2 Samuel · chapter 22 · verse 1
2 Samuel 22:1 in Kannada
ಕರ್ತನು ದಾವೀದನನ್ನು ಅವನ ಎಲ್ಲಾ ಶತ್ರುಗಳ ಕೈಯೊಳಗಿಂದಲೂ ಸೌಲನ ಕೈಯೊಳಗಿಂದಲೂ ಬಿಡಿಸಿದ ದಿವಸದಲ್ಲಿ ಅವನು ಕರ್ತನನ್ನು ಕುರಿತು ಈ ಹಾಡಿನ ಮಾತುಗಳನ್ನು ಹೇಳಿದನು. ಏನಂದರೆ--
Kartanu daaveedanannu avana ellaa shatrugala kaiyolagindaloo saulana kaiyolagindaloo bidisida divasadalli avanu kartanannu kuritu ee haadina maatugalannu helidanu. Enandare--
2 Samuel 22:1 in English
- King James Version (KJV)
- And David spake unto the LORD the words of this song in the day [that] the LORD had delivered him out of the hand of all his enemies, and out of the hand of Saul:
- World English Bible (WEB)
- David spoke to the LORD the words of this song in the day that the LORD delivered him out of the hand of all his enemies, and out of the hand of Saul,
- American Standard Version (ASV)
- And David spake unto Jehovah the words of this song in the day that Jehovah delivered him out of the hand of all his enemies, and out of the hand of Saul:
- Bible in Basic English (BBE)
- And David made a song to the Lord in these words, on the day when the Lord made him free from the hands of all his haters, and from the hand of Saul:
- Darby Translation (DBY)
- And David spoke to Jehovah the words of this song in the day that Jehovah had delivered him out of the hand of all his enemies, and out of the hand of Saul.
- Webster's Bible (WBS)
- And David spoke to the LORD the words of this song in the day [that] the LORD had delivered him from the hand of all his enemies, and from the hand of Saul:
- Young's Literal Translation (YLT)
- And David speaketh to Jehovah the words of this song in the day Jehovah hath delivered him out of the hand of all his enemies, and out of the hand of Saul,
Read in context
- 1ಕರ್ತನು ದಾವೀದನನ್ನು ಅವನ ಎಲ್ಲಾ ಶತ್ರುಗಳ ಕೈಯೊಳಗಿಂದಲೂ ಸೌಲನ ಕೈಯೊಳಗಿಂದಲೂ ಬಿಡಿಸಿದ ದಿವಸದಲ್ಲಿ ಅವನು ಕರ್ತನನ್ನು ಕುರಿತು ಈ ಹಾಡಿನ ಮಾತುಗಳನ್ನು ಹೇಳಿದನು. ಏನಂದರೆ--
- 2ಕರ್ತನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನನ್ನು ತಪ್ಪಿಸುವವನೂ ಆಗಿದ್ದಾನೆ.
- 3ನನ್ನ ಬಂಡೆಯಾದ ದೇವರಲ್ಲಿ ನಾನು ಭರವಸ ವಿಡುವೆನು; ಆತನು ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ ಉನ್ನತ ಗೋಪುರವೂ ನನ್ನ ಆಶ್ರಯವೂ ನನ್ನ ರಕ್ಷಕನೂ ಆಗಿದ್ದಾನೆ. ನೀನು ಬಲಾತ್ಕಾರಿಯಿಂದ ನನ್ನನ್ನು ರಕ್ಷಿಸುತ್ತೀ.
Cross references
- Exodus 15:1 ವಿಮೋಚನಕಾಂಡ 15:1ಆಗ ಮೋಶೆಯೂ ಇಸ್ರಾಯೇಲ್ ಮಕ್ಕಳೂ ಕರ್ತನಿಗೆ ಈ ಹಾಡನ್ನು ಹಾಡಿ ಹೇಳಿದ್ದೇನಂದರೆ--ನಾನು ಕರ್ತನಿಗೆ ಹಾಡುತ್ತೇನೆ; ಆತನು ಪ್ರಭಾವದಿಂದ ಜಯಶಾಲಿಯಾದನು; ಕುದುರೆ ಯನ್ನೂ (ಕುದುರೆಯ) ಸವಾರನನ್ನೂ ಸಮುದ್ರದಲ್ಲಿ ದೊಬ್ಬಿದ್ದಾನೆ.
- Judges 5:1 ನ್ಯಾಯಸ್ಥಾಪಕರು 5:1ಆ ದಿನದಲ್ಲಿ ದೆಬೋರಳೂ ಅಬೀನೋ ವಮನ ಮಗನಾದ ಬಾರಾಕನೂ ಹಾಡಿ ದ್ದೇನಂದರೆ--
- Isaiah 12:1–6 ಯೆಶಾಯ 12:1–6ಆ ದಿನದಲ್ಲಿ ನೀನು ಹೇಳುವದೇನಂದರೆ --ಓ ಕರ್ತನೇ, ನಿನ್ನನ್ನು ಸ್ತುತಿಸು ವೆನು; ನನ್ನ ಮೇಲೆ ನೀನು ಕೋಪಿಸಿದ್ದಾಗ್ಯೂ ನಿನ್ನ ಕೋಪದಿಂದ ತಿರುಗಿಕೊಂಡು ನನ್ನನ್ನು ಆದರಿಸಿದ್ದೀ. ಇಗೋ, ದೇವರೇ ನನ್ನ ರಕ್ಷಣೆಯು; ನಾನು ಭರ ವಸವಿಡುವೆನು ಮತ್ತು ಭಯಪಡೆನು; ಕರ್ತನಾದ ಯೆಹೋವನೇ ನನ್ನ ಬಲವೂ ಕೀರ್ತನೆಯೂ ಆತನೇ ನನಗೆ ರಕ್ಷಣೆಯೂ ಆಗಿದ್ದಾನೆ. ಆದದರಿಂದಲೇ ರಕ್ಷಣೆಯೆಂಬ ಬಾವಿಗಳಿಂದ ಆನಂದದೊಡನೆ ನೀವು ನೀರನ್ನು ಸೇದುವಿರಿ. ನೀವು--ಕರ್ತನನ್ನು ಕೊಂಡಾ ಡಿರಿ; ಜನರ ಮಧ್ಯದಲ್ಲಿ ಆತನ ಹೆಸರನ್ನೆತ್ತಿ ಕ್ರಿಯೆಗ ಳನ್ನು ಪ್ರಕಟಿಸಿರಿ. ಆತನ ನಾಮವನ್ನು ಉನ್ನತೋನ್ನತ ವೆಂದು ಎತ್ತಿ ಹೇಳಿರಿ ಎಂದು ಆ ದಿನದಲ್ಲಿ ಹೇಳುವಿರಿ. ಕರ್ತನಿಗೆ ಹಾಡಿರಿ, ಆತನು ಶ್ರೇಷ್ಠವಾದ ಕಾರ್ಯಗ ಳನ್ನು ಮಾಡಿದ್ದಾನೆ; ಇದು ಭೂಮಂಡಲದಲ್ಲೆಲ್ಲಾ ತಿಳಿದಿರಲಿ.ಚೀಯೋನಿನ ನಿವಾಸಿಗಳೇ, ಆರ್ಭಟಿಸಿ ಹರ್ಷಧ್ವನಿಯನ್ನು ಗೈಯಿರಿ; ಇಸ್ರಾಯೇಲಿನ ಪರಿಶು ದ್ಧನು ನಿನ್ನ ಮಧ್ಯದಲ್ಲಿ ಮಹತ್ವವುಳ್ಳವನಾಗಿದ್ದಾನೆ. ಚೀಯೋನಿನ ನಿವಾಸಿಗಳೇ, ಆರ್ಭಟಿಸಿ ಹರ್ಷಧ್ವನಿಯನ್ನು ಗೈಯಿರಿ; ಇಸ್ರಾಯೇಲಿನ ಪರಿಶು ದ್ಧನು ನಿನ್ನ ಮಧ್ಯದಲ್ಲಿ ಮಹತ್ವವುಳ್ಳವನಾಗಿದ್ದಾನೆ.
- Psalm 103:1–6 ಕೀರ್ತನೆಗಳು 103:1–6ಓ ನನ್ನ ಮನವೇ, ಕರ್ತನನ್ನೂ ನನ್ನ ಎಲ್ಲಾ ಅಂತರಂಗವೇ, ಆತನ ಪರಿಶುದ್ಧವಾದ ಹೆಸರನ್ನೂ ಸ್ತುತಿಸು. ಓ ನನ್ನ ಮನವೇ, ಕರ್ತನನ್ನು ಸ್ತುತಿಸು. ಆತನ ಉಪಕಾರಗಳಲ್ಲಿ ಒಂದನ್ನೂ ಮರೆತುಬಿಡಬೇಡ. ಆತನು ನಿನ್ನ ಅಪ ರಾಧಗಳನ್ನೆಲ್ಲಾ ಮನ್ನಿಸಿ ನಿನ್ನ ರೋಗಗಳನ್ನೆಲ್ಲಾ ಸ್ವಸ್ಥ ಮಾಡಿ ನಿನ್ನ ಜೀವವನ್ನು ನಾಶದೊಳಗಿಂದ ವಿಮೋ ಚಿಸಿ ಪ್ರೀತಿ ಕೃಪೆಯನ್ನೂ ಅಂತಃಕರಣಗಳನ್ನೂ ನಿನಗೆ ಕಿರೀಟವಾಗಿ ಇಟ್ಟು ನಿನ್ನ ಯೌವನವು ಹದ್ದಿನಂತೆ ಹೊಸದಾಗುವ ಹಾಗೆ ನಿನ್ನ ಬಾಯಿಯನ್ನು ಒಳ್ಳೇದ ರಿಂದ ತೃಪ್ತಿಪಡಿಸುತ್ತಾನೆ. ಕುಗ್ಗಿಸಲ್ಪಡುವವರೆಲ್ಲರಿಗೆ ಕರ್ತನು ನೀತಿಯನ್ನೂ ನ್ಯಾಯವನ್ನೂ ನಡಿಸುತ್ತಾನೆ.
