Deuteronomy · chapter 27 · verse 24
Deuteronomy 27:24 in Kannada
ತನ್ನ ನೆರೆಯವನನ್ನು ರಹಸ್ಯವಾಗಿ ಹೊಡೆಯುವ ವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ.
Tanna nereyavanannu rahasyavaagi hodeyuva vanige shaapa. Janavellaa aamen endu helali.
Deuteronomy 27:24 in English
- King James Version (KJV)
- Cursed [be] he that smiteth his neighbour secretly. And all the people shall say, Amen.
- World English Bible (WEB)
- ‘Cursed is he who secretly kills his neighbor.’ All the people shall say, ‘Amen.’
- American Standard Version (ASV)
- Cursed be he that smiteth his neighbor in secret. And all the people shall say, Amen.
- Bible in Basic English (BBE)
- Cursed is he who takes his neighbour's life secretly. And let all the people say, So be it.
- Darby Translation (DBY)
- Cursed be he that smiteth his neighbour secretly! And all the people shall say, Amen.
- Webster's Bible (WBS)
- Cursed [be] he that smiteth his neighbor secretly: and all the people shall say, Amen.
- Young's Literal Translation (YLT)
- 'Cursed [is] he who is smiting his neighbour in secret, — and all the people have said, Amen.
Read in context
- 22ತನ್ನ ತಂದೆಗಾಗಲಿ ತಾಯಿಗಾಗಲಿ ಮಗಳಾಗಿರುವ ಸಹೋದರಿಯ ಸಂಗಡ ಮಲಗುವವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ.
- 23ತನ್ನ ಅತ್ತೆಯ ಸಂಗಡ ಮಲಗುವವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ.
- 24ತನ್ನ ನೆರೆಯವನನ್ನು ರಹಸ್ಯವಾಗಿ ಹೊಡೆಯುವ ವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ.
- 25ಅಪರಾಧವಿಲ್ಲದೆ ಮನುಷ್ಯನನ್ನು ಕೊಲ್ಲುವ ಹಾಗೆ ಲಂಚತೆಗೆದುಕೊಳ್ಳುವವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ.ಈ ನ್ಯಾಯಪ್ರಮಾಣದ ಮಾತುಗಳನ್ನು ಸ್ಥಾಪಿ ಸದೆ, ಕೈಕೊಳ್ಳದೆ ಇರುವವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ ಎಂದು ಹೇಳಬೇಕು.
- 26ಈ ನ್ಯಾಯಪ್ರಮಾಣದ ಮಾತುಗಳನ್ನು ಸ್ಥಾಪಿ ಸದೆ, ಕೈಕೊಳ್ಳದೆ ಇರುವವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ ಎಂದು ಹೇಳಬೇಕು.
Cross references
- Numbers 35:31 ಅರಣ್ಯಕಾಂಡ 35:31ಸಾಯತಕ್ಕ ಕೊಲೆ ಪಾತಕನ ಪ್ರಾಣಕ್ಕೋಸ್ಕರ ಈಡನ್ನು ತಕ್ಕೊಳ್ಳಬೇಡಿರಿ; ಯಾಕಂದರೆ ಅವನು ನಿಜವಾಗಿಯೂ ಸಾಯಬೇಕು.
- Leviticus 24:17 ಯಾಜಕಕಾಂಡ 24:17ಯಾವನಾದರೂ ಮನುಷ್ಯನನ್ನು ಕೊಲ್ಲುವವನು ನಿಶ್ಚಯವಾಗಿ ಮರಣಕ್ಕೆ ಒಳಪಡಬೇಕು.
- 2 Samuel 13:28 2 ಸಮುವೇಲನು 13:28ಆದರೆ ಅಬ್ಷಾಲೋಮನು ತನ್ನ ಸೇವಕರಿಗೆ--ನೀವು ನೋಡಿಕೊಳ್ಳಿರಿ; ಅಮ್ನೋನನ ಹೃದಯವು ದ್ರಾಕ್ಷಾರಸ ದಿಂದ ಸಂಭ್ರಮವಾಗಿರುವಾಗ ನಾನು ನಿಮಗೆ ಅಮ್ನೋನ ನನ್ನು ಹೊಡೆಯಿರಿ ಎಂದು ಹೇಳುತ್ತಲೇ ಅವನನ್ನು ಕೊಂದುಹಾಕಿರಿ; ಭಯಪಡಬೇಡಿರಿ ನಾನು ನಿಮಗೆ ಆಜ್ಞಾಪಿಸಿದ್ದೇನಲ್ಲಾ. ಬಲವಾಗಿರಿ; ಪರಾಕ್ರಮಿಗಳಾ ಗಿರ್ರಿ; ಎಂದು ಆಜ್ಞಾಪಿಸಿ ಹೇಳಿದನು.
- Exodus 20:13 ವಿಮೋಚನಕಾಂಡ 20:13ಕೊಲೆ ಮಾಡಬಾರದು.
