2 Chronicles · chapter 6 · verse 3
2 Chronicles 6:3 in Kannada
ಅರಸನು ಇಸ್ರಾಯೇಲಿನ ಸಭೆಯವರ ಕಡೆಗೆ ತಿರುಗಿಕೊಂಡು ಆಶೀರ್ವದಿಸಿದಾಗ ಇಸ್ರಾಯೇಲಿನ ಸಭೆಯು ನಿಂತಿತ್ತು.
Arasanu israayelina sabheyavara kadege tirugikondu aasheervadisidaaga israayelina sabheyu nintittu.
2 Chronicles 6:3 in English
- King James Version (KJV)
- And the king turned his face, and blessed the whole congregation of Israel: and all the congregation of Israel stood.
- World English Bible (WEB)
- The king turned his face, and blessed all the assembly of Israel; and all the assembly of Israel stood.
- American Standard Version (ASV)
- And the king turned his face, and blessed all the assembly of Israel: and all the assembly of Israel stood.
- Bible in Basic English (BBE)
- Then, turning his face about, the king gave a blessing to all the men of Israel; and they were all on their feet together.
- Darby Translation (DBY)
- And the king turned his face and blessed the whole congregation of Israel; and the whole congregation of Israel stood.
- Webster's Bible (WBS)
- And the king turned his face, and blessed the whole congregation of Israel: and all the congregation of Israel stood.
- Young's Literal Translation (YLT)
- And the king turneth round his face, and blesseth the whole assembly of Israel, and the whole assembly of Israel is standing,
Read in context
- 1ಆಗ ಸೊಲೊಮೋನನು--ಕಾರ್ಗತ್ತಲಲ್ಲಿ ವಾಸವಾಗಿರುವೆನೆಂದು ಕರ್ತನು ಹೇಳಿದ್ದಾನೆ.
- 2ಆದರೆ ನಿನಗೆ ನಿವಾಸದ ಆಲಯವನ್ನೂ ನೀನು ಯುಗಯುಗಾಂತರಗಳಿಗೂ ವಾಸಮಾಡತಕ್ಕ ಸ್ಥಾನವನ್ನೂ ನಾನು ಕಟ್ಟಿಸಿದ್ದೇನೆ ಅಂದನು.
- 3ಅರಸನು ಇಸ್ರಾಯೇಲಿನ ಸಭೆಯವರ ಕಡೆಗೆ ತಿರುಗಿಕೊಂಡು ಆಶೀರ್ವದಿಸಿದಾಗ ಇಸ್ರಾಯೇಲಿನ ಸಭೆಯು ನಿಂತಿತ್ತು.
- 4ಅವನು--ನನ್ನ ತಂದೆಯಾದ ದಾವೀದನ ಸಂಗಡ ಮಾತನಾಡಿದ್ದನ್ನು ತನ್ನ ಕೈಯಿಂದ ನೆರವೇರಿಸಿದ ಇಸ್ರಾಯೇಲ್ಯರ ದೇವರಾದ ಕರ್ತನು ಸ್ತುತಿಸಲ್ಪಡಲಿ.
- 5ಆತನು ತನ್ನ ಬಾಯಿಂದ--ನನ್ನ ಜನ ರಾದ ಇಸ್ರಾಯೇಲನ್ನು ಐಗುಪ್ತದೇಶದಿಂದ ಬರ ಮಾಡಿದ ದಿನ ಮೊದಲುಗೊಂಡು ನನ್ನ ಹೆಸರು ಅದರಲ್ಲಿ ಇರುವ ಹಾಗೆ ಆಲಯವನ್ನು ಕಟ್ಟುವದಕ್ಕೆ ಇಸ್ರಾಯೇಲನ ಸಮಸ್ತ ಗೋತ್ರಗಳೊಳಗಿಂದ ಯಾವ ಪಟ್ಟಣವನ್ನೂ ಆದುಕೊಳ್ಳಲಿಲ್ಲ; ನನ್ನ ಜನರಾದ ಇಸ್ರಾ ಯೇಲಿನ ಮೇಲೆ ಆಳುವವನಾಗಿರಲು ನಾನು ಒಬ್ಬನ ನ್ನಾದರೂ ಆದುಕೊಳ್ಳಲಿಲ್ಲ.
Cross references
- 1 Kings 8:14 1 ಅರಸುಗಳು 8:14ಅರಸನು ತನ್ನ ಮುಖವನ್ನು ತಿರುಗಿಸಿ ಇಸ್ರಾಯೇ ಲಿನ ಸಭೆಯನ್ನೆಲ್ಲಾ ಆಶೀರ್ವದಿಸಿದನು. (ಇಸ್ರಾ ಯೇಲಿನ ಸಭೆಯೆಲ್ಲಾ ನಿಂತಿರುವಾಗ)
- 1 Kings 8:55–61 1 ಅರಸುಗಳು 8:55–61ಆಗ ಅವನು ಮಹಾ ಶಬ್ದದಿಂದ ಇಸ್ರಾಯೇಲಿನ ಸಮಸ್ತ ಸಭೆಯನ್ನು ಆಶೀರ್ವದಿಸಿ--ತನ್ನ ಜನರಾದ ಇಸ್ರಾಯೇಲ್ಯರಿಗೆ ತಾನು ಮಾತು ಕೊಟ್ಟ ಎಲ್ಲಾದರ ಪ್ರಕಾರ ವಿಶ್ರಾಂತಿಯನ್ನು ಕೊಟ್ಟ ಕರ್ತನು ಸ್ತುತಿಸ ಲ್ಪಡಲಿ. ಆತನು ತನ್ನ ಸೇವಕನಾದ ಮೋಶೆಯ ಮುಖಾಂತರ ಹೇಳಿದ ಎಲ್ಲಾ ಉತ್ತಮವಾದ ಮಾತು ಗಳಲ್ಲಿ ಒಂದು ಮಾತಾದರೂ ಬಿದ್ದು ಹೋದದ್ದಿಲ್ಲ. ಆತನು ನಮ್ಮ ತಂದೆಗಳಿಗೆ ಆಜ್ಞಾಪಿಸಿದ ತನ್ನ ಆಜ್ಞೆ ಗಳನ್ನೂ ತನ್ನ ನ್ಯಾಯಗಳನ್ನೂ ಕೈಕೊಳ್ಳುವಂತೆಯೂ ತನ್ನ ಸಮಸ್ತ ಮಾರ್ಗಗಳಲ್ಲಿ ನಡೆಯುವಂತೆಯೂ ನಮ್ಮ ಹೃದಯಗಳನ್ನು ತನ್ನ ಕಡೆಗೆ ತಿರುಗಿಸುವ ಹಾಗೆ ನಮ್ಮ ದೇವರಾದ ಕರ್ತನು ನಮ್ಮನ್ನು ಕೈ ಬಿಡದೆ, ನಮ್ಮನ್ನು ವಿಸರ್ಜಿಸದೆ, ನಮ್ಮ ಪಿತೃಗಳ ಸಂಗಡ ಹೇಗೆ ಇದ್ದನೋ ಹಾಗೆಯೇ ನಮ್ಮ ಸಂಗಡ ಇರಲಿ. ಇದ ಲ್ಲದೆ ಕರ್ತನು ತಾನೇ ದೇವರಾಗಿದ್ದಾನೆ; ಆತನ ಹೊರತು ಬೇರೊಬ್ಬನಿಲ್ಲವೆಂದು ಭೂಲೋಕದ ಜನ ರೆಲ್ಲರೂ ತಿಳಿಯುವ ಹಾಗೆ ಕಾರ್ಯಕ್ಕೆ ತಕ್ಕದ್ದಾಗಿ ಸಕಲ ಕಾಲಗಳಲ್ಲಿ ತನ್ನ ಸೇವಕನ ನ್ಯಾಯವನ್ನೂ ತನ್ನ ಜನವಾದ ಇಸ್ರಾಯೇಲಿನ ನ್ಯಾಯವನ್ನೂ ತೀರಿಸುವ ಹಾಗೆ ನಾನು ಕರ್ತನ ಮುಂದೆ ವಿಜ್ಞಾಪನೆ ಮಾಡಿದ ಈ ನನ್ನ ಮಾತುಗಳು ರಾತ್ರಿ ಹಗಲು ನಮ್ಮ ದೇವರಾದ ಕರ್ತನ ಬಳಿಯಲ್ಲಿ ಇರಲಿ. ಇಂದಿನ ಹಾಗೆಯೇ ಆತನ ಕಟ್ಟಳೆಗಳಲ್ಲಿ ನಡೆಯಲೂ ಆತನ ಆಜ್ಞೆಗಳನ್ನು ಕೈಕೊಳ್ಳಲೂ ನಮ್ಮ ದೇವರಾದ ಕರ್ತನ ಸಂಗಡ ನಿಮ್ಮ ಹೃದಯವು ಸಂಪೂರ್ಣವಾಗಿರಲಿ ಅಂದನು.
