2 Corinthians · chapter 4 · verse 13
2 Corinthians 4:13 in Kannada
ಹೀಗಿದ್ದರೂ--ನಾನು ನಂಬಿದೆನು, ಆದದರಿಂದ ಮಾತನಾಡಿದೆನು ಎಂದು ಬರೆಯಲ್ಪಟ್ಟಿರುವ ಪ್ರಕಾರ ನಂಬಿಕೆಯ ಆತ್ಮವನ್ನೇ ಹೊಂದಿ ನಾವು ಸಹ ನಂಬುತ್ತೇವೆ; ಆದದರಿಂದ ಮಾತನಾಡುತ್ತೇವೆ.
Heegiddaroo--naanu nambidenu, aadadarinda maatanaadidenu endu bareyalpattiruva prakaara nambikeya aatmavanne hondi naavu saha nambutteve; aadadarinda maatanaadutteve.
2 Corinthians 4:13 in English
- King James Version (KJV)
- We having the same spirit of faith, according as it is written, I believed, and therefore have I spoken; we also believe, and therefore speak;
- World English Bible (WEB)
- But having the same spirit of faith, according to that which is written, “I believed, and therefore I spoke.” We also believe, and therefore we also speak,
- American Standard Version (ASV)
- But having the same spirit of faith, according to that which is written, I believed, and therefore did I speak; we also believe, and therefore also we speak;
- Bible in Basic English (BBE)
- But having the same spirit of faith, as it is said in the Writings, The words of my mouth came from the faith in my heart; in the same way, our words are the outcome of our faith;
- Darby Translation (DBY)
- And having the same spirit of faith, according to what is written, I have believed, therefore have I spoken; we also believe, therefore also we speak;
- Webster's Bible (WBS)
- We having the same spirit of faith, according as it is written, I believed, and therefore have I spoken; we also believe, and therefore speak;
- Young's Literal Translation (YLT)
- And having the same spirit of the faith, according to that which hath been written, 'I believed, therefore I did speak;' we also do believe, therefore also do we speak;
Read in context
- 11ಯಾಕಂದರೆ ಯೇಸುವಿನ ಜೀವವು ಸಹ ನಮ್ಮ ಮರ್ತ್ಯ ಶರೀರದಲ್ಲಿ ಉಂಟೆಂದು ತೋರಿ ಬರುವದಕ್ಕಾಗಿ ಬದುಕಿರುವ ನಾವು ಯೇಸುವಿನ ನಿಮಿತ್ತ ಯಾವಾಗಲೂ ಮರಣಕ್ಕೆ ಒಪ್ಪಿಸಲ್ಪಡುತ್ತಾ ಇದ್ದೇವೆ.
- 12ಹೀಗೆ ನಮ್ಮಲ್ಲಿ ಮರಣವೂ ನಿಮ್ಮಲ್ಲಿ ಜೀವವೂ ಪ್ರವರ್ತಿಸುತ್ತದೆ.
- 13ಹೀಗಿದ್ದರೂ--ನಾನು ನಂಬಿದೆನು, ಆದದರಿಂದ ಮಾತನಾಡಿದೆನು ಎಂದು ಬರೆಯಲ್ಪಟ್ಟಿರುವ ಪ್ರಕಾರ ನಂಬಿಕೆಯ ಆತ್ಮವನ್ನೇ ಹೊಂದಿ ನಾವು ಸಹ ನಂಬುತ್ತೇವೆ; ಆದದರಿಂದ ಮಾತನಾಡುತ್ತೇವೆ.
- 14ಕರ್ತನಾದ ಯೇಸುವನ್ನು ಎಬ್ಬಿಸಿದಾತನು ನಮ್ಮನ್ನು ಸಹ ಯೇಸುವಿನ ಮುಖಾಂತರ ಎಬ್ಬಿಸಿ ನಿಮ್ಮ ಜೊತೆಯಲ್ಲಿ ನಿಲ್ಲಿಸುವನೆಂದು ತಿಳಿದವರಾಗಿದ್ದೇವೆ.
