Psalms · chapter 18 · verse 1
Psalm 18:1 in Kannada
ನನ್ನ ಬಲವಾಗಿರುವ ಓ ಕರ್ತನೇ, ನಾನು ನಿನ್ನನ್ನು ಪ್ರೀತಿಸುತ್ತೇನೆ.
Nanna balavaagiruva o kartane, naanu ninnannu preetisuttene.
Psalm 18:1 in English
- King James Version (KJV)
- To the chief Musician, [A Psalm] of David, the servant of the LORD, who spake unto the LORD the words of this song in the day [that] the LORD delivered him from the hand of all his enemies, and from the hand of Saul: And he said, I will love thee, O LORD, my strength.
- World English Bible (WEB)
- For the Chief Musician. By David the servant of the LORD, who spoke to the LORD the words of this song in the day that the LORD delivered him from the hand of all his enemies, and from the hand of Saul. He said, I love you, LORD, my strength.
- American Standard Version (ASV)
- For the Chief Musician. [A Psalm] of David the servant of Jehovah, who spake unto Jehovah the words of this song in the day that Jehovah delivered him from the hand of all his enemies, and from the hand of Saul: and he said, I love thee, O Jehovah, my strength.
- Bible in Basic English (BBE)
- To the chief music-maker. Of the servant of the Lord, of David, who said the words of this song to the Lord on the day when the Lord made him free from the hand of all his haters, and from the hand of Saul; and he said, I will give you my love, O Lord, my strength.
- Darby Translation (DBY)
- To the chief Musician. [A Psalm] of David, the servant of Jehovah, who spoke to Jehovah the words of this song in the day that Jehovah had delivered him out of the hand of all his enemies and out of the hand of Saul. And he said, I will love thee, O Jehovah, my strength.
- Webster's Bible (WBS)
- To the chief Musician, [A Psalm] of David, the servant of the LORD, who spoke to the LORD the words of this song in the day [that] the LORD delivered him from the hand of all his enemies, and from the hand of Saul: And he said, I will love thee, O LORD, my strength.
- Young's Literal Translation (YLT)
- To the Overseer. — By a servant of Jehovah, by David, who hath spoken to Jehovah the words of this song in the day Jehovah delivered him from the hand of all his enemies, and from the hand of Saul, and he saith: — I love Thee, O Jehovah, my strength.
Read in context
- 1ನನ್ನ ಬಲವಾಗಿರುವ ಓ ಕರ್ತನೇ, ನಾನು ನಿನ್ನನ್ನು ಪ್ರೀತಿಸುತ್ತೇನೆ.
- 2ಕರ್ತನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನನ್ನು ತಪ್ಪಿಸು ವಾತನೂ ನನ್ನ ದೇವರೂ ನಾನು ಭರವಸವಿಡುವ ನನ್ನ ಬಲವೂ ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ ನನ್ನ ಉನ್ನತವಾದ ದುರ್ಗವೂ ಆಗಿದ್ದಾನೆ.
- 3ಸ್ತುತಿಸತಕ್ಕ ಕರ್ತನಿಗೆ ನಾನು ಮೊರೆಯಿಡುತ್ತೇನೆ; ಹೀಗೆ ನಾನು ನನ್ನ ಶತ್ರುಗಳೊಳಗಿಂದ ರಕ್ಷಿಸಲ್ಪಡುತ್ತೇನೆ.
Cross references
- 2 Samuel 22:1–51 2 ಸಮುವೇಲನು 22:1–51ಕರ್ತನು ದಾವೀದನನ್ನು ಅವನ ಎಲ್ಲಾ ಶತ್ರುಗಳ ಕೈಯೊಳಗಿಂದಲೂ ಸೌಲನ ಕೈಯೊಳಗಿಂದಲೂ ಬಿಡಿಸಿದ ದಿವಸದಲ್ಲಿ ಅವನು ಕರ್ತನನ್ನು ಕುರಿತು ಈ ಹಾಡಿನ ಮಾತುಗಳನ್ನು ಹೇಳಿದನು. ಏನಂದರೆ-- ಕರ್ತನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನನ್ನು ತಪ್ಪಿಸುವವನೂ ಆಗಿದ್ದಾನೆ. ನನ್ನ ಬಂಡೆಯಾದ ದೇವರಲ್ಲಿ ನಾನು ಭರವಸ ವಿಡುವೆನು; ಆತನು ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ ಉನ್ನತ ಗೋಪುರವೂ ನನ್ನ ಆಶ್ರಯವೂ ನನ್ನ ರಕ್ಷಕನೂ ಆಗಿದ್ದಾನೆ. ನೀನು ಬಲಾತ್ಕಾರಿಯಿಂದ ನನ್ನನ್ನು ರಕ್ಷಿಸುತ್ತೀ. ಸ್ತುತಿಗೆ ಯೋಗ್ಯನಾದ ಕರ್ತ ನನ್ನು ನಾನು ಕೂಗುತ್ತೇನೆ; ಹೀಗೆ ನಾನು ನನ್ನ ಶತ್ರು ಗಳೊಳಗಿಂದ ರಕ್ಷಿಸಲ್ಪಡುತ್ತೇನೆ. ಮರಣದಲೆಗಳು ನನ್ನನ್ನು ಆವರಿಸಿಕೊಂಡವು; ಭಕ್ತಿಹೀನರ ಪ್ರವಾಹಗಳು ನನ್ನನ್ನು ಹೆದರಿಸಿದವು; ಪಾತಾಳದ ದುಃಖಗಳು ನನ್ನನ್ನು ಸುತ್ತಿಕೊಂಡವು; ಮರಣದ ಉರ್ಲುಗಳು ನನ್ನನ್ನು ಎದುರುಗೊಂಡವು; ನನ್ನ ಇಕ್ಕಟ್ಟಿನಲ್ಲಿ ಕರ್ತ ನನ್ನು ಕರೆದೆನು; ನನ್ನ ದೇವರನ್ನು ಕರೆದೆನು. ಆತನು ತನ್ನ ಮಂದಿರದೊಳಗಿಂದ ನನ್ನ ಶಬ್ದವನ್ನು ಕೇಳಿದನು; ನನ್ನ ಮೊರೆಯು ಆತನ ಕಿವಿಗೆ ಮುಟ್ಟಿತು. ಆಗ ಭೂಮಿಯು ಕದಲಿ ಕಂಪಿಸಿತು; ಆಕಾಶದ ಅಸ್ತಿವಾರಗಳು ನಡುಗಿ ಕದಲಿದವು; ಯಾಕಂದರೆ ಆತನು ಕೋಪ ಗೊಂಡನು. ಆತನ ಮೂಗಿನಿಂದ ಹೊಗೆ ಏರಿತು, ಆತನ ಬಾಯಿಯೊಳಗಿಂದ ಬೆಂಕಿ ಹೊರಟು ದಹಿಸಿತು; ಕೆಂಡಗಳು ಅದರಿಂದ ಉರಿದವು. ಆತನು ಆಕಾಶ ಗಳನ್ನು ಬೊಗ್ಗಿಸಿ ಇಳಿದನು; ಆತನ ಪಾದಗಳ ಕೆಳಗೆ ಕಾರ್ಗತ್ತಲು ಇತ್ತು; ಆತನು ಕೆರೂಬಿಯ ಮೇಲೆ ಕೂತು ಹಾರಿದನು, ಗಾಳಿಯ ರೆಕ್ಕೆಗಳ ಮೇಲೆ ಕಾಣಿಸಿ ಕೊಂಡನು. ಕತ್ತಲನ್ನೂ ಕತ್ತಲಾದ ನೀರುಗಳನ್ನೂ ಆಕಾಶದ ಕಾರ್ಮೋಡಗಳನ್ನೂ ತನ್ನ ಸುತ್ತಲೂ ಡೇರೆ ಗಳಾಗಿ ಮಾಡಿಕೊಂಡನು. ಆತನ ಮುಂದಿನ ಪ್ರಕಾಶದಿಂದ ಬೆಂಕಿಯ ಕೆಂಡಗಳು ಉರಿಯಲ್ಪಟ್ಟವು. ಕರ್ತನು ಆಕಾಶದಿಂದ ಗುಡುಗಿದನು. ಮಹೋ ನ್ನತನು ತನ್ನ ಶಬ್ದವನ್ನು ಕೊಟ್ಟನು; ತನ್ನ ಬಾಣ ಗಳನ್ನು ಕಳುಹಿಸಿ ಅವರನ್ನು ಚದುರಿಸಿದನು; ಮಿಂಚನ್ನು ಕಳುಹಿಸಿ ಅವರನ್ನು ಗಲಿಬಿಲಿ ಮಾಡಿ ದನು. ಆಗ ಕರ್ತನ ಗದರಿಕೆಯಿಂದಲೂ ಆತನ ಮೂಗಿನ ಶ್ವಾಸದ ಗಾಳಿಯಿಂದಲೂ ಸಮುದ್ರದ ನೆಲೆ ಗಳು ಕಾಣಲ್ಪಟ್ಟವು; ಭೂಲೋಕದ ಅಸ್ತಿವಾರಗಳು ಬೈಲಾದವು. ಮೇಲಿನಿಂದ ಕೈಚಾಚಿ ನನ್ನನ್ನು ಹಿಡಿದು, ವಿಸ್ತಾರವಾದ ನೀರುಗಳೊಳಗಿಂದ ನನ್ನನ್ನು ಎಳೆದನು. ನನ್ನ ಬಲವುಳ್ಳ ಶತ್ರುವಿಗೂ ನನ್ನ ಹಗೆಯವರಿಗೂ ನನ್ನನ್ನು ತಪ್ಪಿಸಿದನು; ಅವರು ನನಗಿಂತ ಬಲಿಷ್ಠ ರಾಗಿದ್ದರು. ನನ್ನ ಆಪತ್ತಿನ ದಿವಸದಲ್ಲಿ ನನಗೆ ಅಡ್ಡಿ ಯಾಗಿದ್ದರು; ಆದರೆ ಕರ್ತನು ನನಗೆ ಆಧಾರ ವಾಗಿದ್ದನು. ನನ್ನನ್ನು ವಿಶಾಲ ಸ್ಥಳಕ್ಕೆ ಹೊರಗೆ ತಂದನು; ಆತನು ನನ್ನಲ್ಲಿ ಸಂತೋಷಪಟ್ಟದ್ದರಿಂದ ನನ್ನನ್ನು ತಪ್ಪಿಸಿಬಿಟ್ಟನು. ಕರ್ತನು ನನ್ನ ನೀತಿಯ ಪ್ರಕಾರ ನನಗೆ ಪ್ರತಿಫಲ ಕೊಟ್ಟನು ನನ್ನ ಕೈಗಳ ಶುದ್ಧತ್ವದ ಪ್ರಕಾರ ನನಗೆ ಬದಲುಕೊಟ್ಟನು. ಕರ್ತನ ಮಾರ್ಗಗಳನ್ನು ಕೈಕೊಂಡೆನು; ನಾನು ನನ್ನ ದೇವರನ್ನು ತೊರೆದುಬಿಡುವ ದುಷ್ಟತ್ವಮಾಡಲಿಲ್ಲ. ಆತನ ನ್ಯಾಯಗಳೆಲ್ಲಾ ನನ್ನ ಮುಂದೆ ಇದ್ದವು; ಆತನ ನಿಯಮ ಗಳನ್ನು ನನ್ನಿಂದ ಹೋಗಲಿಲ್ಲ. ಆತನ ಮುಂದೆ ಸಂಪೂರ್ಣನಾಗಿದ್ದು ಅಕ್ರಮದಿಂದ ನನ್ನನ್ನು ತಪ್ಪಿಸಿ ಕಾಪಾಡಿಕೊಂಡೆನು. ಆದದರಿಂದ ಕರ್ತನು ನನ್ನ ನೀತಿಯ ಪ್ರಕಾರವಾಗಿಯೂ ಆತನ ಕಣ್ಣುಗಳ ಮುಂದಿನ ನನ್ನ ಶುದ್ಧತ್ವದ ಪ್ರಕಾರವಾಗಿಯೂ ನನಗೆ ಬದಲುಕೊಟ್ಟನು. ಕೃಪೆಯುಳ್ಳವನಿಗೆ ಕೃಪೆಯುಳ್ಳವ ನಾಗಿರುವಿ; ಸಂಪೂರ್ಣನಾದ ಮನುಷ್ಯನಿಗೆ ಸಂಪೂರ್ಣನಾಗಿರುವಿ. ಶುದ್ಧನಿಗೆ ಶುದ್ಧನಾಗಿರುವಿ, ಮೂರ್ಖನ ಸಂಗಡ ಹೋರಾಡುವಿ. ನೀನು ದೀನರನ್ನು ರಕ್ಷಿಸುವಿ; ಗರ್ವಿಗಳನ್ನು ತಗ್ಗಿಸುವ ಹಾಗೆ ನಿನ್ನ ಕಣ್ಣುಗಳು ಅವರ ಮೇಲೆ ಅವೆ. ಓ ಕರ್ತನೇ, ನನ್ನ ದೀಪವು ನೀನೇ; ಕರ್ತನು ನನ್ನ ಕತ್ತಲನ್ನು ಪ್ರಕಾಶಿಸುವಂತೆ ಮಾಡುವನು. ನಿನ್ನಿಂದ ಸೈನ್ಯದ ಮೇಲೆ ಬಿದ್ದೆನು; ನನ್ನ ದೇವರಿಂದ ಗೋಡೆ ನೆಗೆದನು. ದೇವರಾದರೋ, ಆತನ ಮಾರ್ಗವು ಸಂಪೂರ್ಣ ವಾದದ್ದು; ಕರ್ತನ ವಾಕ್ಯವು ಶೋಧಿಸಲ್ಪಟ್ಟದ್ದಾಗಿದೆ; ಆತನಲ್ಲಿ ಭರವಸವಿಡುವವರೆಲ್ಲರಿಗೆ ಗುರಾಣಿಯಾಗಿ ದ್ದಾನೆ. ಕರ್ತನಲ್ಲದೆ ದೇವರು ಯಾರು? ನಮ್ಮ ದೇವರಲ್ಲದೆ ಬಂಡೆಯು ಯಾರು? ದೇವರು ನನ್ನ ಬಲವೂ ನನ್ನ ಪರಾಕ್ರಮವೂ ಆಗಿದ್ದಾನೆ; ನನ್ನ ಮಾರ್ಗವನ್ನು ಸಂಪೂರ್ಣಮಾಡುತ್ತಾನೆ. ನನ್ನ ಕಾಲುಗಳನ್ನು ಜಿಂಕೆಗಳ ಹಾಗೆ ಮಾಡಿ ನನ್ನನ್ನು ಉನ್ನತ ಸ್ಥಳಗಳ ಮೇಲೆ ನಿಲ್ಲಿಸುತ್ತಾನೆ. ನನ್ನ ಕೈಗಳಿಗೆ ಯುದ್ಧ ಕಲಿಸುತ್ತಾನೆ. ನನ್ನ ತೋಳುಗಳು ಕಬ್ಬಿಣದ ಬಿಲ್ಲನ್ನು ಬೊಗ್ಗಿಸುತ್ತವೆ. ನೀನು ನಿನ್ನ ರಕ್ಷಣೆಯ ಗುರಾಣಿ ಯನ್ನು ನನಗೆ ಕೊಟ್ಟೆ; ನಿನ್ನ ಸೌಮ್ಯತೆಯು ನನ್ನನ್ನು ಹೆಚ್ಚಿಸಿತು. ನನ್ನ ಹೆಜ್ಜೆಗಳನ್ನು ನನ್ನ ಕೆಳಗೆ ವಿಶಾಲ ಮಾಡಿದ್ದರಿಂದ ನನ್ನ ಕಾಲುಗಳು ಜಾರಲಿಲ್ಲ. ನನ್ನ ಶತ್ರುಗಳನ್ನು ಹಿಂದಟ್ಟಿ ಅವರನ್ನು ನಾಶಮಾಡಿದೆನು; ಅವರನ್ನು ಸಂಹರಿಸಿಬಿಡುವ ವರೆಗೂ ನಾನು ಹಿಂತಿರು ಗಲಿಲ್ಲ. ಅವರನ್ನು ಸಂಹರಿಸಿಬಿಟ್ಟೆನು. ಗಾಯಮಾಡಿ ದೆನು. ಆದದರಿಂದ ಅವರು ಏಳದೆ ಹೋಗಿ, ನನ್ನ ಪಾದಗಳ ಕೆಳಗೆ ಬಿದ್ದರು. ನೀನು ಯುದ್ದಕ್ಕೆ ಪರಾ ಕ್ರಮದಿಂದ ನನ್ನ ನಡುವನ್ನು ಕಟ್ಟಿದಿ; ನನ್ನ ಎದು ರಾಳಿಗಳನ್ನು ನನ್ನ ಕೆಳಗೆ ಅಧೀನಮಾಡಿದಿ. ನನ್ನ ಶತ್ರುಗಳು ನನಗೆ ಬೆನ್ನು ಕೊಡುವಂತೆ ಮಾಡಿದಿ; ನಾನು ನನ್ನ ಹಗೆಯವರನ್ನು ಸಂಹರಿಸುವ ಹಾಗೆ ಮಾಡಿದ್ದಿ. ಅವರು ನೋಡುತ್ತಿದ್ದರು, ಆದರೆ ರಕ್ಷಿಸು ವವನು ಯಾರು ಇರಲಿಲ್ಲ; ಕರ್ತನನ್ನು ನೋಡಿದರು, ಆದರೆ ಆತನು ಅವರಿಗೆ ಪ್ರತ್ಯುತ್ತರ ಕೊಡಲಿಲ್ಲ. ಆಗ ನಾನು ಅವರನ್ನು ನೆಲದ ಧೂಳಿನ ಹಾಗೆ ಪುಡಿಪುಡಿಮಾಡಿದೆನು; ಬೀದಿಯ ಕೆಸರಿನ ಹಾಗೆ ಅವರನ್ನು ತುಳಿದು ಚದರುವಂತೆ ಮಾಡಿದೆನು. ನೀನು ನನ್ನ ಜನರ ವಾಗ್ವಾದಗಳಿಂದ ನನ್ನನ್ನು ತಪ್ಪಿಸಿದ್ದೀ, ಜನಾಂಗಗಳಿಗೆ ತಲೆಯಾಗಿ ನನ್ನನ್ನು ಇರಿಸಿದ್ದೀ; ನಾನು ಅರಿಯದ ಜನರು ನನ್ನನ್ನು ಸೇವಿಸುವರು. ದೇಶಾಂತ ದವರು ನನಗೆ ಅಧೀನರಾಗುವರು; ಕೇಳಿದ ಕೂಡಲೆ ನನಗೆ ವಿಧೇಯರಾಗುವರು. ದೇಶಾಂತದವರು ಬಾಡಿಹೋಗುವರು; ತಮ್ಮನ್ನು ಮುಚ್ಚಿಕೊಂಡ ಸ್ಥಳ ಗಳಿಂದ ನಡುಗುತ್ತಾ ಬರುವರು. ಕರ್ತನು ಜೀವಿತ ನಾಗಿದ್ದಾನೆ; ನನ್ನ ಬಂಡೆಗೆ ಸ್ತುತಿಯಾಗಲಿ; ನನ್ನ ರಕ್ಷಣೆಯ ಬಂಡೆಯಾದ ದೇವರು ಉನ್ನತನಾಗಲಿ. ದೇವರೇ ನನಗೋಸ್ಕರ ಮುಯ್ಯಿಗೆ ಮುಯ್ಯಿ ತೀರಿಸುತ್ತಾನೆ; ಜನರನ್ನು ನನಗೆ ಅಧೀನಪಡಿಸುತ್ತಾನೆ. ಆತನು ನನ್ನ ಶತ್ರುಗಳಿಂದ ನನ್ನನ್ನು ಹೊರಗೆ ತರು ತ್ತಾನೆ. ನೀನು ನನ್ನ ಎದುರಾಳಿಗಳಿಂದ ನನ್ನನ್ನು ತಪ್ಪಿಸಿ ಗೌರವಿಸುತ್ತೀ; ಬಲಾತ್ಕಾರದ ಮನುಷ್ಯನಿಂದ ತಪ್ಪಿ ಸುತ್ತೀ. ಆದದರಿಂದ ಓ ಕರ್ತನೇ, ನಾನು ಜನಾಂಗ ಗಳಲ್ಲಿ ನಿನ್ನನ್ನು ಕೊಂಡಾಡುವೆನು; ನಿನ್ನ ಹೆಸರನ್ನು ಕೀರ್ತಿಸುವೆನು.ಆತನು ತನ್ನ ಅರಸನಿಗೆ ರಕ್ಷಣೆಯ ಗೋಪುರವಾಗಿದ್ದಾನೆ; ತನ್ನ ಅಭಿಷಕ್ತನಾದ ದಾವೀದ ನಿಗೂ ಅವನ ಸಂತತಿಗೂ ಕೃಪೆಯನ್ನು ಯುಗಯುಗಕ್ಕೂ ಅನುಗ್ರಹಿಸುತ್ತಾನೆ. ಆತನು ತನ್ನ ಅರಸನಿಗೆ ರಕ್ಷಣೆಯ ಗೋಪುರವಾಗಿದ್ದಾನೆ; ತನ್ನ ಅಭಿಷಕ್ತನಾದ ದಾವೀದ ನಿಗೂ ಅವನ ಸಂತತಿಗೂ ಕೃಪೆಯನ್ನು ಯುಗಯುಗಕ್ಕೂ ಅನುಗ್ರಹಿಸುತ್ತಾನೆ.
- Colossians 1:11 ಕೊಲೊಸ್ಸೆಯವರಿಗೆ 1:11ಆತನ ಮಹಿಮಾ ಶಕ್ತಿಯ ಪ್ರಕಾರ ಪರಿಪೂರ್ಣ ಬಲಹೊಂದಿ ಬಲಿಷರಾಗಿ ಆನಂದ ಪೂರ್ವಕವಾದ ತಾಳ್ಮೆಯನ್ನು ಮತ್ತು ದೀರ್ಘಶಾಂತಿಯನ್ನು ತೋರಿಸುವವರೂ
- 1 John 4:19 1 ಯೋಹಾನನು 4:19ಆತನು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದಲೇ ನಾವು ಆತನನ್ನು ಪ್ರೀತಿಸುತ್ತೇವೆ.
- Isaiah 12:1–6 ಯೆಶಾಯ 12:1–6ಆ ದಿನದಲ್ಲಿ ನೀನು ಹೇಳುವದೇನಂದರೆ --ಓ ಕರ್ತನೇ, ನಿನ್ನನ್ನು ಸ್ತುತಿಸು ವೆನು; ನನ್ನ ಮೇಲೆ ನೀನು ಕೋಪಿಸಿದ್ದಾಗ್ಯೂ ನಿನ್ನ ಕೋಪದಿಂದ ತಿರುಗಿಕೊಂಡು ನನ್ನನ್ನು ಆದರಿಸಿದ್ದೀ. ಇಗೋ, ದೇವರೇ ನನ್ನ ರಕ್ಷಣೆಯು; ನಾನು ಭರ ವಸವಿಡುವೆನು ಮತ್ತು ಭಯಪಡೆನು; ಕರ್ತನಾದ ಯೆಹೋವನೇ ನನ್ನ ಬಲವೂ ಕೀರ್ತನೆಯೂ ಆತನೇ ನನಗೆ ರಕ್ಷಣೆಯೂ ಆಗಿದ್ದಾನೆ. ಆದದರಿಂದಲೇ ರಕ್ಷಣೆಯೆಂಬ ಬಾವಿಗಳಿಂದ ಆನಂದದೊಡನೆ ನೀವು ನೀರನ್ನು ಸೇದುವಿರಿ. ನೀವು--ಕರ್ತನನ್ನು ಕೊಂಡಾ ಡಿರಿ; ಜನರ ಮಧ್ಯದಲ್ಲಿ ಆತನ ಹೆಸರನ್ನೆತ್ತಿ ಕ್ರಿಯೆಗ ಳನ್ನು ಪ್ರಕಟಿಸಿರಿ. ಆತನ ನಾಮವನ್ನು ಉನ್ನತೋನ್ನತ ವೆಂದು ಎತ್ತಿ ಹೇಳಿರಿ ಎಂದು ಆ ದಿನದಲ್ಲಿ ಹೇಳುವಿರಿ. ಕರ್ತನಿಗೆ ಹಾಡಿರಿ, ಆತನು ಶ್ರೇಷ್ಠವಾದ ಕಾರ್ಯಗ ಳನ್ನು ಮಾಡಿದ್ದಾನೆ; ಇದು ಭೂಮಂಡಲದಲ್ಲೆಲ್ಲಾ ತಿಳಿದಿರಲಿ.ಚೀಯೋನಿನ ನಿವಾಸಿಗಳೇ, ಆರ್ಭಟಿಸಿ ಹರ್ಷಧ್ವನಿಯನ್ನು ಗೈಯಿರಿ; ಇಸ್ರಾಯೇಲಿನ ಪರಿಶು ದ್ಧನು ನಿನ್ನ ಮಧ್ಯದಲ್ಲಿ ಮಹತ್ವವುಳ್ಳವನಾಗಿದ್ದಾನೆ. ಚೀಯೋನಿನ ನಿವಾಸಿಗಳೇ, ಆರ್ಭಟಿಸಿ ಹರ್ಷಧ್ವನಿಯನ್ನು ಗೈಯಿರಿ; ಇಸ್ರಾಯೇಲಿನ ಪರಿಶು ದ್ಧನು ನಿನ್ನ ಮಧ್ಯದಲ್ಲಿ ಮಹತ್ವವುಳ್ಳವನಾಗಿದ್ದಾನೆ.
- Philippians 4:13 ಫಿಲಿಪ್ಪಿಯವರಿಗೆ 4:13ನನ್ನನ್ನು ಬಲಪಡಿಸುವ ಕ್ರಿಸ್ತನ ಮೂಲಕ ನಾನು ಎಲ್ಲವುಗಳನ್ನು ಮಾಡಬಲ್ಲೆನು.
- Psalm 34:19 ಕೀರ್ತನೆಗಳು 34:19ನೀತಿವಂತನಿಗೆ ಬರುವ ಕೇಡುಗಳು ಬಹಳವಾಗಿವೆ; ಆದರೆ ಅವೆಲ್ಲವುಗಳಿಂದ ಕರ್ತನು ಅವನನ್ನು ಬಿಡಿಸುತ್ತಾನೆ.
- Psalm 116:1–6 ಕೀರ್ತನೆಗಳು 116:1–6ನಾನು ಕರ್ತನನ್ನು ಪ್ರೀತಿ ಮಾಡುತ್ತೇನೆ.ಆತನು ನನ್ನ ಸ್ವರವನ್ನೂ ವಿಜ್ಞಾಪನೆಯನ್ನೂ ಕೇಳಿದ್ದಾನೆ. ಆತನು ನನ್ನ ಮೊರೆಯನ್ನು ಆಲಿಸಿದ್ದರಿಂದ ನಾನು ಜೀವದಿಂದಿರುವ ವರೆಗೂ ಆತನನ್ನೇ ಬೇಡುವೆನು. ಮರಣದ ದುಃಖ ಗಳು ನನ್ನನ್ನು ಆವರಿಸಿಕೊಂಡವು; ನರಕದ ಬಾಧೆ ಗಳೂ ಇಕ್ಕಟ್ಟೂ ದುಃಖವೂ ನನ್ನನ್ನು ಹಿಡಿದವು. ಆಗ ನಾನು ಅಯ್ಯೋ, ಕರ್ತನೇ, ನನ್ನ ಪ್ರಾಣವನ್ನು ತಪ್ಪಿಸು ಎಂದು ಕರ್ತನ ಹೆಸರಿನಲ್ಲಿ ಬೇಡಿದೆನು. ಕರ್ತನು ಕೃಪೆಯೂ ನೀತಿಯೂ ಉಳ್ಳವನು; ಹೌದು, ನಮ್ಮ ದೇವರು ಅಂತಃಕರಣವುಳ್ಳವನು. ಕರ್ತನು ಸಾಧು ಜನರನ್ನು ಕಾಪಾಡುತ್ತಾನೆ; ನಾನು ಕುಗ್ಗಿದವನಾದಾಗ ನನಗೆ ಸಹಾಯಮಾಡಿದನು.
- Psalm 144:1–2 ಕೀರ್ತನೆಗಳು 144:1–2ನನ್ನ ಕೈಗಳಿಗೆ ಕಾಳಗವನ್ನು, ನನ್ನ ಬೆರಳುಗಳಿಗೆ ಯುದ್ಧವನ್ನು, ಕಲಿಸಿದ ನನ್ನ ಬಲವಾಗಿರುವ ಕರ್ತನಿಗೆ ಸ್ತೋತ್ರವಾಗಲಿ. ಆತನು ನನ್ನ ಒಳ್ಳೇತನವೂ ನನ್ನ ಕೋಟೆಯೂ ನನ್ನ ಎತ್ತರವಾದ ದುರ್ಗವೂ ನನ್ನನ್ನು ತಪ್ಪಿಸುವವನೂ ನನ್ನ ಭರವಸವೂ ನನ್ನ ಗುರಾಣಿಯೂ ನನ್ನ ಜನರನ್ನು ನನಗೆ ವಶಮಾಡುವಾತನೂ ಆಗಿದ್ದಾನೆ.
- Psalm 28:7–8 ಕೀರ್ತನೆಗಳು 28:7–8ಕರ್ತನು ನನ್ನ ಬಲವೂ ಗುರಾಣಿಯೂ ಆಗಿದ್ದಾನೆ; ನನ್ನ ಹೃದಯವು ಆತನಲ್ಲಿ ಭರವಸವಿಟ್ಟದ್ದರಿಂದ ಸಹಾಯ ಹೊಂದಿದೆನು; ಆದದರಿಂದ ನನ್ನ ಹೃದಯವು ಬಹಳವಾಗಿ ಉತ್ಸಾಹ ಪಡುವದು; ನನ್ನ ಹಾಡಿನಿಂದ ಆತನನ್ನು ಕೊಂಡಾ ಡುವೆನು. ಕರ್ತನು ಅವರಿಗೆ ಬಲವಾಗಿದ್ದಾನೆ; ತನ್ನ ಅಭಿಷಕ್ತನ ರಕ್ಷಣೆಯ ಬಲವು ಆತನೇ.ನಿನ್ನ ಜನ ರನ್ನು ರಕ್ಷಿಸು; ನಿನ್ನ ಸ್ವಾಸ್ಥ್ಯವನ್ನು ಆಶೀರ್ವದಿಸು; ಅವರನ್ನು ಪರಿಪಾಲಿಸುತ್ತಾ ಯುಗಯುಗಕ್ಕೂ ಅವ ರನ್ನು ಮೇಲಕ್ಕೆ ಎತ್ತು.
- Psalm 118:14 ಕೀರ್ತನೆಗಳು 118:14ನನ್ನ ಬಲವೂ ಕೀರ್ತನೆಯೂ ಕರ್ತನೇ; ಆತನೇ ನನಗೆ ರಕ್ಷಣೆಯಾದನು.
- 1 Samuel 2:1–10 1 ಸಮುವೇಲನು 2:1–10ಹನ್ನಳು ಪ್ರಾರ್ಥಿಸಿ ಹೇಳಿದ್ದೇನಂದರೆನನ್ನ ಹೃದಯವು ಕರ್ತನಲ್ಲಿ ಸಂತೋಷಿ ಸಿತು, ನನ್ನ ಕೊಂಬು ಕರ್ತನಲ್ಲಿ ಉನ್ನತವಾಯಿತು; ನನ್ನ ಶತ್ರುಗಳ ಮೇಲೆ ನನ್ನ ಬಾಯಿ ವಿಸ್ತಾರವಾಯಿತು, ಯಾಕಂದರೆ ನಾನು ನಿನ್ನ ರಕ್ಷಣೆಯಲ್ಲಿ ಸಂತೋಷ ಪಟ್ಟೆನು. ಕರ್ತನ ಹಾಗೆ ಪರಿಶುದ್ಧನಾದವನಿಲ್ಲ; ನಿಶ್ಚಯವಾಗಿ ನಿನ್ನ ಹೊರತು ಮತ್ತೊಬ್ಬನಿಲ್ಲ. ನಮ್ಮ ದೇವರ ಹಾಗೆ ಯಾವ ಬಂಡೆಯೂ ಇಲ್ಲ. ಇನ್ನು ಮೇಲೆ ಗರ್ವದಿಂದ ಮಾತನಾಡಬೇಡಿರಿ. ನಿಮ್ಮ ಬಾಯಿಂದ ಕಠಿಣ ಮಾತು ಹೊರಡಬಾರದು. ಯಾಕಂದರೆ ಕರ್ತನು ತಿಳುವಳಿಕೆಯುಳ್ಳ ದೇವರು. ಆತನಿಂದ ಕ್ರಿಯೆಗಳು ತೂಗಲ್ಪಡುತ್ತವೆ. ಪರಾಕ್ರಮ ಶಾಲಿಗಳ ಬಿಲ್ಲುಗಳು ಮುರಿಯಲ್ಪಟ್ಟವು; ಎಡವಿದವರು ಬಲದಿಂದ ನಡುಕಟ್ಟಲ್ಪಟ್ಟಿದ್ದಾರೆ. ತೃಪ್ತಿಪಟ್ಟವರು ರೊಟ್ಟಿಗೋಸ್ಕರ ಕೂಲಿ ಕೆಲಸಕ್ಕೆ ಹೋಗುತ್ತಾರೆ; ಹಸಿದವರು ತಿಂದು ತೃಪ್ತರಾದರು; ಬಂಜೆಯಾದವಳು ಏಳು ಮಂದಿ ಮಕ್ಕಳನ್ನು ಹೆತ್ತಳು, ಅನೇಕ ಮಂದಿ ಮಕ್ಕಳನ್ನು ಹೆತ್ತವಳು ಬಲಹೀನ ಳಾದಳು. ಕರ್ತನು ಸಾಯಿಸುವಾತನೂ ಬದುಕಿಸುವಾತನೂ ಆಗಿದ್ದಾನೆ. ಸಮಾಧಿಗೆ ಇಳಿಯುವಂತೆ ಮಾಡುತ್ತಾನೆ. ಮೇಲಕ್ಕೆ ತರುತ್ತಾನೆ. ಕರ್ತನು ಬಡತನವನ್ನು ಐಶ್ವರ್ಯ ವನ್ನು ಕೊಡುವಾತನೂ ತಗ್ಗಿಸುವಾತನೂ ಉನ್ನತಮಾಡು ವಾತನೂ ಆಗಿದ್ದಾನೆ. ದರಿದ್ರನನ್ನು ಭೂಮಿಯ ಧೂಳಿನಿಂದ ಎತ್ತುವಾ ತನೂ ಭಿಕ್ಷುಕನನ್ನು ತಿಪ್ಪೆಗುಂಡಿಯಿಂದ ತೆಗೆದು ಉನ್ನತ ಮಾಡುವಾತನೂ ಆಗಿದ್ದಾನೆ. ಅವರನ್ನು ಪ್ರಧಾ ನರ ಮಧ್ಯದಲ್ಲಿ ಕೂಡ್ರಿಸುತ್ತಾನೆ; ಘನತೆಯ ಸಿಂಹಾ ಸನವನ್ನು ಬಾಧ್ಯವಾಗಿ ಕೊಡುತ್ತಾನೆ. ಯಾಕಂದರೆ ಭೂಮಿಯ ಆಧಾರಸ್ತಂಭಗಳು ಕರ್ತನದಾಗಿವೆ, ಭೂಲೋಕವನ್ನು ಅವುಗಳ ಮೇಲೆ ಇಟ್ಟಿದ್ದಾನೆ. ಆತನು ತನ್ನ ಪರಿಶುದ್ಧರ ಕಾಲುಗಳನ್ನು ಕಾಯು ವನು; ಆದರೆ ದುಷ್ಟರು ಕತ್ತಲಲ್ಲಿ ಮೌನವಾಗಿರುವರು; ಶಕ್ತಿಯಿಂದ ಒಬ್ಬನೂ ಜಯಿಸನು. ಕರ್ತನ ಸಂಗಡ ವಿವಾದಿಸುವವರು ಮುರಿದು ಚೂರಾಗುವರು. ಆತನು ಆಕಾಶದಲ್ಲಿಂದ ಅವರ ಮೇಲೆ ಗುಡುಗುವನು. ಕರ್ತನು ಲೋಕಾಂತ್ಯದ ವರೆಗೂ ನ್ಯಾಯತೀರಿಸಿ ತನ್ನ ಅರಸನಿಗೆ ಬಲಕೊಡುವನು, ತನ್ನ ಅಭಿಷಿಕ್ತನ ಕೊಂಬನ್ನು ಉನ್ನತಮಾಡುವನು ಎಂಬದು.
- Psalm 116:16 ಕೀರ್ತನೆಗಳು 116:16ಓ ಕರ್ತನೇ, ನಿಜವಾಗಿ ನಾನು ನಿನ್ನ ಸೇವಕನು. ಹೌದು, ನಾನು ನಿನ್ನ ಸೇವಕನು ನಿನ್ನ ದಾಸಿಯ ಮಗನು; ನೀನು ನನ್ನ ಬಂಧನಗಳನ್ನು ಬಿಚ್ಚಿದ್ದೀ.