Deuteronomy · chapter 27 · verse 25
Deuteronomy 27:25 in Kannada
ಅಪರಾಧವಿಲ್ಲದೆ ಮನುಷ್ಯನನ್ನು ಕೊಲ್ಲುವ ಹಾಗೆ ಲಂಚತೆಗೆದುಕೊಳ್ಳುವವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ.ಈ ನ್ಯಾಯಪ್ರಮಾಣದ ಮಾತುಗಳನ್ನು ಸ್ಥಾಪಿ ಸದೆ, ಕೈಕೊಳ್ಳದೆ ಇರುವವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ ಎಂದು ಹೇಳಬೇಕು.
Aparaadhavillade manushyanannu kolluva haage lanchategedukolluvavanige shaapa. Janavellaa aamen endu helali.ee nyaayapramaanada maatugalannu sthaapi sade, kaikollade iruvavanige shaapa. Janavellaa aamen endu helali endu helabeku.
Deuteronomy 27:25 in English
- King James Version (KJV)
- Cursed [be] he that taketh reward to slay an innocent person. And all the people shall say, Amen.
- World English Bible (WEB)
- ‘Cursed is he who takes a bribe to kill an innocent person.’ All the people shall say, ‘Amen.’
- American Standard Version (ASV)
- Cursed be he that taketh a bribe to slay an innocent person. And all the people shall say, Amen.
- Bible in Basic English (BBE)
- Cursed is he who for a reward puts to death one who has done no wrong. And let all the people say, So be it.
- Darby Translation (DBY)
- Cursed be he that taketh reward to smite mortally [shedding] innocent blood! And all the people shall say, Amen.
- Webster's Bible (WBS)
- Cursed [be] he that taketh reward to slay an innocent person: and all the people shall say, Amen.
- Young's Literal Translation (YLT)
- 'Cursed [is] he who is taking a bribe to smite a person, innocent blood, — and all the people have said, Amen.
Read in context
- 23ತನ್ನ ಅತ್ತೆಯ ಸಂಗಡ ಮಲಗುವವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ.
- 24ತನ್ನ ನೆರೆಯವನನ್ನು ರಹಸ್ಯವಾಗಿ ಹೊಡೆಯುವ ವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ.
- 25ಅಪರಾಧವಿಲ್ಲದೆ ಮನುಷ್ಯನನ್ನು ಕೊಲ್ಲುವ ಹಾಗೆ ಲಂಚತೆಗೆದುಕೊಳ್ಳುವವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ.ಈ ನ್ಯಾಯಪ್ರಮಾಣದ ಮಾತುಗಳನ್ನು ಸ್ಥಾಪಿ ಸದೆ, ಕೈಕೊಳ್ಳದೆ ಇರುವವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ ಎಂದು ಹೇಳಬೇಕು.
- 26ಈ ನ್ಯಾಯಪ್ರಮಾಣದ ಮಾತುಗಳನ್ನು ಸ್ಥಾಪಿ ಸದೆ, ಕೈಕೊಳ್ಳದೆ ಇರುವವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ ಎಂದು ಹೇಳಬೇಕು.
Cross references
- Psalm 15:5 ಕೀರ್ತನೆಗಳು 15:5ತನ್ನ ಹಣವನ್ನು ಬಡ್ಡಿಗೆ ಕೊಡುವದಿಲ್ಲ; ನಿರಪರಾಧಿಗೆ ವಿರೋಧವಾಗಿ ಲಂಚ ತಕ್ಕೊಳ್ಳುವದಿಲ್ಲ. ಇವುಗಳನ್ನು ಮಾಡುವವನು ಎಂದೆಂದಿಗೂ ಕದಲದೆ ಇರುವನು.
- Exodus 23:7–8 ವಿಮೋಚನಕಾಂಡ 23:7–8ಸುಳ್ಳಿನ ವಿಷಯಗಳಿಂದ ನೀನು ದೂರ ವಿರು; ನಿರಪರಾಧಿಯನ್ನೂ ನೀತಿವಂತನನ್ನೂ ಕೊಲ್ಲ ಬೇಡ, ಯಾಕಂದರೆ ನಾನು ದುಷ್ಟನನ್ನು ನೀತಿವಂತ ನೆಂದು ನಿರ್ಣಯಿಸುವದಿಲ್ಲ. ಲಂಚವನ್ನು ತೆಗೆದು ಕೊಳ್ಳಬೇಡ; ಅದು ಜ್ಞಾನಿಗಳನ್ನು ಕುರುಡರನ್ನಾಗಿ ಮಾಡಿ ನೀತಿವಂತರ ಮಾತುಗಳನ್ನು ವಕ್ರಪಡಿಸುತ್ತದೆ.
- Deuteronomy 10:17 ಧರ್ಮೋಪದೇಶಕಾಂಡ 10:17ನಿಮ್ಮ ದೇವರಾದ ಕರ್ತನು ಆತನೇ ದೇವರುಗಳ ದೇವರು, ಕರ್ತರ ಕರ್ತನು, ಮಹಾ ದೇವರು, ಪರಾಕ್ರಮಿಯೂ ಭಯಂಕರನೂ. ಆತನು ಮುಖದಾಕ್ಷಿಣ್ಯ ನೋಡುವದಿಲ್ಲ, ಲಂಚ ತೆಗೆದುಕೊಳ್ಳು ವದಿಲ್ಲ.
- Deuteronomy 16:19 ಧರ್ಮೋಪದೇಶಕಾಂಡ 16:19ನೀನು ನ್ಯಾಯವನ್ನು ಓರೆಮಾಡಬಾರದು,ನೀನು ಮುಖದಾಕ್ಷಿಣ್ಯ ಮಾಡಬಾರದು; ಇಲ್ಲವೆ ಲಂಚ ತೆಗೆದುಕೊಳ್ಳಬಾರದು; ಲಂಚವು ಜ್ಞಾನಿಗಳ ಕಣ್ಣುಗಳನ್ನು ಕುರುಡುಮಾಡಿ ನೀತಿವಂತರ ಮಾತು ಗಳನ್ನು ಡೊಂಕುಮಾಡುತ್ತದೆ.
- Acts 1:18 ಅಪೊಸ್ತಲರ ಕೃತ್ಯಗಳು 1:18ಈ ಮನುಷ್ಯನು ತನ್ನ ದ್ರೋಹದ ಫಲದಿಂದ ಹೊಲವನ್ನು ಕೊಂಡುಕೊಂಡನು; ತಲೆ ಕೆಳಗಾಗಿ ಬಿದ್ದು ಅವನ ಹೊಟ್ಟೆ ಒಡೆದು ಕರುಳು ಗಳೆಲ್ಲಾ ಹೊರಬಿದ್ದವು.
- Matthew 26:15 ಮತ್ತಾಯನು 26:15ನಾನು ಆತನನ್ನು ನಿಮಗೆ ಒಪ್ಪಿಸಿಕೊಟ್ಟರೆ ನೀವು ನನಗೆ ಏನು ಕೊಡುತ್ತೀರಿ ಅಂದನು. ಆಗ ಅವರು ಅವನೊಂದಿಗೆ ಮೂವತ್ತು ಬೆಳ್ಳಿಯ ನಾಣ್ಯಗಳಿಗೆ ಒಪ್ಪಂದ ಮಾಡಿಕೊಂಡರು.
- Micah 3:10–11 ಮೀಕ 3:10–11ಚೀಯೋನನ್ನು ರಕ್ತದಿಂದಲೂ ಯೆರೂಸಲೇಮನ್ನು ಅಕ್ರಮದಿಂದಲೂ ಕಟ್ಟುವವರೇ, ಈಗ ಇದನ್ನು ಕೇಳಿರಿ. ಅದರ ಮುಖ್ಯಸ್ಥರು ಲಂಚಕ್ಕೆ ನ್ಯಾಯತೀರಿಸುತ್ತಾರೆ; ಅದರ ಯಾಜಕರು ಸಂಬಳಕ್ಕೆ ಬೋಧಿಸುತ್ತಾರೆ; ಅದರ ಪ್ರವಾ ದಿಗಳು ಹಣಕ್ಕೆ ಶಕುನ ಹೇಳುತ್ತಾರೆ; ಆದರೂ ಕರ್ತನ ಮೇಲೆ ಆತುಕೊಂಡು--ಕರ್ತನು ನಮ್ಮ ಮಧ್ಯದಲ್ಲಿ ಇಲ್ಲವೋ? ನಮ್ಮ ಮೇಲೆ ಕೇಡು ಬರುವದಿಲ್ಲ ಅನ್ನು ತ್ತಾರೆ.ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನು ಹೊಲದ ಹಾಗೆ ಉಳಲ್ಪಡುವದು; ಯೆರೂಸಲೇಮು ದಿಬ್ಬೆಗಳಾಗುವದು, ಆಲಯದ ಪರ್ವತವು ಅಡವಿಯ ಉನ್ನತ ಸ್ಥಳಗಳ ಹಾಗಾಗುವದು.
- Micah 7:2–3 ಮೀಕ 7:2–3ಒಳ್ಳೆಯವನು ಭೂಮಿಯೊಳ ಗಿಂದ ನಾಶವಾಗಿದ್ದಾನೆ; ಮನುಷ್ಯರಲ್ಲಿ ಯಥಾರ್ಥನು ಇಲ್ಲ; ಅವರೆಲ್ಲರು ರಕ್ತಕ್ಕೆ ಹೊಂಚಿ ನೋಡುತ್ತಾರೆ; ತಮ್ಮ ತಮ್ಮ ಸಹೋದರರನ್ನು ಬಲೆಹಾಕಿ ಬೇಟೆ ಆಡುತ್ತಾರೆ. ಕೆಟ್ಟದ್ದನ್ನು ಎರಡು ಕೈಗಳಿಂದ ಚೆನ್ನಾಗಿ ಮಾಡುವ ಹಾಗೆ ಪ್ರಧಾನನೂ ನ್ಯಾಯಾಧಿಪತಿಯೂ ಬಹುಮಾನವನ್ನು ಕೇಳುತ್ತಾರೆ; ದೊಡ್ಡ ಮನುಷ್ಯನು ತನ್ನ ಕೇಡಿನ ಆಸೆಯನ್ನು ತಾನೇ ಹೇಳುತ್ತಾನೆ; ಅವರು ಒಂದೇ ಕಟ್ಟಾಗಿದ್ದಾರೆ.
- Matthew 27:3–4 ಮತ್ತಾಯನು 27:3–4ಆಗ ಆತನನ್ನು ಹಿಡುಕೊಟ್ಟ ಯೂದನು ಆತನಿಗೆ ಮರಣದಂಡನೆಯ ತೀರ್ಪಾದದ್ದನ್ನು ನೋಡಿ ಪಶ್ಚಾ ತ್ತಾಪಪಟ್ಟು ಆ ಮೂವತ್ತು ಬೆಳ್ಳಿಯ ನಾಣ್ಯಗಳನು ತಿರಿಗಿ ಪ್ರಧಾನ ಯಾಜಕರ ಮತ್ತು ಹಿರಿಯರ ಬಳಿಗೆ ತಂದು ಅವನು--ನಾನು ನಿರಪರಾಧದ ರಕ್ತವನ್ನು ಹಿಡುಕೊಟ್ಟು ಪಾಪಮಾಡಿದ್ದೇನೆ ಅಂದನು. ಅದಕ್ಕೆ ಅವರು--ಅದು ನಮಗೇನು? ನೀನೇ ಅದನ್ನು ನೋಡಿಕೋ ಅಂದರು.
