2 Samuel · chapter 1 · verse 24
2 Samuel 1:24 in Kannada
ಇಸ್ರಾಯೇಲಿನ ಕುಮಾರ್ತೆ ಯರೇ, ಸೌಲನಿಗೋಸ್ಕರ ಅಳಿರಿ, ನಿಮಗೆ ರಕ್ತಾಂಬರ ವನ್ನು ಸಂಭ್ರಮವಾಗಿ ತೊಡಿಸಿದನಲ್ಲಾ; ನಿಮ್ಮ ಉಡುಗೆ ಗಳ ಮೇಲೆ ಚಿನ್ನದ ಆಭರಣಗಳನ್ನು ಧರಿಸುವಂತೆ ಮಾಡಿದನಲ್ಲಾ.
Israayelina kumaarte yare, saulanigoskara aliri, nimage raktaambara vannu sambhramavaagi todisidanallaa; nimma uduge gala mele chinnada aabharanagalannu dharisuvante maadidanallaa.
2 Samuel 1:24 in English
- King James Version (KJV)
- Ye daughters of Israel, weep over Saul, who clothed you in scarlet, with [other] delights, who put on ornaments of gold upon your apparel.
- World English Bible (WEB)
- You daughters of Israel, weep over Saul, who clothed you delicately in scarlet, who put ornaments of gold on your clothing.
- American Standard Version (ASV)
- Ye daughters of Israel, weep over Saul, Who clothed you in scarlet delicately, Who put ornaments of gold upon your apparel.
- Bible in Basic English (BBE)
- O daughters of Israel, have sorrow for Saul, by whom you were delicately clothed in robes of red, with ornaments of gold on your dresses.
- Darby Translation (DBY)
- Ye daughters of Israel, weep over Saul, who clothed you in scarlet with splendour, Who put ornaments of gold upon your apparel.
- Webster's Bible (WBS)
- Ye daughters of Israel, weep over Saul, who clothed you in scarlet, with [other] delights, who put ornaments of gold upon your apparel.
- Young's Literal Translation (YLT)
- Daughters of Israel! for Saul weep ye, Who is clothing you [in] scarlet with delights. Who is lifting up ornaments of gold on your clothing.
Read in context
- 22ಕೊಲ್ಲಲ್ಪಟ್ಟ ವರ ರಕ್ತದಿಂದಲೂ ಬಲಶಾಲಿಗಳ ಕೊಬ್ಬಿನಿಂದಲೂ ಯೋನಾತಾನನ ಬಿಲ್ಲು ಹಿಂದಕ್ಕೆ ತಿರುಗಲಿಲ್ಲ; ಸೌಲನ ಕತ್ತಿ ಬರಿದಾಗಿ ತಿರಿಗಿ ಬರಲಿಲ್ಲ.
- 23ಸೌಲನೂ ಯೋನಾತಾನನೂ ಜೀವದಿಂದಿದ್ದಾಗ ಪ್ರಿಯಕರವಾಗಿಯೂ ಸಂತೋಷಕರವಾಗಿಯೂ ಇದ್ದರು; ತಮ್ಮ ಮರಣದಲ್ಲಿಯೂ ಅಗಲಿ ಹೋಗದೆ ಇದ್ದರು. ಅವರು ಹದ್ದುಗಳಿಗಿಂತ ವೇಗವುಳ್ಳವರೂ ಸಿಂಹಗಳಿಗಿಂತ ಬಲ ವುಳ್ಳವರೂ ಆಗಿದ್ದರು.
- 24ಇಸ್ರಾಯೇಲಿನ ಕುಮಾರ್ತೆ ಯರೇ, ಸೌಲನಿಗೋಸ್ಕರ ಅಳಿರಿ, ನಿಮಗೆ ರಕ್ತಾಂಬರ ವನ್ನು ಸಂಭ್ರಮವಾಗಿ ತೊಡಿಸಿದನಲ್ಲಾ; ನಿಮ್ಮ ಉಡುಗೆ ಗಳ ಮೇಲೆ ಚಿನ್ನದ ಆಭರಣಗಳನ್ನು ಧರಿಸುವಂತೆ ಮಾಡಿದನಲ್ಲಾ.
