Acts · chapter 13 · verse 24
Acts 13:24 in Kannada
ಆತನ ಆಗಮನಕ್ಕೆ ಮುಂಚೆ ಯೋಹಾನನು ಮೊದಲು ಇಸ್ರಾಯೇಲ್ ಜನರೆ ಲ್ಲರಿಗೆ ಮಾನಸಾಂತರದ ಬಾಪ್ತಿಸ್ಮವನ್ನು ಸಾರಿದನು.
Aatana aagamanakke munche yohaananu modalu israayel janare llarige maanasaantarada baaptismavannu saaridanu.
Acts 13:24 in English
- King James Version (KJV)
- When John had first preached before his coming the baptism of repentance to all the people of Israel.
- World English Bible (WEB)
- before his coming, when John had first preached the baptism of repentance to Israel.
- American Standard Version (ASV)
- when John had first preached before his coming the baptism of repentance to all the people of Israel.
- Bible in Basic English (BBE)
- For whose coming John made ready the way by preaching to all the people of Israel the baptism which goes with a change of heart.
- Darby Translation (DBY)
- John having proclaimed before the face of his entry [among the people] [the] baptism of repentance to all the people of Israel.
- Webster's Bible (WBS)
- John having first preached, before his coming, the baptism of repentance to all the people of Israel.
- Young's Literal Translation (YLT)
- John having first preached, before his coming, a baptism of reformation to all the people of Israel;
Read in context
- 22ತರುವಾಯ ಆತನು ಅವನನ್ನು ತೆಗೆದು ಹಾಕಿ ದಾವೀದನು ಅವರ ಅರಸನಾಗಿರುವಂತೆ ಎಬ್ಬಿಸಿದನು; ಇದಲ್ಲದೆ ಆತನು ಅವನ ವಿಷಯದಲ್ಲಿ ಸಾಕ್ಷಿ ಕೊಟ್ಟು--ನಾನು ಇಷಯನ ಮಗನಾದ ದಾವೀದನನ್ನು ಕಂಡುಕೊಂಡೆನು, ಅವನು ನನ್ನ ಹೃದಯವು ಒಪ್ಪುವ ಮನುಷ್ಯನು ಮತ್ತು ಅವನು ನನ್ನ ಚಿ
- 23ಇವನ ಸಂತಾನದಿಂದ ದೇವರು ತನ್ನ ವಾಗ್ದಾನದ ಪ್ರಕಾರ ಇಸ್ರಾಯೇಲ್ಯರಿಗೆ ಯೇಸು ಎಂಬ ಒಬ್ಬ ರಕ್ಷಕನನ್ನು ಎಬ್ಬಿಸಿದ್ದಾನೆ.
- 24ಆತನ ಆಗಮನಕ್ಕೆ ಮುಂಚೆ ಯೋಹಾನನು ಮೊದಲು ಇಸ್ರಾಯೇಲ್ ಜನರೆ ಲ್ಲರಿಗೆ ಮಾನಸಾಂತರದ ಬಾಪ್ತಿಸ್ಮವನ್ನು ಸಾರಿದನು.
- 25ಯೋಹಾನನು ತನ್ನ ಸೇವೆಯನ್ನು ಪೂರೈಸುತ್ತಿರಿವಾಗ ಜನರಿಗೆ--ನನ್ನನ್ನು ಯಾರೆಂದು ಯೋಚಿಸುತ್ತೀರಿ? ನಾನು ಆತನಲ್ಲ; ಆದರೆ ಇಗೋ, ನನ್ನ ಹಿಂದೆ ಒಬ್ಬಾತನು ಬರುತ್ತಾನೆ, ಆತನ ಪಾದದ ಕೆರಗಳನ್ನು ಬಿಚ್ಚುವದಕ್ಕೆ ನಾನು ಯೋಗ್ಯನಲ್ಲ ಎಂದು ಹೇಳಿದನು.
- 26ಜನರೇ, ಸಹೋದರರೇ, ಅಬ್ರಹಾಮನ ವಂಶ ಸ್ಥರೇ, ನಿಮ್ಮಲ್ಲಿ ದೇವರಿಗೆ ಭಯಪಡುವವರೇ, ನಿಮಗೆ ಈ ರಕ್ಷಣೆಯ ವಾಕ್ಯವು ಕಳುಹಿಸಿಯದೆ.
