Zechariah · chapter 2 · verse 8
Zechariah 2:8 in Kannada
ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮನ್ನು ಸುಲುಕೊಂಡ ಜನಾಂಗ ಗಳ ಬಳಿಗೆ ಮಹಿಮೆಯ ತರುವಾಯ ನನ್ನನ್ನು ಆತನು ಕಳುಹಿಸಿದ್ದಾನೆ; ನಿಮ್ಮನ್ನು ಮುಟ್ಟುವವನು ಆತನ ಕಣ್ಣುಗುಡ್ಡೆಯನ್ನು ತಾಕುವವನಾಗಿದ್ದಾನೆ.
Sainyagala kartanu heege heluttaane--nimmannu sulukonda janaanga gala balige mahimeya taruvaaya nannannu aatanu kaluhisiddaane; nimmannu muttuvavanu aatana kannuguddeyannu taakuvavanaagiddaane.
Zechariah 2:8 in English
- King James Version (KJV)
- For thus saith the LORD of hosts; After the glory hath he sent me unto the nations which spoiled you: for he that toucheth you toucheth the apple of his eye.
- World English Bible (WEB)
- For the LORD of Armies says: ‘For honor he has sent me to the nations which plundered you; for he who touches you touches the apple of his eye.
- American Standard Version (ASV)
- For thus saith Jehovah of hosts: After glory hath he sent me unto the nations which plundered you; for he that toucheth you toucheth the apple of his eye.
- Bible in Basic English (BBE)
- For this is what the Lord of armies has said: In the way of glory he has sent me to the nations which have taken your goods: for anyone touching you is touching what is most dear to him.
- Darby Translation (DBY)
- For thus saith Jehovah of hosts: After the glory, hath he sent me unto the nations that made you a spoil; for he that toucheth you toucheth the apple of his eye.
- Webster's Bible (WBS)
- For thus saith the LORD of hosts; After the glory hath he sent me to the nations which wasted you: for he that toucheth you, toucheth the apple of his eye.
- Young's Literal Translation (YLT)
- For thus said Jehovah of Hosts: After honour He hath sent me unto the nations who are spoiling you, For he who is coming against you, Is coming against the daughter of His eye.
Read in context
- 6ಓಹೋ, ನೀವು ಹೊರಗೆ ಬಂದು ಉತ್ತರ ದೇಶ ದಿಂದ ಓಡಿಹೋಗಿರಿ; ಆಕಾಶದ ನಾಲ್ಕು ದಿಕ್ಕುಗಳಂತೆ ನಿಮ್ಮನ್ನು ಚದರಿಸಿದ್ದೇನೆಂದು ಕರ್ತನು ಅನ್ನುತ್ತಾನೆ.
- 7ಓ ಚೀಯೋನೇ, ಬಾಬೆಲಿನ ಮಗಳ ಬಳಿಯಲ್ಲಿ ವಾಸವಾಗಿರುವವಳೇ, ತಪ್ಪಿಸಿಕೋ.
- 8ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮನ್ನು ಸುಲುಕೊಂಡ ಜನಾಂಗ ಗಳ ಬಳಿಗೆ ಮಹಿಮೆಯ ತರುವಾಯ ನನ್ನನ್ನು ಆತನು ಕಳುಹಿಸಿದ್ದಾನೆ; ನಿಮ್ಮನ್ನು ಮುಟ್ಟುವವನು ಆತನ ಕಣ್ಣುಗುಡ್ಡೆಯನ್ನು ತಾಕುವವನಾಗಿದ್ದಾನೆ.
- 9ಇಗೋ, ನಾನು ನನ್ನ ಕೈಯನ್ನು ಅವರ ಮೇಲೆ ಜಾಡಿಸುತ್ತೇನೆ; ಆಗ ಅವರು ತಮ್ಮ ದಾಸರಿಗೆ ಕೊಳ್ಳೆಯಾಗುವರು; ಸೈನ್ಯಗಳ ಕರ್ತನು ನನ್ನನ್ನು ಕಳುಹಿಸಿದನೆಂದು ನೀವು ತಿಳಿಯುವಿರಿ.