- Ezekiel 22:12–13 ಯೆಹೆಜ್ಕೇಲನು 22:12–13ನಿನ್ನಲ್ಲಿ ರಕ್ತ ಚೆಲ್ಲುವ ಹಾಗೆ ಲಂಚತಿಂದಿದ್ದಾರೆ; ಬಡ್ಡಿಯನ್ನೂ ಲಾಭವನ್ನೂ ತೆಗೆದುಕೊಂಡಿದ್ದಾರೆ; ಬಲಾತ್ಕಾರದಿಂದ ನಿನ್ನ ನೆರೆಯವರಲ್ಲಿ ದುರ್ಲಾಭಮಾಡಿಕೊಂಡಿದ್ದಾರೆ; ನನ್ನನ್ನು ಮರೆತುಬಿಟ್ಟಿ ದ್ದಾರೆಂದು ದೇವರಾದ ಕರ್ತನು ಹೇಳುತ್ತಾನೆ. ಆದದರಿಂದ ಇಗೋ, ನೀನು ಮಾಡಿದ ಈ ದುರ್ಲಾಭದಿಂದಲೂ ನಿನ್ನಲ್ಲಿರುವ ನಿನ್ನ ರಕ್ತಾಪ ರಾಧದಿಂದಲೂ ನಾನು ನನ್ನ ಕೈ ಬಡಿದುಕೊಂಡಿದ್ದೇನೆ.
- Proverbs 1:11–29 ಜ್ಞಾನೋಕ್ತಿಗಳು 1:11–29ಅವರು--ನಮ್ಮೊಂದಿಗೆ ಬಾ, ರಕ್ತಕ್ಕಾಗಿ ಹೊಂಚು ಹಾಕೋಣ, ನಿರಪರಾಧಿಗಳಿಗಾಗಿ ನಿಷ್ಕಾರಣದಿಂದ ರಹಸ್ಯವಾಗಿ ಅಡಗಿಕೊಳ್ಳೋಣ. ಗುಂಡಿಯೊಳಕ್ಕೆ ಹೋಗುವವರನ್ನು ನುಂಗುವಂತೆ ಸಂಪೂರ್ಣವಾಗಿ ನಾವು ಅವರನ್ನು ಸಮಾಧಿಯಂತೆ ನುಂಗಿಬಿಡೋಣ. ಅಮೂಲ್ಯವಾದ ಎಲ್ಲಾ ಸಂಪತ್ತನ್ನು ನಾವು ಕಂಡು ಹಿಡಿದು ಕೊಳ್ಳೆಯಿಂದ ನಮ್ಮ ಮನೆಗಳನ್ನು ತುಂಬಿ ಕೊಳ್ಳೋಣ. ನೀನು ನಮ್ಮ ಮಧ್ಯದಲ್ಲಿ ಚೀಟನ್ನು ಹಾಕು, ನಮ್ಮೆಲ್ಲರಿಗೂ ಒಂದೇ ಹಣದ ಚೀಲ ಇರಲಿ ಎಂದು ಹೇಳುತ್ತಾರೆ. ನನ್ನ ಮಗನೇ, ಮಾರ್ಗದಲ್ಲಿ ಅವರೊಂದಿಗೆ ನಡೆಯಬೇಡ; ಅವರ ಮಾರ್ಗದಿಂದ ನಿನ್ನ ಹೆಜ್ಜೆಯನ್ನು ಹಿಂದೆ ತಕ್ಕೋ. ಅವರ ಪಾದಗಳು ಕೇಡಿಗೆ ಓಡುತ್ತವೆ, ರಕ್ತವನ್ನು ಸುರಿಸುವದಕ್ಕೆ ಆತುರ ಪಡುತ್ತವೆ. ನಿಶ್ಚಯವಾಗಿ ಪಕ್ಷಿಯ ಕಣ್ಣೆದುರಿಗೆ ಬಲೆಯನ್ನು ಹರಡುವದು ವ್ಯರ್ಥವೇ. ಅವರು ತಮ್ಮ ಸ್ವಂತ ರಕ್ತಕ್ಕೆ ಹೊಂಚುಹಾಕುತ್ತಾರೆ; ತಮ್ಮ ಪ್ರಾಣಗಳಿಗೆ ರಹಸ್ಯವಾಗಿ ಅಡಗಿಕೊಳ್ಳುತ್ತಾರೆ. ತಮ್ಮ ಸ್ವಂತ ಪ್ರಾಣಗಳನ್ನು