2 Kings · chapter 6 · verse 14
2 Kings 6:14 in Kannada
ಆದದರಿಂದ ಅವನು ಅಲ್ಲಿಗೆ ಕುದುರೆ ಗಳನ್ನೂ ರಥಗಳನ್ನೂ ಮಹಾಸೈನ್ಯವನ್ನೂ ಕಳುಹಿಸಿ ದನು. ಅವರು ರಾತ್ರಿಯಲ್ಲಿ ಬಂದು ಪಟ್ಟಣವನ್ನು ಸುತ್ತಿಕೊಂಡರು.
Aadadarinda avanu allige kudure galannoo rathagalannoo mahaasainyavannoo kaluhisi danu. Avaru raatriyalli bandu pattanavannu suttikondaru.
2 Kings 6:14 in English
- King James Version (KJV)
- Therefore sent he thither horses, and chariots, and a great host: and they came by night, and compassed the city about.
- World English Bible (WEB)
- Therefore he sent horses, chariots, and a great army there. They came by night and surrounded the city.
- American Standard Version (ASV)
- Therefore sent he thither horses, and chariots, and a great host: and they came by night, and compassed the city about.
- Bible in Basic English (BBE)
- So he sent there horses and carriages and a great army; and they came by night, circling the town.
- Darby Translation (DBY)
- And he sent thither horses and chariots, and a great host, and they came by night and surrounded the city.
- Webster's Bible (WBS)
- Therefore he sent thither horses, and chariots, and a great host: and they came by night, and encompassed the city.
- Young's Literal Translation (YLT)
- And he sendeth thither horses and chariot, and a heavy force, and they come in by night, and go round against the city.
Read in context
- 12ಅವನ ಸೇವಕರಲ್ಲಿ ಒಬ್ಬನು--ನನ್ನ ಒಡೆಯನೇ, ಅರಸನೇ, ಯಾವನೂ ಇಲ್ಲ. ಆದರೆ ಇಸ್ರಾಯೇಲಿನಲ್ಲಿರುವ ಪ್ರವಾದಿಯಾದ ಎಲೀಷನು ಇದ್ದಾನೆ; ನೀನು ನಿನ್ನ ಮಲಗುವ ಮನೆ ಯಲ್ಲಿ ಹೇಳುವ ಮಾತುಗಳನ್ನು ಇಸ್ರಾಯೇಲಿನ ಅರಸ ನಿಗೆ ಹೇಳುತ್ತಾನೆ ಅಂದನು.
- 13ಆಗ ಅವನು--ನಾನು ಕಳುಹಿಸಿ ಅವನನ್ನು ಹಿಡಿಯುವ ಹಾಗೆ ನೀನು ಹೋಗಿ ಅವನು ಎಲ್ಲಿದ್ದಾನೋ ನೋಡಿರಿ ಅಂದನು. ಆಗ ಇಗೋ, ದೋತಾನಿನಲ್ಲಿದ್ದಾನೆಂದು ಅವನಿಗೆ ತಿಳಿಸಿದರು.
- 14ಆದದರಿಂದ ಅವನು ಅಲ್ಲಿಗೆ ಕುದುರೆ ಗಳನ್ನೂ ರಥಗಳನ್ನೂ ಮಹಾಸೈನ್ಯವನ್ನೂ ಕಳುಹಿಸಿ ದನು. ಅವರು ರಾತ್ರಿಯಲ್ಲಿ ಬಂದು ಪಟ್ಟಣವನ್ನು ಸುತ್ತಿಕೊಂಡರು.
- 15ದೇವರ ಮನುಷ್ಯನ ಸೇವಕನು ಉದಯದಲ್ಲಿ ಎದ್ದು ಹೊರಗೆ ಹೊರಟಾಗ ಇಗೋ, ಕುದುರೆಗಳೂ ರಥಗಳುಳ್ಳ ಸೈನ್ಯವೂ ಪಟ್ಟಣವನ್ನು ಸುತ್ತಿಕೊಂಡಿತು. ಆಗ ಆ ಸೇವಕನು ಅವನಿಗೆ--ಅಯ್ಯೋ, ನನ್ನ ಯಜಮಾನನೇ, ನಾವು ಏನು ಮಾಡು ವದು ಅಂದನು.
- 16ಅದಕ್ಕವನು--ಭಯಪಡಬೇಡ; ಅವರ ಸಂಗಡ ಇರುವವರಿಗಿಂತ ನಮ್ಮ ಸಂಗಡ ಇರುವ ವರು ಹೆಚ್ಚಾಗಿದ್ದಾರೆ ಅಂದನು.
Cross references
- Matthew 26:55 ಮತ್ತಾಯನು 26:55ಅದೇ ಗಳಿಗೆಯಲ್ಲಿ ಯೇಸು ಜನಸಮೂಹಗಳಿಗೆ--ಒಬ್ಬ ಕಳ್ಳನಿಗೆ ವಿರೋಧವಾಗಿ ಬರುವಂತೆ ಕತ್ತಿಗಳೊಂದಿಗೂ ದೊಣ್ಣೆಗಳೊಂದಿಗೂ ನನ್ನನ್ನು ಹಿಡಿಯುವದಕ್ಕಾಗಿ ಬಂದಿರಾ? ನಾನು ದಿನಾ ಲು ನಿಮ್ಮ ಸಂಗಡ ದೇವಾಲಯದಲ್ಲಿ ಕೂತುಕೊಂಡು ಬೋಧಿಸುತ್ತಿದ್ದಾಗ ನೀವು ನನ್ನನ್ನು ಹಿಡಿಯಲಿಲ್ಲ;
- 2 Kings 18:17 2 ಅರಸುಗಳು 18:17ಅಶ್ಶೂರಿನ ಅರಸನು ಲಾಕೀಷಿನಿಂದ ತರ್ತಾನ ನನ್ನೂ ರಬ್ಸಾರೀಸನನ್ನೂ ರಬ್ಷಾಕೆಯನ್ನೂ ದೊಡ್ಡ ದಂಡನ್ನೂ ಯೆರೂಸಲೇಮಿನಲ್ಲಿದ್ದ ಅರಸನಾದ ಹಿಜ್ಕೀ ಯನ ಬಳಿಗೆ ಕಳುಹಿಸಿದನು. ಅವರು ಯೆರೂಸಲೇಮಿಗೆ ಬಂದು ಅರಸನ ಹೊಲದ ರಾಜ ಮಾರ್ಗದಲ್ಲಿರುವ ಮೇಲಿನ ಕೆರೆಯ ಕಾಲುವೆಯ ಬಳಿಯಲ್ಲಿ ನಿಂತರು. ಅವರು ಅರಸನನ್ನು ಕರೇ ಕಳುಹಿಸಿದರು.
- 1 Samuel 24:2 1 ಸಮುವೇಲನು 24:2ಆಗ ಸೌಲನು ಎಲ್ಲಾ ಇಸ್ರಾಯೇಲಿನಲ್ಲಿ ಆದುಕೊಳ್ಳಲ್ಪಟ್ಟ ಮೂರು ಸಾವಿರ ಜನರನ್ನು ತಕ್ಕೊಂಡು ದಾವೀದನನ್ನೂ ಅವನ ಮನುಷ್ಯರನ್ನೂ ಹುಡುಕಲು ಕಾಡು ಮೇಕೆಗಳಿರುವ ಬಂಡೆಗಳಿಗೆ ಹೋದನು.
