Acts · chapter 1 · verse 22
Acts 1:22 in Kannada
ಯೋಹಾನನ ಬಾಪ್ತಿಸ್ಮ ಮೊದಲು ಗೊಂಡು ಆತನು ನಮ್ಮಿಂದ ಎತ್ತಲ್ಪಟ್ಟ ದಿನದವರೆಗೆ ನಮ್ಮೊಂದಿಗೆ ಒಬ್ಬನನ್ನು ಆತನ ಪುನರುತ್ಥಾನದ ವಿಷಯವಾಗಿ ಸಾಕ್ಷಿಯಾಗಿರುವಂತೆ ನೇಮಿಸತಕ್ಕದ್ದು.
Yohaanana baaptisma modalu gondu aatanu namminda ettalpatta dinadavarege nammondige obbanannu aatana punarutthaanada vishayavaagi saakshiyaagiruvante nemisatakkaddu.
Acts 1:22 in English
- King James Version (KJV)
- Beginning from the baptism of John, unto that same day that he was taken up from us, must one be ordained to be a witness with us of his resurrection.
- World English Bible (WEB)
- beginning from the baptism of John to the day that he was received up from us, of these one must become a witness with us of his resurrection.”
- American Standard Version (ASV)
- beginning from the baptism of John, unto the day that he was received up from us, of these must one become a witness with us of his resurrection.
- Bible in Basic English (BBE)
- Starting from the baptism of John till he went up from us, one will have to be a witness with us of his coming back from death.
- Darby Translation (DBY)
- beginning from the baptism of John until the day in which he was taken up from us, one of these should be a witness with us of his resurrection.
- Webster's Bible (WBS)
- Beginning from the baptism of John, to that same day that he was taken up from us, must one be ordained to be a witness with us of his resurrection.
- Young's Literal Translation (YLT)
- beginning from the baptism of John, unto the day in which he was received up from us, one of these to become with us a witness of his rising again.'
Read in context
- 20ಯಾಕಂ ದರೆ--ಅವನ ನಿವಾಸವು ಹಾಳುಬೀಳಲಿ; ಯಾವ ಮನುಷ್ಯನೂ ಅಲ್ಲಿ ವಾಸಮಾಡದಿರಲಿ; ಇನ್ನು ಅವನ ಅಧ್ಯಕ್ಷತೆಯನ್ನು ಬೇರೊಬ್ಬನು ತೆಗೆದುಕೊಳ್ಳಲಿ ಎಂದು ಕೀರ್ತನೆಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ.
- 21ಆದಕಾರಣ ಕರ್ತನಾದ ಯೇಸು ನಮ್ಮಲ್ಲಿ ಬರುತ್ತಾ ಹೋಗುತ್ತಾ ಇದ್ದ ಕಾಲದಲ್ಲೆಲ್ಲಾ ನಮ್ಮ ಸಂಗಡ ಇದ್ದ ಈ ಮನುಷ್ಯರಲ್ಲಿ
- 22ಯೋಹಾನನ ಬಾಪ್ತಿಸ್ಮ ಮೊದಲು ಗೊಂಡು ಆತನು ನಮ್ಮಿಂದ ಎತ್ತಲ್ಪಟ್ಟ ದಿನದವರೆಗೆ ನಮ್ಮೊಂದಿಗೆ ಒಬ್ಬನನ್ನು ಆತನ ಪುನರುತ್ಥಾನದ ವಿಷಯವಾಗಿ ಸಾಕ್ಷಿಯಾಗಿರುವಂತೆ ನೇಮಿಸತಕ್ಕದ್ದು.
- 23ಆಗ ಯೂಸ್ತನೆನಿಸಿಕೊಳ್ಳುವ ಬಾರ್ನಬನೆಂಬ ಯೋಸೇಫ ಮತ್ತು ಮತ್ತೀಯ ಎಂಬ ಇಬ್ಬರನ್ನು ಅವರು ನೇಮಕ ಮಾಡಿದರು.
- 24ಅವರು ಪ್ರಾರ್ಥನೆ ಮಾಡುತ್ತಾ--ಎಲ್ಲರ ಹೃದಯಗಳನ್ನು ಬಲ್ಲವನಾದ ಕರ್ತನೇ,
Cross references
- Acts 1:2 ಅಪೊಸ್ತಲರ ಕೃತ್ಯಗಳು 1:2ಆತನು ಮೇಲಕ್ಕೆ ಎತ್ತಲ್ಪಟ್ಟ ದಿವಸದ ವರೆಗೆ ತಾನು ಮಾಡುವದಕ್ಕೂ ಬೋಧಿಸುವದಕ್ಕೂ ಪ್ರಾರಂಭಿಸಿದ್ದೆಲ್ಲವನ್ನು ನಾನು ನನ್ನ ಮೊದಲನೆಯ ಪುಸ್ತಕದಲ್ಲಿ ಬರೆದೆನು.
