2 Kings · chapter 23 · verse 26
2 Kings 23:26 in Kannada
ಆದರೆ ಮನಸ್ಸೆಯು ಕರ್ತನಿಗೆ ಕೋಪ ವನ್ನು ಎಬ್ಬಿಸಲು ಮಾಡಿದ ಎಲ್ಲಾ ಕ್ರಿಯೆಗಳಿಗೋಸ್ಕರ ಯೆಹೂದಕ್ಕೆ ವಿರೋಧವಾಗಿ ತನ್ನನ್ನು ಉದ್ರೇಕಿಸಿದ ಕೋಪವನ್ನೂ ತನ್ನ ಮಹಾಕೋಪದ ಉರಿಯನ್ನೂ ಕರ್ತನು ಬಿಟ್ಟುಬಿಡಲಿಲ್ಲ.
Aadare manasseyu kartanige kopa vannu ebbisalu maadida ellaa kriyegaligoskara yehoodakke virodhavaagi tannannu udrekisida kopavannoo tanna mahaakopada uriyannoo kartanu bittubidalilla.
2 Kings 23:26 in English
- King James Version (KJV)
- Notwithstanding the LORD turned not from the fierceness of his great wrath, wherewith his anger was kindled against Judah, because of all the provocations that Manasseh had provoked him withal.
- World English Bible (WEB)
- Notwithstanding, the LORD didn’t turn from the fierceness of his great wrath, with which his anger burned against Judah, because of all the provocation with which Manasseh had provoked him.
- American Standard Version (ASV)
- Notwithstanding, Jehovah turned not from the fierceness of his great wrath, wherewith his anger was kindled against Judah, because of all the provocations wherewith Manasseh had provoked him.
- Bible in Basic English (BBE)
- But still the heat of the Lord's wrath was not turned back from Judah, because of all Manasseh had done in moving him to wrath.
- Darby Translation (DBY)
- But Jehovah turned not from the fierceness of his great wrath, wherewith his anger was kindled against Judah, because of all the provocations with which Manasseh had provoked him.
- Webster's Bible (WBS)
- Notwithstanding, the LORD turned not from the fierceness of his great wrath, with which his anger was kindled against Judah, because of all the provocations by which Manasseh had provoked him.
- Young's Literal Translation (YLT)
- Only, Jehovah hath not turned back from the fierceness of His great anger with which His anger burned against Judah, because of all the provocations with which Manasseh provoked him,
Read in context
- 24ಇದಲ್ಲದೆ ಯಾಜಕನಾದ ಹಿಲ್ಕೀಯನು ಕರ್ತನ ಮನೆಯಲ್ಲಿ ಕಂಡುಕೊಂಡ ಪುಸ್ತಕದಲ್ಲಿ ಬರೆಯಲ್ಪಟ್ಟ ನ್ಯಾಯ ಪ್ರಮಾಣದ ಮಾತುಗಳನ್ನು ಯೋಷೀಯನು ಈಡೇ ರಿಸುವ ಹಾಗೆ ಯೆಹೂದ ದೇಶದಲ್ಲಿಯೂ ಯೆರೂ ಸಲೇಮಿನಲ್ಲಿಯೂ ಕಂಡು ಹಿಡಿಯಲ್ಪಟ್ಟ ಯಕ್ಷಿಣಿ ಗಾರರನ್ನೂ ಮಂತ್ರಗಾರರನ್ನೂ ವಿಗ್ರಹಗಳನ್ನೂ ಮಣ್ಣು ದೇವರುಗಳನ್ನೂ ಎಲ್ಲಾ ಅಸಹ್ಯಕರವಾದವುಗಳನ್ನೂ ತೆಗೆದುಹಾಕಿ ಬಿಟ್ಟನು.
- 25ತನ್ನ ಪೂರ್ಣಹೃದಯ ದಿಂದಲೂ ತನ್ನ ಪೂರ್ಣಪ್ರಾಣದಿಂದಲೂ ಪೂರ್ಣ ಬಲದಿಂದಲೂ ಮೋಶೆಯ ಎಲ್ಲಾ ನ್ಯಾಯಪ್ರಮಾ ಣದ ಪ್ರಕಾರ ಕರ್ತನ ಬಳಿಗೆ ತಿರುಗಿದ ಅರಸನ ಹಾಗೆ ಅವನ ಮುಂದೆ ಯಾವನೂ ಇರಲಿಲ್ಲ; ಅವನ ತರುವಾಯ ಅವನ ಹಾಗೆ ಯಾವನೂ ಎದ್ದಿರಲಿಲ್ಲ.
