Acts · chapter 24 · verse 9
Acts 24:9 in Kannada
ಅದೇ ಪ್ರಕಾರ ಇವೆಲ್ಲವುಗಳು ನಿಜವೆಂದು ಯೆಹೂ ದ್ಯರು ಸಹ ಸಮ್ಮತಿಸಿದರು ಅಂದನು.
Ade prakaara ivellavugalu nijavendu yehoo dyaru saha sammatisidaru andanu.
Acts 24:9 in English
- King James Version (KJV)
- And the Jews also assented, saying that these things were so.
- World English Bible (WEB)
- The Jews also joined in the attack, affirming that these things were so.
- American Standard Version (ASV)
- And the Jews also joined in the charge, affirming that these things were so.
- Bible in Basic English (BBE)
- And the Jews were in agreement with his statement, saying that these things were so.
- Darby Translation (DBY)
- And the Jews also joined in pressing the matter against [Paul], saying that these things were so.
- Webster's Bible (WBS)
- And the Jews also assented, saying, that these things were so.
- Young's Literal Translation (YLT)
- and the Jews also agreed, professing these things to be so.
Read in context
- 7ಆದರೆ ಮುಖ್ಯನಾಯಕನಾದ ಲೂಸ್ಯನು ನಮ್ಮ ಬಳಿಗೆ ಬಂದು ಮಹಾ ಬಲಾತ್ಕಾರದಿಂದ ಅವನನ್ನು ನಮ್ಮ ಕೈಗಳಿಂದ ಬಿಡಿಸಿ,
- 8ನಾವು ಯಾವ ವಿಷಯಗಳಲ್ಲಿ ಅವನ ಮೇಲೆ ತಪ್ಪು ಹೊರಿಸುತ್ತೇವೋ ಅವೆಲ್ಲವುಗಳ ವಿಷಯವಾಗಿ ನೀನೇ ಸ್ವತಃ ಅವನನ್ನು ವಿಚಾರಿಸಿ ತಿಳುಕೊಳ್ಳುವಂತೆ ಅವನ ಮೇಲೆ ತಪ್ಪು ಹೊರಿಸು ವವರು ನಿನ್ನ ಬಳಿಗೆ ಬರಬೇಕೆಂದು ಅಪ್ಪಣೆ ಕೊಟ್ಟನು.
- 9ಅದೇ ಪ್ರಕಾರ ಇವೆಲ್ಲವುಗಳು ನಿಜವೆಂದು ಯೆಹೂ ದ್ಯರು ಸಹ ಸಮ್ಮತಿಸಿದರು ಅಂದನು.
- 10ಆಗ ಅಧಿಪತಿಯು ಪೌಲನು ಮಾತನಾಡುವದಕ್ಕೆ ಕೈಸನ್ನೆ ಮಾಡಿದಾಗ ಅವನು--ಅನೇಕ ವರುಷಗಳಿಂದ ಈ ಜನಾಂಗಕ್ಕೆ ನೀನು ನ್ಯಾಯಾಧಿಪತಿಯಾಗಿ ರುವದು ನನಗೆ ತಿಳಿದಿರುವದರಿಂದ ನಾನು ಹೆಚ್ಚು ಧೈರ್ಯದಿಂದ ಪ್ರತಿವಾದ ಮಾಡುತ್ತೇನೆ;
- 11ನಾನು ಆರಾಧನೆಗಾಗಿ ಯೆರೂಸಲೇಮಿಗೆ ಹೋಗಿ ಹನ್ನೆರಡು ದಿವಸಗಳಾದವೆಂದು ನೀನು ತಿಳಿದುಕೊಳ್ಳಬಹುದು.
Cross references
- 1 Thessalonians 2:16 1 ಥೆಸಲೊನೀಕದವರಿಗೆ 2:16ಅನ್ಯ ಜನರಿಗೆ ರಕ್ಷಣೆಯಾಗುವಂತೆ ಸುವಾರ್ತೆಯನ್ನು ಹೇಳುವ ನಮಗೆ ಅವರು ಅಡ್ಡಿ ಮಾಡುತ್ತಾರೆ; ಹೀಗೆ ತಮ್ಮ ಪಾಪಗಳನ್ನು ಯಾವಾಗಲೂ ಪರಿಪೂರ್ಣ ಮಾಡುವದಕ್ಕೆ ಹೋಗುತ್ತಾರೆ; ಆದರೆ ದೇವರ ಕೋಪವು ಅವರ ಮೇಲೆ ಸಂಪೂರ್ಣವಾಗುತ್ತಾ ಬಂತು.
- Micah 7:2–3 ಮೀಕ 7:2–3ಒಳ್ಳೆಯವನು ಭೂಮಿಯೊಳ ಗಿಂದ ನಾಶವಾಗಿದ್ದಾನೆ; ಮನುಷ್ಯರಲ್ಲಿ ಯಥಾರ್ಥನು ಇಲ್ಲ; ಅವರೆಲ್ಲರು ರಕ್ತಕ್ಕೆ ಹೊಂಚಿ ನೋಡುತ್ತಾರೆ; ತಮ್ಮ ತಮ್ಮ ಸಹೋದರರನ್ನು ಬಲೆಹಾಕಿ ಬೇಟೆ ಆಡುತ್ತಾರೆ. ಕೆಟ್ಟದ್ದನ್ನು ಎರಡು ಕೈಗಳಿಂದ ಚೆನ್ನಾಗಿ ಮಾಡುವ ಹಾಗೆ ಪ್ರಧಾನನೂ ನ್ಯಾಯಾಧಿಪತಿಯೂ ಬಹುಮಾನವನ್ನು ಕೇಳುತ್ತಾರೆ; ದೊಡ್ಡ ಮನುಷ್ಯನು ತನ್ನ ಕೇಡಿನ ಆಸೆಯನ್ನು ತಾನೇ ಹೇಳುತ್ತಾನೆ; ಅವರು ಒಂದೇ ಕಟ್ಟಾಗಿದ್ದಾರೆ.
- Jeremiah 9:3–6 ಯೆರೆಮೀಯ 9:3–6ಅವರು ತಮ್ಮ ನಾಲಿಗೆಗಳನ್ನು ಬಿಲ್ಲಿನಂತೆ ಸುಳ್ಳುಗಳಿಗಾಗಿ ಬೊಗ್ಗಿಸುತ್ತಾರೆ. ಆದರೆ ಭೂಮಿಯಲ್ಲಿ ಸತ್ಯಕ್ಕಾಗಿ ಬಲಿಷ್ಠರಾಗುವದಿಲ್ಲ; ಅವರು ಕೇಡಿನಿಂದ ಕೇಡಿಗೆ ಹೋಗುತ್ತಾ ನನ್ನನ್ನು ಅರಿಯದೆ ಇದ್ದಾರೆಂದು ಕರ್ತನು ಅನ್ನುತ್ತಾನೆ. ನಿಮ್ಮ ನಿಮ್ಮ ನೆರೆಯವರಿಗೆ ಎಚ್ಚರಿಕೆಯಾಗಿರಿ; ಯಾವ ಸಹೋದರ ನಲ್ಲಾದರೂ ನಂಬಿಕೆ ಇಡಬೇಡಿರಿ; ಸಹೋದರರೆಲ್ಲರೂ ಸಂಪೂರ್ಣವಾಗಿ ಮೋಸಮಾಡುವರು, ನೆರೆಯವ ರೆಲ್ಲರು ಚಾಡಿಹೇಳುತ್ತಾ ತಿರುಗಾಡುವರು. ತಮ್ಮ ತಮ್ಮ ನೆರೆಯವರಿಗೆ ವಂಚನೆಮಾಡಿ ಸತ್ಯವನ್ನು ಮಾತಾ ಡರು; ಸುಳ್ಳುಗಳನ್ನು ಹೇಳುವದಕ್ಕೆ ಅವರು ತಮ್ಮ ನಾಲಿಗೆಗೆ ಬೋಧಿಸಿದ್ದಾರೆ. ಅಕ್ರಮ ಮಾಡುವದಕ್ಕೆ ಪ್ರಯಾಸಪಡುತ್ತಾರೆ. 6 ನಿನ್ನ ನಿವಾಸವು ಮೋಸದ ಮಧ್ಯದಲ್ಲಿ ಅದೆ; ಮೋಸದಿಂದಲೇ ನನ್ನನ್ನು ನಿರಾಕರಿಸು ತ್ತಾರೆಂದು ಕರ್ತನು ಅನ್ನುತ್ತಾನೆ.
- Matthew 26:59–60 ಮತ್ತಾಯನು 26:59–60ಆಗ ಪ್ರಧಾನಯಾಜಕರೂ ಹಿರಿಯರೂ ಆಲೋ ಚನಾ ಸಭೆಯವರೆಲ್ಲರೂ ಯೇಸುವಿಗೆ ವಿರೋಧವಾಗಿ ಆತನನ್ನು ಕೊಲ್ಲಿಸುವಂತೆ ಸುಳ್ಳು ಸಾಕ್ಷಿಗಾಗಿ ಹುಡುಕಿ ದರು. ಆದರೆ ಯಾರೂ ಸಿಕ್ಕಲಿಲ್ಲ; ಹೌದು, ಬಹುಮಂದಿ ಸುಳ್ಳು ಸಾಕ್ಷಿಗಳು ಬಂದರೂ ಅವರಿಗೆ ಏನೂ ದೊರೆಯಲಿಲ್ಲ; ಕಡೆಯಲ್ಲಿ ಇಬ್ಬರು ಸುಳ್ಳು ಸಾಕ್ಷಿಗಳು ಬಂದು--
- Psalm 62:3–4 ಕೀರ್ತನೆಗಳು 62:3–4ಎಷ್ಟರವರೆಗೆ ಒಬ್ಬ ಮನುಷ್ಯನಿಗೆ ವಿರೋಧವಾಗಿ ಕೇಡನ್ನು ಕಲ್ಪಿಸುತ್ತೀರಿ? ನೀವೆಲ್ಲರೂ ಕೊಲ್ಲಲ್ಪಡುವಿರಿ; ನೀವು ಕುಸಿದುಬೀಳುವ ಗೋಡೆಯಂತೆಯೂ ಅಲ್ಲಾ ಡುವ ಬೇಲಿಯಂತೆಯೂ ಇರುವಿರಿ. ಅವರು ಅವ ನನ್ನು ಉನ್ನತಸ್ಥಾನದಿಂದ ದೊಬ್ಬುವದನ್ನೇ ಆಲೋಚಿ ಸುತ್ತಾರೆ; ಅವರು ಸುಳ್ಳುಗಳಲ್ಲಿ ಇಷ್ಟ ಪಡುತ್ತಾರೆ. ಅವರು ತಮ್ಮ ಬಾಯಿಂದ ಆಶೀರ್ವದಿಸಿ ಅಂತರಂಗ ದಲ್ಲಿ ಶಪಿಸುತ್ತಾರೆ. ಸೆಲಾ.
- Psalm 64:2–8 ಕೀರ್ತನೆಗಳು 64:2–8ದುರ್ಮಾರ್ಗಿಗಳ ಗುಪ್ತವಾದ ಆಲೋಚನೆಗಳಿಗೂ ದುಷ್ಟರ ಹೊಂಚಿಗೂ ನನ್ನನ್ನು ಮರೆಮಾಡು. ಅವರು ತಮ್ಮ ನಾಲಿಗೆಯನ್ನು ಕತ್ತಿಯ ಹಾಗೆ ಮಸೆಯುತ್ತಾರೆ. ಕಹಿ ಮಾತುಗಳೆಂಬ ಬಾಣಗಳನ್ನು ಹೂಡುತ್ತಾರೆ. ನಿರ್ದೋಷಿಯ ಕಡೆಗೆ ಗುಪ್ತವಾಗಿ ಫಕ್ಕನೆ ಎಸೆಯುವದಕ್ಕೆ ಅವರು ಭಯ ಪಡುವದಿಲ್ಲ. ಕೆಟ್ಟಕಾರ್ಯದಲ್ಲಿ ಅವರು ತಮ್ಮನ್ನು ತಾವೇ ಪ್ರೋತ್ಸಾಹ ಮಾಡಿಕೊಳ್ಳುತ್ತಾರೆ; ಬಲೆಗಳನ್ನು ಒಡ್ಡು ವದಕ್ಕೆ ಮಾತನಾಡುತ್ತಾ--ನಮ್ಮನ್ನು ನೋಡುವವ ರಾರೆಂದು ಹೇಳುತ್ತಾರೆ. ಅವರು ದ್ರೋಹಗಳನ್ನು ಹುಡುಕುತ್ತಾರೆ; ಎಚ್ಚರಿಕೆಯಿಂದ ಹುಡುಕಿದ್ದನ್ನು ಅವರು ಪೂರೈಸುತ್ತಾರೆ; ಅವರೆಲ್ಲರ ಅಂತರಗವೂ ಹೃದಯವೂ ಅಶೋದ್ಯವಾಗಿವೆ. ದೇವರು ಅವರ ಕಡೆಗೆ ಬಾಣವನ್ನು ಎಸೆಯು ವಾಗ ಫಕ್ಕನೆ ಅವರಿಗೆ ಗಾಯಗಳಾಗುವವು. ಹೀಗೆ ತಮ್ಮ ನಾಲಿಗೆಯು ತಮ್ಮ ಮೇಲೆ ಬೀಳುವಂತೆ ಮಾಡಿ ಕೊಳ್ಳುತ್ತಾರೆ. ಅವರನ್ನು ನೋಡುವವರೆಲ್ಲರೂ ಓಡಿ ಹೋಗುವರು.