- Mark 1:1–8 ಮಾರ್ಕನು 1:1–8ದೇವಕುಮಾರನಾದ ಯೇಸು ಕ್ರಿಸ್ತನ ವಿಷಯವಾಗಿರುವ ಸುವಾರ್ತೆಯ ಪ್ರಾರಂಭವು. ಪ್ರವಾದನೆಗಳಲ್ಲಿ ಬರೆಯಲ್ಪಟ್ಟ ಪ್ರಕಾರ--ಇಗೋ, ನಿನ್ನ ಮಾರ್ಗವನ್ನು ಸಿದ್ಧಮಾಡುವ ನನ್ನ ದೂತನನ್ನು ನಿನ್ನ ಮುಂದೆ ನಾನು ಕಳುಹಿಸುತ್ತೇನೆ. ಕರ್ತನ ಮಾರ್ಗವನ್ನು ನೀವು ಸಿದ್ಧಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆಮಾಡಿರಿ ಎಂದು ಅಡವಿಯಲ್ಲಿ ಕೂಗುವ ಒಬ್ಬನ ಶಬ್ದವದೆ ಎಂಬದು. ಯೋಹಾನನು ಅಡವಿಯಲ್ಲಿ ಬಾಪ್ತಿಸ್ಮ ಮಾಡಿಸುತ್ತಾ ಪಾಪಗಳ ಪರಿ ಹಾರಕ್ಕಾಗಿ ಮಾನಸಾಂತರದ ಬಾಪ್ತಿಸ್ಮವನ್ನು ಸಾರಿದನು. ಆಗ ಯೂದಾಯ ದೇಶವೆಲ್ಲವೂ ಯೆರೂಸಲೇಮಿ ನವರೂ ಅವನ ಬಳಿಗೆ ಹೊರಟು ಹೋಗಿ ತಮ್ಮ ಪಾಪಗಳನ್ನು ಅರಿಕೆ ಮಾಡುತ್ತಾ ಯೊರ್ದನ್ ನದಿಯಲ್ಲಿ ಎಲ್ಲರೂ ಅವನಿಂದ ಬಾಪ್ತಿಸ್ಮ ಮಾಡಿಸಿ ಕೊಂಡರು. ಯೋಹಾನನು ಒಂಟೇ ಕೂದಲಿನ ಉಡುಪನ್ನು ಧರಿಸಿಕೊಂಡು ತನ್ನ ನಡುವಿಗೆ ಚರ್ಮದ ನಡುಕಟ್ಟನ್ನು ಕಟ್ಟಿಕೊಂಡವನಾಗಿದ್ದು ಮಿಡಿತೆಗಳನ್ನೂ ಕಾಡುಜೇನನ್ನೂ ತಿನ್ನುತ್ತಿದ್ದನು. ಮತ್ತು ಅವನು--ನನಗಿಂತ ಶಕ್ತನಾಗಿರುವಾತನು ನನ್ನ ಹಿಂದೆ ಬರುತ್ತಾನೆ; ನಾನು ಬೊಗ್ಗಿಕೊಂಡು ಆತನ ಕೆರಗಳ ಬಾರನ್ನು ಬಿಚ್ಚುವದಕ್ಕೂ ಯೋಗ್ಯನಲ್ಲ; ನಾನು ನಿಮಗೆ ನೀರಿನಿಂದ ಬಾಪ್ತಿಸ್ಮ ಮಾಡಿಸಿದ್ದು ನಿಜವೇ. ಆತನಾ ದರೋ ನಿಮಗೆ ಪವಿತ್ರಾತ್ಮನಿಂದ ಬಾಪ್ತಿಸ್ಮ ಮಾಡಿಸು ವನು ಎಂದು ಸಾರಿ ಹೇಳುತ್ತಿದ್ದನು.
- Acts 4:33 ಅಪೊಸ್ತಲರ ಕೃತ್ಯಗಳು 4:33ಇದಲ್ಲದೆ ಕರ್ತನಾದ ಯೇಸುವಿನ ಪುನ ರುತ್ಥಾನದ ವಿಷಯವಾಗಿ ಅಪೊಸ್ತಲರು ಬಹಳ ಬಲ ವಾಗಿ ಸಾಕ್ಷಿಕೊಟ್ಟರು; ದೊಡ್ಡ ಕೃಪೆಯು ಅವರೆಲ್ಲರ ಮೇಲೆ ಇತ್ತು.
- Acts 1:8–9 ಅಪೊಸ್ತಲರ ಕೃತ್ಯಗಳು 1:8–9ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬಂದಾಗ ನೀವು ಬಲವನ್ನು ಹೊಂದುವಿರಿ; ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯದ ಲ್ಲಿಯೂ ಸಮಾರ್ಯದಲ್ಲಿಯೂ ಭೂಮಿಯ ಕಟ್ಟ ಕಡೆಯವರೆಗೂ ನೀವು ನನಗೆ ಸಾಕ್ಷಿಗಳಾಗಿರುವಿರಿ ಎಂದು ಹೇಳಿದನು. ಇವುಗಳನ್ನು ಹೇಳಿದ ಮೇಲೆ ಅವರು ನೋಡುತ್ತಿರುವಾಗ ಆತನು ಮೇಲಕ್ಕೆ ಎತ್ತಲ್ಪಟ್ಟನು; ಮೋಡವು ಅವರ ದೃಷ್ಟಿಗೆ ಮರೆಮಾಡಿ ಆತನನ್ನು ಸ್ವೀಕರಿಸಿತು.
- Hebrews 2:3 ಇಬ್ರಿಯರಿಗೆ 2:3ಎಷ್ಟೋ ದೊಡ್ಡ ಈ ರಕ್ಷಣೆಯನ್ನು ನಾವು ಅಲಕ್ಷ್ಯಮಾಡಿದರೆ ತಪ್ಪಿಸಿ ಕೊಳ್ಳುವದು ಹೇಗೆ? ಇದು ಕರ್ತನಿಂದ ಮೊದಲು ಹೇಳಲಾರಂಭಿಸಿತು. ಆತನಿಂದ ಕೇಳಿದವರು ಇದನ್ನು ನಮಗೆ ಸ್ಥಿರಪಡಿಸಿದರು.
