2 Samuel · chapter 24 · verse 21
2 Samuel 24:21 in Kannada
ಅದಕ್ಕೆ ದಾವೀ ದನು--ಈ ಬಾಧೆಯು ಜನರ ಕಡೆಯಿಂದ ತಡೆ ಯಲ್ಪಡುವ ಹಾಗೆ ಕರ್ತನಿಗೆ ಒಂದು ಬಲಿಪೀಠವನ್ನು ಕಟ್ಟಿಸುವದಕ್ಕೆ ಈ ಕಣವನ್ನು ನಿನ್ನಿಂದ ಕೊಂಡು ಕೊಳ್ಳಲು ಬಂದಿದ್ದೇನೆ ಅಂದನು.
Adakke daavee danu--ee baadheyu janara kadeyinda tade yalpaduva haage kartanige ondu balipeethavannu kattisuvadakke ee kanavannu ninninda kondu kollalu bandiddene andanu.
2 Samuel 24:21 in English
- King James Version (KJV)
- And Araunah said, Wherefore is my lord the king come to his servant? And David said, To buy the threshingfloor of thee, to build an altar unto the LORD, that the plague may be stayed from the people.
- World English Bible (WEB)
- Araunah said, “Why has my lord the king come to his servant?” David said, “To buy your threshing floor, to build an altar to the LORD, that the plague may be stopped from afflicting the people.”
- American Standard Version (ASV)
- And Araunah said, Wherefore is my lord the king come to his servant? And David said, To buy the threshing-floor of thee, to build an altar unto Jehovah, that the plague may be stayed from the people.
- Bible in Basic English (BBE)
- And Araunah said, Why has my lord the king come to his servant? And David said, To give you a price for your grain-floor, so that I may put up an altar to the Lord, and the disease may be stopped among the people.
- Darby Translation (DBY)
- And Araunah said, Why is my lord the king come to his servant? And David said, To buy the threshing-floor of thee, to build an altar to Jehovah, that the plague may be stayed from the people.
- Webster's Bible (WBS)
- And Araunah said, Why is my lord the king come to his servant? And David said, To buy the threshing-floor of thee, to build an altar to the LORD, that the plague may be stayed from the people.
- Young's Literal Translation (YLT)
- And Araunah saith, 'Wherefore hath my lord the king come unto his servant?' and David saith, 'To buy from thee the threshing-floor, to build an altar to Jehovah, and the plague is restrained from the people.'
Read in context
- 19ಆಗ ದಾವೀದನು ಗಾದನು ಹೇಳಿದ ಹಾಗೆಯೇ ಕರ್ತನು ಆಜ್ಞಾಪಿಸಿದ ಪ್ರಕಾರವೇ ಹೋದನು.
- 20ಆದರೆ ಅರೌನನು ಕಣ್ಣೆತ್ತಿ ಅರಸನೂ ಅವನ ಸೇವಕರೂ ತನ್ನ ಬಳಿಗೆ ಬರುವದನ್ನು ನೋಡಿದನು; ಆಗ ಅರೌನನು ಅವರ ಮುಂದೆ ಹೋಗಿ ಅರಸನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ಅರೌನನುಅರಸನಾದ ನನ್ನ ಒಡೆಯನು ತನ್ನ ಸೇವಕನ ಬಳಿಗೆ ಬಂದದ್ದೇನು ಅಂದನು.
- 21ಅದಕ್ಕೆ ದಾವೀ ದನು--ಈ ಬಾಧೆಯು ಜನರ ಕಡೆಯಿಂದ ತಡೆ ಯಲ್ಪಡುವ ಹಾಗೆ ಕರ್ತನಿಗೆ ಒಂದು ಬಲಿಪೀಠವನ್ನು ಕಟ್ಟಿಸುವದಕ್ಕೆ ಈ ಕಣವನ್ನು ನಿನ್ನಿಂದ ಕೊಂಡು ಕೊಳ್ಳಲು ಬಂದಿದ್ದೇನೆ ಅಂದನು.
