John · chapter 15 · verse 27
John 15:27 in Kannada
ನೀವು ಮೊದಲಿನಿಂದಲೂ ನನ್ನ ಸಂಗಡ ಇದ್ದದರಿಂದ ನೀವು ಸಹ ಸಾಕ್ಷಿ ಕೊಡುವಿರಿ.
Neevu modalinindaloo nanna sangada iddadarinda neevu saha saakshi koduviri.
John 15:27 in English
- King James Version (KJV)
- And ye also shall bear witness, because ye have been with me from the beginning.
- World English Bible (WEB)
- You will also testify, because you have been with me from the beginning.
- American Standard Version (ASV)
- and ye also bear witness, because ye have been with me from the beginning.
- Bible in Basic English (BBE)
- And you, in addition, will give witness because you have been with me from the first.
- Darby Translation (DBY)
- and ye too bear witness, because ye are with me from [the] beginning.
- Webster's Bible (WBS)
- And ye also shall bear testimony, because ye have been with me from the beginning.
- Young's Literal Translation (YLT)
- and ye also do testify, because from the beginning ye are with me.
Read in context
- 25ಆದರೆ--ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷ ಮಾಡಿದರೆಂದು ಅವರ ನ್ಯಾಯಪ್ರಮಾಣದಲ್ಲಿ ಬರೆದಿರುವ ಮಾತು ನೆರವೇರುವಂತೆ ಹೀಗಾಯಿತು.
- 26ಆದರೆ ತಂದೆಯ ಬಳಿಯಿಂದ ನಾನು ನಿಮಗೆ ಕಳುಹಿಸಿಕೊಡುವ ಆದರಿಕನು ಅಂದರೆ ತಂದೆಯ ಬಳಿಯಿಂದ ಹೊರಡುವ ಸತ್ಯದ ಆತ್ಮನು ಬಂದಾಗ ಆತನು ನನ್ನ ವಿಷಯವಾಗಿ ಸಾಕ್ಷಿ ಕೊಡುವನು.ನೀವು ಮೊದಲಿನಿಂದಲೂ ನನ್ನ ಸಂಗಡ ಇದ್ದದರಿಂದ ನೀವು ಸಹ ಸಾಕ್ಷಿ ಕೊಡುವಿರಿ.
- 27ನೀವು ಮೊದಲಿನಿಂದಲೂ ನನ್ನ ಸಂಗಡ ಇದ್ದದರಿಂದ ನೀವು ಸಹ ಸಾಕ್ಷಿ ಕೊಡುವಿರಿ.
Cross references
- 1 John 4:14 1 ಯೋಹಾನನು 4:14ತಂದೆಯು ಮಗನನ್ನು ಲೋಕರಕ್ಷಕನನ್ನಾಗಿ ಕಳುಹಿಸಿಕೊಟ್ಟಿರುವದನ್ನು ನಾವು ನೋಡಿದ್ದೇವೆ ಮತ್ತು ಸಾಕ್ಷಿ ಹೇಳುತ್ತೇವೆ.
- John 21:24 ಯೋಹಾನನು 21:24ಇವುಗಳ ವಿಷಯವಾಗಿ ಸಾಕ್ಷಿ ಹೇಳಿ ಇವುಗಳನ್ನು ಬರೆದ ಶಿಷ್ಯನು ಇವನೇ; ಇವನ ಸಾಕ್ಷಿಯು ಸತ್ಯವೆಂದು ನಾವು ಬಲ್ಲೆವು.ಇದಲ್ಲದೆ ಯೇಸು ಮಾಡಿದವುಗಳು ಬಹಳ ಉಂಟು; ಅವುಗಳನ್ನು ಒಂದೊಂದಾಗಿ ಬರೆಯುವ ದಾದರೆ ಬರೆಯಬೇಕಾದ ಪುಸ್ತಕಗಳನ್ನು ಲೋಕವೇ ಹಿಡಿಸಲಾರದೆ ಹೋದೀತೆಂದು ನಾನು ನೆನಸುತ್ತೇನೆ. ಆಮೆನ್.
