Deuteronomy · chapter 2 · verse 33
Deuteronomy 2:33 in Kannada
ನಮ್ಮ ದೇವರಾದ ಕರ್ತನು ಅವನನ್ನು ನಮ್ಮ ಕೈಗೆ ಕೊಟ್ಟುಬಿಟ್ಟಿ ದ್ದರಿಂದ ಅವನನ್ನೂ ಅವನ ಮಕ್ಕಳನ್ನೂ ಅವನ ಜನರೆಲ್ಲರನ್ನೂ ಹೊಡೆದೆವು;
Namma devaraada kartanu avanannu namma kaige kottubitti ddarinda avanannoo avana makkalannoo avana janarellarannoo hodedevu;
Deuteronomy 2:33 in English
- King James Version (KJV)
- And the LORD our God delivered him before us; and we smote him, and his sons, and all his people.
- World English Bible (WEB)
- The LORD our God delivered him up before us; and we struck him, his sons, and all his people.
- American Standard Version (ASV)
- And Jehovah our God delivered him up before us; and we smote him, and his sons, and all his people.
- Bible in Basic English (BBE)
- And the Lord our God gave him into our hands; and we overcame him and his sons and all his people.
- Darby Translation (DBY)
- But Jehovah our God gave him up before us; and we smote him, and his sons, and his whole people.
- Webster's Bible (WBS)
- And the LORD our God delivered him before us; and we smote him, and his sons, and all his people.
- Young's Literal Translation (YLT)
- and Jehovah our God giveth him before us, and we smite him, and his sons, and all his people;
Read in context
- 31ಇದಲ್ಲದೆ ಕರ್ತನು ನನಗೆ--ಇಗೋ, ಸೀಹೋ ನನನ್ನೂ ಅವನ ದೇಶವನ್ನೂ ನಿನ್ನ ಮುಂದೆ ಒಪ್ಪಿಸು ವದಕ್ಕೆ ಆರಂಭಮಾಡಿದ್ದೇನೆ; ಅವನ ದೇಶವನ್ನು ಸ್ವಾಸ್ತ್ಯವಾಗಿ ಹೊಂದುವ ಹಾಗೆ ಸ್ವತಂತ್ರಿಸಿಕೊಳ್ಳುವದಕ್ಕೆ ಆರಂಭಮಾಡು ಅಂದನು.
- 32ಆಗ ಸೀಹೋನನು ತನ್ನ ಜನರೆಲ್ಲರ ಸಂಗಡ ಯುದ್ಧಮಾಡುವದಕ್ಕೆ ಯಹ ಜಿಗೆ ಸವಿಾಪದಲ್ಲಿ ನಮ್ಮೆದುರಿಗೆ ಹೊರಟನು.
- 33ನಮ್ಮ ದೇವರಾದ ಕರ್ತನು ಅವನನ್ನು ನಮ್ಮ ಕೈಗೆ ಕೊಟ್ಟುಬಿಟ್ಟಿ ದ್ದರಿಂದ ಅವನನ್ನೂ ಅವನ ಮಕ್ಕಳನ್ನೂ ಅವನ ಜನರೆಲ್ಲರನ್ನೂ ಹೊಡೆದೆವು;
- 34ಆ ಕಾಲದಲ್ಲಿ ಅವನ ಪಟ್ಟಣಗಳನ್ನೆಲ್ಲಾ ತಕ್ಕೊಂಡು ಪ್ರತಿಯೊಂದು ಪಟ್ಟಣದ ಗಂಡಸರನ್ನೂ ಹೆಂಗಸರನ್ನೂ ಚಿಕ್ಕವರನ್ನೂ ನಿರ್ಮೂಲ ಮಾಡಿದೆವು, ಒಬ್ಬರನ್ನೂ ಉಳಿಸಲಿಲ್ಲ.
- 35ಪಶುಗಳನ್ನು ಮಾತ್ರ ನಮಗೆ ಸುಲುಕೊಂಡು ಪಟ್ಟಣಗಳನ್ನು ಕೊಳ್ಳೆ ಹೊಡೆದೆವು.
