2 Chronicles · chapter 28 · verse 9
2 Chronicles 28:9 in Kannada
ಅಲ್ಲಿ ಕರ್ತನ ಒಬ್ಬ ಪ್ರವಾದಿ ಇದ್ದನು; ಅವನ ಹೆಸರು ಓದೇದನು. ಅವನು ಸಮಾರ್ಯಕ್ಕೆ ಬಂದ ಸೈನ್ಯೆಕ್ಕೆದುರಾಗಿ ಹೊರಟುಹೋಗಿ ಅವರಿಗೆ--ಇಗೋ, ನಿಮ್ಮ ಪಿತೃಗಳ ಕರ್ತನಾದ ದೇವರು ಯೆಹೂದದ ಮೇಲೆ ಉರಿಗೊಂಡದ್ದರಿಂದ ಆತನು ಅವರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿರಲಾಗಿ, ನೀವು ಆಕಾಶಕ್ಕೆ ಮುಟ್ಟುವ ಉಗ್ರದಿಂದ ಅವರನ್ನು ಕೊಂದುಹಾಕಿದ್ದೀರಿ.
Alli kartana obba pravaadi iddanu; avana hesaru odedanu. Avanu samaaryakke banda sainyekkeduraagi horatuhogi avarige--igo, nimma pitrugala kartanaada devaru yehoodada mele urigondaddarinda aatanu avarannu nimma kaiyalli oppisiralaagi, neevu aakaashakke muttuva ugradinda avarannu konduhaakiddeeri.
2 Chronicles 28:9 in English
- King James Version (KJV)
- But a prophet of the LORD was there, whose name [was] Oded: and he went out before the host that came to Samaria, and said unto them, Behold, because the LORD God of your fathers was wroth with Judah, he hath delivered them into your hand, and ye have slain them in a rage [that] reacheth up unto heaven.
- World English Bible (WEB)
- But a prophet of the LORD was there, whose name was Oded; and he went out to meet the army that came to Samaria, and said to them, “Behold, because the LORD, the God of your fathers, was angry with Judah, he has delivered them into your hand, and you have slain them in a rage which has reached up to heaven.
- American Standard Version (ASV)
- But a prophet of Jehovah was there, whose name was Oded: and he went out to meet the host that came to Samaria, and said unto them, Behold, because Jehovah, the God of your fathers, was wroth with Judah, he hath delivered them into your hand, and ye have slain them in a rage which hath reached up unto heaven.
- Bible in Basic English (BBE)
- But a prophet of the Lord was there, named Oded; and he went out in front of the army which was coming into Samaria and said to them, Truly, because the Lord, the God of your fathers, was angry with Judah, he gave them up into your hands, and you have put them to death in an outburst of wrath stretching up to heaven.
- Darby Translation (DBY)
- But a prophet of Jehovah was there, whose name was Oded; and he went out before the host that came to Samaria, and said unto them, Behold, because Jehovah the God of your fathers was wroth with Judah, he gave them into your hand, and ye have slain them in a rage that reaches up to heaven.
- Webster's Bible (WBS)
- But a prophet of the LORD was there, whose name [was] Oded: and he went out before the army that came to Samaria, and said to them, Behold, because the LORD God of your fathers was wroth with Judah, he hath delivered them into your hand, and ye have slain them in a rage [that] reacheth to heaven.
- Young's Literal Translation (YLT)
- And there hath been there a prophet of Jehovah (Oded [is] his name), and he goeth out before the host that hath come in to Samaria, and saith to them, 'Lo, in the fury of Jehovah God of your fathers against Judah, He hath given them into your hand, and ye slay among them in rage — unto the heavens it hath come;
Read in context
- 7ಇದಲ್ಲದೆ ಎಫ್ರಯಾಮ್ಯನಾಗಿರುವ ಪರಾಕ್ರಮಶಾಲಿಯಾದ ಜಿಕ್ರಿಯು ಅರಸನ ಮಗ ನಾದ ಮಾಸೇಯನನ್ನೂ ಅರಮನೆಯ ನಾಯಕನಾದ ಅಜ್ರೀಕಾಮನನ್ನೂ ಅರಸನಿಗೆ ಎರಡನೆಯವನಾದ ಎಲ್ಕಾನನನ್ನೂ ಕೊಂದುಹಾಕಿದನು.