- Psalm 116:1–19 ಕೀರ್ತನೆಗಳು 116:1–19ನಾನು ಕರ್ತನನ್ನು ಪ್ರೀತಿ ಮಾಡುತ್ತೇನೆ.ಆತನು ನನ್ನ ಸ್ವರವನ್ನೂ ವಿಜ್ಞಾಪನೆಯನ್ನೂ ಕೇಳಿದ್ದಾನೆ. ಆತನು ನನ್ನ ಮೊರೆಯನ್ನು ಆಲಿಸಿದ್ದರಿಂದ ನಾನು ಜೀವದಿಂದಿರುವ ವರೆಗೂ ಆತನನ್ನೇ ಬೇಡುವೆನು. ಮರಣದ ದುಃಖ ಗಳು ನನ್ನನ್ನು ಆವರಿಸಿಕೊಂಡವು; ನರಕದ ಬಾಧೆ ಗಳೂ ಇಕ್ಕಟ್ಟೂ ದುಃಖವೂ ನನ್ನನ್ನು ಹಿಡಿದವು. ಆಗ ನಾನು ಅಯ್ಯೋ, ಕರ್ತನೇ, ನನ್ನ ಪ್ರಾಣವನ್ನು ತಪ್ಪಿಸು ಎಂದು ಕರ್ತನ ಹೆಸರಿನಲ್ಲಿ ಬೇಡಿದೆನು. ಕರ್ತನು ಕೃಪೆಯೂ ನೀತಿಯೂ ಉಳ್ಳವನು; ಹೌದು, ನಮ್ಮ ದೇವರು ಅಂತಃಕರಣವುಳ್ಳವನು. ಕರ್ತನು ಸಾಧು ಜನರನ್ನು ಕಾಪಾಡುತ್ತಾನೆ; ನಾನು ಕುಗ್ಗಿದವನಾದಾಗ ನನಗೆ ಸಹಾಯಮಾಡಿದನು. ನನ್ನ ಮನವೇ, ನಿನ್ನ ವಿಶ್ರಾಂತಿಗೆ ತಿರುಗಿಕೋ; ಕರ್ತನು ನಿನಗೆ ಉಪಕಾರ ಮಾಡಿದ್ದಾನೆ. ನೀನು ನನ್ನ ಪ್ರಾಣ ವನ್ನು ಮರಣಕ್ಕೂ ಕಣ್ಣುಗಳನ್ನು ಕಣ್ಣೀರಿಗೂ ನನ್ನ ಪಾದಗಳು ಬೀಳದಂತೆಯೂ ತಪ್ಪಿಸಿದ್ದೀ. ಜೀವಿತರ ದೇಶದಲ್ಲಿ ಕರ್ತನ ಮುಂದೆ ನಡೆದುಕೊಳ್ಳುವೆನು. ನಾನು ನಂಬಿದೆನು; ಆದದರಿಂದ ಮಾತಾಡಿದೆನು; ನಾನು ಬಹಳವಾಗಿ ಕುಗ್ಗಿಹೋದೆನು. ಮನುಷ್ಯ ರೆಲ್ಲರು ಸುಳ್ಳುಗಾರರೆಂದು ನಾನು ಆತುರತೆಯಿಂದ ಹೇಳಿದೆನು. ಆತನು ನನಗೆ ಮಾಡಿದ ಎಲ್ಲಾ ಉಪಕಾರಗಳಿಗೋಸ್ಕರ ನಾನು ಕರ್ತನಿಗೆ ಏನು ಬದಲು ಮಾಡಲಿ? ನಾನು ರಕ್ಷಣೆಯ ಪಾತ್ರೆಯನ್ನು ತಕ್ಕೊಂಡು, ಕರ್ತನ ಹೆಸರನ್ನು ಕರೆಯುವೆನು. ನನ್ನ ಪ್ರಮಾಣಗಳನ್ನು ಆತನ ಜನರೆಲ್ಲರ ಮುಂದೆಯೇ ಕರ್ತನಿಗೆ ಸಲ್ಲಿಸುವೆನು. ಕರ್ತನ ದೃಷ್ಟಿಯಲ್ಲಿ ಆತನ ಪರಿಶುದ್ಧರ ಮರಣವು ಅಮೂಲ್ಯವಾಗಿದೆ. ಓ ಕರ್ತನೇ, ನಿಜವಾಗಿ ನಾನು ನಿನ್ನ ಸೇವಕನು. ಹೌದು, ನಾನು ನಿನ್ನ ಸೇವಕನು ನಿನ್ನ ದಾಸಿಯ ಮಗನು; ನೀನು ನನ್ನ ಬಂಧನಗಳನ್ನು ಬಿಚ್ಚಿದ್ದೀ. ನಾನು ನಿನಗೆ ಸ್ತೋತ್ರದ ಬಲಿಯನ್ನು ಅರ್ಪಿಸುವೆನು; ಕರ್ತನ ಹೆಸರನ್ನು ಕರೆಯುವೆನು. ಓ ಯೆರೂಸಲೇಮೇ, ನನ್ನ ಪ್ರಮಾಣಗಳನ್ನು ಆತನ ಜನರೆಲ್ಲರ ಮುಂದೆಯೇ,ಅಂದರೆ ಕರ್ತನ ಆಲ ಯದ ಅಂಗಳಗಳ ಮಧ್ಯದಲ್ಲಿಯೇ ನಿನಗೆ ಸಲ್ಲಿಸು ವೆನು. ಕರ್ತನನ್ನು ಸ್ತುತಿಸಿರಿ. ಅಂದರೆ ಕರ್ತನ ಆಲ ಯದ ಅಂಗಳಗಳ ಮಧ್ಯದಲ್ಲಿಯೇ ನಿನಗೆ ಸಲ್ಲಿಸು ವೆನು. ಕರ್ತನನ್ನು ಸ್ತುತಿಸಿರಿ.
