2 Samuel · chapter 22 · verse 38
2 Samuel 22:38 in Kannada
ನನ್ನ ಶತ್ರುಗಳನ್ನು ಹಿಂದಟ್ಟಿ ಅವರನ್ನು ನಾಶಮಾಡಿದೆನು; ಅವರನ್ನು ಸಂಹರಿಸಿಬಿಡುವ ವರೆಗೂ ನಾನು ಹಿಂತಿರು ಗಲಿಲ್ಲ.
Nanna shatrugalannu hindatti avarannu naashamaadidenu; avarannu sanharisibiduva varegoo naanu hintiru galilla.
2 Samuel 22:38 in English
- King James Version (KJV)
- I have pursued mine enemies, and destroyed them; and turned not again until I had consumed them.
- World English Bible (WEB)
- I have pursued my enemies and destroyed them. I didn’t turn again until they were consumed.
- American Standard Version (ASV)
- I have pursued mine enemies, and destroyed them; Neither did I turn again till they were consumed.
- Bible in Basic English (BBE)
- I go after my haters and overtake them; not turning back till they are all overcome.
- Darby Translation (DBY)
- I pursued mine enemies, and destroyed them, And I turned not again till they were consumed.
- Webster's Bible (WBS)
- I have pursued my enemies, and destroyed them; and turned not again until I had consumed them.
- Young's Literal Translation (YLT)
- I pursue mine enemies and destroy them, And I turn not till they are consumed.
Read in context
- 36ನೀನು ನಿನ್ನ ರಕ್ಷಣೆಯ ಗುರಾಣಿ ಯನ್ನು ನನಗೆ ಕೊಟ್ಟೆ; ನಿನ್ನ ಸೌಮ್ಯತೆಯು ನನ್ನನ್ನು ಹೆಚ್ಚಿಸಿತು.
- 37ನನ್ನ ಹೆಜ್ಜೆಗಳನ್ನು ನನ್ನ ಕೆಳಗೆ ವಿಶಾಲ ಮಾಡಿದ್ದರಿಂದ ನನ್ನ ಕಾಲುಗಳು ಜಾರಲಿಲ್ಲ.
- 38ನನ್ನ ಶತ್ರುಗಳನ್ನು ಹಿಂದಟ್ಟಿ ಅವರನ್ನು ನಾಶಮಾಡಿದೆನು; ಅವರನ್ನು ಸಂಹರಿಸಿಬಿಡುವ ವರೆಗೂ ನಾನು ಹಿಂತಿರು ಗಲಿಲ್ಲ.
- 39ಅವರನ್ನು ಸಂಹರಿಸಿಬಿಟ್ಟೆನು. ಗಾಯಮಾಡಿ ದೆನು. ಆದದರಿಂದ ಅವರು ಏಳದೆ ಹೋಗಿ, ನನ್ನ ಪಾದಗಳ ಕೆಳಗೆ ಬಿದ್ದರು.
- 40ನೀನು ಯುದ್ದಕ್ಕೆ ಪರಾ ಕ್ರಮದಿಂದ ನನ್ನ ನಡುವನ್ನು ಕಟ್ಟಿದಿ; ನನ್ನ ಎದು ರಾಳಿಗಳನ್ನು ನನ್ನ ಕೆಳಗೆ ಅಧೀನಮಾಡಿದಿ.
Cross references
- Psalm 21:8–9 ಕೀರ್ತನೆಗಳು 21:8–9ನಿನ್ನ ಶತ್ರು ಗಳೆಲ್ಲಾ ನಿನ್ನ ಕೈಗೆ ಸಿಕ್ಕುವರು; ನಿನ್ನ ಬಲಗೈಗೆ ನಿನ್ನನ್ನು ಹಗೆಮಾಡುವವರು ಸಿಕ್ಕುವರು. ನೀನು ಕೋಪಿಸುವ ಕಾಲದಲ್ಲಿ ಅವರನ್ನು ಬೆಂಕಿಯ ಒಲೆಯ ಹಾಗೆ ಮಾಡುವಿ; ಕರ್ತನು ತನ್ನ ಕೋಪದಿಂದ ಅವರನ್ನು ನುಂಗಿಬಿಡುವನು; ಬೆಂಕಿಯು ಅವರನ್ನು ದಹಿಸಿ ಬಿಡು ವದು.
- 2 Samuel 10:14 2 ಸಮುವೇಲನು 10:14ಅರಾಮ್ಯರು ಓಡಿ ಹೋದದ್ದನ್ನು ಅಮ್ಮೋನನ ಮಕ್ಕಳು ನೋಡಿದಾಗ ಅವರು ಅಬೀಷೈಯ ಎದುರಿನಿಂದ ಓಡಿ ಪಟ್ಟಣ ದೊಳಗೆ ಹೊಕ್ಕರು. ಆಗ ಯೋವಾಬನು ಅಮ್ಮೊನನ ಮಕ್ಕಳನ್ನು ಬಿಟ್ಟು ತಿರುಗಿ ಯೆರೂಸಲೇಮಿಗೆ ಬಂದನು.
- 2 Samuel 5:18–25 2 ಸಮುವೇಲನು 5:18–25ಆದರೆ ಫಿಲಿಷ್ಟಿಯರು ಬಂದು ರೆಫಾಯಾಮ್ ತಗ್ಗಿನಲ್ಲಿ ಇಳುಕೊಂಡರು. ಆಗ ದಾವೀದನು--ನಾನು ಫಿಲಿಷ್ಟಿಯರ ಮೇಲೆ ಹೋಗ ಬೇಕೋ? ಅವರನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡು ವಿಯೋ ಎಂದು ಕರ್ತನನ್ನು ಕೇಳಿದನು. ಅದಕ್ಕೆ ಕರ್ತನು ದಾವೀದನಿಗೆ--ಹೋಗು; ಫಿಲಿಷ್ಟಿಯರನ್ನು ನಿನ್ನ ಕೈ ಯಲ್ಲಿ ಖಂಡಿತಾ ಕೊಡುವೆನು ಎಂದು ಹೇಳಿದನು. ಆದಕಾರಣ ದಾವೀದನು ಬಾಳ್ಪೆರಾಚೀಮಿಗೆ ಬಂದು ಅಲ್ಲಿ ಅವರನ್ನು ಹೊಡೆದು--ನೀರು ಕಟ್ಟೆ ಒಡೆದು ಹರಿಯುವ ಹಾಗೆ ಕರ್ತನು ನನ್ನ ಮುಂದೆ ನನ್ನ ಶತ್ರುಗಳ ಮೇಲೆ ಹರಿದು ಬಿದ್ದಿದ್ದಾನೆ ಎಂದು ಹೇಳಿ ಆ ಸ್ಥಳಕ್ಕೆ ಬಾಳ್ಪೆರಾಚೀಮ್ ಎಂದು ಹೆಸರಿ ಟ್ಟನು. ಅಲ್ಲಿ ಫಿಲಿಷ್ಟಿಯರು ತಮ್ಮ ವಿಗ್ರಹಗಳನ್ನು ಬಿಟ್ಟುಹೋದದರಿಂದ ದಾವೀದನೂ ಅವನ ಜನರೂ ಅವುಗಳನ್ನು ಸುಟ್ಟುಬಿಟ್ಟರು. ಫಿಲಿಷ್ಟಿಯರು ತಿರಿಗಿ ಬಂದು ರೆಫಾಯಾಮ್ ತಗ್ಗಿನಲ್ಲಿ ವಿಸ್ತಾರವಾಗಿ ಹರಡಿಕೊಂಡರು. ದಾವೀ ದನು ಕರ್ತನನ್ನು ಕೇಳಿಕೊಂಡಾಗ ಆತನು ಅವನಿಗೆನೀನು ಹೋಗದೆ ಅವರ ಹಿಂದುಗಡೆ ಸುತ್ತಿಕೊಂಡು ಹೋಗಿ ಹಿಪ್ಪಲಿ ಗಿಡಗಳಿಗೆದುರಾಗಿ ಅವರ ಮೇಲೆ ಬರಬೇಕು. ಹಿಪ್ಪಲಿ ಗಿಡಗಳ ಶಿಖರಗಳಲ್ಲಿ ನಡೆದು ಬರುವ ಶಬ್ದವನ್ನು ನೀನು ಕೇಳಿದಾಗ ಚೇತರಿಸಿಕೊಳ್ಳ ಬೇಕು. ಯಾಕಂದರೆ ಆಗಲೇ ಕರ್ತನು ಫಿಲಿಷ್ಟಿಯರ ದಂಡನ್ನು ಹೊಡೆಯಲು ನಿನ್ನ ಮುಂದಾಗಿ ಹೊರಡು ವನು ಅಂದನು.ಆಗ ಕರ್ತನು ತನಗೆ ಆಜ್ಞಾಪಿಸಿದ ಪ್ರಕಾರಮಾಡಿ ದಾವೀದನು, ಗೆಬದಿಂದ ಗೆಜೆರಿನ ವರೆಗೆ ಫಿಲಿಷ್ಟಿಯರನ್ನು ಕೊಂದನು. ಆಗ ಕರ್ತನು ತನಗೆ ಆಜ್ಞಾಪಿಸಿದ ಪ್ರಕಾರಮಾಡಿ ದಾವೀದನು, ಗೆಬದಿಂದ ಗೆಜೆರಿನ ವರೆಗೆ ಫಿಲಿಷ್ಟಿಯರನ್ನು ಕೊಂದನು.
- Romans 8:37 ರೋಮಾಪುರದವರಿಗೆ 8:37ಹೌದು, ನಮ್ಮನ್ನು ಪ್ರಿತಿಸಿದಾತನ ಮೂಲಕವಾಗಿ ನಾವು ಈ ಎಲ್ಲವುಗಳಲ್ಲಿ ಜಯಶಾಲಿ ಗಳಿಗಿಂತಲೂ ಹೆಚ್ಚಿನವರಾಗಿದ್ದೇವೆ.
- 2 Samuel 8:1–2 2 ಸಮುವೇಲನು 8:1–2ಇದಾದ ಮೇಲೆ ಏನಾಯಿತಂದರೆ, ದಾವೀದನು ಫಿಲಿಷ್ಟಿಯರನ್ನು ಹೊಡೆದು ಅವರನ್ನು ಅಣಗಿಸಿ ಅವರ ಕೈಯಿಂದ ಮೇತೆಗಮ್ಮವನ್ನು ತಕ್ಕೊಂಡನು. ಇದಲ್ಲದೆ ಅವನು ಮೋವಾಬ್ಯರನ್ನು ಹೊಡೆದು ಅವರನ್ನು ಹಗ್ಗದಿಂದ ಅಳೆದು ನೆಲಕ್ಕೆ ಬೀಳಮಾಡಿದನು; ಅವರನ್ನು ಕೊಲ್ಲುವದಕ್ಕೆ ಎರಡು ದಾರಗಳಿಂದ, ಜೀವದಲ್ಲಿಡುವದಕ್ಕೆ ಒಂದು ಪೂರ್ಣ ವಾದ ಹಗ್ಗದಿಂದ ಅಳೆದನು. ಹಾಗೆಯೇ ಮೋವಾಬ್ಯರು ದಾವೀದನಿಗೆ ದಾಸರಾಗಿ ಅವನಿಗೆ ಕಪ್ಪವನ್ನು ತಂದರು.
- 2 Samuel 8:13–14 2 ಸಮುವೇಲನು 8:13–14ದಾವೀದನು ಉಪ್ಪಿನ ತಗ್ಗಿನಲ್ಲಿ ಹದಿನೆಂಟು ಸಾವಿರ ಅರಾಮ್ಯರನ್ನು ಹೊಡೆದು ಹಿಂತಿರುಗಿದಾಗ ಹೆಸರುಗೊಂಡನು. ಎದೋಮಿ ನಲ್ಲಿ ಕಾವಲುದಂಡುಗಳನ್ನು ಇಟ್ಟನು. ಎಲ್ಲಾ ಎದೋಮಿ ನಲ್ಲಿ ಅವನು ಕಾವಲುದಂಡುಗಳನ್ನು ಇಟ್ಟದ್ದರಿಂದ ಎದೋಮ್ಯರೆಲ್ಲರೂ ದಾವೀದನಿಗೆ ದಾಸರಾದರು. ದಾವೀದನು ಹೋದಲ್ಲೆಲ್ಲಾ ಕರ್ತನು ಅವನನ್ನು ಕಾಪಾಡಿದನು.