Acts · chapter 22 · verse 8
Acts 22:8 in Kannada
ಅದಕ್ಕೆ ನಾನು ಪ್ರತ್ಯುತ್ತರವಾಗಿ--ಕರ್ತನೇ, ನೀನು ಯಾರು ಎಂದು ಕೇಳಿದಾಗ ಆತನು--ನೀನು ಹಿಂಸಿಸುತ್ತಿರುವ ನಜರೇತಿನ ಯೇಸುವೇ ನಾನು ಎಂದು ನನಗೆ ಹೇಳಿದನು.
Adakke naanu pratyuttaravaagi--kartane, neenu yaaru endu kelidaaga aatanu--neenu hinsisuttiruva najaretina yesuve naanu endu nanage helidanu.
Acts 22:8 in English
- King James Version (KJV)
- And I answered, Who art thou, Lord? And he said unto me, I am Jesus of Nazareth, whom thou persecutest.
- World English Bible (WEB)
- I answered, ‘Who are you, Lord?’ He said to me, ‘I am Jesus of Nazareth, whom you persecute.’
- American Standard Version (ASV)
- And I answered, Who art thou, Lord? And he said unto me, I am Jesus of Nazareth, whom thou persecutest.
- Bible in Basic English (BBE)
- And I, answering, said, Who are you; Lord? And he said to me, I am Jesus of Nazareth, whom you are attacking.
- Darby Translation (DBY)
- And I answered, Who art thou, Lord? And he said to me, I am Jesus the Nazaraean, whom thou persecutest.
- Webster's Bible (WBS)
- And I answered, Who art thou, Lord? And he said to me, I am Jesus of Nazareth, whom thou persecutest.
- Young's Literal Translation (YLT)
- 'And I answered, Who art thou, Lord? and he said unto me, I am Jesus the Nazarene whom thou dost persecute —
Read in context
- 6ತರುವಾಯ ನಾನು ಪ್ರಯಾಣಮಾಡುತ್ತಾ ಸುಮಾರು ಮಧ್ಯಾಹ್ನದ ಸಮಯದಲ್ಲಿ ದಮಸ್ಕದ ಹತ್ತಿರ ಬಂದಾಗ ಫಕ್ಕನೆ ಆಕಾಶದಿಂದ ಒಂದು ದೊಡ್ಡ ಬೆಳಕು ನನ್ನ ಸುತ್ತಲೂ ಹೊಳೆಯಿತು.
- 7ಆಗ ನಾನು ನೆಲಕ್ಕೆ ಬಿದ್ದು--ಸೌಲನೇ, ಸೌಲನೇ, ನೀನು ನನ್ನನ್ನು ಯಾಕೆ ಹಿಂಸಿಸುತ್ತೀ? ಎಂದು ಹೇಳುವ ಧ್ವನಿಯನ್ನು ಕೇಳಿದೆನು.
- 8ಅದಕ್ಕೆ ನಾನು ಪ್ರತ್ಯುತ್ತರವಾಗಿ--ಕರ್ತನೇ, ನೀನು ಯಾರು ಎಂದು ಕೇಳಿದಾಗ ಆತನು--ನೀನು ಹಿಂಸಿಸುತ್ತಿರುವ ನಜರೇತಿನ ಯೇಸುವೇ ನಾನು ಎಂದು ನನಗೆ ಹೇಳಿದನು.
- 9ಆಗ ನನ್ನೊಂದಿಗಿದ್ದವರು ನಿಜವಾಗಿಯೂ ಆ ಬೆಳಕನ್ನು ನೋಡಿ ಭಯಪಟ್ಟರು; ಆದರೆ ನನ್ನೊಂದಿಗೆ ಮಾತನಾಡಿದ ಆತನ ಧ್ವನಿಯನ್ನು ಅವರು ಕೇಳಲಿಲ್ಲ.
- 10ನಾನು--ಕರ್ತನೇ, ನಾನೇನು ಮಾಡಬೇಕು ಎಂದು ಕೇಳಿದೆನು; ಅದಕ್ಕೆ ಕರ್ತನು ನನಗೆ--ನೀನೆದ್ದು ದಮಸ್ಕದೊಳಕ್ಕೆ ಹೋಗು; ನಿನಗೆ ನೇಮಿಸಲ್ಪ ಟ್ಟವುಗಳೆಲ್ಲವು ಅಲ್ಲಿ ನಿನಗೆ ತಿಳಿಸಲ್ಪಡುವವು ಎಂದು ಹೇಳಿದನು.
