Deuteronomy · chapter 28 · verse 7
Deuteronomy 28:7 in Kannada
ನಿನಗೆ ವಿರೋಧವಾಗಿ ಏಳುವ ನಿನ್ನ ಶತ್ರುಗಳನ್ನು ಕರ್ತನು ನಿನ್ನ ಮುಂದೆ ಹೊಡೆದು ಬಿಡುವನು; ಅವರು ಒಂದೇ ಮಾರ್ಗದಲ್ಲಿ ನಿನಗೆ ವಿರೋಧವಾಗಿ ಹೊರಟು ಏಳು ಮಾರ್ಗಗಳಲ್ಲಿ ನಿನ್ನ ಮುಂದೆ ಓಡಿಹೋಗುವರು.
Ninage virodhavaagi eluva ninna shatrugalannu kartanu ninna munde hodedu biduvanu; avaru onde maargadalli ninage virodhavaagi horatu elu maargagalalli ninna munde odihoguvaru.
Deuteronomy 28:7 in English
- King James Version (KJV)
- The LORD shall cause thine enemies that rise up against thee to be smitten before thy face: they shall come out against thee one way, and flee before thee seven ways.
- World English Bible (WEB)
- The LORD will cause your enemies who rise up against you to be struck before you. They will come out against you one way, and will flee before you seven ways.
- American Standard Version (ASV)
- Jehovah will cause thine enemies that rise up against thee to be smitten before thee: they shall come out against thee one way, and shall flee before thee seven ways.
- Bible in Basic English (BBE)
- By the power of the Lord, those who take arms against you will be overcome before you: they will come out against you one way, and will go in flight from you seven ways.
- Darby Translation (DBY)
- Jehovah will give up, smitten before thee, thine enemies that rise up against thee; they shall come out against thee one way, and by seven ways shall they flee before thee.
- Webster's Bible (WBS)
- The LORD shall cause thy enemies that rise up against thee to be smitten before thy face: they shall come out against thee one way, and flee before thee seven ways.
- Young's Literal Translation (YLT)
- 'Jehovah giveth thine enemies, who are rising up against thee — smitten before thy face; in one way they come out unto thee, and in seven ways they flee before thee.
Read in context
- 5ನಿನ್ನ ಪುಟ್ಟಿಗೂ ಕಣಜಕ್ಕೂ ಆಶೀರ್ವಾದ.
- 6ಬರುವಾಗ ನಿನಗೆ ಆಶೀರ್ವಾದ; ಹೊರಡುವಾಗ ನಿನಗೆ ಆಶೀರ್ವಾದ.
- 7ನಿನಗೆ ವಿರೋಧವಾಗಿ ಏಳುವ ನಿನ್ನ ಶತ್ರುಗಳನ್ನು ಕರ್ತನು ನಿನ್ನ ಮುಂದೆ ಹೊಡೆದು ಬಿಡುವನು; ಅವರು ಒಂದೇ ಮಾರ್ಗದಲ್ಲಿ ನಿನಗೆ ವಿರೋಧವಾಗಿ ಹೊರಟು ಏಳು ಮಾರ್ಗಗಳಲ್ಲಿ ನಿನ್ನ ಮುಂದೆ ಓಡಿಹೋಗುವರು.
- 8ನಿನ್ನ ಕಣಜಗಳಲ್ಲಿಯೂ ನೀನು ಕೈಹಾಕುವ ಎಲ್ಲಾದರಲ್ಲಿಯೂ ನಿನಗೆ ಆಶೀರ್ವಾದ ಬರುವ ಹಾಗೆ ಕರ್ತನು ಅಪ್ಪಣೆಕೊಡುವನು; ನಿನ್ನ ದೇವರಾದ ಕರ್ತನು ನಿನಗೆ ಕೊಡುವ ಭೂಮಿಯಲ್ಲಿ ಆಶೀರ್ವಾದ ಕೊಡುವನು.
- 9ನೀನು ನಿನ್ನ ದೇವರಾದ ಕರ್ತನ ಆಜ್ಞೆಗಳನ್ನು ಕಾಪಾಡಿ ಆತನ ಮಾರ್ಗಗಳಲ್ಲಿ ನಡೆದರೆ ಕರ್ತನು ನಿನಗೆ ಪ್ರಮಾಣಮಾಡಿದ ಹಾಗೆ ನಿನ್ನನ್ನು ತನಗೆ ಪರಿಶುದ್ಧ ಜನವಾಗಿ ಸ್ಥಾಪಿಸುವನು.
Cross references
- 2 Samuel 22:38–41 2 ಸಮುವೇಲನು 22:38–41ನನ್ನ ಶತ್ರುಗಳನ್ನು ಹಿಂದಟ್ಟಿ ಅವರನ್ನು ನಾಶಮಾಡಿದೆನು; ಅವರನ್ನು ಸಂಹರಿಸಿಬಿಡುವ ವರೆಗೂ ನಾನು ಹಿಂತಿರು ಗಲಿಲ್ಲ. ಅವರನ್ನು ಸಂಹರಿಸಿಬಿಟ್ಟೆನು. ಗಾಯಮಾಡಿ ದೆನು. ಆದದರಿಂದ ಅವರು ಏಳದೆ ಹೋಗಿ, ನನ್ನ ಪಾದಗಳ ಕೆಳಗೆ ಬಿದ್ದರು. ನೀನು ಯುದ್ದಕ್ಕೆ ಪರಾ ಕ್ರಮದಿಂದ ನನ್ನ ನಡುವನ್ನು ಕಟ್ಟಿದಿ; ನನ್ನ ಎದು ರಾಳಿಗಳನ್ನು ನನ್ನ ಕೆಳಗೆ ಅಧೀನಮಾಡಿದಿ. ನನ್ನ ಶತ್ರುಗಳು ನನಗೆ ಬೆನ್ನು ಕೊಡುವಂತೆ ಮಾಡಿದಿ; ನಾನು ನನ್ನ ಹಗೆಯವರನ್ನು ಸಂಹರಿಸುವ ಹಾಗೆ ಮಾಡಿದ್ದಿ.
- Leviticus 26:7–8 ಯಾಜಕಕಾಂಡ 26:7–8ನೀವು ನಿಮ್ಮ ಶತ್ರುಗಳನ್ನು ಹಿಂದಟ್ಟುವಾಗ ಅವರು ಕತ್ತಿಯಿಂದ ನಿಮ್ಮ ಮುಂದೆ ಬೀಳುವರು. ನಿಮ್ಮಲ್ಲಿ ಐದು ಮಂದಿ ನೂರು ಮಂದಿಯನ್ನು ಹಿಂದಟ್ಟುವರು. ನಿಮ್ಮಲ್ಲಿ ನೂರು ಮಂದಿ ಹತ್ತು ಸಾವಿರ ಮಂದಿಯನ್ನು ಅಟ್ಟಿಬಿಡುವರು. ನಿಮ್ಮ ಶತ್ರುಗಳು ನಿಮ್ಮ ಮುಂದೆ ಕತ್ತಿಯಿಂದ ಬೀಳುವರು.
- Psalm 89:23 ಕೀರ್ತನೆಗಳು 89:23ಇದ ಲ್ಲದೆ ಅವನ ಮುಂದೆ ವೈರಿಗಳನ್ನು ಹೊಡೆದು ಬಿಡು ವೆನು; ಅವನ ಹಗೆಯವರನ್ನು ಸಂಕಟಪಡಿಸುವೆನು.