- 2 Timothy 4:18 2 ತಿಮೊಥೆಯನಿಗೆ 4:18ನನ್ನನ್ನು ಪ್ರತಿಯೊಂದು ದುಷ್ಕೃತ್ಯದಿಂದ ಕರ್ತನು ತಪ್ಪಿಸಿ ತನ್ನ ಪರಲೋಕರಾಜ್ಯಕ್ಕೆ ನನ್ನನ್ನು ಕಾಪಾಡು ವನು. ಯುಗಯುಗಾಂತರಗಳಲ್ಲಿಯೂ ಆತನಿಗೆ ಮಹಿಮೆ. ಆಮೆನ್.
- Revelation 7:9–17 ಪ್ರಕಟನೆ 7:9–17ಇದಾದ ಮೇಲೆ ಇಗೋ, ನಾನು ನೋಡಲಾಗಿ ಸಮಸ್ತ ಜನಾಂಗ ಕುಲ ಪ್ರಜೆ ಭಾಷೆಗಳೊಳಗಿಂದ ಯಾರೂ ಎಣಿಸಲಾಗದಂತ ಮಹಾ ಸಮೂಹವು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡವರಾಗಿ ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದುಕೊಂಡು ಸಿಂಹಾಸನದ ಮುಂದೆಯೂ ಕುರಿಮರಿಯಾದಾತನ ಮುಂದೆಯೂ ಅವರು--ರಕ್ಷಣೆಯು ಸಿಂಹಾಸನದ ಮೇಲೆ ಕೂತಿರುವ ನಮ್ಮ ದೇವರಿಗೂ ಕುರಿಮರಿಯಾದಾತನಿಗೂ ಸೇರಿದ್ದು ಎಂದು ಮಹಾ ಶಬ್ದದಿಂದ ಕೂಗಿದರು. ಸಿಂಹಾಸನದ, ಹಿರಿಯರ ಮತ್ತು ನಾಲ್ಕು ಜೀವಿಗಳ ಸುತ್ತಲೂ ನಿಂತುಕೊಂಡಿದ್ದ ದೂತರೆಲ್ಲರೂ ಸಿಂಹಾಸನದ ಮುಂದೆ ಬೋರಲ ಬಿದ್ದು ದೇವರನ್ನು ಆರಾಧಿಸುತ್ತಾ.-- ಆಮೆನ್. ನಮ್ಮ ದೇವರಿಗೆ ಸ್ತೋತ್ರವೂ ಪ್ರಭಾವವೂ ಜ್ಞಾನವೂ ಕೃತಜ್ಞತಾಸ್ತುತಿಯೂ ಮಾನವೂ ಬಲವೂ ಸಾಮ ರ್ಥ್ಯವೂ ಯುಗಯುಗಾಂತರಗಳಲ್ಲಿ ಇರಲಿ ಎಂದು ಹೇಳಿದರು. ಆಮೆನ್. ಆಗ ಹಿರಿಯರಲ್ಲಿ ಒಬ್ಬನು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡಿರುವವರಾದ ಇವರು ಯಾರು? ಇವರು ಎಲ್ಲಿಂದ ಬಂದವರು ಎಂದು ನನ್ನನ್ನು ಕೇಳಿದನು. ಅದಕ್ಕೆ ನಾನು ಅಯ್ಯಾ, ನೀನೇ ಬಲ್ಲೆ ಅಂದೆನು. ಅವನು ನನಗೆ--ಇವರು ಮಹಾಸಂಕಟದೊಳಗಿಂದ ಬಂದವರು; ಕುರಿಮರಿಯಾ ದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಬೆಳ್ಳಗೆ ಮಾಡಿದ್ದಾರೆ. ಈ ಕಾರಣದಿಂದ ಇವರು ದೇವರ ಸಿಂಹಾಸನದ ಮುಂದೆ ಇದ್ದುಕೊಂಡು ಆತನ ಆಲಯದಲ್ಲಿ ಹಗಲಿರುಳು ಆತನ ಸೇವೆ ಮಾಡುವವರಾ ಗಿದ್ದಾರೆ; ಸಿಂಹಾಸನದ ಮೇಲೆ ಕೂತಿರುವಾತನು ಅವರ ಮಧ್ಯದಲ್ಲಿ ವಾಸಿಸುವನು. ಇನ್ನು ಮೇಲೆ ಅವರಿಗೆ ಹಸಿವೆಯಾಗಲಿ ಬಾಯಾರಿಕೆಯಾಗಲಿ ಆಗುವದೇ ಇಲ್ಲ; ಇದಲ್ಲದೆ ಅವರಿಗೆ ಬಿಸಿಲಾದರೂ ಯಾವ ಝಳವಾದರೂ ಬಡಿಯುವದಿಲ್ಲ.ಸಿಂಹಾಸನದ ಮಧ್ಯದಲ್ಲಿರುವ ಕುರಿಮರಿಯಾದಾತನು ಅವರನ್ನು ಮೇಯಿಸಿ ಜೀವ ಜಲದ ಒರತೆಗಳ ಬಳಿಗೆ ನಡಿಸುತ್ತಾನೆ; ಮತ್ತು ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು ಎಂದು ಹೇಳಿದನು. ಸಿಂಹಾಸನದ ಮಧ್ಯದಲ್ಲಿರುವ ಕುರಿಮರಿಯಾದಾತನು ಅವರನ್ನು ಮೇಯಿಸಿ ಜೀವ ಜಲದ ಒರತೆಗಳ ಬಳಿಗೆ ನಡಿಸುತ್ತಾನೆ; ಮತ್ತು ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು ಎಂದು ಹೇಳಿದನು.
- Psalm 34:19 ಕೀರ್ತನೆಗಳು 34:19ನೀತಿವಂತನಿಗೆ ಬರುವ ಕೇಡುಗಳು ಬಹಳವಾಗಿವೆ; ಆದರೆ ಅವೆಲ್ಲವುಗಳಿಂದ ಕರ್ತನು ಅವನನ್ನು ಬಿಡಿಸುತ್ತಾನೆ.
- 1 Samuel 27:1 1 ಸಮುವೇಲನು 27:1ದಾವೀದನು ತನ್ನ ಹೃದಯದಲ್ಲಿ--ನಾನು ಎಂದಿಗಾದರೂ ಒಂದು ದಿನ ಸೌಲನ ಕೈಯಿಂದ ಮಡಿದುಹೋಗುತ್ತೇನೆ. ನಾನು ತ್ವರೆಯಾಗಿ ಫಿಲಿಷ್ಟಿಯರ ದೇಶಕ್ಕೆ ತಪ್ಪಿಸಿಕೊಂಡು ಓಡಿಹೋಗುವ ದಕ್ಕಿಂತ ನನಗೆ ಉತ್ತಮವಾದ ಕಾರ್ಯವಿಲ್ಲ. ಸೌಲನು ನನ್ನನ್ನು ಇಸ್ರಾಯೇಲಿನಲ್ಲಿ ಇನ್ನು ಹುಡುಕಲು ದಿಕ್ಕು ಕಾಣದೆ ಹೋಗುವನು. ಈ ಪ್ರಕಾರ ನಾನು ಅವನ ಕೈಯಿಂದ ತಪ್ಪಿಸಿಕೊಂಡು ಹೋಗುವೆನು ಅಂದು ಕೊಂಡನು.
- 1 Samuel 24:15 1 ಸಮುವೇಲನು 24:15ಕರ್ತನು ನ್ಯಾಯಾಧಿಪತಿಯಾಗಿದ್ದು ನನಗೂ ನಿನಗೂ ನ್ಯಾಯತೀರಿಸಿ ನನ್ನ ವ್ಯಾಜ್ಯವನ್ನು ನೋಡಿ ವ್ಯಾಜ್ಯವಾಡಿ ನನ್ನನ್ನು ನಿನ್ನ ಕೈಗೆ ತಪ್ಪಿಸಿಬಿಡಲಿ ಅಂದನು.
- Psalm 18:1–50 ಕೀರ್ತನೆಗಳು 18:1–50ನನ್ನ ಬಲವಾಗಿರುವ ಓ ಕರ್ತನೇ, ನಾನು ನಿನ್ನನ್ನು ಪ್ರೀತಿಸುತ್ತೇನೆ. ಕರ್ತನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನನ್ನು ತಪ್ಪಿಸು ವಾತನೂ ನನ್ನ ದೇವರೂ ನಾನು ಭರವಸವಿಡುವ ನನ್ನ ಬಲವೂ ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ ನನ್ನ ಉನ್ನತವಾದ ದುರ್ಗವೂ ಆಗಿದ್ದಾನೆ. ಸ್ತುತಿಸತಕ್ಕ ಕರ್ತನಿಗೆ ನಾನು ಮೊರೆಯಿಡುತ್ತೇನೆ; ಹೀಗೆ ನಾನು ನನ್ನ ಶತ್ರುಗಳೊಳಗಿಂದ ರಕ್ಷಿಸಲ್ಪಡುತ್ತೇನೆ. ಮರಣದ ದುಃಖಗಳು ನನ್ನನ್ನು ಆವರಿಸಿಕೊಂಡವು, ಭಕ್ತಿಹೀನರ ಪ್ರವಾಹಗಳು ನನ್ನನ್ನು ಹೆದರಿಸಿದವು. ಪಾತಾಳದ ದುಃಖಗಳು ನನ್ನನ್ನು ಸುತ್ತಿಕೊಂಡವು; ಮರಣದ ನೇಣುಗಳು ನನ್ನನ್ನು ಸುತ್ತಿದವು. ನನ್ನ ಇಕ್ಕಟ್ಟಿನಲ್ಲಿ ಕರ್ತನನ್ನು ಬೇಡಿದೆನು; ನನ್ನ ದೇವರಿಗೆ ಮೊರೆಯಿಟ್ಟೆನು; ಆತನು ತನ್ನ ಮಂದಿರದೊಳಗಿಂದ ನನ್ನ ಸ್ವರವನ್ನು ಕೇಳಿದನು; ನನ್ನ ಮೊರೆಯು ಆತನ ಸನ್ನಿಧಿಗೂ ಆತನ ಕಿವಿಗಳಲ್ಲಿಯೂ ಮುಟ್ಟಿತು. ಆಗ ಆತನು ಕೋಪಗೊಂಡಿದ್ದನು. ಭೂಮಿಯು ಕದಲಿ ಕಂಪಿಸಿತು; ಪರ್ವತಗಳ ಅಸ್ತಿವಾರಗಳು ಸಹ ನಡುಗಿ ಕದಲಿದವು; ಆತನ ಮೂಗಿನಿಂದ ಹೊಗೆ ಎದ್ದು ಆತನ ಬಾಯಿಯೊಳಗಿಂದ ಬೆಂಕಿ ದಹಿಸಿತು; ಕೆಂಡಗಳು ಅದರಿಂದ ಉರಿದವು. ಆತನು ಆಕಾಶ ಗಳನ್ನು ಬೊಗ್ಗಿಸಿ ಇಳಿದನು; ಆತನ ಪಾದಗಳ ಕೆಳಗೆ ಕಾರ್ಗತ್ತಲು ಇತ್ತು. ಆತನು ಕೆರೂಬಿನ ಮೇಲೆ ಕೂತು ಹಾರಿದನು; ಹೌದು, ಗಾಳಿಯ ರೆಕ್ಕೆಗಳ ಮೇಲೆ ಹಾರಿದನು. ಕತ್ತಲನ್ನು ತನಗೆ ಮರೆಯ ಸ್ಥಳವಾಗಿ ಯೂ ಕತ್ತಲಿನ ನೀರುಗಳನ್ನು ಆಕಾಶದ ಮಂದವಾದ ಮೋಡಗಳನ್ನು ತನ್ನ ಸುತ್ತಲು ಡೇರೆಯಾಗಿಯೂ ಮಾಡಿ ದನು. ಆತನ ಮುಂದಿದ್ದ ಪ್ರಕಾಶದಿಂದ ಆತನ ಮಂದವಾದ ಮೋಡಗಳೂ ಕಲ್ಮಳೆಗಳೂ ಉರಿಗೆಂಡ ಗಳೂ ಹಾದು ಹೋದವು. ಕರ್ತನು ಆಕಾಶಗಳಲ್ಲಿ ಗುಡುಗಿದನು; ಮಹೋನ್ನತನು ಕಲ್ಮಳೆಯಿಂದಲೂ ಉರಿಗೆಂಡಗಳಿಂದಲೂ ತನ್ನ ಶಬ್ದವನ್ನು ಕೊಟ್ಟನು ಹೌದು, ತನ್ನ ಬಾಣಗಳನ್ನು ಕಳುಹಿಸಿ ಅವರನ್ನು ಚದುರಿಸಿದನು; ಮಿಂಚುಗಳನ್ನೆಸೆದು ಅವರನ್ನು ಗಲಿಬಿಲಿ ಮಾಡಿದನು. ಓ ಕರ್ತನೇ, ನಿನ್ನ ಗದರಿಕೆಯಿಂದಲೂ ನಿನ್ನ ಮೂಗಿನ ಶ್ವಾಸದ ಗಾಳಿಯಿಂದಲೂ ನೀರಿನ ಕಾಲುವೆಗಳ ನೆಲೆಯು ಕಾಣಬಂದು ಭೂಮಿಯ ಅಸ್ತಿವಾರಗಳು ಬೈಲಾದವು. ಆತನು ಮೇಲಿನಿಂದ ಕಳುಹಿಸಿ ನನ್ನನ್ನು ಹಿಡಿದು ಬಹಳ ನೀರುಗಳೊಳಗಿಂದ ಎಳೆದನು. ಆತನು ನನ್ನನ್ನು ಬಲವುಳ್ಳ ಶತ್ರುವಿ ನಿಂದಲೂ ಹಗೆಮಾಡಿದವನಿಂದಲೂ ಬಿಡಿಸಿದನು; ಅವರು ನನಗಿಂತ ಬಲಿಷ್ಠರಾಗಿದ್ದರು. ನನ್ನ ಆಪ ತ್ತಿನ ದಿವಸದಲ್ಲಿ ನನ್ನನ್ನು ಅವರು ಸುತ್ತಿಕೊಂಡರು; ಆದರೆ ಕರ್ತನು ನನ್ನ ಆಧಾರನಾದನು. ಆತನು ನನ್ನನ್ನು ವಿಶಾಲಸ್ಥಳಕ್ಕೆ ತಂದು ನನ್ನನ್ನು ತಪ್ಪಿಸಿಬಿಟ್ಟನು. ಯಾಕಂದರೆ ಆತನು ನನ್ನಲ್ಲಿ ಸಂತೋಷಪಟ್ಟನು. ಕರ್ತನು ನನ್ನ ನೀತಿಯ ಪ್ರಕಾರ ನನಗೆ ಪ್ರತಿಫಲ ಕೊಟ್ಟನು. ನನ್ನ ಕೈಗಳ ಶುದ್ಧತ್ವದ ಪ್ರಕಾರ ನನಗೆ ಬದಲು ಕೊಟ್ಟನು. ನಾನು ಕರ್ತನ ಮಾರ್ಗಗಳನ್ನು ಕೈಕೊಂಡು ನನ್ನ ದೇವರನ್ನು ಬಿಟ್ಟುಹೋಗುವ ದುಷ್ಟತ್ವವನ್ನು ನಾನು ಮಾಡಲಿಲ್ಲ. ಆತನ ತೀರ್ಪುಗಳೆಲ್ಲಾ ನನ್ನ ಮುಂದೆ ಇದ್ದವು; ಆತನ ನೇಮಗಳನ್ನು ನನ್ನಿಂದ ತೊಲಗಿಸ ಲಿಲ್ಲ. ಆತನ ಮುಂದೆ ಸಂಪೂರ್ಣನಾಗಿದ್ದು