2 Chronicles · chapter 35 · verse 6
2 Chronicles 35:6 in Kannada
ಪಸ್ಕವನ್ನು ವಧಿಸಿ ನಿಮ್ಮನ್ನು ಪರಿಶುದ್ಧ ಮಾಡಿ ಕೊಂಡು ಕರ್ತನು ಮೋಶೆಯ ಮುಖಾಂತರವಾಗಿ ಹೇಳಿದ ವಾಕ್ಯದ ಪ್ರಕಾರ ನಿಮ್ಮ ಸಹೋದರರು ಮಾಡುವ ಹಾಗೆ ಅವರನ್ನು ಸಿದ್ಧಮಾಡಿರಿ ಅಂದನು.
Paskavannu vadhisi nimmannu parishuddha maadi kondu kartanu mosheya mukhaantaravaagi helida vaakyada prakaara nimma sahodararu maaduva haage avarannu siddhamaadiri andanu.
2 Chronicles 35:6 in English
- King James Version (KJV)
- So kill the passover, and sanctify yourselves, and prepare your brethren, that [they] may do according to the word of the LORD by the hand of Moses.
- World English Bible (WEB)
- Kill the Passover lamb, sanctify yourselves, and prepare for your brothers, to do according to the LORD’s word by Moses.”
- American Standard Version (ASV)
- And kill the passover, and sanctify yourselves, and prepare for your brethren, to do according to the word of Jehovah by Moses.
- Bible in Basic English (BBE)
- And put the Passover lamb to death, and make yourselves holy, and make it ready for your brothers, so that the orders given by the Lord through Moses may be done.
- Darby Translation (DBY)
- and slaughter the passover, and hallow yourselves, and prepare it for your brethren, that they may do according to the word of Jehovah through Moses.
- Webster's Bible (WBS)
- So kill the passover, and sanctify yourselves, and prepare your brethren, that [they] may do according to the word of the LORD by the hand of Moses.
- Young's Literal Translation (YLT)
- and slaughter the passover-offering and sanctify yourselves, and prepare for your brethren, to do according to the word of Jehovah by the hand of Moses.'
Read in context
- 4ಇದಲ್ಲದೆ ಇಸ್ರಾ ಯೇಲಿನ ಅರಸನಾದ ದಾವೀದನ ಬರಹದ ಪ್ರಕಾರ ವಾಗಿಯೂ ಅವನ ಮಗನಾದ ಸೊಲೊಮೋನನ ಬರಹದ ಪ್ರಕಾರವಾಗಿಯೂ ನಿಮ್ಮ ಸರತಿಗಳಲ್ಲಿ ನಿಮ್ಮ ಪಿತೃಗಳ ಮನೆಗಳ ಪ್ರಕಾರ ಸಿದ್ಧಮಾಡಿಕೊಂಡು
- 5ಜನರಾದ ನಿಮ್ಮ ಸಹೋದರರ ಪಿತೃಗಳ ಕುಟುಂಬ ಗಳ ವಿಭಾಗದ ಪ್ರಕಾರವಾಗಿ ಪರಿಶುದ್ಧ ಸ್ಥಾನದಲ್ಲಿ ನಿಲ್ಲಿರಿ.
- 6ಪಸ್ಕವನ್ನು ವಧಿಸಿ ನಿಮ್ಮನ್ನು ಪರಿಶುದ್ಧ ಮಾಡಿ ಕೊಂಡು ಕರ್ತನು ಮೋಶೆಯ ಮುಖಾಂತರವಾಗಿ ಹೇಳಿದ ವಾಕ್ಯದ ಪ್ರಕಾರ ನಿಮ್ಮ ಸಹೋದರರು ಮಾಡುವ ಹಾಗೆ ಅವರನ್ನು ಸಿದ್ಧಮಾಡಿರಿ ಅಂದನು.
