2 Corinthians · chapter 3 · verse 12
2 Corinthians 3:12 in Kannada
ನಮಗೆ ಇಂಥ ನಿರೀಕ್ಷೆ ಇರುವಲ್ಲಿ ನಾವು ಅತಿ ಸ್ಪಷ್ಟವಾಗಿ ಮಾತನಾಡುತ್ತೇವೆ.
Namage intha nireekshe iruvalli naavu ati spashtavaagi maatanaadutteve.
2 Corinthians 3:12 in English
- King James Version (KJV)
- Seeing then that we have such hope, we use great plainness of speech:
- World English Bible (WEB)
- Having therefore such a hope, we use great boldness of speech,
- American Standard Version (ASV)
- Having therefore such a hope, we use great boldness of speech,
- Bible in Basic English (BBE)
- Having then such a hope, we keep nothing back,
- Darby Translation (DBY)
- Having therefore such hope, we use much boldness:
- Webster's Bible (WBS)
- Seeing then that we have such hope, we use great plainness of speech:
- Young's Literal Translation (YLT)
- Having, then, such hope, we use much freedom of speech,
Read in context
- 10ಈಗ ಅತ್ಯಧಿಕವಾದ ಪ್ರಭಾವವುಳ್ಳದ್ದು ಬಂದದ್ದರಿಂದ ಪ್ರಭಾವವಾಗಿದ್ದದ್ದು ಈ ವಿಷಯದಲ್ಲಿ ಪ್ರಭಾವ ವಿಲ್ಲದ್ದಾಯಿತು.
- 11ಇಲ್ಲದೆ ಹೋಗುವಂಥದ್ದು ಪ್ರಭಾವ ವುಳ್ಳದ್ದಾಗಿದ್ದರೆ ಇರುವಂಥದ್ದು ಬಹು ಹೆಚ್ಚಾಗಿ ಪ್ರಭಾವವುಳ್ಳದ್ದಾಗಿರಬೇಕಲ್ಲವೇ?
- 12ನಮಗೆ ಇಂಥ ನಿರೀಕ್ಷೆ ಇರುವಲ್ಲಿ ನಾವು ಅತಿ ಸ್ಪಷ್ಟವಾಗಿ ಮಾತನಾಡುತ್ತೇವೆ.
- 13ಗತಿಸಿಹೋಗು ವದರ ಅಂತ್ಯವನ್ನು ಇಸ್ರಾಯೇಲ್ಯರು ದೃಷ್ಟಿಸಿ ನೋಡಲಾರದಂತೆ ತನ್ನ ಮುಖದ ಮೇಲೆ ಮುಸುಕು ಹಾಕಿಕೊಳ್ಳುವ ಮೋಶೆಯ ಹಾಗೆ ಅಲ್ಲ.
- 14ಆದರೆ ಅವರ ಬುದ್ದಿಮಂದವಾಯಿತು, ಆ ಮುಸುಕು ಕ್ರಿಸ್ತನಲ್ಲಿ ತೆಗೆದು ಹಾಕಲ್ಪಟ್ಟಿರುವದರಿಂದ ಹಳೇ ಒಡಂಬಡಿಕೆಯು ಪಾರಾಯಣವಾಗುವಾಗೆಲ್ಲಾ ಈ ದಿನದ ವರೆಗೂ ಅವರಿಗೆ ಆ ಮುಸುಕು ತೆಗೆಯಲ್ಪಡದೆ ಉಳಿದಿದೆ.
Cross references
- 2 Corinthians 7:4 2 ಕೊರಿಂಥದವರಿಗೆ 7:4ನಿಮ್ಮೊಂದಿಗೆ ಮಾತನಾಡು ವದಕ್ಕೆ ನನಗೆ ಬಹಳ ಧೈರ್ಯವೂ ನಿಮ್ಮ ವಿಷಯದಲ್ಲಿ ನನಗೆ ಬಹಳ ಹೆಚ್ಚಳವೂ ಉಂಟು; ನಾನು ಆದರಣೆ ಯಿಂದ ತುಂಬಿದವನಾಗಿ ನಮಗಾಗುವ ಎಲ್ಲಾ ಸಂಕಟಗಳಲ್ಲಿ ಅತ್ಯಧಿಕವಾದ ಸಂತೋಷದಿಂದ ಇದ್ದೇನೆ.