Cross references
- Deuteronomy 7:2 ಧರ್ಮೋಪದೇಶಕಾಂಡ 7:2ನಿನ್ನ ದೇವರಾದ ಕರ್ತನು ಅವರನ್ನು ನಿನ್ನ ಮುಂದೆ ಒಪ್ಪಿಸಲು ನೀನು ಅವರನ್ನು ಹೊಡೆದು ಸಂಪೂರ್ಣವಾಗಿ ನಿರ್ಮೂಲ ಮಾಡಬೇಕು. ಅವರ ಸಂಗಡ ಒಡಂಬಡಿಕೆ ಮಾಡಿ ಕೊಳ್ಳಬಾರದು. ಇಲ್ಲವೆ ಅವರಿಗೆ ದಯೆತೋರಿಸ ಬಾರದು.
- Joshua 21:44 ಯೆಹೋಶುವ 21:44ಕರ್ತನು ಅವರ ತಂದೆಗಳಿಗೆ ಆಣೆ ಇಟ್ಟ ಪ್ರಕಾರವೆಲ್ಲಾ ಅವರ ಸುತ್ತಲೂ ಅವರಿಗೆ ವಿಶ್ರಾಂತಿ ಕೊಟ್ಟನು; ಅವರ ಎಲ್ಲಾ ಶತ್ರುಗಳಲ್ಲಿ ಒಬ್ಬನಾದರೂ ಅವರ ಮುಂದೆ ನಿಲ್ಲಲಿಲ್ಲ; ಅವರ ಶತ್ರುಗಳನ್ನೆಲ್ಲಾ ಕರ್ತನು ಅವರ ಕೈಗಳಿಗೆ ಒಪ್ಪಿಸಿದನು.ಕರ್ತನು ಇಸ್ರಾಯೇಲ್ ಮನೆಗೆ ಹೇಳಿದ ಒಳ್ಳೇ ವಿಷಯಗಳಲ್ಲಿ ಒಂದಾದರೂ ಬಿದ್ದು ಹೋಗಲಿಲ್ಲ; ಎಲ್ಲಾ ನೆರವೇರಿದವು.
- Numbers 21:24 ಅರಣ್ಯಕಾಂಡ 21:24ಇಸ್ರಾಯೇಲ್ಯರು ಅವನನ್ನು ಕತ್ತಿಯಿಂದ ಹೊಡೆದು ಅವನ ದೇಶವನ್ನು ಅರ್ನೋನ್ ನದಿಯಿಂದ ಯಬ್ಬೋಕ್ ನದಿಯ ವರೆಗೂ ಅಮ್ಮೋನನ ಮಕ್ಕಳ ಮೇರೆಯ ವರೆಗೂ ಸ್ವಾಧೀನಮಾಡಿಕೊಂಡರು. ಅಮ್ಮೋನನ ಮಕ್ಕಳ ಮೇರೆ ಬಲವುಳ್ಳದ್ದಾಗಿತ್ತು.
- Judges 7:2 ನ್ಯಾಯಸ್ಥಾಪಕರು 7:2ಆಗ ಕರ್ತನು ಗಿದ್ಯೋನನಿಗೆ--ನಾನು ಮಿದ್ಯಾನ್ಯ ರನ್ನು ಜನರ ಕೈಗಳಿಗೆ ಒಪ್ಪಿಸಿಕೊಡುವದಕ್ಕೆ ನಿನ್ನ ಸಂಗಡ ಇರುವ ಜನರು ಬಹಳವಾಗಿದ್ದಾರೆ; ಇಸ್ರಾಯೇಲ್ಯರುನನ್ನ ಕೈ ನನ್ನನ್ನು ರಕ್ಷಿಸಿತು ಎಂದು ನನಗೆ ವಿರೋಧವಾಗಿ ಹೆಚ್ಚಳ ಪಟ್ಟಾರು.
- Joshua 10:30–42 ಯೆಹೋಶುವ 10:30–42ಕರ್ತನು ಅದನ್ನೂ ಅದರ ಅರಸನನ್ನೂ ಇಸ್ರಾ ಯೇಲಿನ ಕೈಯಲ್ಲಿ ಒಪ್ಪಿಸಿಕೊಟ್ಟನು; ಅವನು ಅದನ್ನೂ ಅದರಲ್ಲಿರುವ ಎಲ್ಲಾ ಪ್ರಾಣಗಳನ್ನೂ ನಾಶಮಾಡಿದನು. ಅದರಲ್ಲಿ ಒಬ್ಬರನ್ನಾದರೂ ಉಳಿಸದೆ ಕತ್ತಿಯಿಂದ ಹೊಡೆದು ಯೆರಿಕೋವಿನ ಅರಸನಿಗೆ ಮಾಡಿದ ಹಾಗೆ ಅದರ ಅರಸನಿಗೂ ಮಾಡಿದನು. ಯೆಹೋಶುವನು ಇಸ್ರಾಯೇಲ್ಯರ ಸಹಿತವಾಗಿ ಲಿಬ್ನದಿಂದ ಲಾಕೀಷಿಗೆ ಹೊರಟು ಅದರ ಎದುರಿಗೆ ಪಾಳೆಯ ಮಾಡಿಕೊಂಡು ಅದರ ಮೇಲೆ ಯುದ್ಧ ಮಾಡಿದನು. ಕರ್ತನು ಲಾಕೀಷನ್ನು ಇಸ್ರಾಯೇಲಿನ ಕೈಯಲ್ಲಿ ಒಪ್ಪಿಸಿ ಕೊಟ್ಟನು. ಅವನು ಅದನ್ನು ಎರಡನೇ ದಿನದಲ್ಲಿ ಹಿಡಿದು ಲಿಬ್ನಕ್ಕೆ ಮಾಡಿದಂತೆ ಸರಿಯಾಗಿ ಅದನ್ನೂ ಅದರಲ್ಲಿರುವ ಎಲ್ಲಾ ಪ್ರಾಣಗಳನ್ನೂ ಕತ್ತಿ ಯಿಂದ ಹೊಡೆದನು. ಆಗ ಗೆಜೆರಿನ ಅರಸನಾದ ಹೋರಾಮನು ಲಾಕೀಷಿಗೆ ಸಹಾಯಮಾಡಲು ಬಂದನು. ಆದರೆ ಒಬ್ಬನಾದರೂ ಉಳಿಯದಂತೆ ಯೆಹೋಶುವನು ಅವನನ್ನೂ ಅವನ ಜನರನ್ನೂ ಹೊಡೆದುಬಿಟ್ಟನು. ಯೆಹೋಶುವನೂ ಅವನ ಸಂಗಡ ಸಮಸ್ತ ಇಸ್ರಾಯೇಲೂ ಲಾಕೀಷಿನಿಂದ ಎಗ್ಲೋನಿಗೆ ಹೊರಟು ಅದಕ್ಕೆದುರಾಗಿ ಪಾಳೆಯಮಾಡಿಕೊಂಡು ಅದರ ಮೇಲೆ ಯುದ್ಧಮಾಡಿ ಅದೇ ದಿನದಲ್ಲಿ ಅದನ್ನು ಹಿಡಿದು ಅದನ್ನು ಕತ್ತಿಯಿಂದ ಹೊಡೆದರು. ಅವನು ಲಾಕೀಷಿಗೆ ಮಾಡಿದ್ದೆಲ್ಲಾದರ ಹಾಗೆ ಅದಕ್ಕೆ ಮಾಡಿ ಅದೇ ದಿನದಲ್ಲಿ ಅದರಲ್ಲಿರುವ ಸಕಲ ಪ್ರಾಣಗಳನ್ನು ಸಂಪೂರ್ಣವಾಗಿ ನಾಶಮಾಡಿದನು. ಯೆಹೋಶುವನು ಸಮಸ್ತ ಇಸ್ರಾಯೇಲಿನ ಸಂಗಡ ಎಗ್ಲೋನಿನಿಂದ ಹೆಬ್ರೋನಿಗೆ ಹೊರಟು ಹೋಗಿ ಮೇಲೆ ಯುದ್ಧಮಾಡಿ ಅದನ್ನು ಹಿಡಿದು ಅದನ್ನೂ ಅದರ ಅರಸನನ್ನೂ ಅದರ ಸಮಸ್ತ ಪಟ್ಟಣ ಗಳನ್ನೂ ಅವುಗಳಲ್ಲಿರುವ ಸಮಸ್ತ ಪ್ರಾಣಗಳನ್ನೂ ಕತ್ತಿಯಿಂದ ಹೊಡೆದು ಎಗ್ಲೋನಿಗೆ ಮಾಡಿದ್ದೆಲ್ಲಾ ದರ ಹಾಗೆ ಒಬ್ಬನನ್ನಾದರೂ ಉಳಿಸದೆ ಅದನ್ನೂ ಅದರಲ್ಲಿರುವ ಎಲ್ಲಾ ಪ್ರಾಣಗಳನ್ನೂ ಸಂಪೂರ್ಣ ನಾಶಮಾಡಿದನು. ಯೆಹೋಶುವನು ಸಮಸ್ತ ಇಸ್ರಾಯೇಲಿನ ಕೂಡ ದೆಬೀರಕ್ಕೆ ತಿರುಗಿಕೊಂಡು ಅದರ ಮೇಲೆ ಯುದ್ಧಮಾಡಿ ಅದನ್ನೂ ಅದರ ಅರಸನನ್ನೂ ಸಮಸ್ತ ಪಟ್ಟಣ ಗಳನ್ನೂ ಹಿಡಿದು ಅವುಗಳನ್ನು ಕತ್ತಿಯಿಂದ ಹೊಡೆದು ಅದರಲ್ಲಿರುವ ಸಮಸ್ತ ಪ್ರಾಣಗಳನ್ನು ಒಬ್ಬನನ್ನಾ ದರೂ ಉಳಿಸದೆ ಸಂಪೂರ್ಣ ನಾಶಮಾಡಿದನು. ಹೆಬ್ರೋನಿಗೂ ಲಿಬ್ನಕ್ಕೂ ಅದರ ಅರಸನಿಗೂ ಮಾಡಿದ ಹಾಗೆಯೇ ದೆಬೀರಕ್ಕೂ ಅದರ ಅರಸನಿಗೂ ಮಾಡಿದನು. ಹೀಗೆ ಯೆಹೋಶುವನು ಸಮಸ್ತ ಬೆಟ್ಟಗಳ ದೇಶವನ್ನೂ ತೆಂಕಣ ದೇಶವನ್ನೂ ತಗ್ಗಿನ ದೇಶವನ್ನೂ ನೀರು ಬುಗ್ಗೆಗಳ ದೇಶವನ್ನೂ ಅವುಗಳ ಅರಸು ಗಳೆಲ್ಲರನ್ನೂ ಒಬ್ಬನನ್ನಾದರೂ ಉಳಿಸದೆ ಹೊಡೆದು ಇಸ್ರಾಯೇಲಿನ ದೇವರಾದ ಕರ್ತನು ಆಜ್ಞಾಪಿಸಿದ ಹಾಗೆಯೇ ಶ್ವಾಸವುಳ್ಳದ್ದನ್ನೆಲ್ಲಾ ಸಂಪೂರ್ಣವಾಗಿ ನಾಶ ಮಾಡಿದನು. ಯೆಹೋಶುವನು ಕಾದೇಶ್ ಬರ್ನೇಯದಿಂದ ಗಾಜದ ವರೆಗೂ ಇರುವವರನ್ನೂ ಗೋಷೆನಿನ ಸಮಸ್ತ ದೇಶವನ್ನೂ ಗಿಬ್ಯೋನಿನ ವರೆಗೆ ಹೊಡೆದುಬಿಟ್ಟನು. ಯೆಹೋಶುವನು ಈ ಸಮಸ್ತ ಅರಸುಗಳನ್ನೂ ಅವರ ದೇಶವನ್ನೂ ಒಂದೇ ಸಾರಿ ತೆಗೆದುಕೊಂಡನು. ಯಾಕಂದರೆ ಇಸ್ರಾಯೇಲಿನ ದೇವ ರಾದ ಕರ್ತನು ಇಸ್ರಾಯೇಲಿಗೋಸ್ಕರ ಯುದ್ಧ ಮಾಡಿದನು.ಆಗ ಯೆಹೋಶುವನು ಇಸ್ರಾಯೇಲ್ಯ ರೆಲ್ಲರ ಸಂಗಡ ಗಿಲ್ಗಾಲಿನಲ್ಲಿರುವ ಪಾಳೆಯಕ್ಕೆ ಹಿಂತಿರುಗಿ ಬಂದನು.