- 7ಆಗ ಯೋಷೀಯನು ಸಿದ್ಧವಾಗಿದ್ದ ಸಮಸ್ತ ಜನ ರಿಗೆ ಪಸ್ಕದ ಬಲಿಗೋಸ್ಕರ ಮಂದೆಯಿಂದ ಮೂವತ್ತು ಸಾವಿರ ಕುರಿಮರಿಗಳನ್ನೂ ಮೇಕೆಯ ಮರಿಗಳನ್ನೂ ಕೊಟ್ಟನು. ಇದಲ್ಲದೆ ಮೂರು ಸಾವಿರ ಎತ್ತುಗಳನ್ನು ಕೊಟ್ಟನು; ಇವೆಲ್ಲಾ ಅರಸನ ಸೊತ್ತಿನಿಂದಲೇ
- 8ಹಾಗೆಯೇ ಅವನ ಪ್ರಧಾನರು ಜನರಿಗೂ ಯಾಜಕ ರಿಗೂ ಲೇವಿಯರಿಗೂ ಮನಃಪೂರ್ವಕವಾಗಿ ಕೊಟ್ಟರು. ದೇವರ ಆಲಯದ ನಾಯಕರಾದ ಹಿಲ್ಕೀಯನೂ ಜೆಕರೀಯನೂ ಯೆಹೀಯೇಲನೂ ಪಸ್ಕದ ಬಲಿ ಗೋಸ್ಕರ ಎರಡು ಸಾವಿರದ ಆರು ನೂರು ಮರಿ ಗಳನ್ನೂ ಮುನ್ನೂರು ಎತ್ತುಗಳನ್ನೂ ಯಾಜಕರಿಗೆ ಕೊಟ್ಟರು.
Cross references
- 2 Chronicles 29:5 2 ಪೂರ್ವಕಾಲವೃತ್ತಾಂತ 29:5ಲೇವಿಯರೇ, ನನ್ನ ಮಾತನ್ನು ಕೇಳಿರಿ; ನೀವು ನಿಮ್ಮನ್ನು ಪರಿಶುದ್ಧ ಮಾಡಿಕೊಂಡು ನಿಮ್ಮ ಪಿತೃಗಳ ಕರ್ತನಾದ ದೇವರ ಮನೆಯನ್ನು ಪರಿಶುದ್ಧಮಾಡಿ ಅದರ ಮೈಲಿಗೆಯನ್ನು ಪರಿಶುದ್ಧ ಸ್ಥಾನದಿಂದ ತೆಗೆದುಹಾಕಿರಿ.
- Hebrews 9:13–14 ಇಬ್ರಿಯರಿಗೆ 9:13–14ಹೋತ ಹೋರಿಗಳ ರಕ್ತವೂ ಹೊಲೆಯಾದವರ ಮೇಲೆ ಚಿಮು ಕಿಸುವ ಕಡಸಿನ ಬೂದಿಯೂ ಶರೀರ ವನ್ನು ಶುಚಿಮಾಡಿ ಪವಿತ್ರ ಮಾಡುವದಾದರೆ ನಿತ್ಯಾತ್ಮನಿಂದ ತನ್ನನ್ನು ತಾನೇ ನಿರ್ದೋಷಿಯನ್ನಾಗಿ ದೇವರಿಗೆ ಸಮರ್ಪಿಸಿ ಕೊಂಡ ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ ನಿರ್ಜೀವ ಕ್ರಿಯೆಗಳಿಂದ ಬಿಡಿಸಿ ಜೀವವುಳ್ಳ ದೇವರನ್ನು ಸೇವಿಸುವಂತೆ ನಿಮ್ಮ ಮನ ಸ್ಸಾಕ್ಷಿಯನ್ನು ಶುದ್ಧೀಕರಿಸು ವದಲ್ಲವೇ.
- 2 Chronicles 29:15 2 ಪೂರ್ವಕಾಲವೃತ್ತಾಂತ 29:15ಇವರು ತಮ್ಮ ಸಹೋ ದರರನ್ನು ಕೂಡಿಸಿ ತಮ್ಮನ್ನು ಪರಿಶುದ್ಧ ಮಾಡಿಕೊಂಡು ಕರ್ತನ ವಾಕ್ಯದಿಂದ ಅರಸನ ಆಜ್ಞೆಯ ಪ್ರಕಾರ ಕರ್ತನ ಆಲಯವನ್ನು ಶುಚಿಮಾಡಲು ಬಂದರು.
- Exodus 12:6 ವಿಮೋಚನಕಾಂಡ 12:6ಅದನ್ನು ಈ ತಿಂಗಳಿನ ಹದಿನಾಲ್ಕನೆಯ ದಿನದ ವರೆಗೆ ಇಟ್ಟುಕೊಳ್ಳಬೇಕು. ತರುವಾಯ ಸಾಯಂ ಕಾಲದಲ್ಲಿ ಇಸ್ರಾಯೇಲಿನ ಕೂಟದ ಇಡೀ ಸಭೆಯು ಅದನ್ನು ಕೊಲ್ಲಬೇಕು.
