Genesis · chapter 19 · verse 24
Genesis 19:24 in Kannada
ಆಗ ಕರ್ತನು ಸೊದೋಮ್ ಮತ್ತು ಗೊಮೋರದ ಮೇಲೆ ಗಂಧಕವನ್ನೂ ಬೆಂಕಿಯನ್ನೂ ಆಕಾಶದಿಂದ ಸುರಿಸಿದನು.
Aaga kartanu sodom mattu gomorada mele gandhakavannoo benkiyannoo aakaashadinda surisidanu.
Genesis 19:24 in English
- King James Version (KJV)
- Then the LORD rained upon Sodom and upon Gomorrah brimstone and fire from the LORD out of heaven;
- World English Bible (WEB)
- Then the LORD rained on Sodom and on Gomorrah sulfur and fire from the LORD out of the sky.
- American Standard Version (ASV)
- Then Jehovah rained upon Sodom and upon Gomorrah brimstone and fire from Jehovah out of heaven;
- Bible in Basic English (BBE)
- Then the Lord sent fire and flaming smoke raining down from heaven on Sodom and Gomorrah.
- Darby Translation (DBY)
- And Jehovah rained on Sodom and Gomorrah brimstone and fire from Jehovah out of heaven,
- Webster's Bible (WBS)
- Then the LORD rained upon Sodom and upon Gomorrah brimstone and fire from the LORD out of heaven;
- Young's Literal Translation (YLT)
- and Jehovah hath rained upon Sodom and upon Gomorrah brimstone and fire from Jehovah, from the heavens;
Read in context
- 22ತ್ವರೆಯಾಗಿ ತಪ್ಪಿಸಿಕೊಂಡು ಅಲ್ಲಿಗೆ ಹೋಗು; ಯಾಕಂದರೆ ನೀನು ಅಲ್ಲಿಗೆ ಹೋಗುವ ವರೆಗೆ ನಾನೇನೂ ಮಾಡಲಾರೆನು ಅಂದನು. ಆದದರಿಂದ ಆ ಪಟ್ಟಣಕ್ಕೆ ಚೋಗರ್ ಎಂದು ಹೆಸರಾಯಿತು.
- 23ಲೋಟನು ಚೋಗರಿಗೆ ಬಂದಾಗ ಭೂಮಿಯ ಮೇಲೆ ಸೂರ್ಯನು ಉದಯಿ ಸಿದನು.
- 24ಆಗ ಕರ್ತನು ಸೊದೋಮ್ ಮತ್ತು ಗೊಮೋರದ ಮೇಲೆ ಗಂಧಕವನ್ನೂ ಬೆಂಕಿಯನ್ನೂ ಆಕಾಶದಿಂದ ಸುರಿಸಿದನು.
- 25ಹೀಗೆ ಆತನು ಆ ಪಟ್ಟಣಗಳನ್ನೂ ಎಲ್ಲಾ ಮೈದಾನವನ್ನೂ ಪಟ್ಟಣಗಳ ಎಲ್ಲಾ ನಿವಾಸಿಗಳನ್ನೂ ಭೂಮಿಯ ಮೇಲೆ ಬೆಳೆದ ಬೆಳೆಯನ್ನೂ ಹಾಳುಮಾಡಿದನು.
- 26ಆದರೆ ಲೋಟನ ಹಿಂದೆ ಇದ್ದ ಅವನ ಹೆಂಡತಿಯು ಹಿಂದಕ್ಕೆ ನೋಡಿ ಉಪ್ಪಿನ ಸ್ತಂಭವಾದಳು.
Cross references
- Deuteronomy 29:23 ಧರ್ಮೋಪದೇಶಕಾಂಡ 29:23ಕರ್ತನು ತನ್ನ ಕೋಪದಲ್ಲಿಯೂ ರೌದ್ರದಲ್ಲಿಯೂ ಕೆಡವಿ ಹಾಕಿದ ಸೊದೋಮ್ ಗೊಮೋರ ಅದ್ಮಾಚೆಬೋ ಯಾಮ್ ಇವುಗಳ ಹಾಗೆ ಆ ದೇಶವೆಲ್ಲಾ ಗಂಧಕವೂ ಉಪ್ಪೂ ಉರಿಯುತ್ತಾ ಬಿತ್ತಲ್ಪಡದೆ ಮೊಳೆಯದೆ ಯಾವ ಹುಲ್ಲನ್ನಾದರೂ ಬೆಳೆಸದೆ ಇರುವದನ್ನು ನೋಡಿ--
- Isaiah 13:19 ಯೆಶಾಯ 13:19ರಾಜ್ಯಗಳ ಘನತೆಯೂ ಕಸ್ದೀಯರ ಶ್ರೇಷ್ಠವಾದ ಸೌಂದರ್ಯವೂ ಆದ ಬಾಬೆಲಿಗೆ ದೇವರು ಸೊದೋ ಮ್ ಗೊಮೋರಗಳನ್ನು ಕೆಡವಿಬಿಟ್ಟಂತೆ ಇದನ್ನು ಸಹ ಕೆಡವಿಬಿಡುವನು.
