2 Chronicles · chapter 6 · verse 1
2 Chronicles 6:1 in Kannada
ಆಗ ಸೊಲೊಮೋನನು--ಕಾರ್ಗತ್ತಲಲ್ಲಿ ವಾಸವಾಗಿರುವೆನೆಂದು ಕರ್ತನು ಹೇಳಿದ್ದಾನೆ.
Aaga solomonanu--kaargattalalli vaasavaagiruvenendu kartanu heliddaane.
2 Chronicles 6:1 in English
- King James Version (KJV)
- Then said Solomon, The LORD hath said that he would dwell in the thick darkness.
- World English Bible (WEB)
- Then Solomon said, “The LORD has said that he would dwell in the thick darkness.
- American Standard Version (ASV)
- Then spake Solomon, Jehovah hath said that he would dwell in the thick darkness.
- Bible in Basic English (BBE)
- Then Solomon said, O Lord, to the sun you have given the heaven for a living-place, but your living-place was not seen by men,
- Darby Translation (DBY)
- Then said Solomon: Jehovah said that he would dwell in the thick darkness.
- Webster's Bible (WBS)
- Then said Solomon, The LORD hath said that he would dwell in the thick darkness.
- Young's Literal Translation (YLT)
- Then said Solomon, 'Jehovah said — to dwell in thick darkness,
Read in context
- 1ಆಗ ಸೊಲೊಮೋನನು--ಕಾರ್ಗತ್ತಲಲ್ಲಿ ವಾಸವಾಗಿರುವೆನೆಂದು ಕರ್ತನು ಹೇಳಿದ್ದಾನೆ.
- 2ಆದರೆ ನಿನಗೆ ನಿವಾಸದ ಆಲಯವನ್ನೂ ನೀನು ಯುಗಯುಗಾಂತರಗಳಿಗೂ ವಾಸಮಾಡತಕ್ಕ ಸ್ಥಾನವನ್ನೂ ನಾನು ಕಟ್ಟಿಸಿದ್ದೇನೆ ಅಂದನು.
- 3ಅರಸನು ಇಸ್ರಾಯೇಲಿನ ಸಭೆಯವರ ಕಡೆಗೆ ತಿರುಗಿಕೊಂಡು ಆಶೀರ್ವದಿಸಿದಾಗ ಇಸ್ರಾಯೇಲಿನ ಸಭೆಯು ನಿಂತಿತ್ತು.
Cross references
- Exodus 20:21 ವಿಮೋಚನಕಾಂಡ 20:21ಆಗ ಜನರು ದೂರದಲ್ಲಿ ನಿಂತರು. ಮೋಶೆಯು ದೇವರಿದ್ದ ಕಾರ್ಗತ್ತಲೆಯ ಹತ್ತಿರ ಬಂದನು.
- Psalm 18:8–11 ಕೀರ್ತನೆಗಳು 18:8–11ಆತನ ಮೂಗಿನಿಂದ ಹೊಗೆ ಎದ್ದು ಆತನ ಬಾಯಿಯೊಳಗಿಂದ ಬೆಂಕಿ ದಹಿಸಿತು; ಕೆಂಡಗಳು ಅದರಿಂದ ಉರಿದವು. ಆತನು ಆಕಾಶ ಗಳನ್ನು ಬೊಗ್ಗಿಸಿ ಇಳಿದನು; ಆತನ ಪಾದಗಳ ಕೆಳಗೆ ಕಾರ್ಗತ್ತಲು ಇತ್ತು. ಆತನು ಕೆರೂಬಿನ ಮೇಲೆ ಕೂತು ಹಾರಿದನು; ಹೌದು, ಗಾಳಿಯ ರೆಕ್ಕೆಗಳ ಮೇಲೆ ಹಾರಿದನು. ಕತ್ತಲನ್ನು ತನಗೆ ಮರೆಯ ಸ್ಥಳವಾಗಿ ಯೂ ಕತ್ತಲಿನ ನೀರುಗಳನ್ನು ಆಕಾಶದ ಮಂದವಾದ ಮೋಡಗಳನ್ನು ತನ್ನ ಸುತ್ತಲು ಡೇರೆಯಾಗಿಯೂ ಮಾಡಿ ದನು.