- Matthew 26:47 ಮತ್ತಾಯನು 26:47ಆತನು ಇನ್ನೂ ಮಾತನಾಡುತ್ತಿರುವಾಗ ಇಗೋ, ಪ್ರಧಾನಯಾಜಕರ ಮತ್ತು ಜನರ ಹಿರಿಯರ ಕಡೆಯಿಂದ ಕತ್ತಿ ದೊಣ್ಣೆಗಳೊಡನೆ ಬಂದ ದೊಡ್ಡ ಜನ ಸಮೂಹದೊಂದಿಗೆ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಯೂದನೂ ಬಂದನು.
- John 18:3–6 ಯೋಹಾನನು 18:3–6ಆಗ ಯೂದನು ಪ್ರಧಾನಯಾಜಕರಿಂದ ಮತ್ತು ಫರಿಸಾಯ ರಿಂದ ಜನರ ಗುಂಪನ್ನೂ ಅಧಿಕಾರಿಗಳನ್ನೂ ಪಡೆದು ಕೊಂಡು ದೀಪಗಳಿಂದಲೂ ಪಂಜುಗಳಿಂದಲೂ ಆಯುಧಗಳಿಂದಲೂ ಅಲ್ಲಿಗೆ ಬಂದನು. ಯೇಸು ತನ್ನ ಮೇಲೆ ಬರುವವುಗಳನ್ನೆಲ್ಲಾ ತಿಳಿದುಕೊಂಡು ಮುಂದಕ್ಕೆ ಹೋಗಿ ಅವರಿಗೆ--ನೀವು ಯಾರನ್ನು ಹುಡುಕುತ್ತೀರಿ ಎಂದು ಕೇಳಲು ಅವರು ಪ್ರತ್ಯುತ್ತರ ವಾಗಿ ಆತನಿಗೆ--ನಜರೇತಿನ ಯೇಸು ಅಂದರು. ಅದಕ್ಕೆ ಯೇಸು ಅವರಿಗೆ--ನಾನೇ ಆತನು ಅಂದನು. ಮತ್ತು ಆತನನ್ನು ಹಿಡುಕೊಡುವ ಯೂದನು ಸಹ ಅವರೊಂದಿಗೆ ನಿಂತಿದ್ದನು. ಆತನು ಅವರಿಗೆ--ನಾನೇ ಆತನು ಎಂದು ಹೇಳಿದ ಕೂಡಲೇ ಅವರು ಹಿಂದಕ್ಕೆ ಸರಿದು ನೆಲಕ್ಕೆ ಬಿದ್ದರು.
- 1 Samuel 23:26 1 ಸಮುವೇಲನು 23:26ಸೌಲನು ಬೆಟ್ಟದ ಇನ್ನೊಂದು ಕಡೆಯಲ್ಲಿ ಹೋದನು; ದಾವೀದನೂ ಅವನ ಜನರೂ ಬೆಟ್ಟದ ಆ ಕಡೆಯಲ್ಲಿ ಹೋದರು; ಸೌಲನಿಗೆ ಭಯ ಪಟ್ಟು ತಪ್ಪಿಸಿಕೊಂಡು ಹೋಗಲು ದಾವೀದನು ತ್ವರೆ ಮಾಡುವಾಗ ಸೌಲನೂ ಅವನ ಮನುಷ್ಯರೂ ಹಿಡಿ ಯುವ ಹಾಗೆ ಅವರನ್ನು ಸುತ್ತಿಕೊಂಡರು.
