2 Peter · chapter 1 · verse 15
2 Peter 1:15 in Kannada
ಹೇಗಿದ್ದರೂ ನೀವು ನನ್ನ ಮರಣಾನಂತರದಲ್ಲಿ ಇವುಗಳನ್ನು ಯಾವಾಗಲೂ ಜ್ಞಾಪಕಮಾಡಿಕೊಳ್ಳುವದು ಸಾಧ್ಯವಾಗುವಂತೆ ಪ್ರಯಾಸಪಡುವೆನು.
Hegiddaroo neevu nanna maranaanantaradalli ivugalannu yaavaagaloo jnyaapakamaadikolluvadu saadhyavaaguvante prayaasapaduvenu.
2 Peter 1:15 in English
- King James Version (KJV)
- Moreover I will endeavour that ye may be able after my decease to have these things always in remembrance.
- World English Bible (WEB)
- Yes, I will make every effort that you may always be able to remember these things even after my departure.
- American Standard Version (ASV)
- Yea, I will give diligence that at every time ye may be able after my decease to call these things to remembrance.
- Bible in Basic English (BBE)
- And I will take every care so that you may have a clear memory of these things after my death.
- Darby Translation (DBY)
- but I will use diligence, that after my departure ye should have also, at any time, [in your power] to call to mind these things.
- Webster's Bible (WBS)
- Moreover, I will endeavor that ye may be able, after my decease, to have these things always in remembrance.
- Young's Literal Translation (YLT)
- and I will be diligent that also at every time ye have, after my outgoing, power to make to yourselves the remembrance of these things.
Read in context
- 13ಹೌದು, ನಾನು ನನ್ನ (ದೇಹವೆಂಬ) ಗುಡಾರದಲ್ಲಿರುವ ತನಕ ನಿಮ್ಮನ್ನು ಜ್ಞಾಪಕಪಡಿಸಿ ಪ್ರೇರಿಸುವದು ಯುಕ್ತವೆಂದೆಣಿಸಿದ್ದೇನೆ.
- 14ನಮ್ಮ ಕರ್ತನಾದ ಯೇಸು ಕ್ರಿಸ್ತನು ನನಗೆ ತೋರಿಸಿದ ಪ್ರಕಾರ ನಾನು ಈ ಗುಡಾರವನ್ನು ತೆಗೆದುಹಾಕುವದು ಬೇಗನೆ ಬರುತ್ತದೆಂದು ಬಲ್ಲೆನು.
- 15ಹೇಗಿದ್ದರೂ ನೀವು ನನ್ನ ಮರಣಾನಂತರದಲ್ಲಿ ಇವುಗಳನ್ನು ಯಾವಾಗಲೂ ಜ್ಞಾಪಕಮಾಡಿಕೊಳ್ಳುವದು ಸಾಧ್ಯವಾಗುವಂತೆ ಪ್ರಯಾಸಪಡುವೆನು.
- 16ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಕ್ತಿಯನ್ನೂ ಆತನ ಪ್ರತ್ಯಕ್ಷತೆಯನ್ನೂ ನಿಮಗೆ ತಿಳಿಯಪಡಿಸಿದ್ದರಲ್ಲಿ ಚಮತ್ಕಾರದಿಂದ ಕಲ್ಪಿಸಿದ ಕಥೆಗಳನ್ನು ನಾವು ಅನುಸರಿ ಸುವವರಾಗಿರಲಿಲ್ಲ. ಆತನ ಮಹತ್ತನ್ನು ಕಣ್ಣಾರೆ ಕಂಡವ ರಾಗಿಯೇ ತಿಳಿಯಪಡಿಸಿದೆವು.
- 17ಈತನು ಪ್ರಿಯನಾಗಿ ರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ ಎಂಬ ಧ್ವನಿಯು ಘನವಾದ ಪ್ರಭಾವದಿಂದ ಆತನಿಗೆ ಉಂಟಾದದ್ದರಲ್ಲಿ ಆತನು ತಂದೆಯಾದ ದೇವರಿಂದ ಗೌರವವನ್ನೂ ಮಹಿಮೆಯನ್ನು ಹೊಂದಿದನಲ್ಲವೇ.