Cross references
- Acts 26:9 ಅಪೊಸ್ತಲರ ಕೃತ್ಯಗಳು 26:9ನಜರೇತಿನ ಯೇಸುವಿನ ಹೆಸರಿಗೆ ಪ್ರತಿಕೂಲವಾಗಿ ಅನೇಕ ಕಾರ್ಯಗಳನ್ನು ಮಾಡಲೇಬೇಕೆಂದು ನಾನು ನಿಜವಾಗಿ ಅಂದುಕೊಂಡಿದ್ದೆನು.
- 1 Samuel 8:7 1 ಸಮುವೇಲನು 8:7ಆಗ ಕರ್ತನು ಸಮು ವೇಲನಿಗೆ--ಜನರು ನಿನಗೆ ಹೇಳಿದ್ದೆಲ್ಲಾದರಲ್ಲಿ ಅವರ ಮಾತು ಕೇಳು. ಯಾಕಂದರೆ ಅವರು ನಿನ್ನನ್ನು ತೊರೆ ದಿಲ್ಲ; ನಾನು ಅವರನ್ನು ಆಳದ ಹಾಗೆ ನನ್ನನ್ನು ತೊರೆದಿದ್ದಾರೆ.
- Matthew 10:40–42 ಮತ್ತಾಯನು 10:40–42ನಿಮ್ಮನ್ನು ಅಂಗೀಕರಿಸಿಕೊಳ್ಳುವವನು ನನ್ನನ್ನು ಅಂಗೀಕರಿಸಿಕೊಳ್ಳುತ್ತಾನೆ; ಮತ್ತು ನನ್ನನ್ನು ಅಂಗೀಕರಿಸಿ ಕೊಳ್ಳುವವನು ನನ್ನನ್ನು ಕಳುಹಿಸಿದಾತನನ್ನು ಅಂಗೀಕರಿಸಿ ಕೊಳ್ಳುತ್ತಾನೆ. ಪ್ರವಾದಿಯ ಹೆಸರಿನಲ್ಲಿ ಪ್ರವಾದಿ ಯನ್ನು ಅಂಗೀಕರಿಸುವವನು ಪ್ರವಾದಿಯ ಪ್ರತಿಫಲ ವನ್ನು ಪಡಕೊಳ್ಳುವನು; ನೀತಿವಂತನ ಹೆಸರಿನಲ್ಲಿ ನೀತಿವಂತನನ್ನು ಅಂಗೀಕರಿಸುವವನು ನೀತಿವಂತನ ಪ್ರತಿಫಲವನ್ನು ಪಡಕೊಳ್ಳುವನು.ಯಾವನಾದರೂ ಶಿಷ್ಯನ ಹೆಸರಿನಲ್ಲಿ ಈ ಚಿಕ್ಕವರಾದ ಒಬ್ಬನಿಗೆ ಕೇವಲ ಒಂದು ತಂಬಿಗೆ ತಣ್ಣೀರನ್ನಾದರೂ ಕುಡಿಯುವದಕ್ಕೆ ಕೊಟ್ಟರೆ ಅವನು ತನ್ನ ಪ್ರತಿಫಲವನ್ನು ಕಳಕೊಳ್ಳುವದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು. ಯಾವನಾದರೂ ಶಿಷ್ಯನ ಹೆಸರಿನಲ್ಲಿ ಈ ಚಿಕ್ಕವರಾದ ಒಬ್ಬನಿಗೆ ಕೇವಲ ಒಂದು ತಂಬಿಗೆ ತಣ್ಣೀರನ್ನಾದರೂ ಕುಡಿಯುವದಕ್ಕೆ ಕೊಟ್ಟರೆ ಅವನು ತನ್ನ ಪ್ರತಿಫಲವನ್ನು ಕಳಕೊಳ್ಳುವದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
- Acts 26:14–15 ಅಪೊಸ್ತಲರ ಕೃತ್ಯಗಳು 26:14–15ನಾವೆಲ್ಲರೂ ನೆಲಕ್ಕೆ ಬಿದ್ದಾಗ--ಸೌಲನೇ, ಸೌಲನೇ, ಯಾಕೆ ನನ್ನನ್ನು ನೀನು ಹಿಂಸಿಸುತ್ತೀ, ಮುಳ್ಳು ಗೋಲನ್ನು ಒದೆಯುವದು ನಿನಗೆ ಕಷ್ಟ ಎಂದು ನನ್ನೊಂದಿಗೆ ಇಬ್ರಿಯ ಭಾಷೆಯಲ್ಲಿ ಮಾತನಾಡಿದ ಒಂದು ಧ್ವನಿಯನ್ನು ನಾನು ಕೇಳಿದೆನು. ಅದಕ್ಕೆ ನಾನು--ಕರ್ತನೇ, ನೀನು ಯಾರು ಎಂದು ಕೇಳಿದೆನು. ಆಗ ಆತನು--ನೀನು ಹಿಂಸೆಪಡಿಸುವ ಯೇಸುವೇ ನಾನು.