- 15ಅವೆಲ್ಲವುಗಳು ನಿಮಗಾಗಿಯೇ ಇರುತ್ತವೆ; ಅವು ಗಳಲ್ಲಿ ಅಧಿಕವಾಗಿ ದೊರಕುವ ಕೃಪೆಯು ಬಹುಜನ ರೊಳಗೆ ಕೃತಜ್ಞತೆಯನ್ನು ಹುಟ್ಟಿಸುವದರಿಂದ ದೇವರಿಗೆ ಹೆಚ್ಚಾದ ಮಹಿಮೆಯನ್ನು ಉಂಟು ಮಾಡುವದು.
Cross references
- Psalm 116:10 ಕೀರ್ತನೆಗಳು 116:10ನಾನು ನಂಬಿದೆನು; ಆದದರಿಂದ ಮಾತಾಡಿದೆನು; ನಾನು ಬಹಳವಾಗಿ ಕುಗ್ಗಿಹೋದೆನು.
- Hebrews 11:1–40 ಇಬ್ರಿಯರಿಗೆ 11:1–40ನಂಬಿಕೆಯು ನಿರೀಕ್ಷಿಸುವವುಗಳ ನಿಜ ಲಕ್ಷಣವೂ ಕಾಣದವುಗಳ ನಿದರ್ಶನವೂ ಆಗಿದೆ. ಹಿರಿಯರು ನಂಬಿಕೆಯಿಂದಲೇ ಒಳ್ಳೇ ಸಾಕ್ಷಿ ಹೊಂದಿದರು. ನಂಬಿಕೆಯಿಂದಲೇ ಲೋಕಗಳು ದೇವರ ಮಾತಿನಿಂದ ನಿರ್ಮಿತವಾದವೆಂದು ನಾವು ತಿಳುಕೊಂಡದ್ದರಿಂದ ಕಾಣಿಸುವವುಗಳು ದೃಶ್ಯ ವಸ್ತು ಗಳಿಂದ ಉಂಟಾಗಲಿಲ್ಲವೆಂದು ಗ್ರಹಿಸುತ್ತೇವೆ. ನಂಬಿಕೆಯಿಂದಲೇ ಹೇಬೆಲನು ಕಾಯಿನನ ಯಜ್ಞ ಕ್ಕಿಂತ ಅತಿ ಶ್ರೇಷ್ಠವಾದ ಯಜ್ಞವನ್ನು ದೇವರಿಗೆ ಸಮ ರ್ಪಿಸಿದನು. ಅದರ ಮೂಲಕ ಅವನು ನೀತಿವಂತ ನೆಂದು ಸಾಕ್ಷಿ ಹೊಂದಿದನು: ದೇವರು ಅವನ ಕಾಣಿಕೆಗಳ ವಿಷಯವಾಗಿ ಸಾಕ್ಷಿಕೊಟ್ಟನು; ಅವನು ಸತ್ತವನಾಗಿದ್ದರೂ ಅದರಿಂದ ಇನ್ನೂ ಮಾತನಾಡುತ್ತಾನೆ. ಹನೋಕನು ಮರಣವನ್ನು ಅನುಭವಿಸದೆ ಒಯ್ಯ ಲ್ಪಟ್ಟದ್ದು ನಂಬಿಕೆಯಿಂದಲೇ; ಅವನನ್ನು ದೇವರು ತೆಗೆದುಕೊಂಡು ಹೋದದರಿಂದ ಅವನು ಯಾರಿಗೂ ಸಿಕ್ಕಲಿಲ್ಲ; ಅವನು ಒಯ್ಯಲ್ಪಡುವದಕ್ಕಿಂತ ಮೊದಲು ದೇವರನ್ನು ಮೆಚ್ಚಿಸುವವನಾಗಿದ್ದನೆಂದು ಸಾಕ್ಷಿ ಉಂಟು. ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ಯಾಕಂದರೆ ದೇವರ ಬಳಿಗೆ ಬರುವವನು ದೇವರು ಇದ್ದಾನೆ, ತನ್ನನ್ನು ಜಾಗ್ರತೆಯಾಗಿ ಹುಡುಕು ವವನಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬು ವದು ಅವಶ್ಯ. ನಂಬಿಕೆಯಿಂದಲೇ ನೋಹನು ಇನ್ನೂ ಕಾಣದಿದ್ದವುಗಳ ವಿಷಯವಾಗಿ ದೇವರಿಂದ ಎಚ್ಚರಿಸ ಲ್ಪಟ್ಟು ಭಯಗ್ರಸ್ತನಾಗಿ ತನ್ನ ಮನೆಯವರ ರಕ್ಷಣೆಗಾಗಿ ನಾವೆಯನ್ನು ಸಿದ್ಧ ಮಾಡಿದನು. ಆದರಿಂದ ಅವನು ಲೋಕದವರನ್ನು ಖಂಡಿಸಿ ತರುವಾಯ ನಂಬಿಕೆಯಿಂ ದುಂಟಾಗುವ ನೀತಿಗೆ ಬಾಧ್ಯನಾದನು. ನಂಬಿಕೆಯಿಂದಲೇ ಅಬ್ರಹಾಮನು ಕರೆಯ ಲ್ಪಟ್ಟಾಗ ವಿಧೇಯನಾಗಿ ತಾನು ಬಾಧ್ಯವಾಗಿ ಹೊಂದ ಬೇಕಾಗಿದ್ದ ಸ್ಥಳಕ್ಕೆ ಹೊರಟುಹೋದನು; ತಾನು ಹೋಗಬೇಕಾದ ಸ್ಥಳವು ಯಾವದೆಂದು ತಿಳಿಯದೆ ಹೊರಟನು. ನಂಬಿಕೆಯಿಂದಲೇ ಅವನು ವಾಗ್ದತ್ತ ದೇಶದಲ್ಲಿ ಅನ್ಯದೇಶದಲ್ಲಿ ಇದ್ದವನಂತೆ ಗುಡಾರಗಳಲ್ಲಿ ಇದ್ದುಕೊಂಡು ಪ್ರವಾಸಿಯಾಗಿದ್ದನು. ಅದೇ ವಾಗ್ದಾನಕ್ಕೆ ಬಾಧ್ಯರಾಗಿದ್ದ ಇಸಾಕ ಯಾಕೋಬರೊಂದಿಗೆ ಗುಡಾರಗಳಲ್ಲಿ ವಾಸಿಸಿದನು. ಯಾಕಂದರೆ ದೇವರು ಯಾವದನ್ನು ಕಟ್ಟುವಾತನೂ ಮಾಡುವಾತನೂ ಆಗಿದ್ದಾನೋ ಅಸ್ತಿವಾರಗಳ್ಳುಳ್ಳ ಆ ಪಟ್ಟಣಕ್ಕೋಸ್ಕರ ಅವನು ಎದುರುನೋಡುತ್ತಿದ್ದನು. ಇದಲ್ಲದೆ ಸಾರಳು ಸಹ ವಾಗ್ದಾನ ಮಾಡಿದಾತ ನನ್ನು ನಂಬತಕ್ಕವನೆಂದು ತೀರ್ಮಾನಿಸಿ ತಾನು ಪ್ರಾಯ ವಿಾರಿದವಳಾಗಿದ್ದರೂ ನಂಬಿಕೆಯಿಂದಲೇ ಗರ್ಭವತಿ ಯಾಗುವದಕ್ಕೆ ಶಕ್ತಿಯನ್ನು ಹೊಂದಿ ಒಂದು ಮಗುವನ್ನು ಹೆತ್ತಳು. ಆದದರಿಂದ ಮೃತಪ್ರಾಯನಾಗಿದ್ದ ಒಬ್ಬ ನಿಂದ ಆಕಾಶದ ನಕ್ಷತ್ರಗಳಂತೆ ಗುಂಪುಗುಂಪಾಗಿಯೂ ಸಮುದ್ರ ತೀರದಲ್ಲಿರುವ ಉಸುಬಿನಂತೆ ಅಸಂಖ್ಯ ವಾಗಿಯೂ ಹುಟ್ಟಿದರು. ಇವರೆಲ್ಲರು ವಾಗ್ದಾನಗಳ ಫಲವನ್ನು ಹೊಂದದೆ ಅವುಗಳನ್ನು ದೂರದಿಂದ ನೋಡಿ ನಿಶ್ಚಯದೊಡನೆ ಅಪ್ಪಿಕೊಂಡು ನಂಬಿಕೆಯುಳ್ಳವರಾಗಿ ಮೃತರಾದರು; ತಾವು