- Nehemiah 8:5–7 ನೆಹೆಮೀಯ 8:5–7ಎಜ್ರನು ಸಕಲ ಜನರ ಕಣ್ಣುಗಳ ಮುಂದೆ ಪುಸ್ತಕವನ್ನು ತೆರೆದನು; (ಯಾಕಂದರೆ ಸಕಲ ಜನರಿಗಿಂತ ಎತ್ತರವಾದ ಸ್ಥಳದಲ್ಲಿ ಇದ್ದನು;) ಅವನು ಅದನ್ನು ತೆರೆದಾಗ ಜನರೆಲ್ಲರೂ ಎದ್ದು ನಿಂತರು. ಆಗ ಎಜ್ರನು ಮಹಾ ದೇವಾರಾಗಿರುವ ಕರ್ತನನ್ನು ಸ್ತುತಿಸಿದನು. ಅದಕ್ಕೆ ಜನರೆಲ್ಲರು ತಮ್ಮ ಕೈಗಳನ್ನೆತ್ತಿ ಪ್ರತ್ಯುತ್ತರವಾಗಿ--ಆಮೆನ್, ಆಮೆನ್ ಎಂದು ಹೇಳಿ ನೆಲದ ವರೆಗೂ ತಮ್ಮ ತಲೆಗಳನ್ನು ಬೊಗ್ಗಿಸಿ ಕರ್ತ ನನ್ನು ಆರಾಧಿಸಿದರು ಇದಲ್ಲದೆ ಯೇಷೂವನೂ ಬಾನೀಯೂ ಶೇರೇಬ್ಯನೂ ಯಾವಿಾನನೂ ಅಕ್ಕೂ ಬನೂ ಶಬ್ಬೆತೈನೂ ಹೋದೀಯನೂ ಮಾಸೇಯನೂ ಕೆಲೀಟನೂ ಅಜರ್ಯನೂ ಯೋಜಾಬಾದನೂ ಹಾನಾನನೂ ಪೆಲಾಯನೂ ಲೇವಿಯರೂ ಜನರಿಗೆ ನ್ಯಾಯಪ್ರಮಾಣವನ್ನು ತಿಳಿಯುವಂತೆ ಹೇಳಿದರು. ಜನರು ತಮ್ಮ ಸ್ಥಳಗಳಲ್ಲಿ ನಿಂತುಕೊಂಡಿದ್ದರು.