- Leviticus 16:2 ಯಾಜಕಕಾಂಡ 16:2ಆಗ ಕರ್ತನು ಮೋಶೆಗೆ--ಅವನು ಸಾಯದಂತೆ ಮಂಜೂಷದ ಮೇಲಿರುವ ಕರುಣಾಸನದ ಮುಂದಿ ರುವ ಪರದೆಯ ಒಳಗೆ ಪರಿಶುದ್ಧವಾದ ಸ್ಥಳಕ್ಕೆ ಎಲ್ಲಾ ಸಮಯಗಳಲ್ಲಿ ಬಾರದಿರಲಿ; ಕರುಣಾಸನದ ಮೇಲೆ ಮೇಘದೊಳಗೆ ನಾನು ಪ್ರತ್ಯಕ್ಷನಾಗುವೆನು.
- 1 Kings 8:12–50 1 ಅರಸುಗಳು 8:12–50ಆಗ ಸೊಲೊಮೋನನು--ಕಾರ್ಗತ್ತಲಲ್ಲಿ ವಾಸ ವಾಗಿರುವೆನೆಂದು ಕರ್ತನು ಹೇಳಿದ್ದಾನೆ. ನಿನಗೆ ನಿವಾಸದ ಮಂದಿರವನ್ನು ನೀನು ಎಂದೆಂದಿಗೂ ಅದರಲ್ಲಿ ವಾಸವಾಗಿರುವ ಹಾಗೆ ಶಾಶ್ವತ ಸ್ಥಳವನ್ನು ನಿಜವಾಗಿಯೂ ಕಟ್ಟಿಸಿದ್ದೇನೆ ಎಂದು ಹೇಳಿದನು. ಅರಸನು ತನ್ನ ಮುಖವನ್ನು ತಿರುಗಿಸಿ ಇಸ್ರಾಯೇ ಲಿನ ಸಭೆಯನ್ನೆಲ್ಲಾ ಆಶೀರ್ವದಿಸಿದನು. (ಇಸ್ರಾ ಯೇಲಿನ ಸಭೆಯೆಲ್ಲಾ ನಿಂತಿರುವಾಗ) ಅವನುನನ್ನ ತಂದೆಯಾದ ದಾವೀದನ ಸಂಗಡ ಮಾತನಾಡಿ ತನ್ನ ಕೈಯಿಂದ ನೆರವೇರಿಸಿದ ಇಸ್ರಾಯೇಲಿನ ದೇವ ರಾದ ಕರ್ತನು ಸ್ತುತಿಸಲ್ಪಡಲಿ. ಆತನು ಹೇಳಿದ್ದೇ ನಂದರೆ-- ನನ್ನ ಜನರಾದ ಇಸ್ರಾಯೇಲ್ಯರನ್ನು ಐಗುಪ್ತ ದೇಶದಿಂದ ಬರಮಾಡಿದ ದಿನ ಮೊದಲು ಗೊಂಡು ನನ್ನ ನಾಮವು ಅದರಲ್ಲಿ ಇರುವ ನಿಮಿತ್ತ ಮಂದಿರವನ್ನು ಕಟ್ಟುವದಕ್ಕೆ ಇಸ್ರಾಯೇಲಿನ ಸಮಸ್ತ ಗೋತ್ರಗಳೊಳಗಿಂದ ಪಟ್ಟಣವನ್ನು ನಾನು ಆದು ಕೊಳ್ಳದೆ ನನ್ನ ಜನರಾದ ಇಸ್ರಾಯೇಲಿನ ಮೇಲೆ ಇರಲು ನಾನು ದಾವೀದನನ್ನು ಆದುಕೊಂಡೆನು ಅಂದನು. ಇಸ್ರಾಯೇಲಿನ ದೇವರಾದ ಕರ್ತನ ನಾಮಕ್ಕೆ ಮಂದಿರವನ್ನು ಕಟ್ಟಬೇಕೆಂದು ನನ್ನ ತಂದೆ ಯಾದ ದಾವೀದನಿಗೆ ಮನಸ್ಸಿತ್ತು. ಆಗ ಕರ್ತನು ನನ್ನ ತಂದೆಯಾದ ದಾವೀದನಿಗೆ--ನನ್ನ ನಾಮಕ್ಕೆ ಮಂದಿರವನ್ನು ಕಟ್ಟಬೇಕೆಂದು ನಿನಗೆ ಮನಸ್ಸಾಗಿತ್ತಲ್ಲಾ, ನೀನು ಚೆನ್ನಾಗಿ ಮಾಡಿದಿ. ಆದಾಗ್ಯೂ ಮಂದಿರವನ್ನು ನೀನು ಕಟ್ಟಿಸಬೇಡ; ನಿನ್ನಿಂದ ಹುಟ್ಟುವ ಮಗನು, ಅವನೇ ನನ್ನ ಹೆಸರಿಗಾಗಿ ಮಂದಿರವನ್ನು ಕಟ್ಟಿಸುವನು ಅಂದನು. ಈಗ ಕರ್ತನು ತಾನು ಹೇಳಿದ ವಾಕ್ಯ ವನ್ನು ಪೂರೈಸಿದ್ದಾನೆ. ನಾನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ಎದ್ದು, ಕರ್ತನು ಮಾತು ಕೊಟ್ಟ ಪ್ರಕಾರ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಂಡು ಇಸ್ರಾಯೇಲಿನ ದೇವರಾದ ಕರ್ತನ ನಾಮಕ್ಕೆ ಮಂದಿರವನ್ನು ಕಟ್ಟಿಸಿದ್ದೇನೆ. ಇದಲ್ಲದೆ ಕರ್ತನು ನಮ್ಮ ಪಿತೃಗಳನ್ನು ಐಗುಪ್ತದೇಶದಿಂದ ಬರ ಮಾಡಿದಾಗ ಅವನ ಸಂಗಡ ಮಾಡಿದ ಒಡಂಬಡಿ ಕೆಯು ಇರುವ ಮಂಜೂಷಕ್ಕೋಸ್ಕರ ಸ್ಥಳವನ್ನು ಮಾಡಿಸಿ ದೆನು ಅಂದನು. ಆಗ ಸೊಲೊಮೋನನು ಇಸ್ರಾಯೇಲಿನ ಸಭೆ ಯವರ ಸಮ್ಮುಖದಲ್ಲಿ ದೇವರ ಬಲಿಪೀಠದ ಮುಂದೆ ನಿಂತು ಆಕಾಶದ ಕಡೆಗೆ ತನ್ನ ಕೈಗಳನ್ನು ಎತ್ತಿ ಹೇಳಿದ್ದೇ ನಂದರೆ-- ಇಸ್ರಾಯೇಲಿನ ದೇವರಾದ ಕರ್ತನೇ, ಮೇಲಿರುವ ಆಕಾಶದಲ್ಲಾದರೂ ಕೆಳಗಿರುವ ಭೂಮಿ ಯಲ್ಲಾದರೂ ನಿನ್ನ ಹಾಗೆ ದೇವರು ಯಾರೂ ಇಲ್ಲ. ಸಂಪೂರ್ಣವಾದ ಹೃದಯದಿಂದ ನಡೆಯುವ ನಿನ್ನ ಸೇವಕರ ಒಡಂಬಡಿಕೆಯನ್ನೂ ಕೃಪೆಯನ್ನೂ ನೆರವೇರಿ ಸುವಾತನೇ, ನಿನ್ನ ಸೇವಕನಾದಂಥ ನನ್ನ ತಂದೆ ಯಾದ ದಾವೀದನಿಗೆ ವಾಗ್ದಾನಮಾಡಿ ನೆರವೇರಿಸಿದಾ ತನೇ, ನೀನು ನಿನ್ನ ಬಾಯಿಂದ ಹೇಳಿದ್ದನ್ನು ಇಂದಿನ ಪ್ರಕಾರವೇ ನಿನ್ನ ಕೈಯಿಂದ ನೆರವೇರಿಸಿದ ಕಾರಣ ಈಗ ಇಸ್ರಾಯೇಲಿನ ದೇವರಾದ ಕರ್ತನೇ, ನಿನ್ನ ಮಕ್ಕಳು ತಮ್ಮ ಮಾರ್ಗಕ್ಕೆ ಜಾಗ್ರತೆಯಾಗಿದ್ದು ನೀನು ನನ್ನ ಮುಂದೆ ನಡೆದ ಪ್ರಕಾರ ಅವರು ನನ್ನ ಮುಂದೆ ನಡೆದರೆ ಇಸ್ರಾಯೇಲಿನ ಸಿಂಹಾಸನದ ಮೇಲೆ ನನ್ನ ಸಮ್ಮುಖದಲ್ಲಿ ತಪ್ಪದೆ ಕುಳಿತುಕೊಳ್ಳುವಂತೆ ಮಾಡುವೆನು ಎಂದು ನೀನು ನನ್ನ ತಂದೆಯೂ, ನಿನ್ನ ಸೇವಕನಾದ ದಾವೀದನಿಗೆ ಹೇಳಿದ ಮಾತು ನೆರವೇರಿಸು. ಈಗ ಓ ಇಸ್ರಾಯೇಲಿನ ದೇವರೇ, ನನ್ನ ತಂದೆಯಾದ ನಿನ್ನ ಸೇವಕನಾದ ದಾವೀದನಿಗೆ ಹೇಳಿದ ವಾಕ್ಯವು ದೃಢವಾಗಲಿ. ಆದರೆ ದೇವರು ನಿಶ್ಚಯವಾಗಿ ಭೂಮಿಯ ಮೇಲೆ ವಾಸವಾಗಿರುವನೋ? ಇಗೋ, ಆಕಾಶಗಳೂ ಆಕಾಶಾ ಕಾಶಗಳೂ ನಿನ್ನನ್ನು ಹಿಡಿಯಲಾರವು; ಹಾಗಾದರೆ ನಾನು ಕಟ್ಟಿಸಿದ ಈ ಮಂದಿರವು ಹಿಡಿಯುವದು ಹೇಗೆ? ಆದರೆ ನನ್ನ ದೇವರಾದ ಕರ್ತನೇ, ನಿನ್ನ ಸೇವಕನ ಪ್ರಾರ್ಥನೆಗೂ ವಿಜ್ಞಾಪನೆಗೂ ನಿನ್ನ ಸೇವಕನು ನಿನ್ನ ಮುಂದೆ ಪ್ರಾರ್ಥಿಸುವ ಪ್ರಾರ್ಥನೆಯ ಕೂಗನ್ನೂ ಕೇಳು. ನಿನ್ನ ಸೇವಕನು ಈ ಸ್ಥಳದಲ್ಲಿ ಮಾಡುವ ಪ್ರಾರ್ಥನೆಯನ್ನು ನೀನು ಕೇಳುವ ಹಾಗೆ ಅಲ್ಲಿ ನನ್ನ ಹೆಸರಿರುವದೆಂದು ನೀನು ಹೇಳಿದ ಸ್ಥಳವಾದ ಈ ಮಂದಿರದ ಮೇಲೆ ರಾತ್ರಿ ಹಗಲು ನಿನ್ನ ಕಟಾಕ್ಷವಿರಲಿ. ನಿನ್ನ ಸೇವಕನ ವಿಜ್ಞಾಪನೆಯನ್ನೂ ನಿನ್ನ ಜನರಾದ ಇಸ್ರಾಯೇಲ್ಯರ ವಿಜ್ಞಾಪನೆಯನ್ನೂ ಕೇಳು. ಅವರು ಈ ಸ್ಥಳದ ಕಡೆಗೆ ಪ್ರಾರ್ಥಿಸುವಾಗ ನೀನು ಆಕಾಶದಲ್ಲಿ ವಾಸಮಾಡುವ ಸ್ಥಳದಲ್ಲಿ ಕೇಳಿ ಮನ್ನಿಸು. ಯಾವನಾದರೂ ತನ್ನ ನೆರೆಯವನಿಗೆ ವಿರೋಧ ವಾಗಿ ಪಾಪಮಾಡಲು ಅವನು ಆಣೆ ಇಡಬೇಕೆಂದು ಅವನಿಗೆ ಆಣೆ ನೇಮಿಸಲು ಈ ಮಂದಿರದಲ್ಲಿ ನಿನ್ನ ಬಲಿಪೀಠದ ಮುಂದೆ ಈ ಆಣೆಮಾಡಿದರೆ ಆಗ ನೀನು ದುಷ್ಟನನ್ನು ದುಷ್ಟನಾಗಮಾಡಿ ಅವನ ಮಾರ್ಗದ ಪ್ರಕಾರ ಅವನ ತಲೆಯ ಮೇಲೆ ಬರಮಾಡುವ ಹಾಗೆಯೂ ನೀತಿವಂತನನ್ನು ನೀತಿವಂತನಾಗ ಮಾಡಿ ಅವನ ನೀತಿಯ ಪ್ರಕಾರ ಅವನಿಗೆ ಕೊಡುವ ಹಾಗೆಯೂ ಪರಲೋಕದಲ್ಲಿರುವ ನೀನು ಕೇಳಿ ನಡಿಸಿ ನಿನ್ನ ಸೇವಕರ ನ್ಯಾಯವನ್ನು ತೀರಿಸು. ನಿನ್ನ ಜನರಾದ ಇಸ್ರಾಯೇಲ್ಯರು ನಿನಗೆ ವಿರೋಧ ವಾಗಿ ಪಾಪಮಾಡಿದ್ದರಿಂದ ಶತ್ರುವಿನ ಮುಂದೆ ಹೊಡೆ ಯಲ್ಪಟ್ಟು ನಿನ್ನ ಕಡೆಗೆ ತಿರುಗಿಕೊಂಡು ನಿನ್ನ ಹೆಸರನ್ನು ಅರಿಕೆಮಾಡಿ ಪ್ರಾರ್ಥಿಸಿ ಈ ಮನೆಯಲ್ಲಿ ನಿನಗೆ ವಿಜ್ಞಾಪನೆ ಮಾಡಿದರೆ ಆಗ ನೀನು ಪರಲೋಕದಿಂದ ಕೇಳಿ ನಿನ್ನ ಜನರಾದ ಇಸ್ರಾಯೇಲ್ಯರ ಪಾಪವನ್ನು ಮನ್ನಿಸಿ ನೀನು ಅವರ ತಂದೆಗಳಿಗೆ ಕೊಟ್ಟ ದೇಶಕ್ಕೆ ಅವರನ್ನು ತಿರುಗಿ ಬರಮಾಡು. ಅವರು ನಿನಗೆ ವಿರೋಧವಾಗಿ ಪಾಪವನ್ನು ಮಾಡಿದ ಕಾರಣ ಆಕಾಶವು ಮುಚ್ಚಲ್ಪಟ್ಟು ಮಳೆ ಇಲ್ಲದಿರುವಾಗ ನೀನು ಅವರನ್ನು ಕುಂದಿಸಿದ್ದರಿಂದ ಅವರು ಈ ಸ್ಥಳದ ಕಡೆಗೆ ಪ್ರಾರ್ಥನೆಮಾಡಿ ನಿನ್ನ ನಾಮವನ್ನು ಅರಿಕೆಮಾಡಿ ತಮ್ಮ ಪಾಪದಿಂದ ತಿರುಗಿ ಕೊಂಡರೆ ಆಗ ನೀನು ಪರಲೋಕದಿಂದ ಕೇಳಿ ನಿನ್ನ ಸೇವಕರಾದ ಇಸ್ರಾಯೇಲ್ ಜನರ ಪಾಪವನ್ನು ಮನ್ನಿಸಿ ಅವರು ನಡಿಯಬೇಕಾದ ಸನ್ಮಾರ್ಗವನ್ನು ಅವರಿಗೆ ಕಲಿಸುವ ಹಾಗೆ ನಿನ್ನ ಜನರಿಗೆ ಬಾಧ್ಯತೆಯಾಗಿ ಕೊಟ್ಟ ಭೂಮಿಯ ಮೇಲೆ ಮಳೆಯನ್ನು ಕೊಡು. ದೇಶದಲ್ಲಿ ಬರವೂ ಉರಿಗಾಳಿಯೂ ಕಾಡಿ ಗೆಯೂ ಬಾಣತಿ ರೋಗವಾದರೂ ಮಿಡಿತೆಯಾದರೂ ಕಂಬಳಿ ಹುಳವಾದರೂ ಅವರ ಶತ್ರುಗಳು ಅವರ ಸ್ವದೇಶದ ಪಟ್ಟಣಗಳಲ್ಲಿ ಅವರನ್ನು ಹಿಂಸಿಸಿದರೂ ಯಾವ ಬಾಧೆ, ಯಾವ ಬೇನೆ ಇದ್ದರೂ ನಿನ್ನ ಜನರಾದ ಸಮಸ್ತ ಇಸ್ರಾಯೇಲಿನ ಯಾವ ಮನುಷ್ಯ ನಾದರೂ ಯಾವ ಪ್ರಾರ್ಥನೆಯನ್ನಾದರೂ ವಿಜ್ಞಾಪನೆ ಯನ್ನಾದರೂ ಮಾಡಿದರೆ ತನ್ನ ಸ್ವಂತ ಹೃದಯದ ಬಾಧೆಯನ್ನು ತಿಳಿದು ಈ ಮಂದಿರದ ಕಡೆಗೆ ತನ್ನ ಕೈಗಳನ್ನು ಚಾಚಿದರೆ ಆಗ ನೀನು ನಮ್ಮ ಪಿತೃಗಳಿಗೆ ಕೊಟ್ಟ ದೇಶದಲ್ಲಿ ಅವರು ಬದುಕಿರುವ ವರೆಗೂ ಅವರು ನಿನಗೆ ಭಯಪಡುವ ಹಾಗೆ, ನೀನು ಪರ ಲೋಕದಲ್ಲಿ, ನೀನು ವಾಸಮಾಡುವ ಸ್ಥಳದಲ್ಲಿ ಕೇಳಿ, ಮನ್ನಿಸಿ, ನಡಿಸಿ ಮನುಷ್ಯನ ಹೃದಯವನ್ನು ತಿಳಿಯುವ ನೀನು ಪ್ರತಿ ಮನುಷ್ಯನಿಗೂ ಅವನವನ ಮಾರ್ಗಗಳ ಪ್ರಕಾರ ಕೊಡು. ಯಾಕಂದರೆ ನೀನೇ, ನೀನೊಬ್ಬನೇ ಸಮಸ್ತ ಮನುಷ್ಯರ ಹೃದಯಗಳನ್ನು ತಿಳಿದವನಾಗಿದ್ದೀ. ಇದಲ್ಲದೆ ನಿನ್ನ ಜನರಾದ ಇಸ್ರಾಯೇಲಿನವ ನಲ್ಲದೆ ನಿನ್ನ ಹೆಸರಿನ ನಿಮಿತ್ತ ದೂರ ದೇಶದಿಂದ ಬಂದ ಪರದೇಶಸ್ಥನನ್ನು ಕುರಿತು ಏನಂದರೆ ಅವರು ನಿನ್ನ ಮಹಾ ಹೆಸರನ್ನೂ ಬಲವಾದ ಕೈಯನ್ನೂ ಚಾಚಿದ ತೋಳನ್ನೂ ಕುರಿತು ಕೇಳುವರು. ಅವನು ಬಂದು ಈ ಮಂದಿರದ ಕಡೆಗೆ ಪ್ರಾರ್ಥನೆ ಮಾಡಿದರೆ ನಿನ್ನ ಜನರಾದ ಇಸ್ರಾಯೇಲ್ಯರ ಹಾಗೆ ಭೂಲೋಕದಲ್ಲಿರುವ ಸಮಸ್ತರು ನಿನಗೆ ಭಯಪಡುವದಕ್ಕಾಗಿ ನಿನ್ನ ಹೆಸರನ್ನು ತಿಳಿಯುವ ಹಾಗೆಯೂ ನಾನು ಕಟ್ಟಿಸಿದ ಈ ಮನೆಯು ನಿನ್ನ ಹೆಸರಿನಿಂದ ಕರೆಯಲ್ಪಟ್ಟಿದೆ ಎಂದು ಅವರು ತಿಳಿಯುವ ಹಾಗೆಯೂ ನಿನ್ನ ನಿವಾಸವಾಗಿರುವ ಪರಲೋಕದಿಂದ ಕೇಳಿ ಪರದೇಶಸ್ಥನು ನಿನಗೆ ಕೂಗಿದ ಪ್ರಕಾರ ಮಾಡು. ನಿನ್ನ ಜನರು ನೀನು ಕಳುಹಿಸುವ ಯಾವ ಸ್ಥಳದಲ್ಲಾದರೂ ತಮ್ಮ ಶತ್ರುಗಳ ಸಂಗಡ ಯುದ್ಧವನ್ನು ಮಾಡಲು ಹೊರಟುಹೋಗಿ ನೀನು ಆದುಕೊಂಡ ಪಟ್ಟಣದ ಮಾರ್ಗವಾಗಿಯೂ ನಾನು ನಿನ್ನ ಹೆಸರಿ ಗೋಸ್ಕರ ಕಟ್ಟಿಸಿದ ಈ ಮನೆಯ ಮಾರ್ಗವಾಗಿಯೂ ಅವರು ಕರ್ತನಾದ ನಿನಗೆ ಪ್ರಾರ್ಥನೆ ಮಾಡಿದಾಗ ಪರಲೋಕದಲ್ಲಿ ನೀನು ಅವರ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಕೇಳಿ ಅವರ ನ್ಯಾಯವನ್ನು ತೀರಿಸು. ಪಾಪವನ್ನು ಮಾಡದವನು