Deuteronomy · chapter 2 · verse 32
Deuteronomy 2:32 in Kannada
ಆಗ ಸೀಹೋನನು ತನ್ನ ಜನರೆಲ್ಲರ ಸಂಗಡ ಯುದ್ಧಮಾಡುವದಕ್ಕೆ ಯಹ ಜಿಗೆ ಸವಿಾಪದಲ್ಲಿ ನಮ್ಮೆದುರಿಗೆ ಹೊರಟನು.
Aaga seehonanu tanna janarellara sangada yuddhamaaduvadakke yaha jige saviాpadalli nammedurige horatanu.
Deuteronomy 2:32 in English
- King James Version (KJV)
- Then Sihon came out against us, he and all his people, to fight at Jahaz.
- World English Bible (WEB)
- Then Sihon came out against us, he and all his people, to battle at Jahaz.
- American Standard Version (ASV)
- Then Sihon came out against us, he and all his people, unto battle at Jahaz.
- Bible in Basic English (BBE)
- Then Sihon came out against us with all his people, to make an attack on us at Jahaz.
- Darby Translation (DBY)
- And Sihon came out against us for battle, he and all his people, to Jahaz.
- Webster's Bible (WBS)
- Then Sihon came out against us, he and all his people, to fight at Jahaz.
- Young's Literal Translation (YLT)
- 'And Sihon cometh out to meet us, he and all his people, to battle to Jahaz;
Read in context
- 30ಆದರೆ ಹೆಷ್ಬೋನಿನ ಅರಸ ನಾದ ಸೀಹೋನನು ನಮ್ಮನ್ನು ತನ್ನ ಬಳಿಯಿಂದ ದಾಟಿಹೋಗಲು ಮನಸ್ಸು ಮಾಡಲಿಲ್ಲ; ಯಾಕಂದರೆ ಅವನನ್ನು ನಿನ್ನ ಕೈಯಲ್ಲಿ ಒಪ್ಪಿಸುವ ಹಾಗೆ ನಿನ್ನ ದೇವರಾದ ಕರ್ತನು ಅವನ ಬುದ್ಧಿಯನ್ನು ಮಂಕು ಮಾಡಿ ಹೃದಯವನ್ನು ಕಠಿಣಪಡಿಸಿದನೆಂದು ಈಗಾ ಗಲೇ ಪ್ರಸಿದ್ಧವಾಗಿದೆ.
- 31ಇದಲ್ಲದೆ ಕರ್ತನು ನನಗೆ--ಇಗೋ, ಸೀಹೋ ನನನ್ನೂ ಅವನ ದೇಶವನ್ನೂ ನಿನ್ನ ಮುಂದೆ ಒಪ್ಪಿಸು ವದಕ್ಕೆ ಆರಂಭಮಾಡಿದ್ದೇನೆ; ಅವನ ದೇಶವನ್ನು ಸ್ವಾಸ್ತ್ಯವಾಗಿ ಹೊಂದುವ ಹಾಗೆ ಸ್ವತಂತ್ರಿಸಿಕೊಳ್ಳುವದಕ್ಕೆ ಆರಂಭಮಾಡು ಅಂದನು.
- 32ಆಗ ಸೀಹೋನನು ತನ್ನ ಜನರೆಲ್ಲರ ಸಂಗಡ ಯುದ್ಧಮಾಡುವದಕ್ಕೆ ಯಹ ಜಿಗೆ ಸವಿಾಪದಲ್ಲಿ ನಮ್ಮೆದುರಿಗೆ ಹೊರಟನು.
- 33ನಮ್ಮ ದೇವರಾದ ಕರ್ತನು ಅವನನ್ನು ನಮ್ಮ ಕೈಗೆ ಕೊಟ್ಟುಬಿಟ್ಟಿ ದ್ದರಿಂದ ಅವನನ್ನೂ ಅವನ ಮಕ್ಕಳನ್ನೂ ಅವನ ಜನರೆಲ್ಲರನ್ನೂ ಹೊಡೆದೆವು;
- 34ಆ ಕಾಲದಲ್ಲಿ ಅವನ ಪಟ್ಟಣಗಳನ್ನೆಲ್ಲಾ ತಕ್ಕೊಂಡು ಪ್ರತಿಯೊಂದು ಪಟ್ಟಣದ ಗಂಡಸರನ್ನೂ ಹೆಂಗಸರನ್ನೂ ಚಿಕ್ಕವರನ್ನೂ ನಿರ್ಮೂಲ ಮಾಡಿದೆವು, ಒಬ್ಬರನ್ನೂ ಉಳಿಸಲಿಲ್ಲ.
