು ಯೆಹೂದದವರನ್ನು ಕೂಡಿಸಿ ಕೊಂಡು ಯೆಹೂದ ಬೆನ್ಯಾವಿಾನ್ಯರೆಲ್ಲರಲ್ಲಿ ತಮ್ಮ ಪಿತೃ ಗಳ ಮನೆಗಳ ಪ್ರಕಾರ ಅವರನ್ನು ಸಹಸ್ರಗಳ ಮೇಲೆ ಅಧಿಪತಿಗಳಾಗಿಯೂ ಶತಗಳ ಮೇಲೆ ಅಧಿಪತಿಗಳಾ ಗಿಯೂ ಮಾಡಿದನು. ಅವನು ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚಾದ ಪ್ರಾಯವುಳ್ಳವರನ್ನು ಲೆಕ್ಕಿಸಿ ಆದುಕೊಂಡಂಥ, ಯುದ್ಧಕ್ಕೆ ಹೋಗತಕ್ಕಂಥ, ಈಟಿಯನ್ನೂ ಖೇಡ್ಯವನ್ನೂ ಹಿಡಿದುಕೊಂಡಿರುವಂಥ ಮೂರು ಲಕ್ಷ ಮಂದಿಯನ್ನು ಕಂಡನು.
Cross references
- 2 Kings 14:5–22 2 ಅರಸುಗಳು 14:5–22ರಾಜ್ಯವು ತನ್ನ ಕೈಯಲ್ಲಿ ಸ್ಥಿರಪಟ್ಟ ತರುವಾಯ ಅರಸ ನಾಗಿದ್ದ ತನ್ನ ತಂದೆಯನ್ನು ಕೊಂದ ತನ್ನ ಸೇವಕರನ್ನು ಕೊಂದುಹಾಕಿದನು. ಆದರೆ ತಂದೆಗಳು ತಮ್ಮ ಮಕ್ಕಳ ನಿಮಿತ್ತ ಸಾಯಬಾರದು; ಮಕ್ಕಳು ತಮ್ಮ ತಂದೆಗಳ ನಿಮಿತ್ತ ಸಾಯಬಾರದು; ಪ್ರತಿ ಮನುಷ್ಯನು ತನ್ನ ಪಾಪಕ್ಕೋಸ್ಕರ ಸಾಯಬೇಕೆಂದು ಕರ್ತನು ಆಜ್ಞಾಪಿಸಿದ ಹಾಗೆ ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆದಿರುವ ಪ್ರಕಾರ ಹೊಡೆದವರ ಮಕ್ಕಳನ್ನು ಅವನು ಸಾಯಿಸ ಲಿಲ್ಲ. ಅವನು ಉಪ್ಪಿನ ತಗ್ಗಿನಲ್ಲಿ ಎದೋಮ್ಯರಾದ ಹತ್ತು ಸಾವಿರ ಜನರನ್ನು ಹೊಡೆದು ಯುದ್ಧದಲ್ಲಿ ಸೆಲವನ್ನು ವಶಪಡಿಸಿಕೊಂಡು ಈ ದಿವಸದ ವರೆಗೂ ಯೊಕ್ತೆಯೇಲ್ ಎಂಬ ಹೆಸರಿಟ್ಟನು. ಆಗ ಅಮಚ್ಯನು ಇಸ್ರಾಯೇಲ್ಯರ ಅರಸನಾದ ಯೇಹುವಿನ ಮಗನಾಗಿರುವ ಯೆಹೋವಾಹಾಜನ ಮಗನಾದ ಯೋವಾಷನ ಬಳಿಗೆ ಸೇವಕರನ್ನು ಕಳು ಹಿಸಿ--ನಾವು ಒಬ್ಬರ ಮುಖವನ್ನು ಒಬ್ಬರು ನೋಡುವ ಹಾಗೆ ಬಾ ಎಂದು ಹೇಳಿದನು. ಆದರೆ ಇಸ್ರಾಯೇಲಿನ ಅರಸನಾದ ಯೆಹೋವಾಷನು ಯೆಹೂದದ ಅರಸ ನಾಗಿರುವ ಅಮಚ್ಯನಿಗೆ ಹೇಳಿ ಕಳುಹಿಸಿದ್ದೇನಂದರೆಲೆಬನೋನಿನಲ್ಲಿದ್ದ ಮುಳ್ಳು ಗಿಡವು ಲೆಬನೋನಿನ ಲ್ಲಿರುವ ದೇವದಾರಿಗೆ -- ನನ್ನ ಮಗನಿಗೆ ಹೆಂಡತಿ ಯಾಗಿರಲು ನೀನು ನಿನ್ನ ಮಗಳನ್ನು ಕೊಡು ಎಂದು ಹೇಳಿ ಕಳುಹಿಸಿತು. ಆದರೆ ಲೆಬನೋನಿನಲ್ಲಿದ್ದ ಅಡವಿಯ ಮೃಗವು ಹಾದು ಹೋಗುತ್ತಿರುವಾಗ ಆ ಮುಳ್ಳು ಗಿಡವನ್ನು ತುಳಿಯಿತು. ನೀನು ಎದೋಮ್ಯ ರನ್ನು ಹೊಡೆದೇ ಹೊಡೆದದ್ದರಿಂದ ನಿನ್ನ ಹೃದಯವು ನಿನ್ನನ್ನು ಹೆಚ್ಚಿಸುವಂತೆ ಮಾಡಿತು. ಹೆಚ್ಚಳಪಡು; ಮನೆಯಲ್ಲಿ ಕಾದಿರು; ನಿನ್ನ ಕೇಡಿಗಾಗಿ ನೀನು ಯಾಕೆ ಜಗಳವಾಡಬೇಕು? ನೀನೂ ನಿನ್ನ ಸಂಗಡ ಯೆಹೂ ದವೂ ಬಿದ್ದು ಹೋಗುವಿರಲ್ಲಾ ಅಂದನು. ಆದರೆ ಅಮಚ್ಯನು ಕೇಳದೆ ಹೋದನು. ಆದದರಿಂದ ಇಸ್ರಾಯೇಲ್ಯರ ಅರಸನಾದ ಯೋವಾಷನು ಹೊರ ಟನು. ಅವನೂ ಯೆಹೂದದ ಅರಸನಾದ ಅಮ ಚ್ಯನೂ ಯೆಹೂದಕ್ಕೆ ಸೇರಿದ ಬೇತ್ಷೆಮೆಷಿನ ಬಳಿಯಲ್ಲಿ ಒಬ್ಬರಿಗೊಬ್ಬರು ಎದುರುಗೊಂಡರು. ಯೆಹೂದ್ಯರು ಇಸ್ರಾಯೇಲ್ಯರ ಮುಂದೆ ಸೋತು ಹೋದದ್ದರಿಂದ ಅವರೆಲ್ಲರೂ ತಮ್ಮ ತಮ್ಮ ಡೇರೆಗಳಿಗೆ ಓಡಿಹೋದರು. ಆಗ ಇಸ್ರಾಯೇಲ್ಯರ ಅರಸನಾದ ಯೋವಾಷನು ಅಹಜ್ಯನ ಮಗನಾದ ಯೆಹೋವಾಷನ ಮಗನಾಗಿ ರುವ ಯೆಹೂದದ ಅರಸನಾದ ಅಮಚ್ಯನನ್ನು ಬೇತ್ಷೆ ಮೆಷಿನ ಬಳಿಯಲ್ಲಿ ಹಿಡುಕೊಂಡು ಯೆರೂಸಲೇಮಿಗೆ ಬಂದು ಯೆರೂಸಲೇಮಿನ ಎಫ್ರಾಯಾಮಿನ ಬಾಗಲು ಮೊದಲುಗೊಂಡು ಮೂಲೆಯ ಬಾಗಲ ವರೆಗೂ ನಾನೂರು ಮೊಳ ಉದ್ದದ ಗೋಡೆಯನ್ನು ಕೆಡವಿಬಿಟ್ಟು ಕರ್ತನ ಆಲಯದಲ್ಲಿಯೂ ಅರಸನ ಮನೆಯ ಬೊಕ್ಕಸಗಳಲ್ಲಿಯೂ ಸಿಕ್ಕಿದ ಸಕಲ ಬಂಗಾರವನ್ನೂ ಬೆಳ್ಳಿಯನ್ನೂ ಎಲ್ಲಾ ಸಾಮಾನುಗಳನ್ನೂ ಹೊಣೆಗಾರ ರನ್ನೂ ತೆಗೆದುಕೊಂಡು ಸಮಾರ್ಯಕ್ಕೆ ತಿರಿಗಿ ಹೋದನು. ಯೋವಾಷನು ಮಾಡಿದ ಇತರ ಕ್ರಿಯೆ ಗಳೂ ಅವನ ಪರಾಕ್ರಮವೂ ಅವನು ಯೆಹೂದ ಅರಸನಾದ ಅಮಚ್ಯನ ಸಂಗಡ ಯುದ್ಧಮಾಡಿದ್ದೂ ಇಸ್ರಾಯೇಲ್ಯರ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ? ಯೋವಾಷನು ತನ್ನ ಪಿತೃ ಗಳ ಸಂಗಡ ನಿದ್ರಿಸಿದನು; ಅವನನ್ನು ಸಮಾರ್ಯ ದಲ್ಲಿ ಇಸ್ರಾಯೇಲಿನ ಅರಸುಗಳ ಸ್ಮಶಾನ ಭೂಮಿಯಲ್ಲಿ ಹೂಣಿಟ್ಟರು; ಅವನ ಮಗನಾದ ಯಾರೊಬ್ಬಾಮನು ಅವನಿಗೆ ಬದಲಾಗಿ ಅರಸನಾದನು. ಆದರೆ ಇಸ್ರಾಯೇಲಿನ ಅರಸನಾದ ಯೆಹೋ ವಾಹಾಜನ ಮಗನಾಗಿರುವ ಯೋವಾಷನು ಸತ್ತ ತರುವಾಯ ಯೆಹೂದದ ಅರಸನಾದ ಯೆಹೋ ವಾಷನ ಮಗನಾಗಿರುವ ಅಮಚ್ಯನು ಹದಿನೈದು ವರುಷ ಬದುಕಿದನು. ಅಮಚ್ಯನ ಇತರ ಕ್ರಿಯೆಗಳು ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ? ಅವರು ಯೆರೂಸಲೇಮಿ ನಲ್ಲಿ ಅವನ ಮೇಲೆ ಒಳಸಂಚು ಮಾಡಿದ್ದರಿಂದ ಅವನು ಲಾಕೀಷಿಗೆ ಓಡಿಹೋದನು. ಆದರೆ ಅವರು ಅವನ ಹಿಂದೆ ಲಾಕೀಷಿಗೆ ಜನರನ್ನು ಕಳುಹಿಸಿ ಅಲ್ಲಿ ಅವನನ್ನು ಕೊಂದುಹಾಕಿದರು. ಅವನ ಶವವನ್ನು ಕುದುರೆಗಳ ಮೇಲೆ ತರಲ್ಪಟ್ಟು ದಾವೀದನ ಪಟ್ಟಣವಾದ ಯೆರೂ ಸಲೇಮಿನಲ್ಲಿ ತನ್ನ ಪಿತೃಗಳ ಸ್ಮಶಾನ ಭೂಮಿಯಲ್ಲಿ ಹೂಣಿಟ್ಟರು. ಯೆಹೂದದ ಜನರು ಹದಿನಾರು ವರುಷದವನಾದ ಅಜರ್ಯನನ್ನು ಅವನ ತಂದೆಯಾದ ಅಮಚ್ಯನಿಗೆ ಬದಲಾಗಿ ಅರಸನಾಗ ಮಾಡಿದರು. ಅರಸನು ತನ್ನ ಪಿತೃಗಳ ಸಂಗಡ ನಿದ್ರಿಸಿದ ತರು ವಾಯ ಇವನು ಏಲತನ್ನು ಕಟ್ಟಿಸಿ ಅದನ್ನು ಯೆಹೂದಕ್ಕೆ ತಿರಿಗಿ ಸೇರಿಸಿಕೊಂಡನು.
- 2 Chronicles 24:25–26 2 ಪೂರ್ವಕಾಲವೃತ್ತಾಂತ 24:25–26ಅವರು ಅವನನ್ನು ಬಿಟ್ಟತರುವಾಯ ಯಾಜಕನಾದ ಯೆಹೋ ಯಾದನ ಮಕ್ಕಳ ರಕ್ತಾಪರಾಧದ ನಿಮಿತ್ತವಾಗಿ ಅವನ ಸ್ವಂತ ಸೇವಕರು ಅವನಿಗೆ ವಿರೋಧವಾಗಿ ಒಳಸಂಚು ಮಾಡಿ ಅವನು ಸಾಯುವ ಹಾಗೆ ಅವನ ಮಂಚದ ಮೇಲೆ ಅವನನ್ನು ಕೊಂದುಹಾಕಿದರು. ಅವರು ಅವ ನನ್ನು ದಾವೀದನ ಪಟ್ಟಣದಲ್ಲಿ ಹೂಣಿಟ್ಟರು; ಆದರೆ ಅರಸುಗಳ ಸಮಾಧಿಗಳ ಬಳಿಯಲ್ಲಿ ಅವನನ್ನು ಹೂಣಿ ಡಲಿಲ್ಲ. ಅವನಿಗೆ ವಿರೋಧವಾಗಿ ಒಳಸಂಚು ಮಾಡಿ ದವರಾರಂದರೆ, ಅಮ್ಮೋನ್ಯಳಾಗಿರುವ ಶಿಮ್ಗಾಳ ಮಗ ನಾದ ಜಾಬಾದನು, ಮೋವಾಬ್ಯಳಾಗಿರುವ ಶಿವ್ರೆಾ ತಳ ಮಗನಾದ ಯೆಹೋಜಾಬಾದನು.ಆದರೆ ಅವನ ಕುಮಾರರನ್ನು ಕುರಿತೂ ಅವನ ಮೇಲೆ ಹಾಕಿದ ಭಾರಗಳನ್ನು ಕುರಿತೂ ದೇವರ ಆಲಯ ದುರಸ್ತು ಮಾಡುವದನ್ನು ಕುರಿತೂ ಇಗೋ, ಅವು ಅರಸುಗಳ ಚರಿತ್ರೆಯ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ. ಅವನ ಮಗ ನಾದ ಅಮಚ್ಯನು ಅವನಿಗೆ ಬದಲಾಗಿ ಆಳಿದನು.
