2 Chronicles · chapter 6 · verse 2
2 Chronicles 6:2 in Kannada
ಆದರೆ ನಿನಗೆ ನಿವಾಸದ ಆಲಯವನ್ನೂ ನೀನು ಯುಗಯುಗಾಂತರಗಳಿಗೂ ವಾಸಮಾಡತಕ್ಕ ಸ್ಥಾನವನ್ನೂ ನಾನು ಕಟ್ಟಿಸಿದ್ದೇನೆ ಅಂದನು.
Aadare ninage nivaasada aalayavannoo neenu yugayugaantaragaligoo vaasamaadatakka sthaanavannoo naanu kattisiddene andanu.
2 Chronicles 6:2 in English
- King James Version (KJV)
- But I have built an house of habitation for thee, and a place for thy dwelling for ever.
- World English Bible (WEB)
- But I have built you a house and home, a place for you to dwell in forever.”
- American Standard Version (ASV)
- But I have built thee a house of habitation, and a place for thee to dwell in for ever.
- Bible in Basic English (BBE)
- So I have made for you a living-place, a house in which you may be for ever present.
- Darby Translation (DBY)
- But I have built a house of habitation for thee, even a settled place for thee to abide in for ever.
- Webster's Bible (WBS)
- But I have built a house of habitation for thee, and a place for thy dwelling for ever.
- Young's Literal Translation (YLT)
- and I — I have built a house of habitation for Thee, and a fixed place for Thy dwelling to the ages.'
Read in context
- 1ಆಗ ಸೊಲೊಮೋನನು--ಕಾರ್ಗತ್ತಲಲ್ಲಿ ವಾಸವಾಗಿರುವೆನೆಂದು ಕರ್ತನು ಹೇಳಿದ್ದಾನೆ.
- 2ಆದರೆ ನಿನಗೆ ನಿವಾಸದ ಆಲಯವನ್ನೂ ನೀನು ಯುಗಯುಗಾಂತರಗಳಿಗೂ ವಾಸಮಾಡತಕ್ಕ ಸ್ಥಾನವನ್ನೂ ನಾನು ಕಟ್ಟಿಸಿದ್ದೇನೆ ಅಂದನು.
- 3ಅರಸನು ಇಸ್ರಾಯೇಲಿನ ಸಭೆಯವರ ಕಡೆಗೆ ತಿರುಗಿಕೊಂಡು ಆಶೀರ್ವದಿಸಿದಾಗ ಇಸ್ರಾಯೇಲಿನ ಸಭೆಯು ನಿಂತಿತ್ತು.
- 4ಅವನು--ನನ್ನ ತಂದೆಯಾದ ದಾವೀದನ ಸಂಗಡ ಮಾತನಾಡಿದ್ದನ್ನು ತನ್ನ ಕೈಯಿಂದ ನೆರವೇರಿಸಿದ ಇಸ್ರಾಯೇಲ್ಯರ ದೇವರಾದ ಕರ್ತನು ಸ್ತುತಿಸಲ್ಪಡಲಿ.