Cross references
- Numbers 21:23–30 ಅರಣ್ಯಕಾಂಡ 21:23–30ಆದರೆ ಸೀಹೋನನು ಇಸ್ರಾಯೇಲ್ಯರನ್ನು ತನ್ನ ಮೇರೆಯಲ್ಲಿ ದಾಟಗೊಡಿಸದೆ ತನ್ನ ಜನರೆಲ್ಲರನ್ನು ಕೂಡಿಸಿಕೊಂಡು ಇಸ್ರಾಯೇಲ್ಯರಿಗೆದುರಾಗಿ ಅರಣ್ಯಕ್ಕೆ ಹೊರಟನು; ಅವನು ಯಹಚಕ್ಕೆ ಬಂದು ಇಸ್ರಾಯೇಲ್ಯರ ಸಂಗಡ ಯುದ್ಧಮಾಡಿದನು. ಇಸ್ರಾಯೇಲ್ಯರು ಅವನನ್ನು ಕತ್ತಿಯಿಂದ ಹೊಡೆದು ಅವನ ದೇಶವನ್ನು ಅರ್ನೋನ್ ನದಿಯಿಂದ ಯಬ್ಬೋಕ್ ನದಿಯ ವರೆಗೂ ಅಮ್ಮೋನನ ಮಕ್ಕಳ ಮೇರೆಯ ವರೆಗೂ ಸ್ವಾಧೀನಮಾಡಿಕೊಂಡರು. ಅಮ್ಮೋನನ ಮಕ್ಕಳ ಮೇರೆ ಬಲವುಳ್ಳದ್ದಾಗಿತ್ತು. ಇಸ್ರಾಯೇಲ್ಯರು ಆ ಪಟ್ಟಣಗಳನ್ನೆಲ್ಲಾ ತೆಗೆದು ಕೊಂಡರು; ಇಸ್ರಾಯೇಲ್ಯರು ಅಮೋರಿಯರ ಸಮಸ್ತ ಪಟ್ಟಣಗಳಲ್ಲಿಯೂ ಹೆಷ್ಬೋನಿನಲ್ಲಿಯೂ ಅದರ ಸಮಸ್ತ ಗ್ರಾಮಗಳಲ್ಲಿಯೂ ವಾಸಮಾಡಿದರು. ಹೆಷ್ಬೋನು ಅಮೋರಿಯರ ಅರಸನಾದ ಸೀಹೋನನ ಪಟ್ಟಣವಾಗಿತ್ತು; ಅವನು ಮೋವಾಬ್ಯರ ಪೂರ್ವದ ಅರಸನ ಸಂಗಡ ಯುದ್ಧಮಾಡಿ ಅವನ ಸಮಸ್ತ ದೇಶವನ್ನು ಅರ್ನೋನ್ ನದಿಯ ಪರ್ಯಂತರ ಅವನಿಂದ ವಶಪಡಿಸಿಕೊಂಡನು. ಅವರು ಸಾಮತಿ ಗಳಲ್ಲಿ ಮಾತನಾಡಿ -- ಹೆಷ್ಬೋನಿಗೆ ಬನ್ನಿರಿ; ಸೀಹೋನನ ಪಟ್ಟಣವು ತಿರಿಗಿ ಕಟ್ಟಲ್ಪಟ್ಟು ಸಿದ್ಧವಾಗಲಿ. ಬೆಂಕಿ ಹೆಷ್ಬೋನಿನಿಂದಲೂ ಜ್ವಾಲೆಯು ಸೀಹೋನನ ಪಟ್ಟಣದಿಂದಲೂ ಹೊರಟು ಮೋವಾಬಿನ ಆರ್ ಎಂಬ ಪಟ್ಟಣವನ್ನೂ ಅರ್ನೋನಿನ ಎತ್ತರ ಸ್ಥಳಗಳ ಪ್ರಭುಗಳನ್ನೂ ದಹಿಸಿಬಿಟ್ಟಿತು. ಮೋವಾಬೇ, ನಿನಗೆ ಅಯ್ಯೋ! ಓ ಕೇಮೋಷಿನ ಜನವೇ, ನಿಮಗೆ ದುರ್ಗತಿ ಉಂಟಾಯಿತಲ್ಲಾ; ಅವನು ತಪ್ಪಿಸಿಕೊಂಡ ತನ್ನ ಕುಮಾರ ಕುಮಾರ್ತೆಯರನ್ನು ಅಮೋರಿಯರ ಅರಸನಾದ ಸೀಹೋನನ ಸೆರೆಗೆ ಕೊಟ್ಟನು. ನಾವು ಅವರ ಮೇಲೆ ಬಾಣಗಳನ್ನು ಎಸೆದೆವು; ಹೆಷ್ಬೋನು ದೀಬೋನಿನ ವರೆಗೂ ನಾಶವಾಯಿತು; ನಾವು ಅವ ರನ್ನು ಮೇದೆಬಾಗೆ ಮುಟ್ಟುವ ನೋಫಹದ ಮಟ್ಟಿಗೂ ಹಾಳುಮಾಡಿದೆವು ಅಂದರು.
