Psalms · chapter 68 · verse 12
Psalm 68:12 in Kannada
ಸೈನ್ಯಗಳ ಅರಸರು ತ್ವರೆಯಾಗಿ ಓಡಿಹೋದರು; ಮನೆಯಲ್ಲಿ ವಾಸಿಸುವವಳು ಕೊಳ್ಳೆ ಯನ್ನು ಪಾಲು ಮಾಡಿಕೊಂಡಳು.
Sainyagala arasaru tvareyaagi odihodaru; maneyalli vaasisuvavalu kolle yannu paalu maadikondalu.
Psalm 68:12 in English
- King James Version (KJV)
- Kings of armies did flee apace: and she that tarried at home divided the spoil.
- World English Bible (WEB)
- “Kings of armies flee! They flee!” She who waits at home divides the plunder,
- American Standard Version (ASV)
- Kings of armies flee, they flee; And she that tarrieth at home divideth the spoil.
- Bible in Basic English (BBE)
- Kings of armies quickly go in flight: and the women in the houses make a division of their goods.
- Darby Translation (DBY)
- Kings of armies flee; they flee, and she that tarrieth at home divideth the spoil.
- Webster's Bible (WBS)
- Kings of armies fled apace: and she that tarried at home divided the spoil.
- Young's Literal Translation (YLT)
- Kings of hosts flee utterly away, And a female inhabitant of the house apportioneth spoil.
Read in context
- 10ನಿನ್ನ ಸಭೆಯು ಅದರಲ್ಲಿ ವಾಸಮಾಡಿತು; ಓ ದೇವರೇ, ನಿನ್ನ ಸಮೃದ್ಧಿ ಯಿಂದ ಬಡವರನ್ನು ತೃಪ್ತಿಪಡಿಸಿದಿ.
- 11ಕರ್ತನು ವಾಕ್ಯ ವನ್ನು ಕೊಟ್ಟನು; ಅದನ್ನು ಪ್ರಕಟಿಸಿದವರ ಗುಂಪು ದೊಡ್ಡದಾಗಿತ್ತು.
- 12ಸೈನ್ಯಗಳ ಅರಸರು ತ್ವರೆಯಾಗಿ ಓಡಿಹೋದರು; ಮನೆಯಲ್ಲಿ ವಾಸಿಸುವವಳು ಕೊಳ್ಳೆ ಯನ್ನು ಪಾಲು ಮಾಡಿಕೊಂಡಳು.
- 13ನೀವು ಮಡಿಕೆ ಗಳ ಮಧ್ಯದಲ್ಲಿ ಮಲಗಿದಾಗ್ಯೂ ಬೆಳ್ಳಿಯಿಂದಲೂ ಅದರ ರೆಕ್ಕೆಗಳು ಹಳದಿ ಚಿನ್ನದಿಂದಲೂ ಮುಚ್ಚಿದ ಪಾರಿವಾಳದ ರೆಕ್ಕೆಗಳ ಹಾಗಿದ್ದೀರಿ.
- 14ಸರ್ವಶಕ್ತನು ಅರಸುಗಳನ್ನು ಸಲ್ಮೋನಿನಲ್ಲಿ ಚದರಿಸಿದಾಗ ಅದರಲ್ಲಿ ಬಿಳೀ ಹಿಮದ ಹಾಗಿತ್ತು.
Cross references
- Joshua 10:16 ಯೆಹೋಶುವ 10:16ಆದರೆ ಆ ಐದು ಮಂದಿ ಅರಸುಗಳು ಓಡಿಹೋಗಿ ಮಕ್ಕೇದದಲ್ಲಿರುವ ಒಂದು ಗವಿಯಲ್ಲಿ ಅಡಗಿಕೊಂಡರು.
- Judges 5:19 ನ್ಯಾಯಸ್ಥಾಪಕರು 5:19ಅರಸರು ಬಂದು ಯುದ್ಧಮಾಡಿದರು; ಆಗ ಕಾನಾನ್ಯರ ಅರಸರು ಮೆಗಿದ್ದೋನಿನ ಜಲ ಸವಿಾಪ ವಾದ ತಾನಾಕದಲ್ಲಿ ಯುದ್ಧಮಾಡಿದರು; ಅವರು ಹಣದ ಲಾಭ ತಕ್ಕೂಳ್ಳಲಿಲ್ಲ.