- Isaiah 59:4–7 ಯೆಶಾಯ 59:4–7ನ್ಯಾಯಕ್ಕೋಸ್ಕರ ಕರೆಯುವವನು ಯಾವನೂ ಇಲ್ಲ; ಇಲ್ಲವೆ ಸತ್ಯಕ್ಕೋಸ್ಕರ ಬೇಡು ವವನು ಒಬ್ಬನೂ ಇಲ್ಲ. ವ್ಯರ್ಥತ್ವದಲ್ಲಿ ವಿಶ್ವಾಸ ಇಡು ತ್ತಾರೆ. ಸುಳ್ಳನ್ನು ಮಾತಾಡುತ್ತಾರೆ; ಕೇಡನ್ನು ಗರ್ಭಧರಿಸಿ ಕೊಳ್ಳುತ್ತಾರೆ ಅಕ್ರಮವನ್ನು ಹೆರುತ್ತಾರೆ. ಹಾವಿನಂತೆ ಮೊಟ್ಟೆಗಳನ್ನು ಮರಿ ಮಾಡುತ್ತಾರೆ, ಜೇಡಹುಳದ ನೂಲನ್ನು ನೇಯುತ್ತಾರೆ; ಅದರ ಮೊಟ್ಟೆಗಳನ್ನು ತಿನ್ನುವವನು ಸಾಯುವನು; ಒಡೆಯುವಂಥಾದ್ದರಿಂದ ವಿಷದ ಮರಿಯು ಹೊರಡುವದು. ಅವರ ನೂಲು ವಸ್ತ್ರಕ್ಕಾಗದು; ತಮ್ಮ ಕೆಲಸಗಳಿಂದ ತಮ್ಮನ್ನು ಹೊದ್ದು ಕೊಳ್ಳರು; ಅವರ ಕೆಲಸಗಳು ಅಕ್ರಮದ ಕೆಲಸಗಳೇ; ಅವರ ಕೈಗಳಲ್ಲಿ ಹಿಂಸೆಯ ಕ್ರಿಯೆಗಳು ಅವೆ. ಅವರ ಕಾಲುಗಳು ಕೇಡಿಗೆ ಓಡುತ್ತವೆ; ಅಪರಾಧವಿಲ್ಲದ ರಕ್ತ ವನ್ನು ಚೆಲ್ಲುವದಕ್ಕೆ ತ್ವರೆಪಡುತ್ತವೆ. ಅವರ ಆಲೋ ಚನೆ ಗಳು ದುಷ್ಟತನದ ಆಲೋಚನೆಗಳೇ; ನಷ್ಟವೂ ನಾಶವೂ ಅವರ ಮಾರ್ಗಗಳಲ್ಲಿ ಅವೆ.
- John 8:44 ಯೋಹಾನನು 8:44ನೀವು ನಿಮ್ಮ ತಂದೆಯಾದ ಸೈತಾನನಿಗೆ ಸಂಬಂಧಪಟ್ಟವರಾಗಿದ್ದೀರಿ. ನಿಮ್ಮ ತಂದೆಯ ದುರಾಶೆಗಳನ್ನೇ ನೀವು ಮಾಡುವದಕ್ಕೆ ಇಚ್ಛೈಸುತ್ತೀರಿ; ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯ ದಲ್ಲಿ ನಿಲ್ಲಲಿಲ್ಲ. ಯಾಕಂದರೆ ಅವನಲ್ಲಿ ಸತ್ಯವೇ ಇಲ್ಲ; ಅವನು ಸುಳ್ಳಾಡುವಾಗ ತನ್ನ ಸ್ವಂತವಾದವುಗಳಿಂದ ಮಾ
- Micah 6:12–13 ಮೀಕ 6:12–13ಅದರ ಐಶ್ವರ್ಯವಂತರು ಬಲಾತ್ಕಾರದಿಂದ ತುಂಬಿ ದ್ದಾರೆ, ಅದರ ನಿವಾಸಿಗಳು ಸುಳ್ಳುಗಳನ್ನು ಹೇಳುವವ ರಾಗಿದ್ದಾರೆ; ಅವರ ನಾಲಿಗೆ ಅವರ ಬಾಯಿಯಲ್ಲಿ ಕಪಟವುಳ್ಳದ್ದೇ. ಆದದರಿಂದ ನಾನು ಸಹ ನಿನ್ನನ್ನು ಹೊಡೆದು ನಿನಗೆ ರೋಗವನ್ನು ಬರಮಾಡುವೆನು; ನಿನ್ನ ಪಾಪಗಳ ನಿಮಿತ್ತ ನಿನ್ನನ್ನು ಹಾಳುಮಾಡುವೆನು.
