Daniel · chapter 4 · verse 24
Daniel 4:24 in Kannada
ಓ ಅರಸನೇ, ಇದರ ಅರ್ಥವು ಏನಂದರೆ, ನನ್ನ ಒಡೆಯನಾದ ಅರಸನ ಮೇಲೆ ಬಂದಂಥ ಮಹೋನ್ನತನ ನಿರ್ಣಯವು ಹೀಗಿದೆ.
O arasane, idara arthavu enandare, nanna odeyanaada arasana mele bandantha mahonnatana nirnayavu heegide.
Daniel 4:24 in English
- King James Version (KJV)
- This [is] the interpretation, O king, and this [is] the decree of the most High, which is come upon my lord the king:
- World English Bible (WEB)
- “This is the interpretation, O king, and it is the decree of the Most High, which has come on my lord the king:
- American Standard Version (ASV)
- this is the interpretation, O king, and it is the decree of the Most High, which is come upon my lord the king:
- Bible in Basic English (BBE)
- This is the sense of it, O King, and it is the decision of the Most High which has come on my lord the king:
- Darby Translation (DBY)
- this is the interpretation, O king, and it is the decree of the Most High, which cometh upon my lord the king:
- Webster's Bible (WBS)
- This [is] the interpretation, O king, and this [is] the decree of the most High, which is come upon my lord the king:
- Young's Literal Translation (YLT)
- 'This [is] the interpretation, O king, and the decree of the Most High it [is] that hath come against my lord the king:
Read in context
- 22ಓ ಅರಸನೇ, ಆ ಮರವು ನೀನೇ ಆಗಿರುವಿ, ನೀನು ಬೆಳೆದು ಬಲವಾಗಿರುವಿ; ಹೌದು, ನಿನ್ನ ಮಹತ್ತು ಬೆಳೆದು ಆಕಾಶಕ್ಕೂ ನಿನ್ನ ಅಧಿಕಾರವು ಭೂಮಿಯ ಅಂತ್ಯದ ವರೆಗೂ ಮುಟ್ಟುವದು.
- 23ಆಗ ಪಾಲಕನು ಮತ್ತು ಪರಿಶುದ್ಧನಾದ ಒಬ್ಬನು ಪರಲೋಕದಿಂದ ಇಳಿದು ಬಂದು--ಮರವನ್ನು ಕಡಿದು ನಾಶಮಾಡಿರಿ; ಆದರೆ ಅದರ ಬೇರಿನ ಮೋಟನ್ನು ಕಬ್ಬಿಣ ಮತ್ತು ಕಂಚುಗಳ ಕಟ್ಟುಳ್ಳದ್ದಾಗಿ ಭೂಮಿಯಲ್ಲಿಯೂ ಬಯಲಿನ ಎಳೇ ಹುಲ್ಲಿನಲ್ಲಿಯೂ ಬಿಡಿರಿ. ಅದು ಆಕಾಶದ ಮಂಜಿನಿಂದ ತೇವವಾಗಲಿ; ಏಳು ಕಾಲಗಳು ಕಳೆಯುವ ತನಕ ಅದರ ಪಾಲು ಕಾಡು ಮೃಗಗಳ ಸಹವಾಸದ ಗತಿಯಂತೆ ಬರಲಿ ಎಂದು ಸಾರುವದನ್ನು ಅರಸನಾದ ನೀನು ನೋಡಿದೆಯಲ್ಲಾ.
- 24ಓ ಅರಸನೇ, ಇದರ ಅರ್ಥವು ಏನಂದರೆ, ನನ್ನ ಒಡೆಯನಾದ ಅರಸನ ಮೇಲೆ ಬಂದಂಥ ಮಹೋನ್ನತನ ನಿರ್ಣಯವು ಹೀಗಿದೆ.
- 25ಅವರು ನಿನ್ನನ್ನು ಮನುಷ್ಯರೊಳಗಿಂದ ತಳ್ಳಿ ಬಿಡುವರು; ನಿನ್ನ ನಿವಾಸವು ಕಾಡುಮೃಗಗಳ ಸಂಗಡ ಇರುವದು; ನಿನಗೆ ಎತ್ತುಗಳ ಸಂಗಡ ಹುಲ್ಲನ್ನು ಮೇಯಿಸುವರು. ಆಕಾಶದ ಮಂಜಿನಿಂದ ನಿನ್ನನ್ನು ತೇವ ಮಾಡುವರು. ಮಹೋನ್ನತನು ಮನುಷ್ಯರ ರಾಜ್ಯವನ್ನು ಆಳುವನೆಂದೂ ತನ್ನ ಮನಸ್ಸಿಗೆ ಸರಿಬಂದ ವರಿಗೆ ಅದನ್ನು ಕೊಡುತ್ತಾನೆಂದೂ ನೀನು ತಿಳಿಯುವ ವರೆಗೂ ಆ ಏಳು ಕಾಲಗಳು ಕಳೆದು ಹೋಗುವವು.