- 22ಅರೌನನು ದಾವೀದನಿಗೆ--ಅರಸನಾದ ನನ್ನ ಒಡೆಯನು ಅದನ್ನು ತಕ್ಕೊಂಡು ತನ್ನ ದೃಷ್ಟಿಗೆ ಒಳ್ಳೇದಾಗಿರುವದನ್ನು ಅರ್ಪಿಸಲಿ; ಇಗೋ, ದಹನಬಲಿಗೋಸ್ಕರ ಎತ್ತು ಗಳೂ ಕಟ್ಟಿಗೆಗಳಿಗೋಸ್ಕರ ಹಂತಿ ದೂಡುವ ಸಾಮಾನೂ ಬಾತಿ ಮುಟ್ಟುಗಳೂ ಇಲ್ಲಿ ಅವೆ ಅಂದನು.
- 23ಅರೌನನು ಇವುಗಳನ್ನೆಲ್ಲಾ ಅರಸನ ಸೇವಕನಾದ ನಾನು ಅರಸನಿಗೆ ಕೊಟ್ಟೆನು. ಇದಲ್ಲದೆ ಅರೌನನು ಅರಸನಿಗೆ--ನಿನ್ನ ದೇವರಾದ ಕರ್ತನು ನಿನ್ನನ್ನು ಅಂಗೀಕರಿಸಲಿ ಅಂದನು.
Cross references
- Genesis 23:8–16 ಆದಿಕಾಂಡ 23:8–16ಅವರ ಸಂಗಡ ಮಾತನಾಡಿದ್ದೇ ನಂದರೆ--ನಾನು ನನ್ನ ಹೆಂಡತಿಯ ಶವವನ್ನು ನನ್ನೆದುರಿನಿಂದ ಹೂಣಿಡುವದು ನಿಮ್ಮ ಮನಸ್ಸಿಗೆ ಸರಿಬಿದ್ದರೆ ನನ್ನ ಮಾತು ಕೇಳಿ ಚೋಹರನ ಮಗನಾದ ಎಫ್ರೋನನನ್ನು ನನಗಾಗಿ ಬೇಡಿಕೊಳ್ಳಿರಿ. ಅವನು ತನ್ನ ಹೊಲದ ಅಂಚಿನಲ್ಲಿರುವ ಮಕ್ಪೇಲ ಗವಿಯನ್ನು ನನಗೆ ಕೊಡಲಿ; ಅವನು ಅದನ್ನು ತಕ್ಕ ಕ್ರಯಕ್ಕೆ ನಿಮ್ಮ ಎದುರಿನಲ್ಲಿ ನನಗೆ ಕೊಡಲಿ ಅಂದನು. ಆಗ ಎಫ್ರೋನನು ಹೇತನ ಮಕ್ಕಳ ಮಧ್ಯದಲ್ಲಿ ವಾಸವಾಗಿದ್ದನು. ಹಿತ್ತೀಯನಾದ ಎಫ್ರೋನನು ಅಬ್ರಹಾಮನಿಗೆ ಪ್ರತ್ಯುತ್ತರವಾಗಿ ಅವನ ಪಟ್ಟಣದ ಹೆಬ್ಬಾಗಿಲಿನಲ್ಲಿ ಕೂಡಿಕೊಂಡು ಹೇತನ ಮಕ್ಕಳು ಕೇಳುವಂತೆ ಹೇಳಿದ್ದೇನಂದರೆ-- ಒಡೆಯನೇ, ಹಾಗಲ್ಲ; ನನ್ನ ಮಾತನ್ನು ಕೇಳು; ಆ ಹೊಲವನ್ನು ಅದರಲ್ಲಿರುವ ಗವಿಯನ್ನೂ ನಿನಗೆ ಕೊಡುತ್ತೇನೆ; ಅದನ್ನು ನನ್ನ ಜನರ ಎದುರಿನಲ್ಲಿ ನಿನಗೆ ಕೊಡುತ್ತೇನೆ; ನಿನ್ನ ಹೆಂಡತಿಯ ಶವವನ್ನು ಹೂಣಿಡು ಅಂದನು. ಆಗ ಅಬ್ರಹಾಮನು ಆ ದೇಶದ ಜನರ ಮುಂದೆ ಬಾಗಿ ಕೊಂಡನು. ಅವನು ದೇಶದ ಜನರು ಕೇಳುವಂತೆ ಎಫ್ರೋನನಿಗೆ ಹೇಳಿದ್ದೇನಂದರೆ--ನೀನು ನನಗೆ ಕೊಡಬೇಕೆಂದಿದ್ದರೆ ನನ್ನ ಮಾತನ್ನು ಕೇಳು; ನಾನು ಹೊಲದ ಕ್ರಯವನ್ನು ಕೊಡುತ್ತೇನೆ; ಅದನ್ನು ನನ್ನಿಂದ ತಕ್ಕೋ, ಆಗ ನನ್ನ ಹೆಂಡತಿಯ ಶವವನ್ನು ಅಲ್ಲಿ ಹೂಣಿಡುವೆನು ಅಂದನು. ಆಗ ಎಫ್ರೋನನು ಅಬ್ರಹಾಮನಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆ-- ಒಡೆಯನೇ, ನನ್ನ ಮಾತನ್ನು ಕೇಳು, ಆ ಭೂಮಿಯು ನಾನೂರು ಬೆಳ್ಳಿಯ ಶೆಕೆಲ್ ಬೆಲೆಯುಳ್ಳದ್ದು; ಅದು ನನಗೂ ನಿನಗೂ ಏನು? ನಿನ್ನ ಹೆಂಡತಿಯ ಶವವನ್ನು ಹೂಣಿಡು ಅಂದನು. ಅಬ್ರಹಾಮನು ಎಫ್ರೋನನ ಮಾತನ್ನು ಕೇಳಿದನು. ಆದದರಿಂದ ಹೇತನ ಮಕ್ಕಳಿಗೆ ಕೇಳುವಂತೆ ಎಫ್ರೋನನು ಹೇಳಿದ ಬೆಲೆ ಅಂದರೆ ವರ್ತಕರಲ್ಲಿ ನಡಿಯುವ ನಾಲ್ಕುನೂರು ಶೆಕೆಲು (ಬೆಳ್ಳಿಯನ್ನು) ತೂಗಿ ಅವನಿಗೆ ಕೊಟ್ಟನು.
- Psalm 106:30 ಕೀರ್ತನೆಗಳು 106:30ಆಗ ಫೀನೆಹಾಸನು ನಿಂತು ಕೊಂಡು ನ್ಯಾಯತೀರಿಸಿದ್ದರಿಂದ ವ್ಯಾಧಿಯು ನಿಂತು ಹೋಯಿತು.
- Numbers 25:8 ಅರಣ್ಯಕಾಂಡ 25:8ಇಸ್ರಾಯೇಲಿನವನಾದ ಆ ಮನುಷ್ಯನ ಹಿಂದೆ ಡೇರೆಯೊಳಗೆ ಪ್ರವೇಶಿಸಿ ಇಸ್ರಾಯೇಲಿನವನನ್ನೂ ಆ ಸ್ತ್ರೀಯನ್ನೂ ಇಬ್ಬರ ಹೊಟ್ಟೆಯನ್ನು ತಿವಿದನು; ಹೀಗೆ ಇಸ್ರಾಯೇಲ್ ಮಕ್ಕಳಿಗೆ ಉಂಟಾಗಿದ್ದ ವ್ಯಾಧಿಯು ನಿಂತುಹೋಯಿತು.
- 2 Samuel 24:3 2 ಸಮುವೇಲನು 24:3ಆಗ ಯೋವಾಬನು ಅರಸನಿಗೆ-- ಅರಸನಾದ ನನ್ನ ಒಡೆಯನ ಕಣ್ಣುಗಳು ಅದನ್ನು ನೋಡುವ ಹಾಗೆ ನಿನ್ನ ದೇವರಾದ ಕರ್ತನು ಈಗ ಇರುವದಕ್ಕಿಂತ ಜ ರನ್ನು ನೂರರಷ್ಟಾಗಿ ಹೆಚ್ಚು ಮಾಡಲಿ; ಆದರೆ ಅರಸ ನಾದ ನನ್ನ ಒಡೆಯನು ಈ ಕಾರ್ಯವನ್ನು ಆಶಿಸುವ ದೇನು ಅಂದನು. ಆದಾಗ್ಯೂ ಅರಸನ ಮಾತು ಯೋವಾಬನಿಗೂ ಸೈನ್ಯಾಧಿಪತಿಗಳಿಗೂ ವಿರೋಧವಾಗಿ ಪ್ರೇರೇಪಿಸಿತು.