- Ezekiel 22:27–29 ಯೆಹೆಜ್ಕೇಲನು 22:27–29ಅಲ್ಲಿನ ಪ್ರಧಾನರು ಸುಲಿಗೆಗಾಗಿ ರಕ್ತ ಸುರಿಸಿ ಪ್ರಾಣ ಗಳನ್ನು ನುಂಗುವ ಹಾಗೆ ಬೇಟೆಯ ತೋಳಗಳಂತಿ ದ್ದಾರೆ. ಅವರ ಪ್ರವಾದಿಗಳು ಅವರಿಗೆ ಸುಣ್ಣ ಹಚ್ಚುತ್ತಾರೆ, ಮೋಸವನ್ನು ದರ್ಶಿಸಿ ಸುಳ್ಳು ಶಕುನ ಹೇಳುತ್ತಾರೆ; ಕರ್ತನು ಮಾತನಾಡದಿರುವದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಹೇಳು ತ್ತಾರೆ. ದೇಶದ ಜನರು ಬಲಾತ್ಕಾರ ಮಾಡಿದ್ದಾರೆ, ಕೊಳ್ಳೆಯನ್ನು ಹೊಡೆದಿದ್ದಾರೆ. ಬಡವನನ್ನೂ ದರಿದ್ರ ರನ್ನೂ ಪೀಡಿಸಿದ್ದಾರೆ; ಹೌದು, ಅವರು ನ್ಯಾಯವಿಲ್ಲದೆ ಒಬ್ಬ ಅಪರಿಚಿತನನ್ನು ಬಲಾತ್ಕಾರಪಡಿಸಿದ್ದಾರೆ.
- Psalm 4:2 ಕೀರ್ತನೆಗಳು 4:2ಓ ಮನುಷ್ಯರ ಪುತ್ರರೇ, ನನ್ನ ಘನವನ್ನು ಅವ ಮಾನಕ್ಕೆ ತಿರುಗಿಸುವದು ಎಷ್ಟರ ವರೆಗೆ? ನೀವು ವ್ಯರ್ಥವಾದದ್ದನ್ನು ಪ್ರೀತಿಮಾಡಿ ಸುಳ್ಳನ್ನು ಹುಡುಕು ವದು ಎಷ್ಟರ ವರೆಗೆ? ಸೆಲಾ.
- Acts 6:11–13 ಅಪೊಸ್ತಲರ ಕೃತ್ಯಗಳು 6:11–13ಅವರು ಸುಳ್ಳು ಸಾಕ್ಷಿ ಹೇಳುವ ಮನುಷ್ಯರನ್ನು ಸೇರಿಸಿಕೊಂಡು--ಇವನು ಮೋಶೆಗೆ ಮತ್ತು ದೇವರಿಗೆ ವಿರೋಧವಾಗಿ ದೂಷಣೆಯ ಮಾತುಗಳನ್ನು ಹೇಳುವದನ್ನು ನಾವು ಕೇಳಿದ್ದೇವೆ ಎಂದು ಅವರು ಹೇಳಿದರು. ಇನ್ನೂ ಅವರು ಜನರನ್ನೂ ಹಿರಿಯರನ್ನೂ ಶಾಸ್ತ್ರಿ ಗಳನ್ನೂ ರೇಗಿಸಿದ್ದಲ್ಲದೆ ಬಂದು ಅವನನ್ನು ಹಿಡಿದು ಆಲೋಚನಾಸಭೆಗೆ ತೆಗೆದುಕೊಂಡು ಹೋಗಿ ಸುಳ್ಳು ಸಾಕ್ಷಿಗಳನ್ನು ನಿಲ್ಲಿಸ ಲಾಗಿ ಅವರು--ಈ ಮನುಷ್ಯನು ಈ ಪರಿಶುದ್ಧ ಸ್ಥಳಕ್ಕೂ ನ್ಯಾಯಪ್ರಮಾಣಕ್ಕೂ ವಿರುದ್ಧವಾಗಿ ದೂಷಣೆಯ ಮಾತುಗಳನ್ನಾಡುವದನ್ನು ನಿಲ್ಲಿಸುವದೇ ಇಲ್ಲ.