Deuteronomy · chapter 21 · verse 22
Deuteronomy 21:22 in Kannada
ಇದಲ್ಲದೆ ಒಬ್ಬ ಮನುಷ್ಯನ ಮೇಲೆ ಮರಣಕ್ಕೆ ಯೋಗ್ಯವಾದ ಪಾಪವಿರುವದರಿಂದ ಅವನಿಗೆ ಮರಣ ವನ್ನು ವಿಧಿಸಿ ಮರಕ್ಕೆ ತೂಗುಹಾಕಿದ್ದಾದರೆಅವನ ಹೆಣವು ರಾತ್ರಿಯಲ್ಲಿ ಮರದ ಮೇಲಿರಬಾರದು; ಅವನನ್ನು ಹೇಗಾದರೂ ಅದೇ ದಿವಸದಲ್ಲಿ ಹೂಣಿಡ ಬೇಕು; (ಯಾಕಂದರೆ ತೂಗಾಡುವವನು ದೇವರಿಂದ ಶಾಪಗ್ರಸ್ತನಾಗಿದ್ದಾನೆ); ಆದರೆ ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ಭೂಮಿಯು ಅಶುದ್ಧವಾಗಬಾರದು.
Idallade obba manushyana mele maranakke yogyavaada paapaviruvadarinda avanige marana vannu vidhisi marakke tooguhaakiddaadareavana henavu raatriyalli marada melirabaaradu; avanannu hegaadaroo ade divasadalli hoonida beku; (yaakandare toogaaduvavanu devarinda shaapagrastanaagiddaane); aadare ninna devaraada kartanu ninage svaastyavaagi koduva bhoomiyu ashuddhavaagabaaradu.
Deuteronomy 21:22 in English
- King James Version (KJV)
- And if a man have committed a sin worthy of death, and he be to be put to death, and thou hang him on a tree:
- World English Bible (WEB)
- If a man has committed a sin worthy of death, and he is put to death, and you hang him on a tree,
- American Standard Version (ASV)
- And if a man have committed a sin worthy of death, and he be put to death, and thou hang him on a tree;
- Bible in Basic English (BBE)
- If a man does a crime for which the punishment is death, and he is put to death by hanging him on a tree;
- Darby Translation (DBY)
- And if a man have committed a sin worthy of death, and he be put to death, and thou have hanged him on a tree,
- Webster's Bible (WBS)
- And if a man shall have committed a sin worthy of death, and he must be put to death, and thou shalt hang him on a tree:
- Young's Literal Translation (YLT)
- 'And when there is in a man a sin — a cause of death, and he hath been put to death, and thou hast hanged him on a tree,
Read in context
- 20ಪಟ್ಟಣದ ಹಿರಿಯರಿಗೆ--ಈ ನಮ್ಮ ಮಗನು ಮೊಂಡನೂ ತಿರುಗಿ ಬೀಳುವವನೂ ನಮ್ಮ ಮಾತು ಕೇಳದವನೂ ಹೊಟ್ಟೇ ಬಾಕನೂ ಕುಡಿಯುವವನೂ ಆಗಿದ್ದಾನೆ ಎಂದು ಹೇಳಬೇಕು.
- 21ಆಗ ಅವನ ಪಟ್ಟಣದ ಜನರೆಲ್ಲರು ಅವನು ಸಾಯುವಹಾಗೆ ಅವನನ್ನು ಕಲ್ಲೆಸೆಯಬೇಕು; ಹೀಗೆ ಕೆಟ್ಟದ್ದನ್ನು ನಿನ್ನ ಮಧ್ಯದಲ್ಲಿಂದ ತೆಗೆದುಹಾಕ ಬೇಕು; ಇಸ್ರಾಯೇಲ್ಯರಲ್ಲಿ ಇದನ್ನು ಕೇಳಿ ಭಯ ಪಡುವರು.
- 22ಇದಲ್ಲದೆ ಒಬ್ಬ ಮನುಷ್ಯನ ಮೇಲೆ ಮರಣಕ್ಕೆ ಯೋಗ್ಯವಾದ ಪಾಪವಿರುವದರಿಂದ ಅವನಿಗೆ ಮರಣ ವನ್ನು ವಿಧಿಸಿ ಮರಕ್ಕೆ ತೂಗುಹಾಕಿದ್ದಾದರೆಅವನ ಹೆಣವು ರಾತ್ರಿಯಲ್ಲಿ ಮರದ ಮೇಲಿರಬಾರದು; ಅವನನ್ನು ಹೇಗಾದರೂ ಅದೇ ದಿವಸದಲ್ಲಿ ಹೂಣಿಡ ಬೇಕು; (ಯಾಕಂದರೆ ತೂಗಾಡುವವನು ದೇವರಿಂದ ಶಾಪಗ್ರಸ್ತನಾಗಿದ್ದಾನೆ); ಆದರೆ ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ಭೂಮಿಯು ಅಶುದ್ಧವಾಗಬಾರದು.