Cross references
- Acts 1:22 ಅಪೊಸ್ತಲರ ಕೃತ್ಯಗಳು 1:22ಯೋಹಾನನ ಬಾಪ್ತಿಸ್ಮ ಮೊದಲು ಗೊಂಡು ಆತನು ನಮ್ಮಿಂದ ಎತ್ತಲ್ಪಟ್ಟ ದಿನದವರೆಗೆ ನಮ್ಮೊಂದಿಗೆ ಒಬ್ಬನನ್ನು ಆತನ ಪುನರುತ್ಥಾನದ ವಿಷಯವಾಗಿ ಸಾಕ್ಷಿಯಾಗಿರುವಂತೆ ನೇಮಿಸತಕ್ಕದ್ದು.
- Acts 19:3–4 ಅಪೊಸ್ತಲರ ಕೃತ್ಯಗಳು 19:3–4ಆಗ ಅವನು ಅವರಿಗೆ--ನೀವು ಯಾವದಕ್ಕಾಗಿ ಬಾಪ್ತಿಸ್ಮ ಮಾಡಿಸಿಕೊಂಡಿರಿ ಎಂದು ಕೇಳಿದನು. ಅದಕ್ಕವರು--ಯೋಹಾನನ ಬಾಪ್ತಿಸ್ಮಕ್ಕನುಸಾರವಾಗಿ ಮಾಡಿಸಿ ಕೊಂಡೆವು ಎಂದು ಹೇಳಿದರು. ಆಗ ಪೌಲನು--ನಿಜವಾಗಿಯೂ ಯೋಹಾನನು ತನ್ನ ಹಿಂದೆ ಬರುವಾತ ನನ್ನು ಅಂದರೆ ಕ್ರಿಸ್ತ ಯೇಸುವನ್ನು ನಂಬಬೇಕೆಂದು ಜನರಿಗೆ ಹೇಳಿ ಮಾನಸಾಂತರದ ಬಾಪ್ತಿಸ್ಮದಿಂದ ಬಾಪ್ತಿಸ್ಮ ಮಾಡಿಸಿದನು ಎಂದು ಹೇಳಿದನು.
- Acts 10:37 ಅಪೊಸ್ತಲರ ಕೃತ್ಯಗಳು 10:37ಯೋಹಾನನು ಸಾರಿದ ಬಾಪ್ತಿಸ್ಮದ ತರುವಾಯ ಆ ವಾಕ್ಯವು ಗಲಿಲಾಯದಿಂದ ಪ್ರಾರಂಭವಾಗಿ ಯೂದಾಯದಲ್ಲೆಲ್ಲಾ ಪ್ರಬಲವಾಯಿ ತೆಂಬದನ್ನೂ
- Matthew 3:1–11 ಮತ್ತಾಯನು 3:1–11ಆ ದಿನಗಳಲ್ಲಿ ಬಾಪ್ತಿಸ್ಮ ಮಾಡಿಸುವ ಯೋಹಾನನು ಬಂದು ಯೂದಾಯದ ಅಡವಿಯಲ್ಲಿ ಸಾರುತ್ತಾ-- ನೀವು ಮಾನಸಾಂತರ ಪಡಿರಿ; ಯಾಕಂದರೆ ಪರಲೋಕರಾಜ್ಯವು ಸಮಾಪ ವಾಗಿದೆ ಎಂದು ಹೇಳಿದನು. ಯಾಕಂದರೆ--ಕರ್ತನ ಮಾರ್ಗವನ್ನು ಸಿದ್ಧಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವ ಒಬ್ಬನ ಶಬ್ದವದೆ ಎಂಬದಾಗಿ ಪ್ರವಾದಿಯಾದ ಯೆಶಾಯ ನಿಂದ ಹೇಳಲ್ಪಟ್ಟವನು ಇವನೇ. ಈ ಯೋಹಾನನಿಗೆ ಒಂಟೇ ಕೂದಲಿನ ಉಡುಪೂ ಸೊಂಟಕ್ಕೆ ಚರ್ಮದ ನಡುಕಟ್ಟೂ ಇದ್ದವು; ಮತ್ತು ಮಿಡತೆಗಳೂ ಕಾಡು ಜೇನೂ ಇವನಿಗೆ ಆಹಾರವಾಗಿದ್ದವು. ಆಗ ಯೆರೂಸಲೇಮಿನವರೂ ಎಲ್ಲಾ ಯೂದಾಯ ದವರೂ ಯೊರ್ದನ್ ಹೊಳೆಯ ಸುತ್ತಲಿರುವ ಎಲ್ಲಾ ಪ್ರದೇಶದವರೂ ಅವನ ಬಳಿಗೆ ಹೊರಟುಹೋದರು. ಅವರು ತಮ್ಮ ಪಾಪಗಳನ್ನು ಅರಿಕೆಮಾಡಿ ಯೊರ್ದನಿನಲ್ಲಿ ಅವನಿಂದ ಬಾಪ್ತಿಸ್ಮ ಮಾಡಿಕೊಂಡರು. ಆದರೆ ಫರಿಸಾಯರಲ್ಲಿಯೂ ಸದ್ದುಕಾಯರಲ್ಲಿಯೂ ಅನೇಕರು ತನ್ನಿಂದ ಬಾಪ್ತಿಸ್ಮ ಮಾಡಿಸಿಕೊಳ್ಳು ವದಕ್ಕಾಗಿ ಬರುವದನ್ನು ಅವನು ಕಂಡು ಅವರಿಗೆ-- ಓ ಸರ್ಪ ಸಂತತಿಯವರೇ, ಬರುವದಕ್ಕಿರುವ ಕೋಪ ದಿಂದ ತಪ್ಪಿಸಿಕೊಳ್ಳುವದಕ್ಕೆ ನಿಮ್ಮನ್ನು ಎಚ್ಚರಿಸಿದವರು ಯಾರು? ಹಾಗಾದರೆ ಮಾನಸಾಂತರಕ್ಕೆ ತಕ್ಕ ಫಲ ಗಳನ್ನು ಫಲಿಸಿರಿ; ಮತ್ತು -- ಅಬ್ರಹಾಮನು ನಮಗೆ ತಂದೆಯಾಗಿದ್ದಾನೆ ಎಂದು ನಿಮ್ಮ ನಿಮ್ಮೊಳಗೆ ಅಂದು ಕೊಳ್ಳಬೇಡಿರಿ; ಯಾಕಂದರೆ ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದ ಮಕ್ಕಳನ್ನು ಎಬ್ಬಿಸ ಶಕ್ತನೆಂದು ನಾನು ನಿಮಗೆ ಹೇಳುತ್ತೇನೆ. ಈಗಾಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಆದದರಿಂದ ಒಳ್ಳೇ ಫಲವನ್ನು ಫಲಿಸದ ಪ್ರತಿಯೊಂದು ಮರವು ಕಡಿಯಲ್ಪಟ್ಟು ಬೆಂಕಿ ಯಲ್ಲಿ ಹಾಕಲ್ಪಡುವದು. ನಾನು ಮಾನ ಸಾಂತರದ ನಿಮಿತ್ತ ನಿಮಗೆ ನೀರಿನಲ್ಲಿ ಬಾಪ್ತಿಸ್ಮ ಮಾಡಿಸುವದು ನಿಜವೇ; ಆದರೆ ನನ್ನ ಹಿಂದೆ ಬರುವಾತನು ನನಗಿಂತಲೂ ಶಕ್ತನಾಗಿದ್ದಾನೆ. ಆತನ ಕೆರಗಳನ್ನು ಹೊರುವದಕ್ಕೂ ನಾನು ಯೋಗ್ಯನಲ್ಲ; ಆತನು ಪವಿತ್ರಾ ತ್ಮನಿಂದಲೂ ಬೆಂಕಿಯಿಂದಲೂ ನಿಮಗೆ ಬಾಪ್ತಿಸ್ಮ ಮಾಡಿ ಸುವನು.
- Luke 3:2–20 ಲೂಕನು 3:2–20ಅನ್ನನು ಮತ್ತು ಕಾಯಫನು ಮಹಾ ಯಾಜಕರೂ ಆಗಿದ್ದಾಗ ಅಡವಿಯಲ್ಲಿದ್ದ ಜಕರೀಯನ ಮಗನಾದ ಯೋಹಾನನ ಬಳಿಗೆ ದೇವರ ವಾಕ್ಯವು ಬಂತು. ಅವನು ಯೊರ್ದನಿನ ಸುತ್ತಲಿರುವ ಎಲ್ಲಾ ಸೀಮೆಗಳಿಗೆ ಬಂದು ಪಾಪಗಳ ಪರಿಹಾರಕ್ಕಾಗಿ ಮಾನ ಸಾಂತರದ ಬಾಪ್ತಿಸ್ಮವನ್ನು ಸಾರಿ ಹೇಳುವವನಾದನು. ಪ್ರವಾದಿಯಾದ ಯೆಶಾಯನ ವಾಕ್ಯಗಳ ಪುಸ್ತಕ ದಲ್ಲಿ--ಕರ್ತನ ಮಾರ್ಗವನ್ನು ಸಿದ್ಧ ಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವವನ ಶಬ್ದವದೆ ಎಂದೂ ಪ್ರತಿಯೊಂದು