Job · chapter 20 · verse 29
Job 20:29 in Kannada
ದುಷ್ಟಮನುಷ್ಯನಿಗೆ ದೇವರಿಂದ ಬರುವ ಪಾಲೂ ದೇವರಿಂದ ಅವನಿಗೆ ನೇಮಿಸಲ್ಪ ಟ್ಟಿರುವ ಬಾಧ್ಯತೆಯೂ ಇದೇ.
Dushtamanushyanige devarinda baruva paaloo devarinda avanige nemisalpa ttiruva baadhyateyoo ide.
Job 20:29 in English
- King James Version (KJV)
- This [is] the portion of a wicked man from God, and the heritage appointed unto him by God.
- World English Bible (WEB)
- This is the portion of a wicked man from God, the heritage appointed to him by God.”
- American Standard Version (ASV)
- This is the portion of a wicked man from God, And the heritage appointed unto him by God.
- Bible in Basic English (BBE)
- This is the reward of the evil man, and the heritage given to him by God.
- Darby Translation (DBY)
- This is the portion of the wicked man from God, and the heritage appointed to him by God.
- Webster's Bible (WBS)
- This [is] the portion of a wicked man from God, and the heritage appointed to him by God.
- Young's Literal Translation (YLT)
- This [is] the portion of a wicked man from God. And an inheritance appointed him by God.
Read in context
- 27ಆಕಾಶಗಳು ಅವನ ಅಕ್ರಮವನ್ನು ಪ್ರಕಟಮಾಡುವವು; ಭೂಮಿಯು ಅವನಿಗೆ ವಿರೋಧವಾಗಿ ಏಳುವದು.
- 28ಅವನ ಮನೆಯ ಆದಾಯವು ತೊಲಗಿ ಹೋಗುವದು; ಅವನ ಕೋಪದ ದಿವಸದಲ್ಲಿ ಅದು ಕರಗಿ ಹೋಗುವದು.ದುಷ್ಟಮನುಷ್ಯನಿಗೆ ದೇವರಿಂದ ಬರುವ ಪಾಲೂ ದೇವರಿಂದ ಅವನಿಗೆ ನೇಮಿಸಲ್ಪ ಟ್ಟಿರುವ ಬಾಧ್ಯತೆಯೂ ಇದೇ.
- 29ದುಷ್ಟಮನುಷ್ಯನಿಗೆ ದೇವರಿಂದ ಬರುವ ಪಾಲೂ ದೇವರಿಂದ ಅವನಿಗೆ ನೇಮಿಸಲ್ಪ ಟ್ಟಿರುವ ಬಾಧ್ಯತೆಯೂ ಇದೇ.
Cross references
- Job 27:13 ಯೋಬನು 27:13ಇದು ದುಷ್ಟ ಮನುಷ್ಯನಿಗೆ ದೇವರಿಂದ ಬಂದ ಪಾಲಾಗಿದೆ; ಬಲಾತ್ಕಾರಿಗಳು ಸರ್ವ ಶಕ್ತನಿಂದ ಹೊಂದುವ ಬಾಧ್ಯತೆ ಇದೇ.
- Job 31:2–3 ಯೋಬನು 31:2–3ಮೇಲಿನಿಂದ ದೇವರ ಭಾಗವೂ ಉನ್ನತ ವಾದ ಸ್ಥಳಗಳಿಂದ ಸರ್ವಶಕ್ತನ ಬಾಧ್ಯತೆಯೂ ಯಾವದು? ದುಷ್ಟನಿಗೆ ನಾಶವಿಲ್ಲವೋ? ಅಪಕಾರ ಮಾಡುವವರಿಗೆ ಕಠಿಣ ಶಿಕ್ಷೆಯಿಲ್ಲವೋ?