Cross references
- 2 Chronicles 2:4–6 2 ಪೂರ್ವಕಾಲವೃತ್ತಾಂತ 2:4–6ಇಗೋ, ನನ್ನ ದೇವರಾದ ಕರ್ತನಿಗೆ ಅದನ್ನು ಪ್ರತಿಷ್ಠೆ ಮಾಡುವದಕ್ಕೂ ಆತನ ಮುಂದೆ ಪರಿಮಳ ಧೂಪವನ್ನು ಸುಡುವದಕ್ಕೂ ನಿತ್ಯ ಸಮ್ಮುಖದ ರೊಟ್ಟಿ ಗೋಸ್ಕರವೂ ಸಬ್ಬತ್ತುಗಳಲ್ಲಿಯೂ ಅಮಾವಾಸ್ಯೆಗಳ ಲ್ಲಿಯೂ ಇಸ್ರಾಯೇಲಿಗೆ ನಿರಂತರವಾಗಿರಲು ನೇಮಿ ಸಿದ ನಮ್ಮ ದೇವರಾದ ಕರ್ತನ ಹಬ್ಬಗಳಲ್ಲಿಯೂ ಉದಯಕಾಲದ ಸಾಯಂಕಾಲದ ದಹನಬಲಿಗಳಿಗೋ ಸ್ಕರವೂ ಆತನ ನಾಮಕ್ಕೆ ಆಲಯವನ್ನು ಕಟ್ಟಿಸುತ್ತೇನೆ. ನಾನು ಕಟ್ಟಿಸುವ ಆಲಯವು ದೊಡ್ಡದು; ನಮ್ಮ ದೇವರು ಸಕಲ ದೇವರುಗಳಿಗಿಂತ ದೊಡ್ಡವನಾಗಿದ್ದಾನೆ. ಆತನಿಗೆ ಮನೆಯನ್ನು ಕಟ್ಟಿಸಲು ಶಕ್ತಿಯನ್ನು ಹೊಂದಿ ದವನು ಯಾರು? ಆಕಾಶಗಳೂ ಆಕಾಶಾಕಾಶಗಳೂ ಆತನನ್ನು ಹಿಡಿಯಲಾರವು; ಆತನ ಮುಂದೆ ಯಜ್ಞ ವನ್ನು ಸುಡುವದಕ್ಕೆ ಹೊರತಾಗಿ ಆತನಿಗೆ ಮನೆಯನ್ನು ಕಟ್ಟಿಸಲು ನಾನು ಎಷ್ಟರವನು?
- Revelation 21:3 ಪ್ರಕಟನೆ 21:3ಇದಲ್ಲದೆ ಪರಲೋಕದೊಳಗಿಂದ ಬಂದ ಮಹಾಶಬ್ದವು ನನಗೆ ಕೇಳಿಸಿತು. ಅದು-ಇಗೋ, ದೇವರ ಗುಡಾರವು ಮನುಷ್ಯರೊಂದಿಗೆ ಅದೆ; ಆತನು ಅವರೊಡನೆ ವಾಸ ಮಾಡುವನು, ಅವರು ಆತನ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಇದಲ್ಲದೆ ಆತನು ಅವರ ದೇವರಾಗಿ
- Psalm 135:21 ಕೀರ್ತನೆಗಳು 135:21ಯೆರೂಸಲೇಮಿನಲ್ಲಿ ವಾಸಿಸುವ ಕರ್ತನಿಗೆ ಚೀಯೋನಿನೊಳಗಿಂದ ಸ್ತುತಿಯುಂಟಾಗಲಿ. ಕರ್ತನನ್ನು ಸ್ತುತಿಸಿರಿ.
- 1 Chronicles 28:20 1 ಪೂರ್ವಕಾಲವೃತ್ತಾಂತ 28:20ದಾವೀದನು ತನ್ನ ಮಗನಾದ ಸೊಲೊಮೋನ ನಿಗೆ ಹೇಳಿದ್ದೇನಂದರೆ--ನೀನು ಬಲಗೊಂಡು ದೃಢ ಪಟ್ಟು ಮಾಡು; ಭಯಪಡಬೇಡ, ಹೆದರಬೇಡ; ಯಾಕಂದರೆ ನನ್ನ ದೇವರಾಗಿರುವ ಕರ್ತನಾದ ದೇವರು ನಿನ್ನ ಸಂಗಡ ಇರುವನು. ಕರ್ತನ ಮನೆಯ ಸೇವೆಯ ಕಾರ್ಯವನ್ನೆಲ್ಲಾ ನೀನು ತೀರಿಸುವ ವರೆಗೂ ಆತನು ನಿನ್ನನ್ನು ವಿಸರ್ಜಿಸುವದಿಲ್ಲ, ಕೈ ಬಿಡುವದಿಲ್ಲ.ಇಗೋ, ಕರ್ತನ ಮನೆಯ ಸಮಸ್ತ ಸೇವೆಗೋಸ್ಕರ ಯಾಜಕರ ಲೇವಿಯರ ವರ್ಗಗಳುಂಟು. ಎಲ್ಲಾ ಕೆಲ ಸಕ್ಕೂ ಎಲ್ಲಾ ಸೇವೆಗೂ ಪೂರ್ಣ ಮನಸ್ಸುಳ್ಳಂಥ ಜ್ಞಾನವುಳ್ಳಂಥ ಪ್ರತಿ ಮನುಷ್ಯನು ನಿನ್ನ ಸಂಗಡ ಇರುವನು. ಇದಲ್ಲದೆ ಪ್ರಧಾನರೂ ಸಕಲ ಜನರೂ ನಿನ್ನ ಮಾತುಗಳಿಗೆಲ್ಲಾ ಕಿವಿಗೊಡುತ್ತಾರೆ.
- 1 Kings 8:13 1 ಅರಸುಗಳು 8:13ನಿನಗೆ ನಿವಾಸದ ಮಂದಿರವನ್ನು ನೀನು ಎಂದೆಂದಿಗೂ ಅದರಲ್ಲಿ ವಾಸವಾಗಿರುವ ಹಾಗೆ ಶಾಶ್ವತ ಸ್ಥಳವನ್ನು ನಿಜವಾಗಿಯೂ ಕಟ್ಟಿಸಿದ್ದೇನೆ ಎಂದು ಹೇಳಿದನು.
- 1 Chronicles 17:12 1 ಪೂರ್ವಕಾಲವೃತ್ತಾಂತ 17:12ಅವನು ನನಗೆ ಮನೆಯನ್ನು ಕಟ್ಟುವನು. ಅವನ ಸಿಂಹಾಸನವನ್ನು ಎಂದೆಂದಿಗೂ ಸ್ಥಿರಮಾಡುವೆನು.
- 2 Samuel 7:13 2 ಸಮುವೇಲನು 7:13ಅವನು ನನ್ನ ಹೆಸ ರಿಗೆ ಮನೆಯನ್ನು ಕಟ್ಟುವನು; ನಾನು ಅವನ ರಾಜ್ಯದ ಸಿಂಹಾಸನವನ್ನು ಸದಾಕಾಲಕ್ಕೂ ಸ್ಥಿರಮಾಡುವೆನು. ನಾನು ಅವನ ತಂದೆಯಾಗಿರುವೆನು; ಅವನು ನನ್ನ ಮಗನಾಗಿರುವನು.
- Psalm 132:5 ಕೀರ್ತನೆಗಳು 132:5ನನ್ನ ಕಣ್ಣುಗಳಿಗೆ ನಿದ್ದೆಯನ್ನೂ ನನ್ನ ರೆಪ್ಪೆ ಗಳಿಗೆ ತೂಕಡಿಕೆಯನ್ನೂ ಕೊಡೆನು ಎಂಬದು.
- John 4:21–23 ಯೋಹಾನನು 4:21–23ಯೇಸು ಆಕೆಗೆ--ಸ್ತ್ರೀಯೇ, ನನ್ನನ್ನು ನಂಬು; ಈ ಬೆಟ್ಟದಲ್ಲಿಯಾಗಲೀ ಯೆರೂಸಲೇಮಿನಲ್ಲಿಯಾಗಲೀ ನೀವು ತಂದೆಯನ್ನು ಆರಾಧಿಸದೆ ಇರುವ ಗಳಿಗೆ ಬರುತ್ತದೆ. ನೀವು ಅರಿಯದೆ ಇರುವದನ್ನು ಆರಾಧಿ ಸುತ್ತೀರಿ; ನಾವು ಅರಿತಿರುವದನ್ನೇ ಆರಾಧಿಸುತ್ತೇವೆ; ಯಾಕಂದರೆ ರಕ್ಷಣೆಯು ಯೆಹೂದ್ಯರಿಂದಲೇ. ನಿಜ ವಾದ ಆರಾಧಕರು ತಂದೆಯನ್ನು ಆತ್ಮದಿಂದಲೂ ಸತ್ಯ ದಿಂದಲೂ ಆರಾಧಿಸುವ ಗಳಿಗೆಯು ಬರುತ್ತದೆ, ಅದು ಈಗಲೇ ಬಂದಿದೆ; ಯಾಕಂದರೆ ತನ್ನನ್ನು ಆರಾಧಿಸು ವದಕ್ಕೆ ತಂದೆಯು ಅಂಥವರನ್ನು ಹುಡುಕುತ್ತಾನೆ.