- Matthew 2:23 ಮತ್ತಾಯನು 2:23ಅವನು ನಜರೇತೆಂಬ ಪಟ್ಟಣಕ್ಕೆ ಬಂದು ಅಲ್ಲಿ ವಾಸಿಸಿದನು; ಇದರಿಂದ--ಆತನು ನಜರಾಯನೆಂದು ಕರೆಯಲ್ಪ ಡುವನು ಎಂಬದಾಗಿ ಪ್ರವಾದಿಗಳಿಂದ ಹೇಳಲ್ಪಟ್ಟದ್ದು ನೆರವೇರುವಂತೆ ಹೀಗಾಯಿತು.
- Acts 3:6 ಅಪೊಸ್ತಲರ ಕೃತ್ಯಗಳು 3:6ಆಗ ಪೇತ್ರನು--ಬೆಳ್ಳಿಬಂಗಾರವಂತೂ ನನ್ನಲ್ಲಿಲ್ಲ. ಆದರೆ ನನಗಿರುವದನ್ನು ನಿನಗೆ ಕೊಡುತ್ತೇನೆ; ನಜರೇತಿನ ಯೇಸು ಕ್ರಿಸ್ತನ ಹೆಸರಿನಲ್ಲಿ ಎದ್ದು ನಡೆದಾಡು ಎಂದು ಹೇಳಿ
- Acts 6:14 ಅಪೊಸ್ತಲರ ಕೃತ್ಯಗಳು 6:14ನಜ ರೇತಿನ ಯೇಸು ಈ ಸ್ಥಳವನ್ನು (ದೇವಾಲಯವನ್ನು) ಕೆಡವಿ ಮೋಶೆಯು ನಮಗೆ ಒಪ್ಪಿಸಿಕೊಟ್ಟ ಆಚಾರಗಳನ್ನು ಮಾರ್ಪಡಿಸುವನು ಎಂದು ಇವನು ಹೇಳುವದನ್ನು ನಾವು ಕೇಳಿದ್ದೇವೆ ಅಂದರು.ಆಗ ಆಲೋಚನಾ ಸಭೆಯಲ್ಲಿ ಕೂತಿದ್ದವರೆಲ್ಲರೂ ಅವನನ್ನು ದೃಷ್ಟಿಸಿ ನೋಡಲಾಗಿ ಅವನ ಮುಖವು ದೂತನ ಮುಖದಂತೆ ಇರುವದನ್ನು ಕಂಡರು.
- Zechariah 2:8 ಜೆಕರ್ಯ 2:8ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮನ್ನು ಸುಲುಕೊಂಡ ಜನಾಂಗ ಗಳ ಬಳಿಗೆ ಮಹಿಮೆಯ ತರುವಾಯ ನನ್ನನ್ನು ಆತನು ಕಳುಹಿಸಿದ್ದಾನೆ; ನಿಮ್ಮನ್ನು ಮುಟ್ಟುವವನು ಆತನ ಕಣ್ಣುಗುಡ್ಡೆಯನ್ನು ತಾಕುವವನಾಗಿದ್ದಾನೆ.