- 26ಆ ಮರದ ಬೇರಿನ ಮೋಟನ್ನು ಉಳಿಸಬೇಕೆಂದು ಅವರು ಆಜ್ಞೆ ಮಾಡಿದ್ದರಲ್ಲಿ ಅಂದರೆ ಪರಲೋಕವು ಆಳುತ್ತದೆಂದು ನೀನು ತಿಳಿದುಕೊಂಡ ಮೇಲೆ ನಿನ್ನ ರಾಜ್ಯವು ನಿನಗೆ ಸ್ಥಿರವಾಗುವದು.
Cross references
- Psalm 107:40 ಕೀರ್ತನೆಗಳು 107:40ಆತನು ಅಧಿಪತಿಗಳ ಮೇಲೆ ತಿರಸ್ಕಾರವನ್ನು ಹೊಯಿದು ಅವ ರನ್ನು ದಾರಿ ಇಲ್ಲದ ಕಾಡಿನಲ್ಲಿ ಅಲೆಯ ಮಾಡುತ್ತಾನೆ.
- Job 40:11–12 ಯೋಬನು 40:11–12ನಿನ್ನ ಕೋಪದ ಉರಿ ಯನ್ನು ದೂರಹಾಕು. ಗರ್ವಿಷ್ಟರನ್ನೆಲ್ಲಾ ನೋಡಿತಗ್ಗಿಸು. ಗರ್ವಿಷ್ಟರನ್ನೆಲ್ಲಾ ನೋಡಿ ತಗ್ಗಿಸಿಬಿಡು; ದುಷ್ಟರನ್ನು ಅವರ ಸ್ಥಳದಲ್ಲಿ ತುಳಿದುಬಿಡು.
- Isaiah 46:10–11 ಯೆಶಾಯ 46:10–11ಆರಂಭದಲ್ಲಿಯೇ ಅಂತ್ಯವನ್ನೂ ಪೂರ್ವಕಾಲದಿಂದ ಇನ್ನೂ ನಡೆಯದ ಸಂಗತಿಗಳನ್ನೂ ಪ್ರಕಟಿಸಿದ್ದೇನೆ; ನನ್ನ ಆಲೋಚನೆಯು ನಿಲ್ಲುವ ದೆಂದೂ ನಾನು ಮೆಚ್ಚಿದ್ದನ್ನೆಲ್ಲಾ ಮಾಡುವೆನೆಂದೂ ಅರುಹಿದ್ದೇನೆ. ಮೂಡಲಿಂದ ಒಂದು ಕ್ರೂರವಾದ ಪಕ್ಷಿಯೂ ದೂರದೇಶದಿಂದ ನನ್ನ ಆಜ್ಞೆಯನ್ನು ನಡಿ ಸುವ ಮನುಷ್ಯನೂ ಬರಲಿ ಎಂದು ಕರೆದಿದ್ದೇನೆ; ಹೌದು, ನಾನು ನುಡಿದಿದ್ದೇನೆ, ಅದನ್ನು ನಾನು ಈಡೇರಿಸುವೆನು; ನಾನು ನಿರ್ಣಯಿಸಿದ್ದೇನೆ, ಅದನ್ನು ನಾನು ಮಾಡುವೆನು.