- Deuteronomy 19:11–12 ಧರ್ಮೋಪದೇಶಕಾಂಡ 19:11–12ಆದರೆ ಒಬ್ಬನು ತನ್ನ ನೆರೆಯವನನ್ನು ಹಗೆಮಾಡಿ ಅವನಿಗಾಗಿ ಹೊಂಚಿಕೊಂಡು ಅವನಿಗೆ ವಿರೋಧ ವಾಗಿ ಎದ್ದು ಅವನನ್ನು ಸಾಯುವ ವರೆಗೂ ಹೊಡೆದು ಅವನು ಸತ್ತದ್ದರಿಂದ ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿ ಹೋದರೆ ಅವನ ಪಟ್ಟಣದ ಹಿರಿಯರು ಅವ ನನ್ನು ಅಲ್ಲಿಂದ ಹಿಡತರಿಸಿ ಅವನು ಸಾಯುವ ಹಾಗೆ ರಕ್ತ ವಿಚಾರಕನ ಕೈಗೆ ಒಪ್ಪಿಸಬೇಕು.
- 2 Samuel 3:27 2 ಸಮುವೇಲನು 3:27ಅಬ್ನೇರನು ಹೆಬ್ರೋನಿಗೆ ತಿರಿಗಿ ಬಂದ ತರುವಾಯ ಯೋವಾಬನು ಬಾಗಲಲ್ಲಿ ಅವನ ಸಂಗಡ ಸಮಾಧಾನವಾಗಿ ಮಾತ ನಾಡಿ ಅವನನ್ನು ಒಂದು ಕಡೆ ಕರಕೊಂಡು ಹೋಗಿ ತನ್ನ ತಮ್ಮನಾದ ಅಸಾಹೇಲನ ರಕ್ತಾಪರಾಧದ ನಿಮಿತ್ತ ಅಲ್ಲಿ ಅವನ ಪಕ್ಕೆಯ ಐದನೇ ಎಲುಬಿನಲ್ಲಿ ಇರಿದು ಕೊಂದುಹಾಕಿದನು.
- 2 Samuel 12:9–12 2 ಸಮುವೇಲನು 12:9–12ಇದು ಸಾಲದೆ ಇದ್ದರೆ ಇಂಥಿಂಥವುಗಳನ್ನು ನಿನಗೆ ಇನ್ನೂ ಕೊಡುತ್ತಿದ್ದೆನು. ನೀನು ಕರ್ತನ ದೃಷ್ಟಿಗೆ ಈ ಕೆಟ್ಟಕಾರ್ಯವನ್ನು ಮಾಡುವ ಹಾಗೆ ಆತನ ಆಜ್ಞೆ ಯನ್ನು ತಿರಸ್ಕರಿಸಿದ್ದೇನು? ನೀನು ಹಿತ್ತಿಯನಾದ ಊರೀಯನನ್ನು ಕತ್ತಿಯಿಂದ ಕೊಲ್ಲಿಸಿ ಅವನ ಹೆಂಡತಿ ಯನ್ನು ನಿನಗೆ ಹೆಂಡತಿಯಾಗಿ ತೆಗೆದುಕೊಂಡಿ; ಇದಲ್ಲದೆ ಅವನನ್ನು ಅಮ್ಮೋನನ ಮಕ್ಕಳ ಕತ್ತಿಯಿಂದ ಕೊಂದು ಹಾಕಿಸಿದಿ. ಈಗ ನೀನು ನನ್ನನ್ನು ತಿರಸ್ಕರಿಸಿ ಹಿತ್ತಿಯ ನಾದ ಊರೀಯನ ಹೆಂಡತಿಯನ್ನು ನಿನಗೆ ಹೆಂಡತಿ ಯಾಗಿ ತೆಗೆದುಕೊಂಡದ್ದರಿಂದ ಕತ್ತಿಯು ಎಂದಿಗೂ ನಿನ್ನ ಮನೆಯನ್ನು ಬಿಟ್ಟು ಹೋಗುವುದಿಲ್ಲ ಎಂದು ಹೇಳುತ್ತಾನೆ. ಕರ್ತನು--ಇಗೋ, ನಾನು ನಿನ್ನ ಮನೆಯಲ್ಲಿ ಕೆಟ್ಟದ್ದನ್ನು ನಿನಗೆ ವಿರೋಧವಾಗಿ ಏಳುವಂತೆ ಮಾಡಿ ನಿನ್ನ ಕಣ್ಣುಗಳ ಮುಂದೆ ನಿನ್ನ ಹೆಂಡತಿಯರನ್ನು ತೆಗೆದು ನಿನ್ನ ನೆರೆಯವನಿಗೆ ಕೊಡುವೆನು. ಅವನು ಹಗಲಿನಲ್ಲಿಯೇ ಅವರ ಸಂಗಡ ಮಲಗುವನು. ನೀನು ಅದನ್ನು ಮರೆಯಲ್ಲಿ ಮಾಡಿದಿ; ಆದರೆ ನಾನು ಈ ಕಾರ್ಯವನ್ನು ಇಸ್ರಾಯೇಲ್ಯರೆಲ್ಲರ ಮುಂದೆಯೂ ಸೂರ್ಯನ ಮುಂದೆಯೂ ಮಾಡುವೆನು ಅಂದನು.
