Deuteronomy · chapter 2 · verse 12
Deuteronomy 2:12 in Kannada
ಹೋರಿಯರು ಸಹ ಪೂರ್ವದಲ್ಲಿ ಸೇಯಾರಿನಲ್ಲಿ ವಾಸಮಾಡಿದರು; ಆದರೆ ಏಸಾವನ ಮಕ್ಕಳು ಅವರನ್ನು ಹೊರಡಿಸಿ ತಮ್ಮ ಎದುರಿನಲ್ಲಿ ಸಂಹರಿಸಿ ಇಸ್ರಾಯೇಲ್ಯರು, ಕರ್ತನು ತಮಗೆ ಕೊಟ್ಟ ಸ್ವಾಸ್ತ್ಯದ ದೇಶದಲ್ಲಿ ಮಾಡಿದ ಹಾಗೆ ಅವರ ಬದಲಾಗಿ ವಾಸಮಾಡಿದರು.
Horiyaru saha poorvadalli seyaarinalli vaasamaadidaru; aadare esaavana makkalu avarannu horadisi tamma edurinalli sanharisi israayelyaru, kartanu tamage kotta svaastyada deshadalli maadida haage avara badalaagi vaasamaadidaru.
Deuteronomy 2:12 in English
- King James Version (KJV)
- The Horims also dwelt in Seir beforetime; but the children of Esau succeeded them, when they had destroyed them from before them, and dwelt in their stead; as Israel did unto the land of his possession, which the LORD gave unto them.
- World English Bible (WEB)
- The Horites also lived in Seir in the past, but the children of Esau succeeded them. They destroyed them from before them, and lived in their place, as Israel did to the land of his possession, which the LORD gave to them.)
- American Standard Version (ASV)
- The Horites also dwelt in Seir aforetime, but the children of Esau succeeded them; and they destroyed them from before them, and dwelt in their stead; as Israel did unto the land of his possession, which Jehovah gave unto them).
- Bible in Basic English (BBE)
- And the Horites in earlier times were living in Seir, but the children of Esau took their place; they sent destruction on them and took their land for themselves, as Israel did to the land of his heritage which the Lord gave them.)
- Darby Translation (DBY)
- And in Seir dwelt the Horites in times past; and the children of Esau dispossessed them, and destroyed them from before them, and dwelt in their stead; as Israel did to the land of their possession, which Jehovah gave to them.)
- Webster's Bible (WBS)
- The Horims also dwelt formerly in Seir, but the children of Esau succeeded them, when they had destroyed them from before them, and dwelt in their stead; as Israel did to the land of his possession, which the LORD gave to them.)
- Young's Literal Translation (YLT)
- And in Seir have the Horim dwelt formerly; and the sons of Esau dispossess them, and destroy them from before them, and dwell in their stead, as Israel hath done to the land of his possession, which Jehovah hath given to them;
Read in context
- 10ಅದರೊಳಗೆ ಪೂರ್ವದಲ್ಲಿ ಏಮಿಯರು ವಾಸವಾಗಿದ್ದರು. ಅವರು ಅನಾಕ್ಯರ ಹಾಗೆ ದೊಡ್ಡವ ರಾಗಿಯೂ ಬಹಳವಾದವರಾಗಿಯೂ ಉದ್ದವಾದವ ರಾಗಿಯೂ ಇರುವ ಜನರು.
- 11ಅವರು ಅನಾಕ್ಯರ ಹಾಗೆ ಮಹಾಶರೀರಗಳೆನ್ನಿಸಿಕೊಂಡರು; ಮೋವಾಬ್ಯರು ಅವರನ್ನು ಏಮಿಯರೆಂದು ಕರೆದರು.
- 12ಹೋರಿಯರು ಸಹ ಪೂರ್ವದಲ್ಲಿ ಸೇಯಾರಿನಲ್ಲಿ ವಾಸಮಾಡಿದರು; ಆದರೆ ಏಸಾವನ ಮಕ್ಕಳು ಅವರನ್ನು ಹೊರಡಿಸಿ ತಮ್ಮ ಎದುರಿನಲ್ಲಿ ಸಂಹರಿಸಿ ಇಸ್ರಾಯೇಲ್ಯರು, ಕರ್ತನು ತಮಗೆ ಕೊಟ್ಟ ಸ್ವಾಸ್ತ್ಯದ ದೇಶದಲ್ಲಿ ಮಾಡಿದ ಹಾಗೆ ಅವರ ಬದಲಾಗಿ ವಾಸಮಾಡಿದರು.
- 13ಈಗ ಎದ್ದು ಜೆರೆದ್ ಹಳ್ಳವನ್ನು ದಾಟಿರಿ ಅಂದಮೇಲೆ ನಾವು ಜೆರೆದ್ ಹಳ್ಳವನ್ನು ದಾಟಿದೆವು.
- 14ನಾವು ಕಾದೇಶ್ಬರ್ನೆಯವನ್ನು ಬಿಟ್ಟಂದಿನಿಂದ ಜೆರೆದ್ ಹಳ್ಳ ವನ್ನು ದಾಟಿದ ವರೆಗೆ ಹೋದ ಕಾಲವು ಮೂವ ತ್ತೆಂಟು ವರುಷ; ಕರ್ತನು ಅವರಿಗೆ ಪ್ರಮಾಣಮಾಡಿದ ಪ್ರಕಾರ ಯುದ್ಧಸ್ಥರ ಸಂತತಿ ಎಲ್ಲಾ ಸೈನ್ಯದೊಳಗಿಂದ ಮುಗಿದುಹೋಗುವ ವರೆಗೆ ತಡವಾಯಿತು.
Cross references
- Deuteronomy 2:22 ಧರ್ಮೋಪದೇಶಕಾಂಡ 2:22ಕರ್ತನು ಸೇಯಾರಿನಲ್ಲಿ ವಾಸವಾಗಿ ರುವ ಏಸಾವನ ಮಕ್ಕಳಿಗೆ ಮಾಡಿದ ಹಾಗಾಯಿತು. ಅವನು ಅವರ ಮುಂದೆ ಹೋರಿಯರನ್ನು ನಾಶ ಮಾಡಿದಾಗ ಅವರು ಇವರನ್ನು ಹೊರಡಿಸಿ ಇವರ ಬದಲಾಗಿ ಇಂದಿನ ವರೆಗೂ ವಾಸಿಸಿದ್ದವರಲ್ಲಾ.
- Genesis 14:6 ಆದಿಕಾಂಡ 14:6ಅವರ ಬೆಟ್ಟ ವಾದ ಸೇಯಾರಿನಲ್ಲಿ ಹೋರಿಯರನ್ನೂ ಅರಣ್ಯಕ್ಕೆ ಸವಿಾಪವಾದ ಏಲ್ಪಾರಾನಿನ ವರೆಗೂ ಅವರನ್ನು ಸಂಹರಿಸಿದರು.
- 1 Chronicles 1:38–54 1 ಪೂರ್ವಕಾಲವೃತ್ತಾಂತ 1:38–54ಸೇಯಾರನ ಮಕ್ಕಳು--ಲೋಟಾನನು, ಶೋಬಾ ಲನು, ಚಿಬ್ಬೋನನು, ಅನಾಹನು, ದೀಶೋನನು, ಏಚೆರನು, ದೀಶಾನನು. ಲೋಟಾನನ ಮಕ್ಕಳುಹೋರೀ, ಹೋಮಾಮನು, ಲೋಟಾನನ ಸಹೋ ದರಿ ತಿಮ್ನಳು. ಶೋಬಾಲನ ಮಕ್ಕಳು--ಅಲ್ಯಾ ನನು, ಮಾನಹತನು, ಏಬಾಲನು, ಶೆಫೀಯು, ಓನಮನು. ಚಿಬ್ಬೋನನ ಮಕ್ಕಳು--ಅಯ್ಯಾಹನು, ಅನಾಹನು. ಅನಾಹನ ಮಗನು--ದೀಶೋನನು. ದೀಶೋನನ ಮಕ್ಕಳು--ಹಮ್ರಾನನು, ಎಷ್ಬಾನನು, ಇತ್ರಾನನು, ಕೆರಾನನು. ಏಚೆರನ ಮಕ್ಕಳು-- ಬಿಲ್ಹಾನನು, ಜಾವಾನನು, ಯಾಕಾನನು. ದೀಶಾನನ ಮಕ್ಕಳು--ಊಚನು, ಅರಾನನು. ಇಸ್ರಾಯೇಲಿನ ಮಕ್ಕಳ ಮೇಲೆ ಯಾವ ಅರ ಸನೂ ಆಳದ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸುಗಳು ಯಾರಂದರೆ--ಬೆಯೋರನ ಮಗನಾದ ಬೆಳನು. ಅವನ ಪಟ್ಟಣದ ಹೆಸರು ದಿನ್ಹಾಬಾ. ಬೆಳನು ಸತ್ತ ತರುವಾಯ ಅವನಿಗೆ ಬದಲಾಗಿ ಬೊಚ್ರ ದವನಾದಂಥ ಜೆರಹನ ಮಗನಾದ ಯೋಬಾಬನು ಆಳಿದನು. ಯೋಬಾಬನು ಸತ್ತ ತರುವಾಯ ಅವನಿಗೆ ಬದಲಾಗಿ ತೇಮಾನೀಯರ ದೇಶದವನಾದ ಹೂಷಾಮನು ಆಳಿದನು. ಹೂಷಾಮನು ಸತ್ತಾಗ ಅವನಿಗೆ ಬದಲಾಗಿ ಮೋವಾಬಿನ ಹೊಲದಲ್ಲಿ ಮಿದ್ಯಾನ್ಯರನ್ನು ಹೊಡೆದ ಬೆದದನ ಮಗನಾದ ಹದದನು ಆಳಿದನು. ಅವನ ಪಟ್ಟಣದ ಹೆಸರು ಅವೀತು. ಹದದನು ಸತ್ತ ತರುವಾಯ ಅವನಿಗೆ ಬದಲಾಗಿ ಮಸ್ರೇಕದವನಾದ ಸಮ್ಲಾಹನು ಆಳಿದನು. ಸಮ್ಲಾಹನು ಸತ್ತ ತರುವಾಯ ಅವನಿಗೆ ಬದಲಾಗಿ ನದಿಯ ತೀರದಲ್ಲಿರುವ ರೆಹೋಬೋತ್ ಊರಿನ ಸೌಲನು ಆಳಿದನು. ಸೌಲನು ಸತ್ತ ತರುವಾಯ ಅವನಿಗೆ ಬದಲಾಗಿ ಅಕ್ಬೋರನ ಮಗನಾದ ಬಾಳ್ಹ ನಾನನು ಆಳಿದನು. ಬಾಳ್ಹನಾನನು ಸತ್ತ ತರುವಾಯ ಅವನಿಗೆ ಬದಲಾಗಿ ಹದದನು ಆಳಿದನು. ಅವನ ಪಟ್ಟಣದ ಹೆಸರು ಪಾಗೀ. ಅವನ ಹೆಂಡತಿಯ ಹೆಸರು ಮೆಹೇಟಬೇಲಳು; ಅವಳು ಮಟ್ರೇದಳ ಮಗಳೂ ಮೆಜಾಹಾಬನ ಮೊಮ್ಮಗಳೂ ಆಗಿದ್ದಳು. ಹದದನು ಸತ್ತನು. ಎದೋಮ್ಯನ ಪ್ರಭುಗಳು ಯಾರಂದರೆ ತಿಮ್ನ ಪ್ರಭು, ಅಲ್ಯ ಪ್ರಭು, ಯೆತೇತ್ ಪ್ರಭು, ಒಹೊಲೀಬಾಮ ಪ್ರಭು, ಏಲ ಪ್ರಭು, ಪೀನೋನ್ ಪ್ರಭು, ಕೆನಜ್ ಪ್ರಭು, ತೇಮಾನ್ ಪ್ರಭು, ಮಿಬ್ಚಾರ ಪ್ರಭು, ಮಗ್ದಿಯೇಲ್ ಪ್ರಭು, ಗೀರಾಮ್ ಪ್ರಭು.ಇವರೇ ಎದೋಮ್ಯರ ಪ್ರಭುಗಳು. ಇವರೇ ಎದೋಮ್ಯರ ಪ್ರಭುಗಳು.