- Psalm 11:5–6 ಕೀರ್ತನೆಗಳು 11:5–6ಕರ್ತನು ನೀತಿ ವಂತನನ್ನು ಶೋಧಿಸುತ್ತಾನೆ; ಆದರೆ ದುಷ್ಟನನ್ನೂ ಬಲಾತ್ಕಾರ ಪ್ರಿಯನನ್ನೂ ಆತನ ಪ್ರಾಣವು ಹಗೆ ಮಾಡುತ್ತದೆ. ದುಷ್ಟರ ಮೇಲೆ ಉರ್ಲುಗಳನ್ನೂ ಬೆಂಕಿಯನ್ನೂ ಗಂಧಕವನ್ನೂ ಉರಿಗಾಳಿಯನ್ನೂ ಆತನು ಸುರಿಸುವನು. ಇದು ಅವರ ಪಾನದ ಬಟ್ಟ ಲಾಗಿರುವದು;ನೀತಿಯ ಕರ್ತನು ನೀತಿಯನ್ನು ಪ್ರೀತಿ ಮಾಡುತ್ತಾನೆ; ಆತನ ಮುಖವು ಯಥಾರ್ಥನನ್ನು ದೃಷ್ಟಿಸುತ್ತದೆ.
- Job 18:21 ಯೋಬನು 18:21ನಿಶ್ಚಯವಾಗಿ ದುಷ್ಟರ ಮನೆಗಳು ಇಂಥವುಗಳೇ; ದೇವರನ್ನು ತಿಳಿಯದವನ ಸ್ಥಳವು ಇದೇ.
- Matthew 24:51 ಮತ್ತಾಯನು 24:51ಅವನನ್ನು ಛೇದಿಸಿ ಕಪಟಿಗಳೊಂದಿಗೆ ಅವನ ಪಾಲನ್ನು ನೇಮಿಸುವನು; ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.
- Lamentations 3:38 ಪ್ರಲಾಪಗಳು 3:38ಮಹೋನ್ನತನ ಬಾಯಿಂದ ಕೆಟ್ಟದ್ದೂ ಒಳ್ಳೆಯದೂ ಹೊರಡುವದಿಲ್ಲವೇ?
- Deuteronomy 29:20–28 ಧರ್ಮೋಪದೇಶಕಾಂಡ 29:20–28ಅಂಥವನನ್ನು ಕರ್ತನು ಉಳಿಸುವದಿಲ್ಲ; ಆಗಲೇ ಕರ್ತನ ಕೋಪವೂ ರೋಷವೂ ಆ ಮನುಷ್ಯನ ಮೇಲೆ ಹೊಗೆ ಹಾಯುವವು. ಈ ಪುಸ್ತಕದಲ್ಲಿ ಬರೆದಿ ರುವ ಶಾಪವೆಲ್ಲಾ ಅವನ ಮೇಲೆ ನೆಲೆಯಾಗುವದು; ಕರ್ತನು ಅವನ ಹೆಸರನ್ನು ಆಕಾಶದ ಕೆಳಗಿನಿಂದ ಅಳಿಸಿಬಿಡುವನು. ಈ ನ್ಯಾಯಪ್ರಮಾಣದ ಪುಸ್ತಕ ದಲ್ಲಿ ಬರೆದಿರುವ ಒಡಂಬಡಿಕೆಯ ಎಲ್ಲಾ ಶಾಪಗಳ ಪ್ರಕಾರ ಕರ್ತನು ಅವನನ್ನು ಇಸ್ರಾಯೇಲಿನ ಎಲ್ಲಾ ಗೋತ್ರಗಳೊಳಗಿಂದ ಕೇಡಿಗೆ ಪ್ರತ್ಯೇಕಿಸುವನು. ಹೀಗೆ ನಿಮ್ಮ ತರುವಾಯ ಹುಟ್ಟುವ ನಿಮ್ಮ ಮಕ್ಕಳ ಮುಂದಿನ ಸಂತತಿಯೂ ದೂರ ದೇಶದಿಂದ ಬರುವ ಅನ್ಯನೂ ಆ ದೇಶದ ಬಾಧೆಗಳನ್ನೂ ಕರ್ತನು ಅದರಲ್ಲಿ ಬರಮಾಡಿದ ರೋಗಗಳನ್ನೂ ನೋಡಿ ಕರ್ತನು ತನ್ನ ಕೋಪದಲ್ಲಿಯೂ ರೌದ್ರದಲ್ಲಿಯೂ ಕೆಡವಿ ಹಾಕಿದ ಸೊದೋಮ್ ಗೊಮೋರ ಅದ್ಮಾಚೆಬೋ ಯಾಮ್ ಇವುಗಳ ಹಾಗೆ ಆ ದೇಶವೆಲ್ಲಾ ಗಂಧಕವೂ ಉಪ್ಪೂ ಉರಿಯುತ್ತಾ ಬಿತ್ತಲ್ಪಡದೆ ಮೊಳೆಯದೆ ಯಾವ ಹುಲ್ಲನ್ನಾದರೂ ಬೆಳೆಸದೆ ಇರುವದನ್ನು ನೋಡಿ-- ಯಾಕೆ ಕರ್ತನು ಈ ದೇಶಕ್ಕೆ ಹೀಗೆ ಮಾಡಿದ್ದಾನೆ. ಈ ದೊಡ್ಡ ಕೊಪಾಗ್ನಿ ಏನು ಎಂದು ಜನಾಂಗಗಳೆಲ್ಲಾ ಕೇಳುವರು. ಆಗ ಜನರು--ಅವರು ತಮ್ಮನ್ನು ಐಗುಪ್ತ ದೇಶದೊಳಗಿಂದ ಹೊರಗೆ ತರುವಾಗ ತಮ್ಮ ಪಿತೃಗಳ ದೇವರಾದ ಕರ್ತನು ತಮ್ಮ ಸಂಗಡ ಮಾಡಿದ ಒಡಂಬಡಿಕೆಯನ್ನು ಮರೆತುಬಿಟ್ಟು, ಹೋಗಿ ಬೇರೆ ದೇವರುಗಳನ್ನೂ ತಮಗೆ ತಿಳಿಯದಂಥ, ಆತನು ತಮಗೆ ನೇಮಿಸದಂಥ ದೇವರುಗಳನ್ನೂ ಸೇವಿಸಿ ಅಡ್ಡಬಿದ್ದ ದರಿಂದ ಕರ್ತನ ಕೋಪವು ಈ ದೇಶದ ಮೇಲೆ ಈ ಪುಸ್ತಕದಲ್ಲಿ ಬರೆದಿರುವ ಶಾಪವನ್ನೆಲ್ಲಾ ಅವರ ಮೇಲೆ ತರುವ ಹಾಗೆ ಉರಿಯಿತು. ಕರ್ತನು ಅವ ರನ್ನು ಕೋಪದಲ್ಲಿಯೂ ಸಿಟ್ಟಿನಲ್ಲಿಯೂ ಮಹಾರೌದ್ರ ದಲ್ಲಿಯೂ ದೇಶದಲ್ಲಿಂದ ಕಿತ್ತುಹಾಕಿ ಇಂದು ಇರುವ ಪ್ರಕಾರ ಬೇರೆ ದೇಶಕ್ಕೆ ಕಳುಹಿಸಿದ್ದಾನೆ.ರಹಸ್ಯಗಳು ನಮ್ಮ ದೇವರಾದ ಕರ್ತನಿಗೆ ಸೇರಿದ್ದು; ಆದರೆ ಪ್ರಕಟವಾದ ಈ ನ್ಯಾಯಪ್ರಮಾಣದ ಮಾತು ಗಳನ್ನೆಲ್ಲಾ ನಾವು ಮಾಡುವಹಾಗೆ ನಮಗೂ ನಮ್ಮ ಮಕ್ಕಳಿಗೂ ನಿತ್ಯವಾಗಿ ಇರುತ್ತವೆ.