- 8ಇಸ್ರಾಯೇಲಿನ ಮಕ್ಕಳು ತಮ್ಮ ಸಹೋದರರಲ್ಲಿ ಎರಡು ಲಕ್ಷ ಮಂದಿ ಸ್ತ್ರೀಯರನ್ನೂ ಕುಮಾರರನ್ನೂ ಕುಮಾರ್ತೆಗಳನ್ನೂ ಸೆರೆ ಯಾಗಿ ತಕ್ಕೊಂಡುಹೋದರು. ಇದಲ್ಲದೆ ಅವರಿಂದ ಬಹು ಕೊಳ್ಳೆಯನ್ನು ತಕ್ಕೊಂಡು ಆ ಕೊಳ್ಳೆಯನ್ನು ಸಮಾರ್ಯಕ್ಕೆ ಒಯ್ದರು.
- 9ಅಲ್ಲಿ ಕರ್ತನ ಒಬ್ಬ ಪ್ರವಾದಿ ಇದ್ದನು; ಅವನ ಹೆಸರು ಓದೇದನು. ಅವನು ಸಮಾರ್ಯಕ್ಕೆ ಬಂದ ಸೈನ್ಯೆಕ್ಕೆದುರಾಗಿ ಹೊರಟುಹೋಗಿ ಅವರಿಗೆ--ಇಗೋ, ನಿಮ್ಮ ಪಿತೃಗಳ ಕರ್ತನಾದ ದೇವರು ಯೆಹೂದದ ಮೇಲೆ ಉರಿಗೊಂಡದ್ದರಿಂದ ಆತನು ಅವರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿರಲಾಗಿ, ನೀವು ಆಕಾಶಕ್ಕೆ ಮುಟ್ಟುವ ಉಗ್ರದಿಂದ ಅವರನ್ನು ಕೊಂದುಹಾಕಿದ್ದೀರಿ.
- 10ಈಗ ನಿಮಗೆ ದಾಸರೂ ದಾಸಿಗಳೂ ಆಗಿರುವ ಹಾಗೆ ಯೆಹೂದದವರನ್ನೂ ಯೆರೂಸಲೇಮಿನ ಮಕ್ಕಳನ್ನೂ ನಿಮ್ಮ ವಶಮಾಡಬೇಕೆಂದು ಅಂದುಕೊಳ್ಳುತ್ತೀರಿ. ಆದರೆ ನಿಮ್ಮಲ್ಲಿಯೇ ನಿಮ್ಮ ದೇವರಾದ ಕರ್ತನಿಗೆ ವಿರೋಧವಾಗಿ ಪಾಪಗಳು ಇಲ್ಲವೋ?
- 11ಆದದ ರಿಂದ ನೀವು ನನ್ನ ಮಾತು ಕೇಳಿ ನಿಮ್ಮ ಸಹೋದರ ರಲ್ಲಿ ನೀವು ಸೆರೆಯಾಗಿ ತಕ್ಕೊಂಡ ಸೆರೆಯವರನ್ನು ಬಿಟ್ಟುಬಿಡಿರಿ. ಯಾಕಂದರೆ ಉರಿಯುತ್ತಿರುವ ಕರ್ತನ ಕೋಪವು ನಿಮ್ಮ ಮೇಲೆ ಇರುವದು ಅಂದನು.
Cross references
- Isaiah 47:6 ಯೆಶಾಯ 47:6ನಾನು ನಿನ್ನ ಜನರ ಮೇಲೆ ರೋಷಗೊಂಡು, ನನ್ನ ಸ್ವಾಸ್ಥ್ಯವನ್ನು ಅಪವಿತ್ರ ಮಾಡಿ, ನಿನ್ನ ಕೈಯಲ್ಲಿ ಅವರನ್ನು ಒಪ್ಪಿಸಿಬಿಟ್ಟೆನು; ನೀನು ಅವರಿಗೆ ಕರುಣೆಯನ್ನು ತೋರಿಸದೆ ಮುದುಕರ ಮೇಲೆಯೂ ಬಹು ಭಾರವಾದ ನೊಗವನ್ನು ಹೊರಿ ಸಿದಿ.