- Joshua 12:7–24 ಯೆಹೋಶುವ 12:7–24ಆದರೆ ಯೊರ್ದನಿಗೆ ಪಶ್ಚಿಮದಲ್ಲಿ ಲೆಬನೋ ನಿನ ತಗ್ಗಿನಲ್ಲಿರುವ ಬಾಲಾದ್ ಮೊದಲುಗೊಂಡು ಸೇಯಾರಿಗೆ ಏರಿಹೋಗುವ ಹಾಲಾಕ್ ಬೆಟ್ಟದ ವರೆಗೆ ಬೆಟ್ಟಗಳಲ್ಲಿಯೂ ತಗ್ಗುಗಳಲ್ಲಿಯೂ ಬೈಲಿನಲ್ಲಿಯೂ ನೀರು ಬುಗ್ಗೆಗಳ ಸ್ಥಳಗಳಲ್ಲಿಯೂ ಅರಣ್ಯದಲ್ಲಿಯೂ ದಕ್ಷಿಣದಲ್ಲಿಯೂ ಯೆಹೋಶುವನು ಇಸ್ರಾಯೇಲಿನ ಗೋತ್ರಗಳಿಗೆ ಸ್ವಾಸ್ತ್ಯವಾಗಿ ಪಾಲು ಇಟ್ಟ ದೇಶವಾದಂಥ ಹಿತ್ತಿಯರ ಅಮೋರಿಯರ ಕಾನಾನ್ಯರ ಪೆರಿಜ್ಜೀಯರ ಹಿವ್ವೀಯರ ಯೆಬೂಸಿಯರ ದೇಶದಲ್ಲಿದ್ದ ಯೆಹೋಶು ವನೂ ಇಸ್ರಾಯೇಲ್ ಮಕ್ಕಳೂ ಹೊಡೆದುಬಿಟ್ಟ ಅರಸರು ಯಾರಂದರೆ-- ಯೆರಿಕೋವಿನ ಅರಸನು ಒಬ್ಬನು; ಬೇತೇಲ್ ಬಳಿಯಲ್ಲಿರುವ ಆಯಿಯ ಅರಸನು ಒಬ್ಬನು; ಯೆರೂಸಲೇಮಿನ ಅರಸನು ಒಬ್ಬನು; ಹೆಬ್ರೋನಿನ ಅರಸನು ಒಬ್ಬನು; ಯರ್ಮೂತಿನ ಅರಸನು ಒಬ್ಬನು; ಲಾಕೀಷಿನ ಅರಸನು ಒಬ್ಬನು; ಎಗ್ಲೋನಿನ ಅರಸನು ಒಬ್ಬನು; ಗೆಜೆರಿನ ಅರಸನು ಒಬ್ಬನು; ದೆಬೀರಿನ ಅರಸನು ಒಬ್ಬನು; ಗೆದೆರಿನ ಅರಸನು ಒಬ್ಬನು; ಹೊರ್ಮದ ಅರಸನು ಒಬ್ಬನು; ಅರಾದಿನ ಅರಸನು ಒಬ್ಬನು; ಲಿಬ್ನದ ಅರಸನು ಒಬ್ಬನು; ಅದುಲ್ಲಾಮದ ಅರಸನು ಒಬ್ಬನು; ಮಕ್ಕೇದದ ಅರಸನು ಒಬ್ಬನು; ಬೇತೇಲಿನ ಅರಸನು ಒಬ್ಬನು; ತಪ್ಪೂಹದ ಅರಸನು ಒಬ್ಬನು; ಹೇಫೆರಿನ ಅರಸನು ಒಬ್ಬನು; ಅಫೇಕದ ಅರಸನು ಒಬ್ಬನು; ಲಷ್ಷಾರೋನಿನ ಅರಸನು ಒಬ್ಬನು; ಮಾದೋನಿನ ಅರಸನು ಒಬ್ಬನು; ಹಾಚೋರಿನ ಅರಸನು ಒಬ್ಬನು; ಶಿಮ್ರೋನ್ಮೆರೋನಿನ ಅರಸನು ಒಬ್ಬನು; ಅಕ್ಷಾಫಿನ ಅರಸನು ಒಬ್ಬನು; ತಾನಕದ ಅರಸನು ಒಬ್ಬನು; ಮೆಗಿದ್ದೋವಿನ ಅರಸನು ಒಬ್ಬನು; ಕೆದೆಷಿನ ಅರಸನು ಒಬ್ಬನು; ಕರ್ಮೆಲ್ ಬೆಟ್ಟದ ಯೊಕ್ನೆಯಾಮದ ಅರಸನು ಒಬ್ಬನು; ದೋರ್ ಪ್ರಾಂತ್ಯದಲ್ಲಿರುವ ದೋರಿನ ಅರಸನು ಒಬ್ಬನು; ಗಿಲ್ಗಾಲಿನ ಜನಾಂಗಗಳ ಅರಸನು ಒಬ್ಬನು;ತಿರ್ಚದ ಅರಸನು ಒಬ್ಬನು; ಒಟ್ಟು ಮೂವತ್ತೊಂದು ಅರಸರುಗಳು. ತಿರ್ಚದ ಅರಸನು ಒಬ್ಬನು; ಒಟ್ಟು ಮೂವತ್ತೊಂದು ಅರಸರುಗಳು.
- Revelation 19:17–20 ಪ್ರಕಟನೆ 19:17–20ಆಮೇಲೆ ಒಬ್ಬ ದೂತನು ಸೂರ್ಯನಲ್ಲಿ ನಿಂತಿರುವದನ್ನು ನಾನು ಕಂಡೆನು. ಅವನು ಮಹಾ ಶಬ್ದದಿಂದ ಕೂಗುತ್ತಾ ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳಿಗೆ--ಬನ್ನಿರಿ, ಮಹಾ ದೇವರ ಭೋಜನಕ್ಕೆ ಕೂಡಿಕೊಳ್ಳಿರಿ, ರಾಜರ ಮಾಂಸವನ್ನೂ ಸೈನ್ಯಾಧಿಪತಿ ಗಳ ಮಾಂಸವನ್ನೂ ಪರಾಕ್ರಮಶಾಲಿಗಳ ಮಾಂಸವನ್ನೂ ಕುದುರೆಗಳ ಮಾಂಸವನ್ನೂ ಅವುಗಳ ಮೇಲೆ ಕೂತವರ ಮಾಂಸವನ್ನೂ ಮತ್ತು ಸ್ವತಂತ್ರರೂ ದಾಸರೂ ಚಿಕ್ಕವರೂ ದೊಡ್ಡವರೂ ಇವರೆಲ್ಲರ ಮಾಂಸವನ್ನೂ ತಿನ್ನುವದಕ್ಕೆ ಬನ್ನಿರಿ ಎಂದು ಹೇಳಿದನು. ತರುವಾಯ ಆ ಮೃಗವೂ ಭೂರಾಜರೂ ಅವರ ಸೈನ್ಯಗಳೂ ಆ ಕುದುರೆಯ ಮೇಲೆ ಕೂತಿದ್ದಾತನ ಮೇಲೆಯೂ ಆತನ ಸೈನ್ಯದ ಮೇಲೆಯೂ ಯುದ್ಧ ಮಾಡುವದಕ್ಕಾಗಿ ಕೂಡಿಬಂದಿರುವದನ್ನು ನಾನು ಕಂಡೆನು. ಆಗ ಮೃಗವು ಸೆರೆಸಿಕ್ಕಿತು; ಇದಲ್ಲದೆ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡಿ ಮೃಗದ ಗುರುತು ಹಾಕಿಸಿಕೊಂಡವರನ್ನೂ ಅದರ ವಿಗ್ರಹವನ್ನು ಆರಾಧಿಸಿದವರನ್ನೂ ಮರುಳುಗೊಳಿಸಿದ ಆ ಸುಳ್ಳು ಪ್ರವಾದಿಯೂ ಆದರ ಜೊತೆಯಲ್ಲಿ ಸೆರೆ ಸಿಕ್ಕಿದನು. ಇವರಿಬ್ಬರೂ ಜೀವಸಹಿತವಾಗಿ ಗಂಧಕ ದಿಂದಮಿಕ್ಕಾದವರು ಆ ಕುದುರೆಯ ಮೇಲೆ ಕೂತಿದ್ದಾತನ ಕತ್ತಿಯಿಂದ ಅಂದರೆ ಆತನ ಬಾಯಿಂದ ಬಂದ ಕತ್ತಿ ಯಿಂದ ಹತರಾದರು; ಹಕ್ಕಿಗಳೆಲ್ಲಾ ಅವರ ಮಾಂಸವನು ಹೊಟ್ಟೆತುಂಬಾ ತಿಂದವು.
- 1 Samuel 30:24 1 ಸಮುವೇಲನು 30:24ಆದರೆ ಯುದ್ಧಕ್ಕೆ ಹೋದವನ ಪಾಲಿನ ಹಾಗೆಯೇ ಸಾಮಗ್ರಿಯ ಬಳಿಯಲ್ಲಿ ಕಾದಿರುವವನ ಪಾಲೂ ಇರಲಿ; ಅವರು ಸಮವಾಗಿ ಪಾಲು ಮಾಡಿಕೊಳ್ಳಬೇಕು.
- Numbers 31:8–9 ಅರಣ್ಯಕಾಂಡ 31:8–9ಕೊಲ್ಲಲ್ಪಟ್ಟವರಲ್ಲದೆ ಮಿದ್ಯಾನಿನ ಅರಸರನ್ನು ಕೊಂದು ಹಾಕಿದರು. ಯಾರಂದರೆ, ಮಿದ್ಯಾ ನಿನ ಐದು ಮಂದಿ ಅರಸರಾಗಿರುವ ಎವೀ, ರೆಕೆಮ್, ಚೂರ್, ಹೂರ್, ರೆಬಾ, ಬೆಯೋರನ ಮಗನಾದ ಬಿಳಾಮನನ್ನೂ ಕತ್ತಿಯಿಂದ ಕೊಂದುಹಾಕಿದರು. ಇಸ್ರಾಯೇಲ್ ಮಕ್ಕಳು ಮಿದ್ಯಾನ್ಯರ ಸ್ತ್ರೀಯರನ್ನೂ ಅವರ ಮಕ್ಕಳನ್ನೂ ಸೆರೆಹಿಡಿದು ಸಮಸ್ತ ಪಶುಗಳನ್ನೂ ಹಿಂಡುಗಳನ್ನೂ ಸಾಮಗ್ರಿಗಳನ್ನೂ ಸುಲುಕೊಂಡರು.
- Numbers 31:54 ಅರಣ್ಯಕಾಂಡ 31:54ಆಗ ಮೋಶೆಯೂ ಯಾಜಕನಾದ ಎಲ್ಲಾಜಾ ರನೂ ಸಹಸ್ರಾಧಿಪತಿಗಳ ಮತ್ತು ಶತಾಧಿಪತಿಗಳ ಕೈಯಿಂದ ಬಂಗಾರವನ್ನು ತಕ್ಕೊಂಡು ಕರ್ತನ ಸಮ್ಮುಖದಲ್ಲಿ ಇಸ್ರಾಯೇಲ್ ಮಕ್ಕಳಿಗೆ ಜ್ಞಾಪಕಕ್ಕಾಗಿ ಸಭೆಯ ಗುಡಾರದೊಳಗೆ ತಂದರು.