- 23ಅವನ ಹೆಣವು ರಾತ್ರಿಯಲ್ಲಿ ಮರದ ಮೇಲಿರಬಾರದು; ಅವನನ್ನು ಹೇಗಾದರೂ ಅದೇ ದಿವಸದಲ್ಲಿ ಹೂಣಿಡ ಬೇಕು; (ಯಾಕಂದರೆ ತೂಗಾಡುವವನು ದೇವರಿಂದ ಶಾಪಗ್ರಸ್ತನಾಗಿದ್ದಾನೆ); ಆದರೆ ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ಭೂಮಿಯು ಅಶುದ್ಧವಾಗಬಾರದು.
Cross references
- John 19:31–38 ಯೋಹಾನನು 19:31–38ಅದು ಸಿದ್ಧತೆಯ ದಿನವಾದದ್ದರಿಂದ ಸಬ್ಬತ್ ದಿನದಲ್ಲಿ ದೇಹಗಳು ಶಿಲುಬೆಯ ಮೇಲೆ ಇರಬಾರ ದೆಂದು ಅವರ ಕಾಲುಗಳನ್ನು ಮುರಿದು ಅವರನ್ನು ತೆಗೆದುಬಿಡಬೇಕೆಂದು ಯೆಹೂದ್ಯರು ಪಿಲಾತನನ್ನು ಬೇಡಿಕೊಂಡರು. (ಯಾಕಂದರೆ ಆ ಸಬ್ಬತ್ದಿನವು ವಿಶೇಷವಾದ ದಿನವಾಗಿತ್ತು). ಆಗ ಸೈನಿಕರು ಬಂದು ಆತನ ಜೊತೆಯಲ್ಲಿ ಶಿಲುಬೆಗೆ ಹಾಕಲ್ಪಟ್ಟಿದ್ದ ಮೊದಲನೆಯವನ ಕಾಲುಗಳನ್ನೂ ಮತ್ತೊಬ್ಬನ ಕಾಲುಗಳನ್ನೂ ಮುರಿದರು. ಆದರೆ ಅವರು ಯೇಸುವಿನ ಬಳಿಗೆ ಬಂದಾಗ ಆತನು ಆಗಲೇ ಸತ್ತಿರುವದನ್ನು ಕಂಡು ಆತನ ಕಾಲುಗಳನ್ನು ಮುರಿ ಯಲಿಲ್ಲ. ಆದರೆ ಸೈನಿಕರಲ್ಲಿ ಒಬ್ಬನು ಈಟಿಯಿಂದ ಆತನ ಪಕ್ಕೆಯನ್ನು ತಿವಿದನು; ಕೂಡಲೆ ರಕ್ತವೂ ನೀರೂ ಹೊರಗೆ ಬಂತು. ಅದನ್ನು ನೋಡಿದವನೇ ಸಾಕ್ಷಿ ಕೊಟ್ಟಿದ್ದಾನೆ. ಅವನ ಸಾಕ್ಷಿಯು ಸತ್ಯವೇ; ನೀವು ನಂಬುವಂತೆ ಅವನು ಹೇಳುವದು ಸತ್ಯವೆಂದು ಅವನು ಬಲ್ಲನು. ಯಾಕಂದರೆ--ಆತನ ಒಂದು ಎಲುಬಾದರೂ ಮುರಿಯಲ್ಪಡಬಾರದು ಎಂಬ ಬರಹವು ನೆರವೇರುವಂತೆ ಇವುಗಳು ಸಂಭವಿಸಿದವು. ತಿರಿಗಿ ಮತ್ತೊಂದು ಬರಹವು--ಅವರು ತಾವು ಇರಿದವನನ್ನು ನೋಡುವರು ಎಂದು ಹೇಳುತ್ತದೆ. ತರುವಾಯ ಯೆಹೂದ್ಯರ ಭಯದ ನಿಮಿತ್ತ ದಿಂದ ಗುಪ್ತವಾಗಿ ಯೇಸುವಿನ ಶಿಷ್ಯನಾಗಿದ್ದ ಅರಿಮಥಾ ಯದ ಯೋಸೇಫನು ಯೇಸುವಿನ ದೇಹವನ್ನು ತಾನು ತೆಗೆದುಕೊಂಡು ಹೋಗುವಂತೆ ಪಿಲಾತನನ್ನು ಬೇಡಿ ಕೊಂಡನು. ಆಗ ಪಿಲಾತನು ಅಪ್ಪಣೆಕೊಡಲು ಅವನು ಬಂದು ಆತನ ದೇಹವನ್ನು ತೆಗೆದುಕೊಂಡು