Cross references
- Deuteronomy 31:19–29 ಧರ್ಮೋಪದೇಶಕಾಂಡ 31:19–29ಹೀಗಿರುವದರಿಂದ ಈಗ ಈ ಹಾಡನ್ನು ಬರೆದು ಕೊಳ್ಳಿರಿ; ಇಸ್ರಾಯೇಲ್ ಮಕ್ಕಳಿಗೆ ಅದನ್ನು ಕಲಿಸು; ಇಸ್ರಾಯೇಲ್ ಮಕ್ಕಳಲ್ಲಿ ಈ ಹಾಡು ನನಗೆ ಸಾಕ್ಷಿಯಾ ಗಿರುವ ಹಾಗೆ ಅದನ್ನು ಅವರ ಬಾಯಿಗಳಲ್ಲಿ ಇಡು. ನಾನು ಅವರ ಪಿತೃಗಳಿಗೆ ಪ್ರಮಾಣಮಾಡಿದಂಥ ಹಾಲೂ ಜೇನೂ ಹರಿಯುವಂಥ ದೇಶಕ್ಕೆ ಅವರನ್ನು ತರಲಾಗಿ ಅವರು ತಿಂದು ತೃಪ್ತಿಯಾಗಿ ಕೊಬ್ಬಿದವ ರಾದಾಗ ಅವರು ಅನ್ಯದೇವರುಗಳ ಕಡೆಗೆ ತಿರುಗಿ ಕೊಂಡು ಅವುಗಳನ್ನು ಸೇವಿಸಿ ನನಗೆ ಕೋಪವನ್ನೆಬ್ಬಿಸಿ ನನ್ನ ಒಡಂಬಡಿಕೆಯನ್ನು ವಿಾರುವರು. ಅನಂತರ ಬಹಳ ಕೇಡುಗಳೂ ಇಕ್ಕಟ್ಟುಗಳೂ ಅವರಿಗೆ ಸಂಭವಿಸು ವಾಗ ಈ ಹಾಡು ಅವರಿಗೆ ವಿರೋಧವಾಗಿ ಸಾಕ್ಷಿಯಾಗಿ ಉತ್ತರ ಕೊಡುವದು; ಯಾಕಂದರೆ ಅದು ಅವರ ಸಂತತಿಯ ಬಾಯಿಯಲ್ಲಿಂದ ಮರೆತುಹೋಗುವದಿಲ್ಲ; ನಾನು ಪ್ರಮಾಣಮಾಡಿದ ದೇಶದಲ್ಲಿ ಅವರನ್ನು ತರುವದಕ್ಕಿಂತ ಮುಂಚೆ ಅವರು ಈಹೊತ್ತು ಮಾಡುವ ಕಲ್ಪನೆಗಳನ್ನು ನಾನು ಬಲ್ಲೆನು. ಆದದರಿಂದ ಮೋಶೆ ಅದೇ ದಿವಸದಲ್ಲಿ ಈ ಹಾಡನ್ನು ಬರೆದು ಇಸ್ರಾಯೇಲ್ ಮಕ್ಕಳಿಗೆ ಕಲಿಸಿದನು. ಆತನು ನೂನನ ಮಗನಾದ ಯೆಹೋಶುವನಿಗೆ ಆಜ್ಞೆಕೊಟ್ಟು--ಬಲವಾಗಿರು; ಧೈರ್ಯವಾಗಿರು; ನಾನು ಇಸ್ರಾಯೇಲ್ ಮಕ್ಕಳಿಗೆ ಪ್ರಮಾಣಮಾಡಿದ ದೇಶಕ್ಕೆ ನೀನು ತರುವಿ; ನಾನು ನಿನ್ನ ಸಂಗಡ ಇರುವೆನು ಅಂದನು. ಇದಲ್ಲದೆ ಮೋಶೆ ಈ ನ್ಯಾಯಪ್ರಮಾಣದ ವಾಕ್ಯಗಳನ್ನು ಪುಸ್ತಕದಲ್ಲಿ ಬರೆದು ಮುಗಿಸಿದಾಗ ಮೋಶೆ ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರುವ ಲೇವಿಯರಿಗೆ ಆಜ್ಞಾಪಿಸಿ-- ನ್ಯಾಯ ಪ್ರಮಾಣದ ಈ ಪುಸ್ತಕವನ್ನು ತಕ್ಕೊಂಡು