- Ezra 9:6 ಎಜ್ರನು 9:6ನನ್ನ ದೇವರೇ, ನಾನು ನನ್ನ ಮುಖವನ್ನು ನಿನ್ನ ಮುಂದೆ ಎತ್ತುವಹಾಗೆ ಲಜ್ಜೆಯಿಂದ ನಾಚಿಕೆಪಡು ತ್ತೇನೆ. ನನ್ನ ದೇವರೇ, ನಮ್ಮ ಅಕ್ರಮಗಳು ನಮ್ಮ ತಲೆಯ ಮೇಲೆ ಹೆಚ್ಚಿದವು; ನಮ್ಮ ಅಪರಾಧವು ಆಕಾಶದ ಪರ್ಯಂತರ ಬೆಳೆಯಿತು.
- Revelation 18:5 ಪ್ರಕಟನೆ 18:5ಅವಳ ಪಾಪಗಳು ಆಕಾಶದ ವರೆಗೂ ಮುಟ್ಟಿವೆ. ದೇವರು ಅವಳ ದ್ರೋಹಗಳನ್ನು ಜ್ಞಾಪಿಸಿಕೊಂಡಿದ್ದಾನೆ.
- Zechariah 1:15 ಜೆಕರ್ಯ 1:15ನಿಶ್ಚಿಂತೆ ಯುಳ್ಳವರಾಗಿರುವ ಅನ್ಯಜನಾಂಗದ ಮೇಲೆ ನಾನು ಬಹಳ ಕೋಪಿಸಿಕೊಂಡಿದ್ದೇನೆ. ನಾನು ಸ್ವಲ್ಪ ಕೋಪ ಮಾಡಿಕೊಂಡಾಗ ಅವರು ಸಂಕಟಕ್ಕೆ ಸಹಾಯಮಾಡಿ ದರು.
- Jeremiah 15:17–18 ಯೆರೆಮೀಯ 15:17–18ನಾನು ಹಾಸ್ಯಗಾರರ ಕೂಟದಲ್ಲಿ ಕೂತುಕೊಂಡು ಉತ್ಸಾಹಪಡಲಿಲ್ಲ, ನಿನ್ನ ಕೈ ನಿಮಿತ್ತ ಒಂಟಿಯಾಗಿ ಕೂತುಕೊಂಡಿದ್ದೇನೆ; ನನ್ನನ್ನು ಉಗ್ರತೆಯಿಂದ ತುಂಬಿಸಿದ್ದೀ. ಏಕೆ ನನ್ನ ನೋವು ನಿತ್ಯವಾಗಿಯೂ ನನ್ನ ಗಾಯವು ವಾಸಿಯಾಗಲೊ ಲ್ಲದೆಯೂ ಸ್ವಸ್ಥವಾಗದೆಯೂ ಇದೆ? ನೀನು ನನಗೆ ಒಟ್ಟಾರೆ ನೀರು ಬತ್ತುವ ಕಳ್ಳ ತೊರೆಯಂತೆಯೂ ಸ್ಥಿರ ವಿಲ್ಲದ ನೀರಿನಂತೆಯೂ ಇರಬೇಕೋ.
