2 Samuel · chapter 1 · verse 23
2 Samuel 1:23 in Kannada
ಸೌಲನೂ ಯೋನಾತಾನನೂ ಜೀವದಿಂದಿದ್ದಾಗ ಪ್ರಿಯಕರವಾಗಿಯೂ ಸಂತೋಷಕರವಾಗಿಯೂ ಇದ್ದರು; ತಮ್ಮ ಮರಣದಲ್ಲಿಯೂ ಅಗಲಿ ಹೋಗದೆ ಇದ್ದರು. ಅವರು ಹದ್ದುಗಳಿಗಿಂತ ವೇಗವುಳ್ಳವರೂ ಸಿಂಹಗಳಿಗಿಂತ ಬಲ ವುಳ್ಳವರೂ ಆಗಿದ್ದರು.
Saulanoo yonaataananoo jeevadindiddaaga priyakaravaagiyoo santoshakaravaagiyoo iddaru; tamma maranadalliyoo agali hogade iddaru. Avaru haddugaliginta vegavullavaroo sinhagaliginta bala vullavaroo aagiddaru.
2 Samuel 1:23 in English
- King James Version (KJV)
- Saul and Jonathan [were] lovely and pleasant in their lives, and in their death they were not divided: they were swifter than eagles, they were stronger than lions.
- World English Bible (WEB)
- Saul and Jonathan were lovely and pleasant in their lives. In their death, they were not divided. They were swifter than eagles. They were stronger than lions.
- American Standard Version (ASV)
- Saul and Jonathan were lovely and pleasant in their lives, And in their death they were not divided: They were swifter than eagles, They were stronger than lions.
- Bible in Basic English (BBE)
- Saul and Jonathan were loved and pleasing; in their lives and in their death they were not parted; they went more quickly than eagles, they were stronger than lions.
- Darby Translation (DBY)
- Saul and Jonathan, beloved and pleasant in their lives, Even in their death were not divided; They were swifter than eagles, they were stronger than lions.
- Webster's Bible (WBS)
- Saul and Jonathan [were] lovely and pleasant in their lives, and in their death they were not divided: they were swifter than eagles, they were stronger than lions.
- Young's Literal Translation (YLT)
- Saul and Jonathan! They are loved and pleasant in their lives, And in their death they have not been parted. Than eagles they have been lighter, Than lions they have been mightier!
Read in context
- 21ಗಿಲ್ಬೋವ ಬೆಟ್ಟಗಳೇ, ನಿಮ್ಮ ಮೇಲೆ ಮಂಜೂ ಮಳೆಯೂ ಅರ್ಪಣೆಗಳ ಹೊಲ ಗಳೂ ಇಲ್ಲದೆ ಹೋಗಲಿ. ಯಾಕಂದರೆ ಅಲ್ಲಿ ಪರಾ ಕ್ರಮಶಾಲಿಗಳ ಗುರಾಣಿಯೂ ಸೌಲನ ಗುರಾಣಿಯೂ ಅವಮಾನವಾಗಿ ಬಿದ್ದವು. ಸೌಲನು ಎಣ್ಣೆಯಿಂದ ಅಭಿಷೇಕಿಸಲ್ಪಡದವನ ಹಾಗಾದನು.
- 22ಕೊಲ್ಲಲ್ಪಟ್ಟ ವರ ರಕ್ತದಿಂದಲೂ ಬಲಶಾಲಿಗಳ ಕೊಬ್ಬಿನಿಂದಲೂ ಯೋನಾತಾನನ ಬಿಲ್ಲು ಹಿಂದಕ್ಕೆ ತಿರುಗಲಿಲ್ಲ; ಸೌಲನ ಕತ್ತಿ ಬರಿದಾಗಿ ತಿರಿಗಿ ಬರಲಿಲ್ಲ.
- 23ಸೌಲನೂ ಯೋನಾತಾನನೂ ಜೀವದಿಂದಿದ್ದಾಗ ಪ್ರಿಯಕರವಾಗಿಯೂ ಸಂತೋಷಕರವಾಗಿಯೂ ಇದ್ದರು; ತಮ್ಮ ಮರಣದಲ್ಲಿಯೂ ಅಗಲಿ ಹೋಗದೆ ಇದ್ದರು. ಅವರು ಹದ್ದುಗಳಿಗಿಂತ ವೇಗವುಳ್ಳವರೂ ಸಿಂಹಗಳಿಗಿಂತ ಬಲ ವುಳ್ಳವರೂ ಆಗಿದ್ದರು.