- Acts 26:31 ಅಪೊಸ್ತಲರ ಕೃತ್ಯಗಳು 26:31ಅವರು ಆಚೆಗೆ ಹೋಗಿ--ಈ ಮನುಷ್ಯನು ಮರಣದಂಡನೆಗಾಗಲೀ ಬೇಡಿಗಳಿ ಗಾಗಲೀ ಯೋಗ್ಯವಾದ ಯಾವದನ್ನೂ ಮಾಡಲಿಲ್ಲ ವೆಂದು ತಮ್ಮತಮ್ಮಲ್ಲಿ ಮಾತನಾಡಿಕೊಂಡರು.ಆಗ ಅಗ್ರಿಪ್ಪನು ಫೆಸ್ತನಿಗೆ--ಈ ಮನುಷ್ಯನು ಕೈಸರನಿಗೆ ಹೇಳಿ ಕೊಳ್ಳುತ್ತೇನೆಂದು ಹೇಳದೆ ಹೋಗಿದ್ದರೆ ಇವನನ್ನು ಬಿಡಬಹುದಾಗಿತ್ತು ಎಂದು ಹೇಳಿದನು.
- Matthew 26:66 ಮತ್ತಾಯನು 26:66ನಿಮಗೆ ಹೇಗೆ ತೋರುತ್ತದೆ ಎಂದು ಕೇಳಿದ್ದಕ್ಕೆ ಅವರು ಪ್ರತ್ಯುತ್ತರವಾಗಿ--ಇವನು ಮರಣಕ್ಕೆ ಪಾತ್ರನು ಅಂದರು.
- Acts 23:29 ಅಪೊಸ್ತಲರ ಕೃತ್ಯಗಳು 23:29ಆಗ ತಮ್ಮ ನ್ಯಾಯಪ್ರಮಾಣ ಸಂಬಂಧವಾದ ಪ್ರಶ್ನೆಗಳಿಂದ ಅವನ ಮೇಲೆ ತಪ್ಪು ಹೊರಿಸಿದರೇ ಹೊರತು ಮರಣ ದಂಡನೆಗಾಗಲೀ ಬೇಡಿಗಳಿಗಾಗಲೀ ಯೋಗ್ಯವಾದ ಯಾವದನ್ನೂ ಅವರು ಅವನ ಮೇಲೆ ತಪ್ಪು ಹೊರಿಸ ಲಿಲ್ಲವೆಂದು ನಾನು ಗ್ರಹಿಸಿದೆನು.
- Luke 23:33 ಲೂಕನು 23:33ಅವರು ಕಲ್ವಾರಿ ಎಂದು ಕರೆಯಲ್ಪಡುವ ಸ್ಥಳಕ್ಕೆ ಬಂದಾಗ ಅಲ್ಲಿ ಆತನನ್ನು ಮತ್ತು ಆ ದುಷ್ಕರ್ಮಿಗಳಲ್ಲಿ ಒಬ್ಬನನ್ನು ಬಲಗಡೆಯಲ್ಲಿ ಮತ್ತೊಬ್ಬನನ್ನು ಎಡಗಡೆ ಯಲ್ಲಿ ಶಿಲುಬೆಗೆ ಹಾಕಿದರು.
- Deuteronomy 22:26 ಧರ್ಮೋಪದೇಶಕಾಂಡ 22:26ಆ ಹುಡುಗಿಯಲ್ಲಿ ಮರಣಕ್ಕೆ ಯೋಗ್ಯವಾದ ಪಾಪವಿಲ್ಲ. ಆ ಕಾರ್ಯವು ಒಬ್ಬನು ತನ್ನ ನೆರೆಯವನಿಗೆ ವಿರೋಧವಾಗಿ ಎದ್ದು ಅವನನ್ನು ಕೊಂದುಹಾಕಿದ ಹಾಗಿದೆ.
- 2 Samuel 21:9 2 ಸಮುವೇಲನು 21:9ಅವರನ್ನು ಗಿಬ್ಯೋನ್ಯರ ಕೈಯಲ್ಲಿ ಒಪ್ಪಿಸಿಕೊಟ್ಟನು. ಇವರು ಅವರನ್ನು ಕರ್ತನ ಮುಂದೆ ಬೆಟ್ಟದ ಮೇಲೆ ಗಲ್ಲಿಗೆ ಹಾಕಿದರು. ಹಾಗೆಯೇ ಈ ಏಳು ಮಂದಿಯೂ ಒಂದೇ ಸಾರಿ ಬಿದ್ದರು. ಜವೆ ಗೋಧಿಯ ಸುಗ್ಗಿಯ ದಿನದ ಪ್ರಾರಂಭದಲ್ಲಿ ಅವರು ಕೊಂದುಹಾಕಲ್ಪಟ್ಟರು.
- 2 Samuel 4:12 2 ಸಮುವೇಲನು 4:12ದಾವೀದನು ತನ್ನ ಯೌವ ನಸ್ಥರಿಗೆ ಆಜ್ಞಾಪಿಸಿದ್ದರಿಂದ ಅವರು ಅವರನ್ನು ಕೊಂದು ಹಾಕಿ, ಅವರ ಕೈಕಾಲುಗಳನ್ನು ಕಡಿದು ಹೆಬ್ರೋ ನಿನಲ್ಲಿರುವ ಕೊಳದ ಬಳಿಯಲ್ಲಿ ತೂಗುಹಾಕಿದರು. ಅವರು ಈಷ್ಬೋಶೆತನ ತಲೆಯನ್ನು ತಕ್ಕೊಂಡು ಅದನ್ನು ಹೆಬ್ರೋನಿನಲ್ಲಿರುವ ಅಬ್ನೇರನ ಸಮಾಧಿಯಲ್ಲಿ ಹೂಣಿಟ್ಟರು.
- Mark 14:64 ಮಾರ್ಕನು 14:64ನೀವು ಈ ದೇವದೂಷಣೆಯನ್ನು ಕೇಳಿದ್ದೀರಲ್ಲಾ; ನಿಮಗೆ ಹೇಗೆ ತೋರುತ್ತದೆ ಎಂದು ಕೇಳಲು ಅವರೆಲ್ಲರೂ ಅವನು ಮರಣದಂಡನೆ ಹೊಂದತಕ್ಕವನು ಎಂದು ತೀರ್ಪುಮಾಡಿದರು
- Deuteronomy 19:6 ಧರ್ಮೋಪದೇಶಕಾಂಡ 19:6ರಕ್ತ ವಿಚಾರಕನು ತನ್ನ ಹೃದಯದಲ್ಲಿ ಕೋಪ ಉರಿಯುತ್ತಿರುವಾಗ ಕೊಲೆಪಾತಕನನ್ನು ಹಿಂದಟ್ಟಿ, ಮಾರ್ಗ ದೂರವಾಗಿರುವ ಕಾರಣ ಅವನನ್ನು ಹಿಡಿದು ಪೂರ್ವಕಾಲದಲ್ಲಿ ಹಗೆಮಾಡದೆ ಇದ್ದದರಿಂದ ಮರ ಣಕ್ಕೆ ಪಾತ್ರನಾಗದ ಇವನನ್ನು ಕೊಂದುಹಾಕದ ಹಾಗೆ ಅವನು ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಬೇಕು.
- Joshua 8:29 ಯೆಹೋಶುವ 8:29ಆಯಿಯ ಅರಸನನ್ನು ಸಾಯಂಕಾಲದ ವರೆಗೂ ಒಂದು ಮರದಲ್ಲಿ ತೂಗ ಹಾಕಿಸಿದನು. ಸೂರ್ಯ ಅಸ್ತಮಿಸುವಾಗ ಯೆಹೋಶು ವನು ಅವನ ಹೆಣವನ್ನು ಮರದಿಂದ ಇಳಿಸಿ ಅದನ್ನು ಆ ಪಟ್ಟಣದ ಬಾಗಲಿನ ದ್ವಾರದಲ್ಲಿ ಹಾಕಲು ಆಜ್ಞಾಪಿಸಿದನು. ಆಗ ಅವರು ಹಾಗೆಯೇ ಮಾಡಿ ಈ ವರೆಗೆ ಇರುವ ದೊಡ್ಡ ಕಲ್ಲು ಕುಪ್ಪೆಯನ್ನು ಅದರ ಮೇಲೆ ಹಾಕಿದರು.
- Joshua 10:26 ಯೆಹೋಶುವ 10:26ತರುವಾಯ ಯೆಹೋಶುವನು ಅವರನ್ನು ಹೊಡೆದು ಐದು ಮರಗಳಲ್ಲಿ ತೂಗಹಾಕಿ ಸಾಯಿಸಿ ದನು. ಅವರು ಸಾಯಂಕಾಲದ ವರೆಗೂ ಮರಗಳಲ್ಲಿ ತೂಗಾಡುತ್ತಿದ್ದರು.