ಯಾವನೂ ಇಲ್ಲದ್ದ ರಿಂದ ಅವರು ನಿನಗೆ ವಿರೋಧವಾಗಿ ಪಾಪ ಮಾಡಲು ನೀನು ಅವರ ಮೇಲೆ ಕೋಪಿಸಿಕೊಂಡು ದೂರವಾ ದರೂ ಸವಿಾಪವಾದರೂ ಶತ್ರುವಿನ ದೇಶಕ್ಕೆ ಅವರು ಸೆರೆಯಾಗಿ ಒಯ್ಯಲ್ಪಡುವ ಹಾಗೆ ನೀನು ಅವರನ್ನು ಶತ್ರುವಿನ ಕೈಯಲ್ಲಿ ಒಪ್ಪಿಸಿದರೆ ಅವರು ಸೆರೆ ಒಯ್ಯಲ್ಪಟ್ಟ ದೇಶದಲ್ಲಿ ಪಶ್ಚಾತ್ತಾಪಪಟ್ಟು ತಿರುಗಿ ಕೊಂಡು ತಾವು ಪಾಪಮಾಡಿ ವಕ್ರಬುದ್ಧಿಯಿಂದ ನಡೆದು ದ್ರೋಹಮಾಡಿದೆವೆಂದು ತಮ್ಮನ್ನು ಸೆರೆಯಾಗಿ ಒಯ್ಯುವವರ ದೇಶದಲ್ಲಿ ನಿನಗೆ ವಿಜ್ಞಾಪನೆಮಾಡಿ ಅವರನ್ನು ಸೆರೆಯಾಗಿ ಒಯ್ದ ಶತ್ರುಗಳ ದೇಶದಲ್ಲಿ ತಮ್ಮ ಪೂರ್ಣಹೃದಯದಿಂದಲೂ ತಮ್ಮ ಪೂರ್ಣ ಪ್ರಾಣದಿಂದಲೂ ನಿನ್ನ ಕಡೆಗೆ ತಿರುಗಿಕೊಂಡು ನೀನು ಅವರ ಪಿತೃಗಳಿಗೆ ಕೊಟ್ಟ ತಮ್ಮ ದೇಶದ ಮಾರ್ಗ ವಾಗಿಯೂ ನೀನು ಆದುಕೊಂಡ ಪಟ್ಟಣದ ಮಾರ್ಗ ವಾಗಿಯೂ ನಿನ್ನ ಹೆಸರಿಗೋಸ್ಕರ ನಾನು ಕಟ್ಟಿಸಿದ ಈ ಮಂದಿರದ ಮಾರ್ಗವಾಗಿಯೂ ಅವರು ನಿನಗೆ ಪ್ರಾರ್ಥನೆ ಮಾಡಿದರೆ ಆಗ ನೀನು ಪರಲೋಕ ದಲ್ಲಿ, ನೀನು ವಾಸಮಾಡುವ ಸ್ಥಳದಲ್ಲಿ ಕೇಳಿ ಅವರ ನ್ಯಾಯವನ್ನು ತೀರಿಸಿ ನಿನಗೆ ವಿರೋಧವಾಗಿ ಮಾಡಿದ ನಿನ್ನ ಜನರ ಪಾಪಗಳನ್ನೂ ಅವರು ನಿನಗೆ ವಿರೋಧವಾಗಿ ಮಾಡಿದ ಅವರ ಸಮಸ್ತ ದ್ರೋಹ ಗಳನ್ನೂ ಮನ್ನಿಸಿ ಅವರನ್ನು ಕರುಣಿಸುವ ಹಾಗೆ ಅವರ ಮುಂದೆ ನೀನು ಅವರನ್ನು ಕರುಣಿಸು.
- Nahum 1:3 ನಹೂಮ 1:3ಕರ್ತನು ಕೋಪಿಸುವದರಲ್ಲಿ ನಿಧಾನ ಮಾಡುವವನಾದರೂ ಶಕ್ತಿಯಲ್ಲಿ ಮಹತ್ತಾದವನು; ದುರ್ಮಾರ್ಗದವರನ್ನು ಎಷ್ಟು ಮಾತ್ರಕ್ಕೂ ನಿರ್ಮಲರೆಂದು ತೀರ್ಮಾನಿಸ ದವನು; ಕರ್ತನ ಮಾರ್ಗವು ಸುಳಿಗಾಳಿಯಲ್ಲಿಯೂ ಬಿರುಗಾಳಿಯಲ್ಲಿಯೂ ಉಂಟು; ಮೇಘಗಳು ಆತನ ಕಾಲುಗಳ ಧೂಳೇ.
