Ezekiel · chapter 20 · verse 18
Ezekiel 20:18 in Kannada
ಆದರೆ ನಾನು ಅರಣ್ಯದಲ್ಲಿ ಅವರ ಮಕ್ಕಳಿಗೆ ಹೇಳಿದ್ದೇನಂದರೆ--ನಿಮ್ಮ ತಂದೆಗಳ ನಿಯಮಗಳಲ್ಲಿ ನಡೆಯಬೇಡಿರಿ, ಅವರ ನ್ಯಾಯಗಳನ್ನು ಅನುಸರಿಸ ಬೇಡಿರಿ, ಅವರ ವಿಗ್ರಹಗಳಿಂದ ನಿಮ್ಮನ್ನು ಅಪವಿತ್ರ ಮಾಡಿಕೊಳ್ಳಬೇಡಿರಿ;
Aadare naanu aranyadalli avara makkalige heliddenandare--nimma tandegala niyamagalalli nadeyabediri, avara nyaayagalannu anusarisa bediri, avara vigrahagalinda nimmannu apavitra maadikollabediri;
Ezekiel 20:18 in English
- King James Version (KJV)
- But I said unto their children in the wilderness, Walk ye not in the statutes of your fathers, neither observe their judgments, nor defile yourselves with their idols:
- World English Bible (WEB)
- I said to their children in the wilderness, ‘Don’t walk in the statutes of your fathers. Don’t observe their ordinances or defile yourselves with their idols.
- American Standard Version (ASV)
- And I said unto their children in the wilderness, Walk ye not in the statutes of your fathers, neither observe their ordinances, nor defile yourselves with their idols.
- Bible in Basic English (BBE)
- And I said to their children in the waste land, Do not be guided by the rules of your fathers or keep their orders or make yourselves unclean with their images:
- Darby Translation (DBY)
- And I said unto their children in the wilderness, Walk not in the statutes of your fathers, neither keep their ordinances, nor defile yourselves with their idols.
- Webster's Bible (WBS)
- But I said to their children in the wilderness, Walk ye not in the statutes of your fathers, neither observe their judgments, nor defile yourselves with their idols:
- Young's Literal Translation (YLT)
- And I say to their sons in the wilderness: In the statutes of your fathers ye walk not, And their judgments ye do not observe, And with their idols ye are not defiled.
Read in context
- 16ಅವರ ಹೃದಯವು ತಮ್ಮ ವಿಗ್ರಹಗಳಲ್ಲಿ ಆಸಕ್ತವಾಗಿ ನನ್ನ ನಿಯಮಗಳನ್ನು ಅನುಸರಿಸದೆ ನಿರಾಕರಿಸಿ ನಾನು ನೇಮಿಸಿದ ಸಬ್ಬತ್ ದಿನಗಳನ್ನು ಅಪವಿತ್ರ ಮಾಡಿದರು.
- 17ಆದರೂ ಅವರನ್ನು ನಾನು ನಾಶಮಾಡದ ಹಾಗೆ ನನ್ನ ಕಣ್ಣು ಕನಿಕರಿಸಿತು; ನಾನು ಅವರನ್ನು ಅರಣ್ಯದಲ್ಲಿ ಸಂಪೂರ್ಣವಾಗಿ ಮುಗಿಸಿಬಿಡ ಲಿಲ್ಲ.
- 18ಆದರೆ ನಾನು ಅರಣ್ಯದಲ್ಲಿ ಅವರ ಮಕ್ಕಳಿಗೆ ಹೇಳಿದ್ದೇನಂದರೆ--ನಿಮ್ಮ ತಂದೆಗಳ ನಿಯಮಗಳಲ್ಲಿ ನಡೆಯಬೇಡಿರಿ, ಅವರ ನ್ಯಾಯಗಳನ್ನು ಅನುಸರಿಸ ಬೇಡಿರಿ, ಅವರ ವಿಗ್ರಹಗಳಿಂದ ನಿಮ್ಮನ್ನು ಅಪವಿತ್ರ ಮಾಡಿಕೊಳ್ಳಬೇಡಿರಿ;
- 19ನಾನೇ ಕರ್ತನೂ ನಿಮ್ಮ ದೇವರೂ ಆಗಿದ್ದೇನೆ ನನ್ನ ನಿಯಮಗಳಲ್ಲಿಯೇ ನಡೆ ಯಿರಿ ನ್ಯಾಯಗಳನ್ನು ಕೈಕೊಂಡು ಅವುಗಳನ್ನೇ ಮಾಡಿರಿ;
- 20ನನ್ನ ಸಬ್ಬತ್ತುಗಳನ್ನು ಪರಿಶುದ್ಧಮಾಡಿರಿ ನಾನೇ ನಿಮ್ಮ ದೇವರಾದ ಕರ್ತನು ಎಂದು ಅವು ನಿಮಗೂ ನನಗೂ ನೀವು ತಿಳಿಯುವ ಹಾಗೆ ಗುರುತುಗಳಾಗಿರುವವು.