- 26ಆದರೆ ಮನಸ್ಸೆಯು ಕರ್ತನಿಗೆ ಕೋಪ ವನ್ನು ಎಬ್ಬಿಸಲು ಮಾಡಿದ ಎಲ್ಲಾ ಕ್ರಿಯೆಗಳಿಗೋಸ್ಕರ ಯೆಹೂದಕ್ಕೆ ವಿರೋಧವಾಗಿ ತನ್ನನ್ನು ಉದ್ರೇಕಿಸಿದ ಕೋಪವನ್ನೂ ತನ್ನ ಮಹಾಕೋಪದ ಉರಿಯನ್ನೂ ಕರ್ತನು ಬಿಟ್ಟುಬಿಡಲಿಲ್ಲ.
- 27ಕರ್ತನು--ನಾನು ಇಸ್ರಾ ಯೇಲನ್ನು ತೆಗೆದು ಹಾಕಿದ ಹಾಗೆ ಯೆಹೂದವನ್ನು ಸಹ ನನ್ನ ಸಮ್ಮುಖದಿಂದ ತೆಗೆದುಹಾಕುವೆನು; ಇದ ಲ್ಲದೆ ನಾನು ಆದುಕೊಂಡ ಈ ಪಟ್ಟಣವಾದ ಯೆರೂ ಸಲೇಮನ್ನೂ ನನ್ನ ಹೆಸರು ಅಲ್ಲಿರುವದೆಂದು ನಾನು ಹೇಳಿದ ಮನೆಯನ್ನೂ ತೆಗೆದುಬಿಡುವೆನು ಅಂದನು.
- 28ಯೋಷೀಯನ ಇತರ ಕ್ರಿಯೆಗಳೂ ಅವನು ಮಾಡಿದ ಎಲ್ಲವೂ ಯೆಹೂದದ ಅರಸುಗಳ ವೃತಾಂತ ಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?
Cross references
- 2 Kings 24:4 2 ಅರಸುಗಳು 24:4ಇದಲ್ಲದೆ ಅವನು ಚೆಲ್ಲಿದ ನಿರಪರಾಧದ ರಕ್ತದ ನಿಮಿತ್ತ ಇದು ಉಂಟಾಯಿತು. ಅವನು ನಿರಪರಾಧದ ರಕ್ತದಿಂದ ಯೆರೂಸಲೇಮನ್ನು ತುಂಬಿಸಿದ್ದನು. ಕರ್ತನು ಅದನ್ನು ಮನ್ನಿಸಲೊಲ್ಲದೆ ಇದ್ದನು.
- 2 Kings 21:11–13 2 ಅರಸುಗಳು 21:11–13ಯೆಹೂದದ ಅರಸನಾದ ಮನಸ್ಸೆಯು ತನ್ನ ಮುಂದೆ ಇದ್ದ ಅಮೋರಿಯರು ಮಾಡಿದ ಎಲ್ಲಕ್ಕಿಂತ ಕೆಟ್ಟದ್ದಾದ ಈ ಅಸಹ್ಯಗಳನ್ನು ಮಾಡಿದನು. ಯೆಹೂದವನ್ನು ತನ್ನ ವಿಗ್ರಹಗಳಿಂದ ಪಾಪಮಾಡಿಸಿದನು. ಈ ಕಾರಣ ದಿಂದ ಇಸ್ರಾಯೇಲಿನ ದೇವರಾದ ಕರ್ತನು ಹೇಳು ವದೇನಂದರೆ-- ಇಗೋ, ನಾನು ಯೆರೂಸಲೇಮಿನ ಮೇಲೆಯೂ ಯೆಹೂದದ ಮೇಲೆಯೂ ಕೇಡನ್ನು ಬರಮಾಡುವೆನು; ಅದನ್ನು ಕೇಳುವವನ ಎರಡೂ ಕಿವಿಗಳು ಕಿರಗುಟ್ಟುವವು. ನಾನು ಯೆರೂಸಲೇಮಿನ ಮೇಲೆ ಸಮಾರ್ಯದ ನೂಲನ್ನೂ ಅಹಾಬನ ಮನೆಯ ಗಟ್ಟಿ ತೂಕವನ್ನೂ ಗುಂಡನ್ನೂ ಚಾಚುವೆನು; ತಟ್ಟೆ ಯನ್ನು ಒರಸಿ ಬೋರಲು ಹಾಕುವ ಹಾಗೆ ನಾನು ಯೆರೂಸಲೇಮನ್ನು ಒರಸಿಬಿಡುವೆನು.
