Deuteronomy · chapter 12 · verse 31
Deuteronomy 12:31 in Kannada
ನಿನ್ನ ದೇವರಾದ ಕರ್ತ ನಿಗೆ ಹಾಗೆ ಮಾಡಬೇಡ. ಯಾಕಂದರೆ ಕರ್ತನು ಅಸಹ್ಯಿಸಿ ಹಗೆಮಾಡುವದನ್ನೆಲ್ಲಾ ಅವರು ತಮ್ಮ ದೇವರುಗಳಿಗೆ ಮಾಡಿದ್ದಾರೆ; ತಮ್ಮ ಕುಮಾರ ಕುಮಾರ್ತೆ ಯರನ್ನು ಸಹ ತಮ್ಮ ದೇವರುಗಳಿಗೆ ಬೆಂಕಿಯಲ್ಲಿ ಸುಟ್ಟುಬಿಟ್ಟಿದ್ದಾರೆ.ನಾನು ನಿನಗೆ ಆಜ್ಞಾಪಿಸುವ ಮಾತುಗಳನ್ನೆಲ್ಲಾ ಲಕ್ಷಿಸಿ ಕೈಕೊಳ್ಳಬೇಕು; ಅದಕ್ಕೆ ಕೂಡಿಸಬೇಡ; ಇಲ್ಲವೆ ಅದರಿಂದ ಕಡಿಮೆಮಾಡಬೇಡ.
Ninna devaraada karta nige haage maadabeda. Yaakandare kartanu asahyisi hagemaaduvadannellaa avaru tamma devarugalige maadiddaare; tamma kumaara kumaarte yarannu saha tamma devarugalige benkiyalli suttubittiddaare.naanu ninage aajnyaapisuva maatugalannellaa lakshisi kaikollabeku; adakke koodisabeda; illave adarinda kadimemaadabeda.
Deuteronomy 12:31 in English
- King James Version (KJV)
- Thou shalt not do so unto the LORD thy God: for every abomination to the LORD, which he hateth, have they done unto their gods; for even their sons and their daughters they have burnt in the fire to their gods.
- World English Bible (WEB)
- You shall not do so to the LORD your God; for every abomination to the LORD, which he hates, they have done to their gods; for they even burn their sons and their daughters in the fire to their gods.
- American Standard Version (ASV)
- Thou shalt not do so unto Jehovah thy God: for every abomination to Jehovah, which he hateth, have they done unto their gods; for even their sons and their daughters do they burn in the fire to their gods.
- Bible in Basic English (BBE)
- Do not so to the Lord your God: for everything which is disgusting to the Lord and hated by him they have done in honour of their gods: even burning their sons and daughters in the fire to their gods.
- Darby Translation (DBY)
- Thou shalt not do so to Jehovah thy God; for every [thing that is] abomination to Jehovah, which he hateth, have they done unto their gods; for even their sons and their daughters have they burned in the fire to their gods.
- Webster's Bible (WBS)
- Thou shalt not do so to the LORD thy God; for every abomination to the LORD which he hateth have they done to their gods; for even their sons and their daughters they have burnt in the fire to their gods.
- Young's Literal Translation (YLT)
- 'Thou dost not do so to Jehovah thy God; for every abomination of Jehovah which He is hating they have done to their gods, for even their sons and their daughters they burn with fire to their gods.
Read in context
- 29ನೀನು ಸ್ವಾಧೀನಮಾಡಿಕೊಳ್ಳುವದಕ್ಕೆ ಹೋಗುವ ಆ ಜನಾಂಗಗಳನ್ನು ನಿನ್ನ ದೇವರಾದ ಕರ್ತನು ನಿನ್ನ ಮುಂದೆ ಕಡಿದು ಬಿಡುವಾಗ, ನೀನು ಅವುಗಳನ್ನು ಜಯಿಸಿ ಅವುಗಳ ದೇಶದಲ್ಲಿ ವಾಸಮಾಡುವಾಗ
- 30ಅವು ನಿನ್ನ ಮುಂದೆ ನಾಶವಾದ ಮೇಲೆ ನೀನು ಅವುಗಳನ್ನು ಅನುಸರಿಸಿ ಬಲೆಯಲ್ಲಿ ಸಿಕ್ಕಿಬೀಳದ ಹಾಗೆಯೂ--ಈ ಜನಾಂಗಗಳು ತಮ್ಮ ದೇವರುಗಳನ್ನು ಹೇಗೆ ಸೇವಿಸಿದವೋ ನಾನೂ ಹಾಗೆ ಮಾಡುತ್ತೇನೆಂದು ಹೇಳಿ ಅವರ ದೇವರುಗಳನ್ನು ಕುರಿತು ವಿಚಾರಿಸದ ಹಾಗೆಯೂ ನೋಡಿಕೋ.