- Judges 5:30 ನ್ಯಾಯಸ್ಥಾಪಕರು 5:30ಅವರು ಓಡಲಿಲ್ಲವೋ? ಕೊಳ್ಳೆಹಂಚಿ ಕೊಳ್ಳಲಿಲ್ಲವೋ? ಒಬ್ಬೊಬ್ಬ ಮನುಷ್ಯನಿಗೆ ಒಂದೆರಡು ಹೆಣ್ಣು, ಸೀಸೆರನಿಗೆ ನಾನಾ ವರ್ಣವುಳ್ಳ ಕೊಳ್ಳೆ, ನಾನಾ ವರ್ಣವುಳ್ಳಂಥ ವಿಚಿತ್ರವಾಗಿ, ಹೊಲಿದಂಥ, ಎರಡು ಪಕ್ಕೆಗಳಲ್ಲಿ ವಿಚಿತ್ರವಾಗಿ ಹೊಲಿದಂಥ, ಕೊಳ್ಳೆ ಹಿಡಿ ಯುವರ ಕಂಠಗಳಿಗೆ ತಕ್ಕಂಥ ನಾನಾ ವರ್ಣವುಳ್ಳ ಕೊಳ್ಳೆ, ಸಿಕ್ಕಲಿಲ್ಲವೋ?ಓ ಕರ್ತನೇ, ಹೀಗೆಯೇ ನಿನ್ನ ಶತ್ರುಗಳೆಲ್ಲರು ನಾಶವಾಗಲಿ, ಆದರೆ ಆತನನ್ನು ಪ್ರೀತಿಮಾಡುವವರು ತನ್ನ ಪರಾಕ್ರಮದಿಂದ ಹೊರ ಡುವ ಸೂರ್ಯನ ಹಾಗೆಯೇ ಇರಲಿ. ದೇಶವು ನಾಲ್ವತ್ತು ವರುಷ ವಿಶ್ರಾಂತಿಯಲ್ಲಿತ್ತು.
- Revelation 6:15 ಪ್ರಕಟನೆ 6:15ಭೂರಾಜರೂ ದೊಡ್ಡ ವರೂ ಐಶ್ವರ್ಯವಂತರೂ ಮುಖ್ಯಾಧಿಪತಿಗಳೂ ಪರಾ ಕ್ರಮಶಾಲಿಗಳೂ ಎಲ್ಲಾ ದಾಸರೂ ಸ್ವತಂತ್ರರೂ ಗವಿ ಗಳಲ್ಲಿಯೂ ಬೆಟ್ಟಗಳ ಬಂಡೆಗಳಲ್ಲಿಯೂ ಅಡಗಿ ಕೊಂಡು
- Numbers 31:27 ಅರಣ್ಯಕಾಂಡ 31:27ಆ ಸುಲಿಗೆಯನ್ನು ಯುದ್ಧಕ್ಕೆ ಹೊರಟ ಯುದ್ಧಸ್ಥರಿಗೂ ಸಮಸ್ತ ಸಭೆಗೂ ಎರಡು ಪಾಲು ಮಾಡಬೇಕು.
- Exodus 14:25 ವಿಮೋಚನಕಾಂಡ 14:25ಅವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟದ್ದರಿಂದ ಐಗುಪ್ತ್ಯರು ಕಷ್ಟದಿಂದ ಹೋಗು ವಂತೆ ಮಾಡಿದನು. ಆಗ--ಇಸ್ರಾಯೇಲಿನ ಎದುರಿ ನಿಂದ ಓಡಿಹೋಗೋಣ. ಯಾಕಂದರೆ ಕರ್ತನು ಐಗುಪ್ತ್ಯರಿಗೆ ವಿರೋಧವಾಗಿ ಅವರಿಗೋಸ್ಕರ ಯುದ್ಧ ಮಾಡುತ್ತಾನೆಂದು ಹೇಳಿಕೊಂಡರು.
- Joshua 10:42 ಯೆಹೋಶುವ 10:42ಯೆಹೋಶುವನು ಈ ಸಮಸ್ತ ಅರಸುಗಳನ್ನೂ ಅವರ ದೇಶವನ್ನೂ ಒಂದೇ ಸಾರಿ ತೆಗೆದುಕೊಂಡನು. ಯಾಕಂದರೆ ಇಸ್ರಾಯೇಲಿನ ದೇವ ರಾದ ಕರ್ತನು ಇಸ್ರಾಯೇಲಿಗೋಸ್ಕರ ಯುದ್ಧ ಮಾಡಿದನು.ಆಗ ಯೆಹೋಶುವನು ಇಸ್ರಾಯೇಲ್ಯ ರೆಲ್ಲರ ಸಂಗಡ ಗಿಲ್ಗಾಲಿನಲ್ಲಿರುವ ಪಾಳೆಯಕ್ಕೆ ಹಿಂತಿರುಗಿ ಬಂದನು.