- 24ಇಸ್ರಾಯೇಲಿನ ಕುಮಾರ್ತೆ ಯರೇ, ಸೌಲನಿಗೋಸ್ಕರ ಅಳಿರಿ, ನಿಮಗೆ ರಕ್ತಾಂಬರ ವನ್ನು ಸಂಭ್ರಮವಾಗಿ ತೊಡಿಸಿದನಲ್ಲಾ; ನಿಮ್ಮ ಉಡುಗೆ ಗಳ ಮೇಲೆ ಚಿನ್ನದ ಆಭರಣಗಳನ್ನು ಧರಿಸುವಂತೆ ಮಾಡಿದನಲ್ಲಾ.
- 25ಪರಾಕ್ರಮಶಾಲಿಗಳು ಹೇಗೆ ಯುದ್ಧದಲ್ಲಿ ಬಿದ್ದಿದ್ದಾರೆ! ಯೋನಾತಾನನೇ, ನೀನು ನಿನ್ನ ಉನ್ನತಸ್ಥಳಗಳಲ್ಲಿ ಕೊಲ್ಲಲ್ಪಟ್ಟಿ.
Cross references
- Jeremiah 4:13 ಯೆರೆಮೀಯ 4:13ಇಗೋ, ಮೇಘಗಳ ಹಾಗೆ ಏರಿ ಬರುವನು; ಆತನ ರಥಗಳು ಬಿರುಗಾಳಿಯ ಹಾಗೆ ಇರುವವು, ಆತನ ಕುದುರೆಗಳು ಹದ್ದುಗಳಿಗಿಂತ ತೀವ್ರವಾಗಿವೆ. ನಮಗೆ ಅಯ್ಯೋ, ಹಾಳಾದೆವು.
- Judges 14:18 ನ್ಯಾಯಸ್ಥಾಪಕರು 14:18ಆದದ ರಿಂದ ಏಳನೇ ದಿನದಲ್ಲಿ ಸೂರ್ಯನು ಮುಳುಗುವದ ಕ್ಕಿಂತ ಮುಂಚೆ ಆ ಊರಿನವರು ಅವನಿಗೆ--ಜೇನಿಗಿಂತ ಸಿಹಿಯಾದದ್ದೇನು? ಸಿಂಹಕ್ಕಿಂತ ಬಲವಾದದ್ದೇನು? ಎಂದು ಹೇಳಿದರು. ಅವನು ಅವರಿಗೆ--ನೀವು ನನ್ನ ಕಡಸಿನಿಂದ ಉಳದಿದ್ದರೆ ನನ್ನ ಒಗಟನ್ನು ಗ್ರಹಿಸಲಾರಿರಿ ಅಂದನು.
- Job 9:26 ಯೋಬನು 9:26ಹದ್ದು ಆಹಾರದ ಮೇಲೆ ಎರಗುವ ಪ್ರಕಾರವೂ ತೀವ್ರವಾದ ಹಡಗುಗಳ ಹಾಗೆಯೇ ಅವು ದಾಟಿ ಹೋಗುತ್ತವೆ.
- Lamentations 4:19 ಪ್ರಲಾಪಗಳು 4:19ನಮ್ಮನ್ನು ಹಿಂಸಿಸುವವರು ಆಕಾಶದಲ್ಲಿ ಹಾರುವ ಹದ್ದುಗಳಿಗಿಂತ ತೀವ್ರ ವಾಗಿದ್ದಾರೆ; ಅವರು ಪರ್ವತಗಳ ಮೇಲೆ ನಮ್ಮನ್ನು ಹಿಂದಟ್ಟಿ ಅರಣ್ಯದಲ್ಲಿ ಹೊಂಚುಹಾಕಿದರು.
- Deuteronomy 28:49 ಧರ್ಮೋಪದೇಶಕಾಂಡ 28:49ಕರ್ತನು ದೂರದಿಂದ ಅಂದರೆ ಭೂಮಿಯ ಅಂತ್ಯದಿಂದ ಹಾರುವ ಹದ್ದಿಗೆ ಸಮಾನವಾದ ಜನಾಂಗ ವನ್ನೂ ನಿನಗೆ ತಿಳಿಯದ ಭಾಷೆಯ ಜನಾಂಗವನ್ನೂ
- Proverbs 30:30 ಜ್ಞಾನೋಕ್ತಿಗಳು 30:30ಮೃಗಗಳಲ್ಲಿ ಬಲಿಷ್ಠವಾಗಿ ರುವ ಸಿಂಹವು ಯಾವದಕ್ಕೂ ಹೆದರುವುದಿಲ್ಲ.
- 2 Samuel 23:20 2 ಸಮುವೇಲನು 23:20ಕಬ್ಜಯೇಲಿನಲ್ಲಿದ್ದ ಪರಾಕ್ರಮಶಾಲಿಯ ಮಗನಾದ ಯೆಹೋಯಾದಾ ವನ ಮಗನಾಗಿರುವ ಬೆನಾಯನು ಅನೇಕ ಶೂರ ಕೃತ್ಯಗಳನ್ನು ಮಾಡಿದ್ದನು. ಅವನು ಸಿಂಹದಹಾಗಿರುವ ಮೋವಾಬಿನ ಇಬ್ಬರು ಮನುಷ್ಯರನ್ನು ಕೊಂದುಬಿಟ್ಟನು. ಇದಲ್ಲದೆ ಹಿಮಕಾಲದಲ್ಲಿ ಕುಣಿಯೊಳಗೆ ಇಳಿದು ಒಂದು ಸಿಂಹವನ್ನು ಕೊಂದುಬಿಟ್ಟನು.
- 1 Samuel 31:1–5 1 ಸಮುವೇಲನು 31:1–5ಆದರೆ ಫಿಲಿಷ್ಟಿಯರು ಇಸ್ರಾಯೇಲ್ಯರ ಸಂಗಡ ಯುದ್ಧಮಾಡಿದರು. ಆಗ ಇಸ್ರಾಯೇಲ್ ಜನರು ಫಿಲಿಷ್ಟಿಯರ ಎದುರಿನಿಂದ ಓಡಿಹೋಗಿ ಗಿಲ್ಬೋವ ಬೆಟ್ಟದಲ್ಲಿ ಕೊಲ್ಲಲ್ಪಟ್ಟವರಾಗಿ ಬಿದ್ದರು. ಫಿಲಿಷ್ಟಿಯರು ಸೌಲನನ್ನೂ ಅವನ ಕುಮಾರ ರನ್ನೂ ಬೆನ್ನಟ್ಟಿ ಸೌಲನ ಕುಮಾರರಾದ ಯೋನಾತಾನ ನನ್ನೂ ಅಬೀನಾದಾಬನನ್ನೂ ಮಲ್ಕೀಷೂವನನ್ನೂ ಸಂಹರಿಸಿದರು. ಇದಲ್ಲದೆ ಯುದ್ಧವು ಸೌಲನಿಗೆ ಭಾರವಾಗಿತ್ತು. ಯಾಕಂದರೆ ಬಿಲ್ಲುಗಾರರು ಅವನನ್ನು ಬಾಣಗಳಿಂದ ಹೊಡೆದರು. ಅವನು ಅವರಿಂದ ಬಹು ಗಾಯಪಟ್ಟನು. ಆದಕಾರಣ ಅವನು ತನ್ನ ಆಯುಧ ಹಿಡಿಯುವವನಿಗೆ--ಈ ಸುನ್ನತಿ ಇಲ್ಲದವರು ಬಂದು ನನ್ನನ್ನು ತಿವಿದುಬಿಟ್ಟು ಅವಮಾನ ಮಾಡದ ಹಾಗೆ ನೀನು ನಿನ್ನ ಕತ್ತಿಯನ್ನು ಹಿರಿದು ನನ್ನನ್ನು ಅದರಿಂದ ತಿವಿ ಅಂದನು. ಆದರೆ ಅವನ ಆಯುಧ ಹಿಡಿಯು ವವನು ಬಹು ಭಯಪಟ್ಟದ್ದರಿಂದ ಹಾಗೆ ಮಾಡ ಲೊಲ್ಲದೆ ಹೋದನು. ಆಗ ಸೌಲನು ತಾನೇ ಕತ್ತಿ ಯನ್ನು ತಕ್ಕೊಂಡು ಅದರ ಮೇಲೆ ಬಿದ್ದನು. ಸೌಲನು ಸತ್ತು ಹೋದದ್ದನ್ನು ಅವನ ಆಯುಧ ಹಿಡಿಯುವವನು ನೋಡಿದಾಗ ಅವನೂ ಹಾಗೆಯೇ ತನ್ನ ಕತ್ತಿಯ ಮೇಲೆ ಬಿದ್ದು ಅವನ ಸಂಗಡ ಸತ್ತನು.
- 1 Chronicles 12:8 1 ಪೂರ್ವಕಾಲವೃತ್ತಾಂತ 12:8ಇದಲ್ಲದೆ ಅರಣ್ಯದಲ್ಲಿ ಬಲವಾದ ಸ್ಥಳದಲ್ಲಿರುವ ದಾವೀದನ ಬಳಿಯಲ್ಲಿ ತಮ್ಮನ್ನು ಪ್ರತ್ಯೇಕಿಸಿದ ಗಾದ್ಯರು ಇದ್ದರು. ಇವರು ಖೇಡ್ಯವನ್ನೂ ಭಲ್ಲೆಯನ್ನೂ ಹಿಡಿದು ಪರಾಕ್ರಮಶಾಲಿಗಳಾಗಿಯೂ ಯುದ್ಧಕ್ಕೆ ತಕ್ಕ ಸೈನಿಕರಾಗಿಯೂ ಇದ್ದರು; ಅವರ ಮುಖಗಳು ಸಿಂಹದ ಮುಖಗಳ ಹಾಗಿದ್ದವು ಮತ್ತು ಪರ್ವತಗಳ ಮೇಲೆ ಇರುವ ಜಿಂಕೆಗಳ ಹಾಗೆ ವೇಗವುಳ್ಳವರಾಗಿದ್ದರು.
- 1 Samuel 18:1 1 ಸಮುವೇಲನು 18:1ದಾವೀದನು ಸೌಲನ ಸಂಗಡ ಮಾತನಾಡಿ ತೀರಿಸಿದಾಗ ಯೋನಾತಾನನ ಪ್ರಾಣವು ದಾವೀದನ ಪ್ರಾಣದ ಸಂಗಡ ಒಂದಾಯಿತು. ಯೋನಾತಾನನು ಅವನನ್ನು ತನ್ನ ಪ್ರಾಣದ ಹಾಗೆಯೇ ಪ್ರೀತಿಮಾಡಿದನು.
- 1 Samuel 20:2 1 ಸಮುವೇಲನು 20:2ಅವನು ಇವನಿಗೆ--ಅದು ಆಗಬಾರದು; ನೀನು ಸಾಯುವದಿಲ್ಲ; ಇಗೋ, ನನ್ನ ತಂದೆಯು ನನಗೆ ತಿಳಿಸದೆ ಯಾವ ಚಿಕ್ಕ ಕಾರ್ಯವನ್ನಾದರೂ ದೊಡ್ಡ ಕಾರ್ಯವನ್ನಾದರೂ ಮಾಡುವದಿಲ್ಲ. ಈ ಕಾರ್ಯವನ್ನು ಯಾಕೆ ನನ್ನ ತಂದೆಯು ನನಗೆ ಬಚ್ಚಿಟ್ಟನು? ಹಾಗೆ ಆಗದು ಅಂದನು.
- 2 Samuel 2:18 2 ಸಮುವೇಲನು 2:18ಚೆರೂಯಳ ಮೂವರು ಮಕ್ಕಳಾದ ಯೋವಾ ಬನೂ ಅಬಿಷೈಯೂ ಅಸಾಹೇಲನೂ ಅಲ್ಲಿ ಇದ್ದರು. ಅಸಾಹೇಲನು ಅಡವಿಯ ಜಿಂಕೆಯ ಹಾಗೆ ಪಾದ ತ್ವರಿತನಾಗಿದ್ದನು.