- Jeremiah 15:1–4 ಯೆರೆಮೀಯ 15:1–4ಆಗ ಕರ್ತನು ನನಗೆ ಹೇಳಿದ್ದೇನಂದರೆ --ಮೋಶೆಯೂ ಸಮುವೇಲನೂ ನನ್ನ ಮುಂದೆ ನಿಂತರೂ ನನ್ನ ಮನಸ್ಸು ಈ ಜನರ ಮೇಲೆ ಇರುವದಿಲ್ಲ. ಅವರನ್ನು ನನ್ನ ಸನ್ನಿಧಿಯಿಂದ ಕಳುಹಿಸಿ ಬಿಡು; ಅವರು ಹೋಗಲಿ. ಅವರು ನಿನಗೆ--ನಾವು ಎಲ್ಲಿ ಹೋಗಬೇಕು ಎಂದು ಹೇಳಿದರೆ, ನೀನು ಅವ ರಿಗೆ--ಕರ್ತನು ಹೀಗೆ ಹೇಳುತ್ತಾನೆ--ಮರಣಕ್ಕೆ ಇರುವವರು ಮರಣಕ್ಕೆ; ಕತ್ತಿಗೆ ಇರುವವರು ಕತ್ತಿಗೆ; ಕ್ಷಾಮಕ್ಕೆ ಇರುವವರು ಕ್ಷಾಮಕ್ಕೆ, ಸೆರೆಗೆ ಇರು ವವರು ಸೆರೆಗೆ ಎಂದು ಹೇಳಬೇಕು. ಕರ್ತನು--ನಾನು ಅವರಿಗೆ ವಿರೋಧವಾಗಿ ನಾಲ್ಕು ತರವಾದವುಗಳನ್ನು ಅಂದರೆ ಕೊಲ್ಲುವದಕ್ಕೆ ಕತ್ತಿಯನ್ನೂ ಹರಿಯುವದಕ್ಕೆ ನಾಯಿಗಳನ್ನೂ ತಿನ್ನುವದಕ್ಕೂ ನಾಶ ಮಾಡುವದಕ್ಕೂ ಆಕಾಶದ ಪಕ್ಷಿಗಳನ್ನೂ ಭೂಮಿಯ ಮೃಗಗಳನ್ನೂ ನೇಮಿಸುತ್ತೇನೆ. ಅವರನ್ನು ಹಿಜ್ಕೀಯನ ಮಗನಾದ ಯೆಹೂದದ ಅರಸನಾದ ಮನಸ್ಸೆಯ ನಿಮಿತ್ತವೂ ಇವನು ಯೆರೂಸಲೇಮಿನಲ್ಲಿ ಮಾಡಿದ್ದರ ನಿಮಿತ್ತವೂ ಭೂಮಿಯ ಎಲ್ಲಾ ರಾಜ್ಯಗಳಿಗೆ ಚದರಿಹೋಗುವಂತೆ ಮಾಡುವೆನು.
- 2 Kings 22:16–17 2 ಅರಸುಗಳು 22:16–17ಅಂದರೆ ಯೆಹೂದದ ಅರಸನು ಓದಿದ ಪುಸ್ತಕದ ಮಾತುಗ ಳನ್ನೆಲ್ಲಾ ಬರಮಾಡುವೆನು. ಅವರು ತಮ್ಮ ಎಲ್ಲಾ ಕೈ ಕೆಲಸಗಳಿಂದ ನನಗೆ ಕೋಪವನ್ನು ಎಬ್ಬಿಸುವ ಹಾಗೆ ನನ್ನನ್ನು ಬಿಟ್ಟು ಇತರ ದೇವರುಗಳಿಗೆ ಧೂಪವನ್ನು ಸುಟ್ಟಿದ್ದಾರೆ. ನನ್ನ ಕೋಪ ಈ ಸ್ಥಳದ ಮೇಲೆ ಹೊತ್ತಿ ಉರಿಯುವದು, ಆರಿಹೋಗದು ಎಂದು ಕರ್ತನು ಹೇಳುತ್ತಾನೆ.