ತೆಗೆದುಕೊಳ್ಳುವ ದುರ್ಲಾಭಾ ಪೇಕ್ಷಕರ ಪ್ರತಿಯೊಬ್ಬನ ಮಾರ್ಗಗಳು ಹೀಗಿವೆ. ಹೊರಗೆ ಜ್ಞಾನವೆಂಬಾಕೆಯು ಕೂಗುತ್ತಾಳೆ. ಬೀದಿಗಳಲ್ಲಿ ಆಕೆಯು ತನ್ನ ಧ್ವನಿಗೈಯುತ್ತಾಳೆ. ಸಮೂಹದ ಮುಖ್ಯ ಸ್ಥಳದಲ್ಲಿಯೂ ದ್ವಾರಗಳ ಬಳಿಯಲ್ಲಿಯೂ ಅವಳು ಕೂಗುತ್ತಾಳೆ, ಪಟ್ಟಣದಲ್ಲಿ ಅವಳು ತನ್ನ ಮಾತುಗಳನ್ನು ಉಚ್ಚರಿಸುತ್ತಾ-- ಜ್ಞಾನ ಹೀನರೇ, ನೀವು ಎಷ್ಟು ಕಾಲ ಅಜ್ಞಾನವನ್ನು ಪ್ರೀತಿಸುವಿರಿ? ತಿರಸ್ಕರಿಸುವವರು ತಮ್ಮ ತಿರಸ್ಕರಿಸು ವಿಕೆಯಲ್ಲಿ ಎಷ್ಟುಕಾಲ ಆನಂದಿಸುವರು? ಜ್ಞಾನ ಹೀನರು ಎಷ್ಟು ಕಾಲ ತಿಳುವಳಿಕೆಯನ್ನು ಹಗೆ ಮಾಡುವರು? ನನ್ನ ಗದರಿಕೆಗೆ ನೀವು ತಿರುಗಿ ಕೊಳ್ಳಿರಿ; ಇಗೋ, ನಿಮ್ಮ ಮೇಲೆ ನನ್ನ ಆತ್ಮವನ್ನು ಸುರಿಸಿ ನಿಮಗೆ ನನ್ನ ಮಾತುಗಳು ತಿಳಿಯುವಂತೆ ಮಾಡುವೆನು. ನಾನು ಕರೆದಾಗ ನೀವು ತಿರಸ್ಕರಿಸಿದ್ದಕ್ಕಾಗಿಯೂ ನಾನು ನನ್ನ ಕೈಚಾಚಿದಾಗ ಯಾವ ಮನುಷ್ಯನು ಗಮನಿಸದೆ ಇದ್ದದ್ದಕ್ಕಾಗಿಯೂ ನನ್ನ ಆಲೋಚನೆಯನ್ನು ನೀವು ಲಕ್ಷಿಸದೆ ನನ್ನ ಗದರಿಕೆ ಯನ್ನು ನೀವು ಬೇಡವೆಂದು ತಳ್ಳಿಬಿಟ್ಟದ್ದರಿಂದಲೂ ನಿಮ್ಮ ಆಪತ್ತಿನಲ್ಲಿ ನಿಮಗೆ ಹೆದರಿಕೆ ಬರುವಾಗ ನಿಮ್ಮ ಭಯವು ತೀವ್ರ ದುಃಖದಂತೆಯೂ ನಿಮ್ಮ ನಾಶನವು ತುಫಾನಿನಂತೆಯೂ ಬರುವಾಗ ಅಪಾಯ ಮತ್ತು ಆಪತ್ತು ನಿಮ್ಮ ಮೇಲೆ ಬರುವಾಗ ನಾನು ಸಹ ನಕ್ಕು ಪರಿಹಾಸ್ಯಮಾಡುವೆನು. ಅವರು ನನಗೆ ಮೊರೆಯಿಡುವರು, ಆದರೆ ನಾನು ಅವರಿಗೆ ಉತ್ತರಕೊಡೆನು. ಅವರು ಆತುರದಿಂದ ನನ್ನನ್ನು ಹುಡು ಕಿದರೂ ಕಂಡುಕೊಳ್ಳುವದಿಲ್ಲ. ಅವರು ತಿಳುವಳಿಕೆ ಯನ್ನು ಹಗೆಮಾಡಿ ಕರ್ತನ ಭಯವನ್ನು ಆರಿಸಿಕೊ ಳ್ಳದೆ ಇದ್ದದರಿಂದಲೂ