2 Samuel · chapter 22 · verse 44
2 Samuel 22:44 in Kannada
ನೀನು ನನ್ನ ಜನರ ವಾಗ್ವಾದಗಳಿಂದ ನನ್ನನ್ನು ತಪ್ಪಿಸಿದ್ದೀ, ಜನಾಂಗಗಳಿಗೆ ತಲೆಯಾಗಿ ನನ್ನನ್ನು ಇರಿಸಿದ್ದೀ; ನಾನು ಅರಿಯದ ಜನರು ನನ್ನನ್ನು ಸೇವಿಸುವರು.
Neenu nanna janara vaagvaadagalinda nannannu tappisiddee, janaangagalige taleyaagi nannannu irisiddee; naanu ariyada janaru nannannu sevisuvaru.
2 Samuel 22:44 in English
- King James Version (KJV)
- Thou also hast delivered me from the strivings of my people, thou hast kept me [to be] head of the heathen: a people [which] I knew not shall serve me.
- World English Bible (WEB)
- You also have delivered me from the strivings of my people. You have kept me to be the head of the nations. A people whom I have not known will serve me.
- American Standard Version (ASV)
- Thou also hast delivered me from the strivings of my people; Thou hast kept me to be the head of the nations: A people whom I have not known shall serve me.
- Bible in Basic English (BBE)
- You have made me free from the fightings of my people; you have made me the head of the nations: a people of whom I had no knowledge will be my servants.
- Darby Translation (DBY)
- And thou hast delivered me from the strivings of my people, Thou hast kept me to be head of the nations: A people I knew not doth serve me:
- Webster's Bible (WBS)
- Thou also hast delivered me from the strivings of my people, thou hast kept me [to be] head of the heathen: a people [which] I knew not shall serve me.
- Young's Literal Translation (YLT)
- And — Thou dost deliver me From the strivings of my people, Thou placest me for a head of nations; A people I have not known do serve me.
Read in context
- 42ಅವರು ನೋಡುತ್ತಿದ್ದರು, ಆದರೆ ರಕ್ಷಿಸು ವವನು ಯಾರು ಇರಲಿಲ್ಲ; ಕರ್ತನನ್ನು ನೋಡಿದರು, ಆದರೆ ಆತನು ಅವರಿಗೆ ಪ್ರತ್ಯುತ್ತರ ಕೊಡಲಿಲ್ಲ.
- 43ಆಗ ನಾನು ಅವರನ್ನು ನೆಲದ ಧೂಳಿನ ಹಾಗೆ ಪುಡಿಪುಡಿಮಾಡಿದೆನು; ಬೀದಿಯ ಕೆಸರಿನ ಹಾಗೆ ಅವರನ್ನು ತುಳಿದು ಚದರುವಂತೆ ಮಾಡಿದೆನು.
- 44ನೀನು ನನ್ನ ಜನರ ವಾಗ್ವಾದಗಳಿಂದ ನನ್ನನ್ನು ತಪ್ಪಿಸಿದ್ದೀ, ಜನಾಂಗಗಳಿಗೆ ತಲೆಯಾಗಿ ನನ್ನನ್ನು ಇರಿಸಿದ್ದೀ; ನಾನು ಅರಿಯದ ಜನರು ನನ್ನನ್ನು ಸೇವಿಸುವರು.
- 45ದೇಶಾಂತ ದವರು ನನಗೆ ಅಧೀನರಾಗುವರು; ಕೇಳಿದ ಕೂಡಲೆ ನನಗೆ ವಿಧೇಯರಾಗುವರು.
- 46ದೇಶಾಂತದವರು ಬಾಡಿಹೋಗುವರು; ತಮ್ಮನ್ನು ಮುಚ್ಚಿಕೊಂಡ ಸ್ಥಳ ಗಳಿಂದ ನಡುಗುತ್ತಾ ಬರುವರು.