- Exodus 21:12–14 ವಿಮೋಚನಕಾಂಡ 21:12–14ಮನುಷ್ಯನನ್ನು ಸಾಯುವಂತೆ ಹೊಡೆದವನು ಖಂಡಿತವಾಗಿ ಸಾಯಬೇಕು. ಆದರೆ ಅವನು ಹೊಂಚಿ ನೋಡದೆ ಇದ್ದು ದೇವರು ಅವನ ಕೈಗೆ ಅವನನ್ನು ಒಪ್ಪಿಸಿದ್ದಾಗಿದ್ದರೆ ಅವನು ಓಡಿಹೋಗುವಂತೆ ಅವನಿಗೆ ಒಂದು ಸ್ಥಳವನ್ನು ನಿನಗೆ ನಾನು ನೇಮಿಸುವೆನು. ಒಬ್ಬನು ತನ್ನ ನೆರೆಯವನನ್ನು ಕೊಲ್ಲಬೇಕೆಂಬ ಉದ್ದೇಶ ಇಟ್ಟುಕೊಂಡು ಮೋಸತನದಿಂದ ಕೊಂದರೆ ಅವನು ಸಾಯುವಂತೆ ನೀನು ಅವನನ್ನು ನನ್ನ ಯಜ್ಞ ವೇದಿಯಿಂದ ತೆಗೆಯಬೇಕು.
- 2 Samuel 20:9–10 2 ಸಮುವೇಲನು 20:9–10ಆಗ ಯೋವಾಬನು ಅಮಾಸನಿಗೆ--ನನ್ನ ಸಹೋದರನೇ, ಕ್ಷೇಮವೋ ಅಂದನು. ಯೋವಾಬನು ಮುದ್ದಿಡುವುದಕ್ಕೋಸ್ಕರ ತನ್ನ ಬಲಗೈಯಿಂದ ಅವನ ಗಡ್ಡವನ್ನು ಹಿಡಿದನು. ಆದರೆ ಅಮಾಸನು ಯೋವಾಬನ ಕೈಯಲ್ಲಿದ್ದ ಕತ್ತಿ ಯನ್ನು ಗಮನಿಸದಿದ್ದಾಗ ಯೋವಾಬನು ಅವನನ್ನು ಕರುಳುಗಳು ಹೊರಬರುವ ಹಾಗೆ ಅವನ ಪಕ್ಕೆಯ ಐದನೇ ಎಲುಬಿನಲ್ಲಿ ತಿವಿದನು. ಎರಡನೇ ಸಾರಿ ಹೊಡೆಯಲಿಲ್ಲ, ಅವನು ಸತ್ತನು. ಯೋವಾಬನೂ ಅವನ ಸಹೋದರನಾದ ಅಬೀಷೈಯೂ ಬಿಕ್ರೀಯ ಮಗನಾದ ಶೆಬನನ್ನು ಹಿಂದಟ್ಟಿದರು.
- 2 Samuel 11:15–17 2 ಸಮುವೇಲನು 11:15–17ಆ ಪತ್ರದಲ್ಲಿ--ಊರೀಯನನ್ನು ಘೋರವಾದ ಯುದ್ಧದ ಮುಂದುಗಡೆ ಸರಿಯಾಗಿ ನಿಲ್ಲಿಸಿ ಅವನು ಹೊಡೆಯಲ್ಪಟ್ಟು ಸಾಯುವ ಹಾಗೆ ಅವನನ್ನು ಬಿಟ್ಟು ನೀವು ಹಿಂದಕ್ಕೆ ಸರಿಯಿರಿ ಎಂದು ಬರೆದಿದ್ದನು. ಹಾಗೆಯೇ ಯೋವಾಬನು ಆ ಪಟ್ಟಣವನ್ನು ನೋಡಿಕೊಂಡಾಗ ಯಾವ ಸ್ಥಳದಲ್ಲಿ ಪರಾಕ್ರಮಶಾಲಿಗಳು ಇರುವರೆಂದು ತಿಳುಕೊಂಡನೋ ಅಲ್ಲಿ ಊರೀಯನನ್ನು ನಿಲ್ಲಿಸಿದನು. ಪಟ್ಟಣದ ಜನರು ಹೊರಟು ಯೋವಾಬನ ಸಂಗಡ ಯುದ್ಧ ಮಾಡುವಾಗ ದಾವೀದನ ಸೇವಕರಾದವರಲ್ಲಿ ಕೆಲವರು ಬಿದ್ದರು; ಇದಲ್ಲದೆ ಹಿತ್ತಿಯನಾದ ಊರೀಯನು ಸತ್ತನು.