2 Kings · chapter 17 · verse 16
2 Kings 17:16 in Kannada
ಇದಲ್ಲದೆ ಅವರು ತಮ್ಮ ದೇವರಾದ ಕರ್ತನ ಎಲ್ಲಾ ಆಜ್ಞೆಗಳನ್ನು ಬಿಟ್ಟು ತಮಗೆ ತಾವೇ ಎರಕ ಹೊಯ್ದ ವಿಗ್ರಹಗಳಾದ ಎರಡು ಹೋರಿಗಳನ್ನು ಮಾಡಿಕೊಂಡು ವಿಗ್ರಹಗಳ ತೋಪನ್ನು ಮಾಡಿ ಆಕಾಶದ ಸೈನ್ಯಕ್ಕೆಲ್ಲಾ ಅಡ್ಡಬಿದ್ದು ಬಾಳನನ್ನು ಸೇವಿಸಿ
Idallade avaru tamma devaraada kartana ellaa aajnyegalannu bittu tamage taave eraka hoyda vigrahagalaada eradu horigalannu maadikondu vigrahagala topannu maadi aakaashada sainyakkellaa addabiddu baalanannu sevisi
2 Kings 17:16 in English
- King James Version (KJV)
- And they left all the commandments of the LORD their God, and made them molten images, [even] two calves, and made a grove, and worshipped all the host of heaven, and served Baal.
- World English Bible (WEB)
- They abandoned all the commandments of the LORD their God, and made molten images for themselves, even two calves, and made an Asherah, and worshiped all the army of the sky, and served Baal.
- American Standard Version (ASV)
- And they forsook all the commandments of Jehovah their God, and made them molten images, even two calves, and made an Asherah, and worshipped all the host of heaven, and served Baal.
- Bible in Basic English (BBE)
- And turning their backs on all the orders which the Lord had given them, they made for themselves images of metal, and the image of Asherah, worshipping all the stars of heaven and becoming servants to Baal.
- Darby Translation (DBY)
- And they forsook all the commandments of Jehovah their God, and made them molten images, two calves, and made an Asherah, and worshipped all the host of the heavens, and served Baal;
- Webster's Bible (WBS)
- And they left all the commandments of the LORD their God, and made for themselves molten images, [even] two calves, and made a grove, and worshiped all the host of heaven, and served Baal.
- Young's Literal Translation (YLT)
- And they forsake all the commands of Jehovah their God, and make to them a molten image — two calves, and make a shrine, and bow themselves to all the host of the heavens, and serve Baal,
Read in context
- 14ಆದರೆ ಅವರು ಕೇಳ ದೆಯೂ ತಮ್ಮ ದೇವರಾದ ಕರ್ತನಲ್ಲಿ ನಂಬಿಕೆ ಇಡ ದೆಯೂ ತಮ್ಮ ಪಿತೃಗಳ ಕುತ್ತಿಗೆಯ ಹಾಗೆ ತಮ್ಮ ಕುತ್ತಿಗೆಯನ್ನು
- 15ಕಠಿಣಪಡಿಸಿ ಆತನ ಕಟ್ಟಳೆಗಳನ್ನೂ ಆತನು ತಮ್ಮ ಪಿತೃಗಳ ಸಂಗಡ ಮಾಡಿದ ಆತನ ಒಡಂಬಡಿಕೆಯನ್ನೂ ಆತನು ಅವರಿಗೆ ಹೇಳಿದ ಸಾಕ್ಷಿ ಗಳನ್ನೂ ಅಲಕ್ಷ್ಯಮಾಡಿ ವ್ಯರ್ಥವಾದದ್ದನ್ನು ಹಿಂಬಾ ಲಿಸಿ ವ್ಯರ್ಥವಾದವರಾಗಿ -- ನೀವು ಅವರ ಹಾಗೆ ಮಾಡಬೇಡಿರೆಂದು ಕರ್ತನು ಅವರಿಗೆ ಆಜ್ಞಾಪಿಸಿದರೂ ಅವರ ಸುತ್ತಲಿರುವ ಅನ್ಯಜನಾಂಗಗಳ ಹಿಂದೆ ಹೋದರು.