- 10ಚೀಯೋನ್ ಕುಮಾರ್ತೆಯೇ, ಹಾಡಿ ಹರ್ಷಿಸು. ಇಗೋ, ನಾನು ಬಂದು ನಿನ್ನ ಮಧ್ಯದಲ್ಲಿ ವಾಸವಾಗಿರುವೆನೆಂದು ಕರ್ತನು ಅನ್ನುತ್ತಾನೆ.
Cross references
- Psalm 17:8 ಕೀರ್ತನೆಗಳು 17:8ಕಣ್ಣುಗುಡ್ಡಿನ ಹಾಗೆ ನನ್ನನ್ನು ಕಾಪಾಡು.
- Deuteronomy 32:10 ಧರ್ಮೋಪದೇಶಕಾಂಡ 32:10ಆತನು ಅರಣ್ಯದ ಭೂಮಿಯಲ್ಲಿಯೂ ಕಿರುಚುವ ಅಡವಿಯ ಕಾಡಿನಲ್ಲಿಯೂ ಅವನನ್ನು ಕಂಡುಕೊಂಡನು; ಆತನು ಅವನನ್ನು ನಡಿಸಿ, ಉಪದೇಶಿಸಿದನು. ತನ್ನ ಕಣ್ಣುಗುಡ್ಡೆಯಂತೆ ಕಾಪಾಡಿದನು.
- John 15:21–23 ಯೋಹಾನನು 15:21–23ಆದರೆ ಅವರು ನನ್ನನ್ನು ಕಳುಹಿಸಿದಾತನನ್ನು ತಿಳಿಯದಿರುವದರಿಂದ ನನ್ನ ಹೆಸ ರಿನ ನಿಮಿತ್ತ ಇವುಗಳನ್ನೆಲ್ಲಾ ನಿಮಗೆ ಮಾಡುವರು. ನಾನು ಬಂದು ಅವರಿಗೆ ಹೇಳದಿದ್ದರೆ ಅವರಲ್ಲಿ ಪಾಪವು ಇರುತ್ತಿದ್ದಿಲ್ಲ; ಆದರೆ ಈಗ ಅವರ ಪಾಪಕ್ಕೆ ನೆವವಿಲ್ಲ. ನನ್ನನ್ನು ದ್ವೇಷಮಾಡುವವನು ನನ್ನ ತಂದೆಯನ್ನು ಸಹ ದ್ವೇಷಮಾಡುತ್ತಾನೆ.
- John 14:26 ಯೋಹಾನನು 14:26ತಂದೆಯು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪರಿಶುದ್ಧಾತ್ಮನೆಂಬ ಆದರಿಕನೇ ಎಲ್ಲವುಗಳನ್ನು ನಿಮಗೆ ಬೋಧಿಸಿ ನಾನು ನಿಮಗೆ ಹೇಳಿದವುಗಳನ್ನೆಲ್ಲಾ ನಿಮ್ಮ ನೆನಪಿಗೆ ತರುವನು.
- 2 Thessalonians 1:6 2 ಥೆಸಲೊನೀಕದವರಿಗೆ 1:6ನಿಮ್ಮನ್ನು ಸಂಕಟಪಡಿಸುವವರಿಗೆ ಪ್ರತಿಯಾಗಿ ಸಂಕಟಪಡಿಸುವದೂ
- Psalm 105:13–15 ಕೀರ್ತನೆಗಳು 105:13–15ಅವರು ಜನಾಂಗದಿಂದ ಜನಾಂಗಕ್ಕೂ ಒಂದು ರಾಜ್ಯದಿಂದ ಬೇರೊಂದು ರಾಜ್ಯಕ್ಕೂ ಹೋದರು. ಮನುಷ್ಯರು ಅವರಿಗೆ ಕೇಡು ಮಾಡದಂತೆ ಆತನು ತಡೆದನು; ಹೌದು, ಅವರಿಗೋ ಸ್ಕರ ಆತನು ಅರಸುಗಳನ್ನು ಗದರಿಸಿದನು. ನನ್ನ ಅಭಿಷಿಕ್ತರನ್ನು ಮುಟ್ಟಬೇಡಿರಿ, ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿರಿ ಎಂದು ಹೇಳಿದನು.