- Psalm 120:7 ಕೀರ್ತನೆಗಳು 120:7ನಾನು ಸಮಾಧಾನವಾಗಿದ್ದೇನೆ; ಆದರೆ ನಾನು ಮಾತಾಡಲು ಅವರು ಯುದ್ಧಮಾಡು ವದಕ್ಕಿದ್ದಾರೆ.
- Psalm 135:11 ಕೀರ್ತನೆಗಳು 135:11ಅಮೋರಿ ಯರ ಅರಸನಾದ ಸೀಹೋನನನ್ನೂ ಬಾಷಾನಿನ ಅರಸನಾದ ಓಗನನ್ನೂ ಕಾನಾನಿನ ಎಲ್ಲಾ ರಾಜ್ಯ ಗಳನ್ನೂ ಹೊಡೆದನು.
- Nehemiah 9:22 ನೆಹೆಮೀಯ 9:22ಇದಲ್ಲದೆ ನೀನು ಅವರಿಗೆ ರಾಜ್ಯಗಳನ್ನೂ ಜನಾಂಗಗಳನ್ನೂ ಒಪ್ಪಿಸಿಕೊಟ್ಟು ಅವರಿಗೆ ಮೇರೆಗಳನ್ನು ವಿಭಾಗಿಸಿಕೊಟ್ಟಿ. ಹೀಗೆಯೇ ಅವರು ಸೀಹೋನನ ದೇಶವನ್ನೂ ಹೆಷ್ಬೋನಿನ ಅರಸನ ದೇಶವನ್ನೂ ಬಾಷಾ ನಿನ ಅರಸನಾದ ಓಗನ ದೇಶವನ್ನು ಸ್ವಾಧೀನಮಾಡಿ ಕೊಂಡರು.
- Judges 11:20–23 ನ್ಯಾಯಸ್ಥಾಪಕರು 11:20–23ಆದರೆ ಸೀಹೋ ನನು ತನ್ನ ಮೇರೆಯನ್ನು ದಾಟುವದಕ್ಕೆ ಇಸ್ರಾಯೇಲನ್ನು ನಂಬದೆ ತನ್ನ ಜನವನ್ನೆಲ್ಲಾ ಕೂಡಿಸಿ ಯಹಚಿನಲ್ಲಿ ದಂಡಿಳಿದು ಇಸ್ರಾಯೇಲಿಗೆ ವಿರೋಧವಾಗಿ ಯುದ್ಧ ಮಾಡಿದನು. ಆಗ ಇಸ್ರಾಯೇಲಿನ ದೇವರಾದ ಕರ್ತನು ಸೀಹೋನನನ್ನೂ ಅವನ ಸಕಲ ಜನರನ್ನೂ ಇಸ್ರಾಯೇಲಿನ ಕೈಯಲ್ಲಿ ಒಪ್ಪಿಸಿಕೊಟ್ಟನು. ಇವರು ಅವರನ್ನು ಹೊಡೆದುಬಿಟ್ಟರು. ಹಾಗೆಯೇ ಇಸ್ರಾಯೇ ಲ್ಯರು ಆ ದೇಶದಲ್ಲಿ ವಾಸಿಸಿದ್ದ ಅಮೋರಿಯರ ದೇಶ ವನ್ನೆಲ್ಲಾ ಸ್ವಾಧೀನಮಾಡಿಕೊಂಡರು. ಅರ್ನೋನಿ ನಿಂದ ಯಬ್ಬೋಕಿನ ವರೆಗೂ ಅರಣ್ಯದಿಂದ ಯೊರ್ದ ನಿನ ವರೆಗೂ ಇರುವ ಅಮೋರಿಯರ ಮೇರೆಗಳನ್ನೆಲ್ಲಾ ಅವರು ಸ್ವಾಧೀನಮಾಡಿಕೊಂಡರು. ಈಗ ಇಸ್ರಾ ಯೇಲಿನ ದೇವರಾದ ಕರ್ತನು ಅಮೋರಿಯರನ್ನು ತನ್ನ ಜನವಾದ ಇಸ್ರಾಯೇಲಿನ ಮುಂದೆ ಹೊರಡಿಸಿ ರುವಾಗ ನೀನು ಆ ದೇಶವನ್ನು ಸ್ವಾಧೀನಮಾಡಿಕೊಳ್ಳು ವಿಯೋ?
- Psalm 136:19 ಕೀರ್ತನೆಗಳು 136:19ಅಮೋರಿಯರ ಅರಸನಾದ ಸೀಹೋನನು ಒಬ್ಬ; ಆತನ ಕರುಣೆಯು ಎಂದೆಂದಿಗೂ ಅದೆ.