- 31ನಿನ್ನ ದೇವರಾದ ಕರ್ತ ನಿಗೆ ಹಾಗೆ ಮಾಡಬೇಡ. ಯಾಕಂದರೆ ಕರ್ತನು ಅಸಹ್ಯಿಸಿ ಹಗೆಮಾಡುವದನ್ನೆಲ್ಲಾ ಅವರು ತಮ್ಮ ದೇವರುಗಳಿಗೆ ಮಾಡಿದ್ದಾರೆ; ತಮ್ಮ ಕುಮಾರ ಕುಮಾರ್ತೆ ಯರನ್ನು ಸಹ ತಮ್ಮ ದೇವರುಗಳಿಗೆ ಬೆಂಕಿಯಲ್ಲಿ ಸುಟ್ಟುಬಿಟ್ಟಿದ್ದಾರೆ.ನಾನು ನಿನಗೆ ಆಜ್ಞಾಪಿಸುವ ಮಾತುಗಳನ್ನೆಲ್ಲಾ ಲಕ್ಷಿಸಿ ಕೈಕೊಳ್ಳಬೇಕು; ಅದಕ್ಕೆ ಕೂಡಿಸಬೇಡ; ಇಲ್ಲವೆ ಅದರಿಂದ ಕಡಿಮೆಮಾಡಬೇಡ.
- 32ನಾನು ನಿನಗೆ ಆಜ್ಞಾಪಿಸುವ ಮಾತುಗಳನ್ನೆಲ್ಲಾ ಲಕ್ಷಿಸಿ ಕೈಕೊಳ್ಳಬೇಕು; ಅದಕ್ಕೆ ಕೂಡಿಸಬೇಡ; ಇಲ್ಲವೆ ಅದರಿಂದ ಕಡಿಮೆಮಾಡಬೇಡ.
Cross references
- Jeremiah 32:35 ಯೆರೆಮೀಯ 32:35ತಮ್ಮ ಕುಮಾರ ಕುಮಾರ್ತೆಯರನ್ನು ಮೋಲೆಕನಿಗೆ ಬೆಂಕಿ ದಾಟಿಸುವ ಹಾಗೆ ಹಿನ್ನೋಮನ ಮಗನ ಉನ್ನತ ಸ್ಥಳಗಳನ್ನು ಕಟ್ಟಿಸಿದ್ದಾರೆ; ಅದನ್ನು ನಾನು ಅವರಿಗೆ ಆಜ್ಞಾಪಿಸಲಿಲ್ಲ; ಅಂಥಾ ಅಸಹ್ಯ ನಡಿಸಿ, ಯೆಹೂದ ವನ್ನು ಪಾಪ ಮಾಡಿಸುವದು ನನ್ನ ಮನಸ್ಸಿನೊಳಗೆ ಬರಲಿಲ್ಲ.
- Jeremiah 7:31 ಯೆರೆಮೀಯ 7:31ಹಿನ್ನೋಮನ ಮಗನ ತಗ್ಗಿನಲ್ಲಿರುವ ತೋಫೆತಿನ ಉನ್ನತ ಸ್ಥಳಗಳನ್ನು ತಮ್ಮ ಕುಮಾರ ಕುಮಾರ್ತೆಯರನ್ನು ಬೆಂಕಿಯಲ್ಲಿ ಸುಡುವದಕ್ಕೆ ಕಟ್ಟಿದ್ದಾರೆ; ಇದನ್ನು ನಾನು ಆಜ್ಞಾಪಿಸಲಿಲ್ಲ, ಇಲ್ಲವೆ ಅದು ನನ್ನ ಮನಸ್ಸಿನಲ್ಲಿ ಬರಲಿಲ್ಲ.