- Isaiah 10:5–7 ಯೆಶಾಯ 10:5–7ಓ ನನ್ನ ಕೋಪದ ಕೋಲಾದ ಅಶ್ಶೂರವೇ, ಕೈಯಲ್ಲಿರುವ ಬೆತ್ತವು ನನ್ನ ರೌದ್ರವೇ. ನಾನು ಅವನನ್ನು ಭ್ರಷ್ಠಜನರಿಗೆ ವಿರುದ್ಧವಾಗಿ ಕಳುಹಿಸಿ ನನ್ನ ಕೋಪಕ್ಕೆ ಗುರಿಯಾದ (ನನ್ನ) ಪ್ರಜೆಯನ್ನು ಸೂರೆ ಮಾಡಿ ಕೊಳ್ಳೆಹೊಡೆದು ಬೀದಿಯ ಕೆಸರನ್ನೋ ಎಂಬಂತೆ ತುಳಿದು ಹಾಕಬೇಕೆಂದು ಅಪ್ಪಣೆ ಕೊಡು ವೆನು. ಅದರ ಅಭಿಪ್ರಾಯವೋ ಹಾಗಲ್ಲ; ಇಲ್ಲವೇ ಅದರ ಹೃದಯವು ಈ ಪ್ರಕಾರ ಆಲೋಚಿಸುವದಿಲ್ಲ; ಜನಾಂಗಗಳನ್ನು ಕಡಿದು ಬಿಡುವದು ಕೊಂಚವಾಗಿ ಅಲ್ಲ. ಆದರೆ ನಾಶಮಾಡುವದು ಅವನ ಹೃದಯದಲ್ಲಿ ಇದೆ.
- 1 Kings 20:42 1 ಅರಸುಗಳು 20:42ಇವನು ಅವನಿಗೆ--ಕರ್ತನು ಹೇಳುವ ದೇನಂದರೆ--ನಾನು ಪೂರ್ಣನಾಶಕ್ಕೆ ಒಪ್ಪಿಸಿದ ಮನು ಷ್ಯನನ್ನು ನೀನು ಕೈಬಿಟ್ಟು ಹೋಗಗೊಡಿಸಿದ ಕಾರಣ ಅವನ ಪ್ರಾಣಕ್ಕೆ ಬದಲಾಗಿ ನಿನ್ನ ಪ್ರಾಣವೂ ಅವನ ಜನಕ್ಕೆ ಬದಲಾಗಿ ನಿನ್ನ ಜನವೂ ಹೋಗುವದು ಅಂದನು.ಆಗ ಇಸ್ರಾಯೇಲಿನ ಅರಸನು ವ್ಯಸನ ದಿಂದಲೂ ಕೋಪದಿಂದಲೂ ಸಮಾರ್ಯದಲ್ಲಿದ್ದ ತನ್ನ ಮನೆಗೆ ಹೊರಟು ಬಂದನು.
- 2 Kings 20:14–15 2 ಅರಸುಗಳು 20:14–15ಆಗ ಪ್ರವಾದಿಯಾದ ಯೆಶಾಯನು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ--ಆ ಮನುಷ್ಯರು ಏನು ಹೇಳಿದರು? ಅವರು ಎಲ್ಲಿಂದ ನಿನ್ನ ಬಳಿಗೆ ಬಂದರು ಅಂದನು. ಹಿಜ್ಕೀಯನು--ಅವರು ದೂರ ದೇಶದಿಂದ ಅಂದರೆ ಬಾಬೆಲಿನಿಂದ ನನ್ನ ಬಳಿಗೆ ಬಂದಿದ್ದಾರೆ ಅಂದನು. ಅವನು--ನಿನ್ನ ಮನೆಯಲ್ಲಿ ಅವರು ಏನು ನೋಡಿದರು ಅಂದನು. ಹಿಜ್ಕೀಯನು--ನನ್ನ ಮನೆಯಲ್ಲಿ ಇದ್ದ ಎಲ್ಲವನ್ನೂ ಅವರು ನೋಡಿದ್ದಾರೆ; ನನ್ನ ಬೊಕ್ಕಸಗಳಲ್ಲಿ ನಾನು ಅವರಿಗೆ ತೋರಿಸದೆ ಇದ್ದದ್ದು ಒಂದಾದರೂ ಇಲ್ಲ ಅಂದನು.
- Psalm 69:26 ಕೀರ್ತನೆಗಳು 69:26ನೀನು ಹೊಡೆದ ವನನ್ನು ಅವರು ಹಿಂಸಿಸುತ್ತಾರೆ, ನೀನು ಗಾಯಮಾಡಿ ದವರ ವ್ಯಸನವನ್ನು ಮಾತನಾಡಿಕೊಳ್ಳುತ್ತಾರೆ.