- 2 Chronicles 32:21–22 2 ಪೂರ್ವಕಾಲವೃತ್ತಾಂತ 32:21–22ಆಗ ಕರ್ತನು ತನ್ನ ದೂತನನ್ನು ಕಳುಹಿಸಿದನು; ಅವನು ಅಶ್ಶೂರಿನ ಅರಸನ ದಂಡಿನಲ್ಲಿರುವ ಸಮಸ್ತ ಪರಾ ಕ್ರಮಶಾಲಿಗಳನ್ನೂ ನಾಯಕರನ್ನೂ ಅಧಿಪತಿಗಳನ್ನೂ ನಿರ್ಮೂಲಮಾಡಿದನು. ಹೀಗೆ ಇವನು ಲಜ್ಜಾ ಮುಖದಿಂದ ತನ್ನ ದೇಶಕ್ಕೆ ತಿರುಗಿದನು. ಅವನು ತನ್ನ ದೇವರ ಮನೆಯಲ್ಲಿ ಪ್ರವೇಶಿಸಿದಾಗ ಅವನ ಹೊಟ್ಟೆಯಲ್ಲಿ ಹುಟ್ಟಿದವರು ಅವನನ್ನು ಕತ್ತಿಯಿಂದ ಕೊಂದುಹಾಕಿದರು. ಹೀಗೆಯೇ ಕರ್ತನು ಹಿಜ್ಕೀಯ ನನ್ನೂ ಯೆರೂಸಲೇಮಿನ ನಿವಾಸಿಗಳನ್ನೂ ಅಶ್ಶೂರಿನ ಅರಸನಾದ ಸನ್ಹೇರೀಬನ ಕೈಯೊಳಗಿಂದಲೂ ಸಮಸ್ತರ ಕೈಯೊಳಗಿಂದಲೂ ರಕ್ಷಿಸಿ ಸಮಸ್ತ ಕಡೆಯಿಂದ ಅವ ರನ್ನು ನಡಿಸಿದನು.
- 2 Chronicles 19:4 2 ಪೂರ್ವಕಾಲವೃತ್ತಾಂತ 19:4ಯೆಹೋಷಾಫಾಟನು ಯೆರೂಸಲೇಮಿನಲ್ಲಿ ವಾಸ ವಾಗಿದ್ದನು. ಅವನು ತಿರಿಗಿ ಹೊರಟು ಬೇರ್ಷೆಬ ಮೊದಲುಗೊಂಡು ಎಫ್ರಾಯಾಮಿನ ಬೆಟ್ಟದ ಮಟ್ಟಿಗೂ ಜನರಲ್ಲಿ ಸಂಚರಿಸಿ ತಮ್ಮ ಪಿತೃಗಳ ದೇವ ರಾದ ಕರ್ತನ ಕಡೆಗೆ ಅವರನ್ನು ತಿರುಗಿಸಿ
- Joshua 8:22 ಯೆಹೋಶುವ 8:22ಅವರು ಪಟ್ಟಣ ದೊಳಗಿಂದ ಇವರಿಗೆ ಎದುರಾಗಿ ಬಂದ ಕಾರಣ ಅವರು ಈ ಕಡೆ ಆ ಕಡೆ ಇರುವ ಇಸ್ರಾಯೇಲ್ಯರ ಮಧ್ಯದಲ್ಲಿ ಸಿಕ್ಕಿದರು. ಆದದರಿಂದ ಅವರಲ್ಲಿ ಒಬ್ಬರೂ ತಪ್ಪಿಸಿಕೊಂಡು ಹೋಗದ ಹಾಗೆಯೂ ಜೀವದಲ್ಲಿ ಉಳಿಯದ ಹಾಗೆಯೂ ಅವರನ್ನು ಹೊಡೆದರು.
- 2 Chronicles 31:20–21 2 ಪೂರ್ವಕಾಲವೃತ್ತಾಂತ 31:20–21ಹೀಗೆಯೇ ಹಿಜ್ಕೀಯನು ಸಮಸ್ತ ಯೆಹೂದದಲ್ಲಿ ತನ್ನ ದೇವರಾದ ಕರ್ತನ ಸಮ್ಮುಖದಲ್ಲಿ ಉತ್ತಮವಾದ ದ್ದನ್ನೂ ಸರಿಯಾದದ್ದನ್ನೂ ಸತ್ಯವಾದದ್ದನ್ನೂ ನಡಿಸಿ ದನು.ಇದಲ್ಲದೆ ದೇವರ ಆಲಯದ ಸೇವೆಯ ಲ್ಲಿಯೂ ನ್ಯಾಯಪ್ರಮಾಣದಲ್ಲಿಯೂ ಆಜ್ಞೆಗಳಲ್ಲಿಯೂ ತನ್ನ ದೇವರನ್ನು ಹುಡುಕಲು ಆರಂಭಿಸಿದ ಸಮಸ್ತ ಕಾರ್ಯಗಳಲ್ಲಿ ಅವನು ತನ್ನ ಪೂರ್ಣಹೃದಯದಿಂದ ಮಾಡಿ ವೃದ್ಧಿಹೊಂದಿದನು. ಇದಲ್ಲದೆ ದೇವರ ಆಲಯದ ಸೇವೆಯ ಲ್ಲಿಯೂ ನ್ಯಾಯಪ್ರಮಾಣದಲ್ಲಿಯೂ ಆಜ್ಞೆಗಳಲ್ಲಿಯೂ ತನ್ನ ದೇವರನ್ನು ಹುಡುಕಲು ಆರಂಭಿಸಿದ ಸಮಸ್ತ ಕಾರ್ಯಗಳಲ್ಲಿ ಅವನು ತನ್ನ ಪೂರ್ಣಹೃದಯದಿಂದ ಮಾಡಿ ವೃದ್ಧಿಹೊಂದಿದನು.