ನಿಮ್ಮ ದೇವ ರಾದ ಕರ್ತನ ಒಡಂಬಡಿಕೆಯ ಮಂಜೂಷದ ಒಂದು ಪಾರ್ಶ್ವದಲ್ಲಿ ಇಡಿರಿ; ಅದು ನಿಮಗೆ ವಿರೋಧವಾದ ಸಾಕ್ಷಿಗೆ ಅಲ್ಲಿ ಇರಲಿ. ನಿನ್ನ ದ್ರೋಹವನ್ನೂ ನಿನ್ನ ಬಗ್ಗದ ಕುತ್ತಿಗೆಯನ್ನೂ ನಾನು ಬಲ್ಲೆನು; ಇಗೋ, ಈಹೊತ್ತು ನಾನು ಇನ್ನೂ ನಿಮ್ಮ ಸಂಗಡ ಬದುಕಿರು ವಾಗಲೇ ಕರ್ತನಿಗೆ ದ್ರೋಹಮಾಡಿದವರಾದಿರಿ; ನಾನು ಸತ್ತ ಮೇಲೆ ಇನ್ನೇನ್ನಾಗುವದು? ನಿಮ್ಮ ಗೋತ್ರಗಳ ಎಲ್ಲಾ ಹಿರಿಯರನ್ನೂ ನಿಮ್ಮ ಅಧಿಕಾರಿ ಗಳನ್ನೂ ನನ್ನ ಬಳಿಗೆ ಕೂಡಿಸಿರಿ; ಆಗ ಈ ಮಾತುಗಳನ್ನು ಅವರು ಕೇಳುವಹಾಗೆ ಆಡುವೆನು; ಆಕಾಶವನ್ನೂ ಭೂಮಿಯನ್ನೂ ಸಾಕ್ಷಿಗೆ ಕರೆಯುವೆನು. ನಾನು ಸತ್ತ ಮೇಲೆ ನೀವು ಪೂರ್ಣವಾಗಿ ನಿಮ್ಮನ್ನು ನೀವು ಕೆಡಿಸಿ ಕೊಂಡು ನಾನು ನಿಮಗೆ ಆಜ್ಞಾಪಿಸಿದ ಮಾರ್ಗದಿಂದ ತೊಲಗಿ ಹೋಗುವಿರೆಂದು ನಾನು ಬಲ್ಲೆನು; ನೀವು ಕರ್ತನ ಮುಂದೆ ಕೆಟ್ಟದ್ದನ್ನು ಮಾಡಿ ನಿಮ್ಮ ಕ್ರಿಯೆಗಳಿಂದ ಆತನಿಗೆ ಕೋಪವನ್ನೆಬ್ಬಿಸುವ ಕಾರಣ ಕಡೇ ದಿವಸಗಳಲ್ಲಿ ನಿಮಗೆ ಕೇಡುಸಂಭವಿಸುವದು ಎಂದು ಹೇಳಿದನು.ಆಗ ಮೋಶೆ ಇಸ್ರಾಯೇಲ್ ಸಭೆಗೆ ಕೇಳುವ ಹಾಗೆ ಈ ಹಾಡಿನ ಮಾತುಗಳನ್ನು ಹೇಳಿ ಮುಗಿಸಿದನು.
- Psalm 71:18 ಕೀರ್ತನೆಗಳು 71:18ಓ ದೇವರೇ, ನಾನು ಮುಪ್ಪಿನವನೂ ನರೆ ಕೂದಲಿನವನೂ ಆದಾಗ ಈ ಸಂತತಿಯವರಿಗೆ ನಿನ್ನ ಶಕ್ತಿಯನ್ನೂ ಮುಂದೆ ಬರುವ ಪ್ರತಿಯೊಬ್ಬನಿಗೆ ನಿನ್ನ ಅಧಿಕಾರವನ್ನೂ ತಿಳಿಸುವ ವರೆಗೂ ನನ್ನನ್ನು ಕೈಬಿಡಬೇಡ.
- 2 Peter 1:12 2 ಪೇತ್ರನು 1:12ಆದದರಿಂದ ನೀವು ಈ ಸಂಗತಿಗಳನ್ನು ತಿಳಿದ ವರಾಗಿ ಈಗಿನ ಸತ್ಯದಲ್ಲಿ ಸ್ಥಿರವಾಗಿದ್ದರೂ ಇವುಗಳನ್ನು ಯಾವಾಗಲೂ ನಿಮಗೆ ಜ್ಞಾಪಕಕೊಡುವದಕ್ಕೆ ನಾನು ಎಂದಿಗೂ ಅಲಕ್ಷ್ಯಮಾಡುವದಿಲ್ಲ.
- Joshua 24:24–29 ಯೆಹೋಶುವ 24:24–29ಜನರು ಯೆಹೋಶುವನಿಗೆ--ನಾವು ನಮ್ಮ ದೇವರಾದ ಕರ್ತನನ್ನು ಸೇವಿಸಿ ಆತನ ಮಾತಿಗೆ ವಿಧೇಯರಾಗುವೆವು ಅಂದರು. ಯೆಹೋಶುವನು ಆ ಹೊತ್ತು ಶೆಕೆಮಿನಲ್ಲಿ ಜನರ ಸಂಗಡ ಒಡಂಬಡಿಕೆ ಯನ್ನು ಮಾಡಿ ಅದನ್ನು ಅವರಿಗೆ ನಿಯಮವಾಗಿಯೂ ಕಟ್ಟಳೆಯಾಗಿಯೂ ಇಟ್ಟನು. ಈ ಮಾತುಗಳನ್ನು ಯೆಹೋಶುವನು ದೇವರ ನ್ಯಾಯಪ್ರಮಾಣದ ಪುಸ್ತಕ ದಲ್ಲಿ ಬರೆದು ಒಂದು ದೊಡ್ಡ ಕಲ್ಲನ್ನು ಎತ್ತಿ ಅದನ್ನು ಅಲ್ಲಿ ಕರ್ತನ ಪರಿಶುದ್ಧ ಸ್ಥಳದ ಬಳಿಯಲ್ಲಿ ಏಲಾಮರದ ಕೆಳಗೆ ನೆಟ್ಟನು. ಯೆಹೋಶುವನು ಜನ ರಿಗೆಲ್ಲಾ--ಇಗೋ, ಈ ಕಲ್ಲು ನಿಮ್ಮ ಮಧ್ಯದಲ್ಲಿ ಸಾಕ್ಷಿಯಾಗಿರಲಿ. ಯಾಕಂದರೆ ಅದು ಕರ್ತನು ನಮ್ಮ ಸಂಗಡ ಹೇಳಿದ ಎಲ್ಲಾ ವಚನಗಳನ್ನು ಕೇಳಿತು. ಆದದರಿಂದ ನೀವು ನಿಮ್ಮ ದೇವರನ್ನು ಅಲ್ಲಗಳೆಯದ ಹಾಗೆ ಇದೇ ನಿಮಗೆ ಸಾಕ್ಷಿಯಾಗಿರಲಿ ಎಂದು ಹೇಳಿದನು. ಹೀಗೆ ಯೆಹೋಶುವನು ಜನರನ್ನು ಅವರವರ ಬಾಧ್ಯೆತೆಗಳಿಗೆ ಕಳುಹಿಸಿದನು. ಇವುಗಳಾದ ತರುವಾಯ ನೂನನ ಮಗನಾದ ಯೆಹೋಶುವನೆಂಬ ಕರ್ತನ ಸೇವಕನು ನೂರ ಹತ್ತು ವರುಷ ವಯಸ್ಸಿನವನಾಗಿ ಸತ್ತನು.
- Hebrews 11:4 ಇಬ್ರಿಯರಿಗೆ 11:4ನಂಬಿಕೆಯಿಂದಲೇ ಹೇಬೆಲನು ಕಾಯಿನನ ಯಜ್ಞ ಕ್ಕಿಂತ ಅತಿ ಶ್ರೇಷ್ಠವಾದ ಯಜ್ಞವನ್ನು ದೇವರಿಗೆ ಸಮ ರ್ಪಿಸಿದನು. ಅದರ ಮೂಲಕ ಅವನು ನೀತಿವಂತ ನೆಂದು ಸಾಕ್ಷಿ ಹೊಂದಿದನು: ದೇವರು ಅವನ ಕಾಣಿಕೆಗಳ ವಿಷಯವಾಗಿ ಸಾಕ್ಷಿಕೊಟ್ಟನು; ಅವನು ಸತ್ತವನಾಗಿದ್ದರೂ ಅದರಿಂದ ಇನ್ನೂ ಮಾತನಾಡುತ್ತಾನೆ.