- Deuteronomy 18:9–10 ಧರ್ಮೋಪದೇಶಕಾಂಡ 18:9–10ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದೇಶಕ್ಕೆ ನೀನು ಬಂದಾಗ ಆ ಜನಾಂಗಗಳು ಮಾಡುವ ಅಸಹ್ಯಗಳ ಪ್ರಕಾರ ಮಾಡುವದಕ್ಕೆ ನೀನು ಕಲಿಯ ಬಾರದು. ತನ್ನ ಮಗನನ್ನು ಇಲ್ಲವೆ ಮಗಳನ್ನು ಬೆಂಕಿದಾಟಿಸುವವನೂ ಕಣಿಹೇಳುವವನೂ ಮೇಘಮಂತ್ರದವನೂ ಸರ್ಪಮಂತ್ರದವನೂ ಮಾಟಗಾರನೂ
- 2 Kings 17:15–17 2 ಅರಸುಗಳು 17:15–17ಕಠಿಣಪಡಿಸಿ ಆತನ ಕಟ್ಟಳೆಗಳನ್ನೂ ಆತನು ತಮ್ಮ ಪಿತೃಗಳ ಸಂಗಡ ಮಾಡಿದ ಆತನ ಒಡಂಬಡಿಕೆಯನ್ನೂ ಆತನು ಅವರಿಗೆ ಹೇಳಿದ ಸಾಕ್ಷಿ ಗಳನ್ನೂ ಅಲಕ್ಷ್ಯಮಾಡಿ ವ್ಯರ್ಥವಾದದ್ದನ್ನು ಹಿಂಬಾ ಲಿಸಿ ವ್ಯರ್ಥವಾದವರಾಗಿ -- ನೀವು ಅವರ ಹಾಗೆ ಮಾಡಬೇಡಿರೆಂದು ಕರ್ತನು ಅವರಿಗೆ ಆಜ್ಞಾಪಿಸಿದರೂ ಅವರ ಸುತ್ತಲಿರುವ ಅನ್ಯಜನಾಂಗಗಳ ಹಿಂದೆ ಹೋದರು. ಇದಲ್ಲದೆ ಅವರು ತಮ್ಮ ದೇವರಾದ ಕರ್ತನ ಎಲ್ಲಾ ಆಜ್ಞೆಗಳನ್ನು ಬಿಟ್ಟು ತಮಗೆ ತಾವೇ ಎರಕ ಹೊಯ್ದ ವಿಗ್ರಹಗಳಾದ ಎರಡು ಹೋರಿಗಳನ್ನು ಮಾಡಿಕೊಂಡು ವಿಗ್ರಹಗಳ ತೋಪನ್ನು ಮಾಡಿ ಆಕಾಶದ ಸೈನ್ಯಕ್ಕೆಲ್ಲಾ ಅಡ್ಡಬಿದ್ದು ಬಾಳನನ್ನು ಸೇವಿಸಿ ತಮ್ಮ ಕುಮಾರರನ್ನೂ ಕುಮಾರ್ತೆಯರನ್ನೂ ಬೆಂಕಿಯಲ್ಲಿ ದಾಟಮಾಡಿ ಕಣಿಗಳನ್ನೂ ಶಕುನಗಳನ್ನೂ ಬಳಸಿ ಕರ್ತ ನಿಗೆ ಕೋಪ ಬರುವಂತೆ ಆತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಲು ತಮ್ಮನ್ನು ಮಾರಿಬಿಟ್ಟರು.
- 2 Kings 21:2 2 ಅರಸುಗಳು 21:2ಕರ್ತನು ಇಸ್ರಾಯೇಲಿನ ಮಕ್ಕಳ ಮುಂದೆ ಹೊರಡಿಸಿದ ಅನ್ಯ ಜನಾಂಗಗಳ ಅಸಹ್ಯವಾದವುಗಳ ಹಾಗೆಯೇ ಅವನು ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ಮಾಡಿದನು.