- John 15:27 ಯೋಹಾನನು 15:27ನೀವು ಮೊದಲಿನಿಂದಲೂ ನನ್ನ ಸಂಗಡ ಇದ್ದದರಿಂದ ನೀವು ಸಹ ಸಾಕ್ಷಿ ಕೊಡುವಿರಿ.
- John 1:28–51 ಯೋಹಾನನು 1:28–51ಇವುಗಳು ಯೊರ್ದನಿನ ಆಚೆ ಕಡೆಯ ಬೇಥಾಬರದಲ್ಲಿ ನಡೆದವು; ಅಲ್ಲಿ ಯೋಹಾನನು ಬಾಪ್ತಿಸ್ಮ ಮಾಡಿಸುತ್ತಿದ್ದನು. ಮರುದಿನ ಯೋಹಾನನು ತನ್ನ ಕಡೆಗೆ ಬರುತ್ತಿದ್ದ ಯೇಸುವನ್ನು ನೋಡಿ--ಇಗೋ, ಲೋಕದ ಪಾಪ ವನ್ನು ತೆಗೆದುಹಾಕುವ ದೇವರ ಕುರಿಮರಿ ಎಂದು ಹೇಳಿದನು. ನನ್ನ ಹಿಂದೆ ಒಬ್ಬ ಮನುಷ್ಯನು ಬರು ತ್ತಾನೆ; ಆತನು ನನಗಿಂತ ಮೊದಲೇ ಇದ್ದದರಿಂದ ನನಗಿಂತ ಮುಂದಿನವನು ಎಂದು ನಾನು ಯಾರ ವಿಷಯದಲ್ಲಿ ಹೇಳಿದೆನೋ ಆತನೇ ಈತನು. ನಾನು ಆತನನ್ನು ಅರಿತಿರಲಿಲ್ಲ; ಆದರೆ ಆತನು ಇಸ್ರಾಯೇಲ್ಯರಿಗೆ ಪ್ರತ್ಯಕ್ಷನಾಗುವಂತೆ ನಾನು ನೀರಿನಿಂದ ಬಾಪ್ತಿಸ್ಮ ಮಾಡಿಸುವವನಾಗಿ ಬಂದಿದ್ದೇನೆ ಅಂದನು. ಯೋಹಾನನು ಸಾಕ್ಷಿಕೊಟ್ಟು--ಆತ್ಮನು ಪಾರಿವಾಳ ದಂತೆ ಪರಲೋಕದಿಂದ ಇಳಿದು ಆತನ ಮೇಲೆ ನೆಲೆ ಗೊಂಡಿರುವದನ್ನು ನಾನು ನೋಡಿದೆನು. ನಾನು ಆತನನ್ನು ಅರಿತಿರಲಿಲ್ಲ; ಆದರೆ ನೀರಿನಿಂದ ಬಾಪ್ತಿಸ್ಮ ಮಾಡಿಸುವದಕ್ಕೆ ನನ್ನನ್ನು ಕಳುಹಿಸಿದಾತನೇ ನನಗೆ-- ಯಾವಾತನ ಮೇಲೆ ಆತ್ಮನು ಇಳಿದು ನೆಲೆಯಾಗಿರು ವದನ್ನು ನೀನು ನೋಡುವಿಯೋ ಆತನೇ ಪವಿತ್ರಾತ್ಮ ನಿಂದ ಬಾಪ್ತಿಸ್ಮ ಮಾಡಿಸುವಾತನು ಎಂದು ಹೇಳಿದನು. ನಾನು ನೋಡಿ ಈತನೇ ದೇವರಮಗನೆಂದು ಸಾಕ್ಷಿ ಕೊಟ್ಟಿದ್ದೇನೆ ಅಂದನು. ಮಾರನೆಯ ದಿನ ತಿರಿಗಿ ಯೋಹಾನನೂ ಅವನ ಶಿಷ್ಯರಲ್ಲಿ ಇಬ್ಬರೂ ನಿಂತುಕೊಂಡಿದ್ದರು. ಆಗ ನಡೆ ದಾಡುತ್ತಿದ್ದ ಯೇಸುವನ್ನು ನೋಡಿ ಅವನು (ಯೋಹಾ ನನು)--ಇಗೋ, ದೇವರ ಕುರಿಮರಿ! ಎಂದು ಹೇಳಿದನು. ಅವನು ಹೇಳಿದ್ದನ್ನು ಕೇಳಿ ಆ ಇಬ್ಬರು ಶಿಷ್ಯರು ಯೇಸುವಿನ ಹಿಂದೆ ಹೋದರು. ಆಗ ಯೇಸು ಹಿಂತಿರುಗಿ ತನ್ನ ಹಿಂದೆ ಬರುತ್ತಿದ್ದವರನ್ನು ನೋಡಿ ಅವರಿಗೆ--ನೀವು ಏನು ಹುಡುಕುತ್ತೀರಿ? ಅನ್ನಲು ಅವರು ಆತನಿಗೆ--ರಬ್ಬಿಯೇ, (ರಬ್ಬಿ ಅಂದರೆ ಗುರು ಎಂದರ್ಥ) ನೀನು ವಾಸಿಸುವದು ಎಲ್ಲಿ ಅಂದರು. ಆತನು ಅವರಿಗೆ--ಬಂದು ನೋಡಿರಿ ಅಂದನು. ಅವರು ಹೋಗಿ ಆತನು ವಾಸಿಸುತ್ತಿದ್ದ ಸ್ಥಳವನ್ನು ನೋಡಿ ಆ ದಿವಸ ಆತನ ಸಂಗಡ ಇದ್ದರು. ಆಗ ಹೆಚ್ಚು ಕಡಿಮೆ ಹತ್ತನೆಯ ತಾಸಾಗಿತ್ತು. ಯೋಹಾ ನನ ಮಾತನ್ನು ಕೇಳಿ ಆತನನ್ನು ಹಿಂಬಾಲಿಸಿದ ಇಬ್ಬರಲ್ಲಿ ಸೀಮೋನ್ ಪೇತ್ರನ ಸಹೋದರನಾದ ಅಂದ್ರೆಯನು ಒಬ್ಬನಾಗಿದ್ದನು. ಇವನು ಮೊದಲು ತನ್ನ ಸ್ವಂತ ಸಹೋದರನಾದ ಸೀಮೋನನನ್ನು ಕಂಡು ಅವ ನಿಗೆ--ನಾವು ಮೆಸ್ಸೀಯನನ್ನು ಕಂಡುಕೊಂಡೆವು ಎಂದು ಹೇಳಿದನು (ಮೆಸ್ಸೀಯನು ಅಂದರೆ ಕ್ರಿಸ್ತನು ಎಂದರ್ಥ). 42ಆಗ ಅಂದ್ರೆಯನು ಸೀಮೋನನ್ನು ಯೇಸುವಿನ ಬಳಿಗೆ ಕರಕೊಂಡು ಬಂದನು. ಯೇಸು ಅವನನ್ನು ನೋಡಿ--ನೀನು ಯೋನನ ಮಗನಾದ ಸೀಮೋನನು, ನೀನು ಕೇಫನೆಂದು ಕರೆಯಲ್ಪಡುವಿ ಅಂದನು. (ಕೇಫ ಅಂದರೆ ಕಲ್ಲು ಎಂದರ್ಥ). ಮರುದಿನ ಯೇಸು ಗಲಿಲಾಯಕ್ಕೆ ಹೊರಟು ಹೋಗಬೇಕೆಂದಿದ್ದಾಗ ಫಿಲಿಪ್ಪನನ್ನು ಕಂಡು ಅವ ನಿಗೆ--ನನ್ನನ್ನು ಹಿಂಬಾಲಿಸು ಅಂದನು. ಫಿಲಿಪ್ಪನು ಅಂದ್ರೆಯನ ಮತ್ತು ಪೇತ್ರನ ಪಟ್ಟಣವಾದ ಬೇತ್ಸಾಯಿ ದವನು. ಫಿಲ್ಫಿಪನು ನತಾನಯೇಲನನ್ನು ಕಂಡು ಅವನಿಗೆ--ನ್ಯಾಯಪ್ರಮಾಣದಲ್ಲಿ ಮೋಶೆಯು ಮತ್ತು ಪ್ರವಾದಿಗಳು ಯಾವಾತನ ವಿಷಯವಾಗಿ ಬರೆದರೋ ಆತನನ್ನು ನಾವು ಕಂಡುಕೊಂಡೆವು; ಆತನು ಯೋಸೇ ಫನ ಮಗನಾದ ನಜರೇತಿನ ಯೇಸುವು ಅಂದನು. ಅದಕ್ಕೆ ನತಾನಯೇಲನು ಅವನಿಗೆ--ನಜರೇತಿ ನಿಂದ ಒಳ್ಳೇದೇನಾದರೂ ಬರುವದೋ? ಅಂದಾಗ ಫಿಲಿಪ್ಪನು ಅವನಿಗೆ--ಬಂದು ನೋಡು ಅಂದನು. ಯೇಸು ತನ್ನ ಬಳಿಗೆ ಬರುವ ನತಾನಯೇಲನನ್ನು ಕಂಡು ಅವನ ವಿಷಯವಾಗಿ--ಇಗೋ, ಇವನು ನಿಜ ವಾಗಿಯೂ ಇಸ್ರಾಯೇಲನು; ಇವನಲ್ಲಿ ಕಪಟವಿಲ್ಲ ಅಂದನು. ನತಾನಯೇಲನು ಆತನಿಗೆ--ನೀನು ನನ್ನನ್ನು ಹೇಗೆ ಬಲ್ಲೆ? ಅಂದನು; ಯೇಸು ಪ್ರತ್ಯುತ್ತರ ವಾಗಿ ಅವನಿಗೆ--ಫಿಲಿಪ್ಪನು ನಿನ್ನನ್ನು ಕರೆಯುವದಕ್ಕಿಂತ ಮುಂಚೆ ನೀನು ಆ ಅಂಜೂರ ಮರದ ಕೆಳಗೆ ಇದ್ದಾಗ ನಾನು ನಿನ್ನನ್ನು ನೋಡಿದೆನು ಅಂದನು. ನತಾನ ಯೇಲನು ಪ್ರತ್ಯುತ್ತರವಾಗಿ ಆತನಿಗೆ--ರಬ್ಬಿಯೇ, ನೀನು ದೇವರಕುಮಾರನು; ನೀನು ಇಸ್ರಾಯೇಲಿನ ಅರಸನು ಅಂದನು. ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ಆ ಅಂಜೂರ ಮರದ ಕೆಳಗೆ ನಿನ್ನನ್ನು ನೋಡಿದೆನೆಂದು ಹೇಳಿದ್ದರಿಂದ ನೀನು ನಂಬು ತ್ತೀಯೋ? ನೀನು ಇವುಗಳಿಗಿಂತ ಮಹತ್ತಾದವುಗಳನ್ನು ನೋಡುವಿ ಅಂದನು.ಆತನು ಅವನಿಗೆ--ನಿನಗೆ ನಿಜನಿಜವಾಗಿ ಹೇಳುತ್ತೇನೆ. ಇಂದಿನಿಂದ ಪರಲೋಕವು ತೆರೆದಿರುವದನ್ನೂ ದೇವದೂತರು ಮನುಷ್ಯಕುಮಾರನ ಮೇಲೆ ಏರುವದನ್ನೂ ಇಳಿಯುವದನ್ನೂ ನೀವು ನೋಡುವಿರಿ ಅಂದನು. ಆತನು ಅವನಿಗೆ--ನಿನಗೆ ನಿಜನಿಜವಾಗಿ ಹೇಳುತ್ತೇನೆ. ಇಂದಿನಿಂದ ಪರಲೋಕವು ತೆರೆದಿರುವದನ್ನೂ ದೇವದೂತರು ಮನುಷ್ಯಕುಮಾರನ ಮೇಲೆ ಏರುವದನ್ನೂ ಇಳಿಯುವದನ್ನೂ ನೀವು ನೋಡುವಿರಿ ಅಂದನು.
- Acts 13:24–25 ಅಪೊಸ್ತಲರ ಕೃತ್ಯಗಳು 13:24–25ಆತನ ಆಗಮನಕ್ಕೆ ಮುಂಚೆ ಯೋಹಾನನು ಮೊದಲು ಇಸ್ರಾಯೇಲ್ ಜನರೆ ಲ್ಲರಿಗೆ ಮಾನಸಾಂತರದ ಬಾಪ್ತಿಸ್ಮವನ್ನು ಸಾರಿದನು. ಯೋಹಾನನು ತನ್ನ ಸೇವೆಯನ್ನು ಪೂರೈಸುತ್ತಿರಿವಾಗ ಜನರಿಗೆ--ನನ್ನನ್ನು ಯಾರೆಂದು ಯೋಚಿಸುತ್ತೀರಿ? ನಾನು ಆತನಲ್ಲ; ಆದರೆ ಇಗೋ, ನನ್ನ ಹಿಂದೆ ಒಬ್ಬಾತನು ಬರುತ್ತಾನೆ, ಆತನ ಪಾದದ ಕೆರಗಳನ್ನು ಬಿಚ್ಚುವದಕ್ಕೆ ನಾನು ಯೋಗ್ಯನಲ್ಲ ಎಂದು ಹೇಳಿದನು.
- Luke 3:1–18 ಲೂಕನು 3:1–18ಕೈಸರನಾದ ತಿಬೇರಿಯನ ಆಳಿಕೆಯ ಕಾಲದ ಹದಿನೈದನೇ ವರುಷದಲ್ಲಿ ಪೊಂತ್ಯ ಪಿಲಾತನು ಯೂದಾಯಕ್ಕೆ ಅಧಿಪತಿಯೂ ಹೆರೋದನು ಗಲಿಲಾ ಯಕ್ಕೆ ಚತುರಾಧಿಪತಿಯೂ ಅವನ ಸಹೋದರನಾದ ಫಿಲಿಪ್ಪನು ಇತುರಾಯ ಮತ್ತು ತ್ರಕೋನೀತಿ ಸೀಮೆಗೆ ಚತುರಾಧಿಪತಿಯೂ ಲುಸನ್ಯನು ಅಬಿಲೇನೆಗೆ ಚತುರಾ ಧಿಪತಿಯೂ ಅನ್ನನು ಮತ್ತು ಕಾಯಫನು ಮಹಾ ಯಾಜಕರೂ ಆಗಿದ್ದಾಗ ಅಡವಿಯಲ್ಲಿದ್ದ ಜಕರೀಯನ ಮಗನಾದ ಯೋಹಾನನ ಬಳಿಗೆ ದೇವರ ವಾಕ್ಯವು ಬಂತು. ಅವನು ಯೊರ್ದನಿನ ಸುತ್ತಲಿರುವ ಎಲ್ಲಾ ಸೀಮೆಗಳಿಗೆ ಬಂದು ಪಾಪಗಳ ಪರಿಹಾರಕ್ಕಾಗಿ ಮಾನ ಸಾಂತರದ ಬಾಪ್ತಿಸ್ಮವನ್ನು ಸಾರಿ ಹೇಳುವವನಾದನು. ಪ್ರವಾದಿಯಾದ ಯೆಶಾಯನ ವಾಕ್ಯಗಳ ಪುಸ್ತಕ ದಲ್ಲಿ--ಕರ್ತನ ಮಾರ್ಗವನ್ನು ಸಿದ್ಧ ಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವವನ ಶಬ್ದವದೆ ಎಂದೂ ಪ್ರತಿಯೊಂದು ತಗ್ಗು ಮುಚ್ಚಿಸಲ್ಪಡುವದು, ಪ್ರತಿಯೊಂದು ಬೆಟ್ಟವು ತಗ್ಗಿಸಲ್ಪಡುವದು, ಡೊಂಕಾದವುಗಳು ನೆಟ್ಟಗಾಗುವವು ಮತ್ತು ಕೊರಕಲಾದ ದಾರಿಗಳು ಸಮವಾಗುವವು; ಮಾನವರೆಲ್ಲರು ದೇವರ ರಕ್ಷಣೆಯನ್ನು ಕಾಣುವರು ಎಂದೂ ಬರೆದಿರುವಂತೆ ಹೀಗಾಯಿತು. ಆಗ ತನ್ನಿಂದ ಬಾಪ್ತಿಸ್ಮ ಮಾಡಿಸಿಕೊಳ್ಳುವದಕ್ಕಾಗಿ ಹೊರಟು ಬಂದ ಜನಸಮೂಹಕ್ಕೆ--ಓ ಸರ್ಪಗಳ ಸಂತತಿಯವರೇ, ಬರುವದಕ್ಕಿರುವ ಕೋಪದಿಂದ ತಪ್ಪಿಸಿಕೊಳ್ಳುವಂತೆ ನಿಮ್ಮನ್ನು ಎಚ್ಚರಿಸಿದವರಾರು? ಹಾಗಾದರೆ ಮಾನಸಾ ಂತರಕ್ಕೆ ಯೋಗ್ಯವಾದ ಫಲಗಳನ್ನು ಫಲಿಸಿರಿ,--ಅಬ್ರಹಾಮನು ನಮಗೆ ತಂದೆಯಾಗಿದ್ದಾನೆಂದು ನಿಮ್ಮೊಳಗೆ ಅಂದುಕೊಳ್ಳುವದಕ್ಕೆ ಆರಂಭಿಸಬೇ ಡಿರಿ; ಯಾಕಂದರೆ--ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದ ಮಕ್ಕಳನ್ನು ಎಬ್ಬಿಸಶಕ್ತನೆಂದು ನಾನು ನಿಮಗೆ ಹೇಳುತ್ತೇನೆ. ಈಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಆದದರಿಂದ ಒಳ್ಳೇಫಲ ಫಲಿ ಸದ ಪ್ರತಿಯೊಂದು ಮರವು ಕಡಿಯಲ್ಪಟ್ಟು ಬೆಂಕಿಯಲ್ಲಿ ಹಾಕಲ್ಪಡುವದು ಎಂದು ಹೇಳಿದನು. ಆಗ ಜನರು ಅವನಿಗೆ--ಹಾಗಾದರೆ ನಾವೇನು ಮಾಡಬೇಕು ಎಂದು ಕೇಳಿದರು. ಅವನು ಪ್ರತ್ಯುತ್ತರವಾಗಿ ಅವರಿಗೆ--ಎರಡು ಅಂಗಿಗಳುಳ್ಳವನು ಏನೂ ಇಲ್ಲದವ ನಿಗೆ ಕೊಡಲಿ; ಆಹಾರವುಳ್ಳವನು ಹಾಗೆಯೇ ಮಾಡಲಿ ಎಂದು ಹೇಳಿದನು. ತರುವಾಯ ಸುಂಕದವರು ಸಹ ಬಾಪ್ತಿಸ್ಮ ಮಾಡಿಸಿಕೊಳ್ಳುವದಕ್ಕಾಗಿ ಬಂದು ಅವನಿಗೆ--ಬೋಧಕನೇ, ನಾವೇನು ಮಾಡಬೇಕು ಎಂದು ಕೇಳಿದರು. ಅದಕ್ಕವನು ಅವರಿಗೆ-- ನಿಮಗೆ ನೇಮಿಸಲ್ಪಟ್ಟದ್ದಕ್ಕಿಂತ ಹೆಚ್ಚೇನೂ ತೆಗೆದು ಕೊಳ್ಳಬೇಡಿರಿ ಅಂದನು. ಅದರಂತೆಯೇ ಸೈನಿ ಕರು--ನಾವೇನು ಮಾಡತಕ್ಕದ್ದು ಎಂದು ಕೇಳಿದ್ದಕ್ಕೆ ಅವನು ಅವರಿಗೆ--ಯಾರನ್ನೂ ಹಿಂಸಿಸಬೇಡಿರಿ; ಇಲ್ಲವೆ ಯಾರ ಮೇಲೆಯೂ ಸುಳ್ಳಾಗಿ ದೂರು ಹೇಳಬೇಡಿರಿ; ನಿಮ್ಮ ಸಂಬಳದಲ್ಲಿ ತೃಪ್ತರಾಗಿರ್ರಿ ಎಂದು ಹೇಳಿದನು. ಆಗ ಜನರು ಕ್ರಿಸ್ತನನ್ನು ಎದುರು ನೋಡುವವರಾಗಿದ್ದರಿಂದ ಯೋಹಾನನು ಆ ಕ್ರಿಸ್ತನಾ ಗಿರಬಹುದೋ ಇಲ್ಲವೋ ಎಂದು ಎಲ್ಲರೂ ತಮ್ಮ ಹೃದಯಗಳಲ್ಲಿ ಆಲೋಚಿಸುತ್ತಿದ್ದರು. ಆಗ ಯೋಹಾನನು ಪ್ರತ್ಯುತ್ತರವಾಗಿ ಅವರೆಲ್ಲ ರಿಗೆ--ನಾನಂತೂ ನಿಮಗೆ ನೀರಿನ ಬಾಪ್ತಿಸ್ಮ ಮಾಡಿಸು ವದು ನಿಜವೇ; ಆದರೆ ನನಗಿಂತ ಶಕ್ತನೊಬ್ಬನು ಬರು ತ್ತಾನೆ; ಆತನ ಕೆರಗಳ ಬಾರನ್ನು ಬಿಚ್ಚುವದಕ್ಕೂ ನಾನು ಯೋಗ್ಯನಲ್ಲ; ಆತನು ಪವಿತ್ರಾತ್ಮನಿಂದಲೂ ಬೆಂಕಿಯಿಂ ದಲೂ ನಿಮಗೆ ಬಾಪ್ತಿಸ್ಮ ಮಾಡಿಸುವನು ಆತನ ಮೊರವು ಆತನ ಕೈಯಲ್ಲಿದೆ. ಆತನು ತನ್ನ ಕಣವನ್ನು ಸಂಪೂರ್ಣವಾಗಿ ಹಸನುಮಾಡಿ ಗೋದಿಯನ್ನು ತನ್ನ ಕಣಜದಲ್ಲಿ ಕೂಡಿಸುವನು; ಆದರೆ ಹೊಟ್ಟನ್ನು ಆರದ ಬೆಂಕಿಯಿಂದ ಸುಡುವನು ಎಂದು ಹೇಳಿದನು. ಅವನು ಇನ್ನೂ ಅನೇಕ ವಿಷಯಗಳಿಂದ ಎಚ್ಚರಿಸಿ ಜನರಿಗೆ ಸಾರಿದನು.
- Matthew 3:1–17 ಮತ್ತಾಯನು 3:1–17ಆ ದಿನಗಳಲ್ಲಿ ಬಾಪ್ತಿಸ್ಮ ಮಾಡಿಸುವ ಯೋಹಾನನು ಬಂದು ಯೂದಾಯದ ಅಡವಿಯಲ್ಲಿ ಸಾರುತ್ತಾ-- ನೀವು ಮಾನಸಾಂತರ ಪಡಿರಿ; ಯಾಕಂದರೆ ಪರಲೋಕರಾಜ್ಯವು ಸಮಾಪ ವಾಗಿದೆ ಎಂದು ಹೇಳಿದನು. ಯಾಕಂದರೆ--ಕರ್ತನ ಮಾರ್ಗವನ್ನು ಸಿದ್ಧಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವ ಒಬ್ಬನ ಶಬ್ದವದೆ ಎಂಬದಾಗಿ ಪ್ರವಾದಿಯಾದ ಯೆಶಾಯ ನಿಂದ ಹೇಳಲ್ಪಟ್ಟವನು ಇವನೇ. ಈ ಯೋಹಾನನಿಗೆ ಒಂಟೇ ಕೂದಲಿನ ಉಡುಪೂ ಸೊಂಟಕ್ಕೆ ಚರ್ಮದ ನಡುಕಟ್ಟೂ ಇದ್ದವು; ಮತ್ತು ಮಿಡತೆಗಳೂ ಕಾಡು ಜೇನೂ ಇವನಿಗೆ ಆಹಾರವಾಗಿದ್ದವು. ಆಗ ಯೆರೂಸಲೇಮಿನವರೂ ಎಲ್ಲಾ ಯೂದಾಯ ದವರೂ ಯೊರ್ದನ್ ಹೊಳೆಯ ಸುತ್ತಲಿರುವ ಎಲ್ಲಾ ಪ್ರದೇಶದವರೂ ಅವನ ಬಳಿಗೆ ಹೊರಟುಹೋದರು. ಅವರು ತಮ್ಮ ಪಾಪಗಳನ್ನು ಅರಿಕೆಮಾಡಿ ಯೊರ್ದನಿನಲ್ಲಿ ಅವನಿಂದ ಬಾಪ್ತಿಸ್ಮ ಮಾಡಿಕೊಂಡರು. ಆದರೆ ಫರಿಸಾಯರಲ್ಲಿಯೂ ಸದ್ದುಕಾಯರಲ್ಲಿಯೂ ಅನೇಕರು ತನ್ನಿಂದ ಬಾಪ್ತಿಸ್ಮ ಮಾಡಿಸಿಕೊಳ್ಳು ವದಕ್ಕಾಗಿ ಬರುವದನ್ನು ಅವನು ಕಂಡು ಅವರಿಗೆ-- ಓ ಸರ್ಪ ಸಂತತಿಯವರೇ, ಬರುವದಕ್ಕಿರುವ ಕೋಪ ದಿಂದ ತಪ್ಪಿಸಿಕೊಳ್ಳುವದಕ್ಕೆ ನಿಮ್ಮನ್ನು ಎಚ್ಚರಿಸಿದವರು ಯಾರು? ಹಾಗಾದರೆ ಮಾನಸಾಂತರಕ್ಕೆ ತಕ್ಕ ಫಲ ಗಳನ್ನು ಫಲಿಸಿರಿ; ಮತ್ತು -- ಅಬ್ರಹಾಮನು ನಮಗೆ ತಂದೆಯಾಗಿದ್ದಾನೆ ಎಂದು ನಿಮ್ಮ ನಿಮ್ಮೊಳಗೆ ಅಂದು ಕೊಳ್ಳಬೇಡಿರಿ; ಯಾಕಂದರೆ ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದ ಮಕ್ಕಳನ್ನು ಎಬ್ಬಿಸ ಶಕ್ತನೆಂದು ನಾನು ನಿಮಗೆ ಹೇಳುತ್ತೇನೆ. ಈಗಾಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಆದದರಿಂದ ಒಳ್ಳೇ ಫಲವನ್ನು ಫಲಿಸದ ಪ್ರತಿಯೊಂದು ಮರವು ಕಡಿಯಲ್ಪಟ್ಟು ಬೆಂಕಿ ಯಲ್ಲಿ ಹಾಕಲ್ಪಡುವದು. ನಾನು ಮಾನ ಸಾಂತರದ ನಿಮಿತ್ತ ನಿಮಗೆ ನೀರಿನಲ್ಲಿ ಬಾಪ್ತಿಸ್ಮ ಮಾಡಿಸುವದು ನಿಜವೇ; ಆದರೆ ನನ್ನ ಹಿಂದೆ ಬರುವಾತನು ನನಗಿಂತಲೂ ಶಕ್ತನಾಗಿದ್ದಾನೆ. ಆತನ ಕೆರಗಳನ್ನು ಹೊರುವದಕ್ಕೂ ನಾನು ಯೋಗ್ಯನಲ್ಲ; ಆತನು ಪವಿತ್ರಾ ತ್ಮನಿಂದಲೂ ಬೆಂಕಿಯಿಂದಲೂ ನಿಮಗೆ ಬಾಪ್ತಿಸ್ಮ ಮಾಡಿ ಸುವನು. ಒನೆಯುವ ಮೊರವನ್ನು ಆತನು ತನ್ನ ಕೈಯಲ್ಲಿ ಹಿಡಿದಿದ್ದಾನೆ; ಆತನು ತನ್ನ ಕಣವನ್ನು ಸಂಪೂರ್ಣವಾಗಿ ಹಸನುಮಾಡಿ ತನ್ನ ಗೋಧಿಯನ್ನು ಕಣಜದಲ್ಲಿ ಕೂಡಿಸುವನು; ಆದರೆ ಹೊಟ್ಟನ್ನು ಆರದ ಬೆಂಕಿಯಿಂದ ಸುಟ್ಟುಬಿಡುವನು ಎಂದು ಹೇಳಿದನು. ಆಗ ಯೇಸು ಯೋಹಾನನಿಂದ ಬಾಪ್ತಿಸ್ಮ ಮಾಡಿಸಿಕೊಳ್ಳಬೇಕೆಂದು ಗಲಿಲಾಯದಿಂದ ಯೊರ್ದ ನಿಗೆ ಬಂದನು. ಆದರೆ ಯೋಹಾನನು ಆತನನ್ನು ತಡೆದು--ನಾನು ನಿನ್ನಿಂದ ಬಾಪ್ತಿಸ್ಮ ಮಾಡಿಸಿ ಕೊಳ್ಳುವದು ಅಗತ್ಯವಿರಲಾಗಿ ನೀನು ನನ್ನ ಬಳಿಗೆ ಬರುವದೇನು ಎಂದು ಹೇಳಿದನು. ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವನಿಗೆ--ಸದ್ಯಕ್ಕೆ ಒಪ್ಪಿಕೋ; ಯಾಕಂದರೆ ಎಲ್ಲಾ ನೀತಿಯನ್ನು ಹೀಗೆ ನೆರವೇರಿ ಸುವದು ನಮಗೆ ಯೋಗ್ಯವಾಗಿದೆ ಎಂದು ಹೇಳಿದನು. ಆಗ ಅವನು ಒಪ್ಪಿಕೊಂಡನು. ಯೇಸು ಬಾಪ್ತಿಸ್ಮ ಮಾಡಿಸಿಕೊಂಡು ನೀರಿನಿಂದ ಮೇಲಕ್ಕೆ ಬಂದ ಕೂಡಲೆ ಇಗೋ, ಆತನಿಗೆ ಆಕಾಶಗಳು ತೆರೆಯಲ್ಪಟ್ಟು ದೇವರ ಆತ್ಮನು ಪಾರಿವಾಳದ ಹಾಗೆ ಆತನ ಮೇಲೆ ಇಳಿದುಬರುವದನ್ನು ಆತನು ಕಂಡನು.ಆಗ--ಇಗೋ, ಈತನು ಪ್ರಿಯ ನಾಗಿರುವ ನನ್ನ ಮಗನು; ಈತನನ್ನು ನಾನು ಬಹಳ ವಾಗಿ ಮೆಚ್ಚಿದ್ದೇನೆ ಎಂದು ಪರಲೋಕದಿಂದ ಹೇಳುವ ಧ್ವನಿಯಾಯಿತು. ಆಗ--ಇಗೋ, ಈತನು ಪ್ರಿಯ ನಾಗಿರುವ ನನ್ನ ಮಗನು; ಈತನನ್ನು ನಾನು ಬಹಳ ವಾಗಿ ಮೆಚ್ಚಿದ್ದೇನೆ ಎಂದು ಪರಲೋಕದಿಂದ ಹೇಳುವ ಧ್ವನಿಯಾಯಿತು.
Original words (Greek)
- Beginning · G756ἄρχομαι árchomai
- from · G575ἀπό apó
- baptism · G908βάπτισμα báptisma
- John · G2491Ἰωάννης Iōánnēs
- unto · G2193ἕως héōs
- same · G3739ὅς hós
- day · G2250ἡμέρα hēméra
- that · G3739ὅς hós
- up · G353ἀναλαμβάνω analambánō
- from · G575ἀπό apó
- us · G2257ἡμῶν hēmōn
- must · G1096γίνομαι gínomai
- one · G1520εἷς heîs
- be · G1096γίνομαι gínomai
- witness · G3144μάρτυς mártys
- with · G4862σύν sýn
- us · G2254ἡμῖν hēmîn
- his · G846αὐτός autós
- resurrection · G386ἀνάστασις anástasis