- Matthew 25:40 ಮತ್ತಾಯನು 25:40ಅದಕ್ಕೆ ಅರಸನು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ನೀವು ಈ ನನ್ನ ಸಹೋದರ ರಲ್ಲಿ ಅತ್ಯಲ್ಪನಾದವನೊಬ್ಬನಿಗೆ ಮಾಡಿದ್ದು ನನಗೂ ಮಾಡಿದಂತಾಯಿತು ಅಂದನು.
- Joel 3:2–8 ಯೋವೇಲ 3:2–8ಎಲ್ಲಾ ಜನಾಂಗಗಳನ್ನು ಕೂಡಿಸಿ ಯೆಹೋಷಾಫಾಟನ ತಗ್ಗಿಗೆ ಅವರನ್ನು ಇಳಿಸಿ ನನ್ನ ಜನರೂ ನನ್ನ ಬಾಧ್ಯತೆಯೂ ಆಗಿರುವ ಇಸ್ರಾಯೇಲಿನ ವಿಷಯ ಅವರ ಸಂಗಡ ವ್ಯಾಜ್ಯವಾಡುವೆನು; ಅವರು ಅವರನ್ನು ಜನಾಂಗಗಳಲ್ಲಿ ಚದರಿಸಿ ನನ್ನ ದೇಶವನ್ನು ಪಾಲಿಟ್ಟು ನನ್ನ ಜನರಿ ಗೋಸ್ಕರ ಚೀಟು ಹಾಕಿ ಹುಡುಗನನ್ನು ಸೂಳೆಗಾಗಿ ಕೊಟ್ಟು, ಹುಡುಗಿಯನ್ನು ದ್ರಾಕ್ಷಾರಸಕ್ಕಾಗಿ ಮಾರಿ ಅವರು ಕುಡಿಯುವ ಹಾಗೆ ಮಾರಿದ್ದಾರಲ್ಲಾ? ಹೌದು, ಓ ತೂರೇ, ಚೀದೋನೇ, ಪಾಲೆಸ್ತಿನದ ಎಲ್ಲಾ ಪ್ರಾಂತ್ಯಗಳೇ, ನನ್ನ ಕೂಡ ನಿಮಗೇನು? ನನಗೆ ಮುಯ್ಯಿಗೆ ಮುಯ್ಯಿ ಸಲ್ಲಿಸುವಿರೋ? ನೀವು ನನಗೆ ಸಲ್ಲಿಸಿದರೆ ಜಾಗ್ರತೆಯಾಗಿಯೂ ತ್ವರೆಯಾಗಿಯೂ ನಿಮ್ಮ ತಲೆಯ ಮೇಲೆ ಮುಯ್ಯಿಗೆ ಮುಯ್ಯಿ ತರಿಸುವೆನು. ನೀವು ನನ್ನ ಬೆಳ್ಳಿಯನ್ನೂ ನನ್ನ ಬಂಗಾರವನ್ನೂ ತೆಗೆದುಕೊಂಡು ನನ್ನ ಒಳ್ಳೇ ರಮ್ಯವಾದವುಗಳನ್ನು ನಿಮ್ಮ ದೇವಸ್ಥಾನಗಳಿಗೆ ತಕ್ಕೊಂಡು ಹೋಗಿದ್ದೀರಿ. ಯೆಹೂದದ ಮಕ್ಕಳನ್ನೂ ಯೆರೂಸಲೇಮಿನ ಮಕ್ಕ ಳನ್ನೂ ತಮ್ಮ ಪ್ರಾಂತ್ಯಗಳಿಂದ ದೂರ ಮಾಡುವ ಹಾಗೆ ಗ್ರೀಕರಿಗೆ ಮಾರಿದ್ದೀರಿ. ಇಗೋ, ಎಲ್ಲಿ ಅವ ರನ್ನು ಮಾರಿದ್ದಿರೋ ಆ ಸ್ಥಳದಿಂದ ನಾನು ಅವರನ್ನು ಎಬ್ಬಿಸಿ ನಿಮ್ಮ ತಲೆಯ ಮೇಲೆ ಮುಯ್ಯಿಗೆ ಮುಯ್ಯಿ ತರಿಸುವೆನು. ನಿಮ್ಮ ಕುಮಾರರನ್ನೂ ನಿಮ್ಮ ಕುಮಾರ್ತೆ ಯರನ್ನೂ ಯೆಹೂದನ ಮಕ್ಕಳ ಕೈಯಲ್ಲಿ ಮಾರುವೆನು; ಇವರು ಅವರನ್ನು ದೂರ ಜನವಾದ ಶೆಬದನರಿಗೆ ಮಾರುವರು; ಕರ್ತನು ಅದನ್ನು ಹೇಳಿದ್ದಾನೆ.
- Jeremiah 50:17–18 ಯೆರೆಮೀಯ 50:17–18ಇಸ್ರಾಯೇಲನು ಚದರಿಹೋದ ಕುರಿಯಾಗಿ ದ್ದನು; ಸಿಂಹಗಳು ಅವನನ್ನು ಓಡಿಸಿಬಿಟ್ಟವು; ಮೊದಲು ಅಶ್ಶೂರಿನ ಅರಸನು ಅವನನ್ನು ನುಂಗಿಬಿಟ್ಟನು. ಕಡೆಯಲ್ಲಿ ಬಾಬೆಲಿನ ಅರಸನಾದ ಈ ನೆಬೂಕದ್ನೆಚ್ಚರನು ಅವನ ಎಲುಬುಗಳನ್ನು ಮುರಿದಿದ್ದಾನೆ. ಆದದರಿಂದ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಅಶ್ಶೂರಿನ ಅರಸನನ್ನು ಶಿಕ್ಷಿಸಿದ ಹಾಗೆ, ಬಾಬೆಲಿನ ಅರಸನನ್ನೂ ಅವನ ದೇಶವನ್ನೂ ಶಿಕ್ಷಿಸುತ್ತೇನೆ.
- 1 John 4:14 1 ಯೋಹಾನನು 4:14ತಂದೆಯು ಮಗನನ್ನು ಲೋಕರಕ್ಷಕನನ್ನಾಗಿ ಕಳುಹಿಸಿಕೊಟ್ಟಿರುವದನ್ನು ನಾವು ನೋಡಿದ್ದೇವೆ ಮತ್ತು ಸಾಕ್ಷಿ ಹೇಳುತ್ತೇವೆ.
- Obadiah 1:10–16 ಓಬದ್ಯ 1:10–16ನಿನ್ನ ತಮ್ಮನಾದ ಯಾಕೋಬನಿಗೆ ವಿರೋಧವಾದ ನಿನ್ನ ಬಲಾತ್ಕಾರದ ನಿಮಿತ್ತ ನಾಚಿಕೆಯು ನಿನ್ನನ್ನು ಮುಚ್ಚು ವದು; ನೀನು ಎಂದೆಂದಿಗೂ ಕಡಿದುಹಾಕಲ್ಪಡುವಿ. ನೀನು ಆ ಕಡೆಯಲ್ಲಿ ನಿಂತ ದಿನದಲ್ಲಿ ಪರರು ಅವನ ಸೆರೆಯಾಗಿ ತಕ್ಕೊಂಡುಹೋದ ದಿನದಲ್ಲಿ ಅನ್ಯರು ಅವನ ಬಾಗಲುಗಳಲ್ಲಿ ಪ್ರವೇಶಿಸಿ ಯೆರೂಸಲೇಮಿನ ಮೇಲೆ ಚೀಟುಗಳನ್ನು ಹಾಕಿದಾಗ ನೀನು ಸಹ ಅವರಲ್ಲಿ ಒಬ್ಬನ ಹಾಗಿದ್ದಿ. ಆದರೆ ನಿನ್ನ ಸಹೋದರನ ದಿನದಲ್ಲಿ ಅವನು ಅನ್ಯನಾದ ದಿನದಲ್ಲಿ ನೀನು ನೋಡಬಾರ ದಾಗಿತ್ತು; ಯೆಹೂದನ ಮಕ್ಕಳ ಮೇಲೆ ಅವರ ನಾಶನದ ದಿವಸದಲ್ಲಿ ಸಂತೋಷಿಸಬಾರದಾಗಿತ್ತು; ಕಷ್ಟದ ದಿನದಲ್ಲಿ ಅಹಂಕಾರವಾಗಿ ಮಾತನಾಡಬಾರದಾಗಿತ್ತು; ನನ್ನ ಜನರ ಬಾಗಲೊಳಗೆ ಅವರ ಆಪತ್ತಿನ ದಿನದಲ್ಲಿ ಪ್ರವೇಶಿಸಬಾರದಾಗಿತ್ತು; ಹೌದು, ನೀನು ಅವರ ಆಪತ್ತಿನ ದಿನದಲ್ಲಿ ಅವರ ಕೇಡನ್ನು ನೋಡಬಾರ ದಾಗಿತ್ತು; ಅವರ ಆಪತ್ತಿನ ದಿನದಲ್ಲಿ ಅವರ ಆಸ್ತಿಯ ಮೇಲೆ ಕೈಹಾಕಬಾರದಾಗಿತ್ತು; ಅವನಲ್ಲಿ ಓಡಿ ಹೋದವರನ್ನು ಕಡಿದುಬಿಡುವದಕ್ಕೆ ನೀನು ಕೂಡುವ ದಾರಿಯಲ್ಲಿ ನಿಲ್ಲಬಾರದಾಗಿತ್ತು; ಕಷ್ಟದ ದಿನದಲ್ಲಿ ಅವನಲ್ಲಿ ಉಳಿದುಕೊಂಡವರನ್ನು ಒಪ್ಪಿಸಬಾರದಾಗಿತ್ತು. ಕರ್ತನ ದಿನವು ಎಲ್ಲಾ ಜನಾಂಗಗಳ ಮೇಲೆ ಸವಿಾಪವಾಗಿದೆ; ನೀನು ಮಾಡಿದ ಹಾಗೆಯೇ ನಿನಗೆ ಮಾಡಲ್ಪಡುವದು; ನಿನ್ನ ಪ್ರತಿಫಲವು ನಿನ್ನ ತಲೆಯ ಮೇಲೆ ತಿರುಗುವದು. ನೀವು ನನ್ನ ಪರಿಶುದ್ಧ ಪರ್ವತದ ಮೇಲೆ ಕುಡಿದ ಹಾಗೆಯೇ ಜನಾಂಗಗಳೆಲ್ಲಾ ನಿತ್ಯವಾಗಿ ಕುಡಿಯುವವು; ಹೌದು, ಕುಡಿದು ನುಂಗಿಬಿಡುವವು; ಇಲ್ಲದೆ ಇದ್ದವರ ಹಾಗೆಯೇ ಇರುವವು.
- Zephaniah 2:8 ಚೆಫನ್ಯ 2:8ನನ್ನ ಜನರನ್ನು ನಿಂದಿಸಿ, ಅವರ ಮೇರೆಗೆ ಮೋವಾ ಬ್ಯರೂ ಅಮ್ಮೋನ್ಯರೂ ವಿರೋಧವಾಗಿ ತಮ್ಮನ್ನು ಹೆಚ್ಚಿಸಿ ಕೊಂಡದ್ದನ್ನು ನಾನು ಕೇಳಿದ್ದೇನೆ.