- Numbers 16:44–50 ಅರಣ್ಯಕಾಂಡ 16:44–50ಆಗ ಕರ್ತನು ಮೋಶೆಯ ಸಂಗಡ ಮಾತನಾಡಿ-- ನೀವು ಈ ಸಭೆಯ ಮಧ್ಯದಿಂದ ಎದ್ದು ಬನ್ನಿರಿ. ನಾನು ಅವರನ್ನು ಕ್ಷಣಮಾತ್ರದಲ್ಲಿ ದಹಿಸಿಬಿಡುತ್ತೇನೆ ಅಂದನು. ಆಗ ಅವರು ಬೋರಲು ಬಿದ್ದರು. ಮೋಶೆಯು ಆರೋನನಿಗೆ--ನೀನು ಧೂಪದ ಪಾತ್ರೆಯನ್ನು ತೆಗೆದುಕೊಂಡು ಅದರ ಮೇಲೆ ಬಲಿಪೀಠದ ಬೆಂಕಿಯನ್ನು ಇಟ್ಟು ಧೂಪ ಹಾಕಿ ಶೀಘ್ರವಾಗಿ ಸಭೆಯೊಳಗೆ ಹೋಗಿ ಅವರಿ ಗೋಸ್ಕರ ಪ್ರಾಯಶ್ಚಿತ್ತಮಾಡು. ಯಾಕಂದರೆ ಕರ್ತನ ಸಮ್ಮುಖದಿಂದ ಕೋಪವು ಹೊರಟು ಅವರೊಳಗೆ ವ್ಯಾಧಿಯು ಪ್ರಾರಂಭವಾಯಿತು ಎಂದು ಹೇಳಿದನು. ಮೋಶೆಯು ಹೇಳಿದ ಹಾಗೆ ಆರೋನನು ಅದನ್ನು ತೆಗೆದುಕೊಂಡು ಸಭೆಯ ಮಧ್ಯಕ್ಕೆ ಓಡಿಬಂದನು. ಆಗ ಇಗೋ, ವ್ಯಾಧಿಯು ಜನರೊಳಗೆ ಪ್ರಾರಂಭ ವಾಗಿತ್ತು. ಆಗ ಅವನು ಧೂಪವನ್ನಿಟ್ಟು ಜನರಿಗೋ ಸ್ಕರ ಪ್ರಾಯಶ್ಚಿತ್ತಮಾಡಿದನು. ಅವನು ಸತ್ತವರಿಗೂ ಜೀವವುಳ್ಳವರಿಗೂ ಮಧ್ಯ ನಿಂತುಕೊಂಡ ದ್ದರಿಂದ ವ್ಯಾಧಿಯು ಶಮನವಾಯಿತು. ಆದರೆ ಕೋರಹನ ನಿಮಿತ್ತ ಸತ್ತುಹೋದವರ ಹೊರತಾಗಿ ವ್ಯಾಧಿಯಲ್ಲಿ ಸತ್ತವರು ಹದಿನಾಲ್ಕುಸಾವಿರದ ಏಳು ನೂರು ಮಂದಿಯಾಗಿದ್ದರು.ಆರೋನನು ಮೋಶೆಯ ಬಳಿಗೂ ಸಭೆಯ ಗುಡಾರದ ಬಾಗಲಿನ ಬಳಿಗೂ ಹಿಂತಿರುಗಿ ಬಂದನು, ವ್ಯಾಧಿಯು ನಿಂತು ಹೋಗಿತ್ತು. ಆರೋನನು ಮೋಶೆಯ ಬಳಿಗೂ ಸಭೆಯ ಗುಡಾರದ ಬಾಗಲಿನ ಬಳಿಗೂ ಹಿಂತಿರುಗಿ ಬಂದನು, ವ್ಯಾಧಿಯು ನಿಂತು ಹೋಗಿತ್ತು.