ತಗ್ಗು ಮುಚ್ಚಿಸಲ್ಪಡುವದು, ಪ್ರತಿಯೊಂದು ಬೆಟ್ಟವು ತಗ್ಗಿಸಲ್ಪಡುವದು, ಡೊಂಕಾದವುಗಳು ನೆಟ್ಟಗಾಗುವವು ಮತ್ತು ಕೊರಕಲಾದ ದಾರಿಗಳು ಸಮವಾಗುವವು; ಮಾನವರೆಲ್ಲರು ದೇವರ ರಕ್ಷಣೆಯನ್ನು ಕಾಣುವರು ಎಂದೂ ಬರೆದಿರುವಂತೆ ಹೀಗಾಯಿತು. ಆಗ ತನ್ನಿಂದ ಬಾಪ್ತಿಸ್ಮ ಮಾಡಿಸಿಕೊಳ್ಳುವದಕ್ಕಾಗಿ ಹೊರಟು ಬಂದ ಜನಸಮೂಹಕ್ಕೆ--ಓ ಸರ್ಪಗಳ ಸಂತತಿಯವರೇ, ಬರುವದಕ್ಕಿರುವ ಕೋಪದಿಂದ ತಪ್ಪಿಸಿಕೊಳ್ಳುವಂತೆ ನಿಮ್ಮನ್ನು ಎಚ್ಚರಿಸಿದವರಾರು? ಹಾಗಾದರೆ ಮಾನಸಾ ಂತರಕ್ಕೆ ಯೋಗ್ಯವಾದ ಫಲಗಳನ್ನು ಫಲಿಸಿರಿ,--ಅಬ್ರಹಾಮನು ನಮಗೆ ತಂದೆಯಾಗಿದ್ದಾನೆಂದು ನಿಮ್ಮೊಳಗೆ ಅಂದುಕೊಳ್ಳುವದಕ್ಕೆ ಆರಂಭಿಸಬೇ ಡಿರಿ; ಯಾಕಂದರೆ--ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದ ಮಕ್ಕಳನ್ನು ಎಬ್ಬಿಸಶಕ್ತನೆಂದು ನಾನು ನಿಮಗೆ ಹೇಳುತ್ತೇನೆ. ಈಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಆದದರಿಂದ ಒಳ್ಳೇಫಲ ಫಲಿ ಸದ ಪ್ರತಿಯೊಂದು ಮರವು ಕಡಿಯಲ್ಪಟ್ಟು ಬೆಂಕಿಯಲ್ಲಿ ಹಾಕಲ್ಪಡುವದು ಎಂದು ಹೇಳಿದನು. ಆಗ ಜನರು ಅವನಿಗೆ--ಹಾಗಾದರೆ ನಾವೇನು ಮಾಡಬೇಕು ಎಂದು ಕೇಳಿದರು. ಅವನು ಪ್ರತ್ಯುತ್ತರವಾಗಿ ಅವರಿಗೆ--ಎರಡು ಅಂಗಿಗಳುಳ್ಳವನು ಏನೂ ಇಲ್ಲದವ ನಿಗೆ ಕೊಡಲಿ; ಆಹಾರವುಳ್ಳವನು ಹಾಗೆಯೇ ಮಾಡಲಿ ಎಂದು ಹೇಳಿದನು. ತರುವಾಯ ಸುಂಕದವರು ಸಹ ಬಾಪ್ತಿಸ್ಮ ಮಾಡಿಸಿಕೊಳ್ಳುವದಕ್ಕಾಗಿ ಬಂದು ಅವನಿಗೆ--ಬೋಧಕನೇ, ನಾವೇನು ಮಾಡಬೇಕು ಎಂದು ಕೇಳಿದರು. ಅದಕ್ಕವನು ಅವರಿಗೆ-- ನಿಮಗೆ ನೇಮಿಸಲ್ಪಟ್ಟದ್ದಕ್ಕಿಂತ ಹೆಚ್ಚೇನೂ ತೆಗೆದು ಕೊಳ್ಳಬೇಡಿರಿ ಅಂದನು. ಅದರಂತೆಯೇ ಸೈನಿ ಕರು--ನಾವೇನು ಮಾಡತಕ್ಕದ್ದು ಎಂದು ಕೇಳಿದ್ದಕ್ಕೆ ಅವನು ಅವರಿಗೆ--ಯಾರನ್ನೂ ಹಿಂಸಿಸಬೇಡಿರಿ; ಇಲ್ಲವೆ ಯಾರ ಮೇಲೆಯೂ ಸುಳ್ಳಾಗಿ ದೂರು ಹೇಳಬೇಡಿರಿ; ನಿಮ್ಮ ಸಂಬಳದಲ್ಲಿ ತೃಪ್ತರಾಗಿರ್ರಿ ಎಂದು ಹೇಳಿದನು. ಆಗ ಜನರು ಕ್ರಿಸ್ತನನ್ನು ಎದುರು ನೋಡುವವರಾಗಿದ್ದರಿಂದ ಯೋಹಾನನು ಆ ಕ್ರಿಸ್ತನಾ ಗಿರಬಹುದೋ ಇಲ್ಲವೋ ಎಂದು ಎಲ್ಲರೂ ತಮ್ಮ ಹೃದಯಗಳಲ್ಲಿ ಆಲೋಚಿಸುತ್ತಿದ್ದರು. ಆಗ ಯೋಹಾನನು ಪ್ರತ್ಯುತ್ತರವಾಗಿ ಅವರೆಲ್ಲ ರಿಗೆ--ನಾನಂತೂ ನಿಮಗೆ ನೀರಿನ ಬಾಪ್ತಿಸ್ಮ ಮಾಡಿಸು ವದು ನಿಜವೇ; ಆದರೆ ನನಗಿಂತ ಶಕ್ತನೊಬ್ಬನು ಬರು ತ್ತಾನೆ; ಆತನ ಕೆರಗಳ ಬಾರನ್ನು ಬಿಚ್ಚುವದಕ್ಕೂ ನಾನು ಯೋಗ್ಯನಲ್ಲ; ಆತನು ಪವಿತ್ರಾತ್ಮನಿಂದಲೂ ಬೆಂಕಿಯಿಂ ದಲೂ ನಿಮಗೆ ಬಾಪ್ತಿಸ್ಮ ಮಾಡಿಸುವನು ಆತನ ಮೊರವು ಆತನ ಕೈಯಲ್ಲಿದೆ. ಆತನು ತನ್ನ ಕಣವನ್ನು ಸಂಪೂರ್ಣವಾಗಿ ಹಸನುಮಾಡಿ ಗೋದಿಯನ್ನು ತನ್ನ ಕಣಜದಲ್ಲಿ ಕೂಡಿಸುವನು; ಆದರೆ ಹೊಟ್ಟನ್ನು ಆರದ ಬೆಂಕಿಯಿಂದ ಸುಡುವನು ಎಂದು ಹೇಳಿದನು. ಅವನು ಇನ್ನೂ ಅನೇಕ ವಿಷಯಗಳಿಂದ ಎಚ್ಚರಿಸಿ ಜನರಿಗೆ ಸಾರಿದನು. ಆದರೆ ಚತುರಾಧಿಪತಿಯಾದ ಹೆರೋದನು ತನ್ನ ಸಹೋದರನಾದ ಫಿಲಿಪ್ಪನ ಹೆಂಡ ತಿಯಾದ ಹೆರೋದ್ಯಳಿಗಾಗಿಯೂ ಹೆರೋದನು ಮಾಡಿದ್ದ ಎಲ್ಲಾ ದುಷ್ಕೃತ್ಯಗಳಿಗಾಗಿಯೂ ಯೋಹಾ ನನು ಅವನನ್ನು ಗದರಿಸಿದ್ದರಿಂದ ಅವನು ಯೋಹಾ ನನನ್ನು ಸೆರೆಯಲ್ಲಿ ಹಾಕಿ ತಾನು ಮಾಡಿದ್ದ ಎಲ್ಲಾ ದುಷ್ಕೃತ್ಯಗಳ ಮೇಲೆ ಇದನ್ನು ಕೂಡಿಸಿದನು.
- Mark 1:2–8 ಮಾರ್ಕನು 1:2–8ಪ್ರವಾದನೆಗಳಲ್ಲಿ ಬರೆಯಲ್ಪಟ್ಟ ಪ್ರಕಾರ--ಇಗೋ, ನಿನ್ನ ಮಾರ್ಗವನ್ನು ಸಿದ್ಧಮಾಡುವ ನನ್ನ ದೂತನನ್ನು ನಿನ್ನ ಮುಂದೆ ನಾನು ಕಳುಹಿಸುತ್ತೇನೆ. ಕರ್ತನ ಮಾರ್ಗವನ್ನು ನೀವು ಸಿದ್ಧಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆಮಾಡಿರಿ ಎಂದು ಅಡವಿಯಲ್ಲಿ ಕೂಗುವ ಒಬ್ಬನ ಶಬ್ದವದೆ ಎಂಬದು. ಯೋಹಾನನು ಅಡವಿಯಲ್ಲಿ ಬಾಪ್ತಿಸ್ಮ ಮಾಡಿಸುತ್ತಾ ಪಾಪಗಳ ಪರಿ ಹಾರಕ್ಕಾಗಿ ಮಾನಸಾಂತರದ ಬಾಪ್ತಿಸ್ಮವನ್ನು ಸಾರಿದನು. ಆಗ ಯೂದಾಯ ದೇಶವೆಲ್ಲವೂ ಯೆರೂಸಲೇಮಿ ನವರೂ ಅವನ ಬಳಿಗೆ ಹೊರಟು ಹೋಗಿ ತಮ್ಮ ಪಾಪಗಳನ್ನು ಅರಿಕೆ ಮಾಡುತ್ತಾ ಯೊರ್ದನ್ ನದಿಯಲ್ಲಿ ಎಲ್ಲರೂ ಅವನಿಂದ ಬಾಪ್ತಿಸ್ಮ ಮಾಡಿಸಿ ಕೊಂಡರು. ಯೋಹಾನನು ಒಂಟೇ ಕೂದಲಿನ ಉಡುಪನ್ನು ಧರಿಸಿಕೊಂಡು ತನ್ನ ನಡುವಿಗೆ ಚರ್ಮದ ನಡುಕಟ್ಟನ್ನು ಕಟ್ಟಿಕೊಂಡವನಾಗಿದ್ದು ಮಿಡಿತೆಗಳನ್ನೂ ಕಾಡುಜೇನನ್ನೂ ತಿನ್ನುತ್ತಿದ್ದನು. ಮತ್ತು ಅವನು--ನನಗಿಂತ ಶಕ್ತನಾಗಿರುವಾತನು ನನ್ನ ಹಿಂದೆ ಬರುತ್ತಾನೆ; ನಾನು ಬೊಗ್ಗಿಕೊಂಡು ಆತನ ಕೆರಗಳ ಬಾರನ್ನು ಬಿಚ್ಚುವದಕ್ಕೂ ಯೋಗ್ಯನಲ್ಲ; ನಾನು ನಿಮಗೆ ನೀರಿನಿಂದ ಬಾಪ್ತಿಸ್ಮ ಮಾಡಿಸಿದ್ದು ನಿಜವೇ. ಆತನಾ ದರೋ ನಿಮಗೆ ಪವಿತ್ರಾತ್ಮನಿಂದ ಬಾಪ್ತಿಸ್ಮ ಮಾಡಿಸು ವನು ಎಂದು ಸಾರಿ ಹೇಳುತ್ತಿದ್ದನು.
- John 3:25–36 ಯೋಹಾನನು 3:25–36ತರುವಾಯ ಯೋಹಾನನ ಶಿಷ್ಯರಲ್ಲಿ ಕೆಲವರಿಗೂ ಯೆಹೂದ್ಯರಿಗೂ ಮಧ್ಯದಲ್ಲಿ ಶುದ್ಧೀಕರಣದ ವಿಷಯವಾಗಿ ವಿವಾದ ಉಂಟಾಯಿತು. ಅವರು ಯೋಹಾನನ ಬಳಿಗೆ ಬಂದು ಅವ ನಿಗೆ--ಗುರುವೇ, ಇಗೋ, ಯೊರ್ದನಿನ ಆಚೆ ನಿನ್ನ ಬಳಿಯಲ್ಲಿದ್ದ ಒಬ್ಬಾತನ ವಿಷಯದಲ್ಲಿ ನೀನು ಸಾಕ್ಷಿಕೊಟ್ಟಿಯಲ್ಲಾ; ಆತನೂ ಬಾಪ್ತಿಸ್ಮ ಮಾಡಿಸುತ್ತಾನೆ, ಎಲ್ಲರೂ ಆತನ ಬಳಿಗೆ ಹೋಗುತ್ತಾರೆ ಅಂದರು. ಯೋಹಾನನು ಪ್ರತ್ಯುತ್ತರವಾಗಿ--ಪರಲೋಕ ದಿಂದ ಒಬ್ಬ ಮನುಷ್ಯನಿಗೆ ಕೊಡಲ್ಪಡದ ಹೊರತು ಅವನು ಯಾವದನ್ನೂ ಹೊಂದಲಾರನು. ನಾನು ಕ್ರಿಸ್ತನಲ್ಲ, ಆದರೆ ಆತನ ಮುಂದಾಗಿ ಕಳುಹಿಸಲ್ಪಟ್ಟ ವನೆಂದು ನಾನು ಹೇಳಿದ್ದಕ್ಕೆ ನೀವೇ ನನಗೆ ಸಾಕ್ಷಿಗಳಾ ಗಿದ್ದೀರಿ. ಮದಲಗಿತ್ತಿಯುಳ್ಳವನೇ ಮದಲಿಂಗನು; ಆದರೆ ಮದಲಿಂಗನ ಸ್ನೇಹಿತನು ನಿಂತುಕೊಂಡು ಆತನ ಮಾತನ್ನು ಕೇಳಿ ಮದಲಿಂಗನ ಧ್ವನಿಗೆ ಬಹಳವಾಗಿ ಸಂತೋಷ ಪಡುತ್ತಾನೆ; ಆದಕಾರಣ ಈ ನನ್ನ ಸಂತೋಷವು ನೆರವೇರಿತು. ಆತನು ಹೆಚ್ಚಿಸಲ್ಪ ಡತಕ್ಕದ್ದು; ನಾನು ತಗ್ಗಿಸಲ್ಪಡತಕ್ಕದ್ದು. ಮೇಲಿನಿಂದ ಬರುವಾತನು ಎಲ್ಲರ ಮೇಲೆ ಇದ್ದಾನೆ; ಯಾವನು ಭೂಸಂಬಂಧವಾದವನಾಗಿದ್ದಾನೋ ಅವನು ಭೂ ಸಂಬಂಧದವನಾಗಿದ್ದು ಭೂಸಂಬಂಧವಾದವುಗಳನ್ನು ಮಾತನಾಡುತ್ತಾನೆ; ಪರಲೋಕದಿಂದ ಬರುವಾತನು ಎಲ್ಲರ ಮೇಲೆ ಇದ್ದಾನೆ. ಆತನು ಯಾವದನ್ನು ಕಂಡು ಕೇಳಿದನೋ ಅದಕ್ಕೆ ಸಾಕ್ಷಿ ಕೊಡುತ್ತಾನೆ; ಆದರೆ ಆತನ ಸಾಕ್ಷಿಯನ್ನು ಯಾವನೂ ಅಂಗೀಕರಿಸುವದಿಲ್ಲ. ಆತನ ಸಾಕ್ಷಿಯನ್ನು ಅಂಗೀಕರಿಸಿದವನು ದೇವರು ಸತ್ಯವಂತನೆಂಬದಕ್ಕೆ ತನ್ನ ಮುದ್ರೆಯನ್ನು ಹಾಕಿದ್ದಾನೆ. ದೇವರು ಕಳುಹಿಸಿದಾತನು ದೇವರ ಮಾತುಗಳನ್ನೇ ಆಡುತ್ತಾನೆ; ದೇವರು ಆತನಿಗೆ ಆತ್ಮನನ್ನು ಅಳತೆ ಮಾಡದೆ ಕೊಡುತ್ತಾನೆ. ತಂದೆಯು ಮಗನನ್ನು ಪ್ರೀತಿಸಿ ಎಲ್ಲವುಗಳನ್ನು ಆತನ ಕೈಯಲ್ಲಿ ಕೊಟ್ಟಿದ್ದಾನೆ.ಮಗನ ಮೇಲೆ ನಂಬಿಕೆಯಿಡುವವನಿಗೆ ನಿತ್ಯಜೀವ ಉಂಟು; ಯಾವನು ಮಗನನ್ನು ನಂಬುವದಿಲ್ಲವೋ ಅವನು ಜೀವವನ್ನು ಕಾಣುವದಿಲ್ಲ; ಆದರೆ ದೇವರ ಕೋಪವು ಅವನ ಮೇಲೆ ನೆಲೆಗೊಂಡಿದೆ ಅಂದನು. ಮಗನ ಮೇಲೆ ನಂಬಿಕೆಯಿಡುವವನಿಗೆ ನಿತ್ಯಜೀವ ಉಂಟು; ಯಾವನು ಮಗನನ್ನು ನಂಬುವದಿಲ್ಲವೋ ಅವನು ಜೀವವನ್ನು ಕಾಣುವದಿಲ್ಲ; ಆದರೆ ದೇವರ ಕೋಪವು ಅವನ ಮೇಲೆ ನೆಲೆಗೊಂಡಿದೆ ಅಂದನು.
- John 5:33–36 ಯೋಹಾನನು 5:33–36ನೀವು ಯೋಹಾನನ ಬಳಿಗೆ ಕಳುಹಿಸಿದಿರಿ; ಅವನು ಸತ್ಯಕ್ಕೆ ಸಾಕ್ಷಿಕೊಟ್ಟನು. ನಾನು ಮನುಷ್ಯನಿಂದ ಸಾಕ್ಷಿ ಅಂಗೀಕರಿಸುವದಿಲ್ಲ; ಆದರೆ ನೀವು ರಕ್ಷಣೆ ಹೊಂದುವಂತೆ ನಾನು ಇವು ಗಳನ್ನು ಹೇಳುತ್ತೇನೆ. ಅವನು ಉರಿದು ಪ್ರಕಾಶಿಸುವ ದೀಪವಾಗಿದ್ದನು; ನೀವು ಸ್ವಲ್ಪಕಾಲ ಅವನ ಬೆಳಕಿನಲ್ಲಿ ಸಂತೋಷಿಸುವದಕ್ಕೆ ಮನಸ್ಸುಳ್ಳವರಾಗಿದ್ದೀರಿ; ಆದರೆ ಯೋಹಾನನಿಗಿಂತಲೂ ಹೆಚ್ಚಿನ ಸಾಕ್ಷಿ ನನಗುಂಟು; ಹೇಗೆಂದರೆ ಪೂರೈಸುವದಕ್ಕಾಗಿ ತಂದೆಯು ನನಗೆ ಕೊಟ್ಟ ಕೆಲಸಗಳು ಅಂದರೆ ನಾನು ಮಾಡುತ್ತಿರುವ ಈ ಕೆಲಸಗಳೇ ತಂದೆಯು ನನ್ನನ್ನು ಕಳುಹಿಸಿದ್ದಾನೆಂದು ನನ್ನ ವಿಷಯವಾಗಿ ಸಾಕ್ಷಿ ಕೊಡುತ್ತವೆ.