- Joel 2:16 ಯೋವೇಲ 2:16ಜನರನ್ನು ಕೂಡಿಸಿರಿ, ಸಭೆಯನ್ನು ಪರಿಶುದ್ಧಮಾಡಿರಿ; ಹಿರಿಯರನ್ನು ಒಟ್ಟುಗೂಡಿಸಿರಿ, ಮಕ್ಕಳನ್ನೂ ಮೊಲೆ ಕೂಸುಗಳನ್ನೂ ಕೂಡಿಸಿರಿ; ಮದುಮಗನು ತನ್ನ ಕೊಠಡಿಯೊಳ ಗಿಂದಲೂ ಮದುಮಗಳು ತನ್ನ ಅರೆಯೊಳಗಿಂದಲೂ ಹೊರಡಲಿ.
- Exodus 12:21–22 ವಿಮೋಚನಕಾಂಡ 12:21–22ಆಗ ಮೋಶೆಯು ಇಸ್ರಾಯೇಲಿನ ಎಲ್ಲಾ ಹಿರಿಯ ರನ್ನು ಕರೆದು ಅವರಿಗೆ--ನಿಮ್ಮ ಗೋತ್ರಗಳ ಪ್ರಕಾರ ಕುರಿಗಳನ್ನು ತೆಗೆದುಕೊಂಡು ಪಸ್ಕವನ್ನು (ಕುರಿಯನ್ನು) ಕೊಯ್ಯಿರಿ. ಹಿಸ್ಸೋಪಿನ ಕಟ್ಟನ್ನು ತೆಗೆದುಕೊಂಡು ಬೋಗುಣಿಯಲ್ಲಿರುವ ರಕ್ತದಲ್ಲಿ ಅದನ್ನು ಅದ್ದಿ ಬಾಗಿ ಲಿನ ಮೇಲಿನ ಅಡ್ಡಗಂಬಕ್ಕೂ ಪಕ್ಕದಲ್ಲಿರುವ ಎರಡು ನಿಲುವುಗಂಬಗಳಿಗೂ ಹಚ್ಚಿರಿ. ನಿಮ್ಮಲ್ಲಿ ಯಾರೂ ಬೆಳಗಾಗುವ ವರೆಗೆ ಮನೆಯ ಬಾಗಿಲನ್ನು ಬಿಟ್ಟು ಹೋಗಬಾರದು.
- Ezra 6:20–21 ಎಜ್ರನು 6:20–21ಯಾಜಕರೂ ಲೇವಿಯರ ಕೂಡ ಶುದ್ಧಮಾಡಿ ಕೊಂಡಿದ್ದರು; ಅವರೆಲ್ಲರು ಶುಚಿಯಾಗಿದ್ದು ಸೆರೆಯ ಸಮಸ್ತ ಮಕ್ಕಳಿಗೋಸ್ಕರವೂ ಯಾಜಕರಾದ ತಮ್ಮ ಸಹೋದರರಿಗೋಸ್ಕರವೂ ತಮಗೋಸ್ಕರವೂ ಪಸ್ಕ ವನ್ನು ವಧಿಸಿದರು. ಹಾಗೆಯೇ ಸೆರೆಯಿಂದ ತಿರಿಗಿ ಬಂದ ಇಸ್ರಾಯೇಲ್ ಮಕ್ಕಳು ಇಸ್ರಾಯೇಲ್ ದೇವ ರಾಗಿರುವ ಕರ್ತನನ್ನು ಹುಡುಕಲು ದೇಶದ ಜನಾಂಗ ಗಳ ಅಶುಚಿಯಿಂದ ತಮ್ಮನ್ನು ಪ್ರತ್ಯೇಕಿಸಿ ಕೊಂಡು ಅವರ ಕಡೆಗೆ ಸೇರಿದ ಸಮಸ್ತರೂ ಅದನ್ನು ತಿಂದು ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನು ಸಂತೋಷದಿಂದ ಏಳು ದಿವಸ ಆಚರಿಸಿದರು.ಇಸ್ರಾಯೇಲ್ ದೇವ ರಾಗಿರುವ ದೇವರ ಆಲಯದ ಕಾರ್ಯದಲ್ಲಿ ಅವರ ಕೈಗಳನ್ನು ಬಲಪಡಿಸುವದಕ್ಕೆ ಅಶ್ಶೂರ್ ದೇಶದ ಅರ ಸನ ಹೃದಯವನ್ನು ಅವರ ಕಡೆಗೆ ತಿರುಗಿಸಿದ್ದರಿಂದ ಕರ್ತನು ಅವರನ್ನು ಸಂತೋಷಪಡಿಸಿದನು.
- 2 Chronicles 30:15–19 2 ಪೂರ್ವಕಾಲವೃತ್ತಾಂತ 30:15–19ಎರಡನೇ ತಿಂಗಳ ಹದಿನಾಲ್ಕನೇ ದಿವಸದಲ್ಲಿ ಪಸ್ಕ ವನ್ನು ವಧಿಸಿದರು. ಯಾಜಕರೂ ಲೇವಿಯರೂ ಲಜ್ಜೆ ಯನ್ನು ಹೊಂದಿ ತಮ್ಮನ್ನು ಪರಿಶುದ್ಧ ಮಾಡಿಕೊಂಡು ಕರ್ತನ ಮನೆಯೊಳಗೆ ದಹನಬಲಿಗಳನ್ನು ತಂದರು. ಇದಲ್ಲದೆ ಅವರು ದೇವರ ಮನುಷ್ಯನಾದ ಮೋಶೆ ಯ ನ್ಯಾಯಪ್ರಮಾಣದ ಹಾಗೆ ತಮ್ಮ ಪದ್ಧತಿಯ ಪ್ರಕಾರ ತಮ್ಮ ತಮ್ಮ ಸ್ಥಳದಲ್ಲಿ ನಿಂತು ಯಾಜಕರು ಲೇವಿಯರ ಕೈಯಿಂದ ರಕ್ತವನ್ನು ತೆಗೆದುಕೊಂಡು ಚಿಮುಕಿಸಿದರು. ಯಾಕಂದರೆ ಸಭೆಯಲ್ಲಿ ಅನೇಕರು ಅಪರಿಶುದ್ಧರಾಗಿದ್ದರು, ಲೇವಿಯರು ಅಶುದ್ಧರಾದ ಎಲ್ಲರ ನಿಮಿತ್ತ ಅವರನ್ನು ಕರ್ತನಿಗೆ ಪರಿಶುದ್ಧ ಮಾಡುವ ಹಾಗೆ ಪಸ್ಕದ ಬಲಿಗಳನ್ನು ವಧಿಸುವದಕ್ಕೆ ಇದ್ದರು. ಯಾಕಂದರೆ ಜನರಲ್ಲಿ ಅನೇಕರು--ಎಫ್ರಾ ಯಾಮ್, ಮನಸ್ಸೆ, ಇಸ್ಸಾಕಾರ್, ಜೆಬುಲೂನ್ ಇವ ರಲ್ಲಿ ಅನೇಕರು ತಮ್ಮನ್ನು ಶುದ್ಧ ಮಾಡಿಕೊಳ್ಳದೆ, ಬರೆಯಲ್ಪಟ್ಟ ಪ್ರಕಾರವಲ್ಲದೆ ಪಸ್ಕವನ್ನು ಉಂಡರು. ಆದರೆ ಹಿಜ್ಕೀಯನು ಅವರಿಗೋಸ್ಕರ ಪ್ರಾರ್ಥಿಸಿಯಾವನಾದರೂ ಪರಿಶುದ್ಧ ಸ್ಥಾನದ ಶುದ್ಧಿಯ ಪ್ರಕಾರ ಶುಚಿಯಾಗದೆ ಇದ್ದರೂ ತನ್ನ ಪಿತೃಗಳ ಕರ್ತನಾದ ದೇವರಾಗಿರುವ ದೇವರನ್ನು ಹುಡುಕಲು ತನ್ನ ಹೃದಯ ವನ್ನು ಸಿದ್ಧಮಾಡುವವನ ಪಾಪವನ್ನು ದಯವುಳ್ಳ ಕರ್ತನು ಮುಚ್ಚಲಿ ಎಂದು ಹೇಳಿದನು.
