2 Kings · chapter 21 · verse 2
2 Kings 21:2 in Kannada
ಕರ್ತನು ಇಸ್ರಾಯೇಲಿನ ಮಕ್ಕಳ ಮುಂದೆ ಹೊರಡಿಸಿದ ಅನ್ಯ ಜನಾಂಗಗಳ ಅಸಹ್ಯವಾದವುಗಳ ಹಾಗೆಯೇ ಅವನು ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ಮಾಡಿದನು.
Kartanu israayelina makkala munde horadisida anya janaangagala asahyavaadavugala haageye avanu kartana drushtige kettaddannu maadidanu.
2 Kings 21:2 in English
- King James Version (KJV)
- And he did [that which was] evil in the sight of the LORD, after the abominations of the heathen, whom the LORD cast out before the children of Israel.
- World English Bible (WEB)
- He did that which was evil in the LORD’s sight, after the abominations of the nations whom the LORD cast out before the children of Israel.
- American Standard Version (ASV)
- And he did that which was evil in the sight of Jehovah, after the abominations of the nations whom Jehovah cast out before the children of Israel.
- Bible in Basic English (BBE)
- He did evil in the eyes of the Lord, copying the disgusting ways of those nations whom the Lord had sent out before the children of Israel.
- Darby Translation (DBY)
- And he did evil in the sight of Jehovah, like the abominations of the nations that Jehovah had dispossessed from before the children of Israel.
- Webster's Bible (WBS)
- And he did [that which was] evil in the sight of the LORD, after the abominations of the heathen, whom the LORD cast out before the children of Israel.
- Young's Literal Translation (YLT)
- and he doth the evil thing in the eyes of Jehovah, according to the abominations of the nations that Jehovah dispossessed from the presence of the sons of Israel,
Read in context
- 1ಮನಸ್ಸೆಯು ಆಳಲು ಆರಂಭಿಸಿದಾಗ ಹನ್ನೆರಡು ವರುಷದವನಾಗಿದ್ದು ಅವನು ಐವತ್ತೈದು ವರುಷ ಯೆರೂಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಹೆಫ್ಚಿಬಾ.
- 2ಕರ್ತನು ಇಸ್ರಾಯೇಲಿನ ಮಕ್ಕಳ ಮುಂದೆ ಹೊರಡಿಸಿದ ಅನ್ಯ ಜನಾಂಗಗಳ ಅಸಹ್ಯವಾದವುಗಳ ಹಾಗೆಯೇ ಅವನು ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ಮಾಡಿದನು.
- 3ಅವನು ತನ್ನ ತಂದೆಯಾದ ಹಿಜ್ಕೀಯನು ನಾಶಮಾಡಿದ ಉನ್ನತ ಸ್ಥಳಗಳನ್ನು ತಿರಿಗಿ ಕಟ್ಟಿಸಿ ಬಾಳನಿಗೆ ಬಲಿಪೀಠ ಗಳನ್ನು ಉಂಟುಮಾಡಿ ಇಸ್ರಾಯೇಲಿನ ಅರಸನಾದ ಅಹಾಬನು ಮಾಡಿದ ಹಾಗೆ ವಿಗ್ರಹದ ತೋಪನ್ನು ಮಾಡಿ ಆಕಾಶದ ಎಲ್ಲಾ ಸೈನ್ಯಕ್ಕೆ ಅಡ್ಡಬಿದ್ದು ಅವುಗಳನ್ನು ಸೇವಿಸಿದನು.
- 4ಇದಲ್ಲದೆ ಯೆರೂಸಲೇಮಿನಲ್ಲಿ ನನ್ನ ನಾಮವನ್ನು ಇರಿಸುವೆನೆಂದು ಕರ್ತನು ಯಾವದನ್ನು ಕುರಿತು ಹೇಳಿದ್ದನೋ ಆ ಕರ್ತನ ಮನೆಯಲ್ಲಿ ಅವನು ಬಲಿಪೀಠಗಳನ್ನು ಕಟ್ಟಿಸಿದನು.
Cross references
- 2 Chronicles 36:14 2 ಪೂರ್ವಕಾಲವೃತ್ತಾಂತ 36:14ಇದಲ್ಲದೆ ಯಾಜಕರಲ್ಲಿರುವ ಎಲ್ಲಾ ಪ್ರಧಾನರೂ ಜನರೂ ಜನಾಂಗಗಳ ಅಸಹ್ಯ ಗಳನ್ನು ಹಿಂಬಾಲಿಸಿ ಬಹಳವಾಗಿ ಅಪರಾಧ ಮಾಡಿ ಕರ್ತನು ಯೆರೂಸಲೇಮಿನಲ್ಲಿ ಪರಿಶುದ್ಧ ಮಾಡಿದ ಆತನ ಆಲಯವನ್ನು ಹೊಲೆ ಮಾಡಿದರು.