- Ezekiel 26:2–3 ಯೆಹೆಜ್ಕೇಲನು 26:2–3ಮನುಷ್ಯಪುತ್ರನೇ, ತೂರ್, ಯೆರೂಸಲೇಮಿನ ವಿಷಯವಾಗಿ ಆಹಾ, ಜನರ ದ್ವಾರವಾಗಿದ್ದದ್ದು ಮುರಿದು ಹೋಯಿತು, ಅದು ನನ್ನ ಕಡೆಗೆ ತಿರುಗಿಕೊಂಡಿದೆ, ಯೆರೂಸಲೇಮು ಹಾಳಾದ ಕಾರಣ ನಾನು ತುಂಬಿಕೊಳ್ಳುವೆನು ಎಂದು ಹೇಳಿದ್ದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ತೂರ್ ದೇಶವೇ, ನಾನು ನಿನಗೆ ವಿರೋಧವಾಗಿದ್ದೇನೆ, ಸಮುದ್ರವು ತನ್ನ ಅಲೆಗಳನ್ನು ಹೇಗೆ ಬರಮಾಡುವದೋ ಹಾಗೆಯೇ ನಾನು ನಿನಗೆ ವಿರೋಧವಾಗಿ ಅನೇಕ ಜನಾಂಗಗಳನ್ನು ನಿನ್ನ ಮೇಲೆ ಬರಮಾಡುವೆನು.
- Ezekiel 25:12–17 ಯೆಹೆಜ್ಕೇಲನು 25:12–17ದೇವರಾದ ಕರ್ತನು--ಎದೋಮು ಮತ್ತು ಯೆಹೂದನ ಮನೆತನದವರಿಗೆ ಮುಯ್ಯಿಗೆಮುಯ್ಯಿ ತೀರಿಸಿದ್ದರಿಂದಲೇ ಮತ್ತು ಅತಿ ಅಪರಾಧ ಮಾಡಿ ಅವರಲ್ಲಿ ಸೇಡು ತೀರಿಸಿ ತೆಗೆದುಕೊಂಡದ್ದರಿಂದಲೇ ಎಂದು ಹೇಳುತ್ತಾನೆ. ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನೂ ನನ್ನ ಕೈಯನ್ನು ಎದೋಮಿನ ಮೇಲೆ ಚಾಚುತ್ತೇನೆ, ಅದರೊಳಗಿನಿಂದ ಮನುಷ್ಯರನ್ನೂ ಮೃಗಗಳನ್ನೂ ಕಡಿದುಬಿಡುತ್ತೇನೆ, ತೇಮಾನು ಮೊದಲುಗೊಂಡು ಅದನ್ನು ಕಾಡನ್ನಾಗಿ ಮಾಡುತ್ತೇನೆ; ದೆದಾನಿಯವರು ಕತ್ತಿಯಿಂದ ಬೀಳು ವರು. ನಾನು ನನ್ನ ಜನರಾದ ಇಸ್ರಾಯೇಲಿನ ಮೂಲಕವಾಗಿ ನನ್ನ ಪ್ರತಿದಂಡನೆಯನ್ನು ಎದೋಮಿನ ಮೇಲೆ ಇಡುವೆನು, ಅವರು ಎದೋಮಿನಲ್ಲಿ ನನ್ನ ಕೋಪದ ಪ್ರಕಾರವೂ ರೋಷದ ಪ್ರಕಾರವೂ ಮಾಡು ವರು; ಹೀಗೆಯೇ ಅವರು ನನ್ನ ಪ್ರತಿದಂಡನೆಯನ್ನು ತಿಳಿಯುವರೆಂದು ದೇವರಾದ ಕರ್ತನು ಹೇಳುತ್ತಾನೆ. ದೇವರಾದ ಕರ್ತನು ಹೀಗೆ ಹೇಳುತ್ತಾನೆ. ಫಿಲಿಷ್ಟಿಯರು ಮುಯ್ಯಿಗೆ ಮುಯ್ಯಿ ನಡಿಸಿ, ಹಗೆಯುಳ್ಳ ಹೃದಯದಿಂದ ಸೇಡು ತೀರಿಸಿಕೊಂಡು ಪೂರ್ವದ ಕ್ರೋಧದಿಂದ ಕೆಡಿಸಿದರು. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನನ್ನ ಕೈಯನ್ನು ಫಿಲಿಷ್ಟಿಯರ ಮೇಲೆ ಚಾಚುತ್ತೇನೆ; ಕೆರೇತಿಯರನ್ನು ಕಡಿದುಬಿಡುತ್ತೇನೆ; ಉಳಿದವರನ್ನು ಸಮುದ್ರತೀರದಲ್ಲಿ ನಾಶಮಾಡುತ್ತೇನೆ;ನಾನು ದೊಡ್ಡ ಪ್ರತಿದಂಡನೆ ಯನ್ನು ಉರಿಯುಳ್ಳ ಗದರಿಕೆಗಳ ಸಂಗಡ ಅವರಲ್ಲಿ ತೀರಿಸುತ್ತೇನೆ; ಹೀಗೆ ಪ್ರತೀಕಾರ ಮಾಡಿದ ಮೇಲೆ ನಾನೇ ಕರ್ತನೆಂದು ಅವರಿಗೆ ತಿಳಿಯುವದು. ನಾನು ದೊಡ್ಡ ಪ್ರತಿದಂಡನೆ ಯನ್ನು ಉರಿಯುಳ್ಳ ಗದರಿಕೆಗಳ ಸಂಗಡ ಅವರಲ್ಲಿ ತೀರಿಸುತ್ತೇನೆ; ಹೀಗೆ ಪ್ರತೀಕಾರ ಮಾಡಿದ ಮೇಲೆ ನಾನೇ ಕರ್ತನೆಂದು ಅವರಿಗೆ ತಿಳಿಯುವದು.
- 2 Chronicles 28:5 2 ಪೂರ್ವಕಾಲವೃತ್ತಾಂತ 28:5ಆದದರಿಂದ ಅವನ ದೇವರಾದ ಕರ್ತನು ಅರಾಮಿನ ಅರಸನ ಕೈಯಲ್ಲಿ ಅವನನ್ನು ಒಪ್ಪಿಸಿದನು. ಅರಾಮ್ಯರು ಅವನನ್ನು ಹೊಡೆದು ಅವರಲ್ಲಿ ಅನೇಕರನ್ನು ಸೆರೆ ಯಾಗಿ ಹಿಡಿದು ದಮಸ್ಕಕ್ಕೆ ಒಯ್ದರು. ಇದಲ್ಲದೆ ಇವನು ಇಸ್ರಾಯೇಲಿನ ಅರಸನ ಕೈಯಲ್ಲಿ ಒಪ್ಪಿಸಲ್ಪ ಟ್ಟದ್ದರಿಂದ ಅವನು ಇವನನ್ನು ಹೊಡೆದು ದೊಡ್ಡ ಸಂಹಾರ ಮಾಡಿದನು.
Original words (Hebrew)
- prophet · H5030נָבִיא nâbîyʼ
- name · H8034שֵׁם shêm
- Oded · H5752עוֹדֵד ʻÔwdêd
- out · H3318יָצָא yâtsâʼ
- before · H6440פָּנִים pânîym
- host · H6635צָבָא tsâbâʼ
- came · H935בּוֹא bôwʼ
- Samaria · H8111שֹׁמְרוֹן Shômᵉrôwn
- said · H559אָמַר ʼâmar
- God · H430אֱלֹהִים ʼĕlôhîym
- fathers · H1אָב ʼâb
- wroth · H2534חֵמָה chêmâh
- Judah · H3063יְהוּדָה Yᵉhûwdâh
- delivered · H5414נָתַן nâthan
- hand · H3027יָד yâd
- slain · H2026הָרַג hârag
- rage · H2197זַעַף zaʻaph
- up · H5060נָגַע nâgaʻ
- heaven · H8064שָׁמַיִם shâmayim