ನನ್ನ ಅಕ್ರಮದಿಂದ ನನ್ನನ್ನು ಕಾಪಾಡಿಕೊಂಡೆನು. ಆದದ ರಿಂದ ಕರ್ತನು ನನ್ನ ನೀತಿಯ ಪ್ರಕಾರವೂ ಆತನ ಕಣ್ಣೆದುರಿನಲ್ಲಿ ನನ್ನ ಕೈಗಳ ಶುದ್ಧತ್ವದ ಪ್ರಕಾರವೂ ನನಗೆ ಬದಲು ಕೊಟ್ಟನು. ನೀನು ಕರುಣೆಯು ಳ್ಳವನಿಗೆ ಕರುಣೆಯನ್ನು ತೋರಿಸುವಿ; ಸಂಪೂರ್ಣ ನಾದ ಮನುಷ್ಯನಿಗೆ ಸಂಪೂರ್ಣನಾಗಿರುವಿ. ಶುದ್ಧ ನಿಗೆ ಶುದ್ಧನಾಗಿರುವಿ; ಮೂರ್ಖನಿಗೆ ಮೂರ್ಖನಾಗಿ ರುವಿ. ಕುಂದಿಸಿದ ಜನರನ್ನು ನೀನು ರಕ್ಷಿಸುವಿ; ಆದರೆ ನೀನು ಗರ್ವಿಷ್ಟರ ಕಣ್ಣುಗಳನ್ನು ತಗ್ಗಿಸುವಿ. ನೀನು ನನ್ನ ದೀಪವನ್ನು ಬೆಳಗಿಸುವಿ; ನನ್ನ ದೇವ ರಾದ ಕರ್ತನು ನನ್ನ ಕತ್ತಲೆಯನ್ನು ಪ್ರಕಾಶಿಸುವಂತೆ ಮಾಡುವನು. ನಿನ್ನಿಂದ ನಾನು ದಂಡಿನ ಮೇಲೆ ಬಿದ್ದೆನು; ನನ್ನ ದೇವರಿಂದ ಗೋಡೆ ನೆಗೆದೆನು. ದೇವರ ಮಾರ್ಗವಾದರೋ ಸಂಪೂರ್ಣವಾದದ್ದು; ಕರ್ತನ ವಾಕ್ಯವು ಪುಟಕ್ಕೆ ಹಾಕಿದ್ದಾಗಿದೆ; ಆತನು ತನ್ನಲ್ಲಿ ಭರವಸವಿಟ್ಟವರೆಲ್ಲರಿಗೆ ಗುರಾಣಿಯಾಗಿದ್ದಾನೆ. ಕರ್ತನಲ್ಲದೆ ದೇವರು ಯಾರು? ಇಲ್ಲವೆ ನಮ್ಮ ದೇವರ ಹೊರತು ಬಂಡೆಯು ಯಾರು? ಪರಾ ಕ್ರಮದಿಂದ ನನ್ನ ನಡುವನ್ನು ಕಟ್ಟಿ ನನ್ನ ಮಾರ್ಗವನ್ನು ಸಂಪೂರ್ಣ ಮಾಡುವ ದೇವರು ಆತನೇ. ನನ್ನ ಕಾಲುಗಳನ್ನು ಜಿಂಕೆಗಳ ಕಾಲುಗಳಂತೆ ಮಾಡಿ ನನ್ನ ಉನ್ನತ ಸ್ಥಳಗಳ ಮೆಲೆ ನನ್ನನ್ನು ನಿಲ್ಲಿಸುತ್ತಾನೆ. ಆತನು ನನ್ನ ಕೈಗಳಿಗೆ ಯುದ್ಧವನ್ನು ಕಲಿಸುತ್ತಾನೆ; ಹೀಗೆ ನನ್ನ ತೋಳುಗಳು ಉಕ್ಕಿನ ಬಿಲ್ಲನ್ನು ಮುರಿಯುತ್ತವೆ. ನಿನ್ನ ರಕ್ಷಣೆಯ ಗುರಾಣಿಯನ್ನು ಸಹ ನನಗೆ ನೀನು ಕೊಟ್ಟಿದ್ದೀ; ನಿನ್ನ ಬಲಗೈ ನನ್ನನ್ನು ಹಿಡಿದಿದೆ. ನಿನ್ನ ಸಾತ್ವಿಕತ್ವವು ನನ್ನನ್ನು ಹೆಚ್ಚಿಸಿಯದೆ. ನನ್ನ ಹೆಜ್ಜೆಗ ಳನ್ನು ವಿಶಾಲಮಾಡಿ ನನ್ನ ಪಾದಗಳನ್ನು ಎಡವದಂತೆ ಮಾಡಿದ್ದೀ. ನನ್ನ ಶತ್ರುಗಳನ್ನು ಹಿಂದಟ್ಟಿ ಹಿಡಿದಿ ದ್ದೇನೆ; ಅವರನ್ನು ಸಂಹರಿಸಿಬಿಡುವ ವರೆಗೆ ನಾನು ಹಿಂತಿರುಗಲಿಲ್ಲ. ಅವರು ಏಳಲಾರದ ಹಾಗೆ ಅವ ರಿಗೆ ಗಾಯ ಮಾಡಿದೆನು; ಅವರು ನನ್ನ ಪಾದಗಳ ಕೆಳಗೆ ಬಿದ್ದಿದ್ದಾರೆ. ನೀನು ಯುದ್ಧಕಾಗ್ಕಿ ಪರಾ ಕ್ರಮದಿಂದ ನನ್ನ ನಡುವನ್ನು