- Exodus 21:14 ವಿಮೋಚನಕಾಂಡ 21:14ಒಬ್ಬನು ತನ್ನ ನೆರೆಯವನನ್ನು ಕೊಲ್ಲಬೇಕೆಂಬ ಉದ್ದೇಶ ಇಟ್ಟುಕೊಂಡು ಮೋಸತನದಿಂದ ಕೊಂದರೆ ಅವನು ಸಾಯುವಂತೆ ನೀನು ಅವನನ್ನು ನನ್ನ ಯಜ್ಞ ವೇದಿಯಿಂದ ತೆಗೆಯಬೇಕು.
- Numbers 35:31–33 ಅರಣ್ಯಕಾಂಡ 35:31–33ಸಾಯತಕ್ಕ ಕೊಲೆ ಪಾತಕನ ಪ್ರಾಣಕ್ಕೋಸ್ಕರ ಈಡನ್ನು ತಕ್ಕೊಳ್ಳಬೇಡಿರಿ; ಯಾಕಂದರೆ ಅವನು ನಿಜವಾಗಿಯೂ ಸಾಯಬೇಕು. ತನ್ನ ಆಶ್ರಯದ ಪಟ್ಟಣಕ್ಕೆ ಓಡಿಹೋದವನಿ ಗೋಸ್ಕರ ಅವನು ತಿರಿಗಿ ಬಂದು ಯಾಜಕನು ಸಾಯುವ ವರೆಗೂ ಸ್ವದೇಶದಲ್ಲಿ ವಾಸಮಾಡುವ ಹಾಗೆ ಈಡನ್ನು ತಕ್ಕೊಳ್ಳಬೇಡಿರಿ. ಹೀಗೆ ನೀವು ಇರುವ ದೇಶವನ್ನು ಅಪವಿತ್ರ ಮಾಡಬೇಡಿರಿ; ದೇಶವನ್ನು ಅಪವಿತ್ರಮಾಡು ವಂಥದ್ದು ರಕ್ತವೇ. ಅದರಲ್ಲಿ ಚೆಲ್ಲಲ್ಪಟ್ಟ ರಕ್ತದ ನಿಮಿತ್ತ ಅದನ್ನು ಚೆಲ್ಲಿದವನ ರಕ್ತದಿಂದಲ್ಲದೆ ದೇಶವು ಶುದ್ಧವಾ ಗುವದಿಲ್ಲ.ಆದದರಿಂದ ನೀವು ವಾಸಮಾಡುವ ದೇಶವನ್ನು ನೀವು ಅಶುದ್ಧಮಾಡಬೇಡಿರಿ; ಯಾಕಂದರೆ ನಾನು ಅದರೊಳಗೆ ವಾಸಿಸುತ್ತೇನೆ; ಕರ್ತನಾಗಿರುವ ನಾನೇ ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ವಾಸಿಸುತ್ತೇನೆ.
- Genesis 9:5–6 ಆದಿಕಾಂಡ 9:5–6ಇದಲ್ಲದೆ ನಿಮ್ಮ ಪ್ರಾಣಗಳಿಗೋಸ್ಕರ ನಿಮ್ಮ ರಕ್ತವನ್ನು ನಾನು ಖಂಡಿತವಾಗಿಯೂ ವಿಚಾರಿಸುವೆನು. ಎಲ್ಲಾ ಮೃಗಗಳಿಂದ ಅದನ್ನು ವಿಚಾರಿಸುವೆನು. ಮನುಷ್ಯನ ಪ್ರಾಣವನ್ನು ಮನುಷ್ಯನಿಂದಲೂ ಅವ ನವನ ಸಹೋದರನಿಂದಲೂ ವಿಚಾರಿಸುವೆನು. ಯಾವನು ಮನುಷ್ಯನ ರಕ್ತವನ್ನು ಸುರಿಸುವನೋ ಅವನ ರಕ್ತವು ಮನುಷ್ಯನಿಂದಲೇ ಸುರಿಸಲ್ಪಡುವದು. ಯಾಕಂದರೆ ದೇವರು ತನ್ನ ಸ್ವರೂಪದಲ್ಲಿ ಮನುಷ್ಯ ನನ್ನು ಉಂಟುಮಾಡಿದನು.