- 1 Chronicles 29:1–20 1 ಪೂರ್ವಕಾಲವೃತ್ತಾಂತ 29:1–20ಇದಲ್ಲದೆ ಅರಸನಾದ ದಾವೀದನು ಸಮಸ್ತ ಸಭೆಗೆ ಹೇಳಿದ್ದೇನಂದರೆ -- ದೇವರು ಒಬ್ಬನನ್ನೇ ಆದುಕೊಂಡ ನನ್ನ ಮಗನಾದ ಸೊಲೊ ಮೋನನು ಚಿಕ್ಕವನಾಗಿಯೂ ಮೃದುವಾಗಿಯೂ ಇದ್ದಾನೆ. ಆದರೆ ಕೆಲಸವು ದೊಡ್ಡದು; ಈ ಅರಮನೆ ಯು ಮನುಷ್ಯರಿಗೋಸ್ಕರವಲ್ಲ, ಕರ್ತನಾದ ದೇವರಿ ಗೋಸ್ಕರವೇ. ಆದರೆ ನಾನು ನನ್ನ ಸಮಸ್ತ ಶಕ್ತಿಯಿಂದ ನನ್ನ ದೇವರ ಮನೆಯ ನಿಮಿತ್ತ ಬಂಗಾರದ ಕೆಲಸ ಕ್ಕೋಸ್ಕರ ಬಂಗಾರವನ್ನೂ ಬೆಳ್ಳಿಯ ಕೆಲಸಕ್ಕೋಸ್ಕರ ಬೆಳ್ಳಿಯನ್ನೂ ತಾಮ್ರದ ಕೆಲಸಕ್ಕೋಸ್ಕರ ತಾಮ್ರವನ್ನೂ ಕಬ್ಬಿಣದ ಕೆಲಸಕ್ಕೋಸ್ಕರ ಕಬ್ಬಿಣವನ್ನೂ ಮರದ ಕೆಲಸ ಕ್ಕೋಸ್ಕರ ಮರವನ್ನೂ ನೆಡುವ ನಿಮಿತ್ತ ಗೋಮೇಧಿಕ ಕಲ್ಲುಗಳನ್ನೂ ಕಾಡಿಗೆ ಬಣ್ಣವಾದಂಥ ಚಿತ್ರವಾದಂಥ ಕಲ್ಲುಗಳನ್ನೂ ಸಕಲ ಅಮೂಲ್ಯವಾದ ಕಲ್ಲುಗಳನ್ನೂ ಅಮೃತ ಶಿಲೆಗಳನ್ನೂ ಬಹಳವಾಗಿ ಸಿದ್ಧಮಾಡಿದ್ದೇನೆ. ಇದಲ್ಲದೆ ನನಗೆ ನನ್ನ ದೇವರ ಮನೆಯ ಮೇಲೆ ಪ್ರೀತಿ ಇರುವದರಿಂದ ನಾನು ಪರಿಶುದ್ಧ ಮನೆಗೋಸ್ಕರ ಸಿದ್ಧಮಾಡಿದ ಎಲ್ಲಾದರ ಹೊರತು ನನ್ನ ಸ್ವಸ್ಥಿತಿಯಿಂದ ಬಂಗಾರವನ್ನೂ ಬೆಳ್ಳಿಯನ್ನೂ ನನ್ನ ದೇವರ ಮನೆಗೆ ಕೊಟ್ಟಿದ್ದೇನೆ. ಮನೆಗಳ ಗೋಡೆಗಳನ್ನು ಹೊದಗಿಸು ವದಕ್ಕೆ ಒಫೀರ್ ಬಂಗಾರದಲ್ಲಿ ಮೂರು ಸಾವಿರ ಬಂಗಾರದ ತಲಾಂತುಗಳನ್ನೂ ಏಳು ಸಾವಿರ ಚೊಕ್ಕ ಬೆಳ್ಳಿಯ ತಲಾಂತುಗಳನ್ನೂ ಬಂಗಾರವನ್ನು ಬಂಗಾ ರದ ಕೆಲಸಕ್ಕೂ ಬೆಳ್ಳಿಯನ್ನು ಬೆಳ್ಳಿಯ ಕೆಲಸಕ್ಕೂ ಕೈ ಕೆಲಸದವರಿಂದ ಮಾಡುವ ಎಲ್ಲಾ ಕೆಲಸಕ್ಕೂ ಕೊಟ್ಟಿ ದ್ದೇನೆ. ಇದಲ್ಲದೆ ಇಂದು ತನ್ನ ಸೇವೆಯನ್ನು