- Deuteronomy 12:4 ಧರ್ಮೋಪದೇಶಕಾಂಡ 12:4ನೀವು ನಿಮ್ಮ ಕರ್ತನಾದ ದೇವರಿಗೆ ಹಾಗೆ ಮಾಡ ಬೇಡಿರಿ.
- Deuteronomy 9:5 ಧರ್ಮೋಪದೇಶಕಾಂಡ 9:5ನಿನ್ನ ನೀತಿಗೋಸ್ಕರವೂ ನಿನ್ನ ಹೃದಯದ ಯಥಾರ್ಥತೆ ಗೋಸ್ಕರವೂ ನೀನು ಅವರ ದೇಶವನ್ನು ಸ್ವತಂತ್ರಿಸಿ ಕೊಳ್ಳುವದಕ್ಕೆ ಬರುವದಿಲ್ಲ; ಆ ಜನಾಂಗಗಳ ಕೆಟ್ಟತನ ಕ್ಕೋಸ್ಕರವೂ ಕರ್ತನು ನಿನ್ನ ಪಿತೃಗಳಾದ ಅಬ್ರಹಾಮ್ ಇಸಾಕ್ ಯಾಕೋಬರಿಗೆ ಕೊಟ್ಟ ಮಾತನ್ನು ಪೂರೈಸುವ ಹಾಗೆಯೂ ನಿನ್ನ ದೇವರಾದ ಕರ್ತನು ಅವರನ್ನು ನಿನ್ನ ಮುಂದೆ ಹೊರಡಿಸುತ್ತಾನೆ.
- Leviticus 18:3 ಯಾಜಕಕಾಂಡ 18:3ನೀವು ವಾಸವಾಗಿದ್ದ ಐಗುಪ್ತದೇಶದ ಕೃತ್ಯಗಳಂತೆ ಮಾಡಬಾರದು; ನಾನು ನಿಮ್ಮನ್ನು ತರುವದಕ್ಕಿರುವ ಕಾನಾನ್ದೇಶದ ಕೃತ್ಯಗಳಂತೆ ನೀವು ಮಾಡಬಾರದು ಇಲ್ಲವೆ ನೀವು ಅವರ ನಿಯಮಗಳಿಗನುಸಾರವೂ ನಡೆ ಯಬಾರದು.
- Exodus 23:2 ವಿಮೋಚನಕಾಂಡ 23:2ಕೆಟ್ಟದ್ದನ್ನು ಮಾಡು ವಂತೆ ಬಹುಮಂದಿಯನ್ನು ಹಿಂಬಾಲಿಸಬೇಡ; ಇಲ್ಲವೆ ಬಹುಮಂದಿಯೊಂದಿಗೆ ನ್ಯಾಯಕ್ಕೆ ಪ್ರತಿಕೂಲವಾಗಿ ವ್ಯಾಜ್ಯದಲ್ಲಿ ಉತ್ತರಕೊಡಬೇಡ.