Cross references
- 2 Samuel 8:1–14 2 ಸಮುವೇಲನು 8:1–14ಇದಾದ ಮೇಲೆ ಏನಾಯಿತಂದರೆ, ದಾವೀದನು ಫಿಲಿಷ್ಟಿಯರನ್ನು ಹೊಡೆದು ಅವರನ್ನು ಅಣಗಿಸಿ ಅವರ ಕೈಯಿಂದ ಮೇತೆಗಮ್ಮವನ್ನು ತಕ್ಕೊಂಡನು. ಇದಲ್ಲದೆ ಅವನು ಮೋವಾಬ್ಯರನ್ನು ಹೊಡೆದು ಅವರನ್ನು ಹಗ್ಗದಿಂದ ಅಳೆದು ನೆಲಕ್ಕೆ ಬೀಳಮಾಡಿದನು; ಅವರನ್ನು ಕೊಲ್ಲುವದಕ್ಕೆ ಎರಡು ದಾರಗಳಿಂದ, ಜೀವದಲ್ಲಿಡುವದಕ್ಕೆ ಒಂದು ಪೂರ್ಣ ವಾದ ಹಗ್ಗದಿಂದ ಅಳೆದನು. ಹಾಗೆಯೇ ಮೋವಾಬ್ಯರು ದಾವೀದನಿಗೆ ದಾಸರಾಗಿ ಅವನಿಗೆ ಕಪ್ಪವನ್ನು ತಂದರು. ಇದಲ್ಲದೆ ಚೋಬದ ಅರಸನಾಗಿರುವ ರೆಹೋಬನ ಮಗನಾದ ಹದದೆಜೆರನು ತನ್ನ ಮೇರೆಯನ್ನು ಕಟ್ಟಿ ಕೊಳ್ಳುವದಕ್ಕೆ ಹೋದಾಗ ದಾವೀದನು ಯೂಫ್ರೇ ಟಿಸ್ ನದಿಯ ಬಳಿಯಲ್ಲಿ ಅವನಿಗಿದ್ದ ಸಾವಿರ ರಥ ಗಳನ್ನೂ ಏಳು ನೂರು ಕುದುರೆ ರಾಹುತರನ್ನೂ ಇಪ್ಪತ್ತು ಸಾವಿರ ಕಾಲಾಳುಗಳನ್ನೂ ಹಿಡಿದು ನೂರು ರಥಗಳಿಗೆ ತಕ್ಕ ಕುದುರೆಗಳನ್ನು ಉಳಿಸಿ ಇತರ ಕುದುರೆಗಳ ಕಾಲಿನ ನರಗಳನ್ನು ಕೊಯ್ದುಬಿಟ್ಟನು. ಆದರೆ ದಮಸ್ಕದಲ್ಲಿರುವ ಅರಾಮ್ಯರು ಚೋಬದ ಅರಸನಾದ ಹದದೆಜೆರನಿಗೆ ಸಹಾಯಮಾಡುವದಕ್ಕೆ ಬಂದಾಗ ದಾವೀದನು ಅರಾಮ್ಯರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಕೊಂದು ಹಾಕಿದನು. ತರುವಾಯ ಕಾವಲುದಂಡುಗಳನ್ನು ದಾವೀದನು ದಮಸ್ಕಕ್ಕೆ ಹೊಂದಿದ ಅರಾಮ್ಯದ ಠಾಣ ಗಳಲ್ಲಿ ಇಟ್ಟನು. ಹಾಗೆಯೇ ಅರಾಮ್ಯರು ದಾವೀದ ನಿಗೆ ದಾಸರಾಗಿ ಕಪ್ಪಗಳನ್ನು ತಂದರು; ದಾವೀದನು ಹೋದ ಸ್ಥಳಗಳಲ್ಲೆಲ್ಲಾ ಕರ್ತನು ಅವನನ್ನು ಕಾಪಾಡಿ ದನು. ಆದರೆ ದಾವೀದನು ಹದದೆಜೆರನ ಸೇವಕ ರಿಗಿದ್ದ ಬಂಗಾರದ ಡಾಲುಗಳನ್ನು ತೆಗೆದುಕೊಂಡು ಅವುಗಳನ್ನು ಯೆರೂಸಲೇಮಿಗೆ ತಂದನು. ಇದಲ್ಲದೆ ಹದದೆಜೆರನ ಪಟ್ಟಣಗಳಾದ ಬೆಟಹದಿಂದಲೂ ಬೇರೋತೈಯಿಂದಲೂ ಅರಸನಾದ ದಾವೀದನು ಅತ್ಯ ಧಿಕವಾಗಿ ಹಿತ್ತಾಳೆಯನ್ನು ತೆಗೆದುಕೊಂಡು ಬಂದನು. ದಾವೀದನು ಹದದೆಜೆರನ ಎಲ್ಲಾ ಸೈನ್ಯವನ್ನು ಹೊಡೆದನೆಂದು ಹಮಾತಿನ ಅರಸನಾದ ತೋವು ಕೇಳಿದಾಗ ಅವನು ದಾವೀದನನ್ನು ವಂದಿಸುವ ದಕ್ಕೂ ಹರಸುವದಕ್ಕೂ ತನ್ನ ಮಗನಾದ ಯೋರಾಮ ನನ್ನು ಕಳುಹಿಸಿದನು; ಯಾಕಂದರೆ ತೋವಿಗೂ ಹದ ದೆಜೆರನಿಗೂ ವಿರೋಧವಾಗಿ ಯುದ್ಧಮಾಡಿದಾಗ ದಾವೀದನು ಅವನನ್ನು ಹೊಡೆದಿದ್ದನು; ಹದದೆಜೆರನಿಗೆ ತೋವು ಸಂಗಡ ಯುದ್ಧಗಳಿದ್ದವು. ಯೋರಾಮನು ಬೆಳ್ಳಿ ಬಂಗಾರ ಹಿತ್ತಾಳೆಯ ಪಾತ್ರೆಗಳನ್ನೂ ತನ್ನೊಂದಿಗೆ ತಂದನು. ಇವುಗಳನ್ನು ಅರಸನಾದ ದಾವೀದನು ವಶಮಾಡಿಕೊಂಡು ಅರಾಮ್ಯರೂ ಮೋವಾಬ್ಯರೂ ಅಮ್ಮೋನನ ಮಕ್ಕಳೂ ಫಿಲಿಷ್ಟಿಯರೂ ಅಮಾಲೇಕ್ಯರೂ ಎಂಬ ಸಕಲ ಜನಾಂಗಗಳಿಂದ ತೆಗೆದು ಪ್ರತಿಷ್ಠೆ ಮಾಡಿದ ಬೆಳ್ಳಿ ಬಂಗಾರದ ಸಂಗಡಲೂ ಚೋಬದ ಅರಸನಾಗಿರುವ ರೆಹೋಬನ ಮಗನಾದ ಹದದೆಜೆರನ ಬಳಿಯಲ್ಲಿ ಕೊಳ್ಳೆ ಇಟ್ಟದರ ಸಂಗಡಲೂ ಕರ್ತನಿಗೆ ಪ್ರತಿಷ್ಠೆಮಾಡಿ ಇಟ್ಟನು. ದಾವೀದನು ಉಪ್ಪಿನ ತಗ್ಗಿನಲ್ಲಿ ಹದಿನೆಂಟು ಸಾವಿರ ಅರಾಮ್ಯರನ್ನು ಹೊಡೆದು ಹಿಂತಿರುಗಿದಾಗ ಹೆಸರುಗೊಂಡನು. ಎದೋಮಿ ನಲ್ಲಿ ಕಾವಲುದಂಡುಗಳನ್ನು ಇಟ್ಟನು. ಎಲ್ಲಾ ಎದೋಮಿ ನಲ್ಲಿ ಅವನು ಕಾವಲುದಂಡುಗಳನ್ನು ಇಟ್ಟದ್ದರಿಂದ ಎದೋಮ್ಯರೆಲ್ಲರೂ ದಾವೀದನಿಗೆ ದಾಸರಾದರು. ದಾವೀದನು ಹೋದಲ್ಲೆಲ್ಲಾ ಕರ್ತನು ಅವನನ್ನು ಕಾಪಾಡಿದನು.