- 25ಪರಾಕ್ರಮಶಾಲಿಗಳು ಹೇಗೆ ಯುದ್ಧದಲ್ಲಿ ಬಿದ್ದಿದ್ದಾರೆ! ಯೋನಾತಾನನೇ, ನೀನು ನಿನ್ನ ಉನ್ನತಸ್ಥಳಗಳಲ್ಲಿ ಕೊಲ್ಲಲ್ಪಟ್ಟಿ.
- 26ನನ್ನ ಸಹೋದರನಾದ ಯೋನಾತಾನನೇ, ನಾನು ನಿನ ಗೋಸ್ಕರ ಸಂಕಟಪಡುತ್ತೇನೆ; ನೀನು ನನಗೆ ಬಹಳ ಮನೋಹರನಾಗಿದ್ದೀ. ನಿನ್ನ ಪ್ರೀತಿ ನನ್ನ ಮೇಲೆ ಆಶ್ಚರ್ಯವಾಗಿತ್ತು. ಅದು ಸ್ತ್ರೀಯರ ಪ್ರೀತಿಗಿಂತ ಅಧಿಕವಾದದ್ದು.ಪರಾಕ್ರಮಶಾಲಿಗಳು ಹೇಗೆ ಯುದ್ಧದಲ್ಲಿ ಬಿದ್ದಿದ್ದಾರೆ; ಯುದ್ಧದ ಆಯುಧಗಳು ನಾಶವಾಗಿ ಹೋದವಲ್ಲಾ.
Cross references
- 1 Peter 3:3–5 1 ಪೇತ್ರನು 3:3–5ಜಡೆ ಹೆಣೆದುಕೊ ಳ್ಳುವದೂ ಚಿನ್ನದ ಒಡವೆಗಳನ್ನು ಇಟ್ಟುಕೊಳ್ಳುವದೂ ಇಲ್ಲವೆ ಉಡಿಗೆಗಳನ್ನು ಧರಿಸಿಕೊಳ್ಳುವದೂ ಈ ಹೊರ ಗಣ ಅಲಂಕಾರವು ಬೇಡ. ಆದರೆ ಸಾತ್ವಿಕವಾದ ಶಾಂತ ಮನಸ್ಸು ಎಂಬ ಹೃದಯದ ಮರೆಯಾದ ಮನುಷ್ಯನ ಅಲಂಕಾರವೇ ನಿಮಗಿರಲಿ. ಇದು ಅಕ್ಷಯ ವಾಗಿದ್ದು ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದಾಗಿದೆ. ಪೂರ್ವಕಾಲದಲ್ಲಿ ದೇವರ ಮೇಲೆ ನಂಬಿಕೆಯಿಟ್ಟ ಪರಿಶುದ್ಧ ಸ್ತ್ರೀಯರು ಸಹ ಹೀಗೆಯೇ ತಮ್ಮನ್ನು ಆಲಂಕರಿಸಿಕೊಂಡರು; ಅವರು ತಮ್ಮ ತಮ್ಮ ಗಂಡಂ ದಿರಿಗೆ ಅಧೀನರಾಗಿದ್ದರು.
- 1 Timothy 2:9–10 1 ತಿಮೊಥೆಯನಿಗೆ 2:9–10ಹಾಗೆಯೇ ಸ್ತ್ರೀಯರು ಮಾನಸ್ಥೆಯರಾಗಿಯೂ ಸ್ವಸ್ಥಬುದ್ಧಿಯುಳ್ಳವರಾಗಿಯೂ ಇದ್ದು ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆ ಚಿನ್ನ ಮುತ್ತುಗಳು ಬೆಲೆಯುಳ್ಳ ವಸ್ತ್ರ ಇವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ (ದೇವ ಭಕ್ತೆಯರೆನಿಸಕೊಳ್ಳುವ ಸ್ತ್ರೀಯರಿಗೆ ಯುಕ್ತವಾಗಿರುವ ಪ್ರಕಾರ) ಸತ್ಕ್ರಿಯೆಗಳಿಂದಲೇ ಅಲಂಕರಿಸಿಕೊಳ್ಳಬೇಕು.
- Isaiah 3:16–26 ಯೆಶಾಯ 3:16–26ಇದಲ್ಲದೆ ಕರ್ತನು ಇಂತೆನ್ನುತ್ತಾನೆ --ಚೀಯೋನ್ ಕುಮಾರ್ತೆಯರು ಅಹಂಕಾರಿಗಳಾಗಿದ್ದು ಕತ್ತು ತೂಗುತ್ತಾ ಕಣ್ಣುಗಳನ್ನು ತಿರುಗಿಸುತ್ತಾ ನಾಜೂಕಿ ನಿಂದ ಹೆಜ್ಜೆಇಡುತ್ತಾ ಕಾಲುಗೆಜ್ಜೆ ಜಣಜಣಿಸುತ್ತಾ ನಡೆ ಯುವವರಾಗಿರುವದರಿಂದ, ಚೀಯೋನ್ ಕುಮಾ ರ್ತೆಯರ ತಲೆಯ ಮೇಲ್ಭಾಗವನ್ನು ಕಜ್ಜಿಯಿಂದ ಕರ್ತನು ಹೊಡೆಯುವನು, ಅವರ ಗುಪ್ತಾಂಗಗಳನ್ನು ಬೈಲುಪಡಿಸುವನು. ಆ ದಿನದಲ್ಲಿ ಕರ್ತನು ಅವರ ಅಂದುಗೆ, ತುರುಬುಬಲೆ, ಅರ್ಧಚಂದ್ರ, ಸರ, ಬಳೆ, ಮುಂಡಾಸ, ಟೊಪ್ಪಿಗೆ, ಕಾಲಸರಪಣಿ, ಶಿರೋ ವೇಷ್ಟನ, ಗಂಧದ ಡಬ್ಬಿ, ಓಲೆ, ಉಂಗುರ, ಮೂಗುತಿ, ಬದಲಾಯಿಸತಕ್ಕ ಬಟ್ಟೆ, ಶಾಲು, ತಲೆಕೌದಿ, ಅಲಂ ಕಾರದ ಪಿನ್ನುಗಳು, ಕೈಗನ್ನಡಿ, ನಾರು ಮಡಿ, ಮೇಲ್ಹೊ ದಿಕೆ ಮುಸುಕು ಈ ಎಲ್ಲಾ ಭೂಷಣಗಳನ್ನು ತೆಗೆದು ಹಾಕುವನು. ಆಗ ಸುವಾಸನೆಯ ಬದಲಾಗಿ ದುರ್ವಾಸನೆ, ಡಾಬಿಗೆ ಬದಲಾಗಿ ಹಗ್ಗ; ಜಡೆಯ ಬದಲಾಗಿ ಬೋಳುತಲೆ; ನಡುವಿನ ಶಲ್ಯಕ್ಕೆ ಪ್ರತಿಯಾಗಿ ಗೋಣೀತಟ್ಟು; ಸೌಂದರ್ಯಕ್ಕೆ ಬದಲಾಗಿ ಬರೆ, ಇವು ಆಗುವವು; ನಿನ್ನ ಗಂಡಸರು ಕತ್ತಿಯಿಂದಲೂ ನಿನ್ನ ಶೂರರು ಯುದ್ಧದಲ್ಲಿಯೂ ಬೀಳುವರು.ಅವರ ಬಾಗಲುಗಳಲ್ಲಿ ಪ್ರಲಾಪವು ದುಃಖವು ತುಂಬಿರು ವದು; ಅವಳು ಹಾಳಾಗಿ ನೆಲದ ಮೇಲೆ ಕುಳಿತು ಕೊಳ್ಳುವಳು. ಅವರ ಬಾಗಲುಗಳಲ್ಲಿ ಪ್ರಲಾಪವು ದುಃಖವು ತುಂಬಿರು ವದು; ಅವಳು ಹಾಳಾಗಿ ನೆಲದ ಮೇಲೆ ಕುಳಿತು ಕೊಳ್ಳುವಳು.