- Hebrews 12:18 ಇಬ್ರಿಯರಿಗೆ 12:18ಮುಟ್ಟಬಹುದಾದ ಮತ್ತು ಬೆಂಕಿ ಹತ್ತಿದಂಥ ಬೆಟ್ಟಕ್ಕೂ ಮೊಬ್ಬಿಗೂ ಕತ್ತಲೆಗೂ ಬಿರುಗಾಳಿಗೂ
- Deuteronomy 4:11 ಧರ್ಮೋಪದೇಶಕಾಂಡ 4:11ಆಗ ನೀವು ಹತ್ತಿರ ಬಂದು ಬೆಟ್ಟದ ಕೆಳಗೆ ನಿಂತಿರಿ; ಆ ಬೆಟ್ಟವು ಕತ್ತಲೆಯಾ ಗಿದ್ದು ಮೇಘಗಳೂ ಗಾಢಾಂಧಕಾರವೂ ಉಂಟಾಗಿ ಆಕಾಶ ಮಧ್ಯದ ವರೆಗೆ ಬೆಂಕಿಯಿಂದ ಉರಿಯು ತ್ತಿತ್ತು.
- Exodus 24:15–18 ವಿಮೋಚನಕಾಂಡ 24:15–18ಹೀಗೆ ಮೋಶೆಯು ಬೆಟ್ಟವನ್ನೇರಿ ಹೋದನು. ಆಗ ಮೇಘವು ಬೆಟ್ಟವನ್ನು ಮುಚ್ಚಿಕೊಂಡಿತು. ಇದ ಲ್ಲದೆ ಕರ್ತನ ಮಹಿಮೆಯು ಸೀನಾಯಿಬೆಟ್ಟದ ಮೇಲೆ ನೆಲೆಯಾಗಿದದ್ದರಿಂದ ಮೇಘವು ಅದನ್ನು ಆರು ದಿನಗಳ ವರೆಗೆ ಮುಚ್ಚಿಕೊಂಡಿತು; ಏಳನೆಯ ದಿನದಲ್ಲಿ ಆತನು ಮೇಘದೊಳಗಿಂದ ಮೋಶೆಯನ್ನು ಕರೆದನು. ಇದಲ್ಲದೆ ಇಸ್ರಾಯೇಲ್ ಮಕ್ಕಳ ಕಣ್ಣುಗಳ ಮುಂದೆ ಬೆಟ್ಟದ ತುದಿಯಲ್ಲಿ ಕರ್ತನ ಮಹಿಮೆಯ ದೃಶ್ಯವು ದಹಿಸುವ ಅಗ್ನಿಯಂತೆ ಇತ್ತು.ಆಗ ಮೋಶೆಯು ಮೇಘದ ಮಧ್ಯಕ್ಕೆ ಹೋಗಿ ಬೆಟ್ಟವನ್ನೇರಿದನು. ಅವನು ನಾಲ್ವತ್ತು ಹಗಲೂ ನಾಲ್ವತ್ತು ರಾತ್ರಿಯೂ ಪರ್ವತದಲ್ಲಿದ್ದನು. ಆಗ ಮೋಶೆಯು ಮೇಘದ ಮಧ್ಯಕ್ಕೆ ಹೋಗಿ ಬೆಟ್ಟವನ್ನೇರಿದನು. ಅವನು ನಾಲ್ವತ್ತು ಹಗಲೂ ನಾಲ್ವತ್ತು ರಾತ್ರಿಯೂ ಪರ್ವತದಲ್ಲಿದ್ದನು.
- Psalm 97:2 ಕೀರ್ತನೆಗಳು 97:2ಮೇಘಗಳೂ ಕಾರ್ಗತ್ತಲೂ ಆತನ ಸುತ್ತಲು ಅವೆ; ನೀತಿಯೂ ನ್ಯಾಯವೂ ಆತನ ಸಿಂಹಾಸನದ ಸ್ಥಳವಾಗಿದೆ.