- Isaiah 55:5 ಯೆಶಾಯ 55:5ಇಗೋ, ನಿನ್ನ ದೇವರಾದ ಕರ್ತನ ನಿಮಿತ್ತವೂ ಇಸ್ರಾಯೇಲಿನ ಪರಿಶುದ್ಧನ ನಿಮಿತ್ತವೂ ನೀನು ತಿಳಿಯದ ಜನಾಂಗಗಳನ್ನು ಕರೆ ಯುವಿ; ಆತನು ನಿನ್ನನ್ನು ಮಹಿಮೆ ಪಡಿಸಿದ್ದರಿಂದ ನಿನ್ನನ್ನು ತಿಳಿಯದ ಜನಾಂಗಗಳು ನಿನ್ನ ಬಳಿಗೆ ಓಡಿ ಬರುವವು.
- 2 Samuel 3:1 2 ಸಮುವೇಲನು 3:1ಸೌಲನ ಮನೆಗೂ ದಾವೀದನ ಮನೆಗೂ ಬಹು ದಿವಸಗಳು ಯುದ್ಧವುನಡೆಯಿತು. ದಾವೀದನು ಬಲವಾಗುತ್ತಾ ಬಂದನು. ಸೌಲನ ಮನೆ ಯವರು ಬಲಹೀನರಾಗುತ್ತಾ ಹೋದರು.
- 2 Samuel 19:14 2 ಸಮುವೇಲನು 19:14ಹಾಗೆಯೇ ಅವನು ಸಕಲ ಯೆಹೂದ ಜನರ ಹೃದಯವನ್ನು ಒಬ್ಬನ ಹೃದಯದ ಹಾಗೆ ಬೊಗ್ಗಿಸಿ ದ್ದರಿಂದ ಅವರು ಅರಸನಿಗೆ--ನೀನೂ ನಿನ್ನ ಎಲ್ಲಾ ಸೇವಕರೂ ತಿರಿಗಿ ಬನ್ನಿರಿ ಎಂದು ಹೇಳಿ ಕಳುಹಿಸಿದರು.
- 2 Samuel 19:9 2 ಸಮುವೇಲನು 19:9ಆದರೆ ಇಸ್ರಾಯೇಲಿನ ಎಲ್ಲಾ ಕುಲಗಳಲ್ಲಿರುವ ಎಲ್ಲಾ ಜನರು ತಮ್ಮೊಳಗೆ ವ್ಯಾಜ್ಯವಾಡಿ--ನಮ್ಮ ಶತ್ರು ಗಳ ಕೈಯಿಂದ ನಮ್ಮನ್ನು ವಿಮೋಚನೆ ಮಾಡಿದವನು ಅರಸನೇ; ಫಿಲಿಷ್ಟಿಯರ ಕೈಯಿಂದ ನಮ್ಮನ್ನು ತಪ್ಪಿಸಿ ದವನೂ ಅವನೇ.
- Deuteronomy 28:13 ಧರ್ಮೋಪದೇಶಕಾಂಡ 28:13ನಾನು ಈಹೊತ್ತು ನಿನಗೆ ಆಜ್ಞಾಪಿಸುವ ನಿನ್ನ ದೇವರಾದ ಕರ್ತನ ಆಜ್ಞೆಗಳನ್ನು ನೀನು ಕೇಳಿ ಕಾಪಾಡಿ ಕೈಕೊಂಡರೆ ಕರ್ತನು ನಿನ್ನನ್ನು ಬಾಲವನ್ನಲ್ಲ, ತಲೆಯಾಗಿ ಮಾಡುವನು; ನೀನು ಕೆಳಗಲ್ಲ, ಮೇಲೆಯೇ ಇರುವಿ.
- Isaiah 60:12 ಯೆಶಾಯ 60:12ನಿನ್ನನ್ನು ಸೇವಿಸದ ಜನಾಂಗವೂ ರಾಜ್ಯವೂ ನಾಶವಾಗುವದು; ಹೌದು, ಆ ಜನಾಂಗ ಗಳು ಸಂಪೂರ್ಣವಾಗಿ ಹಾಳಾಗುವವು.
- 2 Samuel 5:1 2 ಸಮುವೇಲನು 5:1ಇದಾದ ಮೇಲೆ ಇಸ್ರಾಯೇಲ್ ಗೋತ್ರ ಗಳೆಲ್ಲಾ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು--ಇಗೋ, ನಾವು ನಿನ್ನ ಎಲುಬೂ ನಿನ್ನ ಮಾಂಸವೂ ಆಗಿದ್ದೇವೆ.