- Genesis 36:20–43 ಆದಿಕಾಂಡ 36:20–43ಹೋರಿಯನಾದ ಸೇಯಾರನ ಕುಮಾರರೂ ದೇಶದ ನಿವಾಸಿಗಳೂ ಯಾರಂದರೆ: ಲೋಟಾನ್ ಶೋಬಾಲ್ ಸಿಬೆಯೋನ್ ಅನಾಹ ದೀಶೋನ್ ಏಚೆರ್ ದೀಶಾನ್ ಇವರು ಎದೋಮ್ ದೇಶದಲ್ಲಿದ್ದ ಸೇಯಾರನ ಮಕ್ಕಳಾದ ಹೋರಿಯರ ಮುಖಂಡರು. ಲೋಟಾನನ ಕುಮಾರರು ಯಾರಂದರೆ: ಹೋರಿ ಹೇಮಾಮ್ ಲೋಟಾನನ ಸಹೋದರಿ ಯಾದ ತಿಮ್ನಾ. ಶೋಬಾಲನ ಮಕ್ಕಳು ಯಾರಂದರೆ: ಅಲ್ವಾನ್ ಮಾನಹತ್ ಗೇಬಾಲ್ ಶೆಫೋ ಮತ್ತು ಓನಾಮ್. ಸಿಬೆಯೋನನ ಮಕ್ಕಳು ಯಾರಂದರೆ: ಅಯ್ಯಾ ಮತ್ತು ಅನಾಹ ಎಂಬವರು. ತನ್ನ ತಂದೆಯಾದ ಸಿಬೆಯೋನನ ಕತ್ತೆಗಳನ್ನು ಕಾಯುವಾಗ ಅರಣ್ಯದಲ್ಲಿ ಹೇಸರಕತ್ತೆಗಳನ್ನು ಕಂಡುಕೊಂಡವನು ಈ ಅನಾಹನೇ. ಅನಾಹನ ಮಕ್ಕಳು ಯಾರಂದರೆ: ದೀಶೋನ್ ಮತ್ತು ಅನಾಹನ ಮಗಳಾದ ಒಹೊಲೀಬಾಮಳು. ದೀಶೋನನ ಮಕ್ಕಳು ಯಾರಂದರೆ: ಹೆಮ್ದಾನ್ ಎಷ್ಬಾನ್ ಇತ್ರಾನ್ ಕೆರಾನ್. ಏಚೆರನ ಮಕ್ಕಳು ಯಾರಂದರೆ: ಬಿಲ್ಹಾನ್ ಜಾವಾನ್ ಆಕಾನ್. ದೀಶಾನನ ಮಕ್ಕಳು ಯಾರಂದರೆ: ಊಚ್ ಅರಾನ್. ಹೋರಿಯರಿಂದ ಬಂದ ಮುಖಂಡರು ಯಾರಂದರೆ: ಲೋಟಾನ್ ಶೋಬಾಲ್ ಸಿಬೆಯೋನ್ ಅನಾಹ. ದೀಶೋನ್ ಏಚೆರ್ ದೀಶಾನ್ ಇವರೇ. ಇವರು ಸೇಯಾರ್ ದೇಶದಲ್ಲಿ ಮುಖಂಡರಾಗಿದ್ದ ಹೋರಿಯರಿಂದ ಬಂದ ಮುಖಂಡರು. ಇಸ್ರಾಯೇಲ್ ಮಕ್ಕಳನ್ನು ಯಾವ ಅರಸನೂ ಆಳುವದಕ್ಕಿಂತ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸರು ಇವರೇ. ಎದೋಮಿನಲ್ಲಿ ಬೆಯೋರನ ಮಗನಾದ ಬೆಲಗನು ಆಳಿದನು; ಅವನ ಪಟ್ಟಣದ ಹೆಸರು ದಿನ್ಹಾಬಾ. ಬೆಲಗನು ಸತ್ತ ಮೇಲೆ ಅವನ ಬದಲಾಗಿ ಬೊಚ್ರದವನಾದ ಜೆರಹನ ಮಗನಾದ ಯೋಬಾಬನು ಆಳಿದನು. ಯೋಬಾ ಬನು ಸತ್ತ ಮೇಲೆ ಅವನ ಬದಲಾಗಿ ತೇಮಾನೀಯ ದೇಶದ ಹುಷಾಮನು ಆಳಿದನು. ಹುಷಾಮನು ಸತ್ತ ಮೇಲೆ ಅವನ ಬದಲಾಗಿ ಮೋವಾಬ್ಯರ ಹೊಲದಲ್ಲಿ ಮಿದ್ಯಾನರನ್ನು ಹೊಡೆದ ಬೆದದನ ಮಗನಾದ ಹದದನು ಆಳಿದನು. ಅವನ ಪಟ್ಟಣದ ಹೆಸರು ಅವೀತ್. ಹದದನು ಸತ್ತಾಗ ಅವನ ಬದಲಾಗಿ ಮಸ್ರೇಕದವನಾದ ಸಮ್ಲಾಹನು ಆಳಿದನು. ಸಮ್ಲಾಹನು ಸತ್ತ ಮೇಲೆ ಅವನ ಬದಲಾಗಿ ನದಿಯ ಬಳಿಯಲ್ಲಿದ್ದ ರೆಹೋಬೋತೂರಿನವನಾದ ಸೌಲನು ಆಳಿದನು. ಸೌಲನು ಸತ್ತ ಮೇಲೆ ಅವನ ಬದಲಾಗಿ ಅಕ್ಬೋರನ ಮಗನಾದ ಬಾಳ್ಹಾನಾ ನನು ಆಳಿದನು. ಅಕ್ಬೋರನ ಮಗನಾದ ಬಾಳ್ಹಾನಾ ನನು ಸತ್ತ ಮೇಲೆ ಅವನ ಬದಲಾಗಿ ಹದರನು ಆಳಿದನು. ಅವನ ಪಟ್ಟಣದ ಹೆಸರು ಪಾಗು. ಅವನ ಹೆಂಡತಿಯ ಹೆಸರು ಮಹೇಟಬೇಲ್; ಈಕೆಯು ಮೇಜಾಹಾಬನ ಮಗಳಾದ ಮಟ್ರೇದಳ ಮಗಳು. ಕುಟುಂಬ ಸ್ಥಳ ಮತ್ತು ಹೆಸರುಗಳ ಪ್ರಕಾರವಾಗಿ ಏಸಾವನ ಮುಖಂಡರ ಹೆಸರುಗಳು ಯಾವವಂದರೆ: ತಿಮ್ನಾ ಅಲ್ವಾ ಯೆತೇತ. ಒಹೋಲೀಬಾಮ ಏಲಾ ಪೀನೋನ್. ಕೆನಜ್ ತೇಮಾನ್ ಮಿಪ್ಚಾರಮಗ್ದೀಯೇಲ್ ಗೀರಾಮ್. ತಮ್ಮ ಸ್ವಾಸ್ಥ್ಯದ ದೇಶದಲ್ಲಿ ವಾಸವಾಗಿದ್ದ ಪ್ರಕಾರ ಎದೋಮ್ಯರ ಮುಖಂಡರು ಇವರೇ. ಎದೋಮ್ಯರ ತಂದೆಯಾದ ಏಸಾವನು ಇವನೇ. ಮಗ್ದೀಯೇಲ್ ಗೀರಾಮ್. ತಮ್ಮ ಸ್ವಾಸ್ಥ್ಯದ ದೇಶದಲ್ಲಿ ವಾಸವಾಗಿದ್ದ ಪ್ರಕಾರ ಎದೋಮ್ಯರ ಮುಖಂಡರು ಇವರೇ. ಎದೋಮ್ಯರ ತಂದೆಯಾದ ಏಸಾವನು ಇವನೇ.
- Numbers 21:21–35 ಅರಣ್ಯಕಾಂಡ 21:21–35ಆಗ ಇಸ್ರಾಯೇಲ್ಯರು ಅಮೋರಿಯರ ಅರಸ ನಾದ ಸೀಹೋನನ ಬಳಿಗೆ ದೂತರನ್ನು ಕಳುಹಿಸಿ ಹೇಳಿದ್ದೇನಂದರೆ-- ನಾವು ನಿನ್ನ ದೇಶದಲ್ಲಿ ದಾಟಿ ಹೋಗಬೇಕು; ನಾವು ಹೊಲದಲ್ಲಾದರೂ ದ್ರಾಕ್ಷೇ ತೋಟದಲ್ಲಾದರೂ ತಿರುಗಿ ಕೊಳ್ಳದೆ ಬಾವಿಯ ನೀರನ್ನು ಕುಡಿಯದೆ ನಿನ್ನ ಮೇರೆಯನ್ನು ದಾಟುವ ವರೆಗೆ ರಾಜಮಾರ್ಗದಲ್ಲಿ ಹೋಗುತ್ತೇವೆ. ಆದರೆ ಸೀಹೋನನು ಇಸ್ರಾಯೇಲ್ಯರನ್ನು ತನ್ನ ಮೇರೆಯಲ್ಲಿ ದಾಟಗೊಡಿಸದೆ ತನ್ನ ಜನರೆಲ್ಲರನ್ನು ಕೂಡಿಸಿಕೊಂಡು ಇಸ್ರಾಯೇಲ್ಯರಿಗೆದುರಾಗಿ ಅರಣ್ಯಕ್ಕೆ ಹೊರಟನು; ಅವನು ಯಹಚಕ್ಕೆ ಬಂದು ಇಸ್ರಾಯೇಲ್ಯರ ಸಂಗಡ ಯುದ್ಧಮಾಡಿದನು. ಇಸ್ರಾಯೇಲ್ಯರು ಅವನನ್ನು ಕತ್ತಿಯಿಂದ ಹೊಡೆದು ಅವನ ದೇಶವನ್ನು ಅರ್ನೋನ್ ನದಿಯಿಂದ ಯಬ್ಬೋಕ್ ನದಿಯ ವರೆಗೂ ಅಮ್ಮೋನನ ಮಕ್ಕಳ ಮೇರೆಯ ವರೆಗೂ ಸ್ವಾಧೀನಮಾಡಿಕೊಂಡರು. ಅಮ್ಮೋನನ ಮಕ್ಕಳ ಮೇರೆ ಬಲವುಳ್ಳದ್ದಾಗಿತ್ತು. ಇಸ್ರಾಯೇಲ್ಯರು ಆ ಪಟ್ಟಣಗಳನ್ನೆಲ್ಲಾ ತೆಗೆದು ಕೊಂಡರು; ಇಸ್ರಾಯೇಲ್ಯರು ಅಮೋರಿಯರ ಸಮಸ್ತ ಪಟ್ಟಣಗಳಲ್ಲಿಯೂ ಹೆಷ್ಬೋನಿನಲ್ಲಿಯೂ ಅದರ ಸಮಸ್ತ ಗ್ರಾಮಗಳಲ್ಲಿಯೂ ವಾಸಮಾಡಿದರು. ಹೆಷ್ಬೋನು ಅಮೋರಿಯರ ಅರಸನಾದ ಸೀಹೋನನ ಪಟ್ಟಣವಾಗಿತ್ತು; ಅವನು ಮೋವಾಬ್ಯರ ಪೂರ್ವದ ಅರಸನ ಸಂಗಡ ಯುದ್ಧಮಾಡಿ ಅವನ ಸಮಸ್ತ ದೇಶವನ್ನು ಅರ್ನೋನ್ ನದಿಯ ಪರ್ಯಂತರ ಅವನಿಂದ ವಶಪಡಿಸಿಕೊಂಡನು. ಅವರು ಸಾಮತಿ ಗಳಲ್ಲಿ ಮಾತನಾಡಿ -- ಹೆಷ್ಬೋನಿಗೆ ಬನ್ನಿರಿ; ಸೀಹೋನನ ಪಟ್ಟಣವು ತಿರಿಗಿ ಕಟ್ಟಲ್ಪಟ್ಟು ಸಿದ್ಧವಾಗಲಿ. ಬೆಂಕಿ ಹೆಷ್ಬೋನಿನಿಂದಲೂ ಜ್ವಾಲೆಯು ಸೀಹೋನನ ಪಟ್ಟಣದಿಂದಲೂ ಹೊರಟು ಮೋವಾಬಿನ ಆರ್ ಎಂಬ ಪಟ್ಟಣವನ್ನೂ ಅರ್ನೋನಿನ ಎತ್ತರ ಸ್ಥಳಗಳ ಪ್ರಭುಗಳನ್ನೂ ದಹಿಸಿಬಿಟ್ಟಿತು. ಮೋವಾಬೇ, ನಿನಗೆ ಅಯ್ಯೋ! ಓ ಕೇಮೋಷಿನ ಜನವೇ, ನಿಮಗೆ ದುರ್ಗತಿ ಉಂಟಾಯಿತಲ್ಲಾ; ಅವನು ತಪ್ಪಿಸಿಕೊಂಡ ತನ್ನ ಕುಮಾರ ಕುಮಾರ್ತೆಯರನ್ನು ಅಮೋರಿಯರ ಅರಸನಾದ ಸೀಹೋನನ ಸೆರೆಗೆ ಕೊಟ್ಟನು. ನಾವು ಅವರ ಮೇಲೆ ಬಾಣಗಳನ್ನು ಎಸೆದೆವು; ಹೆಷ್ಬೋನು ದೀಬೋನಿನ ವರೆಗೂ ನಾಶವಾಯಿತು; ನಾವು ಅವ ರನ್ನು ಮೇದೆಬಾಗೆ ಮುಟ್ಟುವ ನೋಫಹದ ಮಟ್ಟಿಗೂ ಹಾಳುಮಾಡಿದೆವು ಅಂದರು. ಹಾಗೆ ಇಸ್ರಾಯೇ ಲ್ಯರು ಅಮೋರಿಯ ದೇಶದಲ್ಲಿ ವಾಸಮಾಡಿದರು. ಇದಲ್ಲದೆ ಮೋಶೆಯು ಯಗ್ಜೇರನ್ನು ಪಾಳತಿ ನೋಡುವದಕ್ಕೆ ಕಳುಹಿಸಿದನು; ಅವರು ಅವರ ಗ್ರಾಮ ಗಳನ್ನು ವಶಪಡಿಸಿಕೊಂಡು ಅಲ್ಲಿರುವ ಅಮೋರಿಯ ರನ್ನು ಹೊರಡಿಸಿಬಿಟ್ಟರು. ಆಗ ಅವರು ತಿರುಗಿ ಬಾಷಾನಿನ ಹಾದಿಯಲ್ಲಿ ಏರಿದರು; ಆಗ ಬಾಷಾನಿನ ಅರಸನಾದ ಓಗನು ಎದ್ರೈಯಲ್ಲಿ ಯುದ್ಧಮಾಡುವದಕ್ಕೆ ತನ್ನ ಸಮಸ್ತ ಜನರ ಸಂಗಡ ಅವರಿಗೆದುರಾಗಿ ಹೊರಟನು. ಕರ್ತನು ಮೋಶೆಯ ಸಂಗಡ ಹೇಳಿದ್ದೇನಂದರೆ--ನೀನು ಅವ ನಿಗೆ ಭಯಪಡಬೇಡ; ನಿನ್ನ ಕೈಯೊಳಗೆ ನಾನು ಅವನನ್ನೂ ಅವನ ಸಮಸ್ತ ಜನರನ್ನೂ ದೇಶವನ್ನೂ ಕೊಟ್ಟಿದ್ದೇನೆ. ಹೆಷ್ಬೋನಿನಲ್ಲಿ ವಾಸಮಾಡಿದ ಅಮೋರಿ ಯರ ಅರಸನಾದ ಸೀಹೋನನಿಗೆ ಮಾಡಿದ ಪ್ರಕಾರ ಅವನಿಗೆ ಮಾಡಬೇಕು.ಈ ಪ್ರಕಾರ ಅವರು ಅವ ನನ್ನೂ ಅವನ ಮಕ್ಕಳನ್ನೂ ಸಮಸ್ತ ಜನರನ್ನೂ ಅವನಿಗೆ ಒಬ್ಬನಾದರೂ ಉಳಿಯದಂತೆ ಹೊಡೆದು ಅವನ ದೇಶವನ್ನು ವಶಮಾಡಿಕೊಂಡರು. ಈ ಪ್ರಕಾರ ಅವರು ಅವ ನನ್ನೂ ಅವನ ಮಕ್ಕಳನ್ನೂ ಸಮಸ್ತ ಜನರನ್ನೂ ಅವನಿಗೆ ಒಬ್ಬನಾದರೂ ಉಳಿಯದಂತೆ ಹೊಡೆದು ಅವನ ದೇಶವನ್ನು ವಶಮಾಡಿಕೊಂಡರು.
Original words (Hebrew)
- Horims · H2752חֹרִי Chôrîy
- dwelt · H3427יָשַׁב yâshab
- Seir · H8165שֵׂעִיר Sêʻîyr
- beforetime · H6440פָּנִים pânîym
- children · H1121בֵּן bên
- Esau · H6215עֵשָׂו ʻÊsâv
- succeeded · H3423יָרַשׁ yârash
- destroyed · H8045שָׁמַד shâmad
- before · H6440פָּנִים pânîym
- dwelt · H3427יָשַׁב yâshab
- Israel · H3478יִשְׂרָאֵל Yisrâʼêl
- did · H6213עָשָׂה ʻâsâh
- land · H776אֶרֶץ ʼerets
- possession · H3425יְרֻשָּׁה yᵉrushshâh
- gave · H5414נָתַן nâthan