Cross references
- Psalm 78:6–8 ಕೀರ್ತನೆಗಳು 78:6–8ಮುಂದಿನ ವಂಶವು ಅಂದರೆ ಹುಟ್ಟುವ ದಕ್ಕಿರುವ ಮಕ್ಕಳು ತಿಳಿದು, ಎದ್ದು, ತಮ್ಮ ಮಕ್ಕಳಿಗೆ ವಿವರಿಸಲಾಗಿ ಇವರು ದೇವರಲ್ಲಿ ತಮ್ಮ ನಿರೀಕ್ಷೆ ಇಡುವಂತೆಯೂ ದೇವರ ಕ್ರಿಯೆಗಳನ್ನು ಮರೆತುಬಿಡ ದಂತೆಯೂ ಆತನ ಆಜ್ಞೆಗಳನ್ನು ಕೈಕೊಂಡು ತಮ್ಮ ತಂದೆಗಳ ಹಾಗೆ ತಮ್ಮ ಹೃದಯವನ್ನು ಸ್ಥಿರಪಡಿಸು ವಂತೆಯೂ ತಮ್ಮ ಆತ್ಮವು ದೇವರೊಂದಿಗೆ ಸ್ಥಿರವಾಗು ವಂತೆಯೂ ಗರ್ವದಿಂದ ತಿರುಗಿ ಬೀಳುವಂಥ ವಂಶ ವಾಗಿರದ ಹಾಗೆಯೂ ಅದನ್ನು ತಮ್ಮ ಮಕ್ಕಳಿಗೆ ತಿಳಿ ಯಮಾಡಬೇಕೆಂದು ನಮ್ಮ ತಂದೆಗಳಿಗೆ ಆತನು ಆಜ್ಞಾಪಿಸಿದನು.
- Ezekiel 20:7 ಯೆಹೆಜ್ಕೇಲನು 20:7ಆಮೇಲೆ ನಾನು ಅವರಿಗೆ ನಿಮ್ಮಲ್ಲಿ ಒಬ್ಬೊಬ್ಬನು ತಮ್ಮ ತಮ್ಮ ಕಣ್ಣುಗಳಿಗೆ ಅಸಹ್ಯವಾದವುಗಳನ್ನು ಬಿಸಾಡಿ. ಐಗುಪ್ತದ ವಿಗ್ರಹಗಳಿಂದ ನಿಮ್ಮನ್ನು ಅಶುದ್ಧಪಡಿಸಿ ಕೊಳ್ಳಬೇಡಿರಿ. ನಿಮ್ಮ ದೇವರಾದ ಕರ್ತನು ನಾನಾಗಿರು ವೆನು ಅಂದೆನು.
- 1 Peter 1:18 1 ಪೇತ್ರನು 1:18ನಿಮ್ಮ ತಂದೆ ಗಳಿಂದ ಕಲಿತುಕೊಂಡ ಸಂಪ್ರದಾಯದ ವ್ಯರ್ಥವಾದ ನಡವಳಿಕೆಯಿಂದ ನಿಮಗೆ ಬಿಡುಗಡೆಯಾದದ್ದು ನಶಿಸಿ ಹೋಗುವ ಬೆಳ್ಳಿ ಬಂಗಾರದಿಂದಲ್ಲ;
- Acts 7:51 ಅಪೊಸ್ತಲರ ಕೃತ್ಯಗಳು 7:51ಬಗ್ಗದ ಕುತ್ತಿಗೆಯುಳ್ಳವರೇ, ಹೃದಯದಲ್ಲಿಯೂ ಕಿವಿಗಳಲ್ಲಿಯೂ ಸುನ್ನತಿಯಿಲ್ಲದವರೇ, ನಿಮ್ಮ ಪಿತೃಗಳು ಹೇಗೋ ಹಾಗೆಯೇ ನೀವು ಯಾವಾಗಲೂ ಪವಿತ್ರಾತ್ಮನನ್ನು ಎದುರಿಸುವವರಾಗಿದ್ದೀರಿ.
- Deuteronomy 4:3–6 ಧರ್ಮೋಪದೇಶಕಾಂಡ 4:3–6ಬಾಳ್ಪೆಯೋರನ ವಿಷಯದಲ್ಲಿ ಕರ್ತನು ಮಾಡಿದವುಗಳನ್ನು ನಿಮ್ಮ ಕಣ್ಣುಗಳು ನೋಡಿದವು; ಬಾಳ್ಪೆ ಯೋರನನ್ನು ಹಿಂಬಾಲಿಸಿದ ಮನುಷ್ಯರನ್ನೆಲ್ಲಾ ನಿನ್ನ ದೇವರಾದ ಕರ್ತನು ನಿಮ್ಮ ಮಧ್ಯದಲ್ಲಿಂದ ನಾಶ ಮಾಡಿದನಲ್ಲವೇ? ಆದರೆ ನಿಮ್ಮ ದೇವರಾದ ಕರ್ತನಿಗೆ ಅಂಟಿಕೊಂಡವರಾದ ನೀವೆಲ್ಲರು ಇಂದು ಬದುಕುತ್ತೀರಿ. ಇಗೋ, ನೀವು ಹೋಗಿ ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ನೀವು ಮಾಡಬೇಕೆಂದು ನನ್ನ ದೇವರಾದ ಕರ್ತನು ನನಗೆ ಆಜ್ಞಾಪಿಸಿದಂತೆ ನಿಯಮಗಳನ್ನೂ ನ್ಯಾಯಗಳನ್ನೂ ನಿಮಗೆ ಬೋಧಿಸಿದ್ದೇನೆ. ಹೀಗಿರುವ ದರಿಂದ ನೀವು ಅವುಗಳನ್ನು ಕೈಕೊಂಡು ಅನುಸರಿಸಿರಿ; ಯಾಕಂದರೆ ಜನಾಂಗಗಳ ಮುಂದೆ ಇರುವ ನಿಮ್ಮ ಜ್ಞಾನವೂ ನಿಮ್ಮ ವಿವೇಕವೂ ಇದೇ ಆಗಿದೆ. ಅವರು ಈ ನಿಯಮಗಳನ್ನೆಲ್ಲಾ ಕೇಳಿ--ನಿಶ್ಚಯವಾಗಿ ಈ ದೊಡ್ಡ ಜನಾಂಗವು ಜ್ಞಾನವೂ ವಿವೇಕವೂ ಉಳ್ಳ ಜನವಾಗಿದೆ ಅನ್ನುವರು.
- Zechariah 1:2–4 ಜೆಕರ್ಯ 1:2–4ಕರ್ತನು ನಿಮ್ಮ ಪಿತೃಗಳ ಮೇಲೆ ಬಹು ಕೋಪಗೊಂಡಿ ದ್ದಾನೆ. ಆದದರಿಂದ ನೀನು ಅವರಿಗೆ ಹೇಳತಕ್ಕದ್ದೇ ನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನನ್ನ ಕಡೆಗೆ ತಿರುಗಿ ಕೊಳ್ಳಿರಿ, ಆಗ ನಾನು ನಿಮ್ಮ ಬಳಿಗೆ ತಿರುಗಿಕೊಳ್ಳುವೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ. ನೀವು ನಿಮ್ಮ ಪಿತೃಗಳ ಹಾಗಿರಬೇಡಿರಿ; ಅವರಿಗೆ ಪೂರ್ವದ ಪ್ರವಾದಿಗಳು ಕೂಗಿ--ನಿಮ್ಮ ಕೆಟ್ಟ ಮಾರ್ಗಗಳನ್ನೂ ನಿಮ್ಮ ಕೆಟ್ಟ ಕ್ರಿಯೆಗಳನ್ನೂ ಬಿಟ್ಟು ತಿರುಗಿರಿ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆಂದು ಹೇಳಿದರು; ಆದರೆ ಅವರು ಕೇಳಲಿಲ್ಲ; ನನ್ನಲ್ಲಿ ಲಕ್ಷ್ಯ ವಿಡಲಿಲ್ಲವೆಂದು ಕರ್ತನು ಅನ್ನುತ್ತಾನೆ.
- Jeremiah 3:9 ಯೆರೆಮೀಯ 3:9ಅವಳ ಸೂಳೆತನದ ಸುದ್ದಿಯಿಂದ ಅವಳು ದೇಶವನ್ನು ಅಪವಿತ್ರ ಮಾಡಿ ಕಲ್ಲುಗಳ ಸಂಗ ಡಲೂ ಮರಗಳ ಸಂಗಡಲೂ ವ್ಯಭಿಚಾರ ಮಾಡಿದಳು.