ಭೂಮಿಯ ಮೇಲೆ ಪರದೇಶದವರೂ ಪ್ರವಾಸಿ ಗಳೂ ಆಗಿದ್ದೇವೆಂದು ಒಪ್ಪಿಕೊಂಡರು. ಇಂಥ ಮಾತುಗಳನ್ನಾಡುವವರು ತಾವು ಒಂದು ದೇಶವನ್ನು ಹುಡುಕುವವರೆಂದು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾರೆ. ತಾವು ಹೊರಟು ಬಂದಿದ್ದ ದೇಶದ ಮೇಲೆ ನಿಜವಾಗಿ ಮನಸ್ಸಿಟ್ಟವರಾಗಿದ್ದರೆ ತಿರಿಗಿ ಅಲ್ಲಿಗೆ ಹೋಗುವದಕ್ಕೆ ಅವರಿಗೆ ಅವಕಾಶವಿತ್ತು. ಆದರೆ ಈಗ ಅವರು ಪರಲೋಕವೆಂಬ ಉತ್ತಮದೇಶವನ್ನು ಹಾರೈಸುವವ ರಾಗಿದ್ದಾರೆ. ಆದದರಿಂದ ದೇವರು ಅವರ ದೇವರೆನಿ ಸಿಕೊಳ್ಳುವದಕ್ಕೆ ನಾಚಿಕೊಳ್ಳದೆ ಅವರಿಗೋಸ್ಕರ ಒಂದು ಪಟ್ಟಣವನ್ನು ಸಿದ್ಧಮಾಡಿದ್ದಾನೆ. ಅಬ್ರಹಾಮನು ಶೋಧಿತನಾಗಿ ನಂಬಿಕೆ ಯಿಂದಲೇ ಇಸಾಕನನ್ನು ಸಮರ್ಪಿಸಿದನು; ಆ ವಾಗ್ದಾನ ಗಳನ್ನು ಹೊಂದಿದ ಅವನು ತನ್ನ ಒಬ್ಬನೇ ಮಗನನ್ನು ಸಮರ್ಪಿಸಿದನು. ಅವನ ವಿಷಯದಲ್ಲಿ ಇಸಾಕ ನಲ್ಲಿಯೇ ನಿನ್ನ ಸಂತತಿ ಕರೆಯಲ್ಪಡುವದೆಂದು ಹೇಳ ಲ್ಪಟ್ಟಿತು. ತನ್ನ ಮಗನನ್ನು ಸತ್ತವರೊಳಗಿಂದಲೂ ದೇವರು ಎಬ್ಬಿಸ ಸಮರ್ಥನಾಗಿದ್ದಾನೆಂದು ಎಣಿಸಿದನು. ಸತ್ತವರೊಳಗಿಂದಲೇ ಜೀವಿತನಾಗಿ ಬಂದವನಂತೆ ಅವನನ್ನು ಉಪಮಾನವಾಗಿ ಹೊಂದಿದನು. ನಂಬಿಕೆಯಿಂದಲೇ ಇಸಾಕನು ಮುಂದೆ ಬರ ಬೇಕಾದವುಗಳ ವಿಷಯದಲ್ಲಿ ಯಾಕೋಬನನ್ನೂ ಏಸಾವನನ್ನೂ ಆಶೀರ್ವದಿಸಿದನು. ನಂಬಿಕೆಯಿಂದಲೇ ಯಾಕೋಬನು ಸಾಯುತ್ತಿರುವಾಗ ಯೋಸೇಫನ ಇಬ್ಬರು ಮಕ್ಕಳನ್ನು ಆಶೀರ್ವದಿಸಿದನು. ತನ್ನ ಕೋಲಿನ ಮೇಲೆ ಒರಗಿಕೊಂಡು ದೇವರನ್ನು ಆರಾಧಿಸಿದನು. ಯೋಸೇಫನು ಸಾಯುವಾಗ ಇಸ್ರಾಯೇಲಿನ ಮಕ್ಕಳು ಹೊರಡುವದನ್ನು ಕುರಿತು ನಂಬಿಕೆಯಿಂದಲೇ ಮಾತನಾಡಿ ತನ್ನ ಎಲುಬುಗಳ ವಿಷಯದಲ್ಲಿ ಅಪ್ಪಣೆಕೊಟ್ಟನು. ಮೋಶೆ ಹುಟ್ಟಿದಾಗ ಕೂಸು ಸುಂದರವಾಗಿರು ವದನ್ನು ಅವನ ತಂದೆತಾಯಿಗಳು ನೋಡಿ ಅರಸನ ಅಪ್ಪಣೆಗೆ ಭಯಪಡದೆ ನಂಬಿಕೆಯಿಂದಲೇ ಅವನನ್ನು ಮೂರು ತಿಂಗಳು ಬಚ್ಚಿಟ್ಟರು. ಮೋಶೆಯು ದೊಡ್ಡವ ನಾದ ಮೇಲೆ ಫರೋಹನ ಕುಮಾರ್ತೆಯ ಮಗನೆನಿಸಿ ಕೊಳ್ಳುವದು ಬೇಡವೆಂದದ್ದು ನಂಬಿಕೆಯಿಂದಲೇ. ಸ್ವಲ್ಪ ಕಾಲ ಪಾಪಭೋಗಗಳನ್ನನುಭವಿಸುವದಕ್ಕಿಂತ ದೇವಜನರೊಂದಿಗೆ ಕಷ್ಟವನ್ನನುಭವಿಸುವದನ್ನೇ ಆರಿಸಿ ಕೊಂಡನು. ಐಗುಪ್ತದಲ್ಲಿನ ಐಶ್ವರ್ಯಗಳಿಗಿಂತಲೂ ಕ್ರಿಸ್ತನ ವಿಷಯವಾದ ನಿಂದೆಯು ಅಧಿಕ ಐಶ್ವರ್ಯ ವೆಂದೆಣಿಸಿಕೊಂಡನು; ಯಾಕಂದರೆ ಪ್ರತಿಫಲದ ಬಹು ಮಾನವನ್ನು ಅವನು ಗೌರವಿಸಿದನು. ನಂಬಿಕೆ ಯಿಂದಲೇ ಅವನು ಅರಸನ ರೌದ್ರಕ್ಕೆ ಭಯಪಡದೆ ಐಗುಪ್ತ ದೇಶವನ್ನು ತೊರೆದುಬಿಟ್ಟನು. ಯಾಕಂದರೆ ಅವನು ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು. ಇಸ್ರಾಯೇಲ್ಯರ ಚೊಚ್ಚಲಮಕ್ಕಳನ್ನು ಸಂಹರಿಸುವವನು ಅವರನ್ನು ಮುಟ್ಟದಂತೆ ಅವನು ಪಸ್ಕವನ್ನೂ ರಕ್ತ ಪ್ರೋಕ್ಷಣೆಯನ್ನೂ ಆಚರಿಸಿದ್ದು ನಂಬಿಕೆಯಿಂದಲೇ. ನಂಬಿಕೆಯಿಂದಲೇ ಇಸ್ರಾಯೇಲ್ಯರು ಒಣ ಭೂಮಿಯನ್ನು ದಾಟುವಂತೆ ಕೆಂಪು ಸಮುದ್ರವನ್ನು ದಾಟಿದರು; ಐಗುಪ್ತ ದೇಶದವರು ಅದನ್ನು ದಾಟು ವದಕ್ಕೆ ಪ್ರಯತ್ನಿಸಿ ಮುಳುಗಿಹೋದರು. ನಂಬಿಕೆ ಯಿಂದಲೇ ಅವರು ಸುಮಾರು ಏಳು ದಿವಸಗಳು ಯೆರಿಕೋವಿನ ಗೋಡೆಗಳನ್ನು ಸುತ್ತಿದ ಮೇಲೆ ಅವು ಬಿದ್ದವು. ನಂಬಿಕೆಯಿಂದಲೇ ರಹಾಬಳೆಂಬ ಸೂಳೆಯು ಗೂಢಚಾರರನ್ನು ಸಮಾಧಾನವಾಗಿ ಸೇರಿಸಿ ಕೊಂಡು ನಂಬದವರೊಂದಿಗೆ ನಾಶವಾಗಲಿಲ್ಲ. ಇನ್ನೂ ಏನು ಹೇಳಬೇಕು? ಗಿಡಿಯೋನ್ ಬಾರಾಕ್ ಸಂಸೋನ್ ಎಫ್ಥ ದಾವೀದ್ ಸಮುವೇಲ್ ಮತ್ತು ಪ್ರವಾದಿಗಳ ವಿಷಯವಾಗಿ ಹೇಳುವದಕ್ಕೆ ನನಗೆ ಸಮಯ ಸಾಲದು. ನಂಬಿಕೆಯ ಮೂಲಕ ಅವರು ರಾಜ್ಯಗಳನ್ನು ಸ್ವಾಧೀನ ಮಾಡಿಕೊಂಡರು; ನೀತಿಯನ್ನು ನಡಿಸಿದರು; ವಾಗ್ದಾನಗಳನ್ನು ಪಡ ಕೊಂಡರು; ಸಿಂಹಗಳ ಬಾಯಿ ಕಟ್ಟಿದರು. ಬೆಂಕಿಯ ಬಲವನು ಆರಿಸಿದರು; ಕತ್ತಿಯ ಬಾಯಿಗೆ ತಪ್ಪಿಸಿಕೊಂಡರು; ನಿರ್ಬಲರಾಗಿದ್ದು ಬಲಿಷ್ಠರಾದರು; ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು; ಪರರ ದಂಡುಗಳನ್ನು ಓಡಿಸಿಬಿಟ್ಟರು. ಸ್ತ್ರೀಯರು ಸತ್ತುಹೋಗಿದ್ದ ತಮ್ಮವರನ್ನು ಜೀವದಿಂದ ತಿರಿಗಿ ಹೊಂದಿದರು; ಕೆಲವರು ತಾವು ಯಾತನೆ ಹೊಂದುತ್ತಿರುವಾಗ ಶ್ರೇಷ್ಠ ಪುನರುತ್ಥಾನವನ್ನು ಹೊಂದುವದಕ್ಕೋಸ್ಕರ ಬಿಡುಗಡೆ ಬೇಡವೆಂದು ಹೇಳಿದರು. ಬೇರೆ ಕೆಲವರು ಅಪಹಾಸ್ಯ ಕೊರಡೆಯಪೆಟ್ಟು, ಹೌದು, ಇನ್ನು ಬೇಡಿ ಸೆರೆಮನೆ ಇವುಗಳನ್ನು ಅನುಭವಿಸಿದರು. ಕೆಲವರನ್ನು ಕಲ್ಲೆಸೆ ದರು; ಕೆಲವರನ್ನು ಗರಗಸದಿಂದ ಕೊಯ್ದುಕೊಂದರು. ಕೆಲವರನ್ನು ಪರಿಶೋಧಿಸಿದರು, ಕೆಲವರನ್ನು ಕತ್ತಿಯಿಂದ ಕೊಂದರು; ಕೆಲವರು ಕೊರತೆ ಹಿಂಸೆ ಬಾಧೆ ಇವುಗಳನ್ನು ಅನುಭವಿಸುವವರಾಗಿದ್ದು ಕುರಿ ಮೇಕೆಗಳ ಚರ್ಮ ಗಳನ್ನು ಉಟ್ಟುಕೊಂಡವರಾಗಿ ಅಲೆದಾಡಿದರು. ಇಂಥವರಿಗೆ ಈ ಲೋಕವು ಯೋಗ್ಯವಾದದ್ದಲ್ಲ; ಅವರು ಭೂಮಿಯ ಕಾಡು ಬೆಟ್ಟ ಗವಿ ಕುಣಿಗಳಲ್ಲಿ ಅಲೆಯುವವರಾಗಿದ್ದರು. ಇವರೆಲ್ಲರೂ ನಂಬಿಕೆಯ ಮೂಲಕ ಒಳ್ಳೇ ಸಾಕ್ಷಿಯನ್ನು ಹೊಂದಿದವರಾಗಿದ್ದರೂ ವಾಗ್ದಾನವನ್ನು ಹೊಂದಲಿಲ್ಲ;ನಾವಿಲ್ಲದೆ ಅವರು ಸಿದ್ಧಿಗೆ ಬರಬಾರದೆಂದು ದೇವರು ನಮಗೋಸ್ಕರ ಶ್ರೇಷ್ಠ ವಾದದ್ದನ್ನು ಏರ್ಪಡಿಸಿದ್ದನು. ನಾವಿಲ್ಲದೆ ಅವರು ಸಿದ್ಧಿಗೆ ಬರಬಾರದೆಂದು ದೇವರು ನಮಗೋಸ್ಕರ ಶ್ರೇಷ್ಠ ವಾದದ್ದನ್ನು ಏರ್ಪಡಿಸಿದ್ದನು.