- Deuteronomy 29:7–8 ಧರ್ಮೋಪದೇಶಕಾಂಡ 29:7–8ನೀವು ಈ ಸ್ಥಳಕ್ಕೆ ಬಂದಾಗ ಹೆಷ್ಬೋನಿನ ಅರಸನಾದ ಸೀಹೋನನೂ ಬಾಷಾನಿನ ಅರಸನಾದ ಓಗನೂ ನಮ್ಮೆದುರಿಗೆ ಯುದ್ಧಕ್ಕೆ ಬರಲಾಗಿ ನಾವು ಅವರನ್ನು ಹೊಡೆದು ಅವರ ದೇಶವನ್ನು ತಕ್ಕೊಂಡು ರೂಬೇನ್ಯರಿಗೂ ಗಾದನವರಿಗೂ ಮನಸ್ಸೆಯ ಅರ್ಧ ಗೋತ್ರಕ್ಕೂ ಸ್ವಾಸ್ತ್ಯವಾಗಿ ಕೊಟ್ಟೆವು.
- Deuteronomy 3:2–3 ಧರ್ಮೋಪದೇಶಕಾಂಡ 3:2–3ಆಗ ಕರ್ತನು ನನಗೆ--ಅವನಿಗೆ ಭಯಪಡಬೇಡ; ಅವ ನನ್ನೂ ಅವನ ಜನರೆಲ್ಲರನ್ನೂ ಅವನ ದೇಶವನ್ನೂ ನಿನ್ನ ಕೈಯಲ್ಲಿ ಒಪ್ಪಿಸುತ್ತೇನೆ; ನೀನು ಹೆಷ್ಬೋನಿನಲ್ಲಿ ವಾಸವಾಗಿದ್ದ ಅಮೋರಿಯರ ಅರಸನಾದ ಸೀಹೋನ ನಿಗೆ ಮಾಡಿದ ಪ್ರಕಾರ ಅವನಿಗೆ ಮಾಡಬೇಕು ಅಂದನು. ಈ ಪ್ರಕಾರ ನಮ್ಮ ದೇವರಾದ ಕರ್ತನು ಬಾಷಾನಿನ ಅರಸನಾದ ಓಗನನ್ನೂ ಅವನ ಜನರೆಲ್ಲ ರನ್ನೂ ನಮ್ಮ ಕೈಯಲ್ಲಿ ಒಪ್ಪಿಸಿದನು; ಒಬ್ಬನಾದರೂ ತಪ್ಪಿಸಿಕೊಂಡು ಅವನಿಗೆ ಉಳಿಯದೆ ಹೋಗುವ ವರೆಗೆ ಅವನನ್ನು ಹೊಡೆದೆವು.
- Genesis 14:20 ಆದಿಕಾಂಡ 14:20ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ ಮಹೋನ್ನತ ನಾದ ದೇವರು ಸ್ತುತಿಹೊಂದಲಿ ಅಂದನು. ಅಬ್ರಾ ಮನು ಅವನಿಗೆ ಎಲ್ಲಾದರಲ್ಲಿ ದಶಮಭಾಗವನ್ನು ಕೊಟ್ಟನು.
- Deuteronomy 20:16 ಧರ್ಮೋಪದೇಶಕಾಂಡ 20:16ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ಈ ಜನಗಳ ಪಟ್ಟಣಗಳಲ್ಲಿ ಮಾತ್ರ ಶ್ವಾಸ ವುಳ್ಳ ಯಾವದನ್ನಾದರೂ ಉಳಿಸಬಾರದು.
- Judges 1:4 ನ್ಯಾಯಸ್ಥಾಪಕರು 1:4ಯೂದನು ಹೋದಾಗ ಕರ್ತನು ಕಾನಾನ್ಯರನ್ನೂ ಪೆರಿಜ್ಜೀಯರನ್ನೂ ಅವರ ಕೈಯಲ್ಲಿ ಒಪ್ಪಿಸಿಕೊಟ್ಟನು. ಬೆಜೆಕಿನಲ್ಲಿ ಇವರು ಅವರಲ್ಲಿ ಹತ್ತು ಸಾವಿರ ಜನರನ್ನು ಕೊಂದರು.