2 Samuel · chapter 22 · verse 21
2 Samuel 22:21 in Kannada
ಕರ್ತನು ನನ್ನ ನೀತಿಯ ಪ್ರಕಾರ ನನಗೆ ಪ್ರತಿಫಲ ಕೊಟ್ಟನು ನನ್ನ ಕೈಗಳ ಶುದ್ಧತ್ವದ ಪ್ರಕಾರ ನನಗೆ ಬದಲುಕೊಟ್ಟನು.
Kartanu nanna neetiya prakaara nanage pratiphala kottanu nanna kaigala shuddhatvada prakaara nanage badalukottanu.
2 Samuel 22:21 in English
- King James Version (KJV)
- The LORD rewarded me according to my righteousness: according to the cleanness of my hands hath he recompensed me.
- World English Bible (WEB)
- The LORD rewarded me according to my righteousness. He rewarded me according to the cleanness of my hands.
- American Standard Version (ASV)
- Jehovah rewarded me according to my righteousness; According to the cleanness of my hands hath he recompensed me.
- Bible in Basic English (BBE)
- The Lord gives me the reward of my righteousness, because my hands are clean before him.
- Darby Translation (DBY)
- Jehovah hath rewarded me according to my righteousness, According to the cleanness of my hands hath he recompensed me.
- Webster's Bible (WBS)
- The LORD rewarded me according to my righteousness: according to the cleanness of my hands hath he recompensed me.
- Young's Literal Translation (YLT)
- Jehovah recompenseth me, According to my righteousness, According to the cleanness of my hands, He doth return to me.
Read in context
- 19ಅವರು ನನಗಿಂತ ಬಲಿಷ್ಠ ರಾಗಿದ್ದರು. ನನ್ನ ಆಪತ್ತಿನ ದಿವಸದಲ್ಲಿ ನನಗೆ ಅಡ್ಡಿ ಯಾಗಿದ್ದರು; ಆದರೆ ಕರ್ತನು ನನಗೆ ಆಧಾರ ವಾಗಿದ್ದನು.
- 20ನನ್ನನ್ನು ವಿಶಾಲ ಸ್ಥಳಕ್ಕೆ ಹೊರಗೆ ತಂದನು; ಆತನು ನನ್ನಲ್ಲಿ ಸಂತೋಷಪಟ್ಟದ್ದರಿಂದ ನನ್ನನ್ನು ತಪ್ಪಿಸಿಬಿಟ್ಟನು.
- 21ಕರ್ತನು ನನ್ನ ನೀತಿಯ ಪ್ರಕಾರ ನನಗೆ ಪ್ರತಿಫಲ ಕೊಟ್ಟನು ನನ್ನ ಕೈಗಳ ಶುದ್ಧತ್ವದ ಪ್ರಕಾರ ನನಗೆ ಬದಲುಕೊಟ್ಟನು.
- 22ಕರ್ತನ ಮಾರ್ಗಗಳನ್ನು ಕೈಕೊಂಡೆನು; ನಾನು ನನ್ನ ದೇವರನ್ನು ತೊರೆದುಬಿಡುವ ದುಷ್ಟತ್ವಮಾಡಲಿಲ್ಲ.
- 23ಆತನ ನ್ಯಾಯಗಳೆಲ್ಲಾ ನನ್ನ ಮುಂದೆ ಇದ್ದವು; ಆತನ ನಿಯಮ ಗಳನ್ನು ನನ್ನಿಂದ ಹೋಗಲಿಲ್ಲ.
Cross references
- Psalm 24:4 ಕೀರ್ತನೆಗಳು 24:4ಶುದ್ಧ ಹಸ್ತಗಳೂ ನಿರ್ಮಲವಾದ ಹೃದ ಯವೂ ಉಳ್ಳವನಾಗಿದ್ದು ತನ್ನ ಪ್ರಾಣವನ್ನು ವ್ಯರ್ಥ ತ್ವಕ್ಕೆ ಎತ್ತದೆಯೂ ಇಲ್ಲವೆ ಮೋಸದಿಂದ ಆಣೆ ಇಡ ದೆಯೂ ಇರುವವನೇ.
- Psalm 7:8 ಕೀರ್ತನೆಗಳು 7:8ಕರ್ತನು ಜನಗಳಿಗೆ ನ್ಯಾಯ ತೀರಿಸುವನು. ಓ ಕರ್ತನೇ, ನನ್ನಲ್ಲಿರುವ ನನ್ನ ನೀತಿಯ ಪ್ರಕಾರವೂ ಯಥಾರ್ಥತೆಯ ಪ್ರಕಾರವೂ ನನಗೆ ನ್ಯಾಯತೀರಿಸು.
- 1 Samuel 26:23 1 ಸಮುವೇಲನು 26:23ಆದರೆ ಕರ್ತನು ಪ್ರತಿಯೊ ಬ್ಬನಿಗೆ ಅವನ ನೀತಿಗೂ ಅವನ ನಂಬಿಗಸ್ತಿಕೆಗೂ ತಕ್ಕ ಫಲವನ್ನು ಕೊಡಲಿ. ಕರ್ತನು ಈ ಹೊತ್ತು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟನು. ಆದರೆ ನಾನು ಕರ್ತನ ಅಭಿಷಿಕ್ತನ ಮೇಲೆ ನನ್ನ ಕೈಚಾಚಲು ಮನಸ್ಸಿ ಲ್ಲದೆ ಇದ್ದೆನು.
- 1 Kings 8:32 1 ಅರಸುಗಳು 8:32ಆಗ ನೀನು ದುಷ್ಟನನ್ನು ದುಷ್ಟನಾಗಮಾಡಿ ಅವನ ಮಾರ್ಗದ ಪ್ರಕಾರ ಅವನ ತಲೆಯ ಮೇಲೆ ಬರಮಾಡುವ ಹಾಗೆಯೂ ನೀತಿವಂತನನ್ನು ನೀತಿವಂತನಾಗ ಮಾಡಿ ಅವನ ನೀತಿಯ ಪ್ರಕಾರ ಅವನಿಗೆ ಕೊಡುವ ಹಾಗೆಯೂ ಪರಲೋಕದಲ್ಲಿರುವ ನೀನು ಕೇಳಿ ನಡಿಸಿ ನಿನ್ನ ಸೇವಕರ ನ್ಯಾಯವನ್ನು ತೀರಿಸು.
- James 4:8 ಯಾಕೋಬನು 4:8ದೇವರ ಸವಿಾಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸವಿಾಪಕ್ಕೆ ಬರುವನು. ಪಾಪಿಗಳೇ, ನಿಮ್ಮ ಕೈಗಳನ್ನು ಶುಚಿ ಮಾಡಿಕೊಳ್ಳಿರಿ; ಎರಡು ಮನಸ್ಸುಳ್ಳವರೇ, ನಿಮ್ಮ ಹೃದಯಗಳನ್ನು ನಿರ್ಮಲ ಮಾಡಿಕೊಳ್ಳಿರಿ.
- Psalm 19:11 ಕೀರ್ತನೆಗಳು 19:11ನಿನ್ನ ಸೇವಕನು ಅವುಗಳಿಂದ ಎಚ್ಚರಿಸಲ್ಪಡು ತ್ತಾನೆ; ಅವುಗಳನ್ನು ಕೈಕೊಳ್ಳುವದರಲ್ಲಿ ದೊಡ್ಡ ಪ್ರತಿ ಫಲ ಉಂಟು.
- Job 17:9 ಯೋಬನು 17:9ಆದರೆ ನೀತಿವಂತನು ತನ್ನ ಮಾರ್ಗವನ್ನು ಹಿಡಿದುಕೊಳ್ಳುವನು. ಶುದ್ಧ ಕೈಗಳು ಳ್ಳವನು ಬರಬರುತ್ತಾ ಬಲಗೊಳ್ಳುವನು.
- 2 Samuel 22:25 2 ಸಮುವೇಲನು 22:25ಆದದರಿಂದ ಕರ್ತನು ನನ್ನ ನೀತಿಯ ಪ್ರಕಾರವಾಗಿಯೂ ಆತನ ಕಣ್ಣುಗಳ ಮುಂದಿನ ನನ್ನ ಶುದ್ಧತ್ವದ ಪ್ರಕಾರವಾಗಿಯೂ ನನಗೆ ಬದಲುಕೊಟ್ಟನು.
- Psalm 18:20–25 ಕೀರ್ತನೆಗಳು 18:20–25ಕರ್ತನು ನನ್ನ ನೀತಿಯ ಪ್ರಕಾರ ನನಗೆ ಪ್ರತಿಫಲ ಕೊಟ್ಟನು. ನನ್ನ ಕೈಗಳ ಶುದ್ಧತ್ವದ ಪ್ರಕಾರ ನನಗೆ ಬದಲು ಕೊಟ್ಟನು. ನಾನು ಕರ್ತನ ಮಾರ್ಗಗಳನ್ನು ಕೈಕೊಂಡು ನನ್ನ ದೇವರನ್ನು ಬಿಟ್ಟುಹೋಗುವ ದುಷ್ಟತ್ವವನ್ನು ನಾನು ಮಾಡಲಿಲ್ಲ. ಆತನ ತೀರ್ಪುಗಳೆಲ್ಲಾ ನನ್ನ ಮುಂದೆ ಇದ್ದವು; ಆತನ ನೇಮಗಳನ್ನು ನನ್ನಿಂದ ತೊಲಗಿಸ ಲಿಲ್ಲ. ಆತನ ಮುಂದೆ ಸಂಪೂರ್ಣನಾಗಿದ್ದು ನನ್ನ ಅಕ್ರಮದಿಂದ ನನ್ನನ್ನು ಕಾಪಾಡಿಕೊಂಡೆನು. ಆದದ ರಿಂದ ಕರ್ತನು ನನ್ನ ನೀತಿಯ ಪ್ರಕಾರವೂ ಆತನ ಕಣ್ಣೆದುರಿನಲ್ಲಿ ನನ್ನ ಕೈಗಳ ಶುದ್ಧತ್ವದ ಪ್ರಕಾರವೂ ನನಗೆ ಬದಲು ಕೊಟ್ಟನು. ನೀನು ಕರುಣೆಯು ಳ್ಳವನಿಗೆ ಕರುಣೆಯನ್ನು ತೋರಿಸುವಿ; ಸಂಪೂರ್ಣ ನಾದ ಮನುಷ್ಯನಿಗೆ ಸಂಪೂರ್ಣನಾಗಿರುವಿ.
- 1 Corinthians 15:58 1 ಕೊರಿಂಥದವರಿಗೆ 15:58ಆದದರಿಂದ ನನ್ನ ಪ್ರಿಯ ಸಹೋದರರೇ, ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನಲ್ಲಿ ಪಡುವ ಪ್ರಯಾಸವು ನಿಷ್ಪಲವಾಗುವದಿ ಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರ್ರಿ.
- Psalm 7:3–4 ಕೀರ್ತನೆಗಳು 7:3–4ನನ್ನ ದೇವರಾದ ಓ ಕರ್ತನೇ, ನಾನು ಇದನ್ನು ಮಾಡಿದರೆ, ಅಂದರೆ ನನ್ನ ಕೈಗಳಲ್ಲಿ ಅಪರಾ ಧವಿದ್ದರೆ, ಹೌದು, ನನ್ನೊಂದಿಗೆ ಸಮಾಧಾನದಿಂದ ಇದ್ದವನಿಗೆ ನಾನು ಕೇಡು ಮಾಡಿದ್ದರೆ, ಯಾವ ಕಾರಣವಿಲ್ಲದೆ ನನಗೆ ವೈರಿಯಾಗಿರುವವನನ್ನು ನಾನು ಶತ್ರುವಿಗೆ ತಪ್ಪಿಸಿಬಿಟ್ಟೆನಲ್ಲಾ,