- Acts 10:39–42 ಅಪೊಸ್ತಲರ ಕೃತ್ಯಗಳು 10:39–42ಆತನು ಯೆಹೂದ್ಯರ ಸೀಮೆಯಲ್ಲಿಯೂ ಯೆರೂಸ ಲೇಮಿನಲ್ಲಿಯೂ ಮಾಡಿದ ಎಲ್ಲಾ ಕಾರ್ಯಗಳಿಗೆ ನಾವು ಸಾಕ್ಷಿಗಳಾಗಿದ್ದೇವೆ; ಅವರು ಆತನನ್ನು ಮರದ ಮೇಲೆ ತೂಗಹಾಕಿಕೊಂದರು; ದೇವರು ಆತನನ್ನು ಮೂರನೆಯ ದಿನದಲ್ಲಿ ಎಬ್ಬಿಸಿ ಬಹಿರಂಗವಾಗಿ ತೋರ್ಪಡಿಸಿದನು. ದೇವರು ಎಲ್ಲರಿಗೆ ತೋರ್ಪಡಿ ಸದೆ ಆತನು ಮುಂಚಿತವಾಗಿ ಆರಿಸಿಕೊಂಡಿದ್ದ ಸಾಕ್ಷಿಗಳಾಗಿರುವ ನಮಗೆ ಆತನನ್ನು ತೋರ್ಪಡಿಸಿ ದನು. ಆತನು ಸತ್ತವರೊಳಗಿಂದ ಎದ್ದು ಬಂದ ಮೇಲೆ ನಾವು ಆತನ ಸಂಗಡ ತಿಂದು ಕುಡಿದೆವು. ಆತನೇ ಜೀವಿತರಿಗೂ ಸತ್ತವರಿಗೂ ನ್ಯಾಯಾಧಿಪತಿಯಾಗಿ ದೇವರಿಂದ ನೇಮಕವಾದವನೆಂಬದನ್ನು ಜನರಿಗೆ ಸಾರಿ ಸಾಕ್ಷಿ ಹೇಳಬೇಕೆಂದು ದೇವರು ನಮಗೆ ಅಪ್ಪಣೆಕೊಟ್ಟನು.
- Luke 24:48 ಲೂಕನು 24:48ಇವುಗಳ ವಿಷಯವಾಗಿ ನೀವು ಸಾಕ್ಷಿಗಳಾ ಗಿದ್ದೀರಿ.
- 1 John 1:1–2 1 ಯೋಹಾನನು 1:1–2ಆದಿಯಿಂದ ಇದ್ದದ್ದನ್ನೂ ಆ ಜೀವ ವಾಕ್ಯದ ವಿಷಯವಾಗಿ ಕೇಳಿದ್ದನ್ನೂ ಕಣ್ಣಾರೆ ಕಂಡು ನೋಡಿದ್ದನ್ನೂ ನಾವು ಕೈಯಿಂದ ಮುಟ್ಟಿದ್ದೇವೆ. (ಆ ಜೀವವು ಪ್ರತ್ಯಕ್ಷವಾಯಿತು, ತಂದೆಯ ಬಳಿಯಲ್ಲಿದ್ದು ನಮಗೆ ಪ್ರತ್ಯಕ್ಷವಾದಂಥ ಆ ನಿತ್ಯಜೀವವನ್ನು ನಾವು ಕಂಡು ಅದನ್ನು ಕುರಿತು ಸಾಕ್ಷಿ ಹೇಳಿ ಅದನ್ನು ನಿಮಗೆ ತಿಳಿಯಪಡಿಸುತ್ತೇವೆ).
- Acts 23:11 ಅಪೊಸ್ತಲರ ಕೃತ್ಯಗಳು 23:11ಮರುದಿನ ರಾತ್ರಿ ಕರ್ತನು ಅವನ ಬಳಿಯಲ್ಲಿ ನಿಂತು--ಪೌಲನೇ, ಧೈರ್ಯವಾಗಿರು; ಯೆರೂಸ ಲೇಮಿನಲ್ಲಿ ನನ್ನ ವಿಷಯವಾಗಿ ನೀನು ಸಾಕ್ಷಿ ಹೇಳಿ ದಂತೆ ರೋಮ್ನಲ್ಲಿಯೂ ಸಾಕ್ಷಿ ಹೇಳತಕ್ಕದ್ದು ಎಂದು ಹೇಳಿದನು.