- Numbers 6:23–27 ಅರಣ್ಯಕಾಂಡ 6:23–27ನೀನು ಆರೋನನ ಸಂಗ ಡಲೂ ಅವನ ಕುಮಾರರ ಸಂಗಡಲೂ ಮಾತನಾಡಿ ಹೇಳಬೇಕಾದದ್ದೇನಂದರೆ--ನೀವು ಇಸ್ರಾಯೇಲ್ ಮಕ್ಕಳನ್ನು ಆಶೀರ್ವದಿಸುವಾಗ ಈ ಪ್ರಕಾರ ಅವರಿಗೆ ಹೇಳಬೇಕು. ಕರ್ತನು ನಿನ್ನನ್ನು ಆಶೀರ್ವದಿಸಲಿ, ನಿನ್ನನ್ನು ಕಾಪಾಡಲಿ. ಕರ್ತನು ತನ್ನ ಮುಖವನ್ನು ನಿನ್ನ ಕಡೆಗೆ ಪ್ರಕಾಶಿಸುವಂತೆ ಮಾಡಿ ನಿನಗೆ ದಯೆ ತೋರಿಸಲಿ. ಕರ್ತನು ತನ್ನ ಮುಖವನ್ನು ನಿನ್ನ ಕಡೆಗೆ ಎತ್ತಿ ನಿನಗೆ ಸಮಾಧಾನ ಅನುಗ್ರಹಿಸಲಿ.ಅವರು ನನ್ನ ಹೆಸರನ್ನು ಇಸ್ರಾಯೇಲ್ ಮಕ್ಕಳ ಮೇಲೆ ಇಡಬೇಕು. ನಾನೇ ಅವರನ್ನು ಆಶೀರ್ವದಿಸುವೆನು. ಅವರು ನನ್ನ ಹೆಸರನ್ನು ಇಸ್ರಾಯೇಲ್ ಮಕ್ಕಳ ಮೇಲೆ ಇಡಬೇಕು. ನಾನೇ ಅವರನ್ನು ಆಶೀರ್ವದಿಸುವೆನು.
- Matthew 13:2 ಮತ್ತಾಯನು 13:2ಆಗ ಜನರ ದೊಡ್ಡ ಸಮೂಹಗಳು ಆತನ ಬಳಿಗೆ ಕೂಡಿ ಬಂದದ್ದರಿಂದ ಆತನು ದೋಣಿ ಯನ್ನು ಹತ್ತಿ ಕೂತುಕೊಂಡನು. ಮತ್ತು ಆ ಸಮೂಹ ದವರೆಲ್ಲಾ ದಡದ ಮೇಲೆ ನಿಂತಿದ್ದರು.
- Luke 24:50–51 ಲೂಕನು 24:50–51ಆತನು ಅವರನ್ನು ಬೇಥಾನ್ಯದವರೆಗೆ ನಡಿಸಿ ಕೊಂಡು ಹೋಗಿ ತನ್ನ ಕೈಗಳನ್ನು ಎತ್ತಿ ಅವರನ್ನು ಆಶೀರ್ವದಿಸಿದನು. ಇದಾದ ಮೇಲೆ ಆತನು ಅವರನ್ನು ಆಶೀರ್ವದಿಸುತ್ತಿರುವಾಗ ಆತನು ಅವರಿಂದ ಪ್ರತ್ಯೇಕಿಸಲ್ಪಟ್ಟು ಮೇಲಕ್ಕೆ ಪರಲೋಕದೊಳಗೆ ಒಯ್ಯ ಲ್ಪಟ್ಟನು.
- 1 Chronicles 16:2 1 ಪೂರ್ವಕಾಲವೃತ್ತಾಂತ 16:2ದಾವೀದನು ದಹನ ಬಲಿಗಳನ್ನೂ ಸಮಾಧಾನದ ಬಲಿಗಳನ್ನೂ ಅರ್ಪಿಸಿ ತೀರಿಸಿದ ತರುವಾಯ ಅವನು ಕರ್ತನ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿ
- 2 Chronicles 29:29 2 ಪೂರ್ವಕಾಲವೃತ್ತಾಂತ 29:29ಅವರು ಅರ್ಪಿಸುವದು ತೀರಿದಾಗ ಅರಸನೂ ಅವನ ಸಂಗಡ ಇದ್ದವರೆಲ್ಲರೂ ಬೊಗ್ಗಿ ಆರಾಧಿಸಿ ದರು.
- Joshua 22:6 ಯೆಹೋಶುವ 22:6ಯೆಹೋಶುವನು ಅವರನ್ನು ಆಶೀರ್ವದಿಸಿ ಕಳುಹಿಸಿದ ಮೇಲೆ ಅವರು ತಮ್ಮ ಡೇರೆಗಳಿಗೆ ಹೋದರು.