- 2 Chronicles 36:16 2 ಪೂರ್ವಕಾಲವೃತ್ತಾಂತ 36:16ಆದರೆ ಕರ್ತನ ಕೋಪವು ತನ್ನ ಜನರಿಗೆ ವಿರೋಧ ವಾಗಿ ಏಳುವ ವರೆಗೂ ಅಂದರೆ ಪರಿಹಾರವಾಗದಷ್ಟೂ ಅವರು ದೇವರ ಸೇವಕರನ್ನು ಅಪಹಾಸ್ಯಮಾಡಿ ಆತನ ವಾಕ್ಯಗಳನ್ನು ತಿರಸ್ಕರಿಸಿ ಆತನ ಪ್ರವಾದಿಗಳಿಗೆ ವಂಚನೆ ಮಾಡಿದರು.
- 2 Kings 24:2 2 ಅರಸುಗಳು 24:2ಆದರೆ ಕರ್ತನು ಕಸ್ದೀಯರ, ಅರಾಮ್ಯರ, ಮೋವಾಬ್ಯರ, ಅಮ್ಮೋನ್ಯರ ಗುಂಪುಗಳನ್ನೂ ಅವನ ಮೇಲೆ ಕಳುಹಿಸಿದನು. ಕರ್ತನು ಪ್ರವಾದಿಗಳಾದ ತನ್ನ ಸೇವಕರ ಮುಖಾಂತರ ಹೇಳಿದ ಮಾತಿನ ಪ್ರಕಾರ ಯೆಹೂದವನ್ನು ನಾಶ ಮಾಡುವಂತೆ ಅದರ ಮೇಲೆ ಅವರನ್ನು ಬರಮಾಡಿದನು.
- Jeremiah 3:7–10 ಯೆರೆಮೀಯ 3:7–10ಅವಳು ಇವುಗಳನ್ನೆಲ್ಲಾ ಮಾಡಿದ ಮೇಲೆ ನಾನು--ನನ್ನ ಬಳಿಗೆ ತಿರುಗಿಕೋ ಅಂದೆನು; ಆದರೆ ಅವಳು ತಿರುಗಿಕೊಳ್ಳಲಿಲ್ಲ; ಅವಳ ವಂಚನೆಯುಳ್ಳ ಸಹೋದರಿಯಾದ ಯೆಹೂದಳು ಅದನ್ನು ನೋಡಿದಳು. ಆಗ ನಾನು ನೋಡಿದ್ದೇ ನಂದರೆ, ಹಿಂದಿರುಗಿದ ಇಸ್ರಾಯೇಲು ವ್ಯಭಿಚಾರ ಮಾಡಿದ ಎಲ್ಲಾ ಕಾರಣಗಳ ನಿಮಿತ್ತ ನಾನು ಅವಳನ್ನು ಬಿಟ್ಟುಬಿಟ್ಟು ತ್ಯಾಗಪತ್ರವನ್ನು ಕೊಟ್ಟಿದ್ದಾಗ್ಯೂ ವಂಚನೆ ಯುಳ್ಳ ಅವಳ ಸಹೋದರಿಯಾದ ಯೆಹೂದಳು ಭಯಪಡದೆ ತಾನು ಕೂಡ ಹೋಗಿ ಸೂಳೆತನವನ್ನು ಮಾಡಿದಳು. ಅವಳ ಸೂಳೆತನದ ಸುದ್ದಿಯಿಂದ ಅವಳು ದೇಶವನ್ನು ಅಪವಿತ್ರ ಮಾಡಿ ಕಲ್ಲುಗಳ ಸಂಗ ಡಲೂ ಮರಗಳ ಸಂಗಡಲೂ ವ್ಯಭಿಚಾರ ಮಾಡಿದಳು. ಇದೆಲ್ಲಾ ಆದಾಗ್ಯೂ ವಂಚನೆಯುಳ್ಳ ಅವಳ ಸಹೋ ದರಿಯಾದ ಯೆಹೂದಳು ಪೂರ್ಣ ಹೃದಯದಿಂದಲ್ಲ, ಕಪಟದಿಂದಲೇ ನನ್ನ ಬಳಿಗೆ ತಿರುಗಿಕೊಂಡಿದ್ದಾಳೆ ಎಂದು ಕರ್ತನು ಅನ್ನುತ್ತಾನೆ.