- Luke 1:2–3 ಲೂಕನು 1:2–3ಮೊದಲಿನಿಂದಲೂ ಕಣ್ಣಾರೆ ಕಂಡ ಸಾಕ್ಷಿಗಳು ಮತ್ತು ವಾಕ್ಯಪರಿಚಾರಕರು ಅವುಗಳನ್ನು ನಮಗೆ ಒಪ್ಪಿಸಿಕೊ ಟ್ಟದ್ದರಿಂದ ಅತ್ಯುತ್ತಮನಾದ ಥೆಯೊಫಿಲನೇ, ಮೊದಲಿ ನಿಂದಲೂ ಎಲ್ಲವುಗಳನ್ನು ಪೂರ್ಣವಾಗಿ ತಿಳಿದುಕೊಂಡಿ ರುವ ನಾನು ಸಹ ಅವುಗಳನ್ನು ಕ್ರಮವಾಗಿ ನಿನಗೆ ಬರೆಯುವದು ಒಳ್ಳೇದೆಂದು ನನಗೆ ತೋಚಿತು;
- 1 Peter 5:12 1 ಪೇತ್ರನು 5:12ನಿಮ್ಮನ್ನು ಎಚ್ಚರಿಸುವದಕ್ಕೂ ಇದೇ ದೇವರ ನಿಜವಾದ ಕೃಪೆ ಎಂದು ಸಾಕ್ಷಿ ಹೇಳುವದಕ್ಕೂ ನಿಮಗೆ ನಂಬಿಗಸ್ತನಾದ ಸಹೋದರನೆಂದು ನಾನು ಎಣಿಸುವ ಸಿಲ್ವಾನನಿಂದ ಸಂಕ್ಷೇಪವಾಗಿ ಇದನ್ನು ಬರೆದಿದ್ದೇನೆ. ಈ ನಿಜವಾದ ಕೃಪೆಯಲ್ಲಿ ನೀವು ನಿಂತವರಾಗಿದ್ದೀರಿ.
- Acts 1:8 ಅಪೊಸ್ತಲರ ಕೃತ್ಯಗಳು 1:8ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬಂದಾಗ ನೀವು ಬಲವನ್ನು ಹೊಂದುವಿರಿ; ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯದ ಲ್ಲಿಯೂ ಸಮಾರ್ಯದಲ್ಲಿಯೂ ಭೂಮಿಯ ಕಟ್ಟ ಕಡೆಯವರೆಗೂ ನೀವು ನನಗೆ ಸಾಕ್ಷಿಗಳಾಗಿರುವಿರಿ ಎಂದು ಹೇಳಿದನು.
- 1 Peter 5:1 1 ಪೇತ್ರನು 5:1ಜೊತೆ ಹಿರಿಯನೂ ಕ್ರಿಸ್ತನ ಶ್ರಮೆಗಳ ಸಾಕ್ಷಿಯೂ ಪ್ರತ್ಯಕ್ಷವಾಗಲಿರುವ ಪ್ರಭಾವ ದಲ್ಲಿ ಪಾಲುಗಾರನು ಆಗಿರುವ ನಾನು ನಿಮ್ಮಲ್ಲಿರುವ ಹಿರಿಯರನ್ನು ಎಚ್ಚರಿಸುವದೇನಂದರೆ,
- Acts 4:20 ಅಪೊಸ್ತಲರ ಕೃತ್ಯಗಳು 4:20ಯಾಕಂದರೆ ನಾವು ಕಂಡು ಕೇಳಿದವು ಗಳನ್ನು ಮಾತನಾಡದೆ ಇರಲಾರೆವು ಎಂದು ಹೇಳಿದರು.
- Acts 18:5 ಅಪೊಸ್ತಲರ ಕೃತ್ಯಗಳು 18:5ಸೀಲ ತಿಮೊಥೆಯರು ಮಕೆದೋನ್ಯದಿಂದ ಬಂದಾಗ ಪೌಲನು ಆತ್ಮದಲ್ಲಿ ಒತ್ತಾಯ ಮಾಡಲ್ಪಟ್ಟು ಯೇಸುವೇ ಕ್ರಿಸ್ತನೆಂದು ಯೆಹೂದ್ಯರಿಗೆ ಸಾಕ್ಷಿಕೊಟ್ಟನು.