- Acts 4:10 ಅಪೊಸ್ತಲರ ಕೃತ್ಯಗಳು 4:10ನಿಮ್ಮೆಲ್ಲರಿಗೂ ಎಲ್ಲಾ ಇಸ್ರಾಯೇಲ್ಯರಿಗೂ ತಿಳಿಯಬೇಕಾದದ್ದೇ ನಂದರೆ, ಆತನಿಂದಲೇ ಅಂದರೆ ನೀವು ಶಿಲುಬೆಗೆ ಹಾಕಿಸಿದಂಥ ಮತ್ತು ದೇವರು ಸತ್ತವರೊಳಗಿಂದ ಎಬ್ಬಿಸಿದಂಥ ನಜರೇತಿನ ಯೇಸು ಕ್ರಿಸ್ತನ ಹೆಸರಿ ನಿಂದಲೇ ಈ ಮನುಷ್ಯನು ಸ್ವಸ್ಥನಾಗಿ ನಿಮ್ಮೆದುರಿನಲ್ಲಿ ನಿಂತಿರುತ್ತಾನೆ.
- Matthew 25:45 ಮತ್ತಾಯನು 25:45ಆಗ ಆತನು ಅವರಿಗೆ ಪ್ರತ್ಯುತ್ತರವಾಗಿ--ನಾನು ನಿಮಗೆ ನಿಜವಾಗಿ ಹೇಳುವದೇನಂದರೆ, ನೀವು ಇವ ರಲ್ಲಿ ಅತ್ಯಲ್ಪನಾದವನೊಬ್ಬನಿಗೆ ಮಾಡದೆ ಹೋದ ದರಿಂದ ನನಗೂ ಮಾಡಲಿಲ್ಲ ಎಂದು ಹೇಳುವನು.ಇವರು ನಿತ್ಯವಾದ ಶಿಕ್ಷೆಗೆ ಹೋಗುವರು; ಆದರೆ ನೀತಿವಂತರು ನಿತ್ಯಜೀವಕ್ಕೆ ಹೋಗುವರು.
- Exodus 16:7–8 ವಿಮೋಚನಕಾಂಡ 16:7–8ಬೆಳಿಗ್ಗೆ ಕರ್ತನ ಮಹಿಮೆ ಯನ್ನು ನೋಡುವಿರಿ; ಕರ್ತನಿಗೆ ವಿರೋಧವಾಗಿ ನೀವು ಗುಣುಗುಟ್ಟಿದ್ದನ್ನು ಆತನು ಕೇಳಿದ್ದಾನೆ; ನಮಗೆ ವಿರೋಧ ವಾಗಿ ನೀವು ಗುಣುಗುಟ್ಟುವ ಹಾಗೆ ನಾವು ಯಾರು ಅಂದರು. ಆಗ ಮೋಶೆಯು--ಸಾಯಂಕಾಲದಲ್ಲಿ ಕರ್ತನು ನಿಮಗೆ ಮಾಂಸಾಹಾರವನ್ನೂ ಹೊತ್ತಾರೆಯಲ್ಲಿ ಬೇಕಾದಷ್ಟು ರೊಟ್ಟಿಯನ್ನೂ ಕೊಡುವನು. ನೀವು ಗುಣುಗುಟ್ಟುವ ಮಾತುಗಳು ಕರ್ತನಿಗೆ ಕೇಳಿಸಿದವು. ಆ ಗುಣುಗುಟ್ಟುವಿಕೆಯು ಕರ್ತನಿಗೇ ಹೊರತು ನಮ ಗಲ್ಲ. ನಾವು ಎಷ್ಟು ಮಾತ್ರದವರು ಅಂದನು.
- Matthew 25:40 ಮತ್ತಾಯನು 25:40ಅದಕ್ಕೆ ಅರಸನು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ನೀವು ಈ ನನ್ನ ಸಹೋದರ ರಲ್ಲಿ ಅತ್ಯಲ್ಪನಾದವನೊಬ್ಬನಿಗೆ ಮಾಡಿದ್ದು ನನಗೂ ಮಾಡಿದಂತಾಯಿತು ಅಂದನು.