- 2 Kings 21:7 2 ಅರಸುಗಳು 21:7ಈ ಮನೆಯಲ್ಲಿಯೂ ಇಸ್ರಾಯೇಲಿನ ಸಕಲ ಗೋತ್ರಗಳ ಲ್ಲಿಯೂ ನಾನು ಆದುಕೊಂಡ ಯೆರೂಸಲೇಮಿನ ಲ್ಲಿಯೂ ನನ್ನ ನಾಮವನ್ನು ಯುಗಯುಗಕ್ಕೂ ಇರುವಂತೆ ಮಾಡುವೆನೆಂದು ಕರ್ತನು ದಾವೀದನಿಗೂ ಅವನ ಮಗನಾದ ಸೊಲೊಮೋನನಿಗೂ ಯಾವದನ್ನು ಕುರಿತು ಹೇಳಿದ್ದನೋ ಆ ಮನೆಯಲ್ಲಿ ತಾನು ಮಾಡಿದ ತೋಪಿನ ಕೆತ್ತಿದ ವಿಗ್ರಹವನ್ನು ಇಟ್ಟನು.
- Leviticus 18:25–29 ಯಾಜಕಕಾಂಡ 18:25–29ದೇಶವೂ ಹೊಲೆಯಾಗಿದೆ. ಆದದರಿಂದ ಅದರ ಮೇಲಿರುವ ಅಕ್ರಮವನ್ನು ನಾನು ದಂಡಿಸುವೆನು, ಆಗ ದೇಶವು ತಾನೇ ತನ್ನೊಳಗಿನ ನಿವಾಸಿಗಳನ್ನು ಕಾರಿಬಿಡುವದು. ಆದದರಿಂದ ನೀವು ನನ್ನ ನಿಯಮಗಳನ್ನು ನಿರ್ಣಯಗಳನ್ನು ಕೈಕೊಳ್ಳಬೇಕು. ನಿಮ್ಮ ದೇಶದವರಲ್ಲಿ ಯಾವನೇ ಆಗಲಿ ಇಲ್ಲವೆ ನಿಮ್ಮೊಳಗೆ ಪ್ರವಾಸಿಯಾಗಿದ್ದ ಪರಕೀಯನಾಗಲಿ ಈ ಅಸಹ್ಯವಾದವುಗಳಲ್ಲಿ ಒಂದನ್ನಾದರೂ ಮಾಡ ಬಾರದು. (ನಿಮ್ಮೆದುರಿನಲ್ಲಿದ್ದ ಆ ದೇಶದವರು ಈ ಎಲ್ಲ ಅಸಹ್ಯವಾದವುಗಳನ್ನು ಮಾಡಿದರು, ಮತ್ತು ದೇಶವೂ ಹೊಲೆಯಾಯಿತು;) ನೀವೂ ಅದನ್ನು ಅಶುದ್ಧಮಾಡಿದರೆ ಅದು ನಿಮ್ಮ ಮುಂದಿದ್ದ ಜನಾಂಗಗಳವರನ್ನು ಕಾರಿದಂತೆ ನಿಮ್ಮನ್ನೂ ಕಾರುವದು. ಯಾವನಾದರೂ ಈ ಅಸಹ್ಯವಾದವುಗಳಲ್ಲಿ ಯಾವ ದನ್ನಾದರೂ ಮಾಡಿದರೆ ಅವುಗಳನ್ನು ಮಾಡುವ ಮನುಷ್ಯರನ್ನು ಅವರ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.ಆದದರಿಂದ ನಿಮಗಿಂತ ಮೊದಲಿನವರು ಮಾಡಿದಂತೆ ಅಸಹ್ಯವಾದ ಆಚರಣೆ ಗಳಲ್ಲಿ ಒಂದನ್ನಾದರೂ ನೀವು ಮಾಡದಂತೆ ಮತ್ತು ಅವುಗಳಲ್ಲಿ ನಿಮ್ಮನ್ನು ಹೊಲೆಮಾಡಿಕೊಳ್ಳದಂತೆ ನೀವು ನನ್ನ ಕಟ್ಟಳೆಗಳನ್ನು ಕೈಕೊಳ್ಳಬೇಕು; ನಿಮ್ಮ ದೇವರಾಗಿರುವ ಕರ್ತನು ನಾನೇ.
- Deuteronomy 12:31 ಧರ್ಮೋಪದೇಶಕಾಂಡ 12:31ನಿನ್ನ ದೇವರಾದ ಕರ್ತ ನಿಗೆ ಹಾಗೆ ಮಾಡಬೇಡ. ಯಾಕಂದರೆ ಕರ್ತನು ಅಸಹ್ಯಿಸಿ ಹಗೆಮಾಡುವದನ್ನೆಲ್ಲಾ ಅವರು ತಮ್ಮ ದೇವರುಗಳಿಗೆ ಮಾಡಿದ್ದಾರೆ; ತಮ್ಮ ಕುಮಾರ ಕುಮಾರ್ತೆ ಯರನ್ನು ಸಹ ತಮ್ಮ ದೇವರುಗಳಿಗೆ ಬೆಂಕಿಯಲ್ಲಿ ಸುಟ್ಟುಬಿಟ್ಟಿದ್ದಾರೆ.ನಾನು ನಿನಗೆ ಆಜ್ಞಾಪಿಸುವ ಮಾತುಗಳನ್ನೆಲ್ಲಾ ಲಕ್ಷಿಸಿ ಕೈಕೊಳ್ಳಬೇಕು; ಅದಕ್ಕೆ ಕೂಡಿಸಬೇಡ; ಇಲ್ಲವೆ ಅದರಿಂದ ಕಡಿಮೆಮಾಡಬೇಡ.
- 2 Kings 22:17 2 ಅರಸುಗಳು 22:17ಅವರು ತಮ್ಮ ಎಲ್ಲಾ ಕೈ ಕೆಲಸಗಳಿಂದ ನನಗೆ ಕೋಪವನ್ನು ಎಬ್ಬಿಸುವ ಹಾಗೆ ನನ್ನನ್ನು ಬಿಟ್ಟು ಇತರ ದೇವರುಗಳಿಗೆ ಧೂಪವನ್ನು ಸುಟ್ಟಿದ್ದಾರೆ. ನನ್ನ ಕೋಪ ಈ ಸ್ಥಳದ ಮೇಲೆ ಹೊತ್ತಿ ಉರಿಯುವದು, ಆರಿಹೋಗದು ಎಂದು ಕರ್ತನು ಹೇಳುತ್ತಾನೆ.
- 2 Kings 16:2–4 2 ಅರಸುಗಳು 16:2–4ಆಹಾಜನು ಆಳಲು ಆರಂಭಿ ಸಿದಾಗ ಇಪ್ಪತ್ತು ವರುಷದವನಾಗಿದ್ದು ಯೆರೂಸಲೇಮಿ ನಲ್ಲಿ ಹದಿನಾರು ವರುಷ ಆಳಿದನು. ಅವನು ತನ್ನ ತಂದೆಯಾದ ದಾವೀದನ ಹಾಗೆ ತನ್ನ ದೇವರಾದ ಕರ್ತನ ಸಮ್ಮುಖದಲ್ಲಿ ಒಳ್ಳೇಯದನ್ನು ಮಾಡದೆ ಇಸ್ರಾಯೇಲಿನ ಅರಸುಗಳ ಮಾರ್ಗದಲ್ಲಿ ನಡೆದನು. ಇದಲ್ಲದೆ ಕರ್ತನು ಇಸ್ರಾಯೇಲಿನ ಮಕ್ಕಳ ಮುಂದೆ ಹೊರಡಿಸಿದ ಅನ್ಯಜನಾಂಗಗಳ ಅಸಹ್ಯವಾದವುಗಳ ಪ್ರಕಾರ ಅವನು ತನ್ನ ಮಗನನ್ನು ಬೆಂಕಿ ತುಳಿಯ ಮಾಡಿದನು. ಇದಲ್ಲದೆ ಅವನು ಉನ್ನತ ಸ್ಥಳಗಳ ಮೇಲೆಯೂ ಬೆಟ್ಟಗಳ ಮೇಲೆಯೂ ಹಸುರಾದ ಎಲ್ಲಾ ಮರಗಳ ಕೆಳಗೂ ಬಲಿಗಳನ್ನೂ ಧೂಪವನ್ನೂ ಸಮರ್ಪಿಸಿದನು.