- John 1:6–8 ಯೋಹಾನನು 1:6–8ದೇವರಿಂದ ಕಳುಹಿ ಸಲ್ಪಟ್ಟ ಒಬ್ಬ ಮನುಷ್ಯನಿದ್ದನು; ಅವನ ಹೆಸರು ಯೋಹಾನನು. ಎಲ್ಲರೂ ತನ್ನ ಮೂಲಕವಾಗಿ ನಂಬುವಂತೆ ಅವನೇ ಆ ಬೆಳಕಿನ ವಿಷಯದಲ್ಲಿ ಸಾಕ್ಷಿ ಕೊಡುವದಕ್ಕೆ ಸಾಕ್ಷಿಗಾಗಿ ಬಂದನು. ಅವನು ಆ ಬೆಳಕಲ್ಲ. ಆದರೆ ಆ ಬೆಳಕಿನ ವಿಷಯದಲ್ಲಿ ಸಾಕ್ಷಿ ಕೊಡು ವದಕ್ಕೆ ಕಳುಹಿಸಲ್ಪಟ್ಟನು.
- John 1:15–18 ಯೋಹಾನನು 1:15–18ಯೋಹಾನನು ಆತನ ವಿಷಯದಲ್ಲಿ ಸಾಕ್ಷಿ ಕೊಟ್ಟು--ನನ್ನ ಹಿಂದೆ ಬರುವಾತನು ನನಗಿಂತ ಮೊದಲೇ ಇದ್ದದರಿಂದ ನನಗಿಂತ ಮುಂದಿನವನು ಎಂದು ನಾನು ಹೇಳಿದಾತನು ಈತನೇ ಎಂದು ಕೂಗಿ ಹೇಳಿದನು. ಆತನ ಸಂಪೂರ್ಣತೆಯೊಳಗಿಂದ ನಾವೆಲ್ಲರೂ ಕೃಪೆಗಾಗಿ ಕೃಪೆಯನ್ನು ಹೊಂದಿದೆವು. ನ್ಯಾಯಪ್ರಮಾಣವು ಮೋಶೆಯ ಮುಖಾಂತರ ವಾಗಿ ಕೊಡಲ್ಪಟ್ಟಿತು; ಆದರೆ ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮುಖಾಂತರವಾಗಿ ಬಂದವು. ಯಾವನೂ ಯಾವ ಕಾಲದಲ್ಲೂ ದೇವರನ್ನು ಕಂಡಿಲ್ಲ. ತಂದೆಯ ಎದೆಯಲ್ಲಿರುವ ಆ ಒಬ್ಬನೇ ಮಗ ನಾಗಿರುವಾತನು ಆತನನ್ನು ತಿಳಿಯಪಡಿಸಿದ್ದಾನೆ.
- Luke 1:76 ಲೂಕನು 1:76ಇದಲ್ಲದೆ ಮಗುವೇ, ನೀನಾದರೋ ಮಹೋನ್ನತನ ಪ್ರವಾದಿ ಎಂದು ಕರೆಯಲ್ಪಡುವಿ; ಯಾಕಂದರೆ ಕರ್ತನ ಮಾರ್ಗಗಳನ್ನು ಸಿದ್ಧಮಾಡು ವದಕ್ಕೆ ಆತನ ಮುಂದೆ ಹೋಗುವಿ.
Original words (Greek)
- When · G4296προκηρύσσω prokērýssō
- John · G2491Ἰωάννης Iōánnēs
- preached · G4296προκηρύσσω prokērýssō
- before · G4253πρό pró
- his · G846αὐτός autós
- coming · G1529εἴσοδος eísodos
- baptism · G908βάπτισμα báptisma
- repentance · G3341μετάνοια metánoia
- all · G3956πᾶς pâs
- people · G2992λαός laós
- Israel · G2474Ἰσραήλ Israḗl