- 16ಇದಲ್ಲದೆ ಅವರು ತಮ್ಮ ದೇವರಾದ ಕರ್ತನ ಎಲ್ಲಾ ಆಜ್ಞೆಗಳನ್ನು ಬಿಟ್ಟು ತಮಗೆ ತಾವೇ ಎರಕ ಹೊಯ್ದ ವಿಗ್ರಹಗಳಾದ ಎರಡು ಹೋರಿಗಳನ್ನು ಮಾಡಿಕೊಂಡು ವಿಗ್ರಹಗಳ ತೋಪನ್ನು ಮಾಡಿ ಆಕಾಶದ ಸೈನ್ಯಕ್ಕೆಲ್ಲಾ ಅಡ್ಡಬಿದ್ದು ಬಾಳನನ್ನು ಸೇವಿಸಿ
- 17ತಮ್ಮ ಕುಮಾರರನ್ನೂ ಕುಮಾರ್ತೆಯರನ್ನೂ ಬೆಂಕಿಯಲ್ಲಿ ದಾಟಮಾಡಿ ಕಣಿಗಳನ್ನೂ ಶಕುನಗಳನ್ನೂ ಬಳಸಿ ಕರ್ತ ನಿಗೆ ಕೋಪ ಬರುವಂತೆ ಆತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಲು ತಮ್ಮನ್ನು ಮಾರಿಬಿಟ್ಟರು.
- 18ಆದದರಿಂದ ಕರ್ತನು ಇಸ್ರಾಯೇಲಿನ ಮೇಲೆ ಬಹುಕೋಪ ಗೊಂಡು ಅವರನ್ನು ತನ್ನ ಸಮ್ಮುಖದಿಂದ ತೆಗೆದುಹಾಕಿ ದನು. ಯೆಹೂದದ ಗೋತ್ರದ ಹೊರತಾಗಿ ಇನ್ಯಾರೂ ಉಳಿದದ್ದಿಲ್ಲ.
Cross references
- 1 Kings 14:15 1 ಅರಸುಗಳು 14:15ಆದರೆ ಈಗಲೇ ಏನು ಆಗುವದು? ನೀರಿನಲ್ಲಿರುವ ದಂಟು ಅಲ್ಲಾಡುವ ಹಾಗೆ ಕರ್ತನು ಇಸ್ರಾಯೇಲ್ಯರನ್ನು ಹೊಡೆಯುವನು. ಇಸ್ರಾ ಯೇಲ್ಯರು ಕರ್ತನಿಗೆ ಕೋಪವನ್ನು ಎಬ್ಬಿಸಲು ತಮ್ಮ ವಿಗ್ರಹಾರಾಧನೆಗೋಸ್ಕರ ತೋಪುಗಳನ್ನು ಹಾಕಿದ್ದ ರಿಂದ ಆತನು ಅವರ ತಂದೆಗಳಿಗೆ ಕೊಟ್ಟ ಈ ಉತ್ತಮ ದೇಶದಲ್ಲಿಂದ ಅವರನ್ನು ನಿರ್ಮೂಲ ಮಾಡಿ ನದಿಯ ಆಚೆಯಲ್ಲಿ ಅವರನ್ನು ಚದರುವಂತೆ ಮಾಡುವನು.
- 1 Kings 14:23 1 ಅರಸುಗಳು 14:23ಅವರು ಎತ್ತರವಾದ ಪ್ರತಿ ಗುಡ್ಡದ ಮೇಲೆಯೂ ಹಸುರಾದ ಪ್ರತಿ ಗಿಡದ ಕೆಳಗೂ ತೋಪು ಗಳನ್ನು ವಿಗ್ರಹಗಳನ್ನು ಉನ್ನತ ಸ್ಥಳಗಳನ್ನು ತಮಗಾಗಿ ಮಾಡಿಕೊಂಡರು. ಇದಲ್ಲದೆ ದೇಶದಲ್ಲಿ ಪುರುಷ ಸಂಗಮರಿದ್ದರು.