- 1 Chronicles 22:10–11 1 ಪೂರ್ವಕಾಲವೃತ್ತಾಂತ 22:10–11ಅವನು ನನ್ನ ನಾಮಕ್ಕೆ ಮನೆಯನ್ನು ಕಟ್ಟಿಸುವನು. ಅವನು ನನ್ನ ಮಗನಾಗಿರುವನು, ನಾನು ಅವನಿಗೆ ತಂದೆ ಯಾಗಿರುವೆನು; ಇಸ್ರಾಯೇಲಿನ ಮೇಲೆ ಅವನ ರಾಜ್ಯದ ಸಿಂಹಾಸನವನ್ನು ಯುಗ ಯುಗಾಂತರಕ್ಕೂ ಸ್ಥಿರಪಡಿಸುವೆನು. ಈಗ ನನ್ನ ಮಗನೇ, ಕರ್ತನು ನಿನ್ನನ್ನು ಕುರಿತು ಹೇಳಿದ ಪ್ರಕಾರ ನೀನು ಸಫಲವನ್ನು ಹೊಂದುವ ಹಾಗೆಯೂ ನೀನು ನಿನ್ನ ದೇವರಾದ ಕರ್ತನ ಮನೆಯನ್ನು ಕಟ್ಟಿಸುವ ಹಾಗೆಯೂ ಆತನು ನಿನ್ನ ಸಂಗಡ ಇರಲಿ.
- Hebrews 9:11–12 ಇಬ್ರಿಯರಿಗೆ 9:11–12ಆದರೆ ಕ್ರಿಸ್ತನು ಬರಬೇಕಾಗಿದ್ದ ಮೇಲುಗಳ ಕುರಿತು ಮಹಾಯಾಜಕನಾಗಿ ಬಂದು ಕೈಯಿಂದ ಕಟ್ಟಲ್ಪಡದಂಥ ಅಂದರೆ ಈ ಕಟ್ಟಡಕ್ಕೆ ಸಂಬಂಧವಾ ಗಿರದೆ ಶ್ರೇಷ್ಠವಾಗಿಯೂ ಪರಿಪೂರ್ಣವಾಗಿಯೂ ಇರುವ ಗುಡಾರದ ಮೂಲಕ ಹೋತಗಳ ಮತ್ತು ಕರುಗಳ ರಕ್ತವನ್ನು ತೆಗೆದುಕೊಳ್ಳದೆ ತನ್ನ ಸ್ವಂತ ರಕ್ತವನ್ನೇ ತೆಗೆದುಕೊಂಡು ನಮಗೋಸ್ಕರ ನಿತ್ಯವಿಮೋಚನೆಯನ್ನು ಸಂಪಾದಿಸಿಕೊಂಡವನಾಗಿ ಒಂದೇ ಸಾರಿ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಿದನು.
- 1 Chronicles 28:6 1 ಪೂರ್ವಕಾಲವೃತ್ತಾಂತ 28:6ಆತನು ನನ್ನ ಸಂಗಡ--ನಿನ್ನ ಮಗನಾದ ಸೊಲೊಮೋನನು ತಾನೇನನ್ನ ಮನೆಯನ್ನೂ ಅಂಗಳಗಳನ್ನೂ ಕಟ್ಟಿಸುವನು; ಅವನನ್ನು ನನಗೆ ಮಗನಾಗಿರಲು ಆದುಕೊಂಡೆನು. ನಾನು ಅವನಿಗೆ ತಂದೆಯಾಗಿರುವೆನು.