- 1 Chronicles 21:22 1 ಪೂರ್ವಕಾಲವೃತ್ತಾಂತ 21:22ಆಗ ದಾವೀದನು ಒರ್ನಾನನಿಗೆ--ಈ ಬಾಧೆಯು ಜನರನ್ನು ಬಿಟ್ಟು ಹೋಗುವ ಹಾಗೆ ನಾನು ಕರ್ತನಿಗೆ ಬಲಿ ಪೀಠವನ್ನು ಕಟ್ಟಿಸುವದಕ್ಕೆ ಈ ಕಣದ ಸ್ಥಳವನ್ನು ಪೂರ್ಣ ಕ್ರಯಕ್ಕೆ ನನಗೆ ಕೊಡು ಅಂದನು.
- 2 Samuel 24:18 2 ಸಮುವೇಲನು 24:18ಅದೇ ದಿವಸದಲ್ಲಿ ಪ್ರವಾದಿಯಾದ ಗಾದನು ದಾವೀದನ ಬಳಿಗೆ ಬಂದು ಅವನಿಗೆ--ನೀನು ಹೋಗಿ ಯೆಬೂಸಿಯನಾದ ಅರೌನನ ಕಣದಲ್ಲಿ ಕರ್ತನಿಗೆ ಒಂದು ಬಲಿಪೀಠವನ್ನು ಕಟ್ಟಿಸು ಅಂದನು.
- Jeremiah 32:6–14 ಯೆರೆಮೀಯ 32:6–14ಆಗ ಯೆರೆವಿಾಯನು ಹೇಳಿದ್ದೇನೆಂದರೆ--ಕರ್ತನ ವಾಕ್ಯವು ನನಗೆ ಬಂತು, ಹೇಗಂದರೆ-- ಇಗೋ, ನಿನ್ನ ಚಿಕ್ಕಪ್ಪನಾದ ಶಲ್ಲೂಮನ ಮಗನಾದ ಹನಮೇಲನು ನಿನ್ನ ಬಳಿಗೆ ಬಂದು--ಅನಾತೋತಿನಲ್ಲಿರುವ ನನ್ನ ಹೊಲವನ್ನು ನಿನಗೋಸ್ಕರ ಕೊಂಡುಕೋ. ಅದನ್ನು ಕೊಂಡುಕೊಳ್ಳುವ ಹಾಗೆ ವಿಮೋಚಿಸುವ ಅಧಿಕಾರ ನಿನಗುಂಟು ಎಂದು ಹೇಳುವನು. ಹಾಗೆಯೇ ನನ್ನ ಚಿಕ್ಕಪ್ಪನ ಮಗನಾದ ಹನಮೇಲನು ಕರ್ತನ ವಾಕ್ಯದ ಪ್ರಕಾರ ನನ್ನ ಬಳಿಗೆ ಸೆರೆಮನೆಯ ಅಂಗಳಕ್ಕೆಬಂದು--ಬೆನ್ಯಾವಿಾನನ ದೇಶದ ಅನಾತೋತಿನಲ್ಲಿರುವ ನನ್ನ ಹೊಲವನ್ನು ನಿನಗೋಸ್ಕರ ಕೊಂಡುಕೋ, ಬಾಧ್ಯದ ಅಧಿಕಾರವೂ ವಿಮೋಚನೆಯೂ ನಿನ್ನದು; ಅದನ್ನು ನಿನಗೋಸ್ಕರ ಕೊಂಡುಕೋ ಎಂದು ಬೇಡಿಕೊಂಡು ಹೇಳಿದನು. ಆಗ ಅದು ಕರ್ತನ ವಾಕ್ಯವೆಂದು ನಾನು ತಿಳುಕೊಂಡೆನು. ಹಾಗೆ ನಾನು ನನ್ನ ಚಿಕ್ಕಪ್ಪನ ಮಗನಾದ ಹನಮೇಲನಿಂದ ಅನಾತೋತಿನಲ್ಲಿದ್ದ ಹೊಲವನ್ನು ಕೊಂಡುಕೊಂಡು ಅವನಿಗೆ ಹದಿನೇಳು ಬೆಳ್ಳಿ ಶೇಕೆಲುಗಳನ್ನು ತೂಕ ಮಾಡಿ ಕ್ರಯಕೊಟ್ಟೆನು. ನಾನು ಪತ್ರದಲ್ಲಿ ಬರೆದು, ಅದಕ್ಕೆ ಮುದ್ರೆ ಹಾಕಿ, ಸಾಕ್ಷಿಗಳನ್ನಿಟ್ಟು ಬೆಳ್ಳಿಯನ್ನು ತ್ರಾಸಿನಲ್ಲಿ ತೂಕ ಮಾಡಿ ದೆನು. ಆಗ ನಾನು ಆಜ್ಞೆ ನಿಯಮಗಳ ಪ್ರಕಾರ ಮುದ್ರೆ ಹಾಕಿದ ಕ್ರಯಪತ್ರವನ್ನೂ ತೆರೆದಿರುವದನ್ನೂ ತಕ್ಕೊಂಡೆನು. ಆ ಕ್ರಯಪತ್ರವನ್ನು ನನ್ನ ಚಿಕ್ಕಪ್ಪನ ಮಗನಾದ ಹನಮೇಲನ ಮುಂದೆಯೂ ಕ್ರಯಪತ್ರ ದಲ್ಲಿ ರುಜು ಹಾಕಿದ ಸಾಕ್ಷಿಗಳ ಮುಂದೆಯೂ ಸೆರೆ ಮನೆಯ ಅಂಗಳದಲ್ಲಿ ಕೂತುಕೊಂಡಿದ್ದ ಯೆಹೂದ್ಯ ರೆಲ್ಲರ ಮುಂದೆಯೂ ಮಹ್ಸೇಮನ ಮಗನಾದ ನೇರೀ ಯನ ಮಗನಾದ ಬಾರೂಕನಿಗೆ ಕೊಟ್ಟೆನು. ಅವರ ಮುಂದೆ ನಾನು ಬಾರೂಕನಿಗೆ ಅಪ್ಪಣೆ ಕೊಟ್ಟದ್ದೇ ನಂದರೆ-- ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಈ ಪತ್ರಗಳನ್ನು ಅಂದರೆ ಮುದ್ರೆ ಹಾಕಿದ ಈ ಕ್ರಯಪತ್ರವನ್ನೂ ತೆರೆದಿರುವ ಈ ಪತ್ರವನ್ನೂ ತೆಗೆದು ಅವು ಬಹಳ ದಿವಸವಿರುವ ಹಾಗೆ ಅವುಗಳನ್ನು ಒಂದು ಮಣ್ಣಿನ ಪಾತ್ರೆಯಲ್ಲಿ ಇಡು.
- 2 Samuel 21:3–14 2 ಸಮುವೇಲನು 21:3–14ಆದದರಿಂದ ದಾವೀದನು ಗಿಬ್ಯೋನ್ಯರಿಗೆ--ನಾನು ನಿಮಗೆ ಮಾಡ ಬೇಕಾದದ್ದೇನು? ನೀವು ಕರ್ತನ ಬಾಧ್ಯತೆಯನ್ನು ಆಶೀರ್ವದಿಸುವ ಹಾಗೆ ನಾನು ಯಾವದರಿಂದ ಪ್ರಾಯಶ್ಚಿತ್ತ ಮಾಡಲಿ ಎಂದು ಕೇಳಿದನು. ಆಗ ಗಿಬ್ಯೋನ್ಯರು ಅವನಿಗೆ--ಸೌಲನ ಕೈಯಿಂದಲಾದರೂ ಅವನ ಮನೆ ಯವರ ಕೈಯಿಂದಲಾದರೂ ನಮಗೆ ಬೆಳ್ಳಿಯಾದರೂ ಬಂಗಾರವಾದರೂ ಬೇಡ; ನೀನು ಈ ಕಾರ್ಯಕ್ಕೋಸ್ಕರ ಇಸ್ರಾಯೇಲಿನಲ್ಲಿ ಒಬ್ಬನನ್ನಾದರೂ ಕೊಂದುಹಾಕ ಬೇಕೆಂಬುವದು ನಮಗೆ ಅಗತ್ಯವಿಲ್ಲ ಅಂದರು. ಆಗ ಅವನು--ನೀವು ನನಗೆ ಏನು ಹೇಳುತ್ತೀರೋ ನಾನು ನಿಮಗೆ ಮಾಡುವೆನು ಅಂದನು. ಅವರು ಅರಸನಿಗೆಯಾವನು ನಮ್ಮನ್ನು ಸಂಹರಿಸಿಬಿಟ್ಟು ನಾವು ಇಸ್ರಾ ಯೇಲಿನ ಎಲ್ಲಾ ಮೇರೆಗಳೊಳಗೆ ನಿಲ್ಲದೆ ನಾಶವಾಗುವ ಹಾಗೆ ನಮಗೆ ಕೇಡುಮಾಡಲು ನೆನಸಿದನೋ ಅವನ ಕುಮಾರರಲ್ಲಿ ಏಳು ಮಂದಿ ನಮಗೆ ಒಪ್ಪಿಸಲ್ಪಡಲಿ. ಆಗ ನಾವು ಕರ್ತನು ಆದುಕೊಂಡ ಸೌಲನ ಊರಾದ ಗಿಬೆಯದಲ್ಲಿ ಅವರನ್ನು ಕರ್ತನಿಗೋಸ್ಕರ ಗಲ್ಲಿಗೆ ಹಾಕು ವೆವು ಅಂದರು. ಅದಕ್ಕೆ ಅರಸನು--ನಾನು ಒಪ್ಪಿಸಿ ಕೊಡುವೆನು ಅಂದನು. ಆದರೆ ತಮಗೂ ದಾವೀದ ನಿಗೂ ಸೌಲನ ಮಗನಾದ ಯೋನಾತಾನನಿಗೂ ಕರ್ತ ನನ್ನು ಕುರಿತು ಮಾಡಿದ ಪ್ರಮಾಣಕ್ಕೋಸ್ಕರ ಅರಸನು ಸೌಲನ ಮೊಮ್ಮಗನೂ ಯೋನಾತಾನನ ಮಗನೂ ಆದ ಮೆಫೀಬೋಶೆತನನ್ನು ಉಳಿಸಿ ಅಯ್ಯಾಹನ ಮಗಳಾಗಿರುವ ರಿಚ್ಪಳು ಸೌಲನಿಗೆ ಹೆತ್ತ ಅವಳ ಇಬ್ಬರ ಮಕ್ಕಳಾದ ಅರ್ಮೋನೀಯನ್ನೂ ಮೆಫೀಬೋ ಶೆತ ನನ್ನೂ ಸೌಲನ ಮಗಳಾಗಿರುವ ವಿಾಕಲಳು ಮೆಹೋಲದವನಾದ ಬರ್ಜಿಲ್ಲೈಯ ಮಗನಾಗಿರುವ ಅದ್ರೀಯೇಲನಿಗೆ ಸಾಕಿದ ಐದು ಮಂದಿ ಮಕ್ಕಳನ್ನೂ ಹಿಡುಕೊಂಡು ಅವರನ್ನು ಗಿಬ್ಯೋನ್ಯರ ಕೈಯಲ್ಲಿ ಒಪ್ಪಿಸಿಕೊಟ್ಟನು. ಇವರು ಅವರನ್ನು ಕರ್ತನ ಮುಂದೆ ಬೆಟ್ಟದ ಮೇಲೆ ಗಲ್ಲಿಗೆ ಹಾಕಿದರು. ಹಾಗೆಯೇ ಈ ಏಳು ಮಂದಿಯೂ ಒಂದೇ ಸಾರಿ ಬಿದ್ದರು. ಜವೆ ಗೋಧಿಯ ಸುಗ್ಗಿಯ ದಿನದ ಪ್ರಾರಂಭದಲ್ಲಿ ಅವರು ಕೊಂದುಹಾಕಲ್ಪಟ್ಟರು. ಆಗ ಅಯ್ಯಾಹನ ಮಗಳಾದ ರಿಚ್ಪಳು ಗೋಣಿತಟ್ಟನ್ನು ತಕ್ಕೊಂಡುಹೋಗಿ ಗುಡ್ಡದ ಮೇಲೆ ಅದನ್ನು ತನಗೋಸ್ಕರ ಹಾಸಿ ಸುಗ್ಗಿಯ ದಿವಸ ಮೊದಲುಗೊಂಡು ಆಕಾಶದಿಂದ ಅವರ ಮೇಲೆ ಮಳೆ ಸುರಿಯುವ ವರೆಗೂ ಹಗಲಲ್ಲಿ ಆಕಾಶದ ಪಕ್ಷಿಗಳೂ ರಾತ್ರಿಯಲ್ಲಿ ಅಡವಿಯ ಮೃಗಗಳೂ ಅದರ ಮೇಲೆ ಕೂತುಕೊಳ್ಳದಂತೆ ಕಾಯುತ್ತಿದ್ದಳು. ಅಯ್ಯಾಹನ ಮಗಳಾದ ರಿಚ್ಪಳೆಂಬ ಸೌಲನ ಉಪಪತ್ನಿ ಮಾಡಿದ್ದು ದಾವೀದನಿಗೆ ತಿಳಿಸಲ್ಪಟ್ಟಿತು. ಆಗ ದಾವೀದನು ಹೋಗಿ ಫಿಲಿಷ್ಟಿಯರು ಗಿಲ್ಬೋ ವದಲ್ಲಿ ಸೌಲನನ್ನು ಹೊಡೆದಾಗ ಬೆತ್ಸಾನಿನ ಬೀದಿ ಯಲ್ಲಿ ತೂಗು ಹಾಕಿದ ಗಿಲ್ಯಾದಿನ ಯಾಬೇಷ್ ಪಟ್ಟಣದವರು ಅಲ್ಲಿ ಹೋಗಿ ಕದ್ದು ಒಯ್ದ ಸೌಲನ ಎಲುಬುಗಳನ್ನೂ ಅವನ ಮಗನಾದ ಯೋನಾತಾನನ ಎಲುಬುಗಳನ್ನೂ ಅವರಿಂದ ತಕ್ಕೊಂಡು ಅಲ್ಲಿಂದ ಬಂದು ಗಲ್ಲಿಗೆ ಹಾಕಲ್ಪಟ್ಟವರ ಎಲುಬುಗಳನ್ನೂ ಕೂಡಿಸಿ ಕೊಂಡು ಸೌಲನ ಮತ್ತು ಅವನ ಮಗನಾದ ಯೋನಾತಾನನ ಎಲುಬುಗಳನ್ನು ಬೆನ್ಯಾವಿಾನನ ದೇಶದ ಚೇಲಾದಲ್ಲಿರುವ ಅವನ ತಂದೆಯಾದ ಕೀಷನ ಸಮಾಧಿಯಲ್ಲಿ ಹೂಣಿಟ್ಟರು. ಅವರು ಅರಸನು ಆಜ್ಞಾ ಪಿಸಿದ್ದನ್ನೆಲ್ಲಾ ತೀರಿಸಿದ ತರುವಾಯ ದೇಶಕ್ಕೋಸ್ಕರ ದೇವರಿಗೆ ವಿಜ್ಞಾಪನೆ ಮಾಡಿದರು.
Original words (Hebrew)
- Araunah · H728אֲרַוְנָה ʼĂravnâh
- said · H559אָמַר ʼâmar
- lord · H113אָדוֹן ʼâdôwn
- king · H4428מֶלֶךְ melek
- come · H935בּוֹא bôwʼ
- servant · H5650עֶבֶד ʻebed
- David · H1732דָּוִד Dâvid
- said · H559אָמַר ʼâmar
- buy · H7069קָנָה qânâh
- threshingfloor · H1637גֹּרֶן gôren
- build · H1129בָּנָה bânâh
- altar · H4196מִזְבֵּחַ mizbêach
- plague · H4046מַגֵּפָה maggêphâh
- stayed · H6113עָצָר ʻâtsâr
- people · H5971עַם ʻam