- Deuteronomy 28:25 ಧರ್ಮೋಪದೇಶಕಾಂಡ 28:25ಕರ್ತನು ನಿನ್ನನ್ನು ನಿನ್ನ ಶತ್ರುಗಳ ಮುಂದೆ ಹೊಡೆದುಬಿಡುವನು; ನೀನು ಒಂದೇ ಮಾರ್ಗದಲ್ಲಿ ಅವರಿಗೆ ವಿರೋಧವಾಗಿ ಹೊರಟು ಏಳು ಮಾರ್ಗಗಳಲ್ಲಿ ಅವರ ಮುಂದೆ ಓಡಿಹೋಗಿ ಭೂಮಿಯ ಎಲ್ಲಾ ರಾಜ್ಯಗಳಿಗೆ ಚದರಿ ಹೋಗುವಿ.
- 1 Samuel 7:10–11 1 ಸಮುವೇಲನು 7:10–11ಸಮುವೇಲನು ದಹನಬಲಿಯನ್ನು ಅರ್ಪಿಸುವಾಗ ಫಿಲಿಷ್ಟಿಯರು ಇಸ್ರಾಯೇಲಿನ ಮೇಲೆ ಯುದ್ಧಮಾಡಲು ಸವಿಾಪಕ್ಕೆ ಬಂದರು. ಆಗ ಕರ್ತನು ಫಿಲಿಷ್ಟಿಯರ ಮೇಲೆ ದೊಡ್ಡ ಶಬ್ದದಿಂದ ಗುಡುಗಿ ಅವರನ್ನು ಸೋಲಿ ಸಿದನು; ಅವರು ಇಸ್ರಾಯೇಲಿನ ಮುಂದೆ ಹೊಡೆ ಯಲ್ಪಟ್ಟರು. ಆಗ ಇಸ್ರಾಯೇಲ್ಯರು ಮಿಚ್ಛೆಯಿಂದ ಹೊರಟು ಫಿಲಿಷ್ಟಿಯರನ್ನು ಹಿಂದಟ್ಟಿ ಬೇತ್ಕರಿನ ವರೆಗೂ ಅವರನ್ನು ಹೊಡೆದರು.
- 1 Samuel 7:3–4 1 ಸಮುವೇಲನು 7:3–4ಆಗ ಸಮುವೇಲನು ಇಸ್ರಾಯೇಲ್ ಮನೆಯವರಿಗೆಲ್ಲಾ ಮಾತನಾಡಿ--ನೀವು ನಿಮ್ಮ ಪೂರ್ಣಹೃದಯದಿಂದ ಕರ್ತನ ಕಡೆಗೆ ತಿರುಗಿ ನಿಮ್ಮಲ್ಲಿರುವ ಅನ್ಯದೇವರುಗಳನ್ನೂ ಅಷ್ಟೋ ರೆತ್ನ್ನೂ ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಿ ನಿಮ್ಮ ಹೃದಯವನ್ನು ಕರ್ತನಿಗೆ ಸಿದ್ಧಮಾಡಿ ಆತನೊಬ್ಬನನ್ನೇ ಸೇವಿಸಿದರೆ ಆತನು ನಿಮ್ಮನ್ನು ಫಿಲಿಷ್ಟಿಯರ ಕೈಗಳೊ ಳಗಿಂದ ತಪ್ಪಿಸುವನು. ಆಗ ಇಸ್ರಾಯೇಲ್ ಮಕ್ಕಳು ಬಾಳನ್ನೂ ಅಷ್ಟೋರೆತ್ನ್ನೂ ತೆಗೆದುಹಾಕಿ ಕರ್ತ ನೊಬ್ಬನನ್ನೇ ಸೇವಿಸಿದರು.
