2 Samuel · chapter 1 · verse 16
2 Samuel 1:16 in Kannada
ದಾವೀದನು ಅವ ನಿಗೆ--ಕರ್ತನ ಅಭಿಷಿಕ್ತನನ್ನು ಕೊಂದುಹಾಕಿದೆನೆಂದು ನಿನ್ನ ಬಾಯಿ ನಿನಗೆ ವಿರೋಧವಾಗಿ ಸಾಕ್ಷಿಹೇಳಿದ್ದರಿಂದ ನಿನ್ನ ರಕ್ತವು ನಿನ್ನ ತಲೆಯ ಮೇಲೆ ಇರಲಿ ಅಂದನು.
Daaveedanu ava nige--kartana abhishiktanannu konduhaakidenendu ninna baayi ninage virodhavaagi saakshiheliddarinda ninna raktavu ninna taleya mele irali andanu.
2 Samuel 1:16 in English
- King James Version (KJV)
- And David said unto him, Thy blood [be] upon thy head; for thy mouth hath testified against thee, saying, I have slain the LORD’s anointed.
- World English Bible (WEB)
- David said to him, “Your blood be on your head, for your mouth has testified against you, saying, ‘I have slain the LORD’s anointed.’”
- American Standard Version (ASV)
- And David said unto him, Thy blood be upon thy head; for thy mouth hath testified against thee, saying, I have slain Jehovah’s anointed.
- Bible in Basic English (BBE)
- And David said to him, May your blood be on your head; for your mouth has given witness against you, saying, I have put to death the man marked with the holy oil.
- Darby Translation (DBY)
- And David said to him, Thy blood be upon thy head; for thy mouth has testified against thee, saying, I have slain Jehovah's anointed.
- Webster's Bible (WBS)
- And David said to him, Thy blood [be] upon thy head; for thy mouth hath testified against thee, saying, I have slain the LORD'S anointed.
- Young's Literal Translation (YLT)
- and David saith unto him, 'Thy blood [is] on thine own head, for thy mouth hath testified against thee, saying, I — I put to death the anointed of Jehovah.'
Read in context
- 14ಆಗ ದಾವೀ ದನು ಅವನಿಗೆ--ಕರ್ತನ ಅಭಿಷಿಕ್ತನನ್ನು ಸಂಹರಿಸಲು ನಿನ್ನ ಕೈಚಾಚುವದಕ್ಕೆ ಭಯಪಡದೆ ಇದ್ದದ್ದು ಹೇಗೆ ಎಂದು ಹೇಳಿದನು.
- 15ದಾವೀದನು ಯೌವನಸ್ಥ ನೊಬ್ಬನನ್ನು ಕರೆದು--ನೀನು ಹತ್ತಿರ ಹೋಗಿ ಅವನ ಮೇಲೆ ಬೀಳು ಅಂದನು. ಹಾಗೆಯೇ ಅವನು ಅವನನ್ನು ಹೊಡೆದನು; ಅವನು ಸತ್ತನು.
- 16ದಾವೀದನು ಅವ ನಿಗೆ--ಕರ್ತನ ಅಭಿಷಿಕ್ತನನ್ನು ಕೊಂದುಹಾಕಿದೆನೆಂದು ನಿನ್ನ ಬಾಯಿ ನಿನಗೆ ವಿರೋಧವಾಗಿ ಸಾಕ್ಷಿಹೇಳಿದ್ದರಿಂದ ನಿನ್ನ ರಕ್ತವು ನಿನ್ನ ತಲೆಯ ಮೇಲೆ ಇರಲಿ ಅಂದನು.
- 17ಆಗ ದಾವೀದನು ಸೌಲನ ಮೇಲೆಯೂ ಅವನ ಮಗನಾದ ಯೋನಾತಾನನ ಮೇಲೆಯೂ ಗೋಳಾಟ ದಿಂದ ಈ ಗೀತೆ ಹಾಡಿ ಗೋಳಾಡಿದನು.
