Deuteronomy · chapter 28 · verse 25
Deuteronomy 28:25 in Kannada
ಕರ್ತನು ನಿನ್ನನ್ನು ನಿನ್ನ ಶತ್ರುಗಳ ಮುಂದೆ ಹೊಡೆದುಬಿಡುವನು; ನೀನು ಒಂದೇ ಮಾರ್ಗದಲ್ಲಿ ಅವರಿಗೆ ವಿರೋಧವಾಗಿ ಹೊರಟು ಏಳು ಮಾರ್ಗಗಳಲ್ಲಿ ಅವರ ಮುಂದೆ ಓಡಿಹೋಗಿ ಭೂಮಿಯ ಎಲ್ಲಾ ರಾಜ್ಯಗಳಿಗೆ ಚದರಿ ಹೋಗುವಿ.
Kartanu ninnannu ninna shatrugala munde hodedubiduvanu; neenu onde maargadalli avarige virodhavaagi horatu elu maargagalalli avara munde odihogi bhoomiya ellaa raajyagalige chadari hoguvi.
Deuteronomy 28:25 in English
- King James Version (KJV)
- The LORD shall cause thee to be smitten before thine enemies: thou shalt go out one way against them, and flee seven ways before them: and shalt be removed into all the kingdoms of the earth.
- World English Bible (WEB)
- The LORD will cause you to be struck before your enemies. You will go out one way against them, and will flee seven ways before them. You will be tossed back and forth among all the kingdoms of the earth.
- American Standard Version (ASV)
- Jehovah will cause thee to be smitten before thine enemies; thou shalt go out one way against them, and shalt flee seven ways before them: and thou shalt be tossed to and from among all the kingdoms of the earth.
- Bible in Basic English (BBE)
- The Lord will let you be overcome by your haters: you will go out against them one way, and you will go in flight before them seven ways: you will be the cause of fear among all the kingdoms of the earth.
- Darby Translation (DBY)
- Jehovah will give thee up smitten before thine enemies; thou shalt go out against them one way, and by seven ways shalt thou flee before them; and thou shalt be driven hither and thither into all the kingdoms of the earth.
- Webster's Bible (WBS)
- The LORD shall cause thee to be smitten before thy enemies: thou shalt go out one way against them, and flee seven ways before them; and shalt be removed into all the kingdoms of the earth.
- Young's Literal Translation (YLT)
- 'Jehovah giveth thee smitten before thine enemies; in one way thou goest out unto them, and in seven ways dost flee before them, and thou hast been for a trembling to all kingdoms of the earth;
Read in context
- 23ನಿನ್ನ ತಲೆಯ ಮೇಲಿರುವ ಆಕಾಶವು ತಾಮ್ರ ವಾಗಿಯೂ ನಿನ್ನ ಕೆಳಗಿರುವ ಭೂಮಿಯು ಕಬ್ಬಿಣ ವಾಗಿಯೂ ಇರುವವು.
- 24ಕರ್ತನು ನಿನ್ನ ದೇಶದ ಮಳೆಯನ್ನು ಹುಡಿಯೂ ಧೂಳೂ ಆಗುವಂತೆ ಮಾಡು ವನು; ನೀನು ನಾಶವಾಗುವ ವರೆಗೆ ಅದು ಆಕಾಶದಿಂದ ನಿನ್ನ ಮೇಲೆ ಇಳಿದು ಬರುವದು.
- 25ಕರ್ತನು ನಿನ್ನನ್ನು ನಿನ್ನ ಶತ್ರುಗಳ ಮುಂದೆ ಹೊಡೆದುಬಿಡುವನು; ನೀನು ಒಂದೇ ಮಾರ್ಗದಲ್ಲಿ ಅವರಿಗೆ ವಿರೋಧವಾಗಿ ಹೊರಟು ಏಳು ಮಾರ್ಗಗಳಲ್ಲಿ ಅವರ ಮುಂದೆ ಓಡಿಹೋಗಿ ಭೂಮಿಯ ಎಲ್ಲಾ ರಾಜ್ಯಗಳಿಗೆ ಚದರಿ ಹೋಗುವಿ.
- 26ನಿಮ್ಮ ಹೆಣಗಳು ಆಕಾಶದ ಎಲ್ಲಾ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಆಹಾರವಾಗು ವವು; ಯಾರೂ ಅವುಗಳನ್ನು ಬೆದರಿಸುವದಿಲ್ಲ.
- 27ಕರ್ತನು ನಿನ್ನನ್ನು ಐಗುಪ್ತದ ಹುಣ್ಣುಗಳಿಂದಲೂ ಗಡ್ಡೆವ್ಯಾಧಿಯಿಂದಲೂ ಕಜ್ಜಿಯಿಂದಲೂ ಇಸಬಿನಿಂದ ಲೂ ನೀನು ವಾಸಿಯಾಗಕೂಡದ ಹಾಗೆ ಹೊಡೆ ಯುವನು.
Cross references
- Ezekiel 23:46 ಯೆಹೆಜ್ಕೇಲನು 23:46ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ಅವರಿಗೆ ವಿರೋಧವಾಗಿ ಸಂಘವನ್ನು ಕೂಡಿಸಿ ಅವರನ್ನು ತೆಗೆದುಹಾಕಲ್ಪಡು ವದಕ್ಕೂ ಸೂರೆಗೂ ಒಪ್ಪಿಸುವೆನು.
- Isaiah 30:17 ಯೆಶಾಯ 30:17ಒಬ್ಬನ ಬೆದರಿ ಕೆಗೆ ಸಾವಿರ ಜನರು ಓಡುವರು; ಐವರು ಹೆದರಿಸು ವದರಿಂದ ನೀವು ಓಡಿಹೋಗುವಿರಿ; ಕಟ್ಟಕಡೆಗೆ ಬೆಟ್ಟದ ಶಿಖರದಲ್ಲಿನ ಸ್ತಂಭದ ಹಾಗೂ ಗುಡ್ಡದ ಮೇಲಣ ಕಂಬದಂತೆಯೂ ಒಂಟಿಯಾಗಿ ಉಳಿಯುವಿರಿ.
- Jeremiah 24:9 ಯೆರೆಮೀಯ 24:9ನಾನು ಅವರನ್ನು ಓಡಿಸಿಬಿಡುವ ಎಲ್ಲಾ ಸ್ಥಳಗಳಲ್ಲಿ ನಿಂದೆಗೂ ಗಾದೆಗೂ ಹಾಸ್ಯಕ್ಕೂ ಶಾಪಕ್ಕೂ ಗುರಿಮಾಡಿ ಅವರನ್ನು ಭೂಮಿಯ ಸಮಸ್ತ ರಾಜ್ಯಗಳಿಂದ ತೆಗೆದು ಕೇಡಿಗೆ ಒಪ್ಪಿಸುವೆನು.ನಾನು ಅವರಿಗೂ ಅವರ ತಂದೆಗಳಿಗೂ ಕೊಟ್ಟ ದೇಶದೊಳ ಗಿಂದ ಅವರು ನಾಶವಾಗುವ ವರೆಗೂ ಕತ್ತಿಯನ್ನೂ ಕ್ಷಾಮವನ್ನೂ ಜಾಡ್ಯವನ್ನೂ ಅವರಲ್ಲಿ ಕಳುಹಿಸುವೆನು.
- Deuteronomy 32:30 ಧರ್ಮೋಪದೇಶಕಾಂಡ 32:30ಅವರ ಬಂಡೆ ಅವರನ್ನು ಮಾರಿ ಕರ್ತನು ಅವರನ್ನು ಅಟ್ಟಿಬಿಟ್ಟರೆ ಒಬ್ಬನು ಹೇಗೆ ಸಾವಿರ ಮಂದಿ ಯನ್ನು ಹಿಂದಟ್ಟುವನು? ಇಬ್ಬರು ಹೇಗೆ ಹತ್ತು ಸಾವಿರ ಮಂದಿಯನ್ನು ಓಡಿಸುವರು?