- 2 Chronicles 14:2–6 2 ಪೂರ್ವಕಾಲವೃತ್ತಾಂತ 14:2–6ಆಸನು ತನ್ನ ದೇವರಾದ ಕರ್ತನ ದೃಷ್ಟಿಯಲ್ಲಿ ಒಳ್ಳೇದನ್ನೂ ಸರಿಯಾದದ್ದನ್ನೂ ಮಾಡಿದನು. ಅವನು ಅನ್ಯದೇವರು ಗಳ ಬಲಿಪೀಠಗಳನ್ನೂ ಉನ್ನತ ಸ್ಥಳಗಳನ್ನೂ ತೆಗೆದು ಹಾಕಿ ವಿಗ್ರಹಗಳನ್ನು ಒಡೆದುಬಿಟ್ಟು ಅವುಗಳ ತೋಪು ಗಳನ್ನು ಕಡಿದುಹಾಕಿ, ತಮ್ಮ ಪಿತೃಗಳ ದೇವರಾದ ಕರ್ತನನ್ನು ಹುಡುಕಲೂ ನ್ಯಾಯಪ್ರಮಾಣವನ್ನು ಆಜ್ಞೆಯನ್ನು ಕೈಕೊಳ್ಳಲೂ ಯೆಹೂದ್ಯರಿಗೆ ಆಜ್ಞಾಪಿ ಸಿದನು. ಇದಲ್ಲದೆ ಅವನು ಉನ್ನತ ಸ್ಥಳಗಳನ್ನೂ ವಿಗ್ರಹಗಳನ್ನೂ ಯೆಹೂದದ ಸಮಸ್ತ ಪಟ್ಟಣಗಳಿಂದ ತೆಗೆದುಹಾಕಿದನು. ರಾಜ್ಯವು ಅವನ ಮುಂದೆ ಶಾಂತ ವಾಗಿತ್ತು. ಇದಲ್ಲದೆ ಅವನು ಯೆಹೂದದಲ್ಲಿ ಕೋಟೆ ಗಳುಳ್ಳ ಪಟ್ಟಣಗಳನ್ನು ಕಟ್ಟಿಸಿದನು. ದೇಶವು ಶಾಂತವಾ ಗಿತ್ತು. ಕರ್ತನು ಅವನಿಗೆ ವಿಶ್ರಾಂತಿ ಕೊಟ್ಟದ್ದರಿಂದ ಆ ವರುಷಗಳಲ್ಲಿ ಅವನಿಗೆ ಯುದ್ಧವಿರಲಿಲ್ಲ.
- Joshua 10:42 ಯೆಹೋಶುವ 10:42ಯೆಹೋಶುವನು ಈ ಸಮಸ್ತ ಅರಸುಗಳನ್ನೂ ಅವರ ದೇಶವನ್ನೂ ಒಂದೇ ಸಾರಿ ತೆಗೆದುಕೊಂಡನು. ಯಾಕಂದರೆ ಇಸ್ರಾಯೇಲಿನ ದೇವ ರಾದ ಕರ್ತನು ಇಸ್ರಾಯೇಲಿಗೋಸ್ಕರ ಯುದ್ಧ ಮಾಡಿದನು.ಆಗ ಯೆಹೋಶುವನು ಇಸ್ರಾಯೇಲ್ಯ ರೆಲ್ಲರ ಸಂಗಡ ಗಿಲ್ಗಾಲಿನಲ್ಲಿರುವ ಪಾಳೆಯಕ್ಕೆ ಹಿಂತಿರುಗಿ ಬಂದನು.