- Luke 11:47–48 ಲೂಕನು 11:47–48ನಿಮಗೆ ಅಯ್ಯೋ! ಯಾಕಂದರೆ ನಿಮ್ಮ ತಂದೆಗಳು ಪ್ರವಾದಿಗಳನ್ನು ಕೊಂದರು. ನೀವು ಅವರ ಸಮಾಧಿಗಳನ್ನು ಕಟ್ಟುತ್ತೀರಿ. ಇದರಿಂದ ನಿಜವಾ ಗಿಯೂ ನಿಮ್ಮ ತಂದೆಗಳ ಕೃತ್ಯಗಳನ್ನು ನೀವು ಒಪ್ಪಿ ಕೊಳ್ಳುವಂತೆ ಸಾಕ್ಷೀಕರಿಸುತ್ತೀರಿ; ಯಾಕಂದರೆ ಅವರು ನಿಜವಾಗಿಯೂ ಅವರನ್ನು ಕೊಂದರು; ನೀವು ಅವರ ಸಮಾಧಿಗಳನ್ನು ಕಟ್ಟುತ್ತೀರಿ.
- Jeremiah 2:7 ಯೆರೆಮೀಯ 2:7ನಿಮ್ಮನ್ನು ಸಮೃದ್ಧಿಯಾದ ದೇಶಕ್ಕೆ ಅದರ ಫಲವನ್ನೂ ಮೇಲನ್ನೂ ತಿನ್ನುವ ಹಾಗೆ ಕರಕೊಂಡು ಬಂದೆನು. ಆದರೆ ನೀವು ಬಂದು ನನ್ನ ದೇಶವನ್ನು ಅಶುದ್ಧಮಾಡಿ, ನನ್ನ ಸ್ವಾಸ್ತ್ಯವನ್ನು ಅಸಹ್ಯ ಮಾಡಿದಿರಿ.
- Numbers 32:13–15 ಅರಣ್ಯಕಾಂಡ 32:13–15ಹಾಗೆ ಕರ್ತನು ಇಸ್ರಾಯೇಲ್ಯರ ಮೇಲೆ ಕೋಪೋ ದ್ರೇಕಗೊಂಡದ್ದರಿಂದ ಆತನ ದೃಷ್ಟಿಯಲ್ಲಿ ಕೆಟ್ಟತನವನ್ನು ಮಾಡಿದ ಸಮಸ್ತ ಸಂತತಿಯು ನಾಶವಾಗುವ ವರೆಗೆ ಅವರನ್ನು ಅರಣ್ಯದಲ್ಲಿ ನಾಲ್ವತ್ತು ವರುಷ ಅಲೆದಾಡು ವಂತೆ ಮಾಡಿದನು. ಇಗೋ, ಕರ್ತನ ಕೋಪವು ಇಸ್ರಾಯೇಲ್ ಕಡೆಗೆ ಇನ್ನೂ ಹೆಚ್ಚಾಗುವ ಹಾಗೆ ನೀವು ನಿಮ್ಮ ಪಿತೃಗಳಿಗೆ ಬದಲಾಗಿ ಪಾಪಿಗಳಾದ ಮನುಷ್ಯರ ಅಭಿವೃದ್ಧಿಯಾಗಿ ನಿಂತಿದ್ದೀರಿ. ನೀವು ಆತನ ಕಡೆಯಿಂದ ತಿರುಗಿದರೆ ಆತನು ಇನ್ನೂ ಹೆಚ್ಚಾಗಿ ಅವರನ್ನು ಅರಣ್ಯದಲ್ಲಿ ಇರಿಸಿ ಬಿಡುವನು; ನೀವು ಈ ಸಮಸ್ತ ಜನರನ್ನು ನಾಶಮಾಡುವಿರಿ ಎಂದು ಹೇಳಿದನು.
- Numbers 14:32–33 ಅರಣ್ಯಕಾಂಡ 14:32–33ನಿಮ್ಮ ವಿಷಯವಾಗಿಯಾದರೋ ನಿಮ್ಮ ಹೆಣಗಳು ಈ ಅರಣ್ಯದಲ್ಲಿ ಬೀಳುವವು. ಇದಲ್ಲದೆ ನಿಮ್ಮ ಮಕ್ಕಳು ನಾಲ್ವತ್ತು ವರುಷ ಅರಣ್ಯದಲ್ಲಿ ಅಲೆದಾಡಿ ನಿಮ್ಮ ಹೆಣಗಳು ಅರಣ್ಯದಲ್ಲಿ ಹಾಳಾಗಿ ಹೋಗುವ ತನಕ ನಿಮ್ಮ ಜಾರತ್ವ ಗಳನ್ನು ತಾಳಿಕೊಳ್ಳುವರು.