- 2 Kings 1:9–13 2 ಅರಸುಗಳು 1:9–13ಆಗ ಅರಸನು ಐವತ್ತು ಮಂದಿಗೆ ಪ್ರಧಾನನನ್ನು ಅವನ ಐವತ್ತು ಮಂದಿಯ ಸಂಗಡ ಇವನ ಬಳಿಗೆ ಕಳುಹಿಸಿದನು. ಅವನು ಇವನ ಬಳಿಗೆ ಹೋದಾಗ ಇಗೋ, ಇವನು ಬೆಟ್ಟದ ತುದಿಯ ಮೇಲೆ ಕುಳಿತಿದ್ದನು. ಆಗ ಅವನು ಎಲೀಯನಿಗೆ--ದೇವರ ಮನುಷ್ಯನೇ, ಇಳಿದು ಬಾ ಎಂದು ಅರಸನು ಹೇಳುತ್ತಾನೆ ಅಂದನು. ಅದಕ್ಕೆ ಎಲೀಯನು ಐವತ್ತು ಮಂದಿಯ ಪ್ರಧಾನನಿಗೆ ಪ್ರತ್ಯುತ್ತರವಾಗಿ--ನಾನು ದೇವರ ಮನುಷ್ಯನಾಗಿದ್ದರೆ ಬೆಂಕಿಯು ಆಕಾಶದಿಂದ ಇಳಿದು ನಿನ್ನನ್ನೂ ನಿನ್ನ ಐವತ್ತು ಮಂದಿಯನ್ನೂ ದಹಿಸಿಬಿಡಲಿ ಅಂದನು. ತಕ್ಷಣವೇ ಬೆಂಕಿಯು ಆಕಾಶದಿಂದ ಇಳಿದು ಅವನನ್ನೂ ಅವನ ಐವತ್ತು ಮಂದಿಯನ್ನೂ ದಹಿಸಿಬಿಟ್ಟಿತು. ತಿರುಗಿ ಅರಸನು ಇವನ ಬಳಿಗೆ ಐವತ್ತು ಮಂದಿಯ ಪ್ರಧಾನ ನನ್ನೂ ಅವನ ಐವತ್ತು ಮಂದಿಯನ್ನೂ ಕಳುಹಿಸಿದನು. ಅವನು ಬಂದು ಇವನಿಗೆ--ದೇವರ ಮನುಷ್ಯನೇ, ಬೇಗ ಇಳಿದು ಬಾ ಎಂದು ಅರಸನು ಹೇಳುತ್ತಾನೆ ಅಂದನು. ಎಲೀಯನು ಅವರಿಗೆ ಪ್ರತ್ಯುತ್ತರವಾಗಿನಾನು ದೇವರ ಮನುಷ್ಯನಾಗಿದ್ದರೆ ಬೆಂಕಿಯು ಆಕಾಶ ದಿಂದ ಇಳಿದು ನಿನ್ನನ್ನೂ ನಿನ್ನ ಐವತ್ತು ಮಂದಿಯನ್ನೂ ದಹಿಸಿಬಿಡಲಿ ಅಂದನು. ತಕ್ಷಣವೇ ದೇವರ ಬೆಂಕಿಯು ಆಕಾಶದಿಂದ ಇಳಿದು ಅವನನ್ನೂ ಅವನ ಐವತ್ತು ಮಂದಿಯನ್ನೂ ಸುಟ್ಟುಬಿಟ್ಟಿತು. ತಿರುಗಿ ಅವನು ಐವತ್ತು ಮಂದಿಯ ಪ್ರಧಾನನಾದ ಮೂರನೆಯವ ನನ್ನೂ ಅವನ ಐವತ್ತು ಮಂದಿಯನ್ನೂ ಕಳುಹಿಸಿದನು. ಈ ಐವತ್ತು ಮಂದಿಗೆ ಪ್ರಧಾನನಾದ ಮೂರನೆಯ ವನು ಬಂದು ಎಲೀಯನ ಮುಂದೆ ತನ್ನ ಮೊಣ ಕಾಲೂರಿಕೊಂಡು ಇವನಿಗೆ--ದೇವರ ಮನುಷ್ಯನೇ, ನೀನು ದಯೆತೋರು, ನನ್ನ ಪ್ರಾಣವೂ ನಿನ್ನ ಸೇವಕ ರಾದ ಈ ಐವತ್ತು ಮಂದಿಯ ಪ್ರಾಣಗಳೂ ನಿನ್ನ ಸಮ್ಮುಖದಲ್ಲಿ ಅಮೂಲ್ಯವಾಗಿರಲಿ.