- 2 Peter 2:6 2 ಪೇತ್ರನು 2:6ಆತನು ಸೊದೋಮ ಗೊಮೋರ ಪಟ್ಟಣಗಳನ್ನು ಬೂದಿ ಮಾಡಿ ಇನ್ನು ಮೇಲೆ ಭಕ್ತಿಹೀನರಾಗಿ ಬದುಕುವವರ ಗತಿಗೆ ದೃಷ್ಟಾಂತವಾಗಿ ಅವುಗಳಿಗೆ ದಂಡನೆಯನ್ನು ವಿಧಿಸಿದನು.
- Jude 1:7 ಯೂದನು 1:7ಸೊದೋಮ ಗೊಮೋರ ದವರೂ ಹಾಗೆಯೇ ಅವುಗಳ ಸುತ್ತುಮುತ್ತಣ ಪಟ್ಟಣಗಳವರೂ ಅದೇ ರೀತಿಯಲ್ಲಿ ತಮ್ಮನ್ನು ಜಾರತ್ವಕ್ಕೆ ಒಪ್ಪಿಸಿಬಿಟ್ಟು ಅನ್ಯ ಶರೀರವನ್ನು ಅನುಸರಿಸಿದ್ದರಿಂದ ಅವರು ನಿತ್ಯವಾದ ಅಗ್ನಿಯಲ್ಲಿ ಪ್ರತಿದಂಡನೆಯನ್ನು ಅನುಭವಿಸುತ್ತಾ ಉದಾಹರಣೆಗಾಗಿ ಇಡಲ್ಪಟ್ಟಿದ್ದಾರೆ.
- Amos 4:11 ಆಮೋಸ 4:11ದೇವರು ಸೊದೋಮನ್ನೂ ಗೊಮೋರವನ್ನೂ ಕೆಡವಿದ ಹಾಗೆ ನಾನು ನಿಮ್ಮಲ್ಲಿ ಕೆಲವರನ್ನು ಕೆಡವಿ ಹಾಕಿದ್ದೇನೆ; ಹೌದು, ಬೆಂಕಿ ಉರಿಯೊಳಗಿಂದ ತೆಗೆದ ಕೊಳ್ಳಿಯ ಹಾಗೆ ಇದ್ದೀರಿ. ಆದರೂ ನೀವು ನನ್ನ ಕಡೆಗೆ ಹಿಂತಿರುಗಿ ಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ.
- Jeremiah 50:40 ಯೆರೆಮೀಯ 50:40ದೇವರು ಸೊದೋಮನ್ನೂ ಗೊಮೋರವನ್ನು ಅವುಗಳ ಸವಿಾಪದಲ್ಲಿದ್ದ ಪಟ್ಟಣಗಳನ್ನೂ ಕೆಡವಿಹಾಕಿದಾಗ ಆದ ಹಾಗೆ ಅಲ್ಲಿ ಯಾವ ಮನುಷ್ಯನಾದರೂ ವಾಸಮಾಡುವದಿಲ್ಲ; ಅದರಲ್ಲಿ ಯಾವ ನರಪುತ್ರನಾದರೂ ತಂಗುವದಿ ಲ್ಲವೆಂದು ಕರ್ತನು ಅನ್ನುತ್ತಾನೆ.
- Jeremiah 20:16 ಯೆರೆಮೀಯ 20:16ಕರ್ತನು ಪಶ್ಚಾತ್ತಾಪಪಡದೆ ಕೆಡವಿಬಿಟ್ಟ ಪಟ್ಟಣಗಳ ಗತಿಯು ಅವನಿಗೆ ಬರಲಿ; ಅವನು ಬೆಳಿಗ್ಗೆ ಕೂಗನ್ನೂ ಮಧ್ಯಾಹ್ನ ದಲ್ಲಿ ಆರ್ಭಟವನ್ನೂ ಕೇಳಲಿ
- Hosea 11:8 ಹೋಶೇಯ 11:8ಎಫ್ರಾಯಾಮೇ, ನಾನು ನಿನ್ನನ್ನು ಬಿಟ್ಟು ಬಿಡುವದು ಹೇಗೆ? ಇಸ್ರಾಯೇಲೇ, ನಿನ್ನನ್ನು ನಾನು ಬಿಡಿಸುವದು ಹೇಗೆ? ನಾನು ನಿನ್ನನ್ನು ಅದ್ಮದ ಹಾಗೆ ಮಾಡುವದು ಹೇಗೆ? ನಾನು ನಿನ್ನನ್ನು ಜೆಬೋಯಾಮಿನ ಹಾಗೆ ಸ್ಥಾಪಿಸುವದು ಹೇಗೆ? ನನ್ನ ಹೃದಯವು ನನ್ನಲ್ಲಿ ತಿರುಗಿಕೊಂಡಿದೆ. ನನ್ನ ಪಶ್ಚಾತ್ತಾಪಗಳು ಒಟ್ಟಿಗೆ ಹತ್ತಿ ಕೊಂಡಿವೆ.
- Ezekiel 16:49–50 ಯೆಹೆಜ್ಕೇಲನು 16:49–50ಇಗೋ, ಸೊದೋಮ್ ಎಂಬ ನಿನ್ನ ತಂಗಿಯ ಅಕ್ರಮವನ್ನೂ ಗರ್ವವನ್ನೂ ನೋಡು; ರೊಟ್ಟಿಯ ತೃಪ್ತಿಯು ಅವಳಿಗೂ ಅವಳ ಕುಮಾರ್ತೆ ಯರಿಗೂ ನಿರ್ಭಯವಾದ ಸೌಖ್ಯವಾಗಿದೆ; ಆಕೆಯು ದೀನದರಿದ್ರರಿಗೆ ಬೆಂಬಲವಾಗಿರಲಿಲ್ಲ. ಇದಲ್ಲದೆ ಅವರು ಅಹಂಕಾರಿಗಳಾಗಿದ್ದು ನನ್ನ ಮುಂದೆ ಅಸಹ್ಯ ವಾದವುಗಳನ್ನು ನಡಿಸಿದರು. ಆದದರಿಂದ ನಾನು ಅದನ್ನು ನೋಡಿ ಅವರನ್ನು ನಿರ್ಮೂಲ ಮಾಡಿದೆನು.
- Lamentations 4:6 ಪ್ರಲಾಪಗಳು 4:6ನನ್ನ ಜನರ ಮಗಳ ಅಕ್ರಮದ ದಂಡನೆಯು ಸೊದೋಮಿನ ಪಾಪದ ದಂಡನೆಗಿಂತ ದೊಡ್ಡದು; ಅದು ಕ್ಷಣಮಾತ್ರದಲ್ಲಿ ಕೆಡವಿ ಹಾಕಲ್ಪಟ್ಟಿತು! ಅವಳನ್ನು ಯಾವ ಕೈಗಳೂ ತಡೆಯಲಿಲ್ಲ.
- Zephaniah 2:9 ಚೆಫನ್ಯ 2:9ಆದದರಿಂದ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೇಳು ವದೇನಂದರೆ--ನನ್ನ ಜೀವದಾಣೆ, ನಿಶ್ಚಯವಾಗಿ ಮೋವಾಬು ಸೊದೋಮಿನ ಹಾಗಾಗುವದು; ಅಮ್ಮೋ ನನ ಮಕ್ಕಳು ಗೊಮೋರದ ಹಾಗಾಗುವರು; ತುರುಚಿ ಗಿಡಗಳನ್ನು ಹುಟ್ಟಿಸುವಂಥ ಉಪ್ಪಿನ ಕುಣಿಗಳುಳ್ಳಂಥ ನಿತ್ಯವಾಗಿ ಹಾಳಾಗುವಂಥ ಸ್ಥಳವಾಗುವರು; ನನ್ನ ಜನರಲ್ಲಿ ಉಳಿದವರು ಅವರನ್ನು ಸುಲುಕೊಳ್ಳುವರು; ನನ್ನ ಜನರಲ್ಲಿ ಮಿಕ್ಕಾದವರು ಅವರನ್ನು ಸ್ವಾಧೀನ ಮಾಡಿಕೊಳ್ಳುವರು.
- Psalm 11:6 ಕೀರ್ತನೆಗಳು 11:6ದುಷ್ಟರ ಮೇಲೆ ಉರ್ಲುಗಳನ್ನೂ ಬೆಂಕಿಯನ್ನೂ ಗಂಧಕವನ್ನೂ ಉರಿಗಾಳಿಯನ್ನೂ ಆತನು ಸುರಿಸುವನು. ಇದು ಅವರ ಪಾನದ ಬಟ್ಟ ಲಾಗಿರುವದು;ನೀತಿಯ ಕರ್ತನು ನೀತಿಯನ್ನು ಪ್ರೀತಿ ಮಾಡುತ್ತಾನೆ; ಆತನ ಮುಖವು ಯಥಾರ್ಥನನ್ನು ದೃಷ್ಟಿಸುತ್ತದೆ.