- Deuteronomy 28:7 ಧರ್ಮೋಪದೇಶಕಾಂಡ 28:7ನಿನಗೆ ವಿರೋಧವಾಗಿ ಏಳುವ ನಿನ್ನ ಶತ್ರುಗಳನ್ನು ಕರ್ತನು ನಿನ್ನ ಮುಂದೆ ಹೊಡೆದು ಬಿಡುವನು; ಅವರು ಒಂದೇ ಮಾರ್ಗದಲ್ಲಿ ನಿನಗೆ ವಿರೋಧವಾಗಿ ಹೊರಟು ಏಳು ಮಾರ್ಗಗಳಲ್ಲಿ ನಿನ್ನ ಮುಂದೆ ಓಡಿಹೋಗುವರು.
- Jeremiah 15:2–9 ಯೆರೆಮೀಯ 15:2–9ಅವರು ನಿನಗೆ--ನಾವು ಎಲ್ಲಿ ಹೋಗಬೇಕು ಎಂದು ಹೇಳಿದರೆ, ನೀನು ಅವ ರಿಗೆ--ಕರ್ತನು ಹೀಗೆ ಹೇಳುತ್ತಾನೆ--ಮರಣಕ್ಕೆ ಇರುವವರು ಮರಣಕ್ಕೆ; ಕತ್ತಿಗೆ ಇರುವವರು ಕತ್ತಿಗೆ; ಕ್ಷಾಮಕ್ಕೆ ಇರುವವರು ಕ್ಷಾಮಕ್ಕೆ, ಸೆರೆಗೆ ಇರು ವವರು ಸೆರೆಗೆ ಎಂದು ಹೇಳಬೇಕು. ಕರ್ತನು--ನಾನು ಅವರಿಗೆ ವಿರೋಧವಾಗಿ ನಾಲ್ಕು ತರವಾದವುಗಳನ್ನು ಅಂದರೆ ಕೊಲ್ಲುವದಕ್ಕೆ ಕತ್ತಿಯನ್ನೂ ಹರಿಯುವದಕ್ಕೆ ನಾಯಿಗಳನ್ನೂ ತಿನ್ನುವದಕ್ಕೂ ನಾಶ ಮಾಡುವದಕ್ಕೂ ಆಕಾಶದ ಪಕ್ಷಿಗಳನ್ನೂ ಭೂಮಿಯ ಮೃಗಗಳನ್ನೂ ನೇಮಿಸುತ್ತೇನೆ. ಅವರನ್ನು ಹಿಜ್ಕೀಯನ ಮಗನಾದ ಯೆಹೂದದ ಅರಸನಾದ ಮನಸ್ಸೆಯ ನಿಮಿತ್ತವೂ ಇವನು ಯೆರೂಸಲೇಮಿನಲ್ಲಿ ಮಾಡಿದ್ದರ ನಿಮಿತ್ತವೂ ಭೂಮಿಯ ಎಲ್ಲಾ ರಾಜ್ಯಗಳಿಗೆ ಚದರಿಹೋಗುವಂತೆ ಮಾಡುವೆನು. ಓ ಯೆರೂಸಲೇಮೇ, ನಿನ್ನ ಮೇಲೆ ಯಾರೂ ಕನಿಕರಪಡುವರು? ನಿನಗೋಸ್ಕರ ಯಾರು ದುಃಖಿಸುವರು? ನಿನ್ನ ಕ್ಷೇಮವನ್ನು ಕುರಿತು ಕೇಳುವದಕ್ಕೆ ಯಾರು ಸವಿಾಪ ಬರುವರು? ನೀನು ನನ್ನನ್ನು ಬಿಟ್ಟು ಬಿಟ್ಟಿದ್ದೀ ಎಂದು ಕರ್ತನು ಅನ್ನುತ್ತಾನೆ; ನೀನು ಹಿಂಜರಿ ದಿದ್ದೀ, ಆದದರಿಂದ ನನ್ನ ಕೈಯನ್ನು ನಿನಗೆ ವಿರೋಧ ವಾಗಿ ಚಾಚಿ ನಿನ್ನನ್ನು ನಾಶಮಾಡುವೆನು. ಪಶ್ಚಾತ್ತಾಪ ಪಡುವದರಲ್ಲಿ ದಣಿದಿದ್ದೇನೆ. ಅವರನ್ನು ಮೊರದಿಂದ ದೇಶದ ಬಾಗಿಲುಗಳಲ್ಲಿ ತೂರುವೆನು; ನನ್ನ ಜನರನ್ನು ಮಕ್ಕಳಿಲ್ಲದವರಾಗ ಮಾಡಿ ನಾಶಮಾಡುವೆನು. ಅವರು ತಮ್ಮ ಮಾರ್ಗಗಳನ್ನು ಬಿಟ್ಟು ಹಿಂತಿರುಗದೆ ಇದ್ದದರಿಂದ ಅವರ ವಿಧವೆಗಳು ಸಮುದ್ರದ ಮರಳಿಗಿಂತ ನನಗೆ ಹೆಚ್ಚಾದರು. ನಾನು ಅವರ ಬಳಿಗೆ ಪ್ರಾಯದವರ ತಾಯಿಯ ಮೇಲೆ ಮಧ್ಯಾಹ್ನದಲ್ಲಿ ನಾಶನ ಮಾಡು ವವನನ್ನು ತರಿಸಿದ್ದೇನೆ; ಪಕ್ಕನೆ ಅವನು ಅವಳ ಮೇಲೆ ಬೀಳುವಂತೆ ಮಾಡುವೆನು, ಹೆದರಿಕೆಯನ್ನು ಪಟ್ಟಣದ ಮೇಲೆ ಬೀಳಮಾಡಿದ್ದೇನೆ. ಏಳು ಮಂದಿಯನ್ನು ಹೆತ್ತವಳು ಕುಂದುತ್ತಾಳೆ; ತನ್ನ ಪ್ರಾಣವನ್ನು ಬಿಡುತ್ತಾಳೆ; ಹಗಲಿರುವಾಗಲೇ ಅವಳ ಸೂರ್ಯನು ಅಸ್ತಮಿಸುತ್ತಾನೆ; ಅವಳು ನಾಚಿಕೆಪಡುತ್ತಾಳೆ; ಅವಮಾನ ಗೊಳ್ಳುತ್ತಾಳೆ; ಇದಲ್ಲದೆ ಅವರ ಶೇಷವನ್ನು ಅದರ ಶತ್ರುಗಳ ಮುಂದೆ ಕತ್ತಿಗೆ ಒಪ್ಪಿಸುವೆನು ಎಂದು ಕರ್ತನು ಅನ್ನುತ್ತಾನೆ.
- Leviticus 26:17 ಯಾಜಕಕಾಂಡ 26:17ನಾನು ನಿಮಗೆ ವಿಮುಖನಾಗಿರು ವೆನು. ನಿಮ್ಮ ಶತ್ರುಗಳ ಮುಂದೆ ನೀವು ಕೊಲ್ಲಲ್ಪಡುವಿರಿ. ನಿಮ್ಮ ವೈರಿಗಳು ನಿಮ್ಮ ಮೇಲೆ ದೊರೆತನ ಮಾಡುವರು. ಓಡಿಸುವವನು ಯಾರೂ ಇಲ್ಲದಿರುವಾಗ ಓಡಿ ಹೋಗುವಿರಿ.
- Luke 21:24 ಲೂಕನು 21:24ಇದಲ್ಲದೆ ಅವರು ಕತ್ತಿಯ ಬಾಯಿಗೆ ಬೀಳುವರು. ಸೆರೆಯಾಗಿ ಎಲ್ಲಾ ಜನಾಂಗಗಳಲ್ಲಿ ಒಯ್ಯ ಲ್ಪಡುವರು;ಅನ್ಯಜನಗಳ ಕಾಲಗಳು ಪರಿಪೂರ್ಣ ವಾಗುವ ವರೆಗೆ ಯೆರೂಸಲೇಮು ಅನ್ಯಜನಗಳಿಂದ ತುಳಿದಾಡಲ್ಪಡುವದು.