- Leviticus 18:26–30 ಯಾಜಕಕಾಂಡ 18:26–30ಆದದರಿಂದ ನೀವು ನನ್ನ ನಿಯಮಗಳನ್ನು ನಿರ್ಣಯಗಳನ್ನು ಕೈಕೊಳ್ಳಬೇಕು. ನಿಮ್ಮ ದೇಶದವರಲ್ಲಿ ಯಾವನೇ ಆಗಲಿ ಇಲ್ಲವೆ ನಿಮ್ಮೊಳಗೆ ಪ್ರವಾಸಿಯಾಗಿದ್ದ ಪರಕೀಯನಾಗಲಿ ಈ ಅಸಹ್ಯವಾದವುಗಳಲ್ಲಿ ಒಂದನ್ನಾದರೂ ಮಾಡ ಬಾರದು. (ನಿಮ್ಮೆದುರಿನಲ್ಲಿದ್ದ ಆ ದೇಶದವರು ಈ ಎಲ್ಲ ಅಸಹ್ಯವಾದವುಗಳನ್ನು ಮಾಡಿದರು, ಮತ್ತು ದೇಶವೂ ಹೊಲೆಯಾಯಿತು;) ನೀವೂ ಅದನ್ನು ಅಶುದ್ಧಮಾಡಿದರೆ ಅದು ನಿಮ್ಮ ಮುಂದಿದ್ದ ಜನಾಂಗಗಳವರನ್ನು ಕಾರಿದಂತೆ ನಿಮ್ಮನ್ನೂ ಕಾರುವದು. ಯಾವನಾದರೂ ಈ ಅಸಹ್ಯವಾದವುಗಳಲ್ಲಿ ಯಾವ ದನ್ನಾದರೂ ಮಾಡಿದರೆ ಅವುಗಳನ್ನು ಮಾಡುವ ಮನುಷ್ಯರನ್ನು ಅವರ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.ಆದದರಿಂದ ನಿಮಗಿಂತ ಮೊದಲಿನವರು ಮಾಡಿದಂತೆ ಅಸಹ್ಯವಾದ ಆಚರಣೆ ಗಳಲ್ಲಿ ಒಂದನ್ನಾದರೂ ನೀವು ಮಾಡದಂತೆ ಮತ್ತು ಅವುಗಳಲ್ಲಿ ನಿಮ್ಮನ್ನು ಹೊಲೆಮಾಡಿಕೊಳ್ಳದಂತೆ ನೀವು ನನ್ನ ಕಟ್ಟಳೆಗಳನ್ನು ಕೈಕೊಳ್ಳಬೇಕು; ನಿಮ್ಮ ದೇವರಾಗಿರುವ ಕರ್ತನು ನಾನೇ. ಆದದರಿಂದ ನಿಮಗಿಂತ ಮೊದಲಿನವರು ಮಾಡಿದಂತೆ ಅಸಹ್ಯವಾದ ಆಚರಣೆ ಗಳಲ್ಲಿ ಒಂದನ್ನಾದರೂ ನೀವು ಮಾಡದಂತೆ ಮತ್ತು ಅವುಗಳಲ್ಲಿ ನಿಮ್ಮನ್ನು ಹೊಲೆಮಾಡಿಕೊಳ್ಳದಂತೆ ನೀವು ನನ್ನ ಕಟ್ಟಳೆಗಳನ್ನು ಕೈಕೊಳ್ಳಬೇಕು; ನಿಮ್ಮ ದೇವರಾಗಿರುವ ಕರ್ತನು ನಾನೇ.
- Micah 6:7 ಮೀಕ 6:7ಸಾವಿರ ಟಗರುಗಳಿಗಾದರೂ ಎಣ್ಣೆಯ ಹತ್ತು ಸಾವಿರ ನದಿಗಳಿಗಾದರೂ ಕರ್ತನು ಮೆಚ್ಚು ವನೋ? ನನ್ನ ದ್ರೋಹಕ್ಕಾಗಿ ನನ್ನ ಚೊಚ್ಚಲ ಮಗ ನನ್ನೂ ನನ್ನ ಆತ್ಮದ ಪಾಪಕ್ಕಾಗಿ ನನ್ನ ಗರ್ಭದ ಫಲ ವನ್ನೂ ಕೊಡಲೋ?
- Ezekiel 20:31 ಯೆಹೆಜ್ಕೇಲನು 20:31ನಿಮ್ಮ ದಾನ ಗಳನ್ನು ತರುವಾಗಲೂ ನಿಮ್ಮ ಕುಮಾರರನ್ನು ಬೆಂಕಿ ಯಿಂದ ದಾಟಿಸುವಾಗಲೂ ನೀವು ಇಂದಿನ ವರೆಗೂ ನಿಮ್ಮ ಎಲ್ಲಾ ವಿಗ್ರಹಗಳಿಂದ ನಿಮ್ಮನ್ನು ಅಪವಿತ್ರಪಡಿಸಿ ಕೊಳ್ಳುತ್ತೀರಿ; ಹೀಗಾದರೆ ನಾನು ನಿಮ್ಮಿಂದ ವಿಚಾರಿಸ ಲ್ಪಟ್ಟೆನೊ? ನನ್ನ ಜೀವದಾಣೆ ನಾನು ನಿಮ್ಮಿಂದ ವಿಚಾರಿಸ ಲ್ಪಡುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ;