Deuteronomy · chapter 28 · verse 27
Deuteronomy 28:27 in Kannada
ಕರ್ತನು ನಿನ್ನನ್ನು ಐಗುಪ್ತದ ಹುಣ್ಣುಗಳಿಂದಲೂ ಗಡ್ಡೆವ್ಯಾಧಿಯಿಂದಲೂ ಕಜ್ಜಿಯಿಂದಲೂ ಇಸಬಿನಿಂದ ಲೂ ನೀನು ವಾಸಿಯಾಗಕೂಡದ ಹಾಗೆ ಹೊಡೆ ಯುವನು.
Kartanu ninnannu aiguptada hunnugalindaloo gaddevyaadhiyindaloo kajjiyindaloo isabininda loo neenu vaasiyaagakoodada haage hode yuvanu.
Deuteronomy 28:27 in English
- King James Version (KJV)
- The LORD will smite thee with the botch of Egypt, and with the emerods, and with the scab, and with the itch, whereof thou canst not be healed.
- World English Bible (WEB)
- The LORD will strike you with the boils of Egypt, with the tumors, with the scurvy, and with the itch, of which you can not be healed.
- American Standard Version (ASV)
- Jehovah will smite thee with the boil of Egypt, and with the emerods, and with the scurvy, and with the itch, whereof thou canst not be healed.
- Bible in Basic English (BBE)
- The Lord will send on you the disease of Egypt, and other sorts of skin diseases which nothing will make well.
- Darby Translation (DBY)
- Jehovah will smite thee with the ulcers of Egypt, and with boils, and with the scab, and with the itch, whereof thou canst not be healed.
- Webster's Bible (WBS)
- The LORD will smite thee with the botch of Egypt, and with the emerods, and with the scab, and with the itch, of which thou canst not be healed.
- Young's Literal Translation (YLT)
- 'Jehovah doth smite thee with the ulcer of Egypt, and with emerods, and with scurvy, and with itch, of which thou art not able to be healed.
Read in context
- 25ಕರ್ತನು ನಿನ್ನನ್ನು ನಿನ್ನ ಶತ್ರುಗಳ ಮುಂದೆ ಹೊಡೆದುಬಿಡುವನು; ನೀನು ಒಂದೇ ಮಾರ್ಗದಲ್ಲಿ ಅವರಿಗೆ ವಿರೋಧವಾಗಿ ಹೊರಟು ಏಳು ಮಾರ್ಗಗಳಲ್ಲಿ ಅವರ ಮುಂದೆ ಓಡಿಹೋಗಿ ಭೂಮಿಯ ಎಲ್ಲಾ ರಾಜ್ಯಗಳಿಗೆ ಚದರಿ ಹೋಗುವಿ.
- 26ನಿಮ್ಮ ಹೆಣಗಳು ಆಕಾಶದ ಎಲ್ಲಾ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಆಹಾರವಾಗು ವವು; ಯಾರೂ ಅವುಗಳನ್ನು ಬೆದರಿಸುವದಿಲ್ಲ.
- 27ಕರ್ತನು ನಿನ್ನನ್ನು ಐಗುಪ್ತದ ಹುಣ್ಣುಗಳಿಂದಲೂ ಗಡ್ಡೆವ್ಯಾಧಿಯಿಂದಲೂ ಕಜ್ಜಿಯಿಂದಲೂ ಇಸಬಿನಿಂದ ಲೂ ನೀನು ವಾಸಿಯಾಗಕೂಡದ ಹಾಗೆ ಹೊಡೆ ಯುವನು.
- 28ಕರ್ತನು ನಿನ್ನನ್ನು ಹುಚ್ಚುತನದಿಂದಲೂ ಕುರುಡುತನದಿಂದಲೂ ಹೃದಯದ ವಿಸ್ಮಯದಿಂದಲೂ ಹೊಡೆಯುವನು.
- 29ಕುರುಡನು ಕತ್ತಲಲ್ಲಿ ತಡವರಿಸು ವಂತೆ ಮಧ್ಯಾಹ್ನದಲ್ಲಿ ತಡವರಿಸುತ್ತಾ ಇರುವಿ; ನಿನ್ನ ಮಾರ್ಗಗಳಲ್ಲಿ ಸಫಲವಾಗುವದಿಲ್ಲ; ನೀನು ಯಾವಾ ಗಲೂ ರಕ್ಷಿಸುವವನಿಲ್ಲದೆ ಬಲಾತ್ಕಾರವನ್ನೂ ಸುಲಿಗೆ ಯನ್ನೂ ಅನುಭವಿಸುವವನಾಗುವಿ.
Cross references
- 1 Samuel 5:6 1 ಸಮುವೇಲನು 5:6ಆದರೆ ಕರ್ತನ ಕೈ ಅಷ್ಡೋದಿನವರ ಮೇಲೆ ಭಾರ ವಾಗಿದ್ದು ಅವರನ್ನು ನಾಶಮಾಡಿ ಅಷ್ಡೋದನ್ನೂ ಅದರ ಮೇರೆಗಳನ್ನೂ ಗಡ್ಡೆರೋಗದಿಂದ ಹೊಡೆದನು.
- Exodus 15:26 ವಿಮೋಚನಕಾಂಡ 15:26ಆತನು-- ನೀನು ನಿನ್ನ ದೇವರಾದ ಕರ್ತನ ಸ್ವರಕ್ಕೆ ಶ್ರದ್ಧೆಯಿಂದ ಕಿವಿಗೊಟ್ಟು ಆತನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿ ಆತನ ಆಜ್ಞೆಗಳಿಗೆ ಕಿವಿಗೊಟ್ಟು ಆತನ ನಿಯಮ ಗಳನ್ನು ಕೈಕೊಂಡರೆ ಐಗುಪ್ತ್ಯರ ಮೇಲೆ ಬರಮಾಡಿದ ಯಾವ ವ್ಯಾಧಿಯನ್ನೂ ನಿನ್ನ ಮೇಲೆ ಬರಮಾಡುವದಿಲ್ಲ; ನಿನ್ನನ್ನು ಸ್ವಸ್ಥಪಡಿಸುವ ಕರ್ತನು ನಾನೇ ಆಗಿದ್ದೇನೆ ಅಂದನು.ತರುವಾಯ ಅವರು ಹನ್ನೆರಡು ನೀರಿನ ಬಾವಿಗಳೂ ಎಪ್ಪತ್ತು ಖರ್ಜೂರದ ಮರಗಳೂ ಇದ್ದ ಏಲೀಮಿಗೆ ಬಂದರು. ಅವರು ಆ ನೀರುಗಳ ಬಳಿಯಲ್ಲಿ ಇಳುಕೊಂಡರು.
- Leviticus 21:20 ಯಾಜಕಕಾಂಡ 21:20ಗೂನು ಬೆನ್ನುಳ್ಳವನು ಗಿಡ್ಡನು ಕಣ್ಣುಗಳಲ್ಲಿ ಕಳಂಕವುಳ್ಳವನು ಹುರುಕುಳ್ಳವನು ತುರಿಯುಳ್ಳವನು ತನ್ನ ಬೀಜಹೊಡೆದವನು
- Exodus 9:9 ವಿಮೋಚನಕಾಂಡ 9:9ಆಗ ಅದು ಐಗುಪ್ತದೇಶದಲ್ಲೆಲ್ಲಾ ಸಣ್ಣ ಧೂಳಾಗಿ ಅದು ಐಗುಪ್ತದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ ಮೃಗಗಳ ಮೇಲೆಯೂ ಹುಣ್ಣುಗಳಾಗುವ ಬೊಕ್ಕೆಗಳು ಏಳುವಂತೆ ಮಾಡುವದು ಎಂದು ಹೇಳಿ ದನು.
- Deuteronomy 28:35 ಧರ್ಮೋಪದೇಶಕಾಂಡ 28:35ಕರ್ತನು ನಿನ್ನನ್ನು ಮೊಣಕಾಲುಗಳಲ್ಲಿಯೂ ಕಾಲು ಗಳಲ್ಲಿಯೂ ವಾಸಿಮಾಡಕೂಡದ ಕೆಟ್ಟ ಉರಿ ಹುಣ್ಣಿ ನಿಂದ ಅಂಗಾಲು ಮೊದಲುಗೊಂಡು ನೆತ್ತಿಯ ವರೆಗೆ ಹೊಡೆಯುವನು.
- 1 Samuel 5:12 1 ಸಮುವೇಲನು 5:12ಉಳಿದ ಮನುಷ್ಯರು ಸತ್ತುಹೋಗದೆ ಗಡ್ಡೆವ್ಯಾಧಿಯಿಂದ ಬಾಧಿಸಲ್ಪಟ್ಟರು; ಆ ಪಟ್ಟಣದ ಗೋಳಾಟವು ಆಕಾಶಕ್ಕೆ ಮುಟ್ಟಿತು.
- Deuteronomy 28:60–61 ಧರ್ಮೋಪದೇಶಕಾಂಡ 28:60–61ಇದಲ್ಲದೆ ನೀನು ಹೆದರಿಕೊಂಡ ಐಗುಪ್ತದ ರೋಗ ಗಳನ್ನೆಲ್ಲಾ ಆತನು ತಿರಿಗಿ ನಿನ್ನ ಮೇಲೆ ಬರಮಾಡು ವನು; ಅವು ನಿನ್ನನ್ನು ಅಂಟಿಕೊಳ್ಳುವವು. ನೀನು ಪೂರ್ಣವಾಗಿ ನಾಶವಾಗುವ ವರೆಗೆ ಈ ನ್ಯಾಯ ಪ್ರಮಾಣದ ಪುಸ್ತಕದಲ್ಲಿ ಬರೆಯದ ರೋಗಗಳನ್ನೂ ಬೇನೆಗಳನ್ನೂ ಕರ್ತನು ನಿನ್ನ ಮೇಲೆ ತರುವನು.
- Isaiah 3:17 ಯೆಶಾಯ 3:17ಚೀಯೋನ್ ಕುಮಾ ರ್ತೆಯರ ತಲೆಯ ಮೇಲ್ಭಾಗವನ್ನು ಕಜ್ಜಿಯಿಂದ ಕರ್ತನು ಹೊಡೆಯುವನು, ಅವರ ಗುಪ್ತಾಂಗಗಳನ್ನು ಬೈಲುಪಡಿಸುವನು.
- Psalm 78:66 ಕೀರ್ತನೆಗಳು 78:66ತನ್ನ ವೈರಿಗಳನ್ನು ಹಿಂದಕ್ಕೆ ಹೊಡೆದು, ನಿತ್ಯ ನಿಂದೆಯನ್ನು ಅವರಿಗೆ ಕೊಟ್ಟನು.
- 1 Samuel 5:9 1 ಸಮುವೇಲನು 5:9ಆದರೆ ಅವರು ಅದನ್ನು ಸುತ್ತಿ ತಂದ ತರುವಾಯ ಕರ್ತನ ಕೈ ಆ ಪಟ್ಟಣದ ಮೇಲೆ ಬಂದು ಮಹಾ ದೊಡ್ಡನಾಶ ಮಾಡಿತು. ಇದಲ್ಲದೆ ಕರ್ತನು ಚಿಕ್ಕವರಿಂದ ಹಿರಿಯರ ವರೆಗೂ ಆ ಪಟ್ಟಣದ ಮನುಷ್ಯರನ್ನು ಹೊಡೆದನು; ಅವರಿಗೆ ಗಡ್ಡೆರೋಗ ಹುಟ್ಟಿತು.
- Exodus 9:11 ವಿಮೋಚನಕಾಂಡ 9:11ಇದಲ್ಲದೆ ಮಂತ್ರಗಾರರು ಹುಣ್ಣಿನ ನಿಮಿತ್ತ ಮೋಶೆಯ ಮುಂದೆ ನಿಂತುಕೊಳ್ಳ ಲಾರದೆ ಹೋದರು. ಹುಣ್ಣುಗಳು ಮಂತ್ರಗಾರರ ಲ್ಲಿಯೂ ಐಗುಪ್ತ್ಯರ ಮೇಲೆಲ್ಲಾ ಇದ್ದವು.
- Leviticus 13:2–8 ಯಾಜಕಕಾಂಡ 13:2–8ಒಬ್ಬ ಮನುಷ್ಯನಿಗೆ ತನ್ನ ಶರೀರದ ಚರ್ಮದ ಮೇಲೆ ಬಾವಾಗಲಿ ಕಜ್ಜಿಯಾಗಲಿ ಹೊಳಪಿನ ಮಚ್ಚೆಯಾಗಲಿ ಮತ್ತು ಅವನ ಶರೀರದ ಚರ್ಮದಲ್ಲಿ ಕುಷ್ಠದ ವ್ಯಾಧಿ ಯಂತಿದ್ದರೆ ಅವನು ಯಾಜಕನಾದ ಆರೋನನ ಬಳಿ ಗಾದರೂ ಇಲ್ಲವೆ ಯಾಜಕರಾದ ಅವನ ಕುಮಾರರಲ್ಲಿ ಒಬ್ಬನ ಬಳಿಗಾದರೂ ತರಲ್ಪಡಬೇಕು. ಯಾಜಕನು ಶರೀರದ ಚರ್ಮದ ಮೇಲಿರುವ ವ್ಯಾಧಿಯನ್ನು ನೋಡ ಬೇಕು; ವ್ಯಾಧಿಯಲ್ಲಿನ ಕೂದಲು ಬೆಳ್ಳಗಾದರೆ ಆ ವ್ಯಾಧಿಯು ಅವನ ಶರೀರದ ಚರ್ಮಕ್ಕಿಂತಲೂ ಆಳ ವಾಗಿ ಕಂಡರೆ ಆ ವ್ಯಾಧಿಯು ಕುಷ್ಠವಾಗಿರುವದು; ಆಗ ಯಾಜಕನು ಅವನನ್ನು ನೋಡಿ ಅಶುದ್ಧನೆಂದು ನಿರ್ಣಯಿಸಬೇಕು. ಅವನ ಶರೀರದ ಚರ್ಮದಲ್ಲಿ ಬಿಳುಪಾದ ಮಚ್ಚೆಯಿದ್ದು ಅದು ನೋಡುವದಕ್ಕೆ ಚರ್ಮ ಕ್ಕಿಂತಲೂ ಆಳವಾಗಿದ್ದು ಅಲ್ಲಿನ ಕೂದಲು ಬೆಳ್ಳಗಾಗ ದಿದ್ದರೆ ಯಾಜಕನು ಆ ವ್ಯಾಧಿಯವನನ್ನು ಏಳು ದಿನ ಮುಚ್ಚಿಡಬೇಕು. ಯಾಜಕನು ಏಳನೇ ದಿನದಲ್ಲಿ ಅವ ನನ್ನು ನೋಡಿದಾಗ ಇಗೋ, ಆ ವ್ಯಾಧಿ ನಿಂತ ಹಾಗೆ ಕಾಣಿಸಿದರೆ ಆ ವ್ಯಾಧಿ ಚರ್ಮದಲ್ಲಿ ಹರಡದಿದ್ದರೆ ಯಾಜಕನು ಅವನನ್ನು ಇನ್ನೂ ಏಳು ದಿನಗಳು ಮುಚ್ಚಿಡ ಬೇಕು. ಯಾಜಕನು ಅವನನ್ನು ಏಳನೆಯ ದಿನದಲ್ಲಿ ನೋಡಬೇಕು. ಆಗ ಇಗೋ, ವ್ಯಾಧಿಯು ಸ್ವಲ್ಪ ಕಪ್ಪಾ ಗಿದ್ದು ಚರ್ಮದಲ್ಲೆಲ್ಲಾ ಹರಡದಿದ್ದರೆ ಯಾಜಕನು ಅವ ನನ್ನು ಶುದ್ಧನೆಂದು ನಿರ್ಣಯಿಸಬೇಕು. ಅದು ಬರೀ ಕಜ್ಜಿಯಾದ ಕಾರಣ ಅವನು ತನ್ನ ಬಟ್ಟೆಗಳನ್ನು ಒಗೆದು ಕೊಂಡು ಶುದ್ಧನಾಗಿರುವನು. ಅವನು ತನ್ನ ಶುದ್ಧಿಗಾಗಿ ಯಾಜಕನಿಗೆ ತೋರಿಸಿಕೊಂಡ ಮೇಲೆ ಕಜ್ಜಿಯು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹಬ್ಬಿದರೆ ಅವನು ತಿರಿಗಿ ಯಾಜಕನಿಗೆ ತೋರಿಸಿಕೊಳ್ಳಬೇಕು. ಯಾಜ ಕನು ಅದನ್ನು ನೋಡಿದಾಗ ಇಗೋ, ಕಜ್ಜಿಯ ಚರ್ಮವೇ ಹರಡಿರುವದಾದರೆ ಆಗ ಅವನು ಅಶುದ್ಧ ನೆಂದು ಯಾಜಕನು ನಿರ್ಣಯಿಸಬೇಕು. ಅದು ಕುಷ್ಠವಾಗಿರುವದು.