- 18ಇದ ಲ್ಲದೆ ದಾವೀದನು ಬಿಲ್ಲೆಂಬ ಗೀತವನ್ನು ಯೆಹೂದನ ಮಕ್ಕಳಿಗೆ ಕಲಿಸಬೇಕೆಂದು ಹೇಳಿದನು; ಇಗೋ, ಇದು ಯಾಷಾರಿನ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ,
Cross references
- Matthew 27:25 ಮತ್ತಾಯನು 27:25ಅದಕ್ಕೆ ಜನರೆ ಲ್ಲರೂ ಪ್ರತ್ಯುತ್ತರವಾಗಿ--ಆತನ ರಕ್ತವು ನಮ್ಮ ಮೇಲೆಯೂ ನಮ್ಮ ಮಕ್ಕಳ ಮೇಲೆಯೂ ಇರಲಿ ಅಂದರು.
- Luke 19:22 ಲೂಕನು 19:22ಆಗ ಅವನು--ನೀನು ಕೆಟ್ಟ ಆಳು, ನಿನ್ನ ಮಾತಿನ ಮೇಲೆಯೇ ನಿನಗೆ ನ್ಯಾಯತೀರಿ ಸುವೆನು. ನಾನು ಇಡದೆ ಇರುವಲ್ಲಿ ತಕ್ಕೊಳ್ಳುವವನೂ ಬಿತ್ತದೆ ಇರುವಲ್ಲಿ ಕೊಯ್ಯುವವನೂ ಆದ ಕಠಿಣ ಮನುಷ್ಯನೆಂದು ನಿನಗೆ ತಿಳಿದಿತ್ತಲ್ಲಾ.
- Leviticus 20:9 ಯಾಜಕಕಾಂಡ 20:9ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವ ವನಿಗೆ ನಿಶ್ಚಯವಾಗಿ ಮರಣದಂಡನೆ ವಿಧಿಸಬೇಕು; ಯಾವನು ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವನೋ ಅವನ ರಕ್ತವು ಅವನ ಮೇಲೆಯೇ ಇರುವದು.
- 1 Samuel 26:9 1 ಸಮುವೇಲನು 26:9ಆದರೆ ದಾವೀದನು ಅಬೀಷೈಯನಿಗೆ -- ಅವನನ್ನು ಸಂಹರಿಸಬೇಡ; ಯಾಕಂದರೆ ಕರ್ತನ ಅಭಿಷಿಕ್ತನಿಗೆ ವಿರೋಧವಾಗಿ ಕೈ ಹಾಕುವವನು ನಿರಪರಾಧಿಯಾಗುವದಿಲ್ಲ ಅಂದನು.
- Romans 3:19 ರೋಮಾಪುರದವರಿಗೆ 3:19ಪ್ರತಿಯೊಂದು ಬಾಯಿ ಮುಚ್ಚಿ ಹೋಗುವಂತೆಯೂ ಲೋಕವೆಲ್ಲಾ ದೇವರ ಮುಂದೆ ದೋಷಿಯಾಗಿರುವಂತೆಯೂ ನ್ಯಾಯ ಪ್ರಮಾಣವು ಹೇಳುವವುಗಳನ್ನು ನ್ಯಾಯಪ್ರಮಾಣಕ್ಕೆ ಒಳಗಾದವರಿಗೆ ಹೇಳುತ್ತದೆಯೆಂದು ನಾವು ಬಲ್ಲೆವು.
- Joshua 2:19 ಯೆಹೋಶುವ 2:19ಯಾವನಾದರೂ ನಿನ್ನ ಮನೆಯ ಬಾಗಲಿಂದ ಹೊರಟು ಬೀದಿಗೆ ಬಂದರೆ ಅವನ ರಕ್ತವು ಅವನ ತಲೆಯಮೇಲೆ ಇರುವದು. ನಾವು ನಿರಪರಾಧಿಗಳಾಗಿರುವೆವು. ಆದರೆ ನಿನ್ನ ಸಂಗಡ ಮನೆಯಲ್ಲಿ ಇರುವ ಯಾವನ ಮೇಲಾದರೂ ಕೈ ಹಾಕಲ್ಪಟ್ಟರೆ ಅವನ ರಕ್ತದ ಅಪರಾಧವು ನಮ್ಮ ತಲೆಯ ಮೇಲೆ ಇರುವದು.
- 2 Samuel 1:10 2 ಸಮುವೇಲನು 1:10ಆದದರಿಂದ ಇವನು ಬಿದ್ದ ತರುವಾಯ ಬದುಕಲಾರನೆಂದು ನಾನು ತಿಳಿದು ಅವನ ಮೇಲೆ ನಿಂತು ಅವನನ್ನು ಕೊಂದುಹಾಕಿದೆನು. ಅವನ ತಲೆಯ ಮೇಲಿದ್ದ ಕಿರೀಟವನ್ನೂ ಅವನ ಕೈಯಲ್ಲಿದ್ದ ಕಡಗ ವನ್ನೂ ತೆಗೆದುಕೊಂಡು ಅವುಗಳನ್ನು ನನ್ನ ಒಡೆಯನಿಗೆ ಇಲ್ಲಿ ತಂದೆನು ಅಂದನು.
- 1 Kings 2:37 1 ಅರಸುಗಳು 2:37ಯಾವ ದಿನದಲ್ಲಿ ನೀನು ಹೊರಟು ಕಿದ್ರೋನೆಂಬ ಹಳ್ಳವನ್ನು ದಾಟುವಿಯೋ ಆ ದಿನದಲ್ಲಿ ನಿಶ್ಚಯವಾಗಿ ಸಾಯುವಿ ಎಂದು ಖಂಡಿತಾ ತಿಳಿದುಕೋ. ನಿನ್ನ ರಕ್ತವು ನಿನ್ನ ತಲೆಯ ಮೇಲೆ ಇರುವದು ಅಂದನು.
- Proverbs 6:2 ಜ್ಞಾನೋಕ್ತಿಗಳು 6:2ನಿನ್ನ ಬಾಯಿ ಮಾತುಗಳಿಂದ ನೀನು ಸಿಕ್ಕಿಕೊಂಡಿದ್ದೀ. ನಿನ್ನ ಬಾಯಿ ಮಾತುಗಳಿಂದಲೇ ನೀನು ಹಿಡಿಯಲ್ಪಟ್ಟಿದ್ದೀ.
- Leviticus 20:16 ಯಾಜಕಕಾಂಡ 20:16ಇದಲ್ಲದೆ ಒಬ್ಬ ಸ್ತ್ರೀಯು ಒಂದು ಪಶುವಿನೊಂದಿಗೆ ಸಂಗಮಿಸುವದಕ್ಕಾಗಿ ಮಲಗಿಕೊಂಡರೆ ನೀವು ಆ ಸ್ತ್ರೀಯನ್ನೂ ಪಶುವನ್ನೂ ಕೊಲ್ಲಬೇಕು; ಅವರಿಗೆ ನಿಶ್ಚಯವಾಗಿ ಮರಣದಂಡನೆಯಾಗಬೇಕು; ಅವರ ರಕ್ತವು ಅವರ ಮೇಲೆ ಇರುವದು.
- Acts 20:26 ಅಪೊಸ್ತಲರ ಕೃತ್ಯಗಳು 20:26ಆದಕಾರಣ ಎಲ್ಲಾ ಮನುಷ್ಯರ ರಕ್ತದ ವಿಷಯದಲ್ಲಿ ನಾನು ನಿರ್ದೋಷಿಯಾಗಿದ್ದೇನೆಂಬದಕ್ಕೆ ಈ ದಿವಸ ನೀವೇ ನನಗೆ ಸಾಕ್ಷಿಗಳು.
- Deuteronomy 19:10 ಧರ್ಮೋಪದೇಶಕಾಂಡ 19:10ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ನಿನ್ನ ದೇಶದಲ್ಲಿ ಅಪರಾಧವಿಲ್ಲದ ರಕ್ತವು ಚೆಲ್ಲಲ್ಪಟ್ಟದ್ದರಿಂದ ರಕ್ತಾಪ ರಾಧವು ನಿನ್ನ ಮೇಲೆ ಬಾರದ ಹಾಗೆ ನೀನು ಈ ಮೂರು ಪಟ್ಟಣಗಳಿಗೆ ಇನ್ನೂ ಮೂರು ಪಟ್ಟಣಗಳನ್ನು ಕೂಡಿಸಬೇಕು.