- Jeremiah 29:18 ಯೆರೆಮೀಯ 29:18ಕತ್ತಿಯಿಂದಲೂ ಕ್ಷಾಮ ದಿಂದಲೂ ಜಾಡ್ಯದಿಂದಲೂ ಅವರನ್ನು ಹಿಂಸಿಸಿ ನಾನು ಅವರನ್ನು ಓಡಿಸಿಬಿಟ್ಟ ಎಲ್ಲಾ ಜನಾಂಗಗಳಲ್ಲಿ ಶಾಪಕ್ಕೂ ವಿಸ್ಮಯಕ್ಕೂ ಸಿಳ್ಳಿಡುವಿಕೆಗೂ ನಿಂದೆಗೂ ಗುರಿಯಾಗುವ ಹಾಗೆ ಒಪ್ಪಿಸಿಬಿಡುವೆನು.
- Jeremiah 34:17 ಯೆರೆಮೀಯ 34:17ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಪ್ರತಿಯೊಬ್ಬನು ತನ್ನ ಸಹೋದರನಿಗೂ ಪ್ರತಿ ಮನುಷ್ಯನು ತನ್ನ ನೆರೆಯವನಿಗೂ ಬಿಡುಗಡೆಯನ್ನು ಸಾರುವದರಲ್ಲಿ ನೀವು ನನಗೆ ಕಿವಿಗೊಡಲಿಲ್ಲ. ಇಗೋ, ನಾನು ಕತ್ತಿ, ಬರ, ಜಾಡ್ಯ ಇವುಗಳಿಗಾಗಿ ನಿಮಗೆ ಬಿಡುಗಡೆಯನ್ನು ಸಾರುತ್ತೇನೆ ಎಂದು ಕರ್ತನು ಹೇಳುತ್ತಾನೆ. ಭೂಮಿಯ ಎಲ್ಲಾ ರಾಜ್ಯಗಳಿಗೆ ನಿಮ್ಮನ್ನು ತೆಗೆದು ಹಾಕುವಂತೆ ಮಾಡುವೆನು.
- Leviticus 26:36–37 ಯಾಜಕಕಾಂಡ 26:36–37ನಿಮ್ಮಲ್ಲಿ ಯಾರಾರು ಉಳಿದು ಶತ್ರುಗಳ ದೇಶದ ಲ್ಲಿರುವರೋ ಅವರ ಹೃದಯಗಳಲ್ಲಿ ಅಧೈರ್ಯವನ್ನು ಹುಟ್ಟಿಸುವೆನು; ಬಡಿದಾಡುವ ಎಲೆಯ ಶಬ್ದವು ಅವರನ್ನು ಓಡಿಸುವದು, ಕತ್ತಿಗೆ ಓಡಿಹೋದ ಹಾಗೆ ಓಡಿಹೋಗು ವರು; ಓಡಿಸುವವನಿಲ್ಲದೆ ಬೀಳುವರು. ಓಡಿಸುವವ ನಿಲ್ಲದೆ ಒಬ್ಬರ ಮೇಲೊಬ್ಬರು ಕತ್ತಿಯ ಭಯದಿಂದಾದ ಹಾಗೆ ಬೀಳುವರು; ನಿಮ್ಮ ಶತ್ರುಗಳಿಗೆದುರಾಗಿ ನಿಂತುಕೊಳ್ಳುವದು ನಿಮ್ಮಿಂದಾಗದು.
Original words (Hebrew)
- cause · H5414נָתַן nâthan
- smitten · H5062נָגַף nâgaph
- before · H6440פָּנִים pânîym
- enemies · H341אֹיֵב ʼôyêb
- out · H3318יָצָא yâtsâʼ
- one · H259אֶחָד ʼechâd
- way · H1870דֶּרֶךְ derek
- flee · H5127נוּס nûwç
- seven · H7651שֶׁבַע shebaʻ
- ways · H1870דֶּרֶךְ derek
- before · H6440פָּנִים pânîym
- removed · H2189זַעֲוָה zaʻăvâh
- kingdoms · H4467מַמְלָכָה mamlâkâh
- earth · H776אֶרֶץ ʼerets