- Job 1:12–19 ಯೋಬನು 1:12–19ಕರ್ತನು ಸೈತಾನನಿಗೆ--ಇಗೋ, ಅವನದೆಲ್ಲಾ ನಿನ್ನ ಅಧಿಕಾರ ದಲ್ಲಿ ಅದೆ; ಅವನ ಮೇಲೆ ಮಾತ್ರ ನಿನ್ನ ಕೈ ಹಾಕಬೇಡ ಅಂದನು. ಆಗ ಸೈತಾನನು ಕರ್ತನ ಸಮ್ಮುಖದಿಂದ ಹೊರಟನು. ಒಂದು ದಿನ ಅವನ ಕುಮಾರರೂ ಕುಮಾರ್ತೆ ಯರೂ ತಮ್ಮ ಹಿರಿಯವನ ಮನೆಯಲ್ಲಿ ತಿಂದು ದ್ರಾಕ್ಷಾರಸವನ್ನು ಕುಡಿಯುತ್ತಿದ್ದರು. ಒಬ್ಬ ಸೇವಕನು ಯೋಬನ ಬಳಿಗೆ ಬಂದು--ಎತ್ತುಗಳು ಉಳುತ್ತಾ ಕತ್ತೆಗಳು ಅವುಗಳ ಹತ್ತಿರ ಮೇಯುತ್ತಾ ಇರಲಾಗಿ ಶೆಬದವರು ಅವುಗಳ ಮೇಲೆ ಬಿದ್ದು ಅವುಗಳನ್ನು ತಕ್ಕೊಂಡು ಹೋದರು; ಹೌದು, ಸೇವಕರನ್ನು ಸಹ ಕತ್ತಿಯಿಂದ ಸಂಹರಿಸಿದರು. ನಾನೊಬ್ಬನು ಮಾತ್ರ ನಿನಗೆ ತಿಳಿಸುವದಕ್ಕೆ ತಪ್ಪಿಸಿಕೊಂಡೆನು ಅಂದನು. ಅವನು ಇನ್ನೂ ಮಾತನಾಡುತ್ತಿರಲು ಮತ್ತೊಬ್ಬನೂ ಬಂದು--ದೇವರ ಬೆಂಕಿ ಆಕಾಶದಿಂದ ಬಿದ್ದು ಕುರಿ ಗಳಲ್ಲಿಯೂ ಸೇವಕರಲ್ಲಿಯೂ ಉರಿದು ಅವರನ್ನು ಸಂಹರಿಸಿತು. ನಾನೊಬ್ಬನು ಮಾತ್ರ ನಿನಗೆ ತಿಳಿಸುವದಕ್ಕೆ ತಪ್ಪಿಸಿಕೊಂಡೆನು ಅಂದನು. ಅವನು ಇನ್ನೂ ಮಾತ ನಾಡುತ್ತಿರಲು ಮತ್ತೊಬ್ಬನು ಬಂದು--ಕಸ್ದೀಯರು ಮೂರು ದಂಡುಗಳನ್ನು ಕಟ್ಟಿ, ಒಂಟೆಗಳ ಮೇಲೆ ಬಿದ್ದು, ಅವುಗಳನ್ನು ತಕ್ಕೊಂಡು ಸಂಹರಿಸಿದರು; ಹೌದು, ಸೇವಕರನ್ನು ಕತ್ತಿಯಿಂದ ಹೊಡೆದರು; ನಾನೊಬ್ಬನು ಮಾತ್ರ ನಿನಗೆ ತಿಳಿಸುವುದಕ್ಕೆ ತಪ್ಪಿಸಿ ಕೊಂಡೆನು ಅಂದನು. ಅವನು ಇನ್ನೂ ಮಾತನಾ ಡುತ್ತಿರಲು ಮತ್ತೊಬ್ಬನು ಬಂದು--ನಿನ್ನ ಕುಮಾರರೂ ಕುಮಾರ್ತೆಯರೂ ತಮ್ಮ ಹಿರಿಯವನ ಮನೆಯಲ್ಲಿ ತಿನ್ನುತ್ತಾ ದ್ರಾಕ್ಷಾರಸವನ್ನು ಕುಡಿಯುತ್ತಿರುವಲ್ಲಿ ಅಗೋ, ದೊಡ್ಡ ಗಾಳಿ ಬಂದು ಮನೆಯ ನಾಲ್ಕು ಮೂಲೆಗಳಿಗೆ ಹೊಡೆದದ್ದರಿಂದ ಅದು ಯೌವನಸ್ಥರ ಮೇಲೆ ಬಿತ್ತು; ಅವರು ಸತ್ತರು; ನಾನೊಬ್ಬನು ಮಾತ್ರ ನಿನಗೆ ತಿಳಿಸುವುದಕ್ಕೆ ತಪ್ಪಿಸಿಕೊಂಡೆನು ಅಂದನು.
- Psalm 148:6 ಕೀರ್ತನೆಗಳು 148:6ಆತನು ಅವುಗಳನ್ನು ಯುಗಯುಗಗಳಿಗೂ ಸ್ಥಾಪಿಸಿದ್ದಾನೆ; ಆಜ್ಞೆಯನ್ನು ಕೊಟ್ಟಿ ದ್ದಾನೆ, ಅದು ವಿಾರಿ ಹೋಗುವದಿಲ್ಲ.