- 2 Chronicles 33:2–4 2 ಪೂರ್ವಕಾಲವೃತ್ತಾಂತ 33:2–4ಆದರೆ ಕರ್ತನು ಇಸ್ರಾಯೇಲಿನ ಮಕ್ಕಳ ಮುಂದೆ ಹೊರಡಿಸಿದ ಜನಾಂಗಗಳ ಅಸಹ್ಯಗಳ ಪ್ರಕಾರವೇ ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಏನಂದರೆ, ಅವನು ತನ್ನ ತಂದೆಯಾದ ಹಿಜ್ಕೀಯನು ಕೆಡವಿಹಾಕಿದ ಉನ್ನತ ಸ್ಥಳಗಳನ್ನು ತಿರಿಗಿ ಕಟ್ಟಿಸಿ ಬಾಳನಿಗೆ ಬಲಿಪೀಠ ಗಳನ್ನು ಎಬ್ಬಿಸಿ ತೋಪುಗಳನ್ನು ಹಾಕಿ ಆಕಾಶದ ಸೈನ್ಯ ಕ್ಕೆಲ್ಲಾ ಅಡ್ಡಬಿದ್ದು ಅವುಗಳನ್ನು ಸೇವಿಸಿದನು. ಇದ ಲ್ಲದೆ--ಯೆರೂಸಲೇಮಿನಲ್ಲಿ ನನ್ನ ಹೆಸರು ಯುಗ ಯುಗಕ್ಕೂ ಇರುವದೆಂದು ಕರ್ತನು ಹೇಳಿದ ಕರ್ತನ ಆಲಯದಲ್ಲಿ ಬಲಿಪೀಠಗಳನ್ನು ಕಟ್ಟಿಸಿದನು.
- Jeremiah 15:4 ಯೆರೆಮೀಯ 15:4ಅವರನ್ನು ಹಿಜ್ಕೀಯನ ಮಗನಾದ ಯೆಹೂದದ ಅರಸನಾದ ಮನಸ್ಸೆಯ ನಿಮಿತ್ತವೂ ಇವನು ಯೆರೂಸಲೇಮಿನಲ್ಲಿ ಮಾಡಿದ್ದರ ನಿಮಿತ್ತವೂ ಭೂಮಿಯ ಎಲ್ಲಾ ರಾಜ್ಯಗಳಿಗೆ ಚದರಿಹೋಗುವಂತೆ ಮಾಡುವೆನು.
- 2 Kings 21:16 2 ಅರಸುಗಳು 21:16ಇದಲ್ಲದೆ ಮನಸ್ಸೆಯು ಕರ್ತನ ದೃಷ್ಟಿಯಲ್ಲಿ ಕೇಡನ್ನು ಮಾಡಿದ್ದರಲ್ಲಿ ಯೆಹೂದವು ಪಾಪವನ್ನು ಮಾಡಲು ಪ್ರೇರೇಪಿಸಿದ ತನ್ನ ಪಾಪದ ಹೊರತು ಅವನು ಯೆರೂಸಲೇಮನ್ನು ಒಂದು ಕೊನೆಯಿಂದ ಮತ್ತೊಂದು ಕೊನೆಯ ವರೆಗೂ ತಾನು ಬಹು ಹೆಚ್ಚಾಗಿ ಚೆಲ್ಲಿದ ನಿರಾಪರಾಧದ ರಕ್ತದಿಂದ ತುಂಬಿಸಿದನು.
- Ezekiel 16:51 ಯೆಹೆಜ್ಕೇಲನು 16:51ಸಮಾರ್ಯವೆಂಬಾಕೆಯು ಸಹ ನೀನು ಮಾಡಿದ ಪಾಪಗಳಲ್ಲಿ ಅರ್ಧವನ್ನೂ ಮಾಡಲಿಲ್ಲ. ನೀನು ನಿನ್ನ ಅಕ್ಕತಂಗಿಯರಿಗಿಂತಲೂ ಅತ್ಯಧಿಕವಾದ ಅಸಹ್ಯವಾದ ಕಾರ್ಯಗಳನ್ನು ಮಾಡಿದಿ, ನೀನು ಮಾಡಿದ ಲೆಕ್ಕವಿಲ್ಲ ದಷ್ಟು ದುರಾಚಾರಗಳಿಂದ ಅವರನ್ನು ನೀತಿವಂತರೆಂದು ತೋರ್ಪಡಿಸಿದೆ.