- 1 Kings 16:31 1 ಅರಸುಗಳು 16:31ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳಲ್ಲಿ ನಡೆಯು ವದು ಅವನಿಗೆ ಅಲ್ಪವಾಗಿತ್ತು; ಅವನು ಚೀದೋನ್ಯರ ಅರಸನಾಗಿರುವ ಎತ್ಬಾಳನ ಮಗಳಾದ ಈಜೆಬೆಲಳನ್ನು ಮದುವೆಯಾಗಿ ಬಾಳನನ್ನು ಸೇವಿಸಿ ಅವನಿಗೆ ಅಡ್ಡ ಬಿದ್ದನು.
- 1 Kings 12:28 1 ಅರಸುಗಳು 12:28ಎಂದು ಅರಸನು ಆಲೋ ಚನೆ ಕೇಳಿಕೊಂಡು ಎರಡು ಬಂಗಾರದ ಹೋರಿಗ ಳನ್ನು ಮಾಡಿಸಿ ಜನರಿಗೆ--ಯೆರೂಸಲೇಮಿನ ವರೆಗೂ ಹೋಗುವದು ನಿಮಗೆ ಕಷ್ಟವಾಗಿದೆ. ಓ ಇಸ್ರಾಯೇಲೇ, ಇಗೋ, ಐಗುಪ್ತದಿಂದ ನಿನ್ನನ್ನು ಬರಮಾಡಿದ ನಿನ್ನ ಈ ದೇವರುಗಳು ಅಂದನು.
- Deuteronomy 4:19 ಧರ್ಮೋಪದೇಶಕಾಂಡ 4:19ನೀನು ನಿನ್ನ ಕಣ್ಣು ಗಳನ್ನು ಆಕಾಶದ ಕಡೆಗೆ ಎತ್ತಿ ಸೂರ್ಯ, ಚಂದ್ರ, ನಕ್ಷತ್ರಗಳ ಆಕಾಶ ಸೈನ್ಯವನ್ನೆಲ್ಲಾ ನೋಡಲಾಗಿ ನಿನ್ನ ದೇವರಾದ ಕರ್ತನು ಆಕಾಶದ ಕೆಳಗಿರುವ ಎಲ್ಲಾ ಜನಾಂಗಗಳಿಗೆ ಹಂಚಿಕೊಟ್ಟ ಇವುಗಳಿಗೆ ಅಡ್ಡಬಿದ್ದು ಇವುಗಳನ್ನು ಸೇವಿಸುವದಕ್ಕೆ ನಡಿಸಲ್ಪಡದಂತೆಯೂ ನೋಡಿಕೊಳ್ಳಿರಿ.
- 2 Kings 11:18 2 ಅರಸುಗಳು 11:18ದೇಶದ ಜನರೆಲ್ಲರೂ ಬಾಳನ ಮನೆಯಲ್ಲಿ ಹೊಕ್ಕು ಅದನ್ನು ಕೆಡವಿಹಾಕಿ ಅವನ ಬಲಿಪೀಠಗಳನ್ನೂ ವಿಗ್ರಹ ಗಳನ್ನೂ ಸಂಪೂರ್ಣವಾಗಿ ತುಂಡುತುಂಡಾಗಿ ಒಡೆದು ಬಿಟ್ಟು ಬಲಿಪೀಠಗಳ ಮುಂದೆ ಬಾಳನ ಯಾಜಕನಾದ ಮತ್ತಾನನನ್ನು ಕೊಂದುಹಾಕಿದರು. ಇದಲ್ಲದೆ ಯಾಜಕನು ಕರ್ತನ ಮನೆಯಲ್ಲಿ ಅಧಿಕಾರಿಗಳನ್ನು ನೇಮಿಸಿ ದನು.