ಕಟ್ಟಿ ನನ್ನ ಎದುರಾಳಿಗ ಳನ್ನು ಅಧೀನ ಮಾಡಿದಿ. ನನ್ನ ಹಗೆಯವರನ್ನು ನಾಶಮಾಡುವಂತೆ ಶತ್ರುಗಳ ಕುತ್ತಿಗೆಗಳನ್ನು ನೀನು ನನಗೆ ಕೊಟ್ಟಿದ್ದೀ. ಅವರು ಮೊರೆಯಿಟ್ಟರು, ಆದರೆ ರಕ್ಷಿಸುವವರು ಯಾರೂ ಇದ್ದಿಲ್ಲ. ಕರ್ತನಿಗೂ ಮೊರೆ ಇಟ್ಟರು, ಆದರೆ ಅವರಿಗೆ ಆತನು ಉತ್ತರ ಕೊಡ ಲಿಲ್ಲ. ಗಾಳಿಯ ಮುಂದಿನ ಧೂಳಿನಹಾಗೆ ಅವ ರನ್ನು ಹೊಡೆದು ಪುಡಿಪುಡಿ ಮಾಡಿದನು; ಬೀದಿಯ ಕೆಸರಿನಹಾಗೆ ಅವರನ್ನು ಹೊರಗೆ ಚೆಲ್ಲಿಬಿಟ್ಟನು. ನೀನು ಜನರ ವಿವಾದಗಳಿಂದ ನನ್ನನ್ನು ತಪ್ಪಿಸಿದ್ದೀ; ಅನ್ಯ ಜನಾಂಗಗಳ ತಲೆಯಾಗಿ ನನ್ನನ್ನು ಮಾಡಿದ್ದೀ; ನಾನ ರಿಯದ ಜನರು ನನ್ನನ್ನು ಸೇವಿಸುವರು. ನನ್ನ ಮಾತನ್ನು ಕೇಳಿದೊಡನೆ ಅವರು ನನಗೆ ವಿಧೇಯ ರಾಗುವರು. ಪರಕೀಯರು ನನಗೆ ಅಧೀನರಾ ಗುವರು ಮತ್ತು ಅವರು ಬಾಡಿಹೋಗುವರು; ತಮ್ಮ ದುರ್ಗಗಳೊಳಗಿಂದ ನಡುಗುತ್ತಾ ಬರುವರು. ಕರ್ತನು ಜೀವಿತನಾಗಿದ್ದಾನೆ; ನನ್ನ ಬಂಡೆ ಯಾದಾತನು ಸ್ತುತಿಹೊಂದಲಿ; ನನ್ನ ರಕ್ಷಣೆಯ ದೇವರು ಘನಹೊಂದಲಿ. ನನಗೋಸ್ಕರ ಮುಯ್ಯಿಗೆ ಮುಯ್ಯಿತೀರಿಸುವಾತನೂ ಜನರನ್ನು ನನ್ನ ಕೆಳಗೆ ಅಧೀನಮಾಡುವಾತನೂ ದೇವರು ತಾನೇ. ನನ್ನ ಶತ್ರುಗಳಿಂದ ನನ್ನನ್ನು ತಪ್ಪಿಸುವನು; ಹೌದು, ನೀನು ನನ್ನ ಎದುರಾಳಿಗಳಿಂದ ತಪ್ಪಿಸಿ ನನ್ನನ್ನು ಮೇಲೆ ಎತ್ತುತ್ತೀ; ಬಲಾತ್ಕಾರ ಮಾಡುವವನಿಂದ ನನ್ನನ್ನು ಬಿಡಿಸಿದ್ದೀ. ಆದ್ದರಿಂದ ಓ ಕರ್ತನೇ, ಅನ್ಯಜನಾಂಗ ಗಳಲ್ಲಿ ನಿನಗೆ ಉಪಕಾರಸ್ತುತಿ ಮಾಡುತ್ತೇನೆ. ನಿನ್ನನ್ನು ಕೊಂಡಾಡಿ ನಿನ್ನ ಹೆಸರನ್ನು ಕೀರ್ತಿಸುವೆನು.ಆತನು ತನ್ನ ಅರಸನಿಗೆ ದೊಡ್ಡ ಬಿಡುಗಡೆಯನ್ನು ಕೊಟ್ಟು ತನ್ನ ಅಭಿಷಕ್ತನಾದ ದಾವೀದನಿಗೂ ಅವನ ಸಂತತಿಗೂ ಕೃಪೆಯನ್ನು ಎಂದೆಂದಿಗೂ ತೋರಿಸುತ್ತಾನೆ. ಆತನು ತನ್ನ ಅರಸನಿಗೆ ದೊಡ್ಡ ಬಿಡುಗಡೆಯನ್ನು ಕೊಟ್ಟು ತನ್ನ ಅಭಿಷಕ್ತನಾದ ದಾವೀದನಿಗೂ ಅವನ ಸಂತತಿಗೂ ಕೃಪೆಯನ್ನು ಎಂದೆಂದಿಗೂ ತೋರಿಸುತ್ತಾನೆ.
- Psalm 50:14 ಕೀರ್ತನೆಗಳು 50:14ದೇವರಿಗೆ ಸ್ತೋತ್ರವನ್ನು (ಬಲಿ ಯಾಗಿ) ಅರ್ಪಿಸು; ಮಹೋನ್ನತನಿಗೆ ನಿನ್ನ ಪ್ರಮಾಣ ಗಳನ್ನು ಸಲ್ಲಿಸು.