- Ephesians 6:19–20 ಎಫೆಸದವರಿಗೆ 6:19–20ನಾನು ಬಾಯಿ ತೆರೆಯುವಾಗ ಗುಪ್ತವಾಗಿದ್ದ ಸುವಾರ್ತೆಯ ಮರ್ಮವನ್ನು ಧೈರ್ಯವಾಗಿ ತಿಳಿಸುವದಕ್ಕೆ ಬೇಕಾದ ಮಾತನ್ನು ನನಗೆ ಅನುಗ್ರಹಿಸಬೇಕೆಂದು ಪ್ರಾರ್ಥಿಸಿರಿ. ಆ ಸುವಾರ್ತೆಯ ಮರ್ಮದ ನಿಮಿತ್ತವೇ ರಾಯಭಾರಿಯಾದ ನಾನು ಬೇಡಿಯಲ್ಲಿ ಬಿದ್ದಿದ್ದೇನಲ್ಲಾ; ಮಾತನಾಡಬೇಕಾದ ರೀತಿಯಲ್ಲಿ ನಾನು ಧೈರ್ಯವಾಗಿ ಮಾತನಾಡುವ ಹಂಗಿನಲ್ಲಿದ್ದೇನೆ.
- Philippians 1:20 ಫಿಲಿಪ್ಪಿಯವರಿಗೆ 1:20ಹೇಗೆಂದರೆ, ನಾನು ಯಾವ ವಿಷಯದಲ್ಲಾದರೂ ನಾಚಿಕೆಪಡದೆ ಎಂದಿನಂತೆ ಈಗಲೂ ಸಹ ತುಂಬಾ ಧೈರ್ಯದಿಂದಿರುವದರಿಂದ ಬದುಕಿದರೂ ಸರಿಯೇ ಸತ್ತರೂ ಸರಿಯೇ ನನ್ನ ದೇಹದ ಮೂಲಕ ಕ್ರಿಸ್ತನಿಗೆ ಮಹಿಮೆಯುಂಟಾಗಬೇಕೆಂದು ನನಗೆ ಬಹಳ ಅಭಿಲಾಷೆಯೂ ನಿರೀಕ್ಷೆಯೂ ಉಂಟು.
- John 16:29 ಯೋಹಾನನು 16:29ಆತನ ಶಿಷ್ಯರು ಆತನಿಗೆ--ಇಗೋ, ಈಗ ನೀನು ಸಾಮ್ಯರೂಪದಲ್ಲಿ ಮಾತನಾಡದೆ ಸ್ಪಷ್ಟವಾಗಿಯೇ ಮಾತನಾಡುತ್ತೀ.
- Acts 4:13 ಅಪೊಸ್ತಲರ ಕೃತ್ಯಗಳು 4:13ಅವರು ಪೇತ್ರ ಯೋಹಾನರ ಧೈರ್ಯವನ್ನು ನೋಡಿ ಇವರು ವಿದ್ಯೆಯಿಲ್ಲದವರೂ ತಿಳುವಳಿಕೆ ಯಿಲ್ಲದವರೂ ಎಂದು ಗ್ರಹಿಸಿ ಆಶ್ಚರ್ಯಪಟ್ಟು ಅವರು ಯೇಸುವಿನೊಂದಿಗೆ ಇದ್ದವರೆಂದು ತಿಳಿದುಕೊಂಡರು.
- John 16:25 ಯೋಹಾನನು 16:25ಇವುಗಳನ್ನು ನಾನು ಸಾಮ್ಯಗಳಿಂದ ನಿಮಗೆ ಹೇಳಿದ್ದೇನೆ; ಆದರೆ ನಾನು ಇನ್ನು ಸಾಮ್ಯಗಳಿಂದ ಮಾತನಾಡದೆ ತಂದೆಯ ವಿಷಯ ನಿಮಗೆ ಸ್ಪಷ್ಟವಾಗಿ ತಿಳಿಸುವ ಸಮಯ ಬರುತ್ತದೆ.
- Acts 9:29 ಅಪೊಸ್ತಲರ ಕೃತ್ಯಗಳು 9:29ಕರ್ತನಾದ ಯೇಸುವಿನ ಹೆಸರಿನಲ್ಲಿ ಧೈರ್ಯದಿಂದ ಮಾತನಾಡಿ ಗ್ರೀಕರೊಂದಿಗೆ ತರ್ಕಿಸುತ್ತಿ ದ್ದನು. ಆದರೆ ಅವರು ಅವನನ್ನು ಕೊಲ್ಲುವದಕ್ಕೆ ಪ್ರಯತ್ನ ಮಾಡಿದರು.
- 1 Thessalonians 2:2 1 ಥೆಸಲೊನೀಕದವರಿಗೆ 2:2ಫಿಲಿಪ್ಪಿ ಪಟ್ಟಣದಲ್ಲಿ ನಮಗೆ ಹಿಂಸೆ ಮತ್ತು ಅವಮಾನವು ಮೊದಲು ಸಂಭವಿಸಿದರೂ ನಾವು ನಮ್ಮ ದೇವರ ಮೂಲಕ ಧೈರ್ಯಗೊಂಡು ಬಹು ವಿರೋಧವನ್ನು ಅನುಭವಿಸುವವರಾಗಿ ನಿಮಗೆ ದೇವರ ಸುವಾರ್ತೆಯನ್ನು ತಿಳಿಸಿದೆವೆಂಬದನ್ನು ನೀವು ಬಲ್ಲಿರಿ.
- John 10:24 ಯೋಹಾನನು 10:24ಆಗ ಯೆಹೂದ್ಯರು ಆತನ ಸುತ್ತಲು ಬಂದು ಆತನಿಗೆ--ಇನ್ನು ಎಷ್ಟರ ವರೆಗೆ ನಮ್ಮನ್ನು ಸಂದೇಹಪಡಿಸುತ್ತೀ? ನೀನು ಕ್ರಿಸ್ತ ನಾಗಿದ್ದರೆ ನಮಗೆ ಸ್ಪಷ್ಟವಾಗಿ ಹೇಳು ಅಂದರು.
- 2 Corinthians 10:1 2 ಕೊರಿಂಥದವರಿಗೆ 10:1ನಿಮ್ಮೆದುರಿನಲ್ಲಿರುವಾಗ ದೀನನಾಗಿಯೂ ದೂರದಲ್ಲಿರುವಾಗ ನಿಮ್ಮ ಕಡೆಗೆ ದಿಟ್ಟತನ ತೋರಿಸುವವನಾಗಿಯೂ ಆಗಿದ್ದಾನೆಂದು ನೀವು ತಿಳಿಯುವ ಪೌಲನೆಂಬ ನಾನೇ ಕ್ರಿಸ್ತನ ಶಾಂತ ಮನಸ್ಸಿನಿಂದಲೂ ಸಾತ್ವಿಕತ್ವದಿಂದಲೂ ನಿಮ್ಮನ್ನು ಬೇಡಿಕೊಳ್ಳುತ್ತೇನೆ.
- 2 Corinthians 4:13 2 ಕೊರಿಂಥದವರಿಗೆ 4:13ಹೀಗಿದ್ದರೂ--ನಾನು ನಂಬಿದೆನು, ಆದದರಿಂದ ಮಾತನಾಡಿದೆನು ಎಂದು ಬರೆಯಲ್ಪಟ್ಟಿರುವ ಪ್ರಕಾರ ನಂಬಿಕೆಯ ಆತ್ಮವನ್ನೇ ಹೊಂದಿ ನಾವು ಸಹ ನಂಬುತ್ತೇವೆ; ಆದದರಿಂದ ಮಾತನಾಡುತ್ತೇವೆ.
- Acts 4:29–31 ಅಪೊಸ್ತಲರ ಕೃತ್ಯಗಳು 4:29–31ಈಗ ಕರ್ತನೇ, ಅವರ ಬೆದರಿಕೆಗಳನ್ನು ನೋಡು; ನಿನ್ನ ಸೇವಕರು ನಿನ್ನ ವಾಕ್ಯವನ್ನು ಪೂರ್ಣ ಧೈರ್ಯದಿಂದ ಹೇಳುವ ಹಾಗೆ ನಿನ್ನ ಕೈಗಳನ್ನು ಚಾಚುವದರಿಂದ ಸ್ವಸ್ಥತೆಯನ್ನುಂಟು ಮಾಡುವಂತೆಯೂ ಸೂಚಕ ಕಾರ್ಯ ಗಳು ಅದ್ಭುತಕಾರ್ಯಗಳು ನಿನ್ನ ಪವಿತ್ರ ಸೇವಕನಾದ ಯೇಸುವಿನ ಹೆಸರಿನಲ್ಲಿ ನಡೆಯುವಂತೆಯೂ ಅನು ಗ್ರಹಿಸು ಎಂದು ಗಟ್ಟಿಯಾದ ಸ್ವರದಿಂದ ಪ್ರಾರ್ಥಿಸಿ ದರು. ಹೀಗೆ ಪ್ರಾರ್ಥಿಸಿದ ಮೇಲೆ ಅವರು ಕೂಡಿದ್ದ ಸ್ಥಳವು ನಡುಗಿತು. ಅವರೆಲ್ಲರೂ ಪವಿತ್ರಾತ್ಮಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಮಾತನಾಡಿದರು.