Daniel · chapter 2 · verse 12
Daniel 2:12 in Kannada
ಇದರಿಂದ ಅರಸನು ಕೋಪವುಳ್ಳವನಾಗಿ ಮಹಾರೌದ್ರದಿಂದ ಬಾಬೆಲಿನಲ್ಲಿ ರುವ ಎಲ್ಲಾ ಜ್ಞಾನಿಗಳನ್ನು ನಾಶಮಾಡಬೇಕೆಂದು ಆಜ್ಞಾ ಪಿಸಿದನು.
Idarinda arasanu kopavullavanaagi mahaaraudradinda baabelinalli ruva ellaa jnyaanigalannu naashamaadabekendu aajnyaa pisidanu.
Daniel 2:12 in English
- King James Version (KJV)
- For this cause the king was angry and very furious, and commanded to destroy all the wise [men] of Babylon.
- World English Bible (WEB)
- Because of this, the king was angry and very furious, and commanded that all the wise men of Babylon be destroyed.
- American Standard Version (ASV)
- For this cause the king was angry and very furious, and commanded to destroy all the wise men of Babylon.
- Bible in Basic English (BBE)
- Because of this the king was angry and full of wrath, and gave orders for the destruction of all the wise men of Babylon.
- Darby Translation (DBY)
- For this cause the king was irritated and very wroth, and commanded to destroy all the wise men of Babylon.
- Webster's Bible (WBS)
- For this cause the king was angry and very furious, and commanded to destroy all the wise [men] of Babylon.
- Young's Literal Translation (YLT)
- Therefore the king hath been angry and very wroth, and hath said to destroy all the wise men of Babylon;
Read in context
- 10ಆಗ ಕಸ್ದೀಯರು ಅರಸನಿಗೆ ಉತ್ತರವಾಗಿ--ಅರಸನ ಸಂಗತಿಯನ್ನು ತಿಳಿಸಬಲ್ಲ ವ್ಯಕ್ತಿ ಭೂಲೋಕ ದಲ್ಲಿಲ್ಲ; ಆದದರಿಂದ ಯಾವ ಅರಸನಾದರೂ ಯಾವ ಪ್ರಭುವಾದರೂ ಯಾವ ಯಜಮಾನನಾದರೂ ಯಾವೊಬ್ಬ ಮಂತ್ರಗಾರನಲ್ಲೂ ಜೋತಿಷ್ಯನಲ್ಲೂ ಕಸ್ದೀಯನಲ್ಲೂ ಇಂಥ ಸಂಗತಿಗಳನ್ನು ಕೇಳಲಿಲ್ಲ.
- 11ಅರಸನು ಕೇಳುವ ಸಂಗತಿಯು ಅಪರೂಪವಾದದ್ದು ಮತ್ತು ಮಾನವರ ಸಂಗಡ ವಾಸಮಾಡದ ದೇವರುಗಳೇ ಹೊರತು ಇನ್ಯಾರೂ ಅದನ್ನು ಅರಸನ ಮುಂದೆ ತಿಳಿಸಲಾರರು ಅಂದರು.
- 12ಇದರಿಂದ ಅರಸನು ಕೋಪವುಳ್ಳವನಾಗಿ ಮಹಾರೌದ್ರದಿಂದ ಬಾಬೆಲಿನಲ್ಲಿ ರುವ ಎಲ್ಲಾ ಜ್ಞಾನಿಗಳನ್ನು ನಾಶಮಾಡಬೇಕೆಂದು ಆಜ್ಞಾ ಪಿಸಿದನು.
- 13ಹಾಗೆಯೇ, ಜ್ಞಾನಿಗಳನ್ನು ಕೊಲ್ಲಬೇಕೆಂಬ ನಿರ್ಣಯವು ಹೊರಟಿತು; ಆಗ ದಾನಿಯೇಲನನ್ನೂ ಅವನ ಜೊತೆಗಾರರನ್ನೂ ಕೊಲ್ಲಲು ಹುಡುಕಿದರು.
- 14ಆ ಮೇಲೆ ಬಾಬೆಲಿನ ಜ್ಞಾನಿಗಳನ್ನು ಕೊಲ್ಲಲ್ಲು ಹೊರಟಿದ್ದ ಅರಸನ ಕಾವಲುಗಾರರ ಅಧಿಪತಿಯಾದ ಅರ್ಯೋಕನಿಗೆ ದಾನಿಯೇಲನು ಆಲೋಚನೆ ಯಿಂದಲೂ ಜ್ಞಾನದಿಂದಲೂ ಉತ್ತರಕೊಟ್ಟನು;
Cross references
- Daniel 3:13 ದಾನಿಯೇಲನು 3:13ಆಗ ನೆಬೂಕದ್ನೆಚ್ಚರನು ಕೋಪವುಳ್ಳವನಾಗಿಯೂ ರೌದ್ರ ವುಳ್ಳವನಾಗಿಯೂ ಶದ್ರಕ್ ಮೇಷಕ್ ಅಬೇದ್ ನೆಗೋರನ್ನು ಹಿಡಿದು ತರಬೇಕೆಂದು ಆಜ್ಞಾಪಿಸಿದನು. ಹಾಗೆಯೇ ಆ ಮನುಷ್ಯರನ್ನು ಅರಸನ ಮುಂದೆ ಕರೆ ತಂದರು.
- Matthew 2:16 ಮತ್ತಾಯನು 2:16ಆಗ ಜ್ಞಾನಿಗಳು ತನ್ನನ್ನು ಪರಿಹಾಸ್ಯ ಮಾಡಿ ದರೆಂದು ಹೆರೋದನು ತಿಳಿದು ಅತಿ ರೋಷಗೊಂಡ ವನಾಗಿ ತಾನು ಅವರ ಮೂಲಕ ಪರಿಷ್ಕಾರವಾಗಿ ಶೋಧಿಸಿದ ಕಾಲಕ್ಕನುಸಾರ ಬೆತ್ಲೆಹೇಮಿನಲ್ಲಿಯೂ ಅದರ ಎಲ್ಲಾ ಪ್ರಾಂತ್ಯಗಳ ಮೇರೆಗಳಲ್ಲಿಯೂ ಎರಡು ವರುಷ ಮತ್ತು ಅದರೊಳಗಿದ್ದ ಎಲ್ಲಾ ಮಕ್ಕ
- Psalm 76:10 ಕೀರ್ತನೆಗಳು 76:10ನಿಶ್ಚಯವಾಗಿ ಮನುಷ್ಯನ ಕೋಪವು ನಿನ್ನನ್ನು ಕೊಂಡಾಡುವದು; ಕೋಪಶೇಷವನ್ನು ನೀನು ಬಿಗಿ ಹಿಡಿದು ಕೊಳ್ಳುವಿ.
- Daniel 3:19 ದಾನಿಯೇಲನು 3:19ಆಗ ನೆಬೂಕದ್ನೆಚ್ಚರನು ಉಗ್ರದಿಂದ ತುಂಬಿದವನಾಗಿ ಅವನ ಮುಖದ ರೂಪವು ಶದ್ರಕ್ ಮೇಷಕ್ಅಬೇದ್ ನೇಗೋ ಎಂಬ ವರಿಗೆ ವಿರೋಧವಾಗಿ ಬೇರೆಯಾಯಿತು. ಆಗ ಅವನು ಮಾತನಾಡಿ ಆ ಆವಿಗೆಯನ್ನು ಸಾಧಾರಣವಾದ ಉರಿ ಗಿಂತ ಏಳರಷ್ಟು ಹೆಚ್ಚಾಗಿ ಉರಿಹಾಕಬೇಕೆಂದು ಆಜ್ಞಾಪಿ ಸಿದನು.
- Proverbs 29:22 ಜ್ಞಾನೋಕ್ತಿಗಳು 29:22ಕೋಪಿಷ್ಠನು ಜಗಳ ವನ್ನೆಬ್ಬಿಸುತ್ತಾನೆ; ರೋಷಗೊಂಡವನು ದೋಷದಲ್ಲಿ ತುಂಬಿರುತ್ತಾನೆ.
- Proverbs 19:12 ಜ್ಞಾನೋಕ್ತಿಗಳು 19:12ಅರಸನ ಕೋಪವು ಸಿಂಹದ ಘರ್ಜನೆಯಂತಿದೆ; ಅವನ ದಯೆಯು ಹುಲ್ಲಿನ ಮೇಲಿರುವ ಇಬ್ಬನಿಯಂತಿದೆ.
- Proverbs 16:14 ಜ್ಞಾನೋಕ್ತಿಗಳು 16:14ಅರಸನ ಕೋಪವು ಮೃತ್ಯುವಿನ ದೂತರಂತೆ ಇರುತ್ತದೆ; ಜ್ಞಾನಿಯು ಅದನ್ನು ಶಮನಪಡಿಸುವನು.
- Proverbs 27:3–4 ಜ್ಞಾನೋಕ್ತಿಗಳು 27:3–4ಕಲ್ಲು ಭಾರ, ಮರಳು ಭಾರ; ಇವೆರಡ ಕ್ಕಿಂತ ಮೂಢನ ಕೋಪವು ಬಹಳ ಭಾರ. ಕ್ರೋಧವು ಕ್ರೂರ. ಕೋಪವು ಘೋರ; ಮತ್ಸರದ ಮುಂದೆ ಯಾವನು ನಿಂತಾನು?
- Daniel 2:5 ದಾನಿಯೇಲನು 2:5ಅರಸನು ಕಸ್ದೀ ಯರಿಗೆ ಪ್ರತ್ಯುತ್ತರವಾಗಿ--ಆ ಕನಸಿನ ಸಂಗತಿಯು ನನ್ನನ್ನು ಬಿಟ್ಟು ಹೋಯಿತು; ನೀವು ಕನಸನ್ನು ಅದರ ಅರ್ಥದೊಂದಿಗೆ ನನಗೆ ತಿಳಿಸದಿದ್ದರೆ ನೀವು ತುಂಡು ತುಂಡಾಗಿ ಕತ್ತರಿಸಲ್ಪಡುವಿರಿ; ನಿಮ್ಮ ಮನೆಗಳು ತಿಪ್ಪೆ ಗುಂಡಿಗಳನ್ನಾಗಿ ಮಾಡಿಸುವೆನು.
- Job 5:2 ಯೋಬನು 5:2ಮೂಢನನ್ನು ಕೋಪವು ಕೊಲ್ಲು ವದು; ಬುದ್ಧಿಹೀನನನ್ನು ರೋಷವು ಸಾಯುವಂತೆ ಮಾಡುವದು.
- Proverbs 20:2 ಜ್ಞಾನೋಕ್ತಿಗಳು 20:2ಅರಸನ ಭಯವು ಸಿಂಹದ ಗರ್ಜನೆಯಂತಿದೆ; ಅವನಿಗೆ ಕೋಪ ವನ್ನೆಬ್ಬಿಸುವವನು ತನ್ನ ಪ್ರಾಣಕ್ಕೆ ವಿರೋಧವಾಗಿ ಪಾಪ ಮಾಡುತ್ತಾನೆ.
- Matthew 5:22 ಮತ್ತಾಯನು 5:22ನಾನು ನಿಮಗೆ ಹೇಳುವದೇನಂದರೆ-- ನಿಷ್ಕಾರಣವಾಗಿ ತನ್ನ ಸಹೋದರನ ಮೇಲೆ ಯಾವನಾದರೂ ಸಿಟ್ಟುಗೊಂಡರೆ ಅವನು ನ್ಯಾಯತೀರ್ಪಿನ ಅಪಾಯಕ್ಕೆ ಒಳಗಾಗುವನು; ಮತ್ತು ಯಾವನಾದರೂ ತನ್ನ ಸಹೋದರನಿಗೆ-- ವ್ಯರ್ಥವಾದವನೇ ಎಂದು ಹೇಳಿದರೆ ಅವನು ನ್ಯಾಯಸಭೆಯ ಅಪಾಯಕ್ಕೆ ಒಳಗಾಗುವನು