- Revelation 11:15 ಪ್ರಕಟನೆ 11:15ಏಳನೆಯ ದೂತನು ತುತೂರಿಯನ್ನೂದಿದನು. ಆಗ ಪರಲೋಕದಲ್ಲಿ ಮಹಾಶಬ್ದಗಳುಂಟಾಗಿ-- ಈ ಲೋಕದ ರಾಜ್ಯಗಳು ನಮ್ಮ ಕರ್ತನ ಮತ್ತು ಆತನ ಕ್ರಿಸ್ತನ ರಾಜ್ಯಗಳಾದವು; ಆತನು ಯುಗ ಯುಗಾಂತರಗಳಲ್ಲಿಯೂ ಆಳುವನು ಎಂದು ಹೇಳಿ ದವು.
- Acts 5:30–31 ಅಪೊಸ್ತಲರ ಕೃತ್ಯಗಳು 5:30–31ನೀವು ಮರಕ್ಕೆ ತೂಗುಹಾಕಿ ಕೊಂದ ಯೇಸುವನ್ನು ನಮ್ಮ ಪಿತೃಗಳ ದೇವರು ಎಬ್ಬಿಸಿದನು. ಇಸ್ರಾಯೇಲ್ಯ ರಲ್ಲಿ ಮಾನಸಾಂತರ ಉಂಟುಮಾಡಿ ಪಾಪಗಳ ಪರಿಹಾರವನ್ನು ಕೊಡುವ ಹಾಗೆ ಆತನು ಪ್ರಭುವೂ ರಕ್ಷಕನೂ ಆಗಿರುವಂತೆ ದೇವರು ತನ್ನ ಬಲಗೈಯಿಂದ ಆತನನ್ನು ಉನ್ನತಕ್ಕೆ ಏರಿಸಿದ್ದಾನೆ.
- Psalm 2:8 ಕೀರ್ತನೆಗಳು 2:8ನನ್ನನ್ನು ಕೇಳು; ಆಗ ಅನ್ಯಜನರನ್ನು ನಿನ್ನ ಬಾಧ್ಯತೆಯಾಗಿಯೂ ಭೂಮಿಯ ಕಟ್ಟಕಡೆಯ ವರೆಗೆ ನಿನ್ನ ಸ್ವಾಸ್ಥ್ಯವಾಗಿಯೂ ಕೊಡುವೆನು.
- 2 Samuel 20:1–2 2 ಸಮುವೇಲನು 20:1–2ಬೆನ್ಯಾವಿಾನನ ಕುಲದವನಾದ ಬಿಕ್ರೀಯಮಗನಾಗಿರುವ ಶೆಬನೆಂಬ ಹೆಸರುಳ್ಳ ಬೆಲಿಯಾಳನವನಾದ ಒಬ್ಬನು ಅಲ್ಲಿದ್ದನು. ಅವನು ತುತೂರಿಯನ್ನು ಊದಿ--ನಮಗೆ ದಾವೀದನಲ್ಲಿ ಪಾಲಿಲ್ಲ; ಇಷಯನ ಮಗನಲ್ಲಿ ನಮಗೆ ಬಾಧ್ಯತೆಯೂ ಇಲ್ಲ. ಓ ಇಸ್ರಾಯೇಲ್ಯರೇ, ನಿಮ್ಮ ನಿಮ್ಮ ಗುಡಾರಗಳಿಗೆ ಹೋಗಿರಿ ಅಂದನು. ಇಸ್ರಾಯೇಲ್ ಜನರೆಲ್ಲರು ದಾವೀದನನ್ನು ಬಿಟ್ಟು ಸರಿದು ಬಿಕ್ರೀಯ ಮಗನಾದ ಶೆಬನ ಹಿಂದೆ ಹೋದರು. ಆದರೆ ಯೊರ್ದನಿನಿಂದ ಯೆರೂಸಲೇಮಿನ ವರೆಗೂ ಇರುವ ಯೆಹೂದ ಜನರು ತಮ್ಮ ಅರಸನನ್ನು ಅಂಟಿಕೊಂಡಿದ್ದರು.