- 2 Corinthians 3:12 2 ಕೊರಿಂಥದವರಿಗೆ 3:12ನಮಗೆ ಇಂಥ ನಿರೀಕ್ಷೆ ಇರುವಲ್ಲಿ ನಾವು ಅತಿ ಸ್ಪಷ್ಟವಾಗಿ ಮಾತನಾಡುತ್ತೇವೆ.
- 1 Corinthians 12:9 1 ಕೊರಿಂಥದವರಿಗೆ 12:9ಬೇರೊಬ್ಬನಿಗೆ ಆ ಆತ್ಮನಿಂದಲೇ ನಂಬಿಕೆಯು, ಮತ್ತೊಬ್ಬನಿಗೆ ಆ ಆತ್ಮನಿಂದಲೇ ರೋಗ ಗಳನ್ನು ವಾಸಿಮಾಡುವ ವರಗಳು,
- Proverbs 21:28 ಜ್ಞಾನೋಕ್ತಿಗಳು 21:28ಸುಳ್ಳುಸಾಕ್ಷಿಯವನು ನಾಶವಾಗುವನು; ಕೇಳುವವನು ಬಿಡದೆ ಮಾತಾಡುವನು.
- Acts 15:11 ಅಪೊಸ್ತಲರ ಕೃತ್ಯಗಳು 15:11ಕರ್ತನಾದ ಯೇಸು ಕ್ರಿಸ್ತನ ಕೃಪೆಯಿಂದಲೇ ನಾವು ರಕ್ಷಣೆ ಹೊಂದುವೆವೆಂಬದಾಗಿ ನಂಬುತ್ತೇವಲ್ಲಾ; ಹಾಗೆಯೇ ಅವರೂ ಹೊಂದುವರು ಎಂದು ಹೇಳಿ ದನು.
- 2 Peter 1:1 2 ಪೇತ್ರನು 1:1ಯೇಸು ಕ್ರಿಸ್ತನ ದಾಸನೂ ಅಪೊಸ್ತಲನೂ ಆಗಿರುವ ಸೀಮೋನ ಪೇತ್ರನು ದೇವರ ಮತ್ತು ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ನೀತಿಯಿಂದ ನಮ್ಮೊಂದಿಗೆ ಅಮೂಲ್ಯವಾದ ನಂಬಿಕೆಯನ್ನು ಹೊಂದಿದವರಿಗೆ--
- Romans 1:12 ರೋಮಾಪುರದವರಿಗೆ 1:12ಹೀಗೆ ಪರಸ್ಪರ ನಂಬಿಕೆಯ ಮೂಲಕ ನಾನು ನಿಮ್ಮೊಂ ದಿಗೆ ಆದರಿಸಲ್ಪಡುವೆನು.
Original words (Greek)
- We · G2249ἡμεῖς hēmeîs
- having · G2192ἔχω échō
- same · G846αὐτός autós
- spirit · G4151πνεῦμα pneûma
- faith · G4102πίστις pístis
- as · G2596κατά katá
- written · G1125γράφω gráphō
- believed · G4100πιστεύω pisteúō
- therefore · G1352διό dió
- spoken · G2980λαλέω laléō
- we · G4100πιστεύω pisteúō
- also · G2532καί kaí
- believe · G4100πιστεύω pisteúō
- and · G2532καί kaí
- therefore · G1352διό dió
- speak · G2980λαλέω laléō