- 1 Kings 16:33 1 ಅರಸುಗಳು 16:33ಅಹಾಬನು ತೋಪನ್ನು ಹಾಕಿಸಿದನು. ಹೀಗೆಯೆ ಅಹಾಬನು ಇಸ್ರಾಯೇಲಿನ ದೇವರಾದ ಕರ್ತನಿಗೆ ಕೋಪವನ್ನು ಎಬ್ಬಿಸುವ ಹಾಗೆ ತನಗೆ ಮುಂಚಿನ ಇಸ್ರಾಯೇಲಿನ ಅರಸುಗಳೆಲ್ಲರಿಗಿಂತ ಅಧಿಕ ವಾಗಿ ಕೆಟ್ಟತನಮಾಡಿದನು.ಅವನ ದಿವಸಗಳಲ್ಲಿ ಬೇತೇಲಿನವನಾದ ಹೀಯೇ ಲನು ಯೆರಿಕೋವನ್ನು ಕಟ್ಟಿಸಿದನು; ಕರ್ತನು ನೂನನ ಮಗನಾದ ಯೆಹೋಶುವನ ಮುಖಾಂತರ ಹೇಳಿದ್ದ ವಾಕ್ಯದ ಪ್ರಕಾರವೇ ಅವನು ಅದಕ್ಕೆ ಅಸ್ತಿವಾರವನ್ನು ಹಾಕಿದಾಗ ತನ್ನ ಚೊಚ್ಚಲ ಮಗನಾದ ಅಬೀರಾಮನೂ ಅದರ ಬಾಗಲುಗಳನ್ನು ಇಟ್ಟಾಗ ಅವನ ಚಿಕ್ಕಮಗನಾದ ಸೆಗೂಬನೂ ಸತ್ತರು.
- 1 Kings 22:53 1 ಅರಸುಗಳು 22:53ಅವನು ಬಾಳನನ್ನು ಸೇವಿಸಿ ಅದಕ್ಕೆ ಅಡ್ಡಬಿದ್ದು ತನ್ನ ತಂದೆಯು ಮಾಡಿದ ಎಲ್ಲಾದರ ಪ್ರಕಾರವೇ ಇಸ್ರಾಯೇಲಿನ ದೇವರಾದ ಕರ್ತನಿಗೆ ಕೋಪವನ್ನು ಎಬ್ಬಿಸಿದನು.
- 1 Kings 15:13 1 ಅರಸುಗಳು 15:13ಇದಲ್ಲದೆ ಆಸನು ತನ್ನ ತಾಯಿಯಾದ ಮಾಕಾ ತೋಪಿನಲ್ಲಿ ಒಂದು ವಿಗ್ರಹವನ್ನು ಮಾಡಿಸಿ ಇಟ್ಟದ್ದರಿಂದ ಅವಳನ್ನು ರಾಣಿಯಾಗಿರದ ಹಾಗೆ ತೆಗೆದುಹಾಕಿ ಅವಳ ವಿಗ್ರಹ ವನ್ನು ಕಡಿದುಬಿಟ್ಟು ಕಿದ್ರೋನೆಂಬ ಹಳ್ಳದ ಬಳಿಯಲ್ಲಿ ಅದನ್ನು ಸುಟ್ಟುಬಿಟ್ಟನು.
- 2 Kings 21:3 2 ಅರಸುಗಳು 21:3ಅವನು ತನ್ನ ತಂದೆಯಾದ ಹಿಜ್ಕೀಯನು ನಾಶಮಾಡಿದ ಉನ್ನತ ಸ್ಥಳಗಳನ್ನು ತಿರಿಗಿ ಕಟ್ಟಿಸಿ ಬಾಳನಿಗೆ ಬಲಿಪೀಠ ಗಳನ್ನು ಉಂಟುಮಾಡಿ ಇಸ್ರಾಯೇಲಿನ ಅರಸನಾದ ಅಹಾಬನು ಮಾಡಿದ ಹಾಗೆ ವಿಗ್ರಹದ ತೋಪನ್ನು ಮಾಡಿ ಆಕಾಶದ ಎಲ್ಲಾ ಸೈನ್ಯಕ್ಕೆ ಅಡ್ಡಬಿದ್ದು ಅವುಗಳನ್ನು ಸೇವಿಸಿದನು.
- Jeremiah 8:2 ಯೆರೆಮೀಯ 8:2ಅವರು ಪ್ರೀತಿಸಿ ಸೇವಿಸಿ ಹಿಂಬಾಲಿಸಿ ಹುಡುಕಿ ಆರಾಧಿಸಿದ ಸೂರ್ಯ ಚಂದ್ರ ಸಮಸ್ತ ಆಕಾಶ ಸೈನ್ಯದ ಮುಂದೆ ಅವುಗಳನ್ನು ಚೆಲ್ಲುವರು; ಅವು ಕೂಡಿಸಲ್ಪಡವು, ಹೂಣಿಡಲ್ಪಡವು, ಅವು ಭೂಮಿಯ ಮೇಲೆ ಗೊಬ್ಬರವಾಗುವವು.
- 2 Kings 10:18–28 2 ಅರಸುಗಳು 10:18–28ಯೇಹುವು ಜನರೆಲ್ಲರನ್ನು ಕೂಡಿಸಿ ಅವರಿಗೆ-- ಅಹಾಬನು ಸ್ವಲ್ಪವಾಗಿ ಬಾಳನನ್ನು ಸೇವಿಸಿದನು; ಆದರೆ ಯೇಹುವು ಅವನನ್ನು ಬಹಳವಾಗಿ ಸೇವಿಸುವನು. ಆದದರಿಂದ ಬಾಳನ ಎಲ್ಲಾ ಪ್ರವಾದಿಗಳನ್ನೂ ಸೇವಕರನ್ನೂ ಯಾಜಕರನ್ನೂ ನನ್ನ ಬಳಿಗೆ ಕರೆಯಿರಿ; ಒಬ್ಬನೂ ಬಾರದೆ ಇರಕೂಡದು. ನಾನು ಬಾಳನಿಗೆ ಮಹಾಬಲಿ ಕೊಡಬೇಕಾಗಿದೆ. ಯಾವನಾದರೂ ಬಾರದೆ ಹೋದರೆ ಅವನು ಬದುಕನು ಅಂದನು. ಯಾಕಂದರೆ ಯೇಹುವು ಬಾಳನನ್ನು ಆರಾಧಿಸುವ ವರನ್ನು ನಾಶಮಾಡುವ ಹಾಗೆ ಇದನ್ನು ತಂತ್ರದಿಂದ ಮಾಡಿದನು. ಆಗ ಯೇಹುವು ಬಾಳನಿಗೋಸ್ಕರ ದೊಡ್ಡಸಂಘವನ್ನು ಪರಿಶುದ್ಧ ಮಾಡಿರಿ ಅಂದನು. ಹಾಗೆಯೇ ಅವರು ಅದನ್ನು ಸಾರಿದರು. ಯೇಹುವು ಇಸ್ರಾಯೇಲಿನಲ್ಲೆಲ್ಲಾ ಕಳುಹಿಸಿದ್ದರಿಂದ ಬಾಳನನ್ನು ಸೇವಿಸುವವರೆಲ್ಲರೂ ಬಂದರು. ಬಾರದೆ ಇದ್ದವನು ಒಬ್ಬನೂ ಇರಲಿಲ್ಲ. ಅವರು ಬಾಳನ ಮನೆಯಲ್ಲಿ ಪ್ರವೇಶಿಸಿದಾಗ ಒಂದು ಕಡೆಯಿಂದ ಇನ್ನೊಂದು ಕಡೆಯ ವರೆಗೆ ಬಾಳನ ಮನೆಯು ಪೂರ್ಣವಾಗಿ ತುಂಬಿತ್ತು. ಆಗ ಅವನು ವಸ್ತ್ರಗಳ ಮನೆಯ ಮೇಲೆ ಇರುವವನಿಗೆ ಬಾಳನನ್ನು ಸೇವಿಸುವ ಎಲ್ಲರಿಗೋಸ್ಕರ ವಸ್ತ್ರಗಳನ್ನು ತಕ್ಕೊಂಡು ಬಾ ಎಂದು ಹೇಳಿದ್ದರಿಂದ ಅವನು ಅವರಿಗೋಸ್ಕರ ವಸ್ತ್ರಗಳನ್ನು ತಕ್ಕೊಂಡು ಬಂದನು. ಆಗ ಯೇಹುವೂ ರೆಕಾಬನ ಮಗನಾದ ಯೆಹೋನಾದಾಬನೂ ಬಾಳನ ಮನೆಯಲ್ಲಿ ಪ್ರವೇಶಿಸಿ ದರು. ಅವರು ಬಾಳನನ್ನು ಆರಾಧಿಸುವವರ ಹೊರತು ಅವರ ಸಂಗಡ ಕರ್ತನ ಸೇವಕರಲ್ಲಿ ಒಬ್ಬನಾದರೂ ಇರದ ಹಾಗೆ ಶೋಧಿಸಿ ನೋಡಿರಿ ಎಂದು ಬಾಳನನ್ನು ಆರಾಧಿಸುವವರಿಗೆ ಹೇಳಿದರು. ಅವರು ಬಲಿಗ ಳನ್ನೂ ದಹನಬಲಿಗಳನ್ನೂ ಅರ್ಪಿಸಲು ಒಳಗೆ ಪ್ರವೇ ಶಿಸಿದ ತರುವಾಯ ಯೇಹುವು ಹೊರಗೆ ಎಂಭತ್ತು ಮಂದಿಯನ್ನು ಇರಿಸಿಕೊಂಡು ಅವರಿಗೆ--ನಾನು ನಿಮ್ಮ ಕೈಗೆ ಒಪ್ಪಿಸಿದ ಜನರಲ್ಲಿ ಯಾವನಾದರೂ ತಪ್ಪಿಸಿಕೊಂಡು ಹೋದರೆ ಅವನ ಪ್ರಾಣಕ್ಕೆ ನಿಮ್ಮ ಪ್ರಾಣ ಈಡಾಗಿ ರುವದು ಅಂದನು. ಅವನು ದಹನಬಲಿಯನ್ನು ಅರ್ಪಿಸಿ ತೀರಿಸಿದ ತರುವಾಯ ಏನಾಯಿತಂದರೆ, ಯೇಹುವು ಕಾವಲುಗಾರನಿಗೂ ಅಧಿಪತಿಗಳಿಗೂನೀವು ಒಳಗೆ ಹೋಗಿ ಯಾವನೂ ಹೊರಗೆ ಬಾರದ ಹಾಗೆ ಅವರನ್ನು ಸಂಹರಿಸಿರಿ ಅಂದನು. ಹಾಗೆಯೇ ಅವರನ್ನು ಕತ್ತಿಯಿಂದ ಸಂಹರಿಸಿದರು. ಕಾವಲು ಗಾರನೂ ಅಧಿಪತಿಗಳೂ ಅವರನ್ನು ಹೊರಗೆ ಹಾಕಿದ ತರುವಾಯ ಬಾಳನ ಮನೆಯ ಪಟ್ಟಣಕ್ಕೆ ಹೋಗಿ ಬಾಳನ ಮನೆಯಿಂದ ವಿಗ್ರಹವನ್ನು ತಂದು ಅವುಗಳನ್ನು ಸುಟ್ಟುಬಿಟ್ಟರು. ಇದಲ್ಲದೆ ಅವರು ಬಾಳನ ವಿಗ್ರಹ ವನ್ನು ಒಡೆದುಹಾಕಿ ಬಾಳನ ಮನೆಯನ್ನು ಕೆಡವಿಬಿಟ್ಟು ಅದನ್ನು ಈ ಹೊತ್ತಿನ ವರೆಗೂ ತಿಪ್ಪೆಯಾಗಿ ಮಾಡಿದರು. ಹೀಗೆಯೇ ಯೇಹುವು ಬಾಳನನ್ನು ಇಸ್ರಾಯೇಲಿ ನಲ್ಲಿಂದ ನಾಶಮಾಡಿಬಿಟ್ಟನು.
Original words (Hebrew)
- left · H5800עָזַב ʻâzab
- commandments · H4687מִצְוָה mitsvâh
- God · H430אֱלֹהִים ʼĕlôhîym
- made · H6213עָשָׂה ʻâsâh
- images · H4541מַסֵּכָה maççêkâh
- two · H8147שְׁנַיִם shᵉnayim
- calves · H5695עֵגֶל ʻêgel
- made · H6213עָשָׂה ʻâsâh
- grove · H842אֲשֵׁרָה ʼăshêrâh
- worshipped · H7812שָׁחָה shâchâh
- host · H6635צָבָא tsâbâʼ
- heaven · H8064שָׁמַיִם shâmayim
- served · H5647עָבַד ʻâbad
- Baal · H1168בַּעַל Baʻal