ಕರ್ತನಿಗೆ ಒಪ್ಪಿಸುವವನು ಯಾರು ಅಂದನು. ಆಗ ಪಿತೃಗಳ ಪ್ರಧಾನರೂ ಇಸ್ರಾಯೇಲ್ ಗೋತ್ರಗಳ ಪ್ರಧಾನರೂ ಸಹಸ್ರಗಳ ಶತಗಳ ಅಧಿಪತಿಗಳೂ ಅರಸನ ಕೆಲಸದ ಯಜಮಾನರೂ ಇಷ್ಟಪೂರ್ವಕವಾಗಿ ಕಾಣಿಕೆಗಳನ್ನು ತಂದು ಕರ್ತನ ಮನೆಯ ಸೇವೆಗೋಸ್ಕರ ಬಂಗಾರ ದಲ್ಲಿ ಐದು ಸಾವಿರ ತಲಾಂತುಗಳನ್ನೂ ಬೆಳ್ಳಿಯಲ್ಲಿ ಹತ್ತು ಸಾವಿರ ತಲಾಂತುಗಳನ್ನೂ ತಾಮ್ರದಲ್ಲಿ ಹದಿ ನೆಂಟು ಸಾವಿರ ತಲಾಂತುಗಳನ್ನೂ ಕಬ್ಬಿಣದಲ್ಲಿ ಲಕ್ಷ ತಲಾಂತುಗಳನ್ನೂ ಕೊಟ್ಟರು. ಇದಲ್ಲದೆ ಯಾರ ಬಳಿಯಲ್ಲಿ ಅಮೂಲ್ಯ ರತ್ನಗಳು ಇದ್ದವೋ ಅವರು ಗೇರ್ಷೋನ್ಯನಾದ ಯೆಹೀಯೇಲನ ಕೈಯಿಂದ ಅವು ಗಳನ್ನು ಕರ್ತನ ಮನೆಯ ಬೊಕ್ಕಸಕ್ಕೆ ಕೊಟ್ಟರು. ಆಗ ಜನರು ಸಂತೋಷವಾಗಿ ಕಾಣಿಕೆಗಳನ್ನು ಅರ್ಪಿಸಿದ್ದರಿಂದ ಜನರು ಸಂತೋಷಪಟ್ಟರು. ಅವರು ಪೂರ್ಣ ಮನಸ್ಸಿನಿಂದ ಮನಃಪೂರ್ವಕವಾಗಿ ಕರ್ತನಿಗೆ ಅರ್ಪಿಸಿದರು. ಅರಸನಾದ ದಾವೀದನು ಮಹಾ ಸಂತೋಷದಿಂದ ಸಂತೋಷಪಟ್ಟನು. ಆಗ ದಾವೀದನು ಸಮಸ್ತ ಕೂಟದ ಮುಂದೆ ಕರ್ತನನ್ನು ಕೊಂಡಾಡಿ ಹೇಳಿದ್ದೇನಂದರೆ -- ನಮ್ಮ ತಂದೆ ಯಾದ ಇಸ್ರಾಯೇಲಿನ ದೇವರಾದ ಕರ್ತನೇ, ನೀನು ಯುಗಯುಗಾಂತರಗಳಿಂದ ಯುಗಯುಗಾಂತರ ಗಳಿಗೂ ಸ್ತುತಿಸಲ್ಪಡುವವನಾಗಿದ್ದೀ. ಕರ್ತನೇ, ದೊಡ್ಡಸ್ತಿಕೆಯೂ ಪರಾಕ್ರಮವೂ ಸೌಂದರ್ಯವೂ ಜಯವೂ ಮಹಿಮೆಯೂ ನಿನ್ನದೇ; ಆಕಾಶಗಳಲ್ಲಿಯೂ ಭೂಮಿಯಲ್ಲಿಯೂ ಇರುವದೆಲ್ಲಾ ನಿನ್ನದೇ. ಕರ್ತನೇ, ರಾಜ್ಯವು ನಿನ್ನದು; ನೀನು ಸಮಸ್ತಕ್ಕೂ ತಲೆಯಾಗಿ ಉನ್ನತವಾಗಿದ್ದೀ. ಐಶ್ವರ್ಯವೂ ಘನವೂ ನಿನ್ನ ಬಳಿ ಯಿಂದ ಬರುತ್ತದೆ. ನೀನು ಸಮಸ್ತವನ್ನು ಆಳುವಾತ ನಾಗಿದ್ದೀ. ಶಕ್ತಿಯೂ ಪರಾಕ್ರಮವೂ ನಿನ್ನ ಕೈಯಲ್ಲಿ ಅವೆ. ಎಲ್ಲರಿಗೂ ದೊಡ್ಡಸ್ತಿಕೆಯನ್ನೂ ಬಲವನ್ನೂ ಕೊಡುವದಕ್ಕೆ ನಿನ್ನ ಕೈಯಲ್ಲಿ ಅದೆ. ಆದದರಿಂದ ನಮ್ಮ ದೇವರೇ, ನಾವು ನಿನ್ನನ್ನು ಸ್ತುತಿಸಿ ನಿನ್ನ ಮಹಿಮೆ ಯುಳ್ಳ ನಾಮವನ್ನು ಕೊಂಡಾಡುತ್ತೇವೆ. ಆದರೆ ನಾವು ಈ ಪ್ರಕಾರ ಇಷ್ಟಪೂರ್ತಿಯಾಗಿ ಅರ್ಪಿಸುವದಕ್ಕೆ ಶಕ್ತಿಯನ್ನು ಹೊಂದಲು ನಾನೆಷ್ಟರವನು? ನನ್ನ ಜನರು ಎಷ್ಟರವರು? ಯಾಕಂದರೆ ಸಮಸ್ತವೂ ನಿನ್ನಿಂದಲೇ; ನೀನು ಕೊಟ್ಟದ್ದನ್ನೇ ನಿನಗೆ ಅರ್ಪಿಸಿದೆವು. ನಾವು ನಿನ್ನ ಸಮ್ಮುಖದಲ್ಲಿ ನಮ್ಮ ಸಮಸ್ತ ಪಿತೃಗಳ ಹಾಗೆ ಪರದೇಶಸ್ಥರೂ ಪ್ರವಾಸಿಗಳೂ ಆಗಿದ್ದೇವೆ. ಭೂಮಿಯ ಮೇಲೆ ನಮ್ಮ ದಿವಸಗಳು ನೆರಳಿನ ಹಾಗೆ ಅವೆ; ನೆಲೆಯು ಇಲ್ಲ. ನಮ್ಮ ದೇವರಾದ ಕರ್ತನೇ, ನಿನ್ನ ಪರಿಶುದ್ಧ ನಾಮಕ್ಕೋಸ್ಕರ ನಿನಗೆ ಮನೆಯನ್ನು ಕಟ್ಟಿಸಲು ನಾವು ಸಿದ್ಧಮಾಡಿದ ಈ ರಾಶಿಯೆಲ್ಲಾ ನಿನ್ನಿಂದ ಬಂದದ್ದು; ಸಮಸ್ತವೂ ನಿನ್ನದು. ನನ್ನ ಕರ್ತನೇ, ನೀನು ಹೃದಯವನ್ನು ಶೋಧಿಸಿ ಯಥಾರ್ಥವಾದವು ಗಳಲ್ಲಿ ಸಂತೋಷವಾಗಿದ್ದೀ ಎಂದು ನಾನು ಬಲ್ಲೆನು. ನಾನು ಯಥಾರ್ಥವಾದ ಹೃದಯದಿಂದ ಇವುಗಳನ್ನೆಲ್ಲಾ ಮನಃಪೂರ್ವಕವಾಗಿ ಅರ್ಪಿಸಿದ್ದೇನೆ. ಇದಲ್ಲದೆ ಇಲ್ಲಿ ರುವ ನಿನ್ನ ಜನರು ನಿನಗೆ ಮನಃಪೂರ್ವಕವಾಗಿ ಅರ್ಪಿ ಸುವದನ್ನು ಈಗ ಸಂತೋಷವಾಗಿ ಕಂಡೆನು. ನಮ್ಮ ಪಿತೃಗಳಾದ ಅಬ್ರಹಾಕಮ್, ಇಸಾಕ್, ಇಸ್ರಾಯೇ ಲಿನ ದೇವರಾದ ಕರ್ತನೇ, ಇದನ್ನು ನಿನ್ನ ಜನರ ಹೃದಯದ ಯೋಚನೆಗಳ ಭಾವನೆಯಲ್ಲಿ ನಿರಂತರ ವಾಗಿ ಕಾಪಾಡಿ ಅವರ ಹೃದಯವನ್ನು ನಿನಗೆ ಸಿದ್ಧ ಮಾಡು. ಇದಲ್ಲದೆ ನಿನ್ನ ಆಜ್ಞೆಗಳನ್ನೂ ಸಾಕ್ಷಿಗಳನ್ನೂ ಕಟ್ಟಳೆಗಳನ್ನು ಕೈಕೊಳ್ಳಲೂ ಸಮಸ್ತವನ್ನು ಮಾಡಲೂ ನಾನು ಯಾವದಕ್ಕೋಸ್ಕರ ಸಿದ್ಧಮಾಡಿದೆನೋ ಆ ಅರಮನೆಯನ್ನು ಕಟ್ಟಿಸಲೂ ನನ್ನ ಮಗನಾದ ಸೊಲೊ ಮೋನನಿಗೆ ಪೂರ್ಣ ಹೃದಯವನ್ನು ಕೊಡು ಅಂದನು. ದಾವೀದನು ಸಮಸ್ತ ಸಭೆಗೆ--ಈಗ ನಿಮ್ಮ ದೇವರಾದ ಕರ್ತನನ್ನು ಸ್ತುತಿಸಿರಿ ಅಂದನು. ಆಗ ಸಭೆಯವರೆಲ್ಲರೂ ತಮ್ಮ ಪಿತೃಗಳ ದೇವರಾದ ಕರ್ತ ನನ್ನು ಸ್ತುತಿಸುತ್ತಾ ತಮ್ಮ ತಲೆಗಳನ್ನು ಬಾಗಿಸಿ ಕರ್ತನನ್ನೂ ಅರಸನನ್ನೂ ಆರಾಧಿಸಿದರು.
- Luke 9:31 ಲೂಕನು 9:31ಇವರು ಮಹಿಮೆಯಲ್ಲಿ ಕಾಣಿಸಿಕೊಂಡು ಆತನು ಯೆರೂಸ ಲೇಮಿನಲ್ಲಿ ಪೂರೈಸುವದಕ್ಕಿದ್ದ ಆತನ ಮರಣದ ವಿಷಯವಾಗಿ ಮಾತನಾಡುತ್ತಿದ್ದರು.
- 2 Peter 1:4–7 2 ಪೇತ್ರನು 1:4–7ನೀವು ಲೋಕದಲ್ಲಿ ದುರಾಶೆಯಿಂದುಂಟಾದ ಕೆಟ್ಟತನಕ್ಕೆ ತಪ್ಪಿಸಿಕೊಂಡು ದೈವಸ್ವಭಾವದಲ್ಲಿ ಪಾಲನ್ನು ಹೊಂದುವವರಾಗಬೇಕೆಂದು ಆತನು ಅತ್ಯಂತ ಮಹತ್ವ ವುಳ್ಳ ಅಮೂಲ್ಯವಾದ ವಾಗ್ದಾನಗಳನ್ನು ನಮಗೆ ದಯ ಪಾಲಿಸಿದ್ದಾನೆ. ಈಕಾರಣದಿಂದಲೇ ನೀವು ಪೂರ್ಣ ಜಾಗ್ರತೆಯಿಂದ ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ ಸದ್ಗುಣಕ್ಕೆ ಜ್ಞಾನವನ್ನೂ ಜ್ಞಾನಕ್ಕೆ ದಮೆಯನ್ನೂ ದಮೆಗೆ ತಾಳ್ಮೆಯನ್ನೂ ತಾಳ್ಮೆಗೆ ಭಕ್ತಿಯನ್ನೂ ಭಕ್ತಿಗೆ ಸಹೋದರ ಕರುಣೆಯನ್ನೂ ಸಹೋದರ ಕರುಣೆಗೆ ಪ್ರೀತಿಯನ್ನೂ ಕೂಡಿಸಿರಿ.
- 2 Timothy 2:2 2 ತಿಮೊಥೆಯನಿಗೆ 2:2ಅನೇಕ ಸಾಕ್ಷಿಗಳ ಮುಂದೆ ನೀನು ನನ್ನಿಂದ ಕೇಳಿದವುಗಳನ್ನೇ ಇತರರಿಗೆ ಸಹ ಬೋಧಿಸ ಶಕ್ತರಾದ ನಂಬಿಗಸ್ತ ಮನುಷ್ಯರಿಗೆ ಒಪ್ಪಿಸಿಕೊಡು.