- Job 1:5 ಯೋಬನು 1:5ಔತಣದ ದಿನಗಳು ಮುಗಿದ ಬಳಿಕ ಯೋಬನು ಅವರನ್ನು ಕರೆಕಳುಹಿಸಿ ಅವರನ್ನು ಶುದ್ಧಿ ಮಾಡಿ ಬೆಳಿಗ್ಗೆ ಎದ್ದು ಅವರೆಲ್ಲರ ಲೆಕ್ಕದ ಪ್ರಕಾರ ದಹನಬಲಿಗಳನ್ನು ಅರ್ಪಿಸುತ್ತಿದ್ದನು; ಯೋಬನುಒಂದುವೇಳೆ ನನ್ನ ಕುಮಾರರು ಪಾಪ ಮಾಡಿ ತಮ್ಮ ಹೃದಯಗಳಲ್ಲಿ ದೇವರನ್ನು ಶಪಿಸಿರಬಹುದು ಅಂದು ಕೊಂಡನು. ಹೀಗೆಯೇ ಯೋಬನು ಕ್ರಮವಾಗಿ ಮಾಡುತ್ತಿದ್ದನು.
- Psalm 51:7 ಕೀರ್ತನೆಗಳು 51:7ಹಿಸ್ಸೋಪ್ನಿಂದ ನನ್ನನ್ನು ತೊಳೆ; ಆಗ ನಾನು ಶುಚಿಯಾಗುವೆನು. ನನ್ನನ್ನು ತೊಳೆ, ಆಗ ಹಿಮಕ್ಕಿಂತ ಬಿಳುಪಾಗುವೆನು.
- Genesis 35:2 ಆದಿಕಾಂಡ 35:2ಆಗ ಯಾಕೋಬನು ತನ್ನ ಮನೆಯವರಿಗೂ ತನ್ನ ಸಂಗಡ ಇದ್ದವರೆಲ್ಲರಿಗೂ--ನಿಮ್ಮ ಮಧ್ಯದಲ್ಲಿರುವ ಅನ್ಯದೇವ ರುಗಳನ್ನು ತೆಗೆದುಹಾಕಿ ಶುದ್ಧರಾಗಿರಿ; ನೀವು ನಿಮ್ಮ ಬಟ್ಟೆಗಳನ್ನು ಬದಲಾಯಿಸಿರಿ;
- Numbers 19:11–20 ಅರಣ್ಯಕಾಂಡ 19:11–20ಮನುಷ್ಯನ ಹೆಣವನ್ನು ಮುಟ್ಟಿದವನು ಏಳು ದಿನಗಳವರೆಗೆ ಅಶುದ್ಧನಾಗಿರಬೇಕು. ಅವನು ಇದ ರಿಂದ ಮೂರನೇ ದಿವಸದಲ್ಲಿ ತನ್ನನ್ನು ಶುದ್ಧೀಕರಿಸಿ ಕೊಂಡು ಏಳನೇ ದಿವಸದಲ್ಲಿ ಶುದ್ಧನಾಗಬೇಕು; ಆದರೆ ಅವನು ಮೂರನೇ ದಿವಸದಲ್ಲಿ ತನ್ನನ್ನು ಶುದ್ಧಮಾಡಿ ಕೊಳ್ಳದಿದ್ದರೆ ಏಳನೇ ದಿವಸದಲ್ಲಿ ಶುದ್ಧನಾಗಲಾರನು. ಸತ್ತ ಮನುಷ್ಯನ ಹೆಣವನ್ನು ಮುಟ್ಟಿ ಶುದ್ಧಮಾಡಿ ಕೊಳ್ಳದ ಯಾವನಾದರೂ ಕರ್ತನ ಗುಡಾರವನ್ನು ಹೊಲೆಮಾಡುತ್ತಾನೆ; ಅವನು ಇಸ್ರಾಯೇಲಿನವರೊ ಳಗಿಂದ ತೆಗೆದುಹಾಕಲ್ಪಡಲಿ; ಪ್ರತ್ಯೇಕಿಸಲ್ಪಟ್ಟ ನೀರು ಅವನ ಮೇಲೆ ಚೆಲ್ಲಲ್ಪಡದ ಕಾರಣ ಅಶುದ್ಧನಾಗಿದ್ದಾನೆ; ಅವನ ಅಶುದ್ಧತ್ವವು ಇನ್ನೂ ಅವನ ಮೇಲೆ ಇದೆ. ಒಬ್ಬ ಮನುಷ್ಯನು ಡೇರೆಯಲ್ಲಿ ಸತ್ತಾಗ ಅವನ ವಿಷಯವಾದ ಆಜ್ಞೆ ಏನಂದರೆ--ಆ ಡೇರೆಯೊಳಗೆ ಪ್ರವೇಶಿಸುವವರೆಲ್ಲರೂ ಡೇರೆಯಲ್ಲಿರುವವರೆ ಲ್ಲರೂ ಏಳು ದಿವಸಗಳ ವರೆಗೆ ಅಶುದ್ಧರಾಗಿರಬೇಕು. ಮುಚ್ಚಳ ಹಾಕದೆ ತೆರೆದಿರುವ ಸಾಮಾನುಗಳೆಲ್ಲಾ ಅಶುದ್ಧವಾಗಿರಬೇಕು. ಇದಲ್ಲದೆ ಹೊಲದಲ್ಲಿ ಕತ್ತಿ ಯಿಂದ ಕೊಲ್ಲಲ್ಪಟ್ಟವನನ್ನಾದರೂ ಮನುಷ್ಯನ ಎಲುಬ ನ್ನಾದರೂ ಸಮಾಧಿಯನ್ನಾದರೂ ಮುಟ್ಟಿದವರೆಲ್ಲರು ಏಳು ದಿವಸ ಅಪವಿತ್ರರಾಗಿರಬೇಕು. ಅಪವಿತ್ರನಾದವನಿಗೋಸ್ಕರ ಸುಡಲ್ಪಟ್ಟ ಪಾಪ ಕಳೆಯುವ ಹಸುವಿನ ಬೂದಿಯನ್ನು ತಕ್ಕೊಂಡು ಒಂದು ಪಾತ್ರೆಯೊಳಗಿಟ್ಟು ಅದರ ಮೇಲೆ ಹರಿಯುವ ನೀರನ್ನು ಹಾಕಬೇಕು ಪವಿತ್ರನಾದವನೊಬ್ಬನು ಹಿಸ್ಸೋಪನ್ನು ತಕ್ಕೊಂಡು ನೀರಿನಲ್ಲಿ ಅದ್ದಿ ಆ ಡೇರೆಯ ಮೇಲೆಯೂ ಸಮಸ್ತ ಸಾಮಾನುಗಳ ಮೇಲೆಯೂ ಅದರಲ್ಲಿರುವ ಮನುಷ್ಯರ ಮೇಲೆಯೂ ಎಲುಬನ್ನಾದರೂ ಕೊಲ್ಲಲ್ಪಟ್ಟ ವನನ್ನಾದರೂ ಸತ್ತವನನ್ನಾದರೂ ಸಮಾಧಿಯನ್ನಾದರೂ ಮುಟ್ಟಿದವನ ಮೇಲೆ ಚಿಮುಕಿಸಬೇಕು. ಪವಿತ್ರನಾ ದವನು ಅಪವಿತ್ರನಾದವನ ಮೇಲೆ ಮೂರನೇ ದಿವಸ ದಲ್ಲಿಯೂ ಏಳನೇ ದಿವಸದಲ್ಲಿಯೂ ಚಿಮುಕಿಸಲಿ. ಏಳನೇ ದಿವಸದಲ್ಲಿ ಅವನು ತನ್ನನ್ನು ಪವಿತ್ರಮಾಡಿ ಕೊಂಡು ತನ್ನ ವಸ್ತ್ರಗಳನ್ನು ಒಗೆದುಕೊಂಡು ಅವನು ಸ್ನಾನಮಾಡಿ ಸಾಯಂಕಾಲದಲ್ಲಿ ಪವಿತ್ರನಾಗುವನು. ಆದರೆ ಅಪವಿತ್ರನಾಗಿದ್ದು ತನ್ನನ್ನು ಶುದ್ಧಪಡಿಸಿ ಕೊಳ್ಳದವನು ಸಭೆಯ ಮಧ್ಯದಿಂದ ತೆಗೆದು ಹಾಕಲ್ಪ ಡಲಿ; ಅವನು ಕರ್ತನ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಿದ್ದಾನೆ; ಪ್ರತ್ಯೇಕಿಸಲ್ಪಟ್ಟ ನೀರು ಅವನ ಮೇಲೆ ಚಿಮುಕಿಸಲ್ಪಡಲಿಲ್ಲ; ಅವನು ಅಪವಿತ್ರನೇ.