- Jeremiah 2:32 ಯೆರೆಮೀಯ 2:32ಯುವತಿಯು ತನ್ನ ಆಭರಣಗಳನ್ನೂ ಮದಲಗಿತ್ತಿಯು ತನ್ನ ಒಡ್ಯಾಣವನ್ನೂ ಮರೆತುಬಿಡುವಳೋ? ಆದಾಗ್ಯೂ ನನ್ನ ಜನರು ಲೆಕ್ಕವಿಲ್ಲದಷ್ಟು ದಿನಗಳು ನನ್ನನ್ನು ಮರೆತುಬಿಟ್ಟಿದ್ದಾರೆ.
- Judges 5:30 ನ್ಯಾಯಸ್ಥಾಪಕರು 5:30ಅವರು ಓಡಲಿಲ್ಲವೋ? ಕೊಳ್ಳೆಹಂಚಿ ಕೊಳ್ಳಲಿಲ್ಲವೋ? ಒಬ್ಬೊಬ್ಬ ಮನುಷ್ಯನಿಗೆ ಒಂದೆರಡು ಹೆಣ್ಣು, ಸೀಸೆರನಿಗೆ ನಾನಾ ವರ್ಣವುಳ್ಳ ಕೊಳ್ಳೆ, ನಾನಾ ವರ್ಣವುಳ್ಳಂಥ ವಿಚಿತ್ರವಾಗಿ, ಹೊಲಿದಂಥ, ಎರಡು ಪಕ್ಕೆಗಳಲ್ಲಿ ವಿಚಿತ್ರವಾಗಿ ಹೊಲಿದಂಥ, ಕೊಳ್ಳೆ ಹಿಡಿ ಯುವರ ಕಂಠಗಳಿಗೆ ತಕ್ಕಂಥ ನಾನಾ ವರ್ಣವುಳ್ಳ ಕೊಳ್ಳೆ, ಸಿಕ್ಕಲಿಲ್ಲವೋ?ಓ ಕರ್ತನೇ, ಹೀಗೆಯೇ ನಿನ್ನ ಶತ್ರುಗಳೆಲ್ಲರು ನಾಶವಾಗಲಿ, ಆದರೆ ಆತನನ್ನು ಪ್ರೀತಿಮಾಡುವವರು ತನ್ನ ಪರಾಕ್ರಮದಿಂದ ಹೊರ ಡುವ ಸೂರ್ಯನ ಹಾಗೆಯೇ ಇರಲಿ. ದೇಶವು ನಾಲ್ವತ್ತು ವರುಷ ವಿಶ್ರಾಂತಿಯಲ್ಲಿತ್ತು.
- Psalm 68:12 ಕೀರ್ತನೆಗಳು 68:12ಸೈನ್ಯಗಳ ಅರಸರು ತ್ವರೆಯಾಗಿ ಓಡಿಹೋದರು; ಮನೆಯಲ್ಲಿ ವಾಸಿಸುವವಳು ಕೊಳ್ಳೆ ಯನ್ನು ಪಾಲು ಮಾಡಿಕೊಂಡಳು.
- Proverbs 31:21 ಜ್ಞಾನೋಕ್ತಿಗಳು 31:21ತನ್ನ ಮನೆಯವರಿಗಾಗಿ ಆಕೆಯು ಹಿಮಕ್ಕೆ ಭಯಪಡುವದಿಲ್ಲ; ಆಕೆಯ ಮನೆಯವ ರೆಲ್ಲರೂ ರಕ್ತಾಂಭರಗಳಿಂದ ಹೊದಿಸಲ್ಪಟ್ಟಿದ್ದಾರೆ.