- Daniel 4:17 ದಾನಿಯೇಲನು 4:17ಈ ವಿಷಯವು ಪಾಲಕರ ಕಟ್ಟಡದಿಂದಲೂ ಈ ಸಂಗತಿಯು ಪರಿಶುದ್ಧರ ಮಾತಿನಿಂದಲೂ ಉಂಟಾಯಿತು; ಮಹೋ ನ್ನತನು ಮನುಷ್ಯರ ರಾಜ್ಯದಲ್ಲಿ ಆಳುತ್ತಾನೆಂದೂ ತನ್ನ ಮನಸ್ಸಿಗೆ ಸರಿಯಾದವರಿಗೆ ಅದನ್ನು ಕೊಡುತ್ತಾನೆಂದೂ ಮನುಷ್ಯರಲ್ಲಿ ನೀಚರಾದವರನ್ನು ಅದರ ಮೇಲೆ ನೇಮಿಸುತ್ತಾನೆಂದೂ ಜೀವಂತರಿಗೆ ತಿಳಿಯಬೇಕೆಂದೇ ಸಾರಿದನು.
- Job 20:29 ಯೋಬನು 20:29ದುಷ್ಟಮನುಷ್ಯನಿಗೆ ದೇವರಿಂದ ಬರುವ ಪಾಲೂ ದೇವರಿಂದ ಅವನಿಗೆ ನೇಮಿಸಲ್ಪ ಟ್ಟಿರುವ ಬಾಧ್ಯತೆಯೂ ಇದೇ.
- Psalm 2:7 ಕೀರ್ತನೆಗಳು 2:7ಕಟ್ಟಳೆಯನ್ನು ಸಾರುತ್ತೇನೆ; ಕರ್ತನು ನನಗೆ ಹೇಳಿದ್ದು--ನೀನು ನನ್ನ ಮಗನು, ನಾನು ಈ ಹೊತ್ತು ನಿನ್ನನ್ನು ಪಡೆದಿದ್ದೇನೆ.
- Isaiah 23:9 ಯೆಶಾಯ 23:9ಗರ್ವದ ಸಕಲ ವೈಭವವನ್ನು ಹೊಲಸು ಮಾಡಬೇ ಕೆಂತಲೂ ಭೂಮಿಯಲ್ಲಿ ಘನವುಳ್ಳವರೆಲ್ಲರನ್ನು ಅವ ಮಾನಪಡಿಸಬೇಕೆಂತಲೂ ಸೈನ್ಯಗಳ ಕರ್ತನೇ, ಹೀಗೆ ಸಂಕಲ್ಪಿಸಿದ್ದಾನೆ.
- Isaiah 14:24–27 ಯೆಶಾಯ 14:24–27ಸೈನ್ಯಗಳ ಕರ್ತನು ಆಣೆಯಿಟ್ಟು ಹೇಳುವದೇನ ಂದರೆ--ನಾನು ನೆನಸಿದ ಪ್ರಕಾರವೇ ನೆರವೇರುವದು; ನಾನು ಉದ್ದೇಶಿಸಿದ್ದೇ ನಿಲ್ಲುವದು. ಏನಂದರೆ ಅಶ್ಶೂ ರ್ಯರನ್ನು ನನ್ನ ದೇಶದಲ್ಲಿ ಮುರಿದುಬಿಡುತ್ತೇನೆ. ನನ್ನ ಪರ್ವತಗಳ ಮೇಲೆ ಅವನನ್ನು ತುಳಿದುಬಿಡುತ್ತೇನೆ; ಅವನ ನೊಗವು ಅವರ ಮೇಲಿನಿಂದ ತೊಲಗಿ ಅವ ನ ಭಾರವು ಅವನ ಭುಜದ ಮೇಲಿನಿಂದ ತೊಲಗು ವದು. ಇದೇ ಸಮಸ್ತ ಭೂಮಿಯ ವಿಷಯ ಆಲೋ ಚಿಸಿದ ಉದ್ದೇಶ. ಇದೇ ಜನಾಂಗಗಳ ಮೇಲೆಲ್ಲಾ ಚಾಚಿದ ನನ್ನ ಕೈ. ಸೈನ್ಯಗಳ ಕರ್ತನುಉದ್ದೇಶಿಸಿ ದ್ದಾನೆ; ಅದನ್ನು ಯಾರು ವ್ಯರ್ಥಪಡಿಸುವರು. ಆತನ ಕೈಚಾಚಿದೆ, ಹಿಂದಕ್